ಹೀರೊ ಸಚಿನ್ ತರಹನೇ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ 15ರ ಹರೆಯದ ಶಫಾಲಿ ವರ್ಮ!

ಸೂರತ್: ಭಾರತೀಯ ಟ್ವೆಂಟಿ-20 ಕ್ರಿಕೆಟ್‌ಗೆ ಪಾದಾರ್ಪಣೆಗೈದ ಅತಿ ಕಿರಿಯ ಮಹಿಳಾ ಆಟಗಾರ್ತಿಯೆಂಬ ಹೆಗ್ಗಳಿಕೆಗೆ 15ರ ಹರೆಯದ ಶಫಾಲಿ ವರ್ಮಾ ಪಾತ್ರವಾಗಿದ್ದಾರೆ. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಸೂರತ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಪರ ಡೆಬ್ಯು ಮಾಡಿದ್ದರು. ಆದರೆ ತಾವು ಎದುರಿಸಿದ ನಾಲ್ಕು ಎಸೆತಗಳಲ್ಲೇ ವಿಕೆಟ್ ಒಪ್ಪಿಸುವ ಮೂಲಕ ಖಾತೆ ತೆರೆಯುವಲ್ಲಿ ವಿಫಲವಾಗಿದ್ದರು. ಈ ಮೂಲಕ ಮಾಜಿ ಕ್ರಿಕೆಟ್ ಐಕಾನ್ ತರಹನೇ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. 1989ರಲ್ಲಿ ಪಾಕಿಸ್ತಾನ ವಿರುದ್ದ ತಮ್ಮ ಮೊದಲ ಏಕದಿನ ಪಂದ್ಯದಲ್ಲಿ 16ರ ಹರೆಯದ ಸಿಡಿಲಮರಿ ಸಚಿನ್ ಶೂನ್ಯಕ್ಕೆ ಔಟಾಗಿದ್ದರು. ಸಚಿನ್ ಅವರನ್ನೇ ಹೀರೊ ಆಗಿಸಿಕೊಂಡಿರುವ ಅತಿ ಕಿರಿಯ ಆಟಗಾರ್ತಿ ಶಫಲಿ ವರ್ಮ ಇದೀಗ ತಮ್ಮ ಮೊದಲ ಟಿ20ನಲ್ಲಿ ಝೀರೋಗೆ ಔಟಾಗಿರುವುದು ಕಾಕತಾಳೀಯವೇ ಸರಿ. ಗಾರ್ಗಿ ಬ್ಯಾನರ್ಜಿ ಬಳಿಕ ಭಾರತೀಯ ಮಹಿಳಾ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಎರಡನೇ ಅತಿ ಕಿರಿಯ ಆಟಗಾರ್ತಿ ಎಂಬ ಗೌರವಕ್ಕೂ ಶಫಲಿ ವರ್ಮಾ ಪಾತ್ರವಾಗಿದ್ದಾರೆ. ಅಪ್ಪನ ಕನಸು... ದೇಶೀಯ ಕ್ರಿಕೆಟ್‌ನಲ್ಲಿ ನೀಡಿದ ಗಮನಾರ್ಹ ಪ್ರದರ್ಶನದ ಬಳಿಕ ಶಫಾಲಿಗೆ ಭಾರತ ತಂಡದಿಂದ ಕರೆ ಲಭಿಸಿತ್ತು. ಈಗ 15ರ ಹರೆಯದಲ್ಲೇ ಡೆಬ್ಯು ಮಾಡುವ ಮೂಲಕ ತಮ್ಮ ತಂದೆಯ ಕನಸನ್ನು ನನಸಾಗಿಸಿದ್ದಾರೆ. ಆರಂಭದಲ್ಲಿ ನನ್ನ ಅಪ್ಪ ಹಾಗೂ ಸೋದರನ ಜತೆಗೆ ಅಭ್ಯಾಸುತ್ತಿದ್ದೆ. ಈಗ ಭಾರತ ತಂಡದ ಕ್ಯಾಪ್ ಧರಿಸುವ ಮೂಲಕ ನನ್ನ ಹಾಗೂ ಅಪ್ಪನ ಕನಸು ನನಸಾಗಿದೆ ಎಂದಿದ್ದಾರೆ. ಈ ಮೊದಲು ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಟಿ20 ಮಾದರಿಗೆ ನಿವೃತ್ತಿ ಹೇಳಿದ ಬೆನ್ನಲ್ಲೇ ಶಫಾಲಿ ತಂಡಕ್ಕೆ ಆಯ್ಕೆಯಾಗಿದ್ದರು. ಸಚಿನ್ ತೆಂಡೂಲ್ಕರ್ ಸ್ಫೂರ್ತಿ... ತಾವು ಕ್ರಿಕೆಟ್‌ಗೆ ಆಗಮಿಸಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೇ ಕಾರಣ ಎಂದು ರೋಹ್ಟಕ್ ಮೂಲದ ಯುವ ಆಟಗಾರ್ತಿ ಬಿಚ್ಚಿಟ್ಟಿದ್ದಾರೆ. ಐದು ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಗೂ ಮೊದಲು ಅಂತಿಮ ರಣಜಿ ಪಂದ್ಯ ಆಡಿದಾಗ ಒಂದು ಕ್ಷಣದ ನೋಟಕ್ಕಾಗಿ ಶಫಾಲಿ ಹೃದಯ ಮಿಡಿದಿತ್ತು. ಎಷ್ಟು ಜನರು ಸಚಿನ್‌ರನ್ನು ನೋಡುವುದಕ್ಕಾಗಿ ಒಳಗಡೆಯಿದ್ದರೋ ಅಷ್ಟೇ ಜನರು ಹೊರಗಡೆಯೂ ನಿಂತಿದ್ದರು ಎಂದು ಶಫಾಲಿ ಅನುಭವ ಹಂಚಿಕೊಂಡಿದ್ದಾರೆ. ಆ ದಿನವನ್ನಂತೂ ನಾನೆಂದು ಮರೆಯಲಾರೆ. ನನ್ನ ಕ್ರಿಕೆಟ್ ಕೆರಿಯರ್ ಅಲ್ಲಿಂದಲೇ ಆರಂಭವಾಯಿತು ಎಂದಿದ್ದಾರೆ. ಸದ್ಯ ಸಚಿನ್ ಹಾದಿಯನ್ನು ತುಳಿದಿರುವ ಶಫಲಿ ವರ್ಮ ಉಜ್ವಲ ಭವಿಷ್ಯ ರೂಪಿಸುವ ತವಕದಲ್ಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2n628vz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...