ಓಲ್ಡ್ ಈಸ್ ಗೋಲ್ಡ್; ಸಚಿನ್ ತೆಂಡೂಲ್ಕರ್ ಜೀವನದ ತಂಡದಲ್ಲಿ ಯಾರೆಲ್ಲ ಇದ್ದಾರೆ?

ಮುಂಬಯಿ: ಭಾರತ ಕ್ರಿಕೆಟ್ ದೇವರು ಎಂದೇ ಪಖ್ಯಾತರಾಗಿರುವ ವಿಶ್ವ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಅಪಾರ. ಇದರಿಂದಾಗಿಯೇ ವಿಶ್ವದೆಲ್ಲೆಡೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಮಾಸ್ಟರ್ ಬ್ಲಾಸ್ಟರ್, ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ತಮ್ಮ ಸಹ ಆಟಗಾರರ ಜತೆಗಿನ ವಿಶೇಷವಾದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಗಣೇಶ ಚತುರ್ಥಿ ಪ್ರಯುಕ್ತ ದೇಶದ ಮುಂಚೂಣಿಯ ಉದ್ಯಮಿ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಪೂಜೆ, ಸತ್ಕಾರ ಕೂಟದಲ್ಲಿ ಸಚಿನ್ ತೆಂಡೂಲ್ಕರ್ ಜತೆಗೆ ಮಾಜಿ ಆಟಗಾರರು ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಾಜಿ ಸಹ ಆಟಗಾರರನ್ನು ಭೇಟಿ ಮಾಡಿರುವ ಸಚಿನ್ ಜೀವನದ ಸಹ ಆಟಗಾರರು ಅಡಿಬರಹದೊಂದಿಗೆ ಬಹುಮೂಲ್ಯ ಚಿತ್ರವನ್ನು ಹಂಚಿದ್ದಾರೆ. ಇದರಲ್ಲಿ , ಹರ್ಭಜನ್ ಸಿಂಗ್, ಜಹೀರ್ ಖಾನ್, ಪಾರ್ಥಿವ್ ಪಟೇಲ್, ಯೂಸುಫ್ ಪಠಾಣ್, ಪ್ರಗ್ಯಾನ್ ಓಜಾ ಹಾಗೂ ಅಜಿತ್ ಅಗರ್‌ಕರ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಏತನ್ಮಧ್ಯೆ ವಿಶ್ವಕಪ್ ವಿಜೇತ ಹೀರೊ ಯುವರಾಜ್ ಸಿಂಗ್ ಸಹ ಸಚಿನ್ ಸೇರಿದಂತೆ ಸಹ ಆಟಗಾರರ ಜತೆಗಿನ ಸೆಲ್ಪಿ ಚಿತ್ರವನ್ನು ಹಂಚಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2HIQfD6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...