ಇದೋರ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಬುಧವಾರದಿಂದ (ಮಾರ್ಚ್ 1) ಆರಂಭವಾಗುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೆಣಸಲಿವೆ. ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಸಲುವಾಗಿ ಭಾರತ ತಂಡಕ್ಕೆ ಮೂರನೇ ಟೆಸ್ಟ್ ಅತ್ಯಂತ ನಿರ್ಣಾಯಕವಾಗಿದೆ. ಈಗಾಗಲೇ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿರುವ ಭಾರತ ತಂಡ, ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಈ ಸರಣಿಯನ್ನು ತನ್ನದಾಗಿಸಿಕೊಳ್ಳಲು ಭಾರತ ತಂಡಕ್ಕೆ ಇನ್ನೊಂದು ಗೆಲುವು ಅಗತ್ಯವಿದೆ. ಸರಣಿ ಗೆಲ್ಲುವ ಜತೆಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೂ ಅರ್ಹತೆ ಪಡೆದುಕೊಳ್ಳಲಿದೆ.ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯರಾಗಿದ್ದಾರೆ. ಮತ್ತೊಂದೆಡೆ ವಿವಿಧ ಕಾರಣಗಳಿಂದ ಡೇವಿಡ್ ವಾರ್ನರ್ (ಗಾಯ), ಜಾಶ್ ಹೇಝಲ್‌ವುಡ್(ಗಾಯ), ಅಷ್ಟನ್ ಎಗರ್ ಹಾಗೂ ಲ್ಯಾನ್ಸ್ ಮಾರಿಸ್ ಆಸ್ಟ್ರೇಲಿಯಾ ತಂಡದಿಂದ ಹೊರ ಬಿದ್ದಿದ್ದಾರೆ.ಅಂದಹಾಗೆ ಮೂರನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಯಾವುದೇ ಬದಲಾವಣೆ ಮಾಡುವುದು ಅನುಮಾನವಾಗಿದೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಕೆ.ಎಲ್ ರಾಹುಲ್‌ಗೆ ದೀರ್ಘಾವಧಿ ಅವಕಾಶ ನೀಡುವ ಸಲುವಾಗಿ ಈ ಪಂದ್ಯದಲ್ಲಿ ಆಡಿಸಬಹುದಾಗಿದೆ. ಹಾಗಾಗಿ, ಶುಭಮನ್ ಗಿಲ್ ಮೂರನೇ ಪಂದ್ಯದಲ್ಲಿಯೂ ಬೆಂಚ್ ಕಾಯಬೇಕಾಗುತ್ತದೆ.ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್‌ಗೆ ಭಾರತ ಸಂಭಾವ್ಯ ಪ್ಲೇಯಿಂಗ್ XI
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/pE91ySV
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...
-
ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ...
-
ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಮತ್ತಿತರ ಹೂವು ಖರೀದಿ ಕೇಂದ್ರಗಳು ಹಾಗೂ ಇಲ್ಲಿನ ಬೃಹತ್ ಮಾರುಕಟ್ಟೆ ವ್ಯವಸ್ಥೆಯೂ ಬೆಂಗಳೂರು ಸುತ್ತಮುತ್ತ ಹೂ...
-
ಬೆಂಗಳೂರು: ಇಡೀ ಜಗತ್ತಿಗೆ ಮಾರಕವಾಗಿದ್ದ ಕೊರೊನಾ ಎಂಬ ವೈರಸ್ನ ಅಂತ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೊರೊನಾ ಸಂಹರಿಸಲು ಕೊರೊನಾ ಲಸಿಕೆಗಳು ಈಗಾಗಲೇ ಲಗ್ಗೆ ಇಟ್ಟ...
-
- ರಮೇಶ್ ಕುಮಾರ್ ನಾಯಕ್ ಅಂದು ಸಂಜೆ, ಅಮ್ಮಾ ಎರಡೇ ಗಂಟೆಯೊಳಗೆ ವಾಪಸ್ ಬರುತ್ತೇನೆ ಎಂದು ಮನೆಯ ಹೊಸ್ತಿಲು ದಾಟಿ ಹೋಗಿದ್ದಳು ಮಗಳು. ರಾತ್ರಿ ಗಂಟೆ ಎಂಟಾದರೂ ಬಾರ...