ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಕೇವಲ ಒಂದು ಗಂಟೆ ಆರ್ಭಟಿಸಿದ ಮಳೆ ಮಹಾನಗರವನ್ನೇ ತತ್ತರಿಸುವಂತೆ ಮಾಡಿದೆ. ನಗರದ 65 ಕಡೆಗಳಲ್ಲಿ ಮರಗಳು ಉರುಳಿ ಅವಾಂತರ ಸೃಷ್ಟಿಯಾಯಿತು. ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ನಾಗರಿಕರು ತೀವ್ರ ತೊಂದರೆ ಅನುಭವಿಸಿದರು.ಭಾನುವಾರ ಮಧ್ಯಾಹ್ನ 3.30ರ ವೇಳೆಗೆ ಆರಂಭವಾದ ವೇಳೆ ಒಂದು ಗಂಟೆ ಕಾಲ ಅಬ್ಬರಿಸಿತು. ಆಲಿಕಲ್ಲು ಸಹಿತ ಗುಡುಗು-ಸಿಡಿಲಿನ ಅಬ್ಬರದ ಮಳೆಗೆ ನಗರ ಬೆಚ್ಚಿ ಬಿದ್ದಿತು. ಕಾರ್ಮೋಡಗಳಿಂದ ನಗರದಲ್ಲಿ ಕಗ್ಗತ್ತಲು ಆವರಿಸಿತು. ಏಕಾಏಕಿಯಾಗಿ ಸುರಿದ ಧಾರಾಕಾರ ಮಳೆಗೆ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಿದರು.
from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/8O0BXVs