ಜನವರಿ ಒಂದರಿಂದ ಮಾರ್ಚ್ 31ರವೆಗೂ ರಾಗಿ ಖರೀದಿಗೆ ಸರ್ಕಾರ ಮುಂದಾಗಿದೆ. ಈ ಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 200-300 ಕ್ವಿಂಟಲ್ ಲೆಕ್ಕದಲ್ಲಿ ರಾಗಿ ಖರೀದಿಯನ್ನ ಸರ್ಕಾರ ಮಾಡಿದೆ. ಪ್ರತಿ ಕ್ವಿಂಟಲ್ ರಾಗಿಗೆ 3,578 ರೂಪಾಯಿ ಬೆಂಬಲ ಬೆಲೆಯಿದ್ದು, ಈ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ಈ ನಡುವೆ ಕೆಲ ರೈತರು ದೊಡ್ಡ ಹಡುವಳಿ ದಾರರಿಂದ ರಾಗಿ ಕೊಂಡು ತಮ್ಮ ಹೆಸರಲ್ಲಿ ಸರ್ಕಾರಕ್ಕೆ ಬೆಂಬಲ ಬೆಲೆ ಹೆಸರಲ್ಲಿ ರಾಗಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ದೊಡ್ಡ ಹಿಡುವಳಿದಾರರಿಗೂ ರಾಗಿ ಮಾರಟಕ್ಕೆ ಅವಕಾಶ ನೀಡಲು ಆಗ್ರಹಿಸಿದ್ದಾರೆ.
from India & World News in Kannada | VK Polls https://ift.tt/kIUWGNi