ಶ್ರೀನಗರ (ಜಮ್ಮು-ಕಾಶ್ಮೀರ) : ಪಾಕಿಸ್ತಾನದ ನೆಲದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯಿಂದ ತರಬೇತಿ ಪಡೆದು ಭಾರತಕ್ಕೆ ನುಸುಳಿದ್ದ ಇಬ್ಬರು ಪಾಕ್ ಪ್ರಜೆಗಳು, ಭಾರತೀಯ ಸೇನೆಯ ವಶಕ್ಕೆ ಸಿಕ್ಕಿದ್ದಾರೆ. ಇಬ್ಬರೂ ಉಗ್ರರ ತಪ್ಪೊಪ್ಪಿಗೆ ವೀಡಿಯೋವನ್ನು ಭಾರತೀಯ ಸೇನೆ ಪ್ರದರ್ಶಿಸಿದೆ. ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್, ಪಾಕ್ ಕುತಂತ್ರಕ್ಕೆ ಸಾಕ್ಷಿಯಾಗಿ ಉಗ್ರರ ಬಿಡುಗಡೆ ಮಾಡಿದ್ರು. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ, ಮೋದಿ ಸರ್ಕಾರದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ, ಕಣಿವೆ ರಾಜ್ಯಕ್ಕೆ ಭಯೋತ್ಪಾದಕರನ್ನು ರವಾನಿಸಲು ಹರಸಾಹಸ ನಡೆಸುತ್ತಿದೆ. ಈ ಕುತಂತ್ರದ ಭಾಗವಾಗಿ ಆಗಸ್ಟ್ 21ರಂದು ತನ್ನ ಇಬ್ಬರು ಪ್ರಜೆಗಳನ್ನು ಭಾರತದ ಗಡಿಯೊಳಗೆ ಪಾಕಿಸ್ತಾನ ನುಗ್ಗಿಸಿತ್ತು. ಇದೀಗ ಭಾರತೀಯ ಸೇನೆಗೆ ಸಿಕ್ಕಿಬಿದ್ದಿರುವ ಇಬ್ಬರೂ ಉಗ್ರರು, ತಾವು ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಗೆ ಸೇರಿದವರೆಂದು ತಪ್ಪೊಪ್ಪಿಕೊಂಡಿದ್ದಾರೆ. ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಆಗಸ್ಟ್ 6ರಂದು ನಡೆದ ಕಲ್ಲೆಸೆತದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅಸ್ರಾರ್ ಅಹ್ಮದ್ ಖಾನ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕಳೆದ 30 ದಿನಗಳಿಂದ ಈವರೆಗೆ ಹಿಂಸಾಚಾರಕ್ಕೆ 5 ನಾಗರೀಕರು ಬಲಿಯಾಗಿದ್ದಾರೆ. ಪಾಕಿಸ್ತಾನದಿಂದ ಹಣ ಪಡೆದು ಕಲ್ಲೆಸೆಯುವ ದುಷ್ಕರ್ಮಿಗಳಿಂದ ರಕ್ತಪಾತ ನಡೆಯುತ್ತಿದೆ ಎಂದು ಭಾರತೀಯ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.
from India & World News in Kannada | VK Polls https://ift.tt/2MUDObn