ಈ ಭಾಗದ ರೈತರ ಜೀವನಾಡಿಯಾಗಿರುವ ಅಯ್ಯನಕೆರೆ ಮಂಗಳವಾರ ಭರ್ತಿಯಾಗಿದ್ದು, ಕೃಷಿಕರ ಮೊಗದಲ್ಲಿ ಸಂತಸ ಮೂಡಿಸಿದೆ. ಜತೆಗೆ ಪ್ರವಾಸಿಗರನ್ನೂ ಕೈಬೀಸಿ ಕರೆಯುತ್ತಿದೆ. ಪಟ್ಟಣ ಸಮೀಪದಲ್ಲಿರುವ ಅಯ್ಯನಕೆರೆ ಸುಂದರ ಪ್ರಕೃತಿಯ ರಮ್ಯ ಪರಿಸರದಲ್ಲಿ ವೇದಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು, 900 ವರ್ಷಗಳ ಇತಿಹಾಸವಿದೆ. ಈ ಕೆರೆಯು 7 ಗುಡ್ಡಗಳನ್ನು ಸುತ್ತುವರಿದಿದ್ದು, ಕೆರೆಯ ಮೇಲಿಂದ ಬೀಸುವ ತಂಗಾಳಿ ವಿಶಿಷ್ಟ ಅನುಭವ ನೀಡುತ್ತದೆ. ಕೃಷಿಗೆ ಅನುಕೂಲವಾಗಲೆಂದು ನಿರ್ಮಿಸಿದ ಅಯ್ಯನಕೆರೆ ಸುಮಾರು 1.574 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ. ಸುಮಾರು ಹನ್ನೆರೆಡು ಎಂಸಿಯುಎಂ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
from India & World News in Kannada | VK Polls https://ift.tt/5bjC91R