ಬಸನನ ಬಾಗೇವಾಡಿಯಲ್ಲಿ ಕೆಲವು ತಿಂಗಳುಗಳ ಹಿಂದೆ ನಮ್ಮ ಕ್ಲಿನಿಕ್ ಶುರು ಮಾಡಲಾಗಿದೆ. ಇಲ್ಲಿನ ಪ್ರಾಂತ್ಯದಲ್ಲಿರುವ ಜನತೆಗೆ ಕಡಿಮೆ ಖರ್ಚಿನಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುವುದು ಈ ನಮ್ಮ ಕ್ಲಿನಿಕ್ ಸ್ಥಾಪನೆಯ ಉದ್ದೇಶವಾಗಿದೆ. ಆದರೆ, ಇಲ್ಲಿಗೆ ಬರುವ ರೋಗಿಗಳಿಗೆ ಇಲ್ಲಿರುವ ವೈದ್ಯರು ರಕ್ತ, ಮೂತ್ರ ಮತ್ತಿತರ ಪರೀಕ್ಷೆಗಳಿಗಾಗಿ ತಾಲೂಕು, ಜಿಲ್ಲಾ ಕೇಂದ್ರಗಳ ದೊಡ್ಡ ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸುತ್ತಿದ್ದಾರೆ. ಹೀಗಾಗಿ, ಇಲ್ಲಿಯ ಜನರಿಗೆ ನಮ್ಮ ಕ್ಲಿನಿಕ್ ಸೌಲಭ್ಯ ಎಟುಕದಂತಾಗಿದೆ. ನಮ್ಮ ಕ್ಲಿನಿಕ್ ಗಳ ಜೊತೆಗೆ ಲ್ಯಾಬ್ ಗಳೂ ಇದ್ದರೆ ಅನುಕೂಲವಾಗುತ್ತದೆ.
from India & World News in Kannada | VK Polls https://ift.tt/cF1NXyk