ಹೆಂಡ್ತಿ ಜೊತೆ ಹೆಲಿಕಾಪ್ಟರ್ ಏರಿದ ಮೇಷ್ಟ್ರು!: ನಿವೃತ್ತಿ ದಿನ ಪತ್ನಿ ಆಸೆ ಈಡೇರಿಸಿದ ಪತಿ

ಜೈಪುರ: ರಾಜಸ್ತಾನದ ಅಲ್ವಾರ್ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ಏರಿ ಮನೆಗೆ ಬಂದು ಭಾರೀ ಸುದ್ದಿಯಾಗಿದ್ದಾರೆ. ಅದೂ ಕೂಡಾ ತಮ್ಮ ನಿವೃತ್ತಿಯ ದಿನ. ರಮೇಶ್ ಚಂದ್ ಮೀನಾ ಎಂಬುವರ ಈ ಹಾರಾಟದ ಸಾಹಸಕ್ಕೆ ಕಾರಣ ಅವರ ಪತ್ನಿ. ರಮೇಶ್ ಅವರ ಸೊಮೋತಿ ಅವರಿಗೆ ಹೆಲಿಕಾಪ್ಟರ್ ನಲ್ಲಿ ಒಮ್ಮೆಯಾದ್ರೂ ಹಾರಾಡಬೇಕೆಂಬ ಆಸೆ ಇತ್ತಂತೆ. ಹೀಗಾಗಿ, ತಮ್ಮ ನಿವೃತ್ತಿಯ ದಿನ ಶಿಕ್ಷಕ ರಮೇಶ್ ಹೆಲಿಕಾಪ್ಟರ್ ಬುಕ್ ಮಾಡೇಬಿಟ್ಟರು. ಸಹೋದ್ಯೋಗಿಗಳ ಸತ್ಕಾರ ಸ್ವೀಕರಿಸಿ ಹಾರ-ತುರಾಯಿ, ಪೇಟ ತೊಟ್ಟ ಒಂದ್ಕಡೆ, ಇನ್ನೊಂದ್ಕಡೆ ಕೂಲಿಂಗ್ ಗ್ಲಾಸ್ ಹಾಕಿಕೊಂಡ ಪತ್ನಿ ತಮ್ಮ ಮೊಮ್ಮಗನ ಜೊತೆ ಹೆಲಿಕಾಪ್ಟರ್ ಏರಿದ್ರು. 22 ಕಿಲೋ ಮೀಟರ್ ಪ್ರಯಾಣಿಸಿ ತಮ್ಮ ಸ್ವಗ್ರಾಮ ತಲುಪಿದ್ರು. 34 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶಿಕ್ಷಕ ರಮೇಶ್, ತಮ್ಮ ಪತ್ನಿಯ ಆಸೆ ಈಡೇರಿಸಲು ನವದೆಹಲಿಗೆ ಸಂಪರ್ಕಿಸಿ ಹೆಲಿಕಾಪ್ಟರ್ ಬುಕ್ ಮಾಡಿದ್ರು. ಇದಕ್ಕಾಗಿ ಬರೋಬ್ಬರಿ 3.70 ಲಕ್ಷ ರೂ. ಖರ್ಚು ಮಾಡಿದ್ದಾರೆ. 18 ನಿಮಿಷಗಳ ಹಾರಾಟದ ಅನುಭವ ತಮ್ಮ ಜೀವನದ ಅತ್ಯಂತ ಸ್ಮರಣೀಯ ಎಂದು ರಮೇಶ್ ಹೇಳಿದ್ದಾರೆ. ನಾವು ನಮ್ಮ ಮನೆಯ ಮಾಳಿಗೆ ಮೇಲೆ ಕೂತಿದ್ದಾಗ ಹೆಲಿಕಾಪ್ಟರ್ ಹಾರಾಡುತ್ತಿತ್ತು. ಆಗ ನನ್ನ ಪತ್ನಿ ಹೆಲಿಕಾಪ್ಟರ್ ನಲ್ಲಿ ಹಾರಾಡಲು ಎಷ್ಟು ಖರ್ಚಾಗುತ್ತೆ ಎಂದು ಕೇಳಿದ್ದರು. ಆಕೆಯ ಆಸೆಯನ್ನು ಈಡೇರಿಸಲು ನಾನು ಆದ ದಿನವೇ ಹೆಲಿಕಾಪ್ಟರ್ ಬುಕ್ ಮಾಡಿದ್ದೆ. ಇದು ನಮ್ಮ ಮೊದಲ ಅನುಭವ. ತುಂಬಾ ಖುಷಿಯಾಯ್ತು ಎಂದು ರಮೇಶ್ ಚಂದ್ ಮೀನಾ ಹೇಳಿದ್ದಾರೆ. ನಿವೃತ್ತಿಯ ದಿನ ಶಾಲೆಯಿಂದ ಮನೆಗೆ ಹೆಲಿಕಾಪ್ಟರ್ ನಲ್ಲಿ ಬರಲು ಅನುಮತಿ ನೀಡಿದ ಜಿಲ್ಲಾಡಳಿತಕ್ಕೆ ರಮೇಶ್ ಧನ್ಯವಾದ ಹೇಳಿದ್ದಾರೆ. ರಮೇಶ್ ಚಂದ್ ಮೀನಾ ಹಾಗೂ ಸೊಮೋತಿ ದಂಪತಿಗೆ ಇಬ್ಬರು ಪುತ್ರರು. ಒಬ್ಬ ಮಗ ಶಿಕ್ಷಕರಾಗಿದ್ದರೆ ಮತ್ತೊಬ್ಬರು ಭಾರತೀಯ ಆಹಾರ ನಿಗಮದಲ್ಲಿ ಇನ್ಸ್ ಪೆಕ್ಟರ್ ಆಗಿದ್ದಾರೆ. ಸಣ್ಣ ಸಣ್ಣ ಖುಷಿಗಳು, ಸಂಗತಿಗಳು, ಸನ್ನಿವೇಶಗಳೇ ಜೀವನವನ್ನು ಶ್ರೀಮಂತಗೊಳಿಸುತ್ತವೆ ಅನ್ನೋದಕ್ಕೆ ಈ ಸಂಗತಿಯೇ ಉತ್ತಮ ನಿದರ್ಶನ.


from India & World News in Kannada | VK Polls https://ift.tt/2ZtuuSN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...