Modi Road Show: ಪ್ರಧಾನಿ ಮೋದಿ ಬೆಳಗಾವಿ ರೋಡ್‌ ಶೋ ವೇಳೆ ಪುಷ್ಪವೃಷ್ಟಿಗೆ ಬಳಸಿದ ಹೂವಿನ ಪ್ರಮಾಣ ಎಷ್ಟು ಗೊತ್ತೆ!

Modi Road Show: ಸೋಮವಾರ ಬೆಳಗಾವಿಯಲ್ಲಿ ನಡೆದ ದಾಖಳೆಯ ರೋಡ್ ಶೋ ಗೆ ಬರೋಬ್ಬರಿ 5 ಟನ್ ಸೇವಂತಿಗೆ, ಗುಲಾಬಿ, ಚೆಂಡು ಹೂಗಳನ್ನು ಬಳಸಲಾಗಿತ್ತು. ಮಹಾರಾಷ್ಟ್ರ, ಕೊಲ್ಹಾಪುರದಿಂದ ಹೂಗಳನ್ನು ತರಿಸಿ, ಹಿಂದಿನ ರಾತ್ರಿ ಸಂಪೂರ್ಣವಾಗಿ ಸಿದ್ದತೆ ನಡೆಸಲಾಗಿತ್ತು.

from India & World News in Kannada | VK Polls https://ift.tt/QTL9oNn

Modi Visit To Karnataka: ಚಿಕ್ಕೋಡಿಗೂ ಬರ್ತಾರಾ 'ನಮೋ'?: ಜಿಲ್ಲಾ ಬಿಜೆಪಿಗೆ ಬೂಸ್ಟರ್‌ ಡೋಸ್‌ ನೀಡಿದ ಮೋದಿ ಭೇಟಿ

Modi Visit To Karnataka:ಬೆಳಗಾವಿಗೆ ಭೇಟಿ ನೀಡಿ ಕಾರ್‌ ಶೋ, ಹಾಗೂ ಬಹಿರಂಗ ಸಭೆಯಲ್ಲಿ ಮಾಡಿದ ಭಾಷಣ ಸ್ಥಳೀಯ ಬಿಜೆಪಿ ಶಾಸಕರಿಗೆ ಪಕ್ಷದ ಪರವಾಗಿ ಚುನಾವಣೆಗೆ ಬೂಸ್ಟರ್ ಡೋಸ್‌ ಸಿಕ್ಕಿದಂತಾಗಿದೆ. ಅದೇ ರೀತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲೂ ಕಾರ್ಯಕ್ರಮ ಆಯೋಜಿಸಲು ಸಂಸದರು ಚಿಂತಿಸುತ್ತಿದ್ದಾಋಎ.

from India & World News in Kannada | VK Polls https://ift.tt/l0zRFq5

Government Employees Strike: ಸರ್ಕಾರಿ ನೌಕರರ ಸಮಸ್ಯೆ ಸೌಹಾರ್ದಯುತವಾಗಿ ಬಗೆ ಹರಿಯುವ ವಿಶ್ವಾಸ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರಿ ನೌಕರರ ಮುಷ್ಕರವನ್ನ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ತಡರಾತ್ರಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆ ಸಿಎಂ ಬಸವರಾಜ ಬೊಮ್ಮಾಯಿ ಅವರು, ನೌಕರರ ಬೇಡಿಕೆಯನ್ನ ಇಡೇರಿಸುವಲ್ಲಿ ಸರ್ಕಾರ ಬದ್ದವಾಗಿದೆ. ನಮ್ಮ ಇತಿಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಬಗ್ಗೆ ಆರ್ಥಿಕ ಇಲಾಖೆ ಜೊತೆ ಚರ್ಚಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಸದ್ಯ ಏಳನೇ ವೇತನ ಪರಿಷ್ಕರಣೆ ವರದಿಯನ್ನ ಆದಷ್ಟು ಬೇಗ ನೀಡುವಂತೆ ಆಯೋಗಕ್ಕೆ ಈಗಾಗಲೇ ಸೂಚಿಸಿದ್ದೇವೆ ಎಂದು ಸಿಎಂ ಹೇಳಿದರು.

from India & World News in Kannada | VK Polls https://ift.tt/tzJai7D

HD Devegowda- ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಆಸ್ಪತ್ರೆಗೆ ದಾಖಲು: ಗಾಬರಿ ಬೇಡ, ಮಾಮೂಲಿ ಆರೋಗ್ಯ ತಪಾಸಣೆಯಷ್ಟೇ ಎಂದು ದೇವೇಗೌಡ ಟ್ವೀಟ್

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಕಾಲುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದೇವ್ಗೌಡರು, ನಾನು ಆರೋಗ್ಯವಾಗದ್ದೇನೆ. ಒಂದೆರಡು ದಿನ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದು ಒಂದೆರಡು ದಿನ ಬಿಟ್ಟು ಆಸ್ಪತ್ರೆಯಿಂದ ಮನೆಗೆ ತೆರಳುವೆ. ಅಭಿಮಾನಿಗಳು ಗಾಬರಿ ಮತ್ತು ಉದ್ಲೇಗಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

from India & World News in Kannada | VK Polls https://ift.tt/HSCQ40v

KL Rahul : ಕೆ.ಎಲ್‌ ರಾಹುಲ್‌ ವೈಫಲ್ಯಕ್ಕೆ ಮುಖ್ಯ ಕಾರಣ ತಿಳಿಸಿದ ವಸೀಮ್‌ ಜಾಫರ್‌!

Border-Gavaskar Trophy 2023: ಟೆಸ್ಟ್ ಕ್ರಿಕೆಟ್‌ನಲ್ಲಿ ಕನಿಷ್ಠ ಅರ್ಧಶತಕ ಕೂಡ ಇಲ್ಲದೆ 10 ಇನಿಂಗ್ಸ್‌ ಆಡಿರುವ ಸ್ಟಾರ್‌ ಓಪನರ್‌ ಕೆ.ಎಲ್‌ ರಾಹುಲ್‌ ಇದೀಗ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐಪಿಎಲ್‌ 2022 ಟೂರ್ನಿ ಬಳಿಕ ಕೆ.ಎಲ್‌ ರಾಹುಲ್‌ ಬ್ಯಾಟಿಂಗ್‌ ಪ್ರದರ್ಶನ ಕುಸಿಯುತ್ತಾ ಬಂದಿದ್ದು, ಇದೀಗ ಭಾರತ ತಂಡದ ಉಪನಾಯಕನ ಪಟ್ಟ ಕೂಡ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕಟರ್‌ ಟ್ರೋಫಿ ಟೆಸ್ಟ್‌ ಸರಣಿಯ 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ 11ರ ಬಳಗದಿಂದಲೂ ಹೊರಬೀಳುವ ಆತಂಕದಲ್ಲಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/182CMB3

Ashwattha Narayan: ಪ್ರಧಾನಿ ಮೋದಿ- ಅಮಿತ್‌ ಶಾ ಬಗ್ಗೆ ಕಾಂಗ್ರೆಸ್‌- ಜೆಡಿಎಸ್‌ ನಾಯಕರಿಗೆ ಭಯ ಶುರುವಾಗಿದೆ - ಸಚಿವ ಅಶ್ವತ್ಥ ನಾರಾಯಣ

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರ ರಾಜ್ಯ ಬಿಜೆಪಿ ನಾಯಕರಿಗೆ ಗಂಡಸ್ತನವಿಲ್ಲ ಹೇಳಿಕೆಗೆ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ. ಈ ಬಗ್ಗೆ ಮಂಗಳವಾರ ಮಂಡ್ಯದಲ್ಲಿ ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ನಾಯಕರಿಗೆ ನಮ್ಮ ರಾಷ್ಟ್ರ ನಾಯಕರು ರಾಜ್ಯ ಆಗಮಿಸುವುದರಿಂದ ಭಯ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಗ್ಗೆ ಕರ್ನಾಟಕದವರಿಗೆ ಅಪಾರ ಪ್ರೀತಿ ಇದೆ. ಆರ್ಟಿಕಲ್‌ 370 ಅನ್ನು ವಜಾ ಮಾಡಿದ ಜನರ ಮನಸ್ಸಿಗೆ ತಟ್ಟಿದೆ. ಈ ಅಭಿಮಾನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಿಗೆ ತಿಳಿದಿಲ್ಲ ಹೀಗಾಗಿ ಏನೇನೋ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

from India & World News in Kannada | VK Polls https://ift.tt/JHg8QxO

Farmers Protest- ಕಬ್ಬಿಗೆ ಹೆಚ್ಚುವರಿ 150 ರೂ. ವಿತರಣೆಗೆ ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಪ್ರತಿಭಟನೆ

ಕಬ್ಬು ಬೆಳೆಗಾರರ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಬ್ಬುಬೆಳೆಗಾರರ ಸಂಘದ ಸದಸ್ಯರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿತು. ಮೈಸೂರು ನಗರದಲ್ಲಿ ಕಬ್ಬಿನ ಜಲ್ಲೆ ಹಿಡಿದು ಮೆರವಣಿಗೆ ನಡೆಸಿದ ರೈತರು ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಸ್ತಳದಲ್ಲಿ ಮಾತಿನ ಚಕಮಕಿ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಎಡಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

from India & World News in Kannada | VK Polls https://ift.tt/7xvwi6q

ಧಾರವಾಡದಲ್ಲಿ ತಿಂಗಳಿಂದ ಸಿಗ್ತಾ ಇಲ್ಲ ಡ್ರೈವಿಂಗ್‌ ಲೈಸೆನ್ಸ್‌!

ಧಾರವಾಡ ಆರ್ ಟಿಒನಲ್ಲಿ ಹೊಸ ಡ್ರೈವಿಂಗ್ ಕಾರ್ಡ್ ಆಗಲೀ, ಹಳೆಯ ಡ್ರೈವಿಂಗ್ ಅಥವಾ ವಾಹನಗಳ ಪರವಾನಗಿ ನವೀಕರಣವಾಗಲೀ ಆಗುತ್ತಿಲ್ಲ. ಇದಕ್ಕೆ ಹೊಸ ಕಾರ್ಡ್ ಗಳ ಸರಬರಾಜು ಆಗದೇ ಇರುವುದು ಕಾರಣ ಎಂದು ಹೇಳಲಾಗುತ್ತಿದೆ. ಹೊಸ ಲೈಸನ್ಸ್ ಪಡೆಯಲು, ಕಾರ್ಡ್ ಗಳ ನವೀಕರಣ ಮಾಡಿಸಲು ಅರ್ಜಿ ಸಲ್ಲಿಸಿದವರು ದಿನನಿತ್ಯವೂ ಕಚೇರಿಗೆ ಬಂದು ಖಾಲಿ ಕೈಯ್ಯಲ್ಲಿ ಆಚೆ ಹೋಗುವಂತಾಗಿದೆ. ಆದರೆ, ಕೆಲವು ಅಧಿಕಾರಿಗಳು ಕಾರ್ಡ್ ಗಳು ಸರಬರಾಜು ಆಗಿದ್ದು ಸದ್ಯದಲ್ಲೇ ಮುದ್ರಣ ಕಾರ್ಯ ಆರಂಭಿಸುವುದಾಗಿ ತಿಳಿಸಿದ್ದಾರೆ.

from India & World News in Kannada | VK Polls https://ift.tt/gLOymtX

Karnataka Government Employees Strike: ಯಾವ ಸೇವೆಗಳು ಲಭ್ಯ, ಯಾವು ಅಲಭ್ಯ?

ಕರ್ನಾಟಕ ರಾಜ್ಯ ಬಜೆಟ್ ನಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ಪ್ರಸ್ತಾಪ ಮಾಡದೇ ಇರುವುದನ್ನು ವಿರೋಧಿಸಿ, ಹೊಸ ಪಿಂಚಣಿ ಸೌಲಭ್ಯವನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಜಾರಿಗಾಗಿ ಆಗ್ರಹಿಸಿ ಸರ್ಕಾರಿ ನೌಕರರು ಮಾ. 1ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ತಮ್ಮ ಕಚೇರಿಗಳಿಗ ಗೈರಾಗುವ ಮೂಲಕ ಮುಷ್ಕರಕ್ಕೆ ಸಾಥ್ ನೀಡಲಿದ್ದಾರೆ. ಇದರಿಂದಾಗಿ, ಗ್ರಾಮ ಪಂಚಾಯ್ತಿ ಮಟ್ಟದಿಂದ ಹಿಡಿದು ಸಚಿವಾಲಯದ ಕಚೇರಿಗಳವರೆಗಿನ ಸರ್ಕಾರಿ ಕಚೇರಿಗಳಲ್ಲಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಆದರೆ, ತುರ್ತು ಸೇವೆಗಳು, ಸಾರಿಗೆ, ಉನ್ನತ ಶಿಕ್ಷಣ ಸೇವೆಗಳು ಮುಂದವರಿಯಲಿವೆ.

from India & World News in Kannada | VK Polls https://ift.tt/vXjBiV0

Mangaluru: ಆ್ಯಂಟನಿ ಗುತ್ತಿಗೆ ಜುಲೈ ತನಕ ವಿಸ್ತರಣೆ: ಪೌರಕಾರ್ಮಿಕರ ನೇರ ನೇಮಕಾತಿ ಮತ್ತು ನೇರ ಪಾವತಿ

ಘನತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸೆಲ್‌ ಪ್ರೈ. ಲಿ.ನ ಗುತ್ತಿಗೆ ಅವಧಿಯನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಲಾಗಿದೆ. 8 ವರ್ಷಗಳಿಂದ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಕಂಪೆನಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿತ್ತು. 2023ರ ಜನವರಿ ತನಕ ಆ್ಯಂಟನಿ ಸಂಸ್ಥೆಯ ಗುತ್ತಿಗೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಇದೀಗ ಮತ್ತೆ ಆರು ತಿಂಗಳು ವಿಸ್ತರಣೆ ಮಾಡಲಾಗಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಬ್ಯಾಟರಿ ಚಾಲಿತ ಇ- ವಾಹನಗಳು ತ್ಯಾಜ್ಯ ಸಾಗಾಟ ಮಾಡಲಿವೆ.

from India & World News in Kannada | VK Polls https://ift.tt/XAk2LdP

ದಾವಣಗೆರೆ ಪ್ರತ್ಯೇಕ ಹಾಲು ಒಕ್ಕೂಟದ ಬಗ್ಗೆ ಧ್ವನಿಯೆತ್ತದ ಹಾಲಿ ನಿರ್ದೇಶಕರು

ದಾವಣಗೆರೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟದ ಕನಸು ಕಳೆದ ಕೆಲ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಈ ಬಗ್ಗೆ ಮಾತನಾಡುಬೇಕಾದ ಹಾಲಿ ನಿರ್ದೇಶಕರು, ಸಂಸದರು, ಶಾಸಕರು ಚಕಾರ ಎತ್ತುತ್ತಿಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಮುಖ್ಯಮಂತ್ರಿ ಪ್ರತ್ಯೇಕ ಹಾಲು ಒಕ್ಕೂಟದ ಘೋಷಣೆ ಮಾಡಿದ್ದರೂ ನಂತರ ಅದು ಮುಂದಿನ ಹಂತಕ್ಕೆ ಪ್ರವೇಶಿಸಲೇ ಇಲ್ಲ. ಈ ಬಾರಿಯ ಬಜೆಟ್ ನಲ್ಲಿ ಅಂತೂ ಇದರ ಬಗ್ಗೆ ಪ್ರಸ್ತಾಪವೇ ಇರಲಿಲ್ಲ. ಕಳೆದ 8 ವರ್ಷಗಳಿಂದಲೂ ಇದೇ ನಡೆಯುತ್ತಿದೆ.

from India & World News in Kannada | VK Polls https://ift.tt/nZM3odr

ಫೆ.27ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ: ಕಪ್ಪು ಬಣ್ಣದ ಬಟ್ಟೆ, ಬ್ಯಾಗ್‌, ಬಾಟಲ್‌, ತರಂಗಿಲ್ಲ

ಪ್ರಧಾನಿ ನರೇಂದ್ರ ಮೋದಿಯವರಿಂದ ಫೆಬ್ರವರಿ 27ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಗಾಟನೆ ನೆರವೇರಲಿದೆ. ಫೆ.27ರಂದು ಮಾತ್ರ ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ 11.35ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದು ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಕೆಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ಯಾರೂ ಕಪ್ಪು ಬಣ್ಣದ ಬಟ್ಟೆ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸುವಂತಿಲ್ಲ. ಕರ್ಚಿಫ್‌ ನೀರಿನ ಬಾಟಲ್‌, ಹ್ಯಾಂಡ್‌ ಬ್ಯಾಗ್‌ ಸಹ ತರುವಂತಿಲ್ಲ. ಮೊಬೈಲ್‌ ಮತ್ತು ಪರ್ಸ್‌ಗಷ್ಟೇ ಅವಕಾಶ ನೀಡಲಾಗಿದೆ.

from India & World News in Kannada | VK Polls https://ift.tt/QoEUPIe

IND vs AUS: ಕೆ.ಎಲ್‌ ರಾಹುಲ್‌ ಔಟ್‌? 3ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI ಇಂತಿದೆ!

ಇದೋರ್‌: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಬುಧವಾರದಿಂದ (ಮಾರ್ಚ್‌ 1) ಆರಂಭವಾಗುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಸೆಣಸಲಿವೆ. ಎರಡನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವ ಸಲುವಾಗಿ ಭಾರತ ತಂಡಕ್ಕೆ ಮೂರನೇ ಟೆಸ್ಟ್‌ ಅತ್ಯಂತ ನಿರ್ಣಾಯಕವಾಗಿದೆ. ಈಗಾಗಲೇ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿರುವ ಭಾರತ ತಂಡ, ಟೆಸ್ಟ್‌ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಈ ಸರಣಿಯನ್ನು ತನ್ನದಾಗಿಸಿಕೊಳ್ಳಲು ಭಾರತ ತಂಡಕ್ಕೆ ಇನ್ನೊಂದು ಗೆಲುವು ಅಗತ್ಯವಿದೆ. ಸರಣಿ ಗೆಲ್ಲುವ ಜತೆಗೆ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಅರ್ಹತೆ ಪಡೆದುಕೊಳ್ಳಲಿದೆ.ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಪ್ಯಾಟ್‌ ಕಮಿನ್ಸ್ ಅಲಭ್ಯರಾಗಿದ್ದಾರೆ. ಮತ್ತೊಂದೆಡೆ ವಿವಿಧ ಕಾರಣಗಳಿಂದ ಡೇವಿಡ್‌ ವಾರ್ನರ್‌ (ಗಾಯ), ಜಾಶ್‌ ಹೇಝಲ್‌ವುಡ್‌(ಗಾಯ), ಅಷ್ಟನ್‌ ಎಗರ್‌ ಹಾಗೂ ಲ್ಯಾನ್ಸ್‌ ಮಾರಿಸ್‌ ಆಸ್ಟ್ರೇಲಿಯಾ ತಂಡದಿಂದ ಹೊರ ಬಿದ್ದಿದ್ದಾರೆ.ಅಂದಹಾಗೆ ಮೂರನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಯಾವುದೇ ಬದಲಾವಣೆ ಮಾಡುವುದು ಅನುಮಾನವಾಗಿದೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿರುವ ಕೆ.ಎಲ್‌ ರಾಹುಲ್‌ಗೆ ದೀರ್ಘಾವಧಿ ಅವಕಾಶ ನೀಡುವ ಸಲುವಾಗಿ ಈ ಪಂದ್ಯದಲ್ಲಿ ಆಡಿಸಬಹುದಾಗಿದೆ. ಹಾಗಾಗಿ, ಶುಭಮನ್ ಗಿಲ್‌ ಮೂರನೇ ಪಂದ್ಯದಲ್ಲಿಯೂ ಬೆಂಚ್‌ ಕಾಯಬೇಕಾಗುತ್ತದೆ.ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್‌ಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/pE91ySV

ಕೈಕೊಟ್ಟಿದೆ ಕ್ಲಾಕ್‌ ಟವರ್‌ ಕಾರಂಜಿ: ಮಂಗಳೂರಿಗೆ ಕಲಶಪ್ರಾಯವಾದ ಯೋಜನೆ ದುಸ್ಥಿತಿಗೆ

ಮಂಗಳೂರು ನಗರಕ್ಕೆ ಕಳಸ ಪ್ರಾಯದಂತಿದ್ದ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ನಗರದ ಕ್ಲಾಕ್‌ ಟವರ್‌ ಸೂಕ್ತ ನಿರ್ವಹಣೆ ಕಾಣದೆ ಸಂಪೂರ್ಣ ಸ್ಥಗಿತಗೊಂಡಿದೆ. ಕಾರಂಜಿಯಲ್ಲಿ ಗಲೀಜು ನೀರಿನ ಜೊತೆಗೆ ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಕ್ಲಾಕ್‌ ಟವರ್‌ ಸುತ್ತಲೂ ಗಬ್ಬೆದ್ದು ನಾರುತ್ತಿದ್ದು, ಸಂಪೂರ್ಣ ದುಸ್ಥಿತಿಗೆ ಬಂದಿದೆ. ಕ್ಲಾಕ್‌ ಟವರ್‌ ಕಾರಂಜಿಗೆ ಅಳವಡಿಸಲಾಗಿದ್ದ ಮೂರು ಪೈಪ್‌ಗಳು ಕಳವಾಗಿದ್ದು, ಇನ್ನುಳಿದ ಪೈಪ್‌ಗಳಿಗೆ ಹಾನಿ ಮಾಡಲಾಗಿದೆ. ಈ ಕ್ಲಾಕ್‌ ಟವರ್‌ ಗಂಟೆ ಗಂಟೆಗೆ ಬೆಲ್‌ ಮಾಡುತ್ತಾ ನಗರದ ಜನರನ್ನು ಎಚ್ಚರಿಸುತ್ತಿತ್ತು.

from India & World News in Kannada | VK Polls https://ift.tt/ZKNwe4W

Somasekhara Reddy: ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪಗಾಗಿ ಕ್ಷೇತ್ರ ಬಿಟ್ಟುಕೊಡಲು ಸಿದ್ಧ : ಶಾಸಕ ಜಿ.ಸೋಮಶೇಖರ ರೆಡ್ಡಿ

ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ವಿದಾಯದ ಹೇಳಿ ಆಗಿದೆ. ಈ ನಡುವೆ ಮಾಜಿ ಸಿಎಂ ಚುನಾವಣಾ ರಾಜಕೀಯದಲ್ಲಿ ಇರಬೇಕು, ಅವರ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್‌ ರೆಡ್ಡಿ ಹೇಳಿದ್ದಾರೆ. ಅವರು ಬಳ್ಳಾರಿ ನಗರದಿಂದ ಸ್ಪರ್ಧೆ ಮಾಡಿದರೆ ಒಂದು ಲಕ್ಷ ಲೀಡ್‌ನಲ್ಲಿ ಗೆಲ್ಲಿಸುತ್ತೇನೆ ಎಂದು ಘೋಷಣೆ ಮಾಡಿದರು. ಸಹೋದರ, ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಹಾಗೂ ಅರುಣಾ ಲಕ್ಷ್ಮೀ ವಿರುದ್ಧ ವಾಗ್ದಾಳಿ ನಡೆಸಿದರು.

from India & World News in Kannada | VK Polls https://ift.tt/WVrDPAz

Support Price: ರಾಗಿಗೆ ಬೆಂಬಲ ಬೆಲೆ ಘೋಷಣೆ, ಸಣ್ಣ ಹಿಡುವಳಿದಾರರ ಹೆಸರಲ್ಲಿ ಅಕ್ರಮವಾಗಿ ರಾಗಿ ಮಾರಾಟ..!

ಜನವರಿ ಒಂದರಿಂದ ಮಾರ್ಚ್‌ 31ರವೆಗೂ ರಾಗಿ ಖರೀದಿಗೆ ಸರ್ಕಾರ ಮುಂದಾಗಿದೆ. ಈ ಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 200-300 ಕ್ವಿಂಟಲ್‌ ಲೆಕ್ಕದಲ್ಲಿ ರಾಗಿ ಖರೀದಿಯನ್ನ ಸರ್ಕಾರ ಮಾಡಿದೆ. ಪ್ರತಿ ಕ್ವಿಂಟಲ್‌ ರಾಗಿಗೆ 3,578 ರೂಪಾಯಿ ಬೆಂಬಲ ಬೆಲೆಯಿದ್ದು, ಈ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ಈ ನಡುವೆ ಕೆಲ ರೈತರು ದೊಡ್ಡ ಹಡುವಳಿ ದಾರರಿಂದ ರಾಗಿ ಕೊಂಡು ತಮ್ಮ ಹೆಸರಲ್ಲಿ ಸರ್ಕಾರಕ್ಕೆ ಬೆಂಬಲ ಬೆಲೆ ಹೆಸರಲ್ಲಿ ರಾಗಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ದೊಡ್ಡ ಹಿಡುವಳಿದಾರರಿಗೂ ರಾಗಿ ಮಾರಟಕ್ಕೆ ಅವಕಾಶ ನೀಡಲು ಆಗ್ರಹಿಸಿದ್ದಾರೆ.

from India & World News in Kannada | VK Polls https://ift.tt/kIUWGNi

AUS vs SA : 'ಹರಿಣಗಳ ಕನಸು ಭಗ್ನ', ದಾಖಲೆಯ ಆರನೇ ಟಿ20 ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ!

Australia vs South Africa Final Highlights: ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಕನಸು ಭಗ್ನವಾಗಿದೆ. ಐಸಿಸಿ ಮಹಿಳಾ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿಯೂ ಬಲಿಷ್ಠ ಆಸ್ಟ್ರೇಲಿಯಾ ಎದುರು ಹರಿಣ ಪಡೆ 19 ರನ್‌ಗಳ ಸೋಲುಂಡಿತು. ಮೆಗ್‌ ಲ್ಯಾನಿಂಗ್‌ ಸಾರಥ್ಯದ ಆಸ್ಟ್ರೇಲಿಯಾ ತಂಡ ಆರನೇ ಬಾರಿ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ. ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಅನುಭವಿ ಓಪನರ್‌ ಬೆತ್‌ ಮೂನಿ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/pq0UtB4

Trafficking of children: ಮಕ್ಕಳ ಅಪಹರಣ, ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 9472 ಪ್ರಕರಣ ದಾಖಲು!

Children Trafficking In Karnataka ನಾಪತ್ತೆ ಅಥವಾ ಅಪಹರಣಕ್ಕೊಳಗಾದ ಮಕ್ಕಳ ಪತ್ತೆಗೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2018 ರಲ್ಲಿ ವರದಿಯಾದ 325 ಪ್ರಕರಣಗಳಲ್ಲಿ 302 ಪ್ರಕರಣಗಳನ್ನು ಸಂಸತ್ರಸ್ತರನ್ನು ಪತ್ತೆ ಹಚ್ಚಲಾಗಿದೆ. ಆದರೆ 23 ಪ್ರಕರಣಗಳು ಇನ್ನೂ ಬಾಕಿ ಇದೆ. ಈ ಬಗ್ಗೆ ವಿವರ ಇಲ್ಲಿದೆ.

from India & World News in Kannada | VK Polls https://ift.tt/ctWolIq

Summer in Karnataka - ವಿಜಯನಗರ ಜಿಲ್ಲೆಯಲ್ಲಿ ಏರುತ್ತಿರುವ ತಾಪಮಾನ; ಕಲ್ಲಂಗಡಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!

ವಿಜಯ ನಗರ ಜಿಲ್ಲೆಯಲ್ಲಿ ಬಿಸಿಲಿನ ಝಳ ಜೋರಾಗುತ್ತಿದೆ. ಬೇಸಿಗೆಯ ಆರಂಭದಲ್ಲೇ ಪರಿಸ್ಥಿತಿ ಹೀಗಿದ್ದರೆ, ಮುಂದೆ ಹೇಗೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಬಿಸಿಲಿನ ಝಳಕ್ಕೆ ತೊಂದರೆಗೀಡಾಗಿರುವ ಜನತೆ, ಈಗಾಗಲೇ ತಂಪು ಪಾನೀಯ, ಐಸ್ ಕ್ರೀಂ, ಜ್ಯೂಸ್, ದೇಹಕ್ಕೆ ತಂಪು ನೀಡುವ ಹಣ್ಣುಗಳ ಮೊರೆ ಹೋಗತೊಡಗಿದ್ದಾರೆ. ಇದರಿಂದಾಗಿ, ಬೇಸಗೆಯ ವಿಶೇಷ ಹಣ್ಣಾದ ಕಲ್ಲಂಗಡಿ ಕಡೆಗೆ ವಿಶೇಷ ಬೇಡಿಕೆ ಬಂದಿದೆ. ಕಳೆದೊಂದು ವಾರದಿಂದ ಹಣ್ಣಿಗೆ ಬೇಡಿಕೆ ಬಂದಿದೆ. ಕಳೆದೊಂದು ತಿಂಗಳಲ್ಲಿ 50 - 60 ಟನ್ ಕಲ್ಲಂಗಡಿ ಮಾರಾಟವಾಗಿದೆ!

from India & World News in Kannada | VK Polls https://ift.tt/HNn2AL8

Bengaluru-Mysuru express way: ದಶಪಥಕ್ಕೆ ಕಬ್ಬಿಣ ಚೋರರ ಕಾಟ: ಮಂಡ್ಯದ ಬಳಿ ಆತಂಕದ ವಾತಾವರಣ

Bengaluru-Mysuru express way: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ವಿದ್ಯುತ್ ಲೈನ್‌ಗಳ ಬೃಹತ್ ಎತ್ತರದ ಕಂಬಗಳ ಅಡ್ಡಪಟ್ಟಿಗಳು ಕಳ್ಳರ ಪಾಲಾಗಿದ್ದು, ಮಳೆ ಗಾಳಿಗೆ ನೆಲಕ್ಕುರುಳುವ ಆತಂಕ ಸ್ಥಳಿಯರಲ್ಲಿ ಮನೆಮಾಡಿದೆ.

from India & World News in Kannada | VK Polls https://ift.tt/patdUf0

ವಸತಿ ಶಾಲೆ ಕಟ್ಟಡ ಕಾರ್ಮಿಕರಲ್ಲಿಇಬ್ಬರಿಗೆ ಮಲೇರಿಯಾ: ಕಾರವಾರ ವಸತಿ ಶಾಲೆ ಮಕ್ಕಳ ಆರೋಗ್ಯದ ಮೇಲೆ ನಿಗಾ

ಕಾರವಾರದ ವಸತಿ ಶಾಲೆ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಯಾಕಂದ್ರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ಕೆಲಸ ಮಾಡುತ್ತಿರುವ ಇಬ್ಬರಲ್ಲಿ ಅಪಾಯಕಾರಿ ಪಿಎಫ್‌ ಮಲೇರಿಯಾ ಕಾಣಿಸಿಕೊಂಡಿದೆ. ಮುಂಬಯಿ, ಗೋವಾ, ಛತ್ತೀಸಗಡದಲ್ಲಿ ಮಲೇರಿಯಾ ವ್ಯಾಪಕವಾಗಿದ್ದು ಹೀಗೆ ಬಂದ ಕಾರ್ಮಿಕರಲ್ಲಿಯೇ ಮಲೇರಿಯಾ ಪತ್ತೆಯಾಗುತ್ತಿದೆ. ಇಬ್ಬರಲ್ಲಿ ಅಪಾಯಕಾರಿ ಪಿಎಫ್‌ ಮಲೇರಿಯಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೊಳ್ಳೆಗಳ ಭೀತಿ ಹೆಚ್ಚಿದೆ. ವಸತಿ ಶಾಲೆ ಮಕ್ಕಳ ಆರೋಗ್ಯದ ಬಗ್ಗೆಯೂ ನಿಗಾ ವಹಿಸಲಾಗಿದ್ದು, ಸದ್ಯ ಯಾವುದೇ ವಿದ್ಯಾರ್ಥಿಗಳಲ್ಲಿ ಮಲೇರಿಯಾ ಲಕ್ಷಣ ಇಲ್ಲ.

from India & World News in Kannada | VK Polls https://ift.tt/dq1Z5J0

ಸೊರಬದಲ್ಲಿ ಹಳೆ ನಾಟಾ ಅಕ್ರಮ ಸಾಗಾಟ: ಪ್ರಭಾವಿ ರಾಜಕಾರಣಿ, ರಾಜಕಾರಣಿಯ ಆಪ್ತ ಸಹಾಯಕನ ಕೈವಾಡ ಶಂಕೆ!?

ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಅಕ್ರಮ ಸಾಗಾಟಕ್ಕೆ ಸಿದ್ಧವಾದ ಸರಕಾರಿ ಕಟ್ಟಡಗಳ ಹಳೇ ನಾಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಐದಾರು ಸಾವಿರ ಅಡಿ ಹಳೆ ನಾಟಾವನ್ನು ಸಾಗಾಟ ಮಾಡಲು ಪ್ರಭಾವಿ ರಾಜಕಾರಣಿ ಹಾಗೂ ರಾಜಕಾರಣಿಯ ಆಪ್ತ ಸಹಾಯಕನ ಕೈವಾಡವಿದೆ ಅನ್ನೋ ಅನುಮಾನ ಜೋರಾಗಿ ಕೇಳಿ ಬರುತ್ತಿದೆ. ಸಾಗಾಣಿಕೆಯ ಪರನಾನಿಗೆ ಇಲ್ಲದೆ ಅಕ್ರಮ ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು, ಮುನ್ನಾ ಆನವಟ್ಟಿ ಹಾಗೂ ಲಾರಿ ಚಾಲಕ ಚಂದ್ರಪ್ಪ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗ್ತಿದೆ.

from India & World News in Kannada | VK Polls https://ift.tt/FnhOLxK

PM Modi Praises Karnataka-ಹನುಮ ಜನಿಸಿದ ಕರುನಾಡನ್ನು ಬಿಟ್ಟು ಭಾರತವನ್ನು ವರ್ಣಿಸಲು ಸಾಧ್ಯವೇ ಇಲ್ಲ

ಹನುಮನುದಿಸಿದ ನಾಡು ಕರ್ನಾಟಕವನ್ನು ಬಿಟ್ಟು ನಾವು ಭಾರತವನ್ನು ವರ್ಣಿಸಲು ಸಾಧ್ಯವೇ ಇಲ್ಲ ಎಂದು ಹೊಗಳಿದ್ದಾರೆ ಪ್ರಧಾನಿ ಮೋದಿ. ಹೊಸದಿಲ್ಲಿಯಲ್ಲಿ ಶನಿವಾರ ನಡೆದ ದೆಹಲಿ ಕರ್ನಾಟಕ ಸಂಘದ ​​ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟ್ರಕ್ಕೆ ಕರುನಾಡು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಹುನುಮನಿಂದಲೇ ಕರ್ನಾಟಕದ ಕೊಡುಗೆಯ ಮಹತ್ವ ವಿವರಿಸಿದ ಅವರು ವೀರವನಿತೆಯರಾದ ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಒನಕೆ ಓಬವ್ವ, ವೀರ ಪುರುಷ ಕ್ರಾತಿವೀರ ಸಂಗೊಳ್ಳಿ ರಾಯಣ್ಣ, ಬಸವಾದಿ ಶರಣರನ್ನು ಸ್ಮರಿಸಿದರು. ಪ್ರಧಾನಿ ಮೋದಿ ಆಡಿದ ಮಾತು ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಹನುಮನ ಜನ್ಮಸ್ಥಾನ ಎಂಬ ಕರ್ನಾಟಕದ ವಾದಕ್ಕೆ ಭಾರೀ ಪುಷ್ಟಿ ನೀಡಿದೆ. ಜೊತೆಗೆ ತಿರುಪತಿಯೇ ಹನುಮನ ಜನ್ಮಸ್ಥಾನ ಎಂಬ ಆಂಧ್ರಪ್ರದೇಶದ ಮೊಂಡುವಾದಕ್ಕೆ ಹಿನ್ನಡೆಯಾಗಿದೆ.

from India & World News in Kannada | VK Polls https://ift.tt/AqiowJ5

ಕೊಳ್ಳೇಗಾಲದಲ್ಲಿ ಮೂವರು ಕೈ ಶಾಸಕರ ನಡುವೆ ಟಿಕೆಟ್ ಪೈಪೋಟಿ; ಯಾರಿಗೆ ಬರುತ್ತೆ ಅದೃಷ್ಟ?

ಕೊಳ್ಳಾಗಾಲ ತಾಲೂಕು ಕಾಂಗ್ರೆಸ್ ನಲ್ಲಿ ಮೂವರು ಮಾಜಿ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಪೈಪೋಟಿಯಲ್ಲಿದ್ದಾರೆ. ಕ್ಷೇತ್ರದ ಜನತೆಯು ಈ ಬಾರಿ ಕಾಂಗ್ರೆಸ್ ಗೆ ಮಣೆ ಹಾಕಲಿದ್ದಾರೆ ಎಂಬ ವದಂತಿಗಳು ತಾಲೂಕಿನಲ್ಲಿ ಜೋರಾಗಿ ಹರಡಿರುವುದರಿಂದ ಕಾಂಗ್ರೆಸ್ ನಲ್ಲಿಯೂ ಟಿಕೆಟ್ ಪಡೆಯಲು ಪೈಪೋಟಿ ಮುಂದಾಗಿದೆ. ಮಾಜಿ ಶಾಸಕರಾದ, ಎನ್. ಜಯಣ್ಣ, ಎ.ಆರ್. ಕೃಷ್ಣಮೂರ್ತಿ ಹಾಗೂ ಎಸ್. ಬಾಲರಾಜು - ಈ ಮೂವರೂ ಟಿಕೆಟ್ ಆಕಾಂಕ್ಷಿಗಳಾಗಿದ್ದು ಕಡೆಗೆ ಟಿಕೆಟ್ ಯಾರಿಗೆ ಸಿಗುತ್ತೆ ಎಂಬ ಕುತೂಹಲ ಏರ್ಪಟ್ಟಿದೆ.

from India & World News in Kannada | VK Polls https://ift.tt/soeWukl

Kudremukh National Park : ಶಮನವಾಯ್ತು ಬೆಂಕಿ, ಶುರುವಾಗಿದೆ ಬೇಗುದಿ: ಹುಲ್ಲುಗಾವಲುಗಳಿಗೆ ಬೆಂಕಿ ಬಿದ್ದ ಪರಿಣಾಮ ವಾತಾವರಣದಲ್ಲಿ ಏರುಪೇರು ​​

ಬೆಳ್ತಂಗಡಿ ಸಮೀಪದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅರಣ್ಯದ ಹುಲ್ಲುಗಾವಲು ಪರಿಸರದಲ್ಲಿ ಕಾಡ್ಗಿಚ್ಚು ಹತೋಟಿಗೆ ತರಲು ವನ್ಯಜೀವಿ ವಿಭಾಗ ಸ್ಥಳೀಯರ ಸಹಾಯದಿಂದ ಬೆಂಕಿ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದರು. ಆದ್ರೀಗ ಬೆಂಕಿ ಶಮನವಾದರೂ ತಾಪಮಾನ ಏರುಪೇರಿನಿಂದಾಗಿ ಹಗಲಲ್ಲಿ ಉರಿ ಬಿಸಿಲು, ಸೆಕೆಯಿಂದ ಜನ ಪರದಾಡುತ್ತಿದ್ದಾರೆ. ಇತ್ತ ಬೆಳಗ್ಗಿನ ಜಾವ ಚಳಿಯ ತುಸು ಜೋರಾಗೇ ಇದೆ. ವಾತಾವರಣದ ಬದಲಾವಣೆ ಜನರ ಆರೋಗ್ಯದ ಮೇಲೆ ಇನ್ನಿಲ್ಲ ಪ್ರಭಾವ ಬೀರುತ್ತಿದ್ದು, ಜ್ವರ, ತಲೆನೋವು ಜೊತೆಗೆ ಮೊದಲಾದ ಅನಾರೋಗ್ಯದಿಂದ ಸಮಸ್ಯೆ ಎದುರಿಸುವಂತಾಗಿದೆ.

from India & World News in Kannada | VK Polls https://ift.tt/97jOs2n

ಮಂಜೇಶ್ವರ ಸರಕಾರಿ ಕಾಲೇಜುಗಳಲ್ಲಿ ಸೈನ್ಸ್‌ಗಿಲ್ಲ ಸೀಟ್‌: ಕರ್ನಾಟಕದ ಶಿಕ್ಷಣ ಸಂಸ್ಥೆಗಳನ್ನು ಆಶ್ರಯಿಸುತ್ತಿರುವ ವಿದ್ಯಾರ್ಥಿಗಳು

ಮಂಜೇಶ್ವರ ತಾಲೂಕಿನ ಸರಕಾರಿ ಶಾಲೆಗಳಲ್ಲಿ ವಿಜ್ಞಾನ ವಿಭಾಗದಲ್ಲಿ ಅಗತ್ಯ ಸೀಟ್‌ಗಳ ಕೊರತೆ ಎದುರಾಗಿದೆ. ಹೀಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಕರ್ನಾಟಕ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಕುಂಬಳೆ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ವಿಭಾಗದ 60 ಸೀಟುಗಳಿಗೆ ಕಳೆದ ವರ್ಷ 4 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಗ್ರೇಡ್‌ ಪಡೆದ ವಿದ್ಯಾರ್ಥಿಗಳಿಗೂ ಪ್ರವೇಶ ಲಭಿಸಿಲ್ಲ. ಇನ್ನೂ ಕೆಲವೊಂದು ಸ್ಕೂಲ್‌ಗಳಲ್ಲಿ ವಿಜ್ಞಾನ ವಿಭಾಗವಿದ್ದರೂ ಜೀವಶಾಸ್ತ್ರ ವಿಭಾಗವೇ ಇಲ್ಲದಂತಾಗಿದೆ. ಹೀಗಾಗೇ ಉನ್ನತ ಶಿಕ್ಷಣಕ್ಕೆ ಮಂಗಳೂರು,ಉಜಿರೆ, ನಿಟ್ಟೆ ಶಿಕ್ಷಣ ಸಂಸ್ಥೆಗಳನ್ನು ಆಶ್ರಯಿಸುತ್ತಿದ್ದಾರೆ.

from India & World News in Kannada | VK Polls https://ift.tt/vraMFPm

Traffic Problem: ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಅವಧಿ ತಗ್ಗಿತು, ಸಿಲಿಕಾನ್‌ ಸಿಟಿಯಲ್ಲಿ ಟ್ರಾಫಿಕ್‌ ಹೆಚ್ಚಾಯ್ತು..!

ಬೆಂಗಳೂರು ಹಾಗೂ ಮೈಸೂರು ನಡುವೆ ಹಳೆ ರಸ್ತೆಯಲ್ಲಿ ಪ್ರಯಾಣಕ್ಕೆ ಕನಿಷ್ಠ 3 ತಾಸು ಹಿಡಿಯುತ್ತಿತ್ತು. ದಶಪಥ ರಸ್ತೆಯಲ್ಲಿ ಪ್ರಯಾಣದ ಅವಧಿ ಒಂದೂವರೆ ತಾಸಿಗೆ ಇಳಿದಿದೆ. ಪ್ರಯಾಣದ ಅವಧಿ ಅರ್ಧದಷ್ಟು ಕಡಿಮೆ ಆಗಿರುವುದಕ್ಕೆ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಮೈಸೂರಿನಿಂದ ಶರವೇಗದಲ್ಲಿ ಬರುವ ವಾಹನಗಳು ನಗರ ಪ್ರವೇಶಿಸುತ್ತಿದ್ದಂತೆಯೇ ಆಮೆ ವೇಗದಲ್ಲಿ ಸಾಗುವಂತಾಗಿದೆ. ಮೈಸೂರು ರಸ್ತೆಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಎಕ್ಸ್‌ಪ್ರೆಸ್‌ ಕಾರಿಡಾರ್‌ ಅಂತ್ಯಗೊಂಡ ನಂತರ ಟ್ರಾಫಿಕ್‌ ಜಾಮ್‌ನ ಕರಾಳ ಮುಖದ ದರ್ಶನವಾಗುತ್ತದೆ.

from India & World News in Kannada | VK Polls https://ift.tt/1H5alcd

Farewell to students: ಬೀಳ್ಕೊಡುಗೆ ಸಮಾರಂಭದಲ್ಲಿ ತಂದೆ-ತಾಯಿ, ಶಿಕ್ಷಕರ ಪಾದ ಪೂಜೆ ಮಾಡಿದ ವಿದ್ಯಾರ್ಥಿಗಳು

ತಂದೆ ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧ ಅವಿನಾಭಾವ ಸಂಬಂದ. ಹೆತ್ತವರು ಮಕ್ಕಳಿಗೆ ಯಾವಾಗಲು ದೇವರೆ ಸರಿ. ಮಕ್ಕಳ ಪಾಲಿಗೆ ಅವರೆ ನಿಜವಾದ ದೇವರು ಎಂದರೆ ಹೆತ್ತ ತಂದೆ ತಾಯಿಗಳು. ಆಧುನೀಕರಣ, ಜಾಗತೀಕರಣ ಮತ್ತು ನಾಗರೀಕರಣದ ಈ ದಿನಗಳಲ್ಲಿ ಹೆತ್ತವರ ಮೇಲೆ ಮಕ್ಕಳ ಗೌರವ ಕಡಿಮೆಯಾಗುತ್ತಿದೆ. ಪೂಜ್ಯನೀಯವಾಗಿ ಕಾಣಬೇಕಾದ ಈ ಜೀವಗಳನ್ನು ಸ್ವಂತ ಮಕ್ಕಳೇ ವೃದ್ದಾಶ್ರಮಕ್ಕೆ ತಳ್ಳುತ್ತಿರುವದು ನಿಜಕ್ಕೂ ಅಘಾತಕಾರಿ. ಇಂತಹ ಉದಾಹರಣೆಗಳ ನಡುವೆ ಹಾವೇರಿಯಲ್ಲಿ ಹೆತ್ತವರ ಪಾದಪೂಜೆ ಮಾಡಿಸಿದ್ದಾರೆ.

from India & World News in Kannada | VK Polls https://ift.tt/hDMzNuk

Ravindra Jadeja: 'ರವೀಂದ್ರ ಜಡೇಜಾಗೆ ನನಗಿಂತ ಕ್ರಿಕೆಟ್ ತುಂಬಾ ಮುಖ್ಯ', ಪತ್ನಿ ರಿವಾಬ ಜಡೇಜಾ!

Ravindra Jadeja's Wife opens Up His husband Comeback: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಟೀಮ್ ಇಂಡಿಯಾ ಆಲ್‌ರೌಂಡರ್ ರವಿಂದ್ರ ಜಡೇಜಾ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆರಂಭಿಕ ಎರಡು ಪಂದ್ಯಗಳಲ್ಲಿ ಅವರು 17 ವಿಕೆಟ್‌ಗಳು ಹಾಗೂ 96 ರನ್‌ ಗಳಿಸಿದ್ದಾರೆ. ಇದೀಗ ತಮ್ಮ ಪತಿಯ ಕಮ್‌ಬ್ಯಾಕ್ ಬಗ್ಗೆ ಮಾತನಾಡಿದ ರಿವಾಬಾ ಜಡೇಜಾ, ರವೀಂದ್ರ ಜಡೇಜಾಗೆ ಹೆಚ್ಚು ಮಾತನಾಡುವುದು ಇಷ್ಟವಿಲ್ಲ. ಅವರಿಗೆ ಕ್ರಿಕೆಟ್‌ ಅಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/K7ATBaS

Kannur Fort: ಕಾನೂರು ಕೋಟೆಗೆ ಬೇಕಿದೆ ಕಾಯಕಲ್ಪ: ಶಿಥಿಲಾವಸ್ಥೆ ತಲುಪಿದರೂ ದುರಸ್ತಿಗೆ ನಿರ್ಲಕ್ಷ್ಯ

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತೆ ಕಾಳುಮೆಣಸಿನ ರಾಣಿ ಚನ್ನಭೈರಾದೇವಿಯ ಕೋಟೆ ಎಂದೇ ಪ್ರಸಿದ್ಧಿ ಪಡೆದಿರುವ ಕಾನೂರು ಕೋಟೆ. ಐತಿಹಾಸಿಕ ಮಹತ್ವವಿರುವ ಈ ಕಾನೂರು ಕೋಟೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಕೋಟೆಯ ಅವಶೇಷಗಳು ಅವಸಾನದ ಅಂಚಿನಲ್ಲಿದೆ. ನಿಧಿಗಳ್ಳರ ದುರಾಸೆಗೆ ಒಳಗಾಗಿ ಕೋಟೆ ಶಿಥಿಲಾವಸ್ಥೆಗೆ ಬಂದು ನಿಂತಿದೆ. ಜೈನ ಬಸದಿಯ ಭಗ್ನ ಅವಶೇಷಗಳು ಸೇರಿದಂತೆ ಪಾಣಿಪೀಠ, ಕಲ್ಲಿನ ಬಾವಿ, ತುಂಡಾದ ಅವಶೇಷಗಳು ಇಲ್ಲಿ ಕಾಣ ಸಿಗುತ್ತದೆ. ಇಲ್ಲಿರುವ ಐತಿಹಾಸಿಕ ಅವಶೇಷಗಳು ಕಳ್ಳರ ಪಾಲಾಗುತ್ತಿದ್ದು, ಕೋಟೆಯನ್ನು ಉಳಿಸುವ ನಿಟ್ಟಿನಲ್ಲಿ ಕಾಯಕಲ್ಪ ಒದಗಿಸಬೇಕಿದೆ.

from India & World News in Kannada | VK Polls https://ift.tt/ODIlm9K

ಹಾಸನದಲ್ಲಿ ನನಸಾಗದ ಟ್ರಕ್‌ ಟರ್ಮಿನಲ್‌: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಮುನ್ನೆಲೆಗೆ

ಹಾಸನ ಜಿಲ್ಲೆಯಲ್ಲೊಂದು ಟ್ರಕ್‌ ಟರ್ಮಿನಲ್‌ ನಿರ್ಮಿಸಬೇಕೆಂಬುದು ಅದೆಷ್ಟೋ ದಶಕಗಳ ಕನಸಾಗಿತ್ತು. ಆದರೆ ಬಿಜೆಪಿ, ಜೆಡಿಎಸ್‌ ನಡುವಿನ ಕಾಳಗದಿಂದ ನೇರವೇರಿರಲಿಲ್ಲ. ಇದೀಗ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮತ್ತೆ ಕೂಗೆದಿದೆ. ರಾಜ್ಯ, ಹೊರ ರಾಜ್ಯದಿಂದ ದೊಡ್ಡ ಮಟ್ಟದಲ್ಲಿ ಲಾರಿಗಳು ಹಾಸನಕ್ಕೆ ಬಂದು ಮುಂದೆ ಸಾಗುತ್ತವೆ. ವಿಶ್ರಾಂತಿಗಾಗಿ ಟ್ರಕ್‌ ಟರ್ಮಿನಲ್‌ ಇಲ್ಲದೆ ಅಪಘಾತ, ಅಪರಾಧ ಪ್ರಕರಣಗಳು ನಡೆದಿರೋದಿದೆ. ಸುರಕ್ಷತೆ ದೃಷ್ಟಿಯಿಂದ ಟ್ರಕ್‌ ಟರ್ಮಿನಲ್‌ ನಿರ್ಮಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಅಗತ್ಯ ಜಮೀನು ವಶಪಡಿಸಿಕೊಳ್ಳುವ, ಹಂಚಿಕೆ ಮಾಡುವ ಕುರಿತು ಫೆ.24ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಲಿದೆ.

from India & World News in Kannada | VK Polls https://ift.tt/oTg6Kks

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳನ್ನು ಕಾಡುತ್ತಿದೆ ಚಿಕನ್‌ ಫಾಕ್ಸ್‌ : ಹವಾಮಾನ ಬದಲಾವಣೆಯಿಂದ ಸೋಂಕು ಏರಿಕೆ

ರಣ ಬಿಸಿಲು ತೀವ್ರಗೊಳ್ಳುತ್ತಿದ್ದಂತೆ ಮಂಗಳೂರಿನಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರಲ್ಲೂ ಚಿಕನ್ ಫಾಕ್ಸ್‌ ಕಾಣಿಸಿಕೊಳ್ಳುತ್ತಿದೆ. ಮುಂಜಾಗ್ರತ ಕ್ರಮವಾಗಿ ಇದೆಲ್ಲದರಿಂದ ದೂರ ಇರಬೇಕಂದ್ರೆ ಶುಚಿತ್ವದ ಕಡೆಗೆ ಹೆಚ್ಚು ಗಮನ ಹರಿಸುವುದು ಒಳಿತು. ಉಸಿರಾಟದ ಮೂಲಕ, ಅನಾರೋಗ್ಯಕರ ಆಹಾರ, ನೀರು ಸೇವನೆಯಿಂದ ಮತ್ತು ಚಿಕನ್‌ ಫಾಕ್ಸ್‌ ಇರುವ ವ್ಯಕ್ತಿಯ ನೇರ ಸಂಪರ್ಕದಿಂದ ಹರಡುತ್ತದೆ. ಜ್ವರ, ಶೀತ, ತಲೆನೋವು, ಎಲ್ಲಾ ಚಿಕನ್‌ ಪಾಕ್ಸ್‌ನ ಮೊದಲು ಕಂಡು ಬರುವ ಸೂಚನೆ. ಎರಡನೇ ದಿನ ಮುಖ ಮತ್ತು ಶರೀರದಲ್ಲಿ ಸಣ್ಣ ಸೆಕೆ ಬೊಕ್ಕೆಗಳಂತೆ ಕಾಣಿಸಿಕೊಳ್ಳುತ್ತೆ.

from India & World News in Kannada | VK Polls https://ift.tt/dn5NPjO

CM Bommai-ನೀವು ಭ್ರಷ್ಟರಾಗಿದ್ದಲ್ಲದೇ ವ್ಯವಸ್ಥೆಯನ್ನೂ ಭ್ರಷ್ಟಗೊಳಿಸಿದ್ದೀರಿ: ಕಾಂಗ್ರೆಸ್ ವಿರುದ್ಧ ಸಿಎಂ ವಾಗ್ದಾಳಿ

ಭ್ರಷ್ಟಾಚಾರಕ್ಕೆ ಸಂಬಂಧಿಸಿ ಆಡಳಿತಾರೂಢ ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು ಲೋಕಾಯುಕ್ತ, ಅರ್ಕಾವತಿ ಡಿನೋಟಿಫಿಕೇಶನ್ ವಿಚಾರಗಳನ್ನು ಪ್ರಸ್ತಾಪಿಸಿದರು. ಲೋಕಾಯುಕ್ತ ನಿಷ್ಕ್ರಿಯಗೊಳಿಸಿ ಎಸಿಬಿ ಮೂಲಕ 59 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮತ್ತು ಅರ್ಕಾವತಿ ಬಡಾವಣೆ ಡಿ ನೋಟಿಫಿಕೇಶ್ ಬಗ್ಗೆ ನ್ಯಾ. ಕೆಂಪಣ್ಣ ಆಯೋಗದ ವರದಿ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ನೀವು ಭ್ರಷ್ಟರಾಗಿದ್ದಲ್ಲದೇ ವ್ಯವಸ್ಥೆಯನ್ನೂ ಭ್ರಷ್ಟಗೊಳಿಸಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

from India & World News in Kannada | VK Polls https://ift.tt/dwp1Mnz

Wild Elephant Rescue-ಅಬ್ಬಾ.. ಅಂತೂ ಸೆರೆ ಸಿಕ್ಕಿದೆ....ದಕ್ಷಿಣ ಕನ್ನಡದ ಕಡಬದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಬಳಿ ಸೋಮವಾರ ಬೆಳಗ್ಗೆಯಷ್ಟೇ ಯುವತಿ ಸೇರಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ. ಇನ್ನೂ ಕಾಡಾನೆಗಳಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದು ಅವುಗಳನ್ನೂ ಶೀಘ್ರ ಸೆರೆ ಹಿಡಿಯಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಭರವಸೆ ನೀಡಿದ್ದಾರೆ. ಐದು ಸಾಕಾನೆಗಳ ಸಹಕಾರದೊಂದಿಗೆ ಕಾಡಾನೆಯನ್ನು ಪಳಗಿಸಿ ಪೇರಡ್ಕ ಬಳಿಯ ಆನೆ ಶಿಬಿರಕ್ಕೆ ತರಲಾಗಿದೆ. ಬಳಿಕ ಅದನ್ನು ಆನೆಗಳ ಮೀಸಲು ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

from India & World News in Kannada | VK Polls https://ift.tt/ePp7Url

ಈ ಜಿಲ್ಲಾ ಕೇಂದ್ರದಲ್ಲಿ ರಸ್ತೆಯೇ ಬಸ್‌ ನಿಲ್ದಾಣ; ತಾಸುಗಟ್ಟಲೆ ನಿಂತರೂ ಕೇಳೋರಿಲ್ಲ!

ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿರುವ ಕೆಲವು ಸಮಸ್ಯೆಗಳಿಗೆ ಮತ್ತೊಂದು ಉದಾಹರಣೆ, ನಗರದ ಬಿ. ರಾಚಯ್ಯ ಜೋಡಿರಸ್ತೆಯ ಟ್ರಾಫಿಕ್ ಸಮಸ್ಯೆ. ಇಲ್ಲಿ ಬಸ್ಸುಗಳು, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ರಸ್ತೆ ಮಧ್ಯದಲ್ಲಿಯೇ ನಿಲ್ಲುತ್ತಿವೆ. ಇದರಿಂದ ಈ ರಸ್ತೆಯಲ್ಲಿ ವಿಪರೀತ ಟ್ರಾಫಿಕ್ ಜಾಮ್ ಆಗುತ್ತದಲ್ಲದೆ, ರಸ್ತೆಯಲ್ಲಿ ಟ್ರಾಫಿಕ್ ನಲ್ಲಿ ನಿಂತ ಜನರು ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿರುತ್ತದೆ. ಭುವನೇಶ್ವರಿ ವೃತ್ತದಿಂದ ರಾಮಸಮುದ್ರದ ಕಡೆಗೆ ತೆರಳುವ ಭಾಗವವರೆಗೆ ಹಾಗೂ ಕೆನರಾಬ್ಯಾಂಕ್ ನಿಂದ ಭ್ರಮರಾಂಬ ಬಡಾವಣೆಯ ಮೊದಲ ತಿರುವಿನವರೆಗೂ ಟ್ರಾಫಿಕ್ ಜಾಮ್ ಇರುತ್ತದೆ. ಈ ಸಮಸ್ಯೆ ನಿವಾರಣೆಗೆ ಯಾರು ಯೋಚಿಸಿಲ್ಲ.

from India & World News in Kannada | VK Polls https://ift.tt/PFsreXI

ಕಾಡ್ಗಿಚ್ಚು ನಂದಿಸಲು ಕಾಡ ಸೊಪ್ಪೇ ಗತಿ: ಅರಣ್ಯ ಸಿಬ್ಬಂದಿಗಿಲ್ಲ ಮೂಲ ಸೌಕರ್ಯ

ಕಾಡ್ಗಿಚ್ಚು ನಂದಿಸಲು ಅರಣ್ಯ ಸಿಬ್ಬಂದಿಗೆ ಮೂಲ ಸೌಕರ್ಯವೇ ಇಲ್ಲದಂತಾಗಿದ್ದು ಕಾಡಸೊಪ್ಪೇ ಗತಿ ಎಂಬಂತ ದುಸ್ಥಿತಿ ಎದುರಾಗಿದೆ. ​ಕಾಡ್ಗಿಚ್ಚು ನಂದಿಸಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ಒಟ್ಟು ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಸಂಖ್ಯೆ 4520 ಮಂದಿ. 60 ಐಎಫ್‌ಎಸ್‌, 120 ಉಪವಲಯ ಅರಣ್ಯಾಧಿಕಾರಿ, 70 ವಲಯ ಅರಣ್ಯಾಧಿಕಾರಿ, 40 ಮಾವುತರು, 100ಕ್ಕೂ ಅಧಿಕ ಚಾಲಕ ಹುದ್ದೆಗಳು ಖಾಲಿಯಿವೆ. ಆದರೆ ಖಾಲಿಯಿರುವ ಹುದ್ದೆ ಭರ್ತಿ ಪ್ರಕ್ರಿಯೆ ಇನ್ನೂ ನಡೆದಿಲ್ಲ.

from India & World News in Kannada | VK Polls https://ift.tt/Rx07wOg

Boat capsizes in krishna river - ಕೃಷ್ಣಾ ನದಿಯಲ್ಲಿ ದೋಣಿ ಪಲ್ಟಿ; ಈಜಿ‌ ದಡ ಸೇರಿದ ಪ್ರಯಾಣಿಕರು!

ಕೃಷ್ಣಾ ನದಿಯಲ್ಲಿ ಸಾಗುತ್ತಿದ್ದ ದೋಣಿಯೊಂದು ಮುಗುಚಿಕೊಂಡಿರುವ ಘಟನೆ ಬುಧವಾರ (ಫೆ. 22) ಮುಸ್ಸಂಜೆಯ ವೇಳೆ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಬಲಾದಿ ಸದಾಶಿವ ಮಠಕ್ಕೆ ದರ್ಶನಕ್ಕೆಂದು ಬಾಗಲಕೋಟೆಯಿಂದ ಬಂದಿದ್ದ ಭಕ್ತಾದಿಗಳ ತಂಡವೊಂದನ್ನು ದೋಣಿಯಲ್ಲಿ ಕೂರಿಸಿಕೊಂಡು ಕೃಷ್ಣಾನದಿಯ ಮೂಲಕ ತೆರಳಲಾಗುತ್ತಿತ್ತು. ಆದರೆ, ಪ್ರಯಾಣ ಬೆಳೆಸಿದ ಸ್ವಲ್ಪ ಹೊತ್ತಿನಲ್ಲೇ ಅತಿಯಾದ ಪ್ರಯಾಣಿಕರಿದ್ದ ಕಾರಣದಿಂದಾಗಿ ದೋಣಿ ಮುಗುಚಿಕೊಂಡಿದೆ. ಪ್ರಯಾಣಿಕರು ಈಜಿ ದಡ ಸೇರಿದ್ದಾರೆ.

from India & World News in Kannada | VK Polls https://ift.tt/w0J3A1z

ಮೈಸೂರು ರಿಂಗ್‌ ರಸ್ತೆಯಲ್ಲಿ ಸಾರಿಗೆ ಬಸ್‌ ಆರಂಭಕ್ಕೆ ಕೆಎಸ್ ಆರ್ ಟಿಸಿ ಚಿಂತನೆ

ಮೈಸೂರು ರಿಂಗ್ ರಸ್ತೆ ನಿರ್ಮಿಸಿ 2 ದಶಕಗಳೇ ಕಳೆದಿವೆ. ಮೊದಲು ಅಲ್ಲಿ ಬಸ್ ಸೇವೆ ಆರಂಭಿಸಲಾಗಿತ್ತಾದರೂ ಸೂಕ್ತವಾದ ಪ್ರಚಾರದ ಕೊರತೆಯಿಂದಾಗಿ ಪ್ರಯಾಣಿಕರು ಹೆಚ್ಚು ಬರುತ್ತಿರಲಿಲ್ಲ. ಹಾಗಾಗಿ, ಆ ಬಸ್ ಸೇವೆಯನ್ನು ನಿಲ್ಲಿಸಲಾಗಿತ್ತು. ಆದರೀಗ, ಅದಾಗಿ ಹಲವಾರು ವರ್ಷಗಳು ಕಳೆದಿವೆ. ರಿಂಗ್ ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಬಡಾವಣೆಗಳು ಬಂದಿದ್ದು, ಜನಸಂಖ್ಯೆಯೂ ಹೆಚ್ಚಾಗಿದ್ದು, ಜನರಿಂದಲೇ ಬಸ್ ಸಂಚಾರಕ್ಕೆ ಬೇಡಿಕೆ ಬಂದಿದೆ. ಈಗ ಅಲ್ಲಿ ತನ್ನ ಸೇವೆ ನೀಡಲು ಕೆಎಸ್ ಆರ್ ಟಿಸಿ ಚಿಂತನೆ ನಡೆಸಿದೆ.

from India & World News in Kannada | VK Polls https://ift.tt/ijTAEqL

Kudremukh National Park-ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: ಬೆಂಕಿ ಹತೋಟಿಗೆ ಅರಣ್ಯ ಸಿಬ್ಬಂದಿ ಹರಸಾಹಸ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅರಣ್ಯ ಹುಲ್ಲುಗಾವಲು ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಾರ್ಯಾಚರಣೆಗೆ ಸ್ಥಳೀಯರು ನೆರವು ನೀಡುತ್ತಿದ್ದಾರಾದರೂ ಬೆಂಕಿ ಬಿದ್ದಿರುವ ಪ್ರದೇಶಕ್ಕೆ ಏಳೆಂಟು ಕಿ.ಮೀ. ಟ್ರಕ್ಕಿಂಗ್ ನಡೆಸಿದ ಬಳಿಕವಷ್ಟೇ ತಲುಪಬೇಕಾಗಿರುವುದು ಸಮಸ್ಯೆಗೆ ಕಾರಣವಾಗಿದೆ.

from India & World News in Kannada | VK Polls https://ift.tt/Cq1TsXZ

ಐಟಿ ಕಂಪನಿ, ಉದ್ಯಮ ವಲಯಗಳ ಮಹಿಳಾ ಸಿಬ್ಬಂದಿಗೂ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ, ಆದರೆ ಷರತ್ತುಗಳು ಅನ್ವಯ

ಇನ್ನು ಮುಂದೆ ರಾಜ್ಯದ ಐಟಿ ಕಂಪನಿ ಮತ್ತು ಉದ್ಯಮ ವಲಯದ ಬೇಡಿಕೆಗನುಸಾರವಾಗಿ ಮಹಿಳಾ ಉದ್ಯೋಗಿಗಳು ಸಹ ರಾತ್ರಿಪಾಳಿಯಲ್ಲಿ ಕಾರ್ಯ ನಿರ್ವಹಿಸಬಹುದು. ಈ ನಿಟ್ಟಿನಲ್ಲಿ 'ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ -2023' ಅನ್ನು ವಿಧಾನಸಭೆ ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಆದರೆ ಮಹಿಳೆಯರಿಂದ ಈ ಬಗ್ಗೆ ಲಿಖಿತ ಒಪ್ಪಿಗೆ ಪಡೆದ ಬಳಿಕವೇ ರಾತ್ರಿಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ವಿಧೇಯಕದಲ್ಲಿ ಷರತ್ತನ್ನು ವಿಧಿಸಲಾಗಿದೆ.

from India & World News in Kannada | VK Polls https://ift.tt/JQfaWxM

ICC Test Rankings : ಐಸಿಸಿ ಟೆಸ್ಟ್ ಶ್ರೇಯಾಂಕ, ಅಶ್ವಿನ್ ನಂ. 2, ಜಡೇಜಾ ನಂ. 1 ಅಲ್ ರೌಂಡರ್!

Ravichandran Ashwin To Claim 2nd Spot In Test bowlers Rankings: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ತಮ್ಮ ಸ್ಪಿನ್ ಮೋಡಿಯಿಂದ ಗಮನ ಸೆಳೆದಿರುವ ಟೀಮ್ ಇಂಡಿಯಾದ ತ್ರಿಮೂರ್ತಿ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ, ಆರ್‌. ಅಶ್ವಿನ್, ಅಕ್ಷರ್ ಪಟೇಲ್ ಅವರು ಟೆಸ್ಟ್ ಶ್ರೇಯಾಂಕದಲ್ಲಿ ಜಿಗಿತ ಕಂಡಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಹಿರಿಯ ಬೌಲರ್ ಜೇಮ್ಸ್ ಅಂಡರ್ಸನ್ ನಂ.1 ಸ್ಥಾನ ಅಲಂಕರಿಸಿದರೆ, ಅಶ್ವಿನ್ 2ನೇ ಸ್ಥಾನಕ್ಕೇರಿದ್ದಾರೆ. ಅಲ್‌ರೌಂಡರ್ಗಳ ಪಟ್ಟಿಯಲ್ಲಿ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/SdA248J

AnanthNag-ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ನಟ ಅನಂತ್ ನಾಗ್ ಗೈರು: ಗರಿಗೆದರಿದ ಕುತೂಹಲ

ಖ್ಯಾತ ಚಿತ್ರನಟ ಅನಂತ್ ನಾಗ್ ಅವರು ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆಂದು ಸುದ್ದಿಯಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆದು ಅನ್ಯಪಕ್ಷಗಳ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು. ಅನಂತ್ ನಾಗ್ ಬರುವರೆಂದು ಬಹಳಷ್ಟು ಹೊತ್ತು ಬಿಜೆಪಿ ಮುಖಂಡರು ಕಾದು ಕುಳಿತಿದ್ದರು. ಆದರೆ ಕೊನೇ ಕ್ಷಣದಲ್ಲಿ ಅನಂತ್ ನಾಗ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಈ ಬಗ್ಗೆ ಅವರಾಗಲಿ, ಪಕ್ಷದ ಮುಖಂಡರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಬೆಳವಣಿಗೆ ಇದೀಗ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

from India & World News in Kannada | VK Polls https://ift.tt/iBcWMhu

Rahul Gandhi: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲಾಗಿದೆ, ಮತ ಧ್ರುವೀಕರಣಕ್ಕೆ ಮೂಲ ಸಮಸ್ಯೆ ಮರೆಮಾಚಲಾಗಿದೆ : ರಾಹುಲ್‌ ಗಾಂಧಿ

ಸದ್ಯ ಭಾರತದಲ್ಲಿ ಪ್ರಜಾಪ್ರಭುತ್ವದ ಅಡಿಗಲ್ಲುಗಳು ಅಲುಗಾಡುತ್ತಿವೆ, ರಾಜಕೀಯ ಮತ ಧ್ರುವೀಕರಣ ಕಾರ್ಯದ ಮೂಲಕ ದೇಶದ ಮೂಲ ಸಮಸ್ಯಗಳ ಬಗ್ಗೆ ಚರ್ಚೆ ನಡೆಸದಂತೆ ಮಾಡಿದ್ದಾರೆ. ಬಡತನ, ನಿರುದ್ಯೋಗ, ಅನಕ್ಷರತೆ, ರೈತರ ಸಂಕಟ, ಸಣ್ಣ ಉದ್ದಿಮೆಗಳ ನಾಶ ಮೊದಲಾದ ವಿಷಯಗಳನ್ನ ಮರೆಮಾಚಲಾಗಿದೆ. ಎಲ್ಲಾ ಸಮಾನ ಮನಸ್ಕರ ಪಕ್ಷಗಳು ಒಂದಾದರೆ ಬಿಜೆಪಿಯನ್ನ ಸೋಲಿಸಬಹುದು, ಇಲ್ಲಿ ಎಡ ಬಲ ಪ್ರಶ್ನೆ ಬರುವುದಿಲ್ಲ. ಶಾಂತಿ ಮತ್ತು ದೇಶದ ಏಕತೆ ಬಯಸುವ ಮನಸ್ಸುಗಳು 100% ಬಿಜೆಪಿಯನ್ನ ಸೋಲಿಸಬಹುದು ಎಂದ ರಾಹುಲ್‌ ಗಾಂಧಿ.

from India & World News in Kannada | VK Polls https://ift.tt/JEyZl7N

Rohini Sindhuri Vs Roopa Moudgil- ರೋಹಿಣಿ-ರೂಪಾ ರಂಪಾಟಕ್ಕೆ ಬ್ರೇಕ್‌: ಮೌನವಾಗಿರಲು ಸಿಎಸ್ ಸೂಚನೆ

ಕಳೆದ ಕೆಲ ದಿನಗಳಿಂದ ಕಾವೇರಿದ್ದ ಹಿರಿಯ ಅಧಿಕಾರಿಗಳಾದ ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಗೆ ಇದೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸೋಮವಾರವಷ್ಟೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸರಕಾರ ಆದೇಶಿಸಿತ್ತು. ಜೊತೆಗೆ ಸರಕಾರದ ಮುಖ್ಯಕಾರ್ಯದರ್ಶಿಗಳು ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದ್ದಲ್ಲದೆ, ಇಬ್ಬರಿಗೂ ನೋಟಿಸ್ ಕಳುಹಿಸಿದ್ದರು. ಜೊತಗೆ ಇಬ್ಬರಿಗೂ ಮೌನವಾಗಿರುವಂತೆ ಸಿಎಸ್ ಸೂಚಿಸಿದ್ದಾರೆ.

from India & World News in Kannada | VK Polls https://ift.tt/OLSARrc

Dr Ashwathnarayana Vs DK Suresh-ಡಿಕೆ ಸುರೇಶ್ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ; ಅವರ ಒಂದು ಅಭಿವೃದ್ಧಿ ಯೋಜನೆ ಹೇಳಲಿ ನೋಡೋಣ

ನಾವು ರಾಮನಗರ ಜಿಲ್ಲೆಯ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇವೆ. ಆದರೆ ಸಂಸದ ಡಿ.ಕೆ.ಸುರೇಶ್ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ್ ಆರೋಪಿಸಿದ್ದಾರೆ. ನಾವು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ರಾಜೀವ್‌ ಗಾಂಧಿ ವಿವಿ, ಸಂಸ್ಕೃತ ವಿವಿ, ಪಾಲಿಟೆಕ್ನಿಕ್‌ ಕಾಲೇಜು ಸೇರಿದಂತೆ ಹಲವು ಯೋಜನೆಗಳನ್ನು ಮಾಡಿದ್ದೇವೆ. ಇವರು ಮಾಡಿರುವ ಯಾವುದಾದರೂ ಒಂದು ಯೋಜನೆಯನ್ನು ಹೇಳಲಿ ಎಂದು ಸವಾಲು ಹಾಕಿದ್ದಾರೆ.

from India & World News in Kannada | VK Polls https://ift.tt/8S5TPnr

Government Employees Strike: ಹಳೆಯ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾರ್ಚ್‌ 1ರಿಂದ ಸರ್ಕಾರಿ ನೌಕರರ ಮುಷ್ಕರ

ರಾಜ್ಯದಲ್ಲಿ 7ನೇ ವೇತನ ಆಯೋಗ ಜಾರಿ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾರ್ಚ್‌ ಒಂದರಿಂದ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಮಾಡಲು ಮುಂದಾಗಿದ್ದಾರೆ. 2023-24ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ನೌಕರರ ಸಮಸ್ಯೆಗೆ ಸ್ಪಂದಿಸುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌ ಷಡಾಕ್ಷರಿ ನೇತೃತ್ವದಲ್ಲಿ ಮಂಗಳವಾರ ತುರ್ತು ಕಾರ್ಯಕಾರಿಣಿ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಈ ಎರಡು ಬೇಡಿಕೆ ಬಗ್ಗೆ ಸೂಕ್ತ ತೀಮಾರ್ನ ಕೈಗೊಳ್ಳುವವರೆಗೂ ಈ ಮುಷ್ಕರ ನಡೆಸುತ್ತೇವೆ ಎಂದು ಸಿ.ಎಸ್‌ ಷಡಕ್ಷರಿ ತಿಳಿಸಿದ್ದಾರೆ.

from India & World News in Kannada | VK Polls https://ift.tt/JOig6qE

Milk Conflict: ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಕ್ಷೇತ್ರದಲ್ಲಿ ತೀವ್ರಗೊಂಡ ಕ್ಷೀರ ಸಂಘರ್ಷ

ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಕ್ಷೇತ್ರದ ಚನ್ನ ಪಟ್ಟಣದಲ್ಲಿ ರಾಜಕೀಯ ಕೆಸರು ಹಾಲಿಗೂ ಬಿದ್ದಿದೆ. ಇದೇ ಫೆಬ್ರವರಿ 27 ರಂದು ಬಮೂಲ್‌ ಉತ್ಸವ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಮೂಲ್‌ ಹಾಲಿ ನಿರ್ದೇಶಕ ಎಚ್‌.ಸಿ ಜಯಮುತ್ತು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಹೀಗಾಗಿ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ತಿಕ್ಕಾಟ ಶುರುವಾಗಿದೆ. ಬಮೂಲ್‌ ಹೆಸರಲ್ಲಿ ಜೆಡಿಎಸ್‌ ಪಕ್ಷ ಪ್ರಮೋಟ್‌ ಮಾಡಬೇಡಿ ಎಂದು ಬಮೂಲ್‌ನ ನಾಮಿನಿ ನಿರ್ದೇಶಕ ಎಸ್‌. ಲಿಂಗೇಶ್‌ ಕುಮಾರ್‌ ಪಟ್ಟು ಹಿಡಿದಿದ್ದಾರೆ.

from India & World News in Kannada | VK Polls https://ift.tt/QaEjzkG

Venkatesh Prasad : ಅನಗತ್ಯ ವಿವಾದ ಸೃಷ್ಟಿಸಿದ ಆಕಾಶ್‌ ಚೋಪ್ರಾಗೆ ಬಿಸಿ ಮುಟ್ಟಿಸಿದ ವೆಂಕಟೇಶ್‌ ಪ್ರಸಾದ್‌!

KL Rahul Selection Row: ಟೀಮ್ ಇಂಡಿಯಾ ಸ್ಟಾರ್‌ ಬ್ಯಾಟರ್‌ ಕೆ.ಎಲ್‌ ರಾಹುಲ್‌ ಕಳಪೆ ಲಯದಲ್ಲಿದ್ದರೂ ಅವರಿಗೆ ಅವಕಾಶಗಳ ಮೇಲೆ ಅವಕಾಶ ಕೊಡುತ್ತಿರುವ ಬಗ್ಗೆ ಭಾರತದ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌ ಅಸಮಾಧಾನ ಹೊರಹಾಕಿ ಸಾಲು ಸಾಲು ಟೀಕೆ ಮಾಡಿದ್ದರು. ಇದು ವೈಯಕ್ತಿಕ ಲಾಭಕ್ಕಾಗಿ ಎಂದು ಹೇಳಿ ಅನಗತ್ಯ ವಿವಾದ ಸೃಷ್ಟಿಸಿದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಅವರಿಗೆ ಇದೀಗ ವೆಂಕಟೇಶ್‌ ಪ್ರಸಾದ್‌ ತಮ್ಮದೇ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ. ಆಕಾಶ್‌ ಚೋಪ್ರಾ ಅವರ ಹಳೇ ಟ್ವೀಟ್‌ ಒಂದನ್ನು ಹೊರತೆಗೆದು ನಿಮ್ಮದೆಂತಾ ನ್ಯಾಯ? ಎಂಬಂತೆ ಚಾಟಿ ಬೀಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/L6av01X

ಸೆಕ್ಸ್‌ಗೆ ಆಹ್ವಾನಿಸಿದ ಪೊಲೀಸ್‌ ಅಧಿಕಾರಿ!: ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡ ಲಿಂಗತ್ವ ಅಲ್ಪಸಂಖ್ಯಾತೆ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ತನ್ನನ್ನು ಸೆಕ್ಸ್ ಗೆ ಆಹ್ವಾನಿಸಿದರು. ನಾವು ಯಾರಿಗೆ ದೂರು ನೀಡಬೇಕು ಹೇಳಿ ಎಂದು ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ನ್ಯಾಯಾಧೀಶರ ಸಮ್ಮುಖದಲ್ಲಿ ಅಳಲು ತೋಡಿಕೊಂಡ ಘಟನೆ ಮಂಗಳೂರಿನಲ್ಲಿ ಮಂಗಳವಾರ ನಡೆದಿದೆ. ನಮಗೂ ಈ ಹಾಳು ದಂಧೆ ನಡೆಸಲು ಮನಸ್ಸಿಲ್ಲ. ಎಲ್ಲಾದರೂ ಒಂದು ಕೆಲಸ ಕೊಡಿ. ಯಾವುದಾದರೂ ಸರಿ. ಒಳ್ಳೆಯ ಜೀವನ ನಡೆಸುತ್ತೇವೆ. ನಮ್ಮ ಪಾಡಿಗೆ ನಾವಿರುತ್ತೇವೆ ಎಂದಿದ್ದಾರೆ.

from India & World News in Kannada | VK Polls https://ift.tt/SFoCubD

ಹಿರಿಯ ಸಾಹಿತಿ, ವಿಮರ್ಶಕ ಅಂಬಾತನಯ ಮುದ್ರಾಡಿ ನಿಧನ

ನಾಡು ಕಂಡ ಶ್ರೇಷ್ಠ ಸಾಹಿತಿ, ಹರಿದಾಸ, ಯಕ್ಷಗಾನ ಕಲಾವಿದ, ನಿವೃತ್ತ ಶಿಕ್ಷಕ ಅಂಬಾತನಯ ಮುದ್ರಾಡಿ ಅವರು ಮಂಗಳವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅಧ್ಯಾಪನದ ಜೊತೆಜೊತೆಯಲ್ಲೇ ಅವರು ಶಿಶುಗೀತೆ, ಕವನ ಸಂಕಲನ, ಏಕಾಂಕ ನಾಟಕ, ಯಕ್ಷಗಾನ, ಭಕ್ತಿಗೀತೆ, ಅಂಕಣ ಬರಹಗಳ ಮೂಲಕ ಅವರು ಪ್ರಸಿದ್ಧಿಗೆ ಬಂದರು. ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ, ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿದ್ದವು.

from India & World News in Kannada | VK Polls https://ift.tt/HXGvAzR

Hallikar Cow Gift: ಬಿ.ವೈ.ವಿಜಯೇಂದ್ರ ಮುಂದೆ ಮುಖ್ಯಮಂತ್ರಿ ಆಗಬೇಕೆಂದು ಹಳ್ಳಿಕಾರ್‌ ತಳಿ ಹೋರಿ ಗಿಫ್ಟ್‌ ಕೊಟ್ಟ ರೈತ!

ಈ ಬಾರಿ 2023ರ ಚುನಾವಣೆ ಗೆದ್ದು BJP ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೇರುವ ಕನಸು ಕಾಣ್ತಿದೆ. ಇದಕ್ಕಾಗಿ ಕೇಂದ್ರದ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಹಲವು ರಣತಂತ್ರಗಳನ್ನು ಎಣೆಯತ್ತಿದ್ದಾರೆ. ಅದರಲ್ಲೂ ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಇದೀಗ ಹಳೇ ಮೈಸೂರು ಭಾಗದ ಜವಬ್ದಾರಿಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ವಹಿಸಲು ನಿರ್ಧರಿಸಲಿದ್ದಾರೆ. ಈ ನಿಟ್ಟಿನಲ್ಲಿಂದು ಮಂಡ್ಯ ಜಿಲ್ಲೆಯಲ್ಲಿ ಬಿ.ವೈ ವಿಜಯೇಂದ್ರ ಎರಡು ದಿನ ಪ್ರವಾಸ ಕೈಗೊಂಡಿದ್ದು ಮೊದಲನೆ ದಿನದಂದು ಮಂಡ್ಯದ ಮಾಚಹಳ್ಳಿಗೆ ಭೇಟಿ ನೀಡಿ ವೀರಶೈವ ಸಮಾಜದ ಸಮಾವೇಶ ನಡೆಸಿದ್ದಾರೆ. ಈ ಮೂಲಕ ವೀರಶೈವ ಮತಬೇಟೆ ಆರಂಭಿಸಿದ್ದಾರೆ. ಸಮಾವೇಶಕ್ಕೆ ಬಂದ ಯುವ ನಾಯಕ ವಿಜಯೇಂದ್ರಗೆ ಮಂಡ್ಯ ಜಿಲ್ಲೆಯಲ್ಲಿ ಮೊದಲ ದಿನವೇ ಅದ್ದೂರಿ ಸ್ವಾಗತ ಸಿಕ್ಕಿದೆ.

from India & World News in Kannada | VK Polls https://ift.tt/R15vb72

25 ಸಾವಿರ್‌ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳು!

25 ಸಾವಿರ್‌ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳು!

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Ey0rVXC

Kumta constituency: ಕೈ, ಕಮಲ, ದಳದ ಜಿದ್ದಾಜಿದ್ದಿನ ಕಣವಾದ ಕುಮಟಾ ಕ್ಷೇತ್ರ: ಜೆಡಿಎಸ್‌ಗೆ ಟಾನಿಕ್‌ ನೀಡಿದ ಕುಮಾರಸ್ವಾಮಿ ಪಂಚರತ್ನ ಯಾತ್ರೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರು ಪಕ್ಷಗಳ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಕುಮಟಾ ಕ್ಷೇತ್ರದಲ್ಲಿ ಈಗಲೂ ಹಾಲಿ ಶಾಸಕ ದಿನಕರ ಶೆಟ್ಟಿ ಅವರ ಮನೆತನದವರೇ ಕ್ಷೇತ್ರದಲ್ಲಿ ಪ್ರಭಾವ ಉಳಿಸಿಕೊಂಡಿದ್ದಾರೆ. ಆದರೆ ದಿನಕರ್‌ ಶೆಟ್ಟಿ ಇದೇ ನನ್ನ ಕೊನೆ ಚುನಾವಣೆ ಅನ್ನುತ್ತಿದ್ದು, ಹಾಲಿ ಶಾಸಕರಿಗೆ ಟಿಕೆಟ್‌ ಆಕಾಂಕ್ಷಿಗಳ ಕಾಟ ಜೋರಾಗಿದೆ. ಅತ್ತ ಮತೊಂದೆಡೆ ಎಚ್‌ ಡಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಜೆಡಿಎಸ್‌ಗೆ ಹೊಸ ಹುರುಪು ನೀಡಿದೆ.

from India & World News in Kannada | VK Polls https://ift.tt/9Lr3hQ7

ದಕ್ಷಿಣ ಕನ್ನಡ ಜಿಲ್ಲೆಗಿಲ್ಲ ಆನೆ ಕಾರ್ಯಪಡೆ : ಸರಕಾರಕ್ಕೆ ಇದುವರೆಗೂ ಹೋಗಿಲ್ಲ ಪ್ರಸ್ತಾವನೆ

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಜನರು ಜೀವಭಯದಲ್ಲೇ ದಿನದೂಡುವಂತಾಗಿದೆ. ಆನೆಗಳ ಹಾವಳಿ ವಿಪರೀತ ಇರುವ ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆ ರಚಿಸಿ ರಾಜ್ಯ ಸರ್ಕಾರ ಆದೇಶವೇನೋ ಹೊರಡಿಸಿದೆ. ಆದರೆ ಶುಕ್ರವಾರ ಮಂಡಿಸಿರೋ ಬಜೆಟ್‌ನಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ದಕ್ಷಿೞಣ ಕನ್ನಡ ಜಿಲ್ಲೆಯನ್ನು ಮರೆತೇ ಬಿಟ್ಟಿದ್ದಾರೆ. ಚಾಮರಾಜನಗರ, ಮಂಡ್ಯ ಜಿಲ್ಲೆಯನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿದ್ದರು ಆದರೆ ದಕ್ಷಿಣ ಕನ್ನಡ ಜಿಲ್ಲೆ ಮರೆತೇ ಬಿಟ್ಟಿದ್ದಾರೆ. ವಿಪರ್ಯಾಸ ಅಂದರೆ ಆನೆ ಕಾರ್ಯಪಡೆ ರಚಿಸುವ ಬಗ್ಗೆ ಸರಕಾರಕ್ಕೆ ಇದುವರೆಗೂ ಪ್ರಸ್ತಾವನೆಯೇ ಹೋಗದಿರೋದು.

from India & World News in Kannada | VK Polls https://ift.tt/Ctk59V4

Aayushman Card :ಮೂರು ತಿಂಗಳಲ್ಲಿ4 ಕೋಟಿ ಜನರಿಗೆ ಆಯುಷ್ಮಾನ್‌ ಕಾರ್ಡ್‌ ವಿತರಣೆ ಗುರಿ- ಸಚಿವ ಡಾ.ಕೆ.ಸುಧಾಕರ್‌

ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್‌ ಕಾರ್ಡ್‌ ಅನ್ನ ಬಡ ಮತ್ತು ಮಧ್ಯಮ ವರ್ಗದವರಿಗೆ ಆರೋಗ್ಯ ಖಾತ್ರಿ ಮಾಡಲು ತಂದಿದ್ದೇವೆ. ಸದ್ಯ ರಾಜ್ಯದಲ್ಲಿ ಒಂದುವರೆ ಕೋಟಿ ಜನರಿಗೆ ಮಾತ್ರ ಈ ಕಾರ್ಡ್‌ ಹಂಚಿಕೆಯಾಗಿದೆ. ಇನ್ನೂಳಿದ ನಾಲ್ಕು ಕೋಟಿ ಜನರಿಗೆ ಈ ಯೋಜನೆ ನೀಡಲಾಗುತ್ತದೆ ಎಂದು ಇದು ಮುಂದಿನ ಮೂರು ತಿಂಗಳೊಳಗಾಗಿ ಆಗುತ್ತದೆ ಎಂದು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯ ಯು.ಬಿ ವೆಂಕಟೇಶ್‌ಗೆ ಉತ್ತರಿಸಿದರು.

from India & World News in Kannada | VK Polls https://ift.tt/kBGDVqe

Farmer Protest: ಕಬ್ಬು- ಹಾಲಿನ ದರ ನಿಗದಿಗೆ ಒತ್ತಾಯಿಸಿ ರೈತರ ಉಪವಾಸ ಸತ್ಯಾಗ್ರಹ, ಪ್ರತಿಭಟನಾಕಾರರನ್ನು ಮನವೊಲಿಸಿದ ಜಿಲ್ಲಾಧಿಕಾರಿ

ಮಂಡ್ಯದಲ್ಲಿ ರೈತ ಸಂಘದ ವತಿಯಿಂದ ಕಬ್ಬಿನ ಬೆಳೆ ಮತ್ತು ಹಾಲಿನ ದರ ನಿಗದಿ ಕುರಿತು ಅನಿರ್ಧಿಷ್ಟಾವಧಿ ಮುಷ್ಕರ ನಡೆಯುತ್ತಿದೆ. ಪ್ರತಿಭಟನೆ ಆರಂಭವಾಗಿ ನೂರು ದಿನಗಳುಕಳೆದ ಹಿನ್ನೆಲೆ ಫೆಬ್ರವರಿ 15ರಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ರೈತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಶನಿವಾರ ಇಬ್ಬರು ರೈತರು ಆಸ್ಪತ್ರೆ ಸೇರಿದ್ದರು, ನಂತರ ಗುಣಮುಖರಾಗಿ ವಾಪಸ್‌ ಆಗಿ ಮತ್ತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮತ್ತೆ ಆರು ಜನರ ಆರೋಗ್ಯದಲ್ಲಿ ಏರುಪೇರಾದ ನಂತರ ಜಿಲ್ಲಾಸ್ಪತ್ರೆಗೆ ಸೇರಿಸಲಾಗದೆ. ಈ ಬಗ್ಗೆ ಎಚ್ಚೆತ್ತ ಜಿಲ್ಲಾದಿಕಾರಿಗಳು ಪ್ರತಿಭಟನೆ ನಿರತ ರೈತರನ್ನ ಭೇಟಿ ಮಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

from India & World News in Kannada | VK Polls https://ift.tt/96VjLEb

Smriti Mandhana: ಮಹಿಳಾ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಟೀಮ್ ಇಂಡಿಯಾ ಲಗ್ಗೆ!

India vs Ireland Highlights: ಅನುಭವಿ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ ಬಾರಿಸಿದ ಅರ್ಧಶತಕದ ಬಲದಿಂದ ಮಿಂಚಿದ ಭಾರತ ಮಹಿಳಾ ಕ್ರಿಕೆಟ್‌ ತಂಡ ಐರ್ಲೆಮಡ್‌ ಎದುರು ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 5 ರನ್‌ಗಳ ಜಯ ದಕ್ಕಿಸಿಕೊಂಡಿತು. ಇದರೊಂದಿಗೆ 'ಬಿ' ಗುಂಪಿನಲ್ಲಿ 3ನೇ ಜಯ ದಕ್ಕಿಸಿಕೊಂಡ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಭಾರತ ತಂಡ ಸೆಮಿಫೈನಲ್ಸ್‌ ಸ್ಥಾನವನ್ನು ಖಾತ್ರಿಪಡಿಸಿಕೊಂಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ ಭಾರತ ತಂಡ ಉತ್ತಮ ಸ್ಕೋರ್‌ ಮಾಡಿತ್ತು. ಆದರೆ, ಮಳೆ ಅಡಚಣೆ ಎದುರಾಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/zQmSUvn

BGT 2023: ವೈಫಲ್ಯದ ಹೊರತಾಗಿಯೂ ಕೆ.ಎಲ್‌ ರಾಹುಲ್‌ಗೆ ಚಾನ್ಸ್‌ ಕೊಡಲು ಕಾರಣ ತಿಳಿಸಿದ ರೋಹಿತ್‌ ಶರ್ಮಾ!

Rohit sharma on Kl Rahul's Batting: ಆಸ್ಟ್ರೇಲಿಯಾ ವಿರುದ್ದ ಭಾನುವಾರ ಅಂತ್ಯವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಶರ್ಮಾ ಪಡೆ 2-0 ಮುನ್ನಡೆ ಪಡೆದಿದೆ. ಅಂದಹಾಗೆ ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕೆ.ಎಲ್‌ ರಾಹುಲ್‌ ಅವರನ್ನು ನಾಯಕ ರೋಹಿತ್‌ ಶರ್ಮಾ ಬೆಂಬಲಿಸಿದ್ದಾರೆ. ಪ್ರಸ್ತುತ ವೈಫಲ್ಯ ಅನುಭವಿಸಿದರೂ ಅವರಿಗಿರುವ ಬ್ಯಾಟಿಂಗ್‌ ಸಾಮರ್ಥ್ಯದ ಆಧಾರದ ಮೇಲೆ ಆಡಿಸಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/OEe5foH

ಮತ್ತೆ ಸಂಕಟದಲ್ಲಿ ಶರಾವತಿ ಸಂತ್ರಸ್ತರು: ಭೂ ಹಕ್ಕು ಭರವಸೆ ನೀಡಿ ನಿರ್ಧಾರ ಬದಲಾಯಿಸಿದ ಸರಕಾರ

ಶರಾವತಿ ಸಂತ್ರಸ್ತರು ಮತ್ತೆ ದಿಗಿಲುಗೊಂಡಿದ್ದಾರೆ. 2022ರ ಡಿಸೆಂಬರ್‌ ಅಂತ್ಯದೊಳಗೆ ಸಂತ್ರಸ್ತ ಕುಟುಂಬಗಳಿಗೆ ಭೂ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆ ಹುಸ್ತಿ ಆದದಂತೆ ಕಾಣುತ್ತಿದೆ. ರಾಜ್ಯ ಸರ್ಕಾರ ಏಕಾಏಕಿ ಡಿನೋಟಿಫಿಕೇಷನ್‌ ಆದೇಶ ರದ್ದುಗೊಳಿಸಿ, ಅಧಿಕೃತ ಗೆಜೆಟ್‌ ನೋಟಿಫಿಕೇಷನ್‌ ಪ್ರಕಟಿಸಿದೆ. ಶರಾವತಿ ಸಂತ್ರಸ್ತ ಕುಟುಂಬಗಳಿಗೆ ಭೂ ಹಕ್ಕು ನೀಡುವ ಸಂಬಂಧ ಪ್ರಕಟವಾಗಿದ್ದ 56 ಡಿನೋಟಿಫಿಕೇಷನ್‌ಗಳನ್ನು ರದ್ದುಗೊಳಿಸಿ 2023 ಫೆಬ್ರವರಿ 16ರಂದು ಕರ್ನಾಟಕ ರಾಜ್ಯಪತ್ರ ಪ್ರಕಟಿಸಿದೆ.

from India & World News in Kannada | VK Polls https://ift.tt/9fuJghy

KS Eshwarappa Vs Siddaramaiah- ಸಿದ್ದರಾಮಯ್ಯ ಮಿಮಿಕ್ರಿ ಕಲಾವಿದ; ಪ್ರಧಾನಿ ಮೋದಿ ಆನೆ ಇದ್ದ ಹಾಗೆ

ವಿಪಕ್ಷ ನಾಯಕ ಸಿದ್ದರಾಮಯ್ಟ ಮಿಮಿಕ್ರಿ ಕಲಾವಿದ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಟಕಿಯಾಡಿದ್ದಾರೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳನ್ನು ಟೀಕಿಸುವಾಗ ಮೋದಿ ಅವರಂತೆಯೇ ಮಿಮಿಕ್ರಿ ಮಾಡುತ್ತಾರೆ. ಈ ಸಲದ ಚುನಾವಣೆಯಲ್ಲಿ ಕೋಲಾರದಲ್ಲಿ ಅವರನ್ನು ಸ್ವಪಕ್ಷೀಯರೇ ಸೋಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅವರು ತಮ್ಮನ್ನು ತಾವು ಅಹಿಂದ ನಾಯಕರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಅಹಿಂದ ನಾಯಕರಾಗಿ ಯಾವುದೇ ಕೊಡುಗೆ ನೀಡಿಲ್ಲ. ಈ ಸಲ ದಲಿತ ಮತ್ತು ಹಿಂದುಳಿದ ವರ್ಗಗಳ ಮುಖಂಡರು ಸೇರಿ ಅವರನ್ನು ಸೋಲಿಸಲಿದ್ದಾರೆ. ತಮ್ಮ ಮೂಲಕ್ಷೇತ್ರವಾದ ಚಾಮುಂಡೇಶ್ವರಿ ಯನ್ನು ಬಿಟ್ಟು ಕ್ಷೇತ್ರಕ್ಕಾಗಿ ಅಲೆಯುವಂತಹ ಪರಿಸ್ಥಿತಿ ಅವರಿಗೆ ಬಂದೊದಗಿರುವುದು ದುರದೃಷ್ಟಕರ ಎಂದಿದ್ದಾರೆ.

from India & World News in Kannada | VK Polls https://ift.tt/2gRqlxE

ರೈತರ ಸಾಲ ಮನ್ನಾದ 2 ಸಾವಿರ ಕೋಟಿ ಡಿಸಿಸಿ ಬ್ಯಾಂಕಿಗೆ ಇನ್ನೂ ಬಂದಿಲ್ಲ: ಕೆ.ಎನ್.ರಾಜಣ್ಣ ಆರೋಪ

ರೈತರ ಸಾಲಮನ್ನಾದ ಹಣವಾದ ಸುಮಾರು 2000 ಕೋಟಿ ರೂಪಾಯಿ ಈವರೆಗೂ ಡಿಸಿಸಿ ಬ್ಯಾಂಕಿಗೆ ಬಂದಿಲ್ಲ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಆರೋಪಿಸಿದ್ದಾರೆ. ಕೊಡಿಗೇನಹಳ್ಳಿ ಹೋಬಳಿಯ ಯಾಕಾರ್ಲಹಳ್ಳಿಯಲ್ಲಿ ಗ್ರಾಮದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ಸಹ ಸಾಲಮನ್ನಾವಾದ 53 ಕೋಟಿ ರೂ. ಹಣ ಇನ್ನಷ್ಟೇ ಬರಬೇಕಿದೆ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಕಳೆದ ವರ್ಷ ನೆರೆಯಿಂದ ಹಾನಿಗೊಳಗಾದವರಿಗೂ ಸರಕಾರದಿಂದ ದೊರೆಯಬೇಕಾದ ಪರಿಹಾರ ದೊರೆತಿಲ್ಲ ಎಂದು ಅವರು ಹೇಳಿದ್ದಾರೆ.

from India & World News in Kannada | VK Polls https://ift.tt/b5c9TPs

IND vs AUS: 9 ವರ್ಷಗಳ ಬಳಿಕ ಭಾರತದ ಒಡಿಐ ತಂಡಕ್ಕೆ ಜಯದೇವ್‌ ಉನಾದ್ಕಟ್‌ ಕಮ್‌ಬ್ಯಾಕ್‌!

India vs Australia ODI Series 2023: ಇದೇ ವರ್ಷ ಭಾರತದ ಆತಿಥ್ಯದಲ್ಲಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆಯೋಜನೆ ಆಗಲಿದೆ. ಇದಕ್ಕೆ ಪೂರ್ವ ಸಿದ್ಧತೆಯ ಯೋಜನೆ ರೂಪಿಸಿಕೊಂಡಿರುವ ಟೀಮ್ ಇಂಡಿಯಾ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ ಬಳಿಕ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡಲಿದೆ. ಈ ಸರಣಿ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ರೋಹಿತ್‌ ಶರ್ಮಾ ಸಾರಥ್ಯದ ತಂಡ ಪ್ರಕಟ ಮಾಡಿದ್ದು, ಜಯದೇವ್‌ ಉನಾದ್ಕಟ್‌ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/HKZQTEh

DK Ravi wife reacts | ಡಿ.ಕೆ.ರವಿಯನ್ನು ರೋಹಿಣಿ ಯಾಕೆ ಬ್ಲಾಕ್‌ ಮಾಡಲಿಲ್ಲ?-ರೂಪಾ ಪ್ರಶ್ನೆ: ರವಿ ಪತ್ನಿ ಕುಸುಮಾ ಹೇಳಿದ್ದೇನು?

IPS D Roopa vs IAS Rohini Sindhuri: ಐಎಎಸ್‌, ಐಪಿಎಸ್‌ ಅಧಿಕಾರಿಗಳ ಜಗಳದಲ್ಲಿ ಡಿ.ಕೆ.ರವಿ (DK Ravi) ಸಾವಿನ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ರವಿ ಅವರ ಪತ್ನಿ ಕುಸುಮಾ (Kusuma) ಹನುಮಂತರಾಯಪ್ಪ ಅವರು ತನ್ನ ಗಂಡನಿಗೆ ಮಾನಸಿಕ ಅಸ್ವಸ್ಥತೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಬ್ಬರು ಅಧಿಕಾರಿಗಳ ಜಗಳದಲ್ಲಿ ಮೂಗು ತೂರಿಸುವುದಿಲ್ಲ, ಕರ್ಮ ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ. ಕಾನೂನು ಕ್ರಮಕೈಗೊಳ್ಳುವೆ ಎಂದು ರೋಹಿಣಿ ಸಿಂಧೂರಿ ಹೇಳಿದ್ದರೆ, ತಾರ್ಕಿಕ ಅಂತ್ಯ ಕಾಣಿಸುವೆ ಎಂದು ಡಿ.ರೂಪಾ ಹೇಳಿದ್ದಾರೆ.

from India & World News in Kannada | VK Polls https://ift.tt/mCzSAWX

Election Preparation: ಚುನಾವಣೆಗೆ ತಂತ್ರಜ್ಞಾನದ ಅಸ್ತ್ರ ಬಳಸ್ತಿರುವ 'ಕೈ' ಪಡೆ

Election Preparation: ಸಮಾವೇಶ, ರ್ಯಾಲಿಗಳ ಹೊರತಾಗಿ ಈ ಬಾರಿಯ ಚುನಾವಣೆಯ ಹೊಸ ಮಾದರಿಯ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಪಡೆ, ತಂತ್ರಜ್ಞಾನ ಬಳಸಿ, ಸಾಮಾಜಿಕ ತಾಲತಾಣಗಳ ಮೂಲಕ ಪೇಸಿಎಂ, ಕಿವಿಯಲ್ಲಿ ಹೂ ಸೇರಿದಂತೆ ಹಲವು ಹೊಸ ಮಾದರಿಯನ್ನು ಅನುಸರಿಸುತ್ತಿದೆ.

from India & World News in Kannada | VK Polls https://ift.tt/ZIwpq2e

ಕುಡುಪು ಗ್ರಾಮದಲ್ಲಿ ಟಿಡಿಆರ್‌ ಮೂಲಕ ಭೂಸ್ವಾಧೀನಕ್ಕೆ ಸಿದ್ಧತೆ: 10 ಎಕರೆಯಲ್ಲಿ ಕಟ್ಟಡ ಅವಶೇಷ

ಯಾವುದೇ ನಗರವಾದರೂ ಸರಿ ಸಮರ್ಪಕ ನಿರ್ವಹಣೆಗಾಗಿ ಸಂಸ್ಕರಣಾ ಘಟಕ ಸ್ಥಾಪನೆ ಬೇಕೇ ಬೇಕು. ನಗರ ಬೆಳೆದಂತೆ ಕಟ್ಟಡಗಳ ಅವಶೇಷವೂ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಟ್ಟಡಗಳ ಭಗ್ನಾವಶೇಷ ತ್ಯಾಜ್ಯ ಸಂಸ್ಕರಣೆಗೆ ಕುಡುಪು ಗ್ರಾಮದಲ್ಲಿ ಟಿಡಿಆರ್‌ ಮೂಲಕ ಭೂಸ್ವಾಧೀನಕ್ಕೆ ಸಿದ್ಧತೆ ನಡೆಸಲಾಗಿದೆ. ಘನತ್ಯಾಜ್ಯ ಸಂಸ್ಕರಣೆಗೆ ಜಾಗದ ಕೊರತೆ ಇರುವುದರಿಂದ ಪಚ್ಚನಾಡಿ ಪ್ರದೇಶದ ಘನತ್ಯಾಜ್ಯ ನಿರ್ವಹಣಾ ಘಟಕದ ಸುತ್ತಮುತ್ತಲಿನ ಖಾಲಿ ಜಮೀನು ಪಡೆಯುವ ಪ್ರಯತ್ನ ಭರದಿಂದ ಸಾಗುತ್ತಿದೆ. ಆದರೆ ಇದಕ್ಕೆ ಹಲವರಿಂದ ವಿರೋಧವೂ ವ್ಯಕ್ತವಾಗುತ್ತಿದೆ.

from India & World News in Kannada | VK Polls https://ift.tt/PKjRs9M

ನೇರ ನೇಮಕಕ್ಕೆ ಹಿಂದೇಟು: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಭರ್ತಿಗೆ ಸರಕಾರದ ತುರ್ತು ಆದೇಶ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಭರ್ತಿಗೆ ಸರಕಾರದ ತುರ್ತು ಆದೇಶ ಹೊರಡಿಸಿದೆ. ಆದರೆ 2023ರ ವಿಧಾನಸಭೆ ಚುನಾವಣೆ ಕಾರಣದಿಂದ ನೇಮಕ ಪ್ರಕ್ರಿಯೆ ವಿಳಂಬವಾಗುವ ಎಲ್ಲಾ ಸಾಧ್ಯತೆಗಳಿವೆ. ಡಿಸಿ ಅಧ್ಯಕ್ಷತೆಯ ನೇಮಕಾತಿ ಪ್ರಾಧಿಕಾರ 15 ದಿನದೊಳಗೆ ನೇಮಕಕ್ಕೆ ಅನುಮೋದನೆ ನೀಡಿ ಆದೇಶ ಹೊರಡಿಸಬೇಕಿದೆ. ನೇರ ಅರ್ಜಿ ಸ್ವೀಕರಿಸಿ ನೇಮಕ ಪ್ರಕ್ರಿಯೆ ಕೈಗೊಳ್ಳುವ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸರಕಾರದ ಆಧೀನ ಕಾರ‍್ಯದರ್ಶಿ 2023 ಫೆಬ್ರವರಿ 10ರಂದು ಆದೇಶ ಹೊರಡಿಸಿದ್ದಾರೆ.

from India & World News in Kannada | VK Polls https://ift.tt/v2GfP94

Bharat Gaurav Gashi Yatra: ಕರ್ನಾಟಕ – ಭಾರತ್‌ ಗೌರವ್‌ ಕಾಶಿ ಯಾತ್ರೆಯ ಮೂರನೇ ಟ್ರಿಪ್‌ಗೆ ಉತ್ತಮ ಸ್ಪಂದನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ ಕರ್ನಾಟಕ-ಭಾರತ್‌ ಗೌರವ್‌ ಕಾಶಿ ರೈಲು ಯಾತ್ರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈಗಾಗಲೇ ರಾಜ್ಯ ಸರ್ಕಾರ ಎರಡು ಟ್ರಿಪ್‌ಗಳನ್ನ ಯಶಸ್ವಿಯಾಗಿ ಮುಗಿಸಿದ್ದು, ಮೂರನೇ ಟ್ರಿಪ್‌ಗೆ ತಯಾರಿ ಆರಂಭಿಸಿದೆ. ಇದೇ ಫೆಬ್ರವರಿ 21ರಿಂದ ಮೂರನೇ ಟ್ರಿಪ್‌ ಪ್ರಾರಂಭವಾಗಲಿದ್ದು, ಈಗಾಗಲೇ ಬುಕ್ಕಿಂಗ್‌ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ 300ಕ್ಕೂ ಹೆಚ್ಚು ಟಿಕೆಟ್‌ಗಳು ಭರ್ತಿಯಾಗಿವೆ. ಈ ಬಾರಿಯೂ ಹಿರಿಯ ನಾಗರೀಕರಿಗೆ ಹೆಚ್ಚಿನ ಆದ್ಯತೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

from India & World News in Kannada | VK Polls https://ift.tt/1qYNGMf

ಟೆಸ್ಟ್‌ ಸಿಕ್ಸರ್‌ಗಳ ದಾಖಲೆ ಬರೆದ ಬೆನ್‌ ಸ್ಟೋಕ್ಸ್‌!

ಟೆಸ್ಟ್‌ ಸಿಕ್ಸರ್‌ಗಳ ದಾಖಲೆ ಬರೆದ ಬೆನ್‌ ಸ್ಟೋಕ್ಸ್‌!

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/6ga2YjP

Shivalinge Gowda : ಹಾಸನದಲ್ಲಿ ಜೆಡಿಎಸ್‌ಗೆ ಡಬಲ್ ಶಾಕ್: ಶಿವಲಿಂಗೇಗೌಡರ ಜೊತೆಗೆ ಎ.ಟಿ ರಾಮಸ್ವಾಮಿಯೂ ಪಕ್ಷಕ್ಕೆ ಗುಡ್‌ಬೈ!

Shivalinge Gowda and A T Ramaswamy Will Say Goodbye To JDS ಹಾಸನದಲ್ಲಿ ಜೆಡಿಎಸ್‌ಗೆ ಡಬಲ್ ಶಾಕ್ ಕಾದಿದೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಜೊತೆಗೆ ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿಯೂ ಪಕ್ಷಕ್ಕೆ ಗುಡ್‌ಬೈ ಹೇಳುವ ಸಾಧ್ಯತೆ ದಟ್ಟವಾಗಿದೆ. ಆದರೆ ಅವರು ಮುಂದೆ ಯಾವ ಪಕ್ಷವನ್ನು ಆಯ್ಕೆ ಮಾಡುತ್ತಾರೆ ಎಂಬುವುದು ಸದ್ಯದ ಕುತೂಹಲ.

from India & World News in Kannada | VK Polls https://ift.tt/fwp3P25

ಆಳಂದದ ದರ್ಗಾದಲ್ಲಿರುವ ಈ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹೈಕೋರ್ಟ್ ಸಮ್ಮತಿ; ಬಿಗಿಭದ್ರತೆಗೆ 1,000 ಪೊಲೀಸರು!

ಕಲಬುರಗಿ ಜಿಲ್ಲೆಯ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇತ್ತೀಚೆಗೆ, ದರ್ಗಾದಲ್ಲಿರುವ ಪೂಜೆಗೆ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸಲು ಅವಕಾಶ ಕೋರಿದ್ದ ಹಿಂದೂ ಸಂಘಟನೆಗಳ ಮನವಿಯ ವಿರುದ್ಧ ದರ್ಗಾದ ಆಡಳಿತ ಮಂಡಳಿ ವಕ್ಳ್ಪ್ ನ್ಯಾಯಾಧೀಕರಣ ಮನವಿ ಸಲ್ಲಿಸಿತ್ತು. ವಕ್ಫ್ ನ್ಯಾಯಾಧೀಕರಣವು, ಶಿವರಾತ್ರಿ ಪೂಜೆಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ, ಕರ್ನಾಟಕ ಹೈಕೋರ್ಟ್ ನಲ್ಲಿ ದರ್ಗಾ ಆಡಳಿತ ಮಂಡಳಿ ಮೇಲ್ಮನವಿ ಸಲ್ಲಿಸಿತ್ತು.

from India & World News in Kannada | VK Polls https://ift.tt/xjw826F

IPL 2023: ಆರ್‌ಸಿಬಿ ಸಂಪೂರ್ಣ ವೇಳಾಪಟ್ಟಿ!

IPL 2023: ಆರ್‌ಸಿಬಿ ಸಂಪೂರ್ಣ ವೇಳಾಪಟ್ಟಿ!

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lyFGZzq

15 ವರ್ಷವಾದ್ರೂ ನನಸಾಗದ ಕಾಸರಗೋಡು ಮೀನುಗಾರಿಕೆ ಬಂದರು ಕಾಮಗಾರಿ: ಅರ್ಧಕ್ಕೆ ಸ್ಥಗಿತ

ಬರೋಬರಿ 15 ವರ್ಷಗಳು ಕಳೆದರೂ ಕಾಸರಗೋಡು- ಕಸಬ ಮೀನುಗಾರಿಕಾ ಬಂದರು ಕಾಮಗಾರಿಗೆ ಗ್ರಹಣ ಬಡಿದಿದೆ. ಕಾಮಗಾರಿ ಪೂರ್ಣಗೊಳ್ಳಬೇಕಾದರೆ, ಇನ್ನೂ 71 ಕೋಟಿ ರೂಪಾಯಿ ಹಣ ಮಂಜೂರು ಆಗಬೇಕಿದೆ. ಆದರೆ ರಾಜ್ಯದ 21 ಕೋಟಿ ರೂ. ಅನುದಾನ ಮಂಜೂರುಗೊಳಿಸುವ ವಿಷಯದಲ್ಲಿ ಸ್ಪಷ್ಟತೆ ಇಲ್ಲದಂತಾಗಿದೆ. ಕಾಸರಗೋಡು- ಕಸಬ ಮೀನುಗಾರಿಕಾ ಬಂದರು ಕಾಮಗಾರಿ ನಿರ್ಮಾಣ ಪೂರ್ಣವಾಗದಿರುವುದರಿಂದ ಬೋಟ್‌ಗಳು ತಳಂಗರೆ ಜೆಟ್ಟಿಯನ್ನು ಆಶ್ರಯಿಸುತ್ತಿವೆ. 2010ರಲ್ಲಿ ಕಾಮಗಾರಿಗೆ ಶಿಲಾನ್ಯಾಸ ನೇರವೇರಿಸಲಾಗಿತ್ತು. ಆ ಬಳಿಕ ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲ.

from India & World News in Kannada | VK Polls https://ift.tt/y4WKhL1

ಮೆಸ್ಕಾಂ ದರ ಏರಿಕೆ ಪ್ರಸ್ತಾಪಕ್ಕೆ ಗ್ರಾಹಕರ ತೀವ್ರ ಆಕ್ಷೇಪ: ಯುನಿಟ್‌ಗೆ 1.38 ರೂ. ಏರಿಸಲು ಕೆಇಆರ್‌ಸಿ ಸಭೆಯಲ್ಲಿ ಮೆಸ್ಕಾಂ ಮನವಿ

ಬಿಸಿಲ ಧಗೆ ಮಧ್ಯೆ ಮೆಸ್ಕಾಂ ವಿದ್ಯುತ್‌ ದರವನ್ನು ಯುನಿಟ್‌ಗೆ 1.38 ಏರಿಕೆ ಮಾಡಬೇಕೆಂಬ ಪ್ರಸ್ತಾಪ ಮಂಗಳೂರಿಗರ ಸಿಟ್ಟಿಗೆ ಕಾರಣವಾಗಿದೆ. ಅಧಿಕಾರಿಗಳನ್ನು ಹೆಚ್ಚು ನೇಮಕ ಮಾಡುವ ಬದಲು ಲೈನ್‌ಮ್ಯಾನ್‌ಗಳನ್ನು ಹೆಚ್ಚಿಸಿ ಅನ್ನೋ ಮಾತುಗಳು ಸಭೆಯಲ್ಲಿ ಕೇಳಿ ಬಂತು. ಮತ್ತೊಂದೆಡೆ ಗ್ರಾಮಾಂತರ ಭಾಗಗಳಲ್ಲಿ ವೋಲ್ಟೇಜ್ ಸಮಸ್ಯೆ ಜಾಸ್ತಿಯಾಗುತ್ತಿದೆ. ಹಳೆಯ ಹಾಗೂ ತುಂಡಾದ ತಂತಿಯ ಸಮಸ್ಯೆ ಇದ್ದು, ಇದರಿಂದ ಮೆಸ್ಕಾಂಗೆ ದೊಡ್ಡ ನಷ್ಟ. ಪಂಪ್‌ ಜೋಡಣೆಯೂ ಅಧಿಕವಾಗಿದ್ದು, ಇದಕ್ಕೆ ನಿಯಂತ್ರಣ ಹಾಕಬೇಕೆಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸಾರ್ವಜನಿಕ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಯಿತು.

from India & World News in Kannada | VK Polls https://ift.tt/BQxchZT

HD Kumaraswamy On CP Yogeshwar- 20 ವರ್ಷ ಎಂಎಲ್ಎ ಆಗಿದ್ದವರು ಸೀರೆ ಹಂಚಿಕೊಂಡು ರಾಜಕಾರಣ ಮಾಡಬೇಕಾ? ಸೀರೆ ಹಂಚೋದು ಸ್ವಾಭಿಮಾನಾನಾ?

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಬದ್ಧ ಪ್ರತಿಸ್ಪರ್ಧಿ ಸಿ ಪಿ ಯೋಗೇಶ್ವರ್ ವಿರುದ್ಧ ಹರಿಹಾಯ್ದಿದ್ದಾರೆ. ಯೋಗೇಶ್ವರ್ ಕ್ಷೇತ್ರದಲ್ಲಿ ಮನೆ ಮನೆ ಭೇಟಿ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಟೀಕಿಸಿರುವ ಅವರು, ಅವರೇನು ಸೀರೆ ಹಂಚಿ ಜನರ ಸ್ವಾಭಿಮಾನ ಉಳಿಸಲು ಹೊರಟಿದ್ದಾರಾ? ಅವರು ಅಭಿವೃದ್ಧಿ ಮಾಡಿದ್ದರೆ ಯಾಕೆ ಸೀರೆ ಹಂಚಬೇಕಿತ್ತು ಎಂದು ಪ್ರಶ್ವಿಸಿದ್ದಾರೆ.

from India & World News in Kannada | VK Polls https://ift.tt/XVcPxZn

ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಕೈ, ಕಮಲ ರಣೋತ್ಸಾಹ: ಇನ್ನೂ ಆ್ಯಕ್ಟೀವ್‌ ಆಗದ ಜೆಡಿಎಸ್‌

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರಿದೆ. ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್‌ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ಸತೀಸ್ ಸೈಲ್‌ ಅಖಾಡಕ್ಕಿಳೀಯೋದು ಪಕ್ಕಾ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‌ ಪಾಳಯದಲ್ಲಿ ಚುನಾವಣಾ ಕಾರ್ಯತಂತ್ರ ಇನ್ನೂ ಪರಿಪೂರ್ಣವಾಗಿ ಜಾರಿ ಆಗಿಲ್ಲ. ಇದೆಲ್ಲರ ನಡುವೆ ಕಾರವಾರ, ಅಂಕೋಲಾ ನಗರ, ಪಟ್ಟಣದಲ್ಲಿ ರಸ್ತೆಗಳೆಲ್ಲಾ ಚೆನ್ನಾಗಿದ್ರೂ ಮತ್ತೆ ಎಲ್ಲೆಡೆ ರಸ್ತೆ ಡಾಂಬರೀಕರಣ ಕೆಲಸ ನಡೀತಿದೆ. ಚುನಾವಣೆ ಹೊಸ್ತಿಲಲ್ಲಿ ರಸ್ತೆ ಮಾಡಲು ಹೊರಟಿದ್ದು, ಪರ ವಿರೋಧದ ಮಾತುಗಳು ಕೇಳಿ ಬರುತ್ತಿದೆ.

from India & World News in Kannada | VK Polls https://ift.tt/6Jw0yj8

ಸೂಳೆಕೆರೆ ಭೂಮಿ ಕಬಳಿಸಲು ಗುಡ್ಡಕ್ಕೆ ಬೆಂಕಿ ಹಾಕಿದ ದುಷ್ಕರ್ಮಿಗಳು; ಅನೇಕ ವೃಕ್ಷ, ಪ್ರಾಣಿ-ಪಕ್ಷಿಗಳ ನಾಶವಾಗಿರುವ ಭೀತಿ

ಚನ್ನಗಿರಿ ತಾಲೂಕಿನ ಪ್ರಮುಖ ಪ್ರವಾಸಿ ತಾಣವಾದ ಸೂಳೆಕೆರೆ ಗುಡ್ಡದಲ್ಲಿ ಈವರೆಗೆ ಹಲವಾರು ಕಿಡಿಗೇಡಿಗಳು ವನ್ಯಜೀವಿಗಳ ಬೇಟೆಯಾಡುತ್ತಿದ್ದರು. ಈಗ, ಈ ಭೂಮಿಯನ್ನು ಕಬಳಿಸಲು ಬೆಂಕಿ ಹಾಕಲಾಗಿದೆ. ಈ ಬೆಂಕಿಗೆ ಗುಡ್ಡದಲ್ಲಿದ್ದ ಅನೇಕ ವೃಕ್ಷಗಳು, ಪ್ರಾಣಿ-ಪಕ್ಷಿಗಳು ನಾಶವಾಗಿರುವ ಸಾಧ್ಯತೆಯಿದೆ. ಕೆಲವರು ಹುಲುಸಾಗಿ ಹುಲ್ಲು ಬೆಳೆಯಲಿ ಎಂದು ಗುಡ್ಡಕ್ಕೆ ಬೆಂಕಿ ಹಾಕುತ್ತಾರೆ ಎಂಬ ಮಾತುಗಳೂ ಕೇಳಿಬಂದಿವೆ. ಇದರ ಸಾಧ್ಯತೆ ತೀರಾ ಕಡಿಮೆ. ಒಟ್ಟಿನಲ್ಲಿ ನೂರಾರು ಎಕರೆಯಷ್ಟು ಹುಲ್ಲುಗಾವಲು, ಸಣ್ಣ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ.

from India & World News in Kannada | VK Polls https://ift.tt/usOPazX

IND vs AUS 2nd Test Day 1 Live score: ಟಾಸ್‌ ಗೆದ್ದ ಆಸ್ಟ್ರೇಲಿಯಾ ಮೊದಲ ಬ್ಯಾಟಿಂಗ್!

IND vs AUS 2nd Test Live: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ನಾಲ್ಕು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸುತ್ತಿವೆ. ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್‌ ಹಾಗೂ 132 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಪಡೆದಿತ್ತು. ಇದೀಗ ಉಭಯ ತಂಡಗಳು ದಿಲ್ಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಕಾದಾಟ ನಡೆಸುತ್ತಿವೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಸಲುವಾಗಿ ಈ ಪಂದ್ಯ ಭಾರತದ ಪಾಲಿಗೆ ಅತ್ಯಂತ ಮಹತ್ತರವಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3uePrO6

ಉದ್ಘಾಟನೆಗೆ ಶಿವಮೊಗ್ಗ ವಿಮಾನ ನಿಲ್ದಾಣ ಸಜ್ಜು: ಫೆ.27ಕ್ಕೆ ವಿಶೇಷ ವಿಮಾನದಲ್ಲಿ ಪ್ರಧಾನಿ ಮೋದಿ: ಹಲವು ಯೋಜನೆಗಳ ಉದ್ಘಾಟನೆ

ಫೆಬ್ರವರಿ 27ಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾಣ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಶಿವಮೊಗ್ಗ- ರಾಣೆಬೆನ್ನೂರು ನೂತನ ರೈಲು ಮಾರ್ಗ ನಿರ್ಮಾಣಕ್ಕೂ ಪ್ರಧಾನಿ ಮೋದಿ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ. ರೈಲ್ವೇ ಯೋಜನೆಗಳ ಜೊತೆಗೆ ಇನ್ನೂ ಹಲವರು ಯೋಜನೆಗಳಾದ ಶಿವಮೊಗ್ಗ ಹಾಲು ಒಕ್ಕೂಟ, ಶಿವಮೊಗ್ಗ ಸ್ಮಾರ್ಟ್‌ಸಿಟಿ, ಜಲಜೀವನ್‌ ಮಿಷನ್‌, ಮಾಮ್‌ಕೋಸ್‌ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ.

from India & World News in Kannada | VK Polls https://ift.tt/FSukyCv

ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದತ್ತ ಪಾದಯಾತ್ರಿಗಳ ದಂಡು: ಸ್ಥಳೀಯರು, ಸಂಘ ಸಂಸ್ಥೆಗಳು, ಅರಣ್ಯ ಇಲಾಖೆ ಸಾಥ್‌

ಶನಿವಾರ ಮಹಾಶಿವರಾತ್ರಿ ನಡೆಯಲಿದ್ದು, ಭಕ್ತರು ಪಾದಯಾತ್ರೆ ಮೂಲಕ ದೇಗುಲಗಳತ್ತ ತೆರಳುತ್ತಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದತ್ತ ಭಕ್ತರ ದಂಡೇ ಬರುತ್ತಿದೆ. ಬೆಂಗಳೂರು, ತುಮಕೂರು, ಹಾಸನ, ರಾಮನಗರ ಸೇರಿದಂತೆ ನಾನಾ ಜಿಲ್ಲೆಗಳಿಂದ ನೂರಾರು ತಂಡಗಳಲ್ಲಿ ಪಾದಯಾತ್ರಿಗಳು ಚಾರ್ಮಾಡಿ ಘಾಟಿ ಮೂಲಕ ಆಗಮಿಸಿ ಧರ್ಮಸ್ಥಳದತ್ತ ಸಾಗುತ್ತಿದ್ದಾರೆ. ಪಾದಯಾತ್ರಿಗಳ ಅನುಕೂಲಕ್ಕಾಗಿ ಸಂಘ ಸಂಸ್ಥೆ, ಸ್ಥಳೀಯ ಸಾರ್ವಜನಿಕರು ಅಲ್ಲಲ್ಲಿ ನೀರು ಪಾನಕ ವಿತರಿಸುತ್ತಿದ್ದಾರೆ. ಇನ್ನು 15 ಕಿ.ಮೀ. ವ್ಯಾಪ್ತಿಯ ಪಾದಯಾತ್ರಿಗಳ ಅನುಕೂಲಕ್ಕಾಗಿ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ 7 ಕಡೆ ಸ್ಟಾಲ್ ನಿರ್ಮಿಸಲಾಗಿದೆ.

from India & World News in Kannada | VK Polls https://ift.tt/cmnT5Ml

ಹಣ ದುಪ್ಪಟ್ಟು ಕೊಡುವುದಾಗಿ ನಂಬಿಸಿ 9.85 ಲಕ್ಷ ರೂ. ಗೆ ಚಳ್ಳೆಹಣ್ಣು ತಿನ್ನಿಸಿದ ವಂಚಕರು

ಹಣ ದುಪ್ಪಟ್ಟು ನೀಡುವುದಾಗಿ ಇಬ್ಬರು ವ್ಯಕ್ತಿಗಳು ಲಕ್ಷಾಂತರ ರೂಪಾಯಿ ಚಳ್ಳೇಹಣ್ಣು ತಿನ್ನಿಸಿರುವ ಪ್ರಸಂಗ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಫೋನ್ ಮೂಲಕ ಪರಿಚಯವಾದ ಜಾಫರ್ ಎಂಬಾತ ನಿತೀಶ್ ಪಂಡಿತ್ ಎಂಬಾತನಿಗೆ 500 ರೂ. ನೋಟುಗಳ 25 ಲಕ್ಷ ನೀಡಿದರೆ 100ರ ನೋಟುಗಳಿರುವ 50 ಲಕ್ಷ ನೀಡುವುದಾಗಿ ತಿಳಿಸಿದ್ದಾನೆ. ಆತನನ್ನು ನಂಬಿದ ಆದರೆ ನನ್ನ ಬಳಿ ಅಷ್ಟೊಂದು ಹಣ ಇಲ್ಲ. 10 ಲಕ್ಷ ಹೊಂದಿರಬಹುದು ಎಂದು ಹೇಳಿದ್ದಾನೆ. ಆತನ ಸೂಚನೆಯಂತೆ 10 ಲಕ್ಷ ಹಣವನ್ನು ನೀಡಿದಾಗ ಆತನ ತಂಡ ಆ ಹಣದೊಂದಿಗೆ ಪರಾರಿಯಾಗಿದೆ. ನಿತೇಶನಿಗೆ ಆತ ನೀಡಿದ ಪೆಟ್ಟಿಗೆಯಲ್ಲಿ ಕೇವಲ 14700 ರೂಪಾಯಿ ಇತ್ತು.

from India & World News in Kannada | VK Polls https://ift.tt/rOm75ip

HD Kumaraswamy- ಸಮಸ್ಯೆ ಸವಾಲು ಸೃಷ್ಟಿಸಿದ್ದೇ ಡಬಲ್‌ ಎಂಜಿನ್‌ ಸರಕಾರದ ಸಾಧನೆ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಡಬಲ್ ಎಂಜಿನ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ, ರೈತರಿಗೆ ಅನ್ಯಾಯ ಇವೇ ಡಬಲ್ ಎಂಜಿನ್ ಸರಕಾರದ ಸಾಧನೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು ಸರಕಾರದ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

from India & World News in Kannada | VK Polls https://ift.tt/vjAcPWX

ಉಕ್ರೈನ್- ರಷ್ಯಾ ಯುದ್ಧದ ವೇಳೆ ಮೃತಪಟ್ಟ ಚಳಗೇರಿಯ ವೈದ್ಯ ವಿದ್ಯಾರ್ಥಿ ನವೀನ್‌ಗೆ ನೆನಪಿಗೆ ಕಟ್ಟಿದ ಮನೆ ಗೃಹ ಪ್ರವೇಶ

ಉಕ್ರೈನ್- ರಷ್ಯಾ ಯುದ್ಧವೇನೋ ನಿಂತಿತು. ಅದರೆ ಅದು ಕೊಟ್ಟ ನೋವು ಮಾತ್ರ ಸದಾ ಚುಚ್ಚುತ್ತಲೇ ಇರುತ್ತದೆ. ಸರಿಯಾಗಿ ಒಂದು ವರ್ಷದ ಹಿಂದೆ ಬಂಕರ್ ನಲ್ಲಿ ಹಸಿವಿನಿಂದ ಕುಳಿತಿದ್ದ ತನ್ನ ಗೆಳೆಯರಿಗಾಗಿ ಆಹಾರ ತರಲೆಂದು ಹೊರಗೆ ಬಂದ ಹಾವೇರಿ ಮೂಲದ ವೈದ್ಯ ವಿದ್ಯಾರ್ಥಿ ನವೀನ್ ರಷ್ಯಾಪಡೆಗಳ ಬಾಂಬ್ ದಾಳಿಗೆ ಮೃತಪಟ್ಟಿದ್ದ. ವೈದ್ಯನಾಗಿ ನಾಡಿನ ಸೇವೆ ಮಾಡಲು ಬಯಸಿದ್ದ ಮಗನನ್ನು ಕಳೆದುಕೊಂಡ ದುಃಖದಲ್ಲಿ ಚಳಗೇರಿಯ ಶೇಖರಗೌಡ ಮತ್ತು ವಿಜಯಲಕ್ಷ್ಮೀ ಇಂದಿಗೂ ಕಣ್ಣೀರಾಗುತ್ತಾರೆ. ಆತನ ನೆನಪು ಶಾಶ್ವತವಾಗಿರಲೆಂದು ಕಟ್ಟಿದ ಮನೆಗೆ ಶುಕ್ರವಾರ ಗೃಹ ಪ್ರವೇಶ ನಡೆಯುತ್ತಿದೆ.

from India & World News in Kannada | VK Polls https://ift.tt/qacI0uL

ರೈತರ ಮಕ್ಕಳ ಶಿಕ್ಷಣಕ್ಕಿಲ್ಲಅನುದಾನ: ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ಶೈಕ್ಷಣಿಕ ವೆಚ್ಚದ ಪರಿಹಾರ ಯೋಜನೆಗೆ ನಿರ್ಲಕ್ಷ್ಯ

ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದ ರೈತರ ಮಕ್ಕಳ ಗೋಳು ಕೇಳೋರೇ ಇಲ್ಲದಂತಾಗಿದೆ. ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಗೆ ಅನುದಾನದ ಕೊರತೆ ಎದುರಾಗಿದೆ. ಅನುದಾನ ಬಿಡುಗಡೆಗೆ ಒತ್ತಾಯಿಸಿ ಕಚೇರಿ ಕಚೇರಿ ಅಲೆದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಮನೆಯ ಯಜಮಾನನಿಲ್ಲದೆ ಕುಟುಂಬ ನಿರ್ವಹಣೆಯೇ ಕಷ್ಟ. ಅದರ ಮಧ್ಯೆ ಮಕ್ಕಳ ಶಿಕ್ಷಣ ಹೇಗೇ ಅನ್ನೋದೇ ದೊಡ್ಡ ಸಮಸ್ಯೆಯಾಗಿದೆ. ಒಂದೆಡೆ ಪ್ರಚಾರದ ಕೊರತೆ ಮತ್ತು ಪ್ರತಿ ವರ್ಷ ದಾಖಲೆ ಸಲ್ಲಿಸಬೇಕಿರುವುದರಿಂದ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಫಲಾನುಭವಿಗಳನ್ನು ತಲುಪಿಲ್ಲ.

from India & World News in Kannada | VK Polls https://ift.tt/QZsUgTM

ಉಡುಪಿ ಸೇರಿದಂತೆ ರಾಜ್ಯದಲ್ಲಿ 4 ಮಾಹಿತಿ ಕೇಂದ್ರ ಸ್ಥಾಪನೆ: ವಿದೇಶಕ್ಕೆ ಉದ್ಯೋಗಕ್ಕೆ ತೆರಳುವವರಿಗೆ ಸಮಗ್ರ ನೆರವು

ವಿದೇಶಕ್ಕೆ ಉದ್ಯೋಗಕ್ಕೆ ತೆರಳುವವರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ 4 ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದೆ. ಸಮಗ್ರ ನೆರವು ನೀಡುವ ನಿಟ್ಟಿನಲ್ಲಿ ಉಡುಪಿ ಸೇರಿದಂತೆ ರಾಜ್ಯದಲ್ಲಿ 4 ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕಾರ್ಮಿಕ ಇಲಾಖೆ ಅಡಿಯಲ್ಲಿ 4 ಪ್ರಾಯೋಗಿಕ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿದೆ. ಈ ಮಾಹಿತಿ ಕೇಂದ್ರಗಳ ಸ್ಥಾಪನೆಯಿಂದ ವಿದೇಶದಲ್ಲಿ ಯಾವುದೇ ತುರ್ತು ಸಂದರ್ಭ ಸರಕಾರದ ವತಿಯಿಂದ ಅಗತ್ಯ ನೆರವು ದೊರೆಯಲು ಸಹಕಾರಿಯಾಗಲಿದೆ. ಅದರ ಜೊತೆಗೆ ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯ ನೆರವು ನೀಡಲಾಗುತ್ತದೆ.

from India & World News in Kannada | VK Polls https://ift.tt/uKJDWag

ಮಂಗಳೂರಿನಲ್ಲಿ ಆಯುಷ್ಮತಿ ಮಹಿಳಾ ಕ್ಲಿನಿಕ್‌: ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಾಪನೆ, ನಗರ ಭಾಗದಲ್ಲಿ ಸೌಲಭ್ಯ ಲಭ್ಯ

ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಮತಿ ಮಹಿಳಾ ಕ್ಲಿನಿಕ್‌ ಸ್ಥಾಪಿಸಲಾಗಿದೆ. ಆಯುಷ್ಮತಿ ಮಹಿಳಾ ಕ್ಲಿನಿಕ್‌ನಲ್ಲಿ ವಾರದಲ್ಲಿ ದಿನಕ್ಕೊಂದು ವೈದ್ಯರು ಮಹಿಳೆಯರಿಗೆ ಸೇವೆ ಒದಗಿಸಲಿದ್ದಾರೆ. ನುರಿತ ಸ್ತ್ರಿರೋಗ ತಜ್ಞರು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ, ಚಿಕಿತ್ಸೆ ಮತ್ತು ಆರೋಗ್ಯದ ಕುರಿತಾಗಿ ಸಲಹೆ ಸೂಚನೆಯನ್ನು ನೀಡುತ್ತಾರೆ. ಸಣ್ಣವರಿಂದ ಹಿಡಿದು ದೊಡ್ಡವರಿಗೂ ಈ ಕ್ಲಿನಿಕ್‌ನಲ್ಲಿ ಆರೋಗ್ಯ ಸೇವೆ ದೊರೆಯಲಿದೆ. ನಗರದ ಆರೋಗ್ಯ ಕೇಂದ್ರಗಳಲ್ಲಿಯೇ ಸೇವೆಗಳು ಸಿಗಬೇಕು ಎನ್ನುವ ಉದ್ದೇಶದಿಂದ ಆಯುಷ್ಮತಿ ಮಹಿಳಾ ಕ್ಲಿನಿಕ್‌ ಸ್ಥಾಪಿಸಲಾಗಿದೆ.

from India & World News in Kannada | VK Polls https://ift.tt/3MwzDt7

Immigration Information Centre- ವಿದೇಶಕ್ಕೆ ಉದ್ಯೋಗಕ್ಕೆ ತೆರಳುವವರಿಗೆ ಸಮಗ್ರ ನೆರವು ಒದಗಿಸಲು ಉಡುಪಿ ಸೇರಿ ರಾಜ್ಯದ 4 ಕಡೆ ವಲಸೆ ಮಾಹಿತಿ ಕೇಂದ್ರ ಸ್ಥಾಪನೆ

ವಿದೇಶದಲ್ಲಿ ಉದ್ಯೋಗ ಮಾಡಲು ಆಸಕ್ತಿಯಿರುವರು ಸರಿಯಾದ ಮಾಹಿತಿ, ಮಾರ್ಗದರ್ಶನಕ್ಕಾಗಿ ಖಾಸಗಿ ಸಂಸ್ಥೆ ಮತ್ತು ಮಧ್ಯವರ್ತಿಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಹೋಗಲಾಡಿಸುವ ಸಲುವಾಗಿ ಉದ್ಯೋಗಕ್ಕೆ ತೆರಳಲು ಇರಬೇಕಾದ ಅರ್ಹತೆ, ಕಾನೂನು ಪ್ರಕ್ರಿಯೆ ಸಹಿತ ನಾನಾ ಸವಾಲುಗಳಿಗೆ ಉಚಿತ ಪರಿಹಾರ ನೀಡುವ ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಉಡುಪಿ ಸೇರಿದಂತೆ ರಾಜ್ಯದ ನಾಲ್ಕು ಕಡೆಗಳಲ್ಲಿ ಪ್ರಾರಂಭವಾಗಿದೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಉಡುಪಿ, ದಾವಣಗೆರೆ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿಈ ಮಾಹಿತಿ ಕೇಂದ್ರ ತೆರೆಯಲಾಗಿದ್ದು ಜನರಿಗೆ ಅಗತ್ಯ ಸೇವೆ ಒದಗಿಸಲು ಸನ್ನದ್ಧವಾಗಿದೆ.

from India & World News in Kannada | VK Polls https://ift.tt/KISzgbA

ಗುಬ್ಬಿ: ಪತ್ತೆಯಾದ ಹುಲಿಯ ಕಳೇಬರದ 'ಪಟ್ಟೆ' ಹೋಲಿಕೆಯಾಗಿಲ್ಲ, ಅದು ಕರ್ನಾಟಕದ ಹುಲಿಯಲ್ಲ?

Tiger stripes pattern: 2006ರ ನಂತರದಲ್ಲಿ ತುಮಕೂರು ಜಿಲ್ಲೆಯಲ್ಲಿ ಹುಲಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಇತ್ತೀಚೆಗಷ್ಟೇ ಗುಬ್ಬಿಯ ಚಿಕ್ಕಹೆಡಿಗೆಹಳ್ಳಿ ಸಮೀಪ ಹುಲಿಯ ಕಳೇಬರ ಪತ್ತೆಯಾಗಿದೆ. ಹುಲಿಯ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿಲ್ಲ. ಅದರ ಸಾವಿಗೆ ಕಾರಣ ಹುಡುಕುವ ಜೊತೆಗೆ, ಅದು ಯಾವ ಪ್ರದೇಶಕ್ಕೆ ಸೇರಿದ ಹುಲಿ ಎಂದು ಪತ್ತೆ ಮಾಡುವ ಕಾರ್ಯಾಚರಣೆ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ರಾಜ್ಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಹುಲಿಗಳ ಪಟ್ಟೆಯ ಜೊತೆ ಅದರ ಪಟ್ಟೆ ಹೋಲಿಕೆಯಾಗಿಲ್ಲ.

from India & World News in Kannada | VK Polls https://ift.tt/5b9dUNX

ಮುನಿರಾಬಾದ್‌: ದೇವಾಲಯ ಪ್ರವೇಶಿಸಿದ್ದ ದಲಿತರ ಮೇಲೆ ಹಲ್ಲೆ ಆರೋಪ, ಪೊಲೀಸ್‌ ಠಾಣೆಗೆ ಮುತ್ತಿಗೆ

Attack on dalits in Hitnal village: ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ದೇಶದ ಹಲವು ಭಾಗಗಳಲ್ಲಿ ಆಗಾಗ್ಗೆ ವರದಿಯಾಗುತ್ತಿರುತ್ತದೆ. ರಾಜ್ಯದಲ್ಲೂ ಅಂಥ ಘಟನೆಗಳು ನಡೆಯುತ್ತಿದ್ದು, ಕೊಪ್ಪಳದಲ್ಲಿ ಇದೇ ತಿಂಗಳು ಎರಡನೇ ಘಟನೆ ವರದಿಯಾಗಿದೆ. ದೇವಾಲಯಕ್ಕೆ ಪ್ರವೇಶಿಸಿದ್ದಾರೆ ಎಂಬ ಕಾರಣದಿಂದ ಹಿಟ್ನಾಳ್‌ ಗ್ರಾಮದಲ್ಲಿ ದಲಿತರ ಮೇಲೆ ಮನಸ್ಸೇಚ್ಚೆ ಹಲ್ಲೆ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಆ ಘಟನೆಯ ಬೆನ್ನಲ್ಲೇ ದಲಿತ ಸಂಘಟನೆಗಳು ಬುಧವಾರ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿವೆ.

from India & World News in Kannada | VK Polls https://ift.tt/BAKOXUV

ಕುಸಿದ ಕಡಲೆ ಕಾಳು ಇಳುವರಿ; ಮಾರುಕಟ್ಟೆಯಲ್ಲಿ ದರವೂ ಕುಸಿತ; ರೈತರಿಗೆ ಸಂಕಷ್ಟ!

ಮುಂಗಾರಿನ ಹಂಗಾಮಿನ ವೇಳೆ, ಸಾಧಾರಣವಾಗಿ ದಾವಣಗೆರೆ ರೈತರು ಮುಸುಕಿನ ಜೋಳ (ಮೆಕ್ಕೆ ಜೋಳ) ಬೆಳೆಯುತ್ತಾರೆ. ಅದರ ಕಟಾವು ಆದ ಕೂಡಲೇ ಹಿಂಗಾರಿನಲ್ಲಿ ಕಡಲೆ ಕಾಳು ಬಿತ್ತನೆ ಮಾಡುತ್ತಾರೆ. ಈ ಬಾರಿ ಜಗಳೂರು ತಾಲೂಕಿನಲ್ಲಿ ಸುಮಾರು 6 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕಡಲೆ ಬಿತ್ತನೆಯಾಗಿದೆ. ಆದರೆ, ಈ ಬಾರಿ ಇಳುವರಿ ಕುಂಠಿತವಾಗಿದೆ. ಮತ್ತೊಂದೆಡೆ, ಮಾರುಕಟ್ಟೆಯಲ್ಲಿ ಕಡಲೆ ಕಾಳಿನ ಧಾರಣೆ ಕುಸಿದಿದೆ. ಮೊದಲೇ ಇಳುವರಿ ಕಡಿಮೆಯಾಗಿದ್ದರ ಬಗ್ಗೆ ಬೇಸರಗೊಂಡಿದ್ದ ರೈತರನ್ನು ಈಗ ಮಾರುಕಟ್ಟೆಯಲ್ಲಿ ಕಡಲೆಕಾಳಿನ ದರ ಕುಸಿದಿರುವುದು ಆತಂಕಕ್ಕೀಡು ಮಾಡಿದೆ.

from India & World News in Kannada | VK Polls https://ift.tt/YloT9hk

Swiss Parliament Evacuated: ಸ್ವಿಸ್ ಪಾರ್ಲಿಮೆಂಟ್‌ ಬಳಿ ಸ್ಪೋಟಕ ಹೊಂದಿದ್ದ ವ್ಯಕ್ತಿ ಅರೆಸ್ಟ್: ಸುರಕ್ಷತೆಗೆ ಪಾರ್ಲಿಮೆಂಟ್‌ ಸಿಬ್ಬಂದಿಗಳ ತೆರವು

Swiss Parliament Evacuated: ಸ್ವಿಸ್ ಪಾರ್ಲಿಮೆಂಟ್ ಪ್ರವೇಶ ದ್ವಾರದ ಬಳಿ ಸ್ಪೋಟಕಗಳೊಂದಿಗೆ ವ್ಯಕ್ತಿ ಪತ್ತೆಯಾದ ಹಿನ್ನೆಲೆ ತಕ್ಷಣ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ, ಫಾರ್ಲಿಮೆಂಟ್ ಸಿಬ್ಬಂದಿ ಹಾಗೂ ಕಚೇರಿಗಳನ್ನು, ಸುತ್ತಲಿನ ಕಟ್ಟಡದ ಜನರನ್ನು ಖಾಲಿ ಮಾಡಿಸಿ ತೀವ್ರ ತನಿಖೆ ನಡೆಸಲಾಯಿತು.

from India & World News in Kannada | VK Polls https://ift.tt/2VCq8p7

ಕೆ.ಆರ್‌. ನಗರದಲ್ಲಿ ಆಂಬ್ಯುಲೆನ್ಸ್‌ ಸಮಸ್ಯೆ; ಕೆಟ್ಟು ನಿಂತಿರುವ ಮೂರು ಆಂಬುಲೆನ್ಸ್ ಗಳ ರಿಪೇರಿ ಯಾವಾಗ?

ಕೆ.ಆರ್. ನಗರದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ ಇವೆ. ಈ ಎರಡೂ ಆಸ್ಪತ್ರೆಗಳಿಗೆ ಒಟ್ಟು ಐದು ಆ್ಯಂಬುಲೆನ್ಸ್ ಗಳಿವೆ. ಆದರೆ, ಇವುಗಳಲ್ಲಿ ಸೇವೆ ನೀಡುತ್ತಿರುವುದು ಕೇವಲ 2 ಆ್ಯಂಬುಲೆನ್ಸ್ ಗಳು ಮಾತ್ರ. ಉಳಿದವು ಅಪಘಾತಗಳು ಸಂಭವಿಸಿ ಕೆಟ್ಟು ನಿಂತಿವೆ. ಆದರೆ, ಇವುಗಳಲ್ಲೊಂದು ನಗು-ಮಗು ಯೋಜನೆಯ ಆ್ಯಂಬುಲೆನ್ಸ್ ಆಗಿರುವುದರಿಂದ ಸಾಮಾನ್ಯ ನಾಗರಿಕರ ತುರ್ತು ಸಂದರ್ಭಗಳಿಗೆ ಬಳಕೆಯಾಗುತ್ತಿಲ್ಲ. ಸಾರ್ವಜನಿಕರಿಗಾಗಿ ಮೀಸಲಿರುವುದು ಕೇವಲ ಒಂದು ಆ್ಯಂಬುಲೆನ್ಸ್ ಮಾತ್ರ. ಸೇವೆಯಲ್ಲಿ ಇರದ ಆ್ಯಂಬುಲೆನ್ಸ್ ಗಳನ್ನು ದುರಸ್ತಿಗೊಳಿಸಿ ಸೇವೆಗೆ ಸಿಗುವಂತೆ ಮಾಡಬೇಕೆಂಬುದು ಜನರ ಒತ್ತಾಯ.

from India & World News in Kannada | VK Polls https://ift.tt/8ZiEoRL

ಅಧಿಕಾರಿಗಳ ಜತೆ ಸಂಸದ ಪ್ರತಾಪ್‌ ಸಿಂಹ ಹೆದ್ದಾರಿ ವೀಕ್ಷಣೆ: ಸರ್ವೀಸ್‌ ರಸ್ತೆಗೆ ಸಂಪರ್ಕಿಸುವ ಎಂಟ್ರಿ-ಎಕ್ಸಿಟ್‌ ಸ್ಥಳ ವಿಸ್ತರಣೆ

Bengaluru-Mysuru Expressway: ವಾಹನ ಎಂಟ್ರಿ ಮತ್ತು ಎಕ್ಸಿಟ್‌ಗಾಗಿ ವಿಶಾಲವಾದ ಜಾಗದ ವ್ಯವಸ್ಥೆ ಮಾಡಿರುವುದರಿಂದ ಅಪಘಾತಗಳನ್ನು ತಡೆಯಬಹುದಾಗಿದೆ. ಬಿಡದಿಗೆ ಸಂಪರ್ಕಿಸುವ ಸರ್ವೀಸ್‌ ರಸ್ತೆಗಳ ಬಳಿ ತಲೆದೋರಿದ್ದ ಸಮಸ್ಯೆ ಇದರಿಂದಾಗಿ ಬಗೆಹರಿದಂತಾಗಿದೆ. ಡಿಬಿಎಲ್‌ ಅಧಿಕಾರಿಗಳು, ರಾಜ್ಯ ಹೆದ್ದಾರಿ ಅಧಿಕಾರಿಗಳು ಹಾಗೂ ಸಂಸದ ಪ್ರತಾಪ್‌ ಸಿಂಹ ಎಕ್ಸ್‌ಪ್ರೆಸ್‌ ಹೈವೆನಲ್ಲಿ ಪರಿಶೀಲನೆ ನಡೆಸಿದರು.

from India & World News in Kannada | VK Polls https://ift.tt/c6N0qGo

ಮಕ್ಕಳಿಗೆ ಸಮವಸ್ತ್ರ ಹೇಗೆ ಬರುವುದಿಲ್ಲವೋ ನಾವು ನೋಡುತ್ತೇವೆ: ಹೈಕೋರ್ಟ್‌ ಗರಂ

Government schools Uniform: ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಆದೇಶ ಪಾಲನೆಯಾಗಿಲ್ಲ ಎಂದು ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿಗಳು ಸರಕಾರ ಮತ್ತು ಸರಕಾರದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದೆ.

from India & World News in Kannada | VK Polls https://ift.tt/szZFQ3V

HD Kumaraswamy In Dharwad-ನಾನು ರೈತರ ಸಾಲಮನ್ನಾ ಮಾಡಿದೆ, ಬಿಜೆಪಿ ರೈತರಿಗೆ ದ್ರೋಹ ಮಾಡಿತು

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆ ಇದೀಗ ಧಾರವಾಡ ಜಿಲ್ಲೆ ಪ್ರವೇಶಿಸಿದೆ. ಮಂಗಳವಾರದಂದು ನವಲಗುಂದ ಕ್ಷೇತ್ರದ ಶಿರೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ರೋಡ್ ಶೋ ನಡೆಸಿದ ಕುಮಾರಸ್ವಾಮಿ ನವಲಗುಂದದಲ್ಲಿ ಬಹಿರಂಗ ಸಮಾವೇಶ ನಡೆಸಿದರು. ಈ ವೇಳೆ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಿದ ಅವರು, ನಾನು ರೈತರ ಸಾಲಮನ್ನಾ ಮಾಡಿದರೆ ಬಿಜೆಪಿ ಸರಕಾರ ಸಾಲಮನ್ನಾ ಹಣವನ್ನು ಬೇರೆಡೆಗೆ ವರ್ಗಾಯಿಸಿ ರೈತರಿಗೆ ಮೋಸ ಮಾಡಿತು ಎಂದು ಆರೋಪ ಮಾಡಿದರು.

from India & World News in Kannada | VK Polls https://ift.tt/YUfE95l

ಅನಧಿಕೃತ ಚಟುವಟಿಕೆಗಳ ತಾಣವಾಗ್ತಿದೆ ಚಾರ್ಮಾಡಿ ಘಾಟಿ ಪರಿಸರ: ಚೆಕ್‌ಪೋಸ್ಟ್‌ಗಳಲ್ಲಿ ಅರಣ್ಯ, ಪೊಲೀಸ್‌ ಇಲಾಖೆ ಸಿಬ್ಬಂದಿ ಕೊರತೆ

ಕರ್ನಾಟಕದ ಅತ್ಯಂತ ದುರ್ಗಮ ಘಾಟ್‌ ಎಂದು ಕರೆಯಿಸಿಕೊಳ್ಳುವ ಚಾರ್ಮಾಡಿ ಘಾಟಿ ಪರಿಸರ ಕಣ್ತುಂಬಿಕೊಳ್ಳೋದೇ ಅಂದ. ಚಾರ್ಮಾಡಿ ಎಂದಾಕ್ಷಣ ನಿಸರ್ಗ ಮಾತೆಯ ಸೊಬಗು. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ಧುಮ್ಮಿಕ್ಕಿ ಹರಿಯುವ ಜಲಪಾತ ಕಣ್ಣ ಮುಂದೆ ಬರುತ್ತೆ. ಆದ್ರೀಗ ಅದೇ ಚಾರ್ಮಾಡಿ ಘಾಟ್ ಪ್ರದೇಶ ಕಿಡಿಗೇಡಿಗಳ ತಾಣವಾಗುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ ಕೊಲೆಯಾದ ಮೃತದೇಹವನ್ನು ಇಲ್ಲಿ ತಂದು ಎಸೆಯಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಅರಣ್ಯ, ಪೊಲೀಸ್‌ ಇಲಾಖೆ ಸಿಬ್ಬಂದಿ ಕೊರತೆಯೇ ಇದಕ್ಕೆಲ್ಲಾ ಕಾರಣವಾಗುತ್ತಿರೋದು.

from India & World News in Kannada | VK Polls https://ift.tt/ks3axUR

ರೇಬೀಸ್ ಮುಕ್ತ ಮೈಸೂರಿಗೆ ಪಣ: ನಾಯಿ, ಬೆಕ್ಕುಗಳಿಗೂ ಲಸಿಕೆ

ಮೈಸೂರಿನಲ್ಲಿ ಇತ್ತೀಚೆಗೆ ನಾಯಿ, ಬೆಕ್ಕುಗಳನ್ನು ಸಾಕುವ ಟ್ರೆಂಡ್ ಹೆಚ್ಚಾಗಿದೆ. ಆದರೆ, ಸಾಕು ಪ್ರಾಣಿಗಳು ಕಚ್ಚಿದಾಗ ಅದಕ್ಕೆ ಸೂಕ್ತ ಚಿಕತ್ಸೆಯನ್ನು ಪಡೆಯದೇ ಜನರು ನಿರ್ಲಕ್ಷಿಸುತ್ತಿದ್ದಾರೆ. ಕಳೆದ ವರ್ಷ ನಾಲ್ವರಲ್ಲಿ ರೇಬೀಸ್ ಕಂಡಬಂದಿತ್ತು. ಹಾಗಾಗಿ, ಸಾಕು ಪ್ರಾಣಿಗಳಿಗೆ ಪಲ್ಸ್ ಪೋಲಿಯೋ ಮಾದರಿಯಲ್ಲಿ ಲಸಿಕೆಯನ್ನು ನೀಡಲು ನಿರ್ಧರಿಸಲಾಗಿದೆ. 2030ರೊಳಗೆ ಭಾರತವನ್ನು ರೇಬೀಸ್ ಮುಕ್ತ ರಾಷ್ಟ್ರವನ್ನಾಗಿಸುವ ಕೇಂದ್ರ ಸರ್ಕಾರದ ಆಶಯಕ್ಕೆ ಅನುಗುಣವಾಗಿ ಮಾರ್ಚ್ ನಿಂದ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕುವ ಅಭಿಯಾನ ಕೈಗೊಳ್ಳಲು ಪಶುಸಂಗೋಪನೆ ಇಲಾಖೆಯ ಮೈಸೂರು ವಿಭಾಗ ನಿರ್ಧರಿಸಿದೆ.

from India & World News in Kannada | VK Polls https://ift.tt/jeHAo5B

ದುಸ್ಥಿತಿಗೆ ತಲುಪಿದ ಎಂಪಿಎಂ, ವಿಐಎಸ್‌ಎಲ್‌: ಕ್ವಾಟ್ರ್ರಸ್‌ ವಾರಸುದಾರರ ಆತಂಕ

ವಿಐಎಸ್‌ಎಲ್‌ ಕಾರ್ಖಾನೆಗೆ ಸೇರಿದ ಕ್ವಾಟ್ರ್ರಸ್‌ ನಿವಾಸಿಗಳು ನಿತ್ಯವೂ ಆತಂಕದಲ್ಲೇ ದಿನ ದೂಡುವಂತಾಗಿದೆ. ವಿಐಎಸ್‌ಎಲ್‌ ಆಡಳಿತಕ್ಕೆ ಸೇರಿದ ವೇಲೂರು ಶೆಡ್‌, ಜಿಂಕ್‌ ಲೈನ್‌, ಕೂಲಿಬ್ಲಾಕ್‌ ಸೇರಿ ವಿಐಎಸ್‌ಎಲ್‌​ ಕಾರ್ಖಾನೆಗಳ ಮಾಲಿಕತ್ವದಲ್ಲಿಯೇ ಉಳಿದಿವೆ​ ಎರಡೂ ಕಾರ್ಖಾನೆ ವ್ಯಾಪ್ತಿಯ 10 ಕೊಳಚೆ ಪ್ರದೇಶಗಳು. ಆದರೆ ಈಗ ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುತ್ತಿದ್ದು, ಕ್ವಾಟ್ರ್ರಸ್‌ಗಳು, ಭೂಮಿ, ಆಸ್ತಿಗಳೆಲ್ಲಾ ಖುಲ್ಲಾ ಮಾಡಿಸಲಾಗುತ್ತದೆ ಎಂಬ ಸದ್ದು ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ಇದಕ್ಕೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

from India & World News in Kannada | VK Polls https://ift.tt/0pVAK5N

ಸಿಂದಗಿ | ಆಭರಣಗಳ ಅಂಗಡಿಗೆ ನುಗ್ಗಿ ಹಣಕ್ಕೆ ಬೇಡಿಕೆ ಇಟ್ಟ ದುಷ್ಕರ್ಮಿಗಳಿಂದ ಫೈರಿಂಗ್‌, ಇಬ್ಬರು ಪೊಲೀಸ್‌ ವಶಕ್ಕೆ

Sindagi jewellery shop robbery: ವಿಜಯಪುರದ ಸಿಂದಗಿಯಲ್ಲಿ ಸೋಮವಾರ ಸಂಜೆ ದರೋಡೆಗೆ ಯತ್ನಿಸಿದ ಪ್ರಕರಣ ನಡೆದಿದೆ. ಆಭರಣಗಳ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸ್ಥಳೀಯರು ಹೆದರದೆ ಅವರ ಬೆನ್ನಟ್ಟಿ ಹೋಗಿದ್ದು, ಇಬ್ಬರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಅವರ ಬಳಿ ನಾಡ ಬಂದೂಕು, ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

from India & World News in Kannada | VK Polls https://ift.tt/aRdIDC0

3 ತಿಂಗಳ ಗರಿಷ್ಠ ಮಟ್ಟಕ್ಕೆ ಜಿಗಿದ ಚಿಲ್ಲರೆ ಹಣದುಬ್ಬರ: ಮತ್ತೆ ಹೆಚ್ಚಲಿದೆಯೇ ಸಾಲದ ಮೇಲಿನ ಬಡ್ಡಿ ದರ?

Retail Inflation: ಆಹಾರ ವಸ್ತುಗಳು, ಇಂಧನದ ದರ ಹೆಚ್ಚಳದಿಂದಾಗಿ ಚಿಲ್ಲರೆ ಹಣದುಬ್ಬರವು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇದರ ಪರಿಣಾಮ ರಿಸರ್ವ್ ಬ್ಯಾಂಕ್‌ ರೆಪೊ ದರದಲ್ಲಿ ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದ್ದು, ಸಾಲದ ಮೇಲಿನ ಬಡ್ಡಿ ದರದಲ್ಲಿ ಏರಿಕೆಯಾಗುತ್ತದೆ. ಮಧ್ಯಮ ವರ್ಗದವರು ತೆಗೆದುಕೊಂಡಿರುವ ಮನೆ, ವಾಹನ ಸಾಲದ ಮೇಲಿನ ಇಎಂಐ ಹೊರೆ ಬೀಳಲಿದೆ.

from India & World News in Kannada | VK Polls https://ift.tt/TVKGXAk

ಬೆಳಗಾವಿ: ಕೆಎಎಸ್‌ ಅಧಿಕಾರಿ ರೇಶ್ಮಾ ಪತಿ, ಎಫ್‌ಡಿಎ ಆಗಿದ್ದ ಜಾಫರ್‌ ಆತ್ಮಹತ್ಯೆ

KAS officer Reshma husband suicide: ಹಿಡಕಲ್‌ ಜಲಾಶಯದ ಭೂಸ್ವಾಧೀನಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿರುವ ಕೆಎಎಸ್‌ ಅಧಿಕಾರಿ ರೇಶ್ಮಾ ಅವರ ಪರಿ ಜಾಫರ್‌ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾಫರ್‌ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಾಫರ್ ಬೆಳಗಾವಿಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಎಫ್‌ಡಿಎ ಆಗಿದ್ದರು.

from India & World News in Kannada | VK Polls https://ift.tt/80nhXP9

ತಾಳಗುಪ್ಪ-ಹುಬ್ಬಳ್ಳಿ ರೈಲು ಯೋಜನೆ ಆಶಾಭಾವನೆ: ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪದ ನಿರೀಕ್ಷೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ರಾಜ್ಯ ಸರ್ಕಾರದ ಬಜೆಟ್‌ ಮೇಲೆ ನಿರೀಕ್ಷೆಗಳು ಹತ್ತಾರು. ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಬಗ್ಗೆ ನಿರೀಕ್ಷೆ ಹೆಚ್ಚಿದೆ. 158 ಕಿಲೋ ಮೀಟರ್ ಉದ್ದದ ರೈಲು ಮಾರ್ಗ ಯೋಜನೆಯಾಗಿದ್ದು, ಈ ಯೋಜನೆಯಿಂದ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ 15 ಜಿಲ್ಲೆಗಳಿಗೆ ಸಹಾಯವಾಗಲಿದೆ. ಈ ಯೋಜನೆಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅನುದಾನ ಬಿಡುಗಡೆಗೆ ಅನುವು ಮಾಡಿಕೊಡುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದು ಆಶಾಭಾವನೆ ಹೆಚ್ಚಿದೆ.

from India & World News in Kannada | VK Polls https://ift.tt/rKUJOcv

ಯಶಸ್ವಿನಿ ಕಾರ್ಡ್‌ ಇಲ್ಲದೇ ಪರದಾಟ! ನೋಂದಣಿಯಾದರೂ ಸಿಗುತ್ತಿಲ್ಲ ಕಾರ್ಡ್!

ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ತನ್ನ ಯಶಸ್ವಿ ಆರೋಗ್ಯ ವಿಮಾ ಯೋಜನೆಯನ್ನು ಮರುಜಾರಿಗೊಳಿಸಿದೆ. ಆದರೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ವಿಮಾ ಯೋಜನೆಗಾಗಿ ಸಲ್ಲಿಸಲಾಗಿರುವ ಅರ್ಜಿದಾರರಿಗೆ ಕಾರ್ಡ್ ಗಳನ್ನು ನೀಡುವ ವ್ಯವಸ್ಥೆಯು ಕೇಂದ್ರೀಕೃತವಾಗಿದ್ದು, ಎಲ್ಲಾ ಕಾರ್ಡ್ ಗಳು ಬೆಂಗಳೂರಿನಲ್ಲಿ ಮಾತ್ರವೇ ಮುದ್ರಣವಾಗಿ ಆಯಾ ಜಿಲ್ಲೆಗಳಿಗೆ ವಿತರಣೆಯಾಗುವ ವ್ಯವಸ್ಥೆಯಿದೆ. ಇದರ ಪರಿಣಾಮ, ಮೈಸೂರಿನಲ್ಲಿ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವ ಸುಮಾರು 60 ಸಾವಿರ ನಾಗರಿಕರಲ್ಲಿ ಕೇವಲ 2 ಸಾವಿರ ಕಾರ್ಡ್ ಗಳು ಮಾತ್ರ ವಿತರಣೆಯಾಗಿವೆ.

from India & World News in Kannada | VK Polls https://ift.tt/BV4xKjR

Mangalore: ಹಾಸ್ಟೆಲ್‌ಗಳಿಗೆ ಆರೋಗ್ಯ ಇಲಾಖೆ ಕಣ್ಗಾವಲು: ಆಹಾರ ಸುರಕ್ಷತೆ ಕಾಪಾಡಲು ಕಟ್ಟುನಿಟ್ಟಿನ ಸೂಚನೆ

ಮಂಗಳೂರಿನ ಖಾಸಗಿ ಆಸ್ಪತ್ರೆಯ ಹಾಸ್ಟೆಲ್‌ನಲ್ಲಿ ಇತ್ತೀಗಷ್ಟೇ ವಿಷಾಹಾರ ಸೇವನೆಯಿಂದ ನೂರಕ್ಕಿಂತ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರು. ಅದಾದ ಸ್ವಲ್ಪ ದಿನಗಳ ಬಳಿಕ ಮತ್ತೊಂದು ಹಾಸ್ಟೆಲ್‌ನಲ್ಲೂ ಅಂತದ್ದೇ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದೀಗ ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ ಆಹಾರ ಸುರಕ್ಷತೆ ಕಾಪಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇನ್ಮುಂದೆ ತಿಂಗಳಿಗೊಮ್ಮೆ ಆಹಾರ ಮತ್ತು ನೀರಿನ ಗುಣಮಟ್ಟದ ಪರಿಶೀಲನೆ ನಡೆಸಲಿದೆ. ಪಿಎಚ್‌ಸಿಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಲಾ- ಕಾಲೇಜುಗಳಲ್ಲಿರುವ ಹಾಸ್ಟೆಲ್‌ಗಳಿಗೆ ಪ್ರತಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಭೇಟಿ ನೀಡಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.

from India & World News in Kannada | VK Polls https://ift.tt/oX8kA1D

ಇನ್ನು ಜೆಡಿಎಸ್‌ನಲ್ಲಿ ಇರಲು ಸಾಧ್ಯವೇ? ಕಾರ್ಯಕರ್ತರ ಜತೆ ಚರ್ಚಿಸಿ ಸೂಕ್ತ ತೀರ್ಮಾನ-ಶಾಸಕ ಶಿವಲಿಂಗೇಗೌಡ

Arasikere mla Shivalinge Gowda to quit JDS: ಅರಸೀಕೆರೆಯ ಶಾಸಕ ಶಿವಲಿಂಗೇಗೌಡ ಅವರ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಜೆಡಿಎಸ್‌ ನಾಯಕರು ಸಮಾವೇಶ ನಡೆಸಿ, ಅವರ ವಿರುದ್ಧ ಹರಿದಾಯ್ದಿದ್ದಾರೆ. ಪಕ್ಷದಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿರುವ ಕಾರಣದಿಂದ ತನ್ನ ವಿರುದ್ಧ ಮಾತನಾಡುತ್ತಿರುವುದಾಗಿ ಶಿವಲಿಂಗೇಗೌಡ ಹೇಳಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಈಗ ಜೆಡಿಎಸ್‌ ಅರಸಿಕೆರೆ ಕ್ಷೇತ್ರದಿಂದ ಯಾರನ್ನು ಅಭ್ಯರ್ಥಿ ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

from India & World News in Kannada | VK Polls https://ift.tt/67DxX93

ರಾಹುಲ್‌ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ನೋಟಿಸ್‌: ಫೆ.15ರೊಳಗೆ ಉತ್ತರಿಸಲು ಲೋಕಸಭೆ ಕಾರ್ಯಾಲಯ ಸೂಚನೆ

Breach of privilege notice against Rahul Gandhi: ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯ ವೇಳೆ ಸಂಸದ ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉದ್ಯಮಿ ಅದಾನಿ (Adani) ನಡುವೆ ಇರುವ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ರಾಹುಲ್‌ ಅವರು ಮೋದಿ-ಅದಾನಿ ಜೊತೆಗಿರುವ ಫೋಟೋ ಪ್ರದರ್ಶಿಸಿದ್ದರು. ಅವರು ಭಾಷಣದಲ್ಲಿ ಅಸಂಸದೀಯ ಪದಗಳ ಬಳಕೆ ಮಾಡಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮತ್ತು ಸಂಸದ ನಿಶಿಕಾಂತ್‌ ದುಬೆ ಲೋಕಸಭೆ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದರು.

from India & World News in Kannada | VK Polls https://ift.tt/wqNQaX3

ಚಾಮುಂಡಿಬೆಟ್ಟಕ್ಕೆ ರೋಪ್‌ವೇ, ಸಾಹಿತಿ ಭೈರಪ್ಪ ಆಕ್ಷೇಪ: ಬೆಟ್ಟದ ಅಭಿವೃದ್ಧಿ ಮಾತಿನ ಹಿಂದೆ ಭ್ರಷ್ಟಾಚಾರ ಅಡಗಿದೆ ಎಂದು ಆಕ್ರೋಶ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ಬೇಕೆಂದು ವರ್ಷಗಳ ಹಿಂದೆಯೇ ಕೂಗೆದ್ದಿದೆ. ಆದರೆ ಪರಿಸರ ನಾಶ ಮಾಡಿ ರೋಪ್ ವೇ ಮಾಡುವ ಅಗತ್ಯವಿಲ್ಲ ಎಂದು ಈ ಹಿಂದೆ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಹಿರಿಯ ಸಾಹಿತಿ ಡಾ ಎಸ್‌ ಎಲ್‌ ಭೈರಪ್ಪನವರು ರೋಪ್‌ ವೇ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಚಾಮುಂಡಿ ಬೆಟ್ಟ ಇತ್ತೀಚೆಗೆ ಹಲವು ಬಾರಿ ಕುಸಿದಿದೆ. ಈ ಬಗ್ಗೆ ಆಲೋಚಿಸಿದರೆ ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

from India & World News in Kannada | VK Polls https://ift.tt/K83rjf5

Amit Shah In Mangaluru: ಕರಾವಳಿ, ಮಲೆನಾಡಿನ ಎಲ್ಲ 33 ಕ್ಷೇತ್ರ ಗೆಲ್ಲುವಂತೆ ಶಾಸಕರಿಗೆ ಅಮಿತ್ ಶಾ ಕರೆ; ರಾಜ್ಯದಲ್ಲಿ `ಮಿಷನ್ 150' ಗುರಿ ನಿಗದಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಮಾತ್ರವಲ್ಲದೆ 150 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ ಎಂದು ಕೇಂದ್ರ ಸಚಿವ ಅಮಿತ್ ಶಾ ಶಾಸಕರಿಗೆ ತಿಳಿಸಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗಗಳ ಶಾಸಕರೊಂದಿಗೆ ಸಭೆ ನಡೆಸಿದ ಅವರು ಮುಂದಿನ ಚುನಾವಣೆಯನ್ನು ಎದುರಿಸುವ ಬಗ್ಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು. ಕರಾವಳಿ ಮತ್ತು ಮಲೆನಾಡು ಭಾಗದ 29 ಮಂದಿ ಶಾಸಕರೂ ಗೆಲ್ಲುವುದರ ಜತೆಯಲ್ಲಿ ಉಳಿದ ನಾಲ್ಕು ಕ್ಷೇತ್ರಗಳನ್ನೂ ಗೆಲ್ಲಿಸುವುದು ನಿಮ್ಮ ಗುರಿಯಾಗಬೇಕು ಎಂದು ಸೂಚಿಸಿದರು.

from India & World News in Kannada | VK Polls https://ift.tt/byxW9n4

IND vs AUS: 'ತಂಡದಲ್ಲಿ ಪಕ್ಷಪಾತ ಧೋರಣೆ'-ಕೆ.ಎಲ್‌ ರಾಹುಲ್ ವಿರುದ್ದ ವೆಂಕಟೇಶ್‌ ಪ್ರಸಾದ್‌ ಕಿಡಿ!

Venkatesh Prasad on KL Rahul’s place in team: ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಅವರನ್ನು ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌ ಟೀಕಿಸಿದ್ದಾರೆ. ಕಳೆದ 8 ವರ್ಷಗಳಿಂದ ರಾಹುಲ್‌ ಅವರು 46 ಟೆಸ್ಟ್‌ ಪಂದ್ಯಗಳಿಂದ ಕೇವಲ 34ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಹೀಗಿದ್ದರೂ ಇನ್‌ಫಾರ್ಮ್‌ ಬ್ಯಾಟ್ಸ್‌ಮನ್‌ಗಳ ಬದಲು ಪದೇ-ಪದೆ ಕೆಎಲ್‌ ರಾಹುಲ್‌ಗೆ ಅವಕಾಶ ನೀಡಲಾಗುತ್ತಿದೆ ಎಂದು ವೆಂಕಟೇಶ್‌ ಪ್ರಸಾದ್‌ ಅವರು ಸರಣಿ ಟ್ವೀಟ್‌ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/dehRfom

Amit Shah In Puttur-ದೇಶದ ಸಹಕಾರಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಲು ಕೇಂದ್ರ ಸರಕಾರ ಬದ್ಧ,3 ವರ್ಷದಲ್ಲಿ 2 ಲಕ್ಷ ಹೊಸ ಪತ್ತಿನ ಸಹಕಾರಿ ಸಂಘ ಸ್ಥಾಪನೆ

ಕೇಂದ್ರ ಸಚಿವ ಅಮಿತ್ ಶಾ ಅವರು, ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಪುತ್ತೂರಿನ ತೆಂಕಿಲ ಮೈದಾನದಲ್ಲಿ ಶನಿವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ದೇಶದ ಸಹಕಾರಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ. 3 ವರ್ಷಗಳ ಅವಧಿಯಲ್ಲಿ ಹೊಸದಾಗಿ 2 ಲಕ್ಷ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗುವುದು ಎಂದು ಘೋಶಿಸಿದರು.

from India & World News in Kannada | VK Polls https://ift.tt/FMaDJcs

Mangalore: ಕಾನೂನುಬಾಹಿರ ಚಟುವಟಿಕೆ ತನಿಖೆಗೆ ಪ್ರತ್ಯೇಕ ತಂಡ: ಎಡಿಜಿಪಿ ಅಲೋಕ್ ಕುಮಾರ್‌

ಮಂಗಳೂರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಎಲ್ಲೆ ಮೀರಿದ್ದು ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದೆ. ಕೆಲ ದಿನಗಳ ಹಿಂದಷ್ಟೇ ಮಂಗಳೂರಿನಲ್ಲಿ ಬೃಹತ್ ಜಾಲವಾಗಿ ಹಬ್ಬಿದ್ದ ಡ್ರಗ್ಸ್‌ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದರು. ಹೀಗಾಗಿ ಅನಿವಾರ್ಯವಾದರೆ ಕಾನೂನು ಬಾಹಿರ ಚಟುವಟಿಕೆ ತನಿಖೆಗೆ ಪ್ರತ್ಯೇಕ ತಂಡ ರಚಿಸಿ ಕಠಿಣದ ಕ್ರಮದ ಎಚ್ಚರಿಕೆಯನ್ನು ಎಡಿಜಿಪಿ ಅಲೋಕ್ ಕುಮಾರ್‌ ನೀಡಿದ್ದಾರೆ. ಕಮಿಷನರ್‌ಗೂ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಪೊಲೀಸ್‌ ಕಮಿಷನರ್ ಕಚೇರಿಯಲ್ಲಿ ಅಹವಾಲು ಸ್ವೀಕಾರ ಸಂದರ್ಭ ಸಾಮಾಜಿಕ ಹೋರಾಟಗಾರ್ತಿ ಎಡಿಜಿಪಿ ಎದುರಲ್ಲೇ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ.

from India & World News in Kannada | VK Polls https://ift.tt/VvqT7yF

ಮೈಸೂರಿನಲ್ಲಿ ನಕಲಿ ಕಾರ್ಮಿಕ ಕಾರ್ಡ್‌ ಕಾರ್ಯಾಚರಣೆ

ಅನುಕೂಲವುಳ್ಳವರು ನಕಲಿ ಪಡಿತರ ಚೀಟಿಗಳನ್ನು ಪಡೆದು ಅರ್ಹರಿಗೆ ಸಲ್ಲಬೇಕಾದ ಸವಲತ್ತುಗಳನ್ನು ದೋಚುತ್ತಾರೋ ಅದೇ ರೀತಿ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಕಾರ್ಮಿಕ ಕಾರ್ಡ್ ಗಳನ್ನು ಉಳ್ಳವರು ಮಾಡಿಸಿಕೊಂಡು ಅಲ್ಲಿಯೂ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ದೋಚುತ್ತಿರುವುದು ಬೆಳಕಿಗೆ ಬಂದಿದೆ. ಇಂಥವರ ವಿರುದ್ಧ ಮೈಸೂರು ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿದೆ. ಫೆ. 25ರವರೆಗೆ ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಬೋಗಸ್ ಕಾರ್ಡ್ ಗಳನ್ನು ಪತ್ತೆ ಹಚ್ಚಿ ಅವುಗಳನ್ನು ರದ್ದುಗೊಳಿಸಲಾಗುತ್ತಿದ್ದು, ನಕಲಿ ಕಾರ್ಡ್ ಉಳ್ಳವರು ತಾವೇ ಕಾರ್ಡ್ ಹಿಂದಿರುಗಿಸಿದರೆ ಶಿಕ್ಷೆಯಿಂದ ವಿನಾಯ್ತಿ ನೀಡುವುದಾಗಿ ಸೂಚಿಸಲಾಗಿದೆ.

from India & World News in Kannada | VK Polls https://ift.tt/RftKJye

Mysore: ವಿವಿಧ ಕ್ಷೇತ್ರಗಳ ಸಾಧಕರಿಗೆ ಮೂಡಾದಿಂದ ನಿವೇಶನ: ದೇವನೂರು ಬಡಾವಣೆಯ 188 ನಿವೇಶನ ಹಂಚಿಕೆಗೆ ಲಭ್ಯ

ವಿವಿಧ ಕ್ಷೇತ್ರಗಳ ಸಾಧಕರಿಗೆ ಬಿಡಿ ನಿವೇಶನ ಹಂಚಿಕೆ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವವರಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿದ್ದು, ಅರ್ಜಿದಾರರ ಕುಟುಂಬದ ಸದಸ್ಯರು ಮುಡಾ ವ್ಯಾಪ್ತಿಯಲ್ಲಿ ಸ್ವಂತ ಮನೆ ಹೊಂದಿರಬಾರದು. ​ಅರ್ಜಿದಾರರಿಗೆ 18 ವರ್ಷ ತುಂಬಿರಬೇಕು. ಕರ್ನಾಟಕದಲ್ಲಿ 10 ವರ್ಷ ವಾಸ ಮಾಡಿರಬೇಕು ಎಂದು ಷರತ್ತಿನಲ್ಲಿ ಉಲ್ಲೇಖಿಸಲಾಗಿದೆ. ಈ ಅರ್ಜಿಯನ್ನು ರಾಜ್ಯ ಜಿಲ್ಲಾ ಕೇಂದ್ರಗಳಲ್ಲಿರುವ ಬ್ಯಾಂಕ್ ಆಫ್‌ ಬರೋಡಾ ಕಚೇರಿಯಲ್ಲಿ ನೀಡಲಾಗುತ್ತೆ. ಫೆ.28ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

from India & World News in Kannada | VK Polls https://ift.tt/kjQJCuE

Lokayukta raids BDA office | ಬಿಡಿಎ ಭ್ರಷ್ಟರಿಗೆ ಲೋಕಾಯುಕ್ತ ಬಿಸಿ: ಅಧಿಕಾರಿಗಳಿಗೆ ಶಾಕ್‌, ಅನುಮಾನ ಬಂದ ಕಡತಗಳ ಜಪ್ತಿ

Lokayukta Justice B.S.Patil visited BDA office: ಬಿಡಿಎ ಕಚೇರಿಗೆ ಕೆಲಸಗಳಿಗಾಗಿ ಅರ್ಜಿ ಹಿಡಿದು, ಅಧಿಕಾರಿಗಳಿಗಾಗಿ ಕಾದು ಕುಳಿತಿದ್ದ ಜನರಿಗೂ ಲೋಕಾಯುಕ್ತ ಅಧಿಕಾರಗಳ ದಾಳಿ ಅಚ್ಚರಿ ಉಂಟು ಮಾಡಿತು. ಲೋಕಾಯುಕ್ತ ಪೊಲೀಸರ ವಿಶೇಷ ತಂಡಗಳು ಬಿಡಿಎ ಅಧಿಕಾರಿಗಳು, ಎಂಜಿನಿಯರ್‌ಗಳ ಕಚೇರಿಗಳಲ್ಲಿ ಪರಿಶೀಲನೆಗೆ ಇಳಿದರು. ಅನುಮಾನ ಬಂದ ಕಡಗಳನ್ನು ವಶಕ್ಕೆ ಪಡೆದುಕೊಂಡರು. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು. ಜನರು ಬಿಡಿಎ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಮಧ್ಯವರ್ತಿಗಳನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

from India & World News in Kannada | VK Polls https://ift.tt/2r0hKgz

KSRTC satellite Bus stand | ಪೊಲೀಸರ ಸೋಗಲ್ಲಿ ಸುಲಿಗೆ, ಚಿನ್ನದ ಗಟ್ಟಿ ಲೂಟಿ: ಗೃಹ ರಕ್ಷಕ ಸಿಬ್ಬಂದಿ ಸೇರಿ ಮೂವರ ಕೃತ್ಯ

Bengaluru Robbery case: ಶಿವಮೊಗ್ಗದಲ್ಲಿ ಚಿನ್ನದ ಗಟ್ಟಿ ಖರೀದಿಸಿ ಕೊಯಮತ್ತೂರಿಗೆ ಬಸ್‌ನಲ್ಲಿ ಹೊರಟ್ಟಿದ್ದ ವ್ಯಕ್ತಿಯನ್ನು ಕೆಳಗಿಸಿದ್ದ ಮೂವರು, ಕಾರಿನಲ್ಲಿ ಕೂರಿಸಿಕೊಂಡು ಕೇಸ್‌ ದಾಖಲಿಸುವ ಬೆದರಿಕೆ ಹಾಕಿದ್ದರು. ಪೊಲೀಸರ ಸೋಗಿನಲ್ಲಿ ಹೆದರಿಸಿ ಬ್ಯಾಗ್‌ನಲ್ಲಿದ್ದ ಚಿನ್ನದ ಗಟ್ಟಿ ಮತ್ತು ಹಣವನ್ನು ವಶಕ್ಕೆ ಪಡೆದು ತೆರಳಿದ್ದರು. ಗಾಬರಿಗೊಂಡ ವ್ಯಕ್ತಿಯು ತನ್ನ ಮಾಲೀಕರಿಗೆ ವಿಷಯ ಮುಟ್ಟಿಸಿದ್ದ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ಸಿಸಿಟಿವಿಯಲ್ಲಿ ಚಲನವಲನಗಳನ್ನು ಗುರುತಿಸಿ, ಹೋಂ ಗಾರ್ಡ್‌ ಸಹ ಕೃತ್ಯದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿತ್ತು.

from India & World News in Kannada | VK Polls https://ift.tt/3N2ZHYw

ವಾರದಲ್ಲಿ 5 ದಿನ ಕೆಲಸ, ಕಚೇರಿ ವೇಳೆ 1 ತಾಸು ಹೆಚ್ಚಳ: 7ನೇ ವೇತನ ಆಯೋಗಕ್ಕೆ ಸರಕಾರಿ ನೌಕರರ ಸಂಘದ ಬೇಡಿಕೆ

Karnataka 7th pay commission: ರಾಜ್ಯದ ಸರಕಾರಿ ನೌಕರರ ಸಂಘವು ಏಳನೇ ವೇತನ ಆಯೋಗಕ್ಕೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದೆ. 65 ಪುಟಗಳ ವರದಿಯನ್ನು ಸಲ್ಲಿಸಿದ್ದು, ಕಚೇರಿ ಅವಧಿ ವಿಸ್ತರಣೆಯ ಜೊತೆಗೆ ವಾರದಲ್ಲಿ ಎರಡು ದಿನ ರಜೆ ನೀಡುವಂತೆ ಕೇಳಿದೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ನಿರ್ವಹಣೆಯ ವೆಚ್ಚ ತಗ್ಗುವ ಮೂಲಕ ಉಳಿತಾಯವಾಗಲಿದೆ ಹಾಗೂ ಇಂಧನ, ವಾಹನ ದಟ್ಟಣೆ ಸಮಸ್ಯೆಯೂ ತಗ್ಗಲಿದೆ ಎಂದು ವಿವರಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಎನ್‌ಪಿಎಸ್‌ಗಿಂತ ಹಳೆಯ ಪಿಂಚಣಿ ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗಿದೆ.

from India & World News in Kannada | VK Polls https://ift.tt/cyvzxl6

ಬಾಗೇವಾಡಿಯ ರೋಗಿಗಳಿಗೆ ಉಪಯೋಗವಾಗದ 'ನಮ್ಮ ಕ್ಲಿನಿಕ್‌'

ಬಸನನ ಬಾಗೇವಾಡಿಯಲ್ಲಿ ಕೆಲವು ತಿಂಗಳುಗಳ ಹಿಂದೆ ನಮ್ಮ ಕ್ಲಿನಿಕ್ ಶುರು ಮಾಡಲಾಗಿದೆ. ಇಲ್ಲಿನ ಪ್ರಾಂತ್ಯದಲ್ಲಿರುವ ಜನತೆಗೆ ಕಡಿಮೆ ಖರ್ಚಿನಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುವುದು ಈ ನಮ್ಮ ಕ್ಲಿನಿಕ್ ಸ್ಥಾಪನೆಯ ಉದ್ದೇಶವಾಗಿದೆ. ಆದರೆ, ಇಲ್ಲಿಗೆ ಬರುವ ರೋಗಿಗಳಿಗೆ ಇಲ್ಲಿರುವ ವೈದ್ಯರು ರಕ್ತ, ಮೂತ್ರ ಮತ್ತಿತರ ಪರೀಕ್ಷೆಗಳಿಗಾಗಿ ತಾಲೂಕು, ಜಿಲ್ಲಾ ಕೇಂದ್ರಗಳ ದೊಡ್ಡ ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸುತ್ತಿದ್ದಾರೆ. ಹೀಗಾಗಿ, ಇಲ್ಲಿಯ ಜನರಿಗೆ ನಮ್ಮ ಕ್ಲಿನಿಕ್ ಸೌಲಭ್ಯ ಎಟುಕದಂತಾಗಿದೆ. ನಮ್ಮ ಕ್ಲಿನಿಕ್ ಗಳ ಜೊತೆಗೆ ಲ್ಯಾಬ್ ಗಳೂ ಇದ್ದರೆ ಅನುಕೂಲವಾಗುತ್ತದೆ.

from India & World News in Kannada | VK Polls https://ift.tt/cF1NXyk

Puttur constituency: ಗರಿಷ್ಠ ಮಹಿಳಾ ಶಾಸಕಿಯರ ಹಿರಿಮೆ: ಶಾಸಕಿಯರದ್ದೇ ಪವರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಶಾಸಕಿಯರದ್ದೇ ಪಾರುಪತ್ಯ. 1999ರವರೆಗೂ ಪುರುಷರನ್ನೇ ವಿಧಾನಸಭೆಗೆ ಕಳಿಸಿದ ಪುತ್ತೂರು, 2004ರಲ್ಲಿ ಶಕುಂತಳಾ ಶೆಟ್ಟಿ ಮೂಲಕ ಮಹಿಳೆ ಪಾಲಾಯಿತು. ಜಿಲ್ಲೆಯಲ್ಲೇ ಹೆಚ್ಚಿನ ಮಹಿಳೆಯರನ್ನು ಗೆಲ್ಲಿಸಿಕೊಟ್ಟ ಕ್ಷೇತ್ರ ಎಂಬ ಹಿರಿಮೆ ಸಂಪಾದಿಸಿದೆ.2013ರಲ್ಲಿ ಮತ್ತೆ ಅದೇ ಶಕುಂತಳಾ ಶೆಟ್ಟಿ ಕಾಂಗ್ರೆಸ್‌ ಟಿಕೆಟ್‌ನಿಂದ ಗೆದ್ದು 3ನೇ ಮಹಿಳಾ ಶಾಸಕಿಯಾದರು. 2 ಬಾರಿ ಬಿಜೆಪಿ ಮತ್ತು 1 ಬಾರಿ ಕಾಂಗ್ರೆಸ್‌ ಮಹಿಳಾ ಶಾಸಕಿಯರನ್ನು ಪುತ್ತೂರು ಕ್ಷೇತ್ರ ಕಂಡಿದೆ.

from India & World News in Kannada | VK Polls https://ift.tt/JYISNe6

Byndoor constituency: ಬೈಂದೂರಿಗೆ ಒಲಿದು ಬಂದಿಲ್ಲ ಸಚಿವ ಸ್ಥಾನ: ಶಾಸಕರನ್ನು ಅವಿರೋಧವಾಗಿ ಆರಿಸಿದ ಹೆಗ್ಗಳಿಕೆಯ ಕ್ಷೇತ್ರ

ಉಡುಪಿ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಪೈಕಿ ಅತ್ಯಧಿಕ ಮತದಾರರನ್ನು ಹೊಂದಿರುವ ಕ್ಷೇತ್ರ ಬೈಂದೂರು. 1957ರಲ್ಲಿ ಕ್ಷೇತ್ರ ವಿಭಜನೆಯಾಗಿ ಪ್ರತ್ಯೇಕ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ ಉದಯವಾಯಿತು. ಕ್ಷೇತ್ರದ ಮೊದಲ ಶಾಸಕರಾಗಿ ಯಡ್ತರೆ ಮಂಜಯ್ಯ ಶೆಟ್ಟಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅವರಿಗೆ ಪ್ರತಿಸ್ಪರ್ಧಿಯೆ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿ ಕ್ಷೇತ್ರದ ಮೊದಲ ಶಾಸಕರಾಗಿ ಹೆಗ್ಗಳಿಕೆ ಗಳಿಸಿದ್ದರು. ಕ್ಷೇತ್ರದಲ್ಲಿ ಬರೋಬ್ಬರಿ ಹನ್ನೊಂದು ಬಾರಿ ಕಾಂಗ್ರೆಸ್‌ ಜಯಗಳಿಸಿದ್ದರೆ, ಮೂರು ಬಾರಿ ಬಿಜೆಪಿ, ಒಂದು ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದೆ.

from India & World News in Kannada | VK Polls https://ift.tt/U4tLk2i

First Bahubali Statue Of North Karnataka- ಉತ್ತರ ಕರ್ನಾಟಕದ ಮೊದಲ ಬಾಹುಬಲಿ ಪ್ರತಿಮೆ ಬೆಳಗಾವಿಯ ಮುತ್ನಾಳ ಗ್ರಾಮದಲ್ಲಿ ಪ್ರತಿಷ್ಠಾಪನೆ

ಬೆಳಗಾವಿ ಜಿಲ್ಲೆಯ ಮುತ್ನಾಳ ಗ್ರಾಮದಲ್ಲಿ ಭಗವಾನ್ ಬಾಹುಬಲಿಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು ಇದು ಉತ್ತರ ಕರ್ನಾಟಕದ ಮೊದಲ ಬಾಹಬಲಿ ವಿಗ್ರಹವಾಗಿದೆ. 21 ಅಡಿ ಎತ್ತರವಿರುವ ಈ ಗೊಮ್ಮಟೇಶ್ವರ ಮೂರ್ತಿಯನ್ನು ಬೆಂಗಳೂರಿನ ಬಿ.ಎಸ್. ನೇಮೇಶ ಮತ್ತು ಜಿ.ಎನ್‌. ಮೀನಾ ದಂಪತಿ ಮುತ್ನಾಳದ ಶ್ರೀ ಕ್ಷೇತ್ರ ಕಾಂಚನಶೃತಿ ವಿದ್ಯಾಸಂಸ್ಥೆ ಅಹಿಂಸಾ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದ್ದಾೆ. ಮಾರ್ಚ್ 13ರಿಂದ 17ರವರೆಗೆ ಇಲ್ಲಿ ಪಂಚ ಕಲ್ಯಾಣ ಮಹೋತ್ಸವ ಮತ್ತು ಮಹಾಮಸ್ತಕಾಭಿಷೇಖ ಮಹೋತ್ಸವಗಳು ಜರುಗಲಿವೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

from India & World News in Kannada | VK Polls https://ift.tt/ctrsiFJ

IND vs AUS: 'ಪಿಚ್‌ನಲ್ಲಿ ಏನೂ ಇಲ್ಲ, ಭಾರತದಲ್ಲಿ ಸ್ಪಿನ್‌ ಎದುರು ಆಡಬೇಕಷ್ಟೆ', ಎಂದ ರವೀಂದ್ರ ಜಡೇಜಾ!

Border-Gavaskar Trophy 2023: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭ ಕಂಡಿದೆ. ನಾಗಪುರದಲ್ಲಿ ಶುರುವಾಗಿರುವ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಾಬಲ್ಯ ಮೆರೆದಿದ್ದು, ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡವನ್ನು 177 ರನ್‌ಗಳಿಗೆ ಆಲ್‌ಔಟ್‌ ಮಾಡಿದೆ. ಟೀಮ್ ಇಂಡಿಯಾದ ಸ್ಟಾರ್‌ ಸ್ಪಿನ್ನರ್‌ ರವೀಂದ್ರ ಜಡೇಜಾ ಮೊದಲ ದಿನವೇ 5 ವಿಕೆಟ್‌ ಉರುಳಿಸಿ ಆಸೀಸ್‌ ಬ್ಯಾಟರ್‌ಗಳ ನಿದ್ರೆ ಕಡೆಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/KQBbtMG

IND vs AUS: ರವೀಂದ್ರ ಜಡೇಜಾ ವಿರುದ್ಧ ಆಸ್ಟ್ರೇಲಿಯಾ ಬಾಲ್‌ ಟ್ಯಾಂಪರಿಂಗ್‌ ಆರೋಪ!

Border-Gavaskar Trophy 2023: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸಲುವಾಗಿ ನಾಲ್ಕು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಪೈಪೋಟಿ ನಡೆಸುತ್ತಿವೆ. ಸರಣಿಯ ಮೊದಲ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ್ದ ಆಸ್ಟ್ರೇಲಿಯಾ ಮೊದಲ ದಿನವೇ 177 ರನ್‌ಗಳಿಗೆ ಆಲ್‌ಔಟ್‌ ಆಗಿದೆ. ಭಾರತದ ಸ್ಟಾರ್‌ ಸ್ಪಿನ್ನರ್‌ ರವೀಂದ್ರ ಜಡೇಜಾ 5 ವಿಕೆಟ್‌ ಕಿತ್ತು ಆಸೀಸ್‌ ಬ್ಯಾಟರ್‌ಗಳನ್ನು ಬೇಟೆಯಾಡಿದರು. ಆದರೆ, ಆಸ್ಟ್ರೇಲಿಯಾದ ಕ್ರಿಕೆಟ್‌ ಅಭಿಮಾನಿಗಳು ಜಡ್ಡು ವಿರುದ್ಧ ಬಾಲ್‌ ಟ್ಯಾಂಪರಿಂಗ್ ಆರೋಪ ಮಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/A9INm0g

NDRF team in Turkey: 6 ವರ್ಷದ ಬಾಲಕಿಯನ್ನು ರಕ್ಷಿಸಿದ ಭಾರತದ ಎನ್‌ಡಿಆರ್‌ಎಫ್‌ ತಂಡ, ಭಾರಿ ಮೆಚ್ಚುಗೆ

NDRF team rescues 6 year old girl: ಪ್ರಬಲ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಲ್ಲಿ (Turkey-syria) ಸಾವಿಗೀಡಾದವರ ಸಂಖ್ಯೆ 19 ಸಾವಿರ ದಾಟಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಭಾರತದಿಂದ ಎನ್‌ಡಿಆರ್‌ಎಫ್‌ನ ಮೂರು ತಂಡಗಳನ್ನು ಕಳುಹಿಸಲಾಗಿದೆ. ಅವರೊಂದಿಗೆ ವೈದ್ಯಕೀಯ ಪಡೆ ಹಾಗೂ ಶ್ವಾನ ಪಡೆ ಕೂಡ ಕಾರ್ಯಾಚರಣೆಯಲ್ಲಿದೆ. ಬಾಲಕಿಯೊಬ್ಬಳನ್ನು ತಂಡವು ರಕ್ಷಿಸಿದ್ದು, ಭಾರತೀಯರಿಂದ ತಂಡಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

from India & World News in Kannada | VK Polls https://ift.tt/3cib0Vt

Hubballi Edgah Gound Controversy-ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ನಾಮಕರಣ: ಮತ್ತೆ ಮುನ್ನಲೆಗೆ ಬಂದಿದೆ ವಿವಾದ

ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನಕ್ಕೆ ಕಿತ್ತೂರು ಚೆನ್ನಮ್ಮ ಮೈದಾನ ಎಂದು ಮಹಾನಗರ ಪಾಲಿಕೆ ಮರುನಾಮಕರಣ ಮಾಡಲು ಹೊರಟಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಮೈದಾನಕ್ಕೆ ರಾಣಿ ಚೆನ್ನಮ್ಮ ಹೆಸರಿಡಲು ಯಾರಾದರೂ ತಕರಾರು ಇದ್ದರೆ ಮೂವತ್ತು ದಿನಗಳಲ್ಲಿ ತಕರಾರು ಅರ್ಜಿ ಸಲ್ಲಿಸಲು ಪಾಲಿಕೆ ಅರ್ಜಿ ಆಹ್ವಾನಿಸಿದೆ. ಇದಕ್ಕೆ ಮುಸ್ಲಿಂ ಸಮುದಾಯದ ಮುಖಂಡರು ಆಕ್ಷೇಪ ಮಾಡಿದ್ದು ಇದೊಂದು ರಾಜಕೀಯ ಗಿಮಿಕ್ ಎಂದು ಆರೋಪಿಸಿದ್ದಾರೆ. ಇದೀಗ ಕಾಂಗ್ರೆಸ್ ಕಾಂಗ್ರೆಸ್ ಸಹ ಕಾನೂನು ಹೋರಾಟಕ್ಕೆ ಮುಂದಾಗಿದ್ದು ವಿವಾದ ಮತ್ತಷ್ಟು ಜಾಸ್ತಿಯಾಗಿದೆ.

from India & World News in Kannada | VK Polls https://ift.tt/dwSOj9R

ಆಮೆವೇಗದ ‘ಕೆಎಫ್‌ಡಿ’ ಸಂಶೋಧನೆ: ಕಾಯಿಲೆಗೆ ಇದುವರೆಗೂ ಇಲ್ಲ ಸೂಕ್ತ ಚಿಕಿತ್ಸೆ

ದೇಶದಲ್ಲಿ ವಾರ್ಷಿಕ ಸರಾಸರಿ 400-500 ಜನರಿಗೆ ಕೆಎಫ್‌ಡಿ ವೈರಾಣು ಬಾಧಿಸುತ್ತಿದೆ. ಜೊತೆಗೆ ಸಾಕಷ್ಟು ಸಾವು-ನೋವುಗಳೂ ಸಂಭವಿಸಿವೆ. ಪ್ರತಿ ಚಳಿಗಾಲದಲ್ಲಿ ಕಾಣಿಸಿಕೊಂಡು ಬೇಸಿಗೆಯುದ್ದಕ್ಕೂ ತನ್ನ ಪ್ರಭಾವ ತೋರಿ ಮಳೆಗಾಲದಲ್ಲಿ ಕಣ್ಮರೆಯಾಗುವ ಈ ಕಾಯಿಲೆಗೆ ಇದುವರೆಗೂ ಸೂಕ್ತ ಚಿಕಿತ್ಸೆ ಇಲ್ಲ. ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆಯೇ ವಿನಾ ಪ್ರತ್ಯೇಕ ಔಷಧ ಇಲ್ಲ. ಸಂಶೋಧನೆ ಮತ್ತು ಅಧ್ಯಯನಗಳಿಗೆ ಈ ಕಾಯಿಲೆ ಆಹಾರವಾಗಿದೆ. ಆದರೆ, ಇದುವರೆಗೆ ಮಲೆನಾಡಿಗರಿಗೆ ಅನುಕೂಲವಾಗಬಹುದಾದ ಸೂಕ್ತ ಚಿಕಿತ್ಸೆ ಅಥವಾ ಲಸಿಕೆ ಆವಿಷ್ಕಾರವಾಗಿಲ್ಲ.

from India & World News in Kannada | VK Polls https://ift.tt/QKVU9YJ

Bantval constituency: ಕಾಂಗ್ರೆಸ್‌ ಪ್ರಾಬಲ್ಯದ ನಡುವೆ ಬಿಜೆಪಿಗೂ ಬಲ: ಘಟಾನುಘಟಿ ನಾಯಕರನ್ನು ಕೊಟ್ಟ ಕ್ಷೇತ್ರ

ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌, ಬಿಜೆಪಿ, ಸಿಪಿಐ ಈ ಮೂರೂ ಪಕ್ಷಗಳಿಗೂ ಗೆಲುವಿನ ಬಾಗಿಲು ತೆರೆದ ಕ್ಷೇತ್ರ. ಬಂಟ್ವಾಳದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡವರು ಬೇರೆ ಕ್ಷೇತ್ರದಲ್ಲಿ ವಿಜಯಿಯಾದ ಇತಿಹಾಸವೂ ಇದೆ. ರಮಾನಾಥ ರೈ ವಿರುದ್ಧ ಬಿಜೆಪಿಯಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡ ಶಕುಂತಳಾ ಶೆಟ್ಟಿ ಪುತ್ತೂರಿನಲ್ಲಿ ಅದೃಷ್ಟ ಪರೀಕ್ಷೆಗಿಳಿದು ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷದಿಂದ ಗೆದ್ದದ್ದು ಇತಿಹಾಸ. ಬಂಟ್ವಾಳದಲ್ಲಿ ಎರಡು ಬಾರಿ ಸೋಲು ಕಂಡ ರುಕ್ಮಯ ಪೂಜಾರಿ ವಿಟ್ಲ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು.

from India & World News in Kannada | VK Polls https://ift.tt/eYircpQ

ಕರಾವಳಿಯಲ್ಲಿ ಫುಡ್‌ ಟೆಸ್ಟ್‌ ಲ್ಯಾಬ್‌ಗಳೇ ಇಲ್ಲ: ರಾಜ್ಯದಲ್ಲಿ 4 ಕಡೆ ಮಾತ್ರ ಲ್ಯಾಬ್‌ ಸೆಂಟರ್‌ ವರದಿಗೆ ಕಾಯಬೇಕು ಒಂದು ವಾರ!

​ರಾಜ್ಯದಲ್ಲಿ ವಿಭಾಗವಾರು ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಮಾತ್ರ ಆಹಾರ ಮತ್ತು ನೀರು ವಿಶ್ಲೇಷಣೆ ಪ್ರಯೋಗಾಲಯ ಇರೋದು. ಜಿಲ್ಲೆಗೊಂದರಂತೆ ಇಂತಹ ತಪಾಸಣಾ ಲ್ಯಾಬ್‌ಗಳನ್ನು ತೆರೆಯಬೇಕೆಂದು ಹಲವು ವರ್ಷಗಳಿಂದ ಪ್ರಸ್ತಾಪವಿದ್ದರೂ ಬೇಡಿಕೆ ಮಾತ್ರ ಇನ್ನೂ ಈಡೇರಲಿಲ್ಲ. ಮಂಗಳೂರಿನ ಶಕ್ತಿನಗರದಲ್ಲಿರುವ ಖಾಸಗಿ ನರ್ಸಿಂಗ್‌ ಕಾಲೇಜು ಹಾಸ್ಟೆಲ್‌ನಲ್ಲಿ ವಿಷಾಹಾರ ಸೇವಿಸಿ 139ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ವರದಿಯಾಗಿತ್ತು. ಇವರು ಸೇವಿಸಿದ ಆಹಾರಗಳನ್ನು ಪರೀಕ್ಷೆಗಾಗಿ ಬೆಂಗಳೂರಿನಲ್ಲಿರುವ ಆಹಾರ ಮತ್ತು ನೀರು ವಿಶ್ಲೇಷಣಾ ಪ್ರಯೋಗಾಲಯ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ವರದಿಗೆ ಕನಿಷ್ಠ ಒಂದು ವಾರ ಕಾಯಬೇಕಿದೆ.

from India & World News in Kannada | VK Polls https://ift.tt/RYJ9dSy

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು, ಕೇಂದ್ರಕ್ಕೆ ಶಿಫಾರಸು: ಸಿಎಂ ಬಸವರಾಜ ಬೊಮ್ಮಾಯಿ

Name Shivamogga airport after BY Yediyurappa: ಬುಧವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಗಳ ಮಹಾಪೂರವೇ ಹರಿದು ಬಂದಿತು. ಅದರಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರಿಡುವಂತೆ ಒತ್ತಾಯವೂ ಇತ್ತು. ವಿಐಎಸ್‌ಎಲ್‌ ಪುನಶ್ಚೇತನಕ್ಕೆ ಕ್ರಮವಹಿಸುವಂತೆ, ಹಿಂದುಳಿದ ವರ್ಗಕ್ಕೆ ಅನುದಾನ ಹೆಚ್ಚಿಸುವಂತೆ ಹಾಗೂ ಬಗರ್‌ ಹುಕುಂ ಹಕ್ಕು ಪತ್ರ ನೀಡುವಂತೆ ಮನವಿಗಳು ಬಂದವು. ಯಡಿಯೂರಪ್ಪ ಅವರೇ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವುದನ್ನು ಈ ಹಿಂದೆ ತಡೆದಿದ್ದರು.

from India & World News in Kannada | VK Polls https://ift.tt/HMDBqQz

CM Bommai- ಸರ್ವೆ ಕಾರ್ಯ ಪೂರ್ಣವಾಗಿದ್ದು ಶರಾವತಿ ಭೂ ಸಂತ್ರಸ್ತರಿಗೆ ಶೀಘ್ರ ಭೂ ಒಡೆತನ

ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಸಾಗುವಳಿ ಮಾಡುತ್ತಿರುವ ಭೂಮಿಯ ಸರ್ವೇ ಕಾರ್ಯ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಸಂತ್ರಸ್ತರಿಗೆ ಭೂ ಒಡೆತನ ನೀಡಲು ಸರ್ಕಾರ ಸರ್ವ ಪ್ರಯತ್ನ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಶೀಘ್ರವೇ ಕೇಂದ್ರ ಸರಕಾರಕ್ಕೆ ಸಲ್ಲಿಸಿ ಒಪ್ಪಿಗೆ ಪಡೆದು ಭೂ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

from India & World News in Kannada | VK Polls https://ift.tt/JdSfaBq

ವೀಕೆಂಡ್ ಹಂಪಿ ಟೂರ್‌ಗೆ ಡಿಮ್ಯಾಂಡ್: ಹಂಪಿ-ಅಂಜನಾದ್ರಿ-ಸಂಡೂರು , ಪ್ರವಾಸೋದ್ಯಮ ಚೇತರಿಕೆಗೆ ಕೆಕೆಆರ್‌ಟಿಸಿ ವಿಶೇಷ ಪ್ಯಾಕೇಜ್‌

ಕೆಕೆಆರ್‌ಟಿಸಿ ಹೊಸಪೇಟೆ ವಿಭಾಗದಿಂದ ವಾರಾಂತ್ಯದ ಟೂರ್‌ ಪ್ಯಾಕೇಜ್‌ನಡಿ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನಾನಾ ಕಡೆಗಳಿಂದ ಬರುವ ಬಹುತೇಕ ಪ್ರವಾಸಿಗರಿಗೆ ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಖಚಿತ ಮಾಹಿತಿ ಇರುವುದಿಲ್ಲ. ಇಂತಹ ತೊಂದರೆ ತಪ್ಪಿಸಲು ಹಾಗೂ ಪ್ರವಾಸಿಗರ ಖರ್ಚು ವೆಚ್ಚ ತಗ್ಗಿಸುವ ಉದ್ದೇಶದೊಂದಿಗೆ ಕೆಕೆಆರ್‌ಟಿಸಿ ಹೊಸ ಯೋಜನೆ ರೂಪಿಸಿದೆ. ​​ಈ ಪ್ಯಾಕೇಜ್‌ನಡಿ ಹಲವು ಪ್ರವಾಸಿಗರು, ವಾರಾಂತ್ಯದ ಶನಿವಾರ ಮತ್ತು ಭಾನುವಾರ ನಿಗದಿತ ಟಿಕೆಟ್‌ ಪಡೆದು ಒಂದೇ ಬಸ್‌ನಲ್ಲಿ ಪ್ರಯಾಣಿಸಿ ನೆಚ್ಚಿನ ತಾಣಗಳನ್ನು ನೋಡಬಹುದು.

from India & World News in Kannada | VK Polls https://ift.tt/4vbT7Z2

Mangalore: ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ: ಆಹಾರ, ನೀರು ಮಾದರಿ ಲ್ಯಾಬ್‌ಗೆ ರವಾನೆ

ಮಂಗಳೂರಿನ ಖಾಸಗಿ ಆಸ್ಪತ್ರೆ ಹಾಸ್ಟೆಲ್‌ನಲ್ಲಿ ವಿಷಾಹಾರ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಪರೀಕ್ಷೆಗಾಗಿ ಆಹಾರ, ನೀರನ್ನು ಬೆಂಗಳೂರಿನ ಲ್ಯಾಬ್‌ಗೆ ರವಾನಿಸಲಾಗಿದೆ. ಇನ್ನು ಅಡುಗೆ ಮನೆಯಲ್ಲಿ ಇಲಾಖೆಯ ಮುಂದಿನ ಆದೇಶದವರೆಗೆ ಆಹಾರ ತಯಾರಿಸದಂತೆ ಜಿಲ್ಲಾಆರೋಗ್ಯ ಇಲಾಖೆ ನಿರ್ಬಂಧಿಸಿದೆ. ಅಲ್ಲಿಯವರೆಗೆ ಮಕ್ಕಳಿಗೆ ಶುದ್ಧ ಆಹಾರ ಹಾಗೂ ನೀರನ್ನು ಪೂರೈಸುವಂತೆ ಸೂಚಿಸಲಾಯಿತು. ವಿದ್ಯಾರ್ಥಿಗಳು, ಪೋಷಕರ ಒತ್ತಾಯಕ್ಕೆ ಮಣಿದ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಕೆಲ ದಿನಗಳವರೆಗೆ ರಜೆ ನೀಡಿ ಪೋಷಕರ ಜತೆ ಊರಿಗೆ ತೆರಳಲು ಅನುಮತಿ ನೀಡಿದೆ.

from India & World News in Kannada | VK Polls https://ift.tt/qkIHUOv

ಲಂಚ ವ್ಯವಹಾರದ ಆರೋಪ, ದಾಖಲೆ ಬಿಡುಗಡೆ ಮಾಡಿದ ಎಂಎಲ್‌ಸಿ ಭೋಜೇಗೌಡ: ಪ್ರಲ್ಹಾದ್ ಜೋಶಿಯಿಂದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ

SL Bhoje Gowda vs Pralhad Joshi: ಇಬ್ಬರು ವೈದ್ಯರಿಂದ ಕೇಂದ್ರ ಸಚಿವ ಪ್ರಲ್ಹಾದ್ ಅವರ ಕಚೇರಿಯು ಲಂಚ ಸಂದಾಯ ಮಾಡಿಕೊಂಡಿರುವುದಾಗಿ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಆರೋಪಗಳೆಲ್ಲ ನಿರಾಧಾರ ಎಂದಿರುವ ಪ್ರಲ್ಹಾದ್‌ ಜೋಶಿ ಅವರು, ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಮಬ್ಬುಗೊಳಿಸಿರುವುದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದ್ದಾರೆ. ವರ್ಚಸ್ಸಿಗೆ ಧಕ್ಕೆ ತಂದಿರುವ ಕಾರಣ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.

from India & World News in Kannada | VK Polls https://ift.tt/3rwenQk

ಸಿಎಂ ಆಗಲು ಎಲ್ಲರಿಗೂ ಅವಕಾಶ, ಆಗಬಾರದು ಎಂಬುದು ಸಂವಿಧಾನ ವಿರೋಧಿ: ಮಂತ್ರಾಲಯ ಮಠದ ಸುಬುಧೇಂದ್ರ ಶ್ರೀ

Any citizen can become CM: ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದ್ದು, ಯಾವುದೇ ವ್ಯಕ್ತಿಯೂ ಮುಖ್ಯಮಂತ್ರಿ ಆಗಬಹುದು. ಬ್ರಾಹ್ಮಣ (Brahmin) ಸಮುದಾಯದವರೂ ಸಿಎಂ ಆಗಬಹುದು. ಯಾರೂ ಯಾವುದೇ ಸಮುದಾಯವನ್ನೂ ನಿಂದಿಸಬಾರದು. ಯಾರು ಸಿಎಂ ಆಗಬೇಕು ಎಂಬುದನ್ನು ಮತದಾರರು ಮತ್ತು ರಾಜಕೀಯ ಪಕ್ಷ ನಿರ್ಧರಿಸುತ್ತದೆ ಎಂದು ಮಂತ್ರಾಲಯದ ಸುಬುಧೇಂದ್ರ ತೀರ್ಥರು ಅಭಿಪ್ರಾಯ ಪಟ್ಟರು. ಬ್ರಾಹ್ಮಣ ಪ್ರಲ್ಹಾದ್‌ ಜೋಶಿ ಅವರನ್ನು ಬಿಜೆಪಿಯು ಮುಂದಿನ ಮುಖ್ಯಮಂತ್ರಿ ಮಾಡಲು ಹೊರಟಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು.

from India & World News in Kannada | VK Polls https://ift.tt/e0voByd

IND vs AUS: ಬಾಡರ್‌-ಗವಾಸ್ಕರ್‌ ಟ್ರೋಫಿಯಲ್ಲಿ ಈ ಬಾರಿ ಧೂಳೀಪಟವಾಗಬಲ್ಲ ದಾಖಲೆಗಳಿವು!

ಬೆಂಗಳೂರು: ಆಸ್ಟ್ರೇಲಿಯಾ ತಂಡ ಕೊನೇ ಬಾರಿ ಭಾರತದಲ್ಲಿ ಟೆಸ್ಟ್‌ ಸರಣಿ ಗೆದ್ದಿರುವುದು 2004-05ರಲ್ಲಿ. ಇದಾದ ಬಳಿಕ ಹಲವು ಬಾರಿ ಭಾರತಕ್ಕೆ ಬಂದರೂ ಟೆಸ್ಟ್‌ ಸರಣಿ ಗೆಲುವು ಕಾಂಗರೂ ಪಡೆಗೆ ಮರಿಚಿಕೆಯಾಗಿ ಉಳಿದಿದೆ. 2017ರಲ್ಲಿ ಕೊನೇ ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾಗ ಸ್ಟೀವ್‌ ಸ್ಮಿತ್‌ ಸಾರಥ್ಯದ ಆಸ್ಟ್ರೇಲಿಯಾ ತಂಡ 1-2 ಅಂತರದಲ್ಲಿ ಆತಿಥೇಯರಿಗೆ ಶರಣಾಗಿತ್ತು. ಆದರೆ, ಈ ಬಾರಿ ಜಯ ದಕ್ಕಿಸಿಕೊಳ್ಳುವ ಹಠಿದೊಂದಿಗೆ ವೇಗಿ ಪ್ಯಾಟ್‌ ಕಮಿನ್ಸ್‌ ಸಾರಥ್ಯದಲ್ಲಿ ಭಾರತಕ್ಕೆ ಬಂದಿದೆ. ನಾಲ್ಕು ಟೆಸ್ಟ್‌ಗಳ ಮೊದಲ ಹಣಾಹಣಿ ನಾಗ್ಪುರದ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಫೆಬ್ರವರಿ 9ರಂದು ಶುರುವಾಗಲಿದೆ.1996-97ರಲ್ಲಿ ಆರಂಭವಾದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಭಣಿಯಲ್ಲಿ ಈವರೆಗೆ ಒಟ್ಟು 15 ಸರಣಿಗಳು ನಡೆದಿದ್ದು, ಟೀಮ್ ಇಂಡಿಯಾ ಒಟ್ಟು 9 ಬಾರಿ ಟ್ರೋಫಿ ಗೆದ್ದು ಪ್ರಾಬಲ್ಯ ಮೆರೆದಿದೆ. ಕಳೆದ ಮೂರು ಆವೃತ್ತಿಗಳಲ್ಲಿ ಜಯ ದಾಖಲಿಸಿ ಹ್ಯಾಟ್ರಿಕ್‌ ಸಾಧನೆಯನ್ನೂ ಮೆರೆದಿದೆ. ಅದರಲ್ಲಿ 2018-19 ಮತ್ತು 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಂಗರೂ ಪಡೆಯನ್ನು ಅವರದ್ದೇ ಅಂಗಣದಲ್ಲಿ ಬಗ್ಗುಬಡಿದಿರುವ ಭಾರತ ತಂಡ ಈ ಬಾರಿಯೂ ಸರಣಿ ಗೆಲ್ಲುವ ಫೇವರಿಟ್‌ ತಂಡವಾಗಿದೆ.ಅಂದಹಾಗೆ ಸರಣಿ ಆರಂಭಕ್ಕೂ ಮುನ್ನ ಎರಡೂ ತಂಡಗಳು ಗಾಯದ ಸಮಸ್ಯೆಗಳ ಕಾರಣ ಕೆಲ ಪ್ರಮುಖ ಆಟಗಾರರ ಸೇವೆಯನ್ನು ಕಳೆದುಕೊಂಡಿವೆ. ಆದರೂ ಇತ್ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿಯನ್ನೇ ನಿರೀಕ್ಷಿಸಲಾಗಿದೆ. ಈ ಸಂದರ್ಭದಲ್ಲಿ 16ನೇ ಆವೃತ್ತಿಯ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ನಿರ್ಮಾಣವಾಗಲಿರುವ ಕೆಲ ದಾಖಲೆಗಳ ವಿವರ ಇಲ್ಲಿ ನೀಡಲಾಗಿದೆ.ನಾಗ್ಪುರ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌!

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/FaQXH9R

IND vs AUS: ಹೊಸ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಸುಳಿವುಕೊಟ್ಟ ಕೆ.ಎಲ್‌ ರಾಹುಲ್!

Border-Gavaskar Trophy 2023: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಗೂ ಮುನ್ನ ಟೀಮ್ ಇಂಡಿಯಾ ಸೆಲೆಕ್ಷನ್‌ ತಲೆಬಿಸಿ ಎದುರಿಸಿದೆ. ಕಳೆದ ಆರು ತಿಂಗಳಲ್ಲಿ ಓಪನರ್‌ ಆಗಿ ಆರು ಶತಕ ಬಾರಿಸಿರುವ ಶುಭಮನ್‌ ಗಿಲ್‌ ಅವರನ್ನೇ ಓಪನರ್‌ ಆಗಿ ಕಾಯ್ದುಕೊಳ್ಳುವುದೋ, ಅಥವಾ ಕೆ.ಎಲ್‌ ರಾಹುಲ್‌ ಅವರನ್ನು ಆಡಿಸುವುದೋ ಎಂಬ ಗೊಂದಲ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಮುಂದಿತ್ತು. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಉಪನಾಯಕ ಕೆ.ಎಲ್‌ ರಾಹುಲ್‌, ಹೊಸ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/sY6ejHg

ಎಚ್ ಎಎಲ್ ಸಂಸ್ಥೆ ಬಗ್ಗೆ ರಾಹುಲ್ ಹೇಳಿಕೆ: ಕ್ಷಮೆ ಯಾಚಿಸುವಂತೆ ಆರೋಗ್ಯ ಸಚಿವ ಕೆ. ಸುಧಾಕರ್ ಒತ್ತಾಯ

ಐದು ವರ್ಷಗಳ ಹಿಂದೆ ರಾಹುಲ್ ನೀಡಿದ್ದ ಹೇಳಿಕೆಗೆ ಈಗ ತಿರುಗೇಟು ನೀಡಿರುವ ಕೆ. ಸುಧಾಕರ್. ಕೇಂದ್ರ ಸರ್ಕಾರ, ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯನ್ನು (ಎಚ್ಎಎಲ್) ಅನ್ನು ದುರ್ಬಲಗೊಳಿಸಿದೆ ಎಂದು 2019ರಲ್ಲಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ. ಸೋಮವಾರದಂದು (ಫೆ. 6), ತುಮಕೂರು ಬಳಿ, ಎಚ್ಎಎಲ್ ಗೆ ಸೇರಿದ ದೇಶದ ಅತಿ ದೊಡ್ಡ ಯುದ್ಧ ಹೆಲಿಕಾಪ್ಟರ್ ಗಳ ತಯಾರಿಕಾ ಘಟಕಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ವಿರುದ್ಧ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ.

from India & World News in Kannada | VK Polls https://ift.tt/V9nDr7O

New Naadadevi Painting: ಕಲಾವಿದ ಕೆ. ಸೋಮಶೇಖರ್‌ ಅವರು ಬಿಡಿಸಿದ ನಾಡದೇವತೆಯ ಚಿತ್ರ ಅಧಿಕೃತ : ಆದೇಶ ಹೊರಡಿಸಿದ ಸರಕಾರ

New Naadadevi Painting: ಹಿಂದೆ ಬಿಕೆಎಸ್ ವರ್ಮಾ ಅವರು ರಚಿಸಿದ ಚಿತ್ರ ಅರ್ಧ ಮಾತ್ರ ಇದ್ದ ಕಾರಣ, ಈಗ ವೈಶಿಷ್ಟ್ಯಗಳನ್ನು ಒಳಗೊಂಡ ಕಲಾವಿದ ಕೆ. ಸೋಮಶೇಖರ್‌ ಅವರು ಬಿಡಿಸಿರುವ ರಾಜ್ಯದ ನಾಡದೇವತೆಯ ಪರಿಪೂರ್ಣವಾದ ಚಿತ್ರವನ್ನು ಅಧಿಕೃತಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

from India & World News in Kannada | VK Polls https://ift.tt/FbZcH4g

IND vs AUS 1st Test: ರೋಹಿತ್‌ ಶರ್ಮಾ-ಕೆ.ಎಲ್‌ ರಾಹುಲ್‌ ಓಪನರ್ಸ್‌, ಭಾರತ ಸಂಭಾವ್ಯ XI ಇಂತಿದೆ!

India's Predicted Playing XI: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೆಬ್ರವರಿ 9 ರಿಂದ ನಾಗ್ಪುರದ ವಿದರ್ಭ ಕ್ರಿಕೆಟ್‌ ಅಸೋಸಿಯಯೇಷನ್‌ ಮೈದಾನದಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಸೆಣಸಲು ಸಜ್ಜಾಗುತ್ತಿವೆ. ಈ ಪಂದ್ಯದ ಮೂಲಕ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿ ಅಧಿಕೃತವಾಗಿ ಆರಂಭವಾಗಲಿದೆ. ಎರಡನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಈ ಸರಣಿ ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಅಂದಹಾಗೆ ಆರಂಭಿಕ ಟೆಸ್ಟ್‌ಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/EIRatW2

Aaron Finch Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರೋನ್ ಫಿಂಚ್‌ ವಿದಾಯ!

Aaron Finch retires from international cricket: ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆರೋನ್ ಫಿಂಚ್‌ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ವಿಕ್ಟೋರಿಯಾ ಮೂಲಕ ಆಟಗಾರನ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನ ಅಂತ್ಯವಾಗಿದೆ. ಇಂಗ್ಲೆಂಡ್‌ ವಿರುದ್ದ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಇಲ್ಲಿಯವರೆಗೂ ಆಸ್ಟ್ರೇಲಿಯಾ ತಂಡವನ್ನು ಒಟ್ಟು 103 ಟಿ20ಐ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ ಹಾಗೂ ಇವುಗಳ ಪೈಕಿ 76 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GoW7Ef

Dr G Parameshwar- ವಿಧಾನಸೌಧದಲ್ಲಿ ಪ್ರತಿ ಕಂಬಕ್ಕೆ ಬಡಿದರೆ ಸಾಕು 40 ಪರ್ಸೆಂಟ್ ಎಂದು ಸೌಂಡ್ ಬರ್ತದೆ!

ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ವಿಧಾನಸೌಧದಲ್ಲಿರುವ ಪ್ರತಿಯೊಂದು ಕಂಬಕ್ಕೆ ಬಡಿದರೆ 40 ಪರ್ಸೆಂಟ್ ಅಂತ ಸೌಂಡ್ ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ 40% ಲಂಚ ಪಡೆದು ಆಡಳಿತ ನಡೆಸುತ್ತಿದ್ದು ಯಾವ ಪುರುಷಾರ್ಥಕ್ಕೆ ಆಡಳಿತ ಮಾಡುತ್ತಿದೆ ಎಂಬುದು ಗೊತ್ತಿಲ್ಲ ಎಂದು ಮೂದಲಿಸಿದ್ದಾರೆ.

from India & World News in Kannada | VK Polls https://ift.tt/C0gLJlE

PM Modi in Tumakuru | ಶ್ರೀ ಅನ್ನದ ಹಿನ್ನೆಲೆ ತೆರೆದಿಟ್ಟ ಪ್ರಧಾನಿ ಮೋದಿ: 'ರಾಗಿ ಮುದ್ದೆ, ರಾಗಿ ರೊಟ್ಟಿಯ ರುಚಿ ಮರೆಯೋದುಂಟೆ?'

PM Narendra Modi inaugurated HAL helicopter factory: ಎಚ್‌ಎಎಲ್‌ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ, ಇಲ್ಲಿನ ಸಿರಿಧಾನ್ಯಗಳು ಹಾಗೂ ಇಲ್ಲಿನ ಪ್ರತಿಭೆಗಳ ಕುರಿತು ಮಾತನಾಡಿದರು. ಸೋಮವಾರ ಬೆಂಗಳೂರು ಮತ್ತು ತುಮಕೂರಿಗೆ ಭೇಟಿ ನೀಡಿದ ಅವರು ಕೈಗಾರಿಕಾ ಟೌನ್‌ಶಿಪ್ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೂ ಚಾಲನೆ ನೀಡಿದರು. ಇದೇ ಸಮಯದಲ್ಲಿ ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರನ್ನು ಸ್ಮರಿಸಿದರು.

from India & World News in Kannada | VK Polls https://ift.tt/Mkd52Dj

Leopard Attack : ಚಿರತೆ ಭಯ: ಶಾಲೆಗೆ ಬರಲು ಮಕ್ಕಳ ಹಿಂದೇಟು: ಮಕ್ಕಳ ಹಾಜರಿ ಕುಸಿತ

Leopard Attack : ಮೈಸೂರು ಟಿ ನರಸೀಪುರದ ಬಹುತೇಕ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಭೀತಿ ಇದ್ದು, ಈಗಾಗಲೇ ಇಬ್ಬರು ಮಕ್ಕಳನ್ನು ಚಿರತೆ ಕೊಂದಿರುವುದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಭಯಗೊಂಡಿದ್ದಾರೆ. 30% ಶಾಲೆಗೆ ಮಕ್ಕಳ ಹಾಜರಾತಿಯೂ ಕಡಿಮೆ ಆಗಿದೆ.

from India & World News in Kannada | VK Polls https://ift.tt/bsYdoip

6 ದಶಕದಿಂದ ಕಾಡುತ್ತಿರುವ ಕೆಎಫ್‌ಡಿ: ಕಾಡಂಚಿನ ಜನರಿಗೆ ಮಂಗನ ಕಾಯಿಲೆಯಿಂದ ಸಿಕ್ಕಿಲ್ಲ ಮುಕ್ತಿ

ಮಲೆನಾಡನ್ನು ಪ್ರತಿವರ್ಷ ಕಾಡುವ ಕ್ಯಾಸನೂರು ಫಾರೆಸ್ಟ್‌ ಡೀಸಿಸ್‌ ಈ ವರ್ಷವೂ ತನ್ನ ಇರುವಿಕೆ ದಾಖಲಿಸುತ್ತಿದೆ. ಈಗಾಗಲೇ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಂದು ಶಂಕಿತ ಪ್ರಕರಣ ದಾಖಲಾಗಿವೆ. ದಶಕಗಳು ಕಳೆದರೂ ಮಂಗನ ಕಾಯಿಲೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆಯೇ ವಿನಾ ಪೂರ್ಣ ಪ್ರಮಾಣದಲ್ಲಿ ಮಟ್ಟಹಾಕಲು ಸಾಧ್ಯವಾಗಿಲ್ಲ. ಕಾಡಿನ ಜತೆಗೇ ಬದುಕುವ ಮಲೆನಾಡಿನ ಜನರಿಗೆ ಕಾಡಿಗೆ ಹೋಗಬೇಡಿ ಎಂದರೆ ಜೀವನ ಮಾಡುವುದು ಹೇಗೆ? ಜನರನ್ನು ನಿಯಂತ್ರಿಸುವುದು ಕಾಯಿಲೆಗೆ ಪರಿಹಾರವಲ್ಲ. ಸೂಕ್ತ ಮದ್ದರೆದರೆ ಮಾತ್ರ ಮಂಗನಕಾಯಿಲೆ ಮಾಯವಾದೀತು.

from India & World News in Kannada | VK Polls https://ift.tt/dhacm4s

ಬಾರ್ ನಲ್ಲಿ ಪರಿಚಯವಾದ ವ್ಯಕ್ತಿಗೆ ಮನೆಯಲ್ಲಿ ಆಶ್ರಯ ಕೊಟ್ಟು ಮೋಸಹೋದ ಟೆಕ್ಕಿ: ಬೆಳ್ಳಂದೂರಿನಲ್ಲಿ ಹೀಗೊಂದು ವಂಚನೆ ಪ್ರಕರಣ!

ಬಾರ್‌ನಲ್ಲಿ ಮದ್ಯಪಾನ ಸೇವನೆ ಮಾಡುವ ವೇಳೆ ಸಿಕ್ಕ ಅಪರಿಚಿತ ಸ್ನೇಹಿತ ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ. ಲಪಟಾಯಿಸಿದ ಪ್ರಕರಣ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ಯದ ನಶೆಯಲ್ಲಿಅಪರಿಚಿತನಿಗೆ ಮನೆಯಲ್ಲಿಆಶ್ರಯ ಕೊಟ್ಟ ಕಾರಣ ಟೆಕ್ಕಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

from India & World News in Kannada | VK Polls https://ift.tt/oQfUvgq

Namma Clinics | ಬಿಬಿಎಂಪಿ ವ್ಯಾಪ್ತಿಯಲ್ಲಿ 108 ನಮ್ಮ ಕ್ಲಿನಿಕ್‌: ಫೆ.7ರಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

Namma Clinics in Bengaluru: ನಮ್ಮ ಕ್ಲಿನಿಕ್‌ಗಳು ವಾರದಲ್ಲಿ ಆರು ದಿನ ಬೆಳಿಗ್ಗೆ ಒಂಭತ್ತರಿಂದ ತೆರೆದಿರಲಿವೆ. ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಾಲಯದ ಸಿಬ್ಬಂದಿ ಸೇರಿದಂತೆ ಆರೋಗ್ಯ ಸೇವೆ ಅಗತ್ಯವಿರುವ ಸಿಬ್ಬಂದಿ ಇರಲಿದ್ದಾರೆ. ಚುಚ್ಚುಮದ್ದು, ಗರ್ಭಿಣಿ, ನವಜಾತ ಶಿಶು ಆರೈಕೆ ಸೇರಿದಂತೆ ಹನ್ನೆರಡು ರೀತಿಯ ಚಿಕಿತ್ಸೆಗಗಳಿಗೆ ಈ ಕ್ಲಿನಿಕ್‌ಗಳಲ್ಲಿ ಅವಕಾಶವಿರಲಿದೆ. ಇದರೊಂದಿಗೆ ಸಣ್ಣ ಕಾಯಿಲೆಗಳಿಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆಯಲು ಅವಕಾಶವಿರಲಿದೆ.

from India & World News in Kannada | VK Polls https://ift.tt/NBmYZkf

Mangaluru University: ಎನ್‌ಇಪಿ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ: ​ಅನುತ್ತೀರ್ಣರಾದವರಿಗೆ ಶುಲ್ಕ- ಸಮಯ ನಷ್ಟ

ಎನ್‌ಇಪಿಯಡಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ. ವಿವಿ ಕಡೆಯಿಂದ ಮರು ಮೌಲ್ಯಮಾಪನಕ್ಕೆ ಅವಕಾಶ ಸಿಕ್ಕರೂ ಕೂಡ ಈ ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಜತೆಗೆ ಶುಲ್ಕ ಹಾಗೂ ಸಮಯ ಎರಡನ್ನೂ ಕಳೆದುಕೊಳ್ಳಲಿದ್ದಾರೆ. ​ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವರು ಎನ್‌ಇಪಿ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನದ ದಿನವನ್ನು ಫೆ.10ರಂದು ನಿಗದಿ ಮಾಡಿದ್ದಾರೆ. ಆದರೆ ಫೆ. 6ರಿಂದ ಮಂಗಳೂರು ವಿವಿ ಸೆಮಿಸ್ಟರ್‌ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆಯ ಬಳಿಕ ಮರುಮೌಲ್ಯಮಾಪನಕ್ಕೆ ಅವಕಾಶ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಈ ಅವಕಾಶ ಲಾಭವಾಗಿ ಕಾಣುತ್ತಿಲ್ಲ.

from India & World News in Kannada | VK Polls https://ift.tt/7fLFjV5

Traffic Fine 50% Discount: ಎರಡನೇ ದಿನವೂ ಭರ್ಜರಿ ಸಂಗ್ರಹ: ಸಂಚಾರ ನಿಯಮ ಉಲ್ಲಂಘನೆ: 6 ಕೋಟಿ ರೂ. ದಂಡ ಸಂಗ್ರಹ

Traffic Fine 50% Discount: ಸಂಚಾರ ನಿಯಮಗಳನ್ನು ಉಲ್ಲಂಘಿಸಿ, ದಂಡ ಪಾವತಿ ಮಾಡಲು ಸಾವಿರಾರು ರುಪಾಯಿ ಬಾಕಿ ಉಳಿಸಿಕೊಂಡಿರುವವರು, ರಿಯಾಯಿತಿಯಲ್ಲಿ ದಂಡ ಕಟ್ಟಲು ಮುಗಿಬಿದ್ದಿದ್ದಾರೆ. ಎರಡು ದಿನದಲ್ಲಿ ಒಟ್ಟು 13.18 ಕೋಟಿ ರೂಪಾಯಿ ಸಂಗ್ರಹವಾಗಿದೆ.

from India & World News in Kannada | VK Polls https://ift.tt/xLDmEQY

ಹಾಸನ ಜಿಲ್ಲೆಯ 44 ತಾಣಕ್ಕೆ ‘ಟೂರಿಸ್ಟ್‌ ಸ್ಪಾಟ್‌’ ಗರಿಮೆ: ಟೂರಿಸಂ ಇಲಾಖೆ ಪ್ರಸ್ತಾವನೆಗೆ ಸರಕಾರ ಗ್ರೀನ್‌ ಸಿಗ್ನಲ್‌

ಹಾಸನ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರಕಾರ ಅನುಮೋದನೆ ನೀಡಿದೆ. ಜಿಲ್ಲೆಯ 44 ತಾಣಕ್ಕೆ ಟೂರಿಸ್ಟ್‌ ಸ್ಪಾಟ್ ಗರಿಮೆ ಸಿಕ್ಕಿದೆ. 44 ತಾಣಗಳು ಸುಂದರವಾಗಿ ಅಭಿವೃದ್ಧಿಯಾದರೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬೂಸ್ಟರ್‌ ಸಿಗಲಿದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರವಾಸಿ ಕೇಂದ್ರ ಎಂದು ಗುರುತಿಸಿ ಅಭಿವೃದ್ಧಿಪಡಿಸಿದರೆ ಸಾಲದು ಜೊತೆಗೆ ಸಂಪರ್ಕ ರಸ್ತೆ, ಸಾರ್ವಜನಿಕ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಒದಗಿಸಬೇಕು. ಆಗ ಮಾತ್ರ ಪ್ರವಾಸಿಗರನ್ನು ಆಕರ್ಷಿಸುವ ಜತೆಗೆ ಯಶಸ್ಸು ಕಾಣಲು ಸಾಧ್ಯ.

from India & World News in Kannada | VK Polls https://ift.tt/WAwGJB7

IND vs AUS: ಭಾರತ ಟೆಸ್ಟ್‌ ತಂಡಕ್ಕೆ ಮರಳುವ ಬಗ್ಗೆ ಸುಳಿವು ನೀಡಿದ ಹಾರ್ದಿಕ್ ಪಾಂಡ್ಯ!

Hardik Pandya provides big update on his red-ball future: ಹಾರ್ದಿಕ್ ಪಾಂಡ್ಯ ಸದ್ಯ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಗಾಯದಿಂದ ಗುಣಮುಖರಾಗಿ ಸಂಪೂರ್ಣ ಫಿಟ್ನೆಸ್‌ಗೆ ಮರಳಿದ ಬಳಿಕ ಟಿ20 ಹಾಗೂ ಏಕದಿನ ಸ್ವರೂಪದಲ್ಲಿ ಅವರು ಪ್ರಾಬಲ್ಯ ಸಾಧಿಸಿದ್ದಾರೆ. 2018ರ ನಂತರ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಇದೀಗ ಸೀಮಿತ ಓವರ್‌ಗಳ ಸ್ವರೂಪದಲ್ಲಿ ಮಿಂಚುತ್ತಿರುವ ಅವರು ಟೆಸ್ಟ್‌ ಕ್ರಿಕೆಟ್‌ಗೆ ಮರಳುವ ಬಗ್ಗೆ ಮಹತ್ತರ ನಿರ್ಧಾರ ಪ್ರಕಟಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/gTFQ03h

ಜೆಡಿಎಸ್‌ನಿಂದ ದೂರ ಉಳಿಯುವೆ, ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವೆ:ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ

ಈಗಾಗಲೇ ಜೆಡಿಎಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿರುವ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರು ಪಕ್ಷ ಬಿಡುವ ಸೂಚನೆ ನೀಡಿದ್ದಾರೆ. ಪಕ್ಷ ಬಿಡುವ ಬಗ್ಗೆ ಯಾವತ್ತೂ ಯೋಚನೆ ಮಾಡಿರಲಿಲ್ಲ. ಮಾಜಿ ಸಚಿವ ರೇವಣ್ಣನವರ ಮನೆ ಮುಂದೆ ನನಗೆ ಟಿಕೆಟ್ ಕೊಡದಂತೆ ಕೆಲವರು ನಡೆಸಿದ ಪ್ರತಿಭಟನೆಯಿಂದಾಗಿ ಮನಸ್ಸಿಗೆ ಬಹಳ ನೋವಾಗಿದೆ. ಹೀಗಾಗಿ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ತಿಳಿಸಿದ್ದಾರೆ.

from India & World News in Kannada | VK Polls https://ift.tt/6zUJMAK

HD Kumaraswamy | ಬಿಜೆಪಿ ವಿಜಯ ಸಂಕಲ್ಪ ಬದಲು ಸಿ.ಡಿ. ಸಂಕಲ್ಪ ಯಾತ್ರೆ ಮಾಡಲಿ: ಪಂಚರತ್ನ ಯಾತ್ರೆಗೆ ವ್ಯಂಗ್ಯವಾಡಿದ ಪ್ರಹ್ಲಾದ ಜೋಶಿಗೆ ತಿರುಗೇಟು

ಪಂಚರತ್ನ ರಥಯಾತ್ರೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಬಗ್ಗೆ ಕಿಡಿಕಿಡಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರು ವಿಜಯ ಸಂಕಲ್ಪ ಯಾತ್ರೆ ಬದಲು ಸಿ.ಡಿ.ಸಂಕಲ್ಪ ಯಾತ್ರೆ ಮಾಡಿದರೆ ಲೇಸು ಎಂದು ಕಟಕಿಯಾಡಿದ್ದಾರೆ. ಜೊತೆಗೆ ಕೇಂದ್ರ ಸಚಿವರಾಗಿ ಉತ್ತರ ಕರ್ನಾಟಕಕ್ಕೆ ಪ್ರಹ್ಲಾದ್ ಜೋಶಿ ಅವರ ಕೊಡುಗೆ ಏನು? ಅದೇ ಧೂಳು ತುಂಬಿದ ರಸ್ತೆಗಳು, ಸ್ವಚ್ಛತೆ ಇಲ್ಲದ ಗ್ರಾಮಗಳನ್ನು ಅವರು ಎಂದಾದರೂ ನೋಡಿದ್ದಾರೆಯೇ? ಮೋದಿ ಸರಕಾರದ ಸ್ವಚ್ಛ ಭಾರತದ ಹಣೆಬರಹ ಏನಾಗಿದೆ ಎನ್ನುವುದನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಿಗೆ ಹೋಗಿ ನೋಡಲಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

from India & World News in Kannada | VK Polls https://ift.tt/2skS65Z

IND vs AUS: ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌!

IND vs AUS: ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌!

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/fLVHsjN

ಮಂತ್ರಾಲಯ ಹುಂಡಿಗೆ ಹಣದ ಹೊಳೆ: 30 ದಿನಗಳಲ್ಲಿ 3.21 ಕೋಟಿ ರೂ. ಸಂಗ್ರಹ

ಭಕ್ತರ ಭೇಟಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆದಾಯ ಹೆಚ್ಚಳವಾಗಿದೆ. ​ ಕಳೆದ ಮೂವತ್ತು ದಿನಗಳಲ್ಲಿ ಒಟ್ಟು 3.21 ಕೋಟಿ ರೂ. ಹುಂಡಿಯಲ್ಲಿ ಭಕ್ತರು ಕಾಣಿಕೆಯ ರೂಪದಲ್ಲಿ ಸಲ್ಲಿಸಿರುವುದು ಹುಂಡಿ ಎಣಿಕೆಯಿಂದ ಪತ್ತೆಯಾಗಿದೆ. ತಿರುಪತಿಯಂತೆಯೇ ಮಂತ್ರಾಲಯಕ್ಕೂ ಆಗಮಿಸುವ ಭಕ್ತರ ಸಂಖ್ಯೆ ಅಪರಿಮಿತ. ಅದರಲ್ಲೂ ಕೋವಿಡ್‌ ನಂತರದಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸುವವರ ಸಂಖ್ಯೆ ದುಪ್ಪಟ್ಟಾಗಿದೆ ಅಂತಾ ಹೇಳಲಾಗ್ತಿದೆ. ​ಪ್ರತಿ ವರ್ಷ ಆರಾಧನೆ ವೇಳೆ ದೊರೆಯುತ್ತಿದ್ದ ಆದಾಯಕ್ಕಿಂತ ಇದೀಗ ಪ್ರತಿ ತಿಂಗಳು ಕಾಣಿಕೆಯ ಆದಾಯ ಹೆಚ್ಚಾಗುತ್ತಿದೆ.

from India & World News in Kannada | VK Polls https://ift.tt/ueEOSmo

‘ಸಂಕಷ್ಟ ಪರಿಹಾರ’ಕ್ಕೆ ಸಂಕಷ್ಟ: ಸಬ್ಸಿಡಿ ಡೀಸೆಲ್‌ ಮೇಲೆ ಹೆಚ್ಚುವರಿ ಶುಲ್ಕ ಹೇರಿಕೆ: ಮೀನುಗಾರರಿಂದ ಆಕ್ಷೇಪ

ರಾಜ್ಯದಲ್ಲಿ ಸಂಕಷ್ಟ ಪರಿಹಾರ ಯೋಜನೆಯಡಿ ಫಲಾನುಭವಗಳಿಗೆ 1.90 ಕೋಟಿ ರೂ. ಪರಿಹಾರ ಪಾವತಿಸುವುದು ಬಾಕಿ ಇದೆ. ಅದಕ್ಕೆ ಅನುದಾನ ಒದಗಿಸುವಂತೆ ಮೀನುಗಾರಿಕೆ ಇಲಾಖೆಯು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಆರ್ಥಿಕ ಇಲಾಖೆಯು ದೋಣಿಗಳಿಗೆ ಡೀಸೆಲ್‌ ಭರ್ತಿ ಸಮಯದಲ್ಲಿಯೇ ಡೀಸೆಲ್‌ ವಿತರಣೆ ಪ್ರಮಾಣದ ಶೇ.1.5ರಷ್ಟು ಹಣವನ್ನು ಮೀನುಗಾರರಿಂದ ಕಡ್ಡಾಯವಾಗಿ ಸಂಗ್ರಹ ಮಾಡುವಂತೆ ಸೂಚಿಸಿದೆ. ಡೀಸೆಲ್‌ ದರ ದುಬಾರಿಯಾಗಿರುವ ಹೊತ್ತಲ್ಲಿ ಈಗ ಮತ್ತಷ್ಟು ಶುಲ್ಕ ಹೇರಿಕೆ ಮಾಡಿರುವುದು ಮೀನುಗಾರರ ಆಕ್ಷೇಪಕ್ಕೆ ಕಾರಣವಾಗಿದೆ. ಸಬ್ಸಿಡಿ ಡೀಸೆಲ್‌ ಮೇಲೆ ಶುಲ್ಕ ಹೇರುವ ಮೂಲಕ ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಿದೆ.

from India & World News in Kannada | VK Polls https://ift.tt/gIOLatB

ಪುತ್ತೂರು | ಕಾರಿಗೆ ಡಿಕ್ಕಿಯಾದ ನಾಯಿ ನಾಪತ್ತೆ: ಕಾರು 70 ಕಿ.ಮೀ. ಚಲಿಸಿದ ಬಳಿಕ ಬಂಪರ್‌ನೊಳಗೆ ಶ್ವಾನ ಪ್ರತ್ಯಕ್ಷ!

Dog inside car bumper: ರಸ್ತೆ ಮಧ್ಯೆ ಕಾರಿಗೆ ನಾಯಿಯೊಂದು ಡಿಕ್ಕಿಯಾಗಿತ್ತು. ಅಪಘಾತದ ಬಳಿಕ ಕಾರು ನಿಲ್ಲಿಸಿ ಸುತ್ತಮುತ್ತ ಹುಡುಕಾಡಿದರೂ ನಾಯಿ ಪತ್ತೆಯಾಗಿರಲಿಲ್ಲ. ಅನಂತರ ಸುಮಾರು 70 ಕಿ.ಮೀ ಸಂಚರಿಸಿ ಪುತ್ತೂರು ತಲುಪುತ್ತಿದ್ದಂತೆ ಕಾರಿನ ಬಂಪರ್‌ನಲ್ಲಿ ಶ್ವಾನ ಇರುವುದು ಕಂಡು ಬಂದಿದೆ.

from India & World News in Kannada | VK Polls https://ift.tt/Swf9q1J

ಅಕ್ಕಿ ಆಲೂರು: ಮದುವೆ ಮನೆಯಲ್ಲೇ ರಕ್ತದಾನ ಮಾಡಿದ ವರ, ಶುಭಕೋರಲು ಬಂದವರೂ ರಕ್ತ ಕೊಟ್ಟರು!

Blood donation on Wedding Day: ತುರ್ತು ಅವಶ್ಯಕತೆ ಎದುರಾದಾಗ ರಕ್ತ ಸಿಗುವಂತೆ ಮಾಡಲು ರಕ್ತದ ಸಂಗ್ರಹ ಆಗುವುದು ಅವಶ್ಯವಾಗಿರುತ್ತದೆ. ರಕ್ತದಾನ ಮಾಡುವುದನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ವರನೊಬ್ಬ ತನ್ನ ಮದುವೆಯಲ್ಲೇ ರಕ್ತದಾನ ಶಿಬಿರನ್ನು ಹಮ್ಮಿಕೊಳ್ಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮದುವೆ ಶುಭಕೋರಲು ಬಂದವರೂ ರಕ್ತದಾನ ಮಾಡಿದ್ದಾರೆ. ರಕ್ತದಾನಿಗಳ ತವರೂರು ಎಂದೇ ಹೆಸರಾಗಿರುವ ಹಾನಗಲ್‌ನ ಅಕ್ಕಿ ಆಲೂರಿನಲ್ಲಿ ಈ ಘಟನೆ ನಡೆದಿದೆ.

from India & World News in Kannada | VK Polls https://ift.tt/qtsBIXv

Student Fainted in Exam Centre: ಪರೀಕ್ಷಾ ಕೊಠಡಿಯಲ್ಲಿ ಹುಡುಗಿಯರನ್ನು ಕಂಡು ಬೆದರಿ ಹಾಸಿಗೆ ಹಿಡಿದ ವಿದ್ಯಾರ್ಥಿ!

Bihar Student Fainted in Exam Centre: 12ನೇ ತರಗತಿ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿ, ಪರೀಕ್ಷಾ ಕೇಂದ್ರದಲ್ಲಿ ಸುಮಾರು 500 ಹೆಣ್ಣುಮಕ್ಕಳ ನಡುವೆ ತಾನೊಬ್ಬನೇ ಹುಡುಗ ಇರುವುದು ಎಂದು ತಿಳಿದು ಕಂಗಾಲಾಗಿ ಜ್ವರಪೀಡಿತನಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

from India & World News in Kannada | VK Polls https://ift.tt/4VbGMmC

IND vs AUS: ಆಸ್ಟ್ರೇಲಿಯಾ ತಂಡದ 'ಮೈಂಡ್‌ ಗೇಮ್‌'ಗೆ ದಿಟ್ಟ ಉತ್ತರ ಕೊಟ್ಟ ರವಿಚಂದ್ರನ್ ಅಶ್ವಿನ್!

Border-Gavaskar Trophy 2023: ಪ್ರತಿಷ್ಠಿತ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಪ್ಯಾಟ್‌ ಕಮಿನ್ಸ್‌ ಸಾರಥ್ಯದ ಆಸ್ಟ್ರೇಲಿಯಾ ತಂಡ ಈಗಾಗಗಲೇ ಭಾರತಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕಠಿಣ ಸಮರಾಭ್ಯಾಸ ನಡೆಸುತ್ತಿದೆ. ಈ ನಡುವೆ ಅಭ್ಯಾಸ ಪಂದ್ಯಗಳನ್ನು ಆಡಿ ಪ್ರಯೋಜನವಿಲ್ಲ ಎಂದು ಆಸೀಸ್‌ ಆಟಗಾರು ನಾಲಿಗೆ ಹರಿಬಿಡುವ ಮೂಲಕ ಮೈಂಡ್‌ ಗೇಮ್ಸ್‌ ಶುರು ಮಾಡಿದ್ದು, ಇದಕ್ಕೆ ಟೀಮ್ ಇಂಡಿಯಾ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಖಡಕ್ ಉತ್ತರ ಕೊಟ್ಟಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CYDRXig

‘ಅಘನಾಶಿನಿ'ಗೆ ಶೀಘ್ರ ರಾಮಸಾರ್‌ ಸೈಟ್‌ ಮಾನ್ಯತೆ: ಕೇಂದ್ರದಿಂದ ಘೋಷಣೆಯಷ್ಟೇ ಬಾಕಿ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ತದಡಿಯಲ್ಲಿ ಸಮುದ್ರ ಸೇರುವ ಅಘನಾಶಿನಿ ನದಿಯು ಅತ್ಯಂತ ಪರಿಸರ ಸೂಕ್ಷ್ಮ ನದಿ. ಅಲ್ಲಿನ ಅಳಿವೆ ಕಾಂಡ್ಲಾ ಸಂಪತ್ತಿನೊಂದಿಗೆ ಜೀವ ವೈವಿಧ್ಯ ತಾಣವಾಗಿದೆ. ಅಲ್ಲಿ ಚಿಪ್ಪಿ ಗಣಿಗಾರಿಕೆಯಿಂದ ನದಿ ಅಪಾಯಕ್ಕೆ ಸಿಲುಕಿತ್ತು. ಅಘನಾಶಿನಿ ನದಿಯು ರಾಮಸಾರ್‌ ಸೈಟ್‌ ಆಗಿ ಶೀಘ್ರದಲ್ಲಿಯೇ ಘೋಷಣೆ ಆಗುವ ಸಾಧ್ಯತೆ ಇದೆ. ಬುಧವಾರ ಬಜೆಟ್‌ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೊಸ ರಾಮಸಾರ್‌ ಸೈಟ್‌ಗಳನ್ನು ಘೋಷಣೆ ಮಾಡಿ ಉದ್ಯೋಗ, ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಬಗ್ಗೆ ಹೇಳಿದ್ದರು.

from India & World News in Kannada | VK Polls https://ift.tt/fNM5Lx3

ಉಜಿರೆಯಲ್ಲಿ ಫೆ.3ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ: ರಜತ ವರ್ಷದ ಆಚರಣೆಗೆ ಅದ್ದೂರಿ ಸಿದ್ಧತೆ

ಫೆಬ್ರವರಿ 3ರಿಂದ ಮೂರು ದಿನಗಳ ಕಾಲ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ 5ನೇ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಾಹಿತ್ಯ ಸಮ್ಮೇಳನವು ‘ಸಾಹಿತ್ಯ-ಸಾಮರಸ್ಯ-ಸಮೃದ್ಧಿ’ ಎಂಬ ಆಶಯದೊಂದಿಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸಾವಿರಾರು ಸಾಹಿತ್ಯಾಸಕ್ತರನ್ನು ನಿರೀಕ್ಷಿಸಲಾಗಿದೆ. ಕಾರ್ಯಕ್ರಮವು ಹಲವು ಸಾಹಿತ್ಯಾಸಕ್ತರ ವಿಚಾರ, ಮಾಹಿತಿಗಳಿಗೆ ತೆರೆದುಕೊಳ್ಳಲಿದೆ. ಡಾ.ಹೇಮಾವತಿ ವೀ.ಹೆಗ್ಗಡೆ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಸಂಜೆ 5 ಗಂಟೆಗೆ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ ಸಮ್ಮೇಳನ ಉದ್ಘಾಟಿಸಲಿದ್ದಾರೆ.

from India & World News in Kannada | VK Polls https://ift.tt/fP12Lrm

ಕರಾವಳಿ ಬಿಜೆಪಿಯಲ್ಲಿ ಅಮಿತ್‌ ಶಾ ಭೇಟಿ ಸಂಚಲನ: ಆಂತರಿಕ ವರದಿಯ ಮೇಲೆ ಕ್ರಮ ಸಂಭವ

ಫೆ.11ರಂದು ಅಮಿತ್‌ ಶಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸುತ್ತಿದ್ದಾರೆ. ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ಸಮಾವೇಶ ಇದಾಗಿದ್ದರೂ, ಚುನಾವಣೆ ಹೊಸ್ತಿಲಲ್ಲಿರುವ ಕಾರಣ ಕುತೂಹಲ ಕೆರಳಿಸಿದೆ. ಹೈಕಮಾಂಡ್‌ ಪ್ರತೀ ಜಿಲ್ಲೆಯಿಂದಲೂ ಖಾಸಗಿ ಅಧ್ಯಯನ ಸಂಸ್ಥೆಗಳ ಮೂಲಕ ಗ್ರೌಂಡ್‌ ರಿಪೋರ್ಟ್‌ ಪಡೆದುಕೊಂಡಿದೆ. ಯಾವ ಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗಿದೆ, ಎಲ್ಲಿ ವೀಕ್‌ ಆಗಿದೆ ಎಂಬ ವರದಿಯ ಜತೆಗೆ ಪ್ರತೀ ಶಾಸಕರ ಬಗ್ಗೆಯೂ ವರದಿ ತರಿಸಿಕೊಂಡಿದೆ. ಹೈಕಮಾಂಡ್‌ ತರಿಸಿಕೊಂಡ ವರದಿ ಯಾವುದೇ ಕ್ಷೇತ್ರದಲ್ಲೂ ಲೆಕ್ಕಾಚಾರ ಬುಡಮೇಲು ಮಾಡಬಹುದು.

from India & World News in Kannada | VK Polls https://ift.tt/eXGWoZP

Traffic Fine | ಸಂಚಾರ ನಿಯಮ ಉಲ್ಲಂಘಿಸಿದ್ರಾ? ಇಲ್ಲಿದೆ ನಿಮಗೆ ಶುಭ ಸುದ್ದಿ: ಈಗಲೇ ದಂಡ ಕಟ್ಟಿದರೆ ಶೇ 50 ಡಿಸ್ಕೌಂಟ್‌!

Traffic violation fine: ಸಂಚಾರ ನಿಯಮ ಉಲ್ಲಂಘಿಸಿರುವ ನೂರಾರು ಪ್ರಕರಣಗಳು ಬಾಕಿ ಉಳಿದಿವೆ. ಆ ಪ್ರಕರಣಗಳಲ್ಲಿ ಪಾವತಿಯಾಗಬೇಕಿರುವ ದಂಡದ ಪ್ರಮಾಣ 1300 ಕೋಟಿ ರೂಪಾಯಿ ದಾಟುತ್ತದೆ. ದಂಡ ಪಾವತಿಯ ಮೂಲಕ ಪ್ರಕರಣಗಳನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸರಕಾರವು ಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಈ ಹಿಂದೆ ತೆಲಂಗಾಣದಲ್ಲಿ ನೀಡಿದ್ದಂತೆ ರಾಜ್ಯದಲ್ಲೂ ದಂಡದ ಮೊತ್ತದ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿದೆ.

from India & World News in Kannada | VK Polls https://ift.tt/bdpTY57

Cyber Fraud: ಫಾಸ್ಟ್ಯಾಗ್‌ ರೀಚಾರ್ಜ್‌ ಮಾಡಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ಉಡುಪಿಯ ನಿವೃತ್ತ ಲೆಕ್ಕಿಗ

FASTag recharge: ಹಣಕಾಸು ವ್ಯವಹಾರದಲ್ಲಿ ಒಟಿಪಿ ಎಂಬ ಭದ್ರತಾ ವ್ಯವಸ್ಥೆಯನ್ನು ಸುಲಭವಾಗಿ ದಾಟಿ ಸೈಬರ್‌ ವಂಚನೆ ನಡೆಸುತ್ತಿರುವ ಜಾಲ ದೊಡ್ಡದಿದೆ. ಹಿರಿಯ ನಾಗರಿಕರು ಅಥವಾ ಆನ್‌ಲೈನ್‌ನಲ್ಲಿ ಮಾಹಿತಿ ಹುಡುಕಾಡಿ, ಸಹಾಯವಾಣಿಗಳಿಗೆ ಕರೆ ಮಾಡುವವರನ್ನು ಗುರಿಯಾಗಿಸಿಕೊಂಡು ಇಂಥ ಅಪರಾಧಗಳು ನಡೆಯುತ್ತಿವೆ. ಉಡುಪಿಯಲ್ಲೂ ಇಂಥದ್ದೇ ಒಂದು ಪ್ರಕರಣದಲ್ಲಿ ನಿವೃತ್ತ ಲೆಕ್ಕಿಗರೊಬ್ಬರು ಸುಮಾರು ಒಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

from India & World News in Kannada | VK Polls https://ift.tt/AMsldoE

ಸಾಲದ ಶೂಲಕ್ಕೆ ಬೇಸತ್ತ ಒಂದೇ ಕುಟುಂಬದ 7 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಯತ್ನ: ಮಹಿಳೆ ಸಾವು

ಸಾಲಭಾಧೆಗೆ ಬೇಸತ್ತು ಒಂದೇ ಕುಟುಂಬದ 7 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿ ಅವರಲ್ಲಿ ಒಬ್ಬ ಮಹಿಳೆ ಮೃತಪಟ್ಟಿರುವ ದಾರುಣ ಘಟನೆ ರಾಮನಗರದಿಂದ ವರದಿಯಾಗಿದೆ. ಉಳಿದ 6 ಮಂದಿಯಲ್ಲಿ ಮೂವರು ಮಕ್ಕಳಾಗಿದ್ದು ಎಲ್ಲರ ಪರಿಸ್ಥಿತಿಯೂ ಗಂಭೀರವಾಗಿದೆ. ರಾಮನಗರ ಜಿಲ್ಲಾಸ್ಪತ್ಪೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

from India & World News in Kannada | VK Polls https://ift.tt/UC1fjlF

Congress Protest In Mysuru Corporation - ಮೈಸೂರು ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ: ಪಾಲಿಕೆಯಲ್ಲಿ ಹೈಡ್ರಾಮಾ, ಪ್ರತಿಭಟನೆ

ಗುರುವಾರ ನಡೆಯಬೇಕಿದ್ದ ಮೈಸೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಲ್ಪಟ್ಟಿರುವುದು ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆ ಮುಂದೂಡಿಕೆ ಮತ್ತು ಮೇಯರ್ ಶಿವಕುಮಾರ್ ಗೈರುಹಾಜರಿಯನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಕೌನ್ಸಿಲ್ ಸಭಾಂಗಣಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೇಯರ್ ಶಿವಕುಮಾರ್, ಜೆಡಿಎಸ್ ನ ಕೆಲ ಸದಸ್ಯರು ಚುನಾವಣೆ ನಡೆಸದಂತೆ ಮನವಿ ಮಾಡಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಶೀಘ್ರವೇ ಚುನಾವಣೆ ದಿನಾಂಕರನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

from India & World News in Kannada | VK Polls https://ift.tt/wGi8rqW

Delhi Mayor Election: ಕಿತ್ತಾಟದ ನಡುವೆ ಮೂರನೇ ಮುಹೂರ್ತ!: ದಿಲ್ಲಿ ಮೇಯರ್‌ ಆಯ್ಕೆಗೆ ಫೆ. 6ಕ್ಕೆ ಚುನಾವಣೆ

Delhi Mayor Election: ದಿಲ್ಲಿಯಲ್ಲಿ ಪಾಲಿಕೆ ಚುನಾವಣೆ ನಡೆದು ಎರಡು ತಿಂಗಳು ಕಳೆದರೂ ಈವರೆಗೂ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಸಾಧ್ಯವಾಗಿಲ್ಲ. ಆಯ್ಕೆ ಪ್ರಕ್ರಿಯೆಗೆ ಕಳೆದ ಎರಡು ಬಾರಿ ನಡೆದಿದ್ದ ಸಭೆ ಗದ್ದಲದಲ್ಲಿಯೇ ಮುಗಿದುಹೋಗಿದ್ದವು. ಈಗ ಮೂರನೇ ಪ್ರಯತ್ನ ನಡೆಯಲಿದೆ.

from India & World News in Kannada | VK Polls https://ift.tt/ZMezxDl

ಮಲೆನಾಡಲ್ಲಿ ಭರಪೂರ ಮಾವಿನ ಸಿಹಿ ಅನುಮಾನ: ಅವಧಿ ಮೀರುತ್ತಿದ್ದರೂ ಮೂಡದ ಹೂವು, ಶೇ.25ರಷ್ಟು ಬೆಳೆ ಅಂದಾಜು

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಹಳಿಯಾಳ, ಅಂಕೋಲಾ ಭಾಗದಲ್ಲಿ ಹೆಚ್ಚಿನ ಮಾವಿನ ಬೆಳೆ ಬೆಳೆಯಲಾಗುತ್ತದೆ. ಆ ಭಾಗದಲ್ಲಿ ಸ್ವಲ್ಪ ಹೂವಾಡಿದೆ. ಆದರೆ ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಾತ್ರ ಈ ಬಾರಿ ಮಾವಿನ ಫಸಲು ಅಷ್ಟಕ್ಕಷ್ಟೇ ಎಂಬ ಸ್ಥಿತಿಯಿದೆ. ರೈತರು ಹೇಳುವ ಪ್ರಕಾರ ಶೇ.25ರಷ್ಟು ಬೆಳೆ ಬರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಕೆಲವು ಮರಗಳು ಹೂವಾಡಬೇಕೋ ಅಥವಾ ಚಿಗುರೊಡೆಯಬೇಕೋ ಎಂಬ ಗೊಂದಲದಲ್ಲೇ ಇನ್ನೂ ಖಾಲಿ ನಿಂತಿವೆ. ಮುಂಗಾರು ಮಳೆ ತಡವಾಗಿ ಮುಗಿರುವುದರ ಪರಿಣಾಮ ಎನ್ನಲಾಗುತ್ತಿದೆ.

from India & World News in Kannada | VK Polls https://ift.tt/93e4Pmc

Adani Enterprises FPO: 20,000 ಕೋಟಿ ರೂ. ಮೌಲ್ಯದ ಎಫ್‌ಪಿಒ ಹಿಂಪಡೆದ ಅದಾನಿ ಗ್ರೂಪ್‌, ಹೂಡಿಕೆದಾರರಿಗೆ ಹಣ ವಾಪಸ್‌

Adani calls off FPO: ಹಿಂಡನ್‌ಬರ್ಗ್‌ ವರದಿಯ ಪರಿಣಾಮವಾಗಿ ಹೂಡಿಕೆದಾರರು ಅದಾನಿ ಸಮೂಹದ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಕೇಂದ್ರ ಬಜೆಟ್‌ ಮಂಡನೆಯ ದಿನವಾದ ಬುಧವಾರ ಅದಾನಿ ಎಂಟರ್‌ಪ್ರೈಸಸ್‌ ಷೇರು ಶೇ 26ಕ್ಕೆ ಹೆಚ್ಚು ಕುಸಿತ ದಾಖಲಿಸಿದೆ. ಇದರಿಂದಾಗಿ ಅದಾನಿ ಸಮೂಹದ ಸಂಪತ್ತು ಇಳಿಮುಖವಾಗಿದೆ ಹಾಗೂ ಹೂಡಿಕೆದಾರರು ಅತಂತ್ರಕ್ಕೆ ಸಿಲುಕಿದ್ದಾರೆ. ಮಂಗಳವಾರವಷ್ಟೇ ಪೂರ್ಣಗೊಂಡ ಕಂಪನಿಯ ಎಫ್‌ಪಿಒ ಪ್ರಕ್ರಿಯೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.

from India & World News in Kannada | VK Polls https://ift.tt/KdkABJY

ಯುವಕನ ಕೊಂದು ಚಾರ್ಮಾಡಿ ಘಾಟ್‌ನಲ್ಲಿ ಮೃತದೇಹ ಎಸೆದಿದರು: ಕೊಲೆಗೈದ ದುಷ್ಕರ್ಮಿಗಳ ಬಂಧನ

Murder case: ಅಕ್ಕನ ಮಗಳ ಜೊತೆಗೆ ಸಲುಗೆ ಬೇಡ ಎಂದು ಎಚ್ಚರಿಕೆ ಕೊಡಲು ಯುವಕನೊಬ್ಬನನ್ನು ಕಟ್ಟಿ ಹಾಕಿದ್ದ ಆರೋಪಿಯು, ಆತನ ಮೇಲೆ ಹಲ್ಲೆ ನಡೆಸಿದ್ದ. ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದ. ಮೃತ ದೇಹವನ್ನು ಕಾರಿನಲ್ಲಿಟ್ಟುಕೊಂಡು ಮೂಡಿಗೆರೆ ಕಡೆಗೆ ಹೊರಟ ಆರೋಪಿಗಳು ಅರಣ್ಯ ಪ್ರದೇಶದಲ್ಲಿ ಶವ ಎಸೆದು ಬಂದರು. ಯುವಕ ಕಾಣೆಯಾಗಿರುವ ದೂರಿನ ಪ್ರಕರಣವನ್ನು ಬೆನ್ನತ್ತಿದ ಪೊಲೀಸರಿಗೆ ಕೊಲೆ ಪ್ರಕರಣ ಪತ್ತೆಯಾಗಿದೆ.

from India & World News in Kannada | VK Polls https://ift.tt/clCAmn4

IPL 2023: ಐಪಿಎಲ್ ಇತಿಹಾಸದಲ್ಲಿ ತಾವೆದೆರುಸಿದ ಕಠಿಣ ಬೌಲರ್ ಹೆಸರಿಸಿದ ಕ್ರಿಸ್ ಗೇಲ್!

Chris Gayle Picks Toughest Bowler In IPL: ಕ್ರಿಕೆಟ್ ಲೋಕದ ಸ್ವಘೋಷಿತ ಯುನಿವರ್ಸ್‌ ಬಾಸ್, ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಹಲವು ದಾಖಲೆ ನಿರ್ಮಿಸಿ ಮಿಂಚಿದ್ದಾರೆ. ಬೌಲರ್‌ಗಳ ಎದೆ ನಡುಗುವಂತಹ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಅಜಾನುಬಾಹು ಎಡಗೈ ಬ್ಯಾಟರ್‌ ಕ್ರಿಸ್ ಗೇಲ್, ಇದೀಗ ಐಪಿಎಲ್ ಟೂರ್ನಿಯಲ್ಲಿ ತಾವೆದುರಿಸಿದ ಅಂತ್ಯಂತ ಕಠಿಣ ಬೌಲರ್ ಯಾರೆಂದು ಹೇಳಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್‌ನ ವೇಗಿ ಬಗ್ಗೆ ಗುಣಗಾನ ಮಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3AIZ8bm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...