ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಜನರು ಜೀವಭಯದಲ್ಲೇ ದಿನದೂಡುವಂತಾಗಿದೆ. ಆನೆಗಳ ಹಾವಳಿ ವಿಪರೀತ ಇರುವ ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆ ರಚಿಸಿ ರಾಜ್ಯ ಸರ್ಕಾರ ಆದೇಶವೇನೋ ಹೊರಡಿಸಿದೆ. ಆದರೆ ಶುಕ್ರವಾರ ಮಂಡಿಸಿರೋ ಬಜೆಟ್‌ನಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ದಕ್ಷಿೞಣ ಕನ್ನಡ ಜಿಲ್ಲೆಯನ್ನು ಮರೆತೇ ಬಿಟ್ಟಿದ್ದಾರೆ. ಚಾಮರಾಜನಗರ, ಮಂಡ್ಯ ಜಿಲ್ಲೆಯನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿದ್ದರು ಆದರೆ ದಕ್ಷಿಣ ಕನ್ನಡ ಜಿಲ್ಲೆ ಮರೆತೇ ಬಿಟ್ಟಿದ್ದಾರೆ. ವಿಪರ್ಯಾಸ ಅಂದರೆ ಆನೆ ಕಾರ್ಯಪಡೆ ರಚಿಸುವ ಬಗ್ಗೆ ಸರಕಾರಕ್ಕೆ ಇದುವರೆಗೂ ಪ್ರಸ್ತಾವನೆಯೇ ಹೋಗದಿರೋದು.
from India & World News in Kannada | VK Polls https://ift.tt/Ctk59V4