ದೇಶದಲ್ಲಿ ವಾರ್ಷಿಕ ಸರಾಸರಿ 400-500 ಜನರಿಗೆ ಕೆಎಫ್‌ಡಿ ವೈರಾಣು ಬಾಧಿಸುತ್ತಿದೆ. ಜೊತೆಗೆ ಸಾಕಷ್ಟು ಸಾವು-ನೋವುಗಳೂ ಸಂಭವಿಸಿವೆ. ಪ್ರತಿ ಚಳಿಗಾಲದಲ್ಲಿ ಕಾಣಿಸಿಕೊಂಡು ಬೇಸಿಗೆಯುದ್ದಕ್ಕೂ ತನ್ನ ಪ್ರಭಾವ ತೋರಿ ಮಳೆಗಾಲದಲ್ಲಿ ಕಣ್ಮರೆಯಾಗುವ ಈ ಕಾಯಿಲೆಗೆ ಇದುವರೆಗೂ ಸೂಕ್ತ ಚಿಕಿತ್ಸೆ ಇಲ್ಲ. ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆಯೇ ವಿನಾ ಪ್ರತ್ಯೇಕ ಔಷಧ ಇಲ್ಲ. ಸಂಶೋಧನೆ ಮತ್ತು ಅಧ್ಯಯನಗಳಿಗೆ ಈ ಕಾಯಿಲೆ ಆಹಾರವಾಗಿದೆ. ಆದರೆ, ಇದುವರೆಗೆ ಮಲೆನಾಡಿಗರಿಗೆ ಅನುಕೂಲವಾಗಬಹುದಾದ ಸೂಕ್ತ ಚಿಕಿತ್ಸೆ ಅಥವಾ ಲಸಿಕೆ ಆವಿಷ್ಕಾರವಾಗಿಲ್ಲ.
from India & World News in Kannada | VK Polls https://ift.tt/QKVU9YJ