ರೋಹಿಣಿ ವರ್ಗಾವಣೆಗೂ ನನಗೂ ಸಂಬಂಧವೇ ಇಲ್ಲ : ಮುಖ್ಯಕಾರ್ಯದರ್ಶಿಗೆ ಮಣಿವಣ್ಣನ್ ಪತ್ರ

ಬೆಂಗಳೂರು: ಐಎಎಸ್‌ ಅಧಿಕಾರಿ ವರ್ಗಾವಣೆ ವಿಚಾರವಾಗಿ ಕಾರ್ಮಿಕ ‌ಇಲಾಖೆ ಕಾರ್ಯದರ್ಶಿ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಗೆ ಪತ್ರ ಬರೆದಿದ್ದಾರೆ. ರೋಹಿಣಿ ಸಿಂಧೂರಿ ಅವರು ತಮ್ಮ ವರ್ಗಾವಣೆಗೆ ಮಣಿವಣ್ಣನ್ ಕಾರಣ ಎಂದು ಅನಗತ್ಯವಾಗಿ ಸುದ್ದಿ ಹರಡಿದ್ದರು. ಕೆಲ ಮಾದ್ಯಮಗಳಲ್ಲಿ ಅನಗತ್ಯವಾಗಿ ನನ್ನ ಹೆಸರು ತಳುಕು ಹಾಕಲಾಗಿದೆ. ರೋಹಿಣಿ ಸಿಂಧೂರಿ ವರ್ಗಾವಣೆಗೂ ತಮಗೂ ಸಂಬಂಧ ಇಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸಹಾಯವಾಣಿ ನಿರ್ಮಿಸಲು ಕಿಯೋನಿಕ್ಸ್ ಗೆ ಟೆಂಡರ್ ಕೊಡುವಂತೆ ನಾನು ಹೇಳಿಲ್ಲ. ಕಾನೂನು ಪ್ರಕಾರ ಟೆಂಡರ್ ಕರೆಯಲಾಗಿದೆ. ರೋಹಿಣಿಯವರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕೆಲಸ ಮಾಡುವ ಇಚ್ಛೆ ಇದ್ದರೆ ಅವಕಾಶ ಕೊಡುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟದ್ದು. ವರ್ಗಾವಣೆಗೂ ನನಗೂ ಸಂಬಂಧ ಇಲ್ಲ ಎಂದು ಮಣಿವಣ್ಣನ್ ಪತ್ರದಲ್ಲಿ ತಿಳಿಸಿದ್ದಾರೆ. ರೋಹಿಣಿ ಸಿಂಧೂರಿ ಕರ್ನಾಟಕ ಕಲ್ಯಾಣ ಮಂಡಳಿ ಕಾರ್ಯದರ್ಶಿಯಾಗಿದ್ದಾಗ ಕಾರ್ಮಿಕರ ಪರ ಕೆಲಸ ಮಾಡಲಿಲ್ಲ ಎಂಬ ಆರೋಪವಿದೆ.1600ಕ್ಕೂ ಹೆಚ್ಚು ಕಾರ್ಮಿಕರುrohini sindhuri, , , , , ಐಎಎಸ್‌ ಅಧಿಕಾರಿ, ರೋಹಿಣಿ ಸಿಂಧೂರಿ, ಮಣಿವಣ್ಣನ್ರಾಜ್ಯದಲ್ಲಿ ಆಕಸ್ಮಿಕ ಅಪಘಾತದಿಂದ ಮೃತಪಟ್ಟರೂ ಪರಿಹಾರ ನೀಡಿಲ್ಲ. ರೋಹಿಣಿ ಸಿಂಧೂರಿಯವರೇ 600 ಕಡತಗಳನ್ನ ನೋಡಿದ್ದರೂ ಪರಿಹಾರ ನೀಡಿಲ್ಲ. ಈ ಬಗ್ಗೆ ಕಾರ್ಮಿಕ ಸಂಘಟನೆಗಳಿಂದ ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಕಾರ್ಮಿಕ ಸಂಘಟನೆಗಳು ಪತ್ರ ಬರೆದಿದ್ದವು. ರೋಹಿಣಿ ಸಿಂಧೂರಿ ವಿರುದ್ಧ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಿಲ್ಕ್ ಬೋರ್ಡ್ ಗೆ ವರ್ಗಾವಣೆ ಮಾಡಲಾಗಿದೆ. ಆದರೆ, ಸರ್ಕಾರದ ವಿರುದ್ಧ ಮತ್ತೆ ಭಿನ್ನ ಅಸ್ತ್ರ ಪ್ರಯೋಗ ಮಾಡಿದ್ದಾರೆ ರೋಹಿಣಿ. ಹಿಂದೆ ಕೂಡ ಹಲವು ಬಾರಿ ವಿವಾದಕ್ಕೀಡಾಗಿದ್ದ ರೋಹಿಣಿ ಸಿಂಧೂರಿ. ಡಿ.ಕೆ.ರವಿ ಸಾವಿನ ಪ್ರರಣದಲ್ಲೂ ರೋಹಿಣಿ ಸಿಂಧೂರಿ ಸುದ್ದಿಯಾಗಿದ್ದರು. ಹಾಸನ ಡಿಸಿ ಹುದ್ದೆಯಿಂದ ವರ್ಗಾವಣೆಯಾದಾಗಲೂ ಮಾಜಿ ಸಚಿವ ರೇವಣ್ಣ ಅವರನ್ನು ಬಳಸಿಕೊಂಡು ಅಲ್ಲೇ ಉಳಿಯುವ ಪ್ರಯತ್ನ ಮಾಡಿದ್ದ ರೋಹಿಣಿ. ನಂತರ ಎಚ್.ಡಿ.ರೇವಣ್ಣ ವಿರುದ್ಧವೇ ತಿರುಗಿಬಿದ್ದು ಮತ್ತೆ ಸುದ್ದಿಯಾಗಿದ್ದರು. ರೋಹಿಣಿ ಹೋದ ಕಡೆಯಲ್ಲೆಲ್ಲಾ ವರ್ಗಾವಣೆ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ. ಕಾರ್ಮಿಕ ಇಲಾಖೆಯಲ್ಲೂ ಕಾರ್ಮಿಕರ ಪರ ಕೆಲಸ ಮಾಡುತ್ತಿಲ್ಲ ಎಂಬ ಆರೋಪವಿದೆ. ಆರೋಪ ಮುಚ್ಚಿ ಹಾಕಲು ನೆರೆಪರಿಹಾರಕ್ಕೆ 3 ಸಾವಿರ ಕೋಟಿ ರೂ. ಹಸ್ತಾಂತರಿಸುವ ವಿಚಾರ ಹರಿಬಿಟ್ಟಿದ್ದಾರೆ. ಕಾರ್ಮಿಕ ಕಲ್ಯಾಣ ನಿಧಿ ಹಣವನ್ನ ನೆರೆ ಸಂತ್ರಸ್ತರಿಗೆ ಬಳಸಲು ಅವಕಾಶವೇ ಇಲ್ಲ. ಆದರೂ ತಮ್ಮ ವರ್ಗಾವಣೆ ಕಾರಣ ಇಟ್ಟುಕೊಂಡು ವದಂತಿ ಹರಿಬಿಟ್ಟಿದ್ದಾರೆ ಎಂಬ ಆರೋಪವಿದೆ. ಪ್ರತಿ ಸರ್ಕಾರದ ವಿರುದ್ಧವೂ ರೋಹಿಣಿ ಹೀಗೇ ಮಾಡಿದ್ದಾರೆ. ಹೀಗಾಗಿ ರೋಹಿಣಿ ವಿರುದ್ದ ಹಿರಿಯ ಅಧಿಕಾರಿಗಳು ಕೆಂಡಾಮಂಡಲವಾಗಿದ್ದಾರೆ. ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/2l3O4ly

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...