ಗುರುವಾರ ರಾತ್ರಿ ಮುಂಬೈನ ಬ್ರೆಬೌರ್ನ್ ಸ್ಟೇಡಿಯಂನಲ್ಲಿ ನಡೆದಿದ್ದ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದೊಡ್ಡ ಮೊತ್ತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತಂಡ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಸೋಲಿನ ಬಳಿಕ ಮಾತನಾಡಿದ ಸಿಎಸ್‌ಕೆ ನಾಯಕ ರವೀಂದ್ರ ಜಡೇಜಾ, ಪಂದ್ಯದಲ್ಲಿದ್ದ ಇಬ್ಬನಿಯಿಂದಾಗಿ ಚೆಂಡು ಜಾಸ್ತಿ ತೇವ ಆಗಿತ್ತು. ಈ ಕಾರಣದಿಂದ ಚೆಂಡು ಸರಿಯಾಗಿ ಗ್ರಿಪ್ ಸಿಗುತ್ತಿರಲಿಲ್ಲ. ಹಾಗಾಗಿ ಮುಂದಿನ ಪಂದ್ಯಕ್ಕೆ ನಾವು ತೇವದ ಚೆಂಡಿನಲ್ಲಿ ಅಭ್ಯಾಸ ನಡೆಸಿಕೊಂಡು ಮರಳುತ್ತೇವೆಂದು ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Oac8Nmn
IPL 2022: 211 ರನ್ ಚೇಸ್‌ಗೆ ರೂಪಿಸಿದ್ದ ಗೇಮ್ ಪ್ಲಾನ್ ತಿಳಿಸಿದ ಆಯುಷ್ ಬದೋನಿ!
ಗುರುವಾರ ರಾತ್ರಿ ಮುಂಬೈನ ಬ್ರೆಬೌರ್ನ್ ಸ್ಟೇಡಿಯಂನಲ್ಲಿ ನಡೆದಿದ್ದ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದೊಡ್ಡ ಮೊತ್ತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತಂಡ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಆ ಮೂಲಕ ಹದಿನೈದನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಖನೌ ಬ್ಯಾಟ್ಸ್‌ಮನ್ ಆಯುಷ್ ಬದೋನಿ, ಚೇಸ್ ವೇಳೆ ಡ್ವೇನ್ ಬ್ರಾವೊ ಬೌಲಿಂಗ್‌ನಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಬಾರದೆಂದು ಟೀಮ್ ಮ್ಯಾನೇಜ್‌ಮಂಟ್ ಯೋಜನೆ ರೂಪಿಸಿತ್ತು ಎಂದು ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/cbEki56
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/cbEki56
IPL 2022: 19ನೇ ಓವರ್ ಶಿವಂ ದುಬೇಗೆ ನೀಡಲು ಕಾರಣ ತಿಳಿಸಿದ ಸ್ಟಿಫೆನ್ ಫ್ಲೆಮಿಂಗ್!
ಗುರುವಾರ ರಾತ್ರಿ ಮುಂಬೈನ ಬ್ರೆಬೌರ್ನ್ ಸ್ಟೇಡಿಯಂನಲ್ಲಿ ನಡೆದಿದ್ದ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದೊಡ್ಡ ಮೊತ್ತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತಂಡ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಆ ಮೂಲಕ ಹದಿನೈದನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಸ್‌ಕೆ ಹೆಡ್ ಕೋಚ್ ಸ್ಟಿಫೆನ್ ಫ್ಲೆಮಿಂಗ್, ಪಂದ್ಯದಲ್ಲಿದ್ದ ಇಬ್ಬನಿ ಒಂದು ರೀತಿ ನೈಗಾರಾ ಫಾಲ್ಸ್ ರೀತಿ ಕಂಡು ಬಂದಿತ್ತು ಎಂದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/jp4CGH0
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/jp4CGH0
CRPF ಕ್ಯಾಂಪ್ ಮೇಲೆ ಬಾಂಬ್ ಎಸೆದಿದ್ದ ಬುರ್ಖಾಧಾರಿ ಮಹಿಳೆ ಬಂಧನ!
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲಿ ಬುರ್ಖಾ ಧರಿಸಿ ಬಂದು ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಬಾಂಬ್ ಎಸೆದು ಪರಾರಿಯಾಗಿದ್ದ ಮಹಿಳೆಯನ್ನು ಬಂಧಿಸುವಲ್ಲಿ ಜಮ್ಮು ಮತು ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯ ವಿರುದ್ಧ ಈ ಹಿಂದೆಯೇ ಯುಎಪಿಎ ಕಾಯ್ದೆ ಅಡಿಯಲ್ಲಿ ಮೂರು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
from India & World News in Kannada | VK Polls https://ift.tt/VE0jWrL
from India & World News in Kannada | VK Polls https://ift.tt/VE0jWrL
ಬಾಬರ್-ಇಮಾಮ್ ಶತಕ, ಆಸ್ಟ್ರೇಲಿಯಾ ಎದುರು ದಾಖಲೆಯ ಜಯ ದಕ್ಕಿಸಿಕೊಂಡ ಪಾಕಿಸ್ತಾನ!
ಪ್ರವಾಸಿ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನಾಡುತ್ತಿರುವ ಪಾಕಿಸ್ತಾನ ತಂಡ, ಎರಡನೇ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಅದರಲ್ಲೂ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ 349 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ದಾಖಲೆಯ ಗೆಲುವನ್ನು ತನ್ನದಾಗಿಸಿಕೊಂಡಿದೆ. ನಾಯಕ ಬಾಬರ್ ಆಝಮ್ ಮತ್ತು ಇನ್ ಫಾರ್ಮ್ ಓಪನರ್ ಇಮಾಮ್ ಉಲ್ ಹಕ್ ಬಾರಿಸಿದ ಶತಕಗಳ ಬಲದಿಂದ ಪಾಕಿಸ್ತಾನ ಸ್ಮರಣೀಯ ಜಯ ತನ್ನದಾಗಿಸಿಕೊಂಡಿದೆ. 3 ಪಂದ್ಯಗಳ ಸರಣಿ 2ನೇ ಪಂದ್ಯದ ಅಂತ್ಯಕ್ಕೆ 1-1 ಅಂತರದ ಸಮಬಲದಲ್ಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/oZVFrLT
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/oZVFrLT
'ನಾವು ಗೆಲ್ಲಲು ಬಯಸುತ್ತೇವೆ, ಆದರೆ ಎದುರಾಳಿಗಳ ಮೇಲೆ ಹಿಂಸಾಚಾರ ನಡೆಸಿ ಅಲ್ಲ': ಅಮಿತ್ ಶಾ
ನಾವು ನಮ್ಮ ಸಿದ್ಧಾಂತ, ಕಾರ್ಯಕ್ರಮಗಳು, ನಾಯಕತ್ವದ ಜನಪ್ರಿಯತೆ ಮತ್ತು ಸರ್ಕಾರದ ಸಾಧನೆಗಳ ಆಧಾರದಲ್ಲಿ ಎಲ್ಲ ಕಡೆಯೂ ಚುನಾವಣೆಯಲ್ಲಿ ಸ್ಪರ್ಧಿಸಿ ಹೋರಾಡಲು ಮತ್ತು ಗೆಲ್ಲಲು ಬಯಸುತ್ತೇವೆಯೇ ವಿನಾ ಎದುರಾಳಿ ಪಕ್ಷಗಳ ಕಾರ್ಯಕರ್ತರ ಮೇಲೆ ಹಿಂಸಾಚಾರ ನಡೆಸುವ ಮೂಲಕ ಅಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ವಿರುದ್ಧ ಲೋಕಸಭೆಯಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ. ಟಿಎಂಸಿ ಸಂಸದ ಸೌಗತಾ ರಾಯ್ ನೀಡಿದ ಹೇಳಿಕೆಗೆ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.
from India & World News in Kannada | VK Polls https://ift.tt/PX5Kp91
from India & World News in Kannada | VK Polls https://ift.tt/PX5Kp91
Russia-Ukraine Crisis: ತಮ್ಮವರೇ ತಪ್ಪುದಾರಿಗೆ ಎಳೆದಿದ್ದಕ್ಕೆ ಪುಟಿನ್ ಸಿಟ್ಟಾಗಿದ್ದಾರೆ: ಅಮೆರಿಕ ಹೊಸ ತಂತ್ರ
ಉಕ್ರೇನ್ ಮೇಲಿನ ರಷ್ಯಾ ದಾಳಿಯು ದುರ್ಬಲವಾಗಿದೆ. ಜತೆಗೆ ಪಶ್ಚಿಮ ದೇಶಗಳ ನಿರ್ಬಂಧಗಳಿಂದ ರಷ್ಯಾ ಆರ್ಥಿಕ ಸ್ಥಿತಿ ಹದಗೆಡುತ್ತಿದೆ. ಆದರೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಲಹೆಗಾರರು ಈ ಸತ್ಯವನ್ನು ಅವರಿಗೆ ಹೇಳಿಲು ಭಯ ಪಡುತ್ತಿದ್ದಾರೆ. ತಮ್ಮದೇ ಸೇನೆಯ ಜನರಿಂದ ತಪ್ಪು ದಾರಿಗೆ ಎಳೆಯುತ್ತಿರುವ ಬಗ್ಗೆ ಪುಟಿನ್ ಕೋಪಗೊಂಡಿದ್ದಾರೆ ಎಂದು ಅಮೆರಿಕ ಹೇಳಿದೆ.
from India & World News in Kannada | VK Polls https://ift.tt/N9SHLo2
from India & World News in Kannada | VK Polls https://ift.tt/N9SHLo2
IPL 2022: ಆರ್‌ಸಿಬಿ ವಿರುದ್ಧ ಸೋತರೂ ಈ ಒಂದು ಕಾರಣಕ್ಕೆ ಖುಷಿಪಟ್ಟ ಶ್ರೇಯಸ್ ಅಯ್ಯರ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಆರನೇ ಪಂದ್ಯದಲ್ಲಿ ಮೂರು ವಿಕೆಟ್‌ನಿಂದ ಸೋಲು ಅನುಭವಿಸಿದ ಹೊರತಾಗಿಯೂ ತಂಡದ ಪ್ರದರ್ಶನದ ಬಗ್ಗೆ ಕೋಲ್ಕತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಸಂತಸ ವ್ಯಕ್ತಪಡಿಸಿದ್ದಾರೆ. ಟೂರ್ನಿಯುದ್ದಕ್ಕೂ ನಾವು ಇದೇ ಮೈಂಡ್‌ಸೆಟ್‌ನಿಂದ ಆಡುತ್ತೇವೆ ಹಾಗೂ ಇಲ್ಲಿ ನಾವು ಮಾಡಿದ ತಪ್ಪುಗಳನ್ನು ಮುಂದಿನ ಪಂದ್ಯದಲ್ಲಿ ತಿದ್ದಿಕೊಳ್ಳುತ್ತೇವೆಂದು ಅವರು ತಿಳಿಸಿದ್ದಾರೆ. ಏಪ್ರಿಲ್ 1 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/bEATM7O
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/bEATM7O
ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಿಎಂ ಇಬ್ರಾಹಿಂ ಗುರುವಾರ ಅಧಿಕೃತವಾಗಿ ರಾಜೀನಾಮೆ ಸಲ್ಲಿಕೆ
ವಿಧಾನಸೌಧದ ಮೊಗಸಾಲೆಯಲ್ಲಿ ಸಿದ್ಧರಾಮಯ್ಯ ಅವರು ಸಿಎಂ ಇಬ್ರಾಹಿಂಗೆ ಪಕ್ಷ ಬಿಟ್ಟು ಹೋಗದಂತೆ ಸೂಚಿಸಿದ್ದರು. ಮಾತುಕತೆಗೆ ಬರುತ್ತೇನೆ ಎಂದು ತಿಳಿಸಿದ್ದರು. ಹಾಗಿದ್ದರೂ ಇಬ್ರಾಹಿಂ ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ.
from India & World News in Kannada | VK Polls https://ift.tt/jyLO42m
from India & World News in Kannada | VK Polls https://ift.tt/jyLO42m
IPL 2022: ಎಂಎಸ್ ಧೋನಿಯಂತೆ ದಿನೇಶ್ ಕಾರ್ತಿಕ್ ತಾಳ್ಮೆಯ ವ್ಯಕ್ತಿ ಎಂದ ಡು ಪ್ಲೆಸಿಸ್!
ಬುಧವಾರ ರಾತ್ರಿ ನಡೆದಿದ್ದ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 6ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ 2022ರ ಟೂರ್ನಿಯಲ್ಲಿ ಮೊಟ್ಟ ಮೊದಲ ಗೆಲುವು ತನ್ನದಾಗಿಸಿಕೊಂಡಿತು. ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಕೊನೆಯ ಒತ್ತಡದ ಸನ್ನಿವೇಶವನ್ನು ತಾಳ್ಮೆಯಿಂದ ನಿರ್ವಹಿಸಿ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lmGYTZf
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lmGYTZf
ಗ್ರಾಮ ವಾಸ್ತವ್ಯ ಆಪರೇಷನ್ ಕಮಲದ ಭಾಗವೇ?: ಬಿಜೆಪಿಗೆ ಕಿಚಾಯಿಸಿದ ಬಿಕೆ ಹರಿಪ್ರಸಾದ್
ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು 30-40 ವರ್ಷದಿಂದ ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಿಸುವ ಪರಿಪಾಠವಿತ್ತು. ಜನರು ಚಪ್ಪಲಿ ಸವೆಸಿದರೂ ಕೆಲಸಗಳು ಆಗುತ್ತಿರಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆ ಶುರು ಮಾಡಬೇಕಾಯಿತು
from India & World News in Kannada | VK Polls https://ift.tt/E8Dx3wG
from India & World News in Kannada | VK Polls https://ift.tt/E8Dx3wG
ಎಸ್‌ಆರ್‌ಎಚ್ ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದೇಗೆಂದು ತಿಳಿಸಿದ ಸಂಜು ಸ್ಯಾಮ್ಸನ್!
ಸನ್‌ರೈಸರ್ಸ್ ಹೈದರಬಾದ್ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವಿನ ಬಳಿಕ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸಂತಸ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಧಿಕಾರಯುತ ಪ್ರದರ್ಶನದ ತೋರಿದ ತಮ್ಮ ಯುವ ಪಡೆಯನ್ನು ಮುಕ್ತಕಂಠದಿಂದ ಗಣಗಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂದ್ಯದಲ್ಲಿ ಎದುರಾಳಿ ತಂಡವನ್ನು ಕಟ್ಟಿ ಹಾಕಲು ರೂಪಿಸಿದ್ದ ಗೇಮ್ ಪ್ಲಾನ್ ಏನು? ಎಂಬಿತ್ಯಾದಿ ಅಂಶಗಳನ್ನು ಅವರು ಬಹಿರಂಗಪಡಿಸಿದ್ದಾರೆ. 27 ಎಸೆತಗಳಲ್ಲಿ 55 ರನ್ ಸಿಡಿಸಿದ ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lputHMv
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lputHMv
ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಖಾಲಿ ಇವೆ 50,161 ಹುದ್ದೆಗಳು
ಉಡುಪಿ ಹಾಗೂ ಕರಾವಳಿ ಜಿಲ್ಲೆಗಳ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿ ಕಂಡು ಬರುತ್ತಿಲ್ಲ. ಆದರೆ ಉತ್ತರ ಕರ್ನಾಟಕ ಭಾಗಗಳಲ್ಲಿ ಈ ಸಮಸ್ಯೆ ದೊಡ್ಡ ಪ್ರಮಾಣದಲ್ಲಿದೆ.
from India & World News in Kannada | VK Polls https://ift.tt/VfOrU6Y
from India & World News in Kannada | VK Polls https://ift.tt/VfOrU6Y
Russia-Ukraine Crisis: 'ಉಕ್ರೇನಿಯನ್ನರು ಮುಗ್ಧರಲ್ಲ!': ರಷ್ಯಾ ಭರವಸೆ ಬಗ್ಗೆಯೇ ಅಧ್ಯಕ್ಷ ಜೆಲೆನ್ಸ್ಕಿ ಶಂಕೆ
ಉಕ್ರೇನ್ ರಾಜಧಾನಿ ಕೀವ್ ಹಾಗೂ ಇತರೆ ಪ್ರಮುಖ ನಗರಗಳಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಸಂಧಾನ ಮಾತುಕತೆ ಸಂದರ್ಭದಲ್ಲಿ ರಷ್ಯಾ ನೀಡಿರುವ ಭರವಸೆ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಶಂಕೆ ವ್ಯಕ್ತಪಡಿಸಿದ್ದಾರೆ. ರಷ್ಯಾ ಮಾಡಿರುವ ಶಪಥವನ್ನು ನಂಬಲು ಉಕ್ರೇನಿಯನ್ನರು ಮುಗ್ಧರಲ್ಲ ಎಂದು ಅವರು ಹೇಳಿದ್ದಾರೆ. ಈ 34 ದಿನಗಳ ದಾಳಿಯಲ್ಲಿ ಮತ್ತು ಡಾನ್‌ಬಾಸ್‌ನಲ್ಲಿ ಕಳೆದ ಎಂಟು ವರ್ಷಗಳ ಯುದ್ಧದಲ್ಲಿ ಉಕ್ರೇನಿಯನ್ನರು ಈಗಾಗಲೇ ಸಾಕಷ್ಟು ಕಲಿತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
from India & World News in Kannada | VK Polls https://ift.tt/u35t8ci
from India & World News in Kannada | VK Polls https://ift.tt/u35t8ci
ಕೋಚ್‌ಗಳಿಂದ ಬೈಸಿಕೊಂಡಿದ್ದ ಅಪರೂಪದ ಘಟನೆ ನೆನೆದ ಕೆ.ಎಲ್ ರಾಹುಲ್!
ಇತ್ತೀಚೆಗೆ 'ಬ್ರೇಕ್ ಫಾಸ್ಟ್ ವಿಥ್ ಚಾಂಪಿಯನ್ಸ್' ಚಾಟ್ ಶೋನಲ್ಲಿ ಮಾತನಾಡಿದ ಕೆ.ಎಲ್ ರಾಹುಲ್, ಕರ್ನಾಟಕ ತಂಡದ ಪರ ಆಡಿದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ರಾಜ್ಯ ತಂಡದ ಜೊತೆ ದಿಲ್ಲಿಯಲ್ಲಿದ್ದಾಗ ಮಯಾಂಕ್ ಅಗರ್ವಾಲ್ ಜೊತೆ ಹೊರಗಡೆ ಹೋಗಿ ತಡವಾಗಿ ಬಂದಿದ್ದರಿಂದ ಕೋಚ್‌ಗಳು ನಮ್ಮನ್ನು ಬೈದಿದ್ದರು ಎಂಬ ಸಂಗತಿಯನ್ನು ರಾಹುಲ್ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕೆ.ಎಲ್ ರಾಹುಲ್ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ, ಮಯಾಂಕ್ ಅಗರ್ವಾಲ್ ಅವರು ಪಂಜಾಬ್ ಕಿಂಗ್ಸ್ ತಂಡದ ಸಾರಥ್ಯವನ್ನು ವಹಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/MQfjmXP
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/MQfjmXP
ಯೋಗಿ ಆದಿತ್ಯನಾಥ್ ಪದಗ್ರಹಣದ ವೇಳೆ ದಂಗೆಗೆ ಎಸ್‌ಪಿ ಸಂಚು! ಪ್ರಯತ್ನ ವಿಫಲಗೊಳಿಸಿದ್ದ ಪೊಲೀಸರು
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಮಾಣವಚನದ ವೇಳೆ ಭಾರೀ ಪ್ರಮಾಣದ ದಂಗೆಗೆ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಸಂಚಿನ ಹಿಂದೆ ಸಮಾಜವಾದಿ ಪಕ್ಷದ ನಾಯಕರು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಉದ್ದೇಶಿತ ದಂಗೆಯನ್ನು ಶಮನಗೊಳಿಸಿ ಪೊಲೀಸರು ಪರಿಸ್ಥಿತಿಯನ್ನಯ ತಮ್ಮ ಕೈಗೆ ತೆಗೆದುಕೊಂಡಿದ್ದರು.
from India & World News in Kannada | VK Polls https://ift.tt/958u3Ph
from India & World News in Kannada | VK Polls https://ift.tt/958u3Ph
ಶೇನ್ ವಾಟ್ಸನ್ ಹೆಸರಲ್ಲಿದ್ದ ದೊಡ್ಡ ದಾಖಲೆ ಮುರಿದ ಸಂಜು ಸ್ಯಾಮ್ಸನ್!
2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿ ನೇಮಕಗೊಂಡ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್, ಐಪಿಎಲ್ 2022 ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ದೊಡ್ಡ ದಾಖಲೆ ಒಂದನ್ನು ಮುರಿದಿದ್ದಾರೆ. ಮಂಗಳವಾರ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಅಬ್ಬರಿಸಿದ ಸಂಜು, 27 ಎಸೆತಗಳಲ್ಲಿ 55 ರನ್‌ಗಳನ್ನು ಸಿಡಿಸಿದರು. ಇದರೊಂದಿಗೆ ತಮ್ಮ ವೃತ್ತಿ ಬದುಕಿನಲ್ಲಿ ರಾಯಲ್ಸ್ ತಂಡದ ಪರ 100ನೇ ಪಂದ್ಯವನ್ನಾಡಿದ ಸಂಜು, ಬರೋಬ್ಬರಿ 5 ಸಿಕ್ಸರ್ ಸಿಡಿಸಿ ವಿಶೇಷ ದಾಖಲೆ ಬರೆದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CDy43qE
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CDy43qE
ಆರ್ಥಿಕ ಬಿಕ್ಕಟ್ಟಿನಿಂದ ಲಂಕಾದಲ್ಲಿ ತಲ್ಲಣ: ಎಲ್ಲ ರೀತಿಯ ಸಹಕಾರದ ಭರವಸೆ ನೀಡಿದ ಜೈಶಂಕರ್
ವಿದೇಶಿ ವಿನಿಮಯ ಬಿಕ್ಕಟ್ಟಿನ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾಕ್ಕೆ ಎಲ್ಲ ಅಗತ್ಯ ನೆರವುಗಳನ್ನು ನೀಡುವುದನ್ನು ಮುಂದುವರಿಸುವುದಾಗಿ ಭಾರತ ಭರವಸೆ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮೂರು ದಿನಗಳ ಲಂಕಾ ಪ್ರವಾಸದಲ್ಲಿದ್ದು, ಅಲ್ಲಿನ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರನ್ನು ಭಾನುವಾರ ಭೇಟಿ ಮಾಡಿದ್ದರು.
from India & World News in Kannada | VK Polls https://ift.tt/ZUI0jMF
from India & World News in Kannada | VK Polls https://ift.tt/ZUI0jMF
ಹೆದ್ದಾರಿಗಾಗಿ ‘ಮರ’ಣಹೋಮ, 3 ವರ್ಷಗಳಲ್ಲಿ 1.03 ಲಕ್ಷ ವೃಕ್ಷಗಳಿಗೆ ಕೊಡಲಿ ಏಟು!
ಒಂದು ಮರವನ್ನು ತೆರವುಗೊಳಿಸಿದರೆ ಅದಕ್ಕೆ ಪರ್ಯಾಯವಾಗಿ 10 ಗಿಡಗಳನ್ನು ನೆಡಬೇಕು ಎಂಬ ನಿಬಂಧನೆ ಇದೆ. ಸಸಿಗಳನ್ನು ನೆಡಲು ಪ್ರತಿ ಕಿ.ಮೀ ಗೆ ರೂ. 3 ಲಕ್ಷ ಹಾಗೂ ಒಂದು ಮರಕ್ಕೆ ಬದಲಾಗಿ ಹತ್ತು ಗಿಡಗಳ ವೆಚ್ಚವನ್ನು ಅರಣ್ಯ ಇಲಾಖೆಗೆ ಠೇವಣಿ ಇಡಬೇಕೆಂಬ ನಿಬಂಧನೆ ಇದೆ.
from India & World News in Kannada | VK Polls https://ift.tt/MGgOTXU
from India & World News in Kannada | VK Polls https://ift.tt/MGgOTXU
ಲಖನೌ ವಿರುದ್ಧ 3 ವಿಕೆಟ್ ಕಿತ್ತ ತಮ್ಮ ಬೌಲಿಂಗ್ ಪ್ಲಾನ್ ತಿಳಿಸಿದ ಮೊಹಮ್ಮದ್ ಶಮಿ!
ಗುಜರಾತ್ ಟೈಟನ್ಸ್ ಹಾಗೂ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಮ್ಮ ಪಾಲಿಗೆ ಇದು ಮೊದಲನೇ ಪಂದ್ಯವಾಗಿತ್ತು. ಹಾಗಾಗಿ ಶುಭಾರಂಭ ಕಾಣುವುದು ತುಂಬಾ ಮುಖ್ಯವಾಗಿತ್ತು. ಅದರಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲ್ ಮಾಡುವಂತೆಯೇ ಇಲ್ಲಿಯೂ ಲೈನ್ ಅಂಡ್ ಲೆನ್ತ್ ಬೌಲ್ ಮಾಡಿದೆ ಹಾಗೂ ಅದರಂತೆ ಯಶಸ್ವಿಯಾಗಿದ್ದೇನೆಂದು ಗುಜರಾತ್ ತಂಡದ ಮೊಹಮ್ಮದ್ ಶಮಿ ಪಂದ್ಯದ ಬಳಿಕ ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/qlCGkET
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/qlCGkET
ಕಾಶ್ಮೀರ್ ಫೈಲ್ಸ್-7: ಉಟ್ಟ ಬಟ್ಟೆಯಲ್ಲೇ ಏಳು ಸಲ ಕಣಿವೆಯಿಂದ ಹೊರ ಬಿದ್ದು ಅನಾಥರಾದ ಪಂಡಿತರು...
ಕಾಶ್ಮೀರಿ ಪಂಡಿತರ ಮೇಲೆ ಮುಸ್ಲಿಂ ಧರ್ಮಾಂಧರು, ಜಿಹಾದಿಗಳು ನಡೆಸಿದ ಕ್ರೌರ್ಯದ ಅರಿವು ನಮಗೆ ಇರುವುದು ಇತ್ತೀಚಿನದ್ದು. 30 ವರ್ಷಗಳ ಹಿಂದೆ 90ರ ದಶಕದಲ್ಲಿ ನಡೆದ ಈ ಭಯೋತ್ಪಾದಕರ ಕ್ರೂರ ಕೃತ್ಯಗಳನ್ನೇ ಮರೆತಿರುವಾಗ, ಇನ್ನು ನೂರಾರು ವರ್ಷಗಳ ಹಿಂದೆ ನಡೆದ ಕ್ರೌರ್ಯ, ಹಿಂಸೆಗಳ ಅರಿವು ನಮಗೆ ಇರಲು ಸಾಧ್ಯವೇ? ನಿಜ, ಕಾಶ್ಮೀರಿ ಪಂಡಿತರು ತಮ್ಮ ತವರು ಸ್ವರ್ಗವಾದ ಕಾಶ್ಮೀರವನ್ನು ತೊರೆಯುವ ಸ್ಥಿತಿ ಉಂಟಾಗಿದ್ದು, 90ರ ದಶಕದಲ್ಲಿ ಮಾತ್ರ ಅಲ್ಲ. ಅದಕ್ಕೂ ಮುನ್ನ ಕಾಶ್ಮೀರದಲ್ಲಿ ಮುಸ್ಲಿಂ ದೊರೆಗಳು ಆಳ್ವಿಕೆ ನಡೆಸಿದ ಎಲ್ಲ ಸಂದರ್ಭಗಳಲ್ಲಿಯೂ ಪಂಡಿತರು ಅವರ ದೌರ್ಜನ್ಯಕ್ಕೆ ತುತ್ತಾಗಿ, ಉಟ್ಟ ಬಟ್ಟೆಯಲ್ಲಿ ಭಾರತದ ಬೇರೆ ಭಾಗಗಳಿಗೆ ಓಡಿ ಹೋಗಿದ್ದರು. ಈ 'ಕಾಶ್ಮೀರ್ ಫೈಲ್ಸ್' ಸರಣಿಯ ಏಳನೇ ಭಾಗದಲ್ಲಿ ಇದರ ಮಾಹಿತಿ.
from India & World News in Kannada | VK Polls https://ift.tt/2c1rM3B
from India & World News in Kannada | VK Polls https://ift.tt/2c1rM3B
ಆಯುಷ್ ಬದೋನಿ ನಮಗೆ ಬೇಬಿ ಎಬಿಡಿ ಇದ್ದಂತೆ ಎಂದ ಕೆ.ಎಲ್ ರಾಹುಲ್!
ಗುಜರಾತ್ ಟೈಟನ್ಸ್ ವಿರುದ್ಧ ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ಚೊಚ್ಚಲ ಅರ್ಧಶತಕ ಸಿಡಿಸಿದ ಆಯುಷ್ ಬದೋನಿ ಅವರನ್ನು ಲಖನೌ ಸೂಪರ್ ಜಯಂಟ್ಸ್ ನಾಯಕ ಕೆ.ಎಲ್ ರಾಹುಲ್ ಮುಕ್ತಕಂಠದಿಂದ ಗುಣಗಾನ ಮಾಡಿದರು. ಆಯುಷ್ ಬದೋನಿ ಅವರ 54 ರನ್ ಹೊರತಾಗಿಯೂ ಲಖನೌ ಸೂಪರ್ ಜಯಂಟ್ಸ್ ತಂಡ 5 ವಿಕೆಟ್‌ಗಳ ಸೋಲು ಅನುಭವಿಸಿತು. ಆ ಮೂಲಕ ತಮ್ಮ ಚೊಚ್ಚಲ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನೂತನ ಫ್ರಾಂಚೈಸಿ ಲಖನೌ ಸೂಪರ್ ಜಯಂಟ್ಸ್ ಶುಭಾರಂಭ ಕಾಣುವಲ್ಲಿ ವಿಫಲವಾಯಿತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/26Z50eQ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/26Z50eQ
ಬೆಂಗಳೂರಿಂದ ಮೈಸೂರಿಗೆ ಹೋಗಲು 75 ನಿಮಿಷ ಸಾಕು! ಮುಕ್ತಾಯದ ಹಂತಕ್ಕೆ ಎಕ್ಸ್‌ಪ್ರೆಸ್ ವೇ; ನಿತಿನ್ ಗಡ್ಕರಿ ಮಾಹಿತಿ
ಅಕ್ಟೋಬರ್ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ಕೇವಲ 75 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದೆ. ಹೌದು , ಮುಕ್ತಾಯದ ಹಂತಕ್ಕೆ ಬೆಂಗಳೂರು-ನಿಡಘಟ್ಟ-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಬಂದಿದ್ದು, ಅಕ್ಟೋಬರ್ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
from India & World News in Kannada | VK Polls https://ift.tt/eWcGy2Q
from India & World News in Kannada | VK Polls https://ift.tt/eWcGy2Q
ಅಮೆರಿಕ ಮೇಲೆ ರಷ್ಯಾ ನಡೆಸುತ್ತಾ ಅಣ್ವಸ್ತ್ರ ದಾಳಿ? ಅರ್ಧದಷ್ಟು ಅಮೆರಿಕನ್ನರಿಗೆ ಪರಮಾಣು ದಾಳಿಯ ಭೀತಿ
ಉಕ್ರೇನ್ ರಷ್ಯಾ ನಡುವಿನ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ರಷ್ಯಾ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಅಮೆರಿಕಕ್ಕೆ ಈಗ ಪರಮಾಣು ದಾಳಿಯ ಭೀತಿ ಎದುರಾಗಿದೆ. ಅಮೆರಿಕದ ಅರ್ಧದಷ್ಟು ಜನತೆಗ ವ್ಲಾಡಿಮಿರ್ ಪುಟಿನ್ ಅಣ್ವಸ್ತ್ರ ದಾಳಿ ನಡೆಸುತ್ತಾರೆ ಎಂಬ ಆತಂಕದಲ್ಲಿರುವುದು ಸಮೀಕ್ಷೆಯಲ್ಲಿ ಬಯಲಾಗಿದೆ.
from India & World News in Kannada | VK Polls https://ift.tt/To578im
from India & World News in Kannada | VK Polls https://ift.tt/To578im
'ಆ ಒಂದು ಕ್ಯಾಚ್ ಪಂದ್ಯದ ದಿಕ್ಕು ಬದಲಿಸಿತು' : ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ಡುಪ್ಲೆಸಿಸ್!
ಪಂಜಾಬ್ ಕಿಂಗ್ಸ್ ವಿರುದ್ಧ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ 5 ವಿಕೆಟ್ ಹೀನಾಯ ಸೋಲು ಅನುಭವಿಸಿದ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಬೇಸರ ಹೊರಹಾಕಿದ್ದಾರೆ. 10 ರನ್ ಗಳಿಸಿದ್ದಾಗ ಓಡಿಯನ್ ಸ್ಮಿತ್ ಕ್ಯಾಚ್ ಕೈಚೆಲ್ಲಿದ್ದು, ನಮ್ಮ ಪಾಲಿಗೆ ದುಬಾರಿಯಾಯಿತು. ಒಂದು ವೇಳೆ ಓಡಿಯನ್ ಸ್ಮಿತ್ ಅವರ ಕ್ಯಾಚ್ ಪಡೆದಿದ್ದರೆ ಪಂದ್ಯದ ದಿಕ್ಕು ಸಂಪೂರ್ಣ ಬದಲಾಗುತ್ತಿತ್ತು ಎಂದು ಫಾಫ್ ಡುಪ್ಲೆಸಿಸ್ ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/7zolbYn
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/7zolbYn
'ನಿಮ್ಮ ಹಣೆಬರಹ ಬದಲಾಗಲ್ಲ ಬಿಡಿ' : ಹೀನಾಯವಾಗಿ ಸೋತು ಸಿಕ್ಕಾಪಟ್ಟೆ ಟ್ರೋಲಾದ ಆರ್‌ಸಿಬಿ!
ಪಂಜಾಬ್ ಕಿಂಗ್ಸ್ ವಿರುದ್ಧ 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಮೂರನೇ ಪಂದ್ಯದಲ್ಲಿ 200ಕ್ಕೂ ಹೆಚ್ಚಿನ ರನ್ ಗಳಿಸಿದ ಹೊರತಾಗಿಯೂ 5 ವಿಕೆಟ್ ಹೀನಾಯ ಸೋಲು ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ನೀವು 200ಕ್ಕೂ ಹೆಚ್ಚಿನ ರನ್ ಗಳಿಸಿದರೂ ನಿಮ್ಮ ಹಣೆಬರಹ ಬದಲಾಗುವುದಿಲ್ಲ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದಾರೆ. ಮತ್ತೊಬ್ಬ ಅಭಿಮಾನಿ ನೀವು ಸೋಲು ಅನುಭವಿಸಲು ಅರ್ಹರಾಗಿದ್ದೀರಿ ಎಂದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/0QgZSfK
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/0QgZSfK
'ಚೊಚ್ಚಲ ಐಪಿಎಲ್ ಗೆದ್ದೇ ಗೆಲ್ಲುತ್ತೇವೆ': ಆರ್‌ಸಿಬಿ ವಿರುದ್ಧ ಗೆಲುವಿನ ಬಳಿಕ ಓಡಿಯನ್ ಸ್ಮಿತ್ ಶಪಥ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ 5 ವಿಕೆಟ್ ಗೆಲುವಿನ ಬಳಿಕ ಮಾತನಾಡಿದ ಪಂಜಾಬ್ ಕಿಂಗ್ಸ್ ಆಲ್‌ರೌಂಡರ್ ಓಡಿಯನ್ ಸ್ಮಿತ್, ನಾವು ಚೊಚ್ಚಲ ಪ್ರಶಸ್ತಿ ಗೆಲ್ಲುವುದು ಮುಂದಿನ ಪಂದ್ಯಗಳ ಗೆಲುವನ್ನು ಅವಲಂಬಿಸಿದೆ ಎಂದರು. ಅಂದಹಾಗೆ ನಾವು ಪ್ರೇರಣೆ ತುಂಬುವ 14 ಪೀಕ್ಸ್ ಸಿನಿಮಾ ವೀಕ್ಷಿಸುತ್ತಿದ್ದೇವೆ. ಇದೀಗ ಒಂದು ಭಾಗ ಮುಗಿಸಿದ್ದು, ಇನ್ನೂ 13 ಭಾಗ ನೋಡುವುದು ಬಾಕಿ ಉಳಿದಿದೆ ಎಂದು ಹೇಳಿದ್ದಾರೆ. ಈ ವೇಳೆ ತಮ್ಮ ಬೌಲಿಂಗ್ ವೈಫಲ್ಯದ ಬಗ್ಗೆಯೂ ಅವರು ಬೆಳಕು ಚೆಲ್ಲಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/up89zmg
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/up89zmg
ಎರಡೂ ತಂಡಗಳು 200ಕ್ಕೂ ಹೆಚ್ಚಿನ ರನ್ ಗಳಿಸಲು ಕಾರಣ ತಿಳಿಸಿದ ಮಯಾಂಕ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ 5 ವಿಕೆಟ್ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್, ಗೆಲುವಿನ ಶ್ರೇಯ ನಾವು ಪಂದ್ಯವನ್ನು ಮುಗಿಸಿದ ಹಾದಿಗೆ ಸಲ್ಲಬೇಕು ಎಂದು ಹೇಳಿದರು. ಇಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಅದ್ಭುತವಾಗಿತ್ತು. ಈ ಕಾರಣದಿಂದಲೇ ಎರಡು ತಂಡಗಳು 200ಕ್ಕಿಂತ ಹೆಚ್ಚಿನ ರನ್ ಗಳಿಸಲು ಕಾರಣವಾಯಿತು ಎಂದು ತಿಳಿಸಿದ್ದಾರೆ. ಈ ಪಂದ್ಯದ ಗೆಲುವಿನಿಂದ ಪಂಜಾಬ್ ಕಿಂಗ್ಸ್ ಎರಡು ಅಂಕ ಕಲೆ ಹಾಕಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4kUjLr7
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4kUjLr7
ಪೋಲೆಂಡ್‌ಗೆ ಜೋ ಬಿಡೆನ್ ಭೇಟಿ ಬೆನ್ನಲ್ಲೇ ಲ್ವಿವ್ ಮೇಲೆ ದಾಳಿ! ನಾವೂ ಯಾರಿಗೂ ಹೆದರಲ್ಲ ಎಂದ ರಷ್ಯಾ
ಸದ್ಯಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಅಂತ್ಯವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಉಕ್ರೇನ್ ನೆರೆರಾಷ್ಟ್ರ ಪೋಲೆಂಡ್‌ಗೆ ಭೇಟಿ ನೀಡಿದ್ದು, ಬಿಡೆನ್ ಭೇಟಿ ಬೆನ್ನಲ್ಲೇ ಲ್ವಿವ್ ಮೇಲೆ ರಷ್ಯಾ ದಾಳಿ ನಡೆಸಿದೆ. ಈ ಮೂಲಕ ನಾವು ಯಾರಿಗೂ ಹೆದರಲ್ಲ ಎಂಬ ಸಂದೇಶವನ್ನು ರಷ್ಯಾ ರವಾನಿಸಿದೆ.
from India & World News in Kannada | VK Polls https://ift.tt/IKkAVm1
from India & World News in Kannada | VK Polls https://ift.tt/IKkAVm1
ಇಂಗ್ಲೆಂಡ್ ಎದುರು ಐತಿಹಾಸಿಕ ಟೆಸ್ಟ್ ಕ್ರಿಕೆಟ್ ಸರಣಿ ಗೆದ್ದ ವೆಸ್ಟ್ ಇಂಡೀಸ್!
ನಿರೀಕ್ಷೆಗೂ ಮೀರಿದ ಭರ್ಜರಿ ಪ್ರದರ್ಶನ ನೀಡಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿದೆ. ಗ್ರೆನೆಡಾದ ಸೇಂಟ್ ಜಾರ್ಜ್ಸ್‌ನಲ್ಲಿ ಇರುವ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 10 ವಿಕೆಟ್‌ಗಳ ಭರ್ಜರಿ ಗೆಲುವಿನ ನಗೆ ಬೀರಿತು. ಜೋ ರೂಟ್ ಸಾರಥ್ಯದ ಪ್ರವಾಸಿ ಇಂಗ್ಲೆಂಡ್ ತಂಡ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕಷ್ಟ ಪಟ್ಟು ಡ್ರಾ ಸಾಧಿಸಿತ್ತು. ಆದರೆ, 3ನೇ ಪಂದ್ಯದಲ್ಲಿ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/gLqZ3zl
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/gLqZ3zl
ದಂಪತಿ ಪ್ರತ್ಯೇಕವಿದ್ದ ಮಾತ್ರಕ್ಕೆ ವಿಚ್ಛೇದನ ಅರ್ಜಿಗೆ ಮಾನ್ಯತೆ ಸಲ್ಲದು; ಹೈಕೋರ್ಟ್ ಅಭಿಪ್ರಾಯ
ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರ ಆದೇಶ ಪ್ರಶ್ನಿಸಿ, ಪತ್ನಿ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ 'ದಂಪತಿ ನಡುವೆ ಜಗಳವಾಗಿ ಅವರು ಪ್ರತ್ಯೇಕವಾಗಿ ನೆಲೆಸಿದ್ದಾರೆಂದ ಮಾತ್ರಕ್ಕೆ ಅವರ ವಿವಾಹ ವಿಚ್ಛೇದನದ ಅರ್ಜಿಯನ್ನು ಮಾನ್ಯ ಮಾಡುವುದು ಸಲ್ಲದು' ಎಂದು ಆದೇಶ ನೀಡಿದೆ. ಅಲ್ಲದೆ, ಹಿಂದೂ ವಿವಾಹ ಕಾಯಿದೆ 1955ರ ಕಲಂ 13(1) (ಐಎ) ಮತ್ತು (ಐಬಿ) ಅನ್ವಯ ಕೋರಲಾಗಿದ್ದ ವಿವಾಹ ವಿಚ್ಛೇದನದ ಡಿಕ್ರಿ ರದ್ದುಗೊಳಿಸಿದೆ.
from India & World News in Kannada | VK Polls https://ift.tt/WBgsLZU
from India & World News in Kannada | VK Polls https://ift.tt/WBgsLZU
2 ವರ್ಷದ ಬಳಿಕ ಕಲಾರಸಿಕರಿಗೆ ರಸದೌತಣ; ಪ್ರಸಿದ್ಧ ಬೆಂಗಳೂರು ‘ಚಿತ್ರಸಂತೆ’ ಭಾನುವಾರ ಆರಂಭ
ಪರಿಷತ್ತಿನ 12 ಗ್ಯಾಲರಿಗಳಲ್ಲಿ ಆಯ್ದ ಕಲಾವಿದರ ಕಲಾಕೃತಿಗಳು 10 ದಿನಗಳವರೆಗೆ ಪ್ರದರ್ಶನ ಕಾಣಲಿವೆ. ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಚಿತ್ರಸಂತೆ ನಡೆಯುವ ಸ್ಥಳದಲ್ಲಿ ಕಲಾ ಪ್ರದರ್ಶನ ನೀಡಲಿದ್ದಾರೆ. ಕೋವಿಡ್ ಕಾರಣ ಕಳೆದ ವರ್ಷ 18ನೇ ಚಿತ್ರಸಂತೆಯು ಆನ್‌ಲೈನ್‌ನಲ್ಲಿ ನಡೆದಿತ್ತು. ಈ ವರ್ಷ ಜನವರಿ ಮೊದಲ ವಾರ ನಡೆಯಬೇಕಾಗಿದ್ದ 19ನೇ ಚಿತ್ರಸಂತೆಯನ್ನು ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಇದೀಗ ನಡೆಸಲಾಗುತ್ತಿದೆ. ಹೀಗಾಗಿ ಕಲಾಭಿಮಾನಿಗಳಿಗೆ ಕಲೆಯ ಹಬ್ಬವನ್ನೇ ಉಣಬಡಿಸಲಿದೆ ಈ ಬಾರಿಯ ಚಿತ್ರ ಸಂತೆ.
from India & World News in Kannada | VK Polls https://ift.tt/Elw7KLg
from India & World News in Kannada | VK Polls https://ift.tt/Elw7KLg
ವರ್ಕ್ ಫ್ರಂ ಹೋಮ್ ಇದ್ದರಷ್ಟೇ ಮೆಟರ್ನಿಟಿ ಕಾಯ್ದೆಯಡಿ ಮಕ್ಕಳ ಆರೈಕೆಗೆ ರಜೆ; ಹೈಕೋರ್ಟ್
‘ಭಾರತ ಸರಕಾರದ ಕಾನೂನಿನಂತೆ ಎಲ್ಲರೂ ಸಿಸಿಎಲ್ ಪಡೆಯಲು ಅರ್ಹರಾಗಿದ್ದಾರೆ. ಅದರಂತೆ ಸ್ಟಾರ್ಕ್‌ನ ಎಲ್ಲ ಉದ್ಯೋಗಿಗಳಿಗೂ ಸಿಸಿಎಲ್ ರಜೆ ನೀಡುವಂತೆ ನಿರ್ದೇಶನ ನೀಡಬೇಕು. ಆ ಕುರಿತು ತಿದ್ದುಪಡಿ ಕಾಯಿದೆ ಸೆಕ್ಷನ್ 5(5) ರಲ್ಲಿ ಉಲ್ಲೇಖಿಸಲಾಗಿದ್ದು, ಅದರಂತೆ ತಾವು ಸಿಸಿಎಲ್‌ಗೆ ಅರ್ಹರೆಂದು ಹಕ್ಕು ಮಂಡಿಸಿದ್ದಾರೆ. ಆದರೆ ವರ್ಕ್ ಫ್ರಂ ಹೋಮ್ ಸೌಲಭ್ಯ ಇದ್ದರೆ ಮಾತ್ರ ಮೆಟರ್ನಿಟಿ ಕಾಯಿದೆ ಅನ್ವಯ ದುಡಿಯುವ ಮಹಿಳೆಯರು ಮಕ್ಕಳ ಆರೈಕೆ ರಜೆಯನ್ನು ಪಡೆಯಲು ಅರ್ಹರಾಗಿದ್ದಾರೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
from India & World News in Kannada | VK Polls https://ift.tt/jc2qFNh
from India & World News in Kannada | VK Polls https://ift.tt/jc2qFNh
ಬೆಂಗಳೂರಿನಲ್ಲಿ 1.49 ಲಕ್ಷ ಅನಧಿಕೃತ ಕಟ್ಟಡಗಳ ಪತ್ತೆ! ಅಕ್ರಮ ಕಟ್ಟಡಗಳ ಮಾಲೀಕರಿಗೆ ನೆಲಸಮವಾಗುವ ಭೀತಿ
illegal buildings in bengaluru: ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಅಕ್ರಮ ಕಟ್ಟಡಗಳ ಸಮೀಕ್ಷೆ ನಡೆಸುತ್ತಿದ್ದು, ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ಇದರಿಂದ ಮಾಲೀಕರಿಗೆ ಕಟ್ಟಡ ನೆಲಸಮಗೊಳಿಸುವ ಭೀತಿ ಎದುರಾಗಿದೆ. ರಾಜಧಾನಿಯಲ್ಲಿ ನಿಯಮಬದ್ಧವಾಗಿ ಕಟ್ಟಿರುವ ಕಟ್ಟಡಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗದ ಸ್ಥಿತಿ ಇದೆ. ಹೀಗಾಗಿ, ಪಾಲಿಕೆ ವ್ಯಾಪ್ತಿಯಲ್ಲಿನ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಬೇಕಾದರೆ, ಶೇ 95ರಷ್ಟು ಕಟ್ಟಡಗಳನ್ನು ಕೆಡವಿ ಹಾಕಬೇಕಾಗುತ್ತದೆ. ಬಹುಮಹಡಿ ಕಟ್ಟಡಗಳಷ್ಟೇ ನಕ್ಷೆ ಮಂಜೂರಾತಿ ಪಡೆದು ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿವೆ.
from India & World News in Kannada | VK Polls https://ift.tt/6VOTc5D
from India & World News in Kannada | VK Polls https://ift.tt/6VOTc5D
ಭಾರೀ ಸಂಕಷ್ಟದಲ್ಲಿ ಉಕ್ರೇನ್, ನೀರು, ಆಹಾರ ಪೂರೈಕೆಯಾಗದೆ ದೇಶದಲ್ಲಿ ಕಾಲರಾ ಬಾಧೆ
ರಷ್ಯಾ ದಾಳಿಯಿಂದ ತತ್ತರಿಸಿ ಹೋಗಿರುವ ಉಕ್ರೇನ್ ನಾಗರಿಕರಿಗೆ ಈಗ ಅನಾರೋಗ್ಯ ಸಮಸ್ಯೆಯೂ ತೀವ್ರವಾಗಿ ಕಾಡುತ್ತಿದೆ. ಇದರ ನಡುವೆ ರಷ್ಯಾ ಈಗ ಆಸ್ಪತ್ರೆ, ವೈದ್ಯಕೀಯ ಕಾಲೇಜು ಮತ್ತು ವೈದ್ಯಕೀಯ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
from India & World News in Kannada | VK Polls https://ift.tt/6aGi1KC
from India & World News in Kannada | VK Polls https://ift.tt/6aGi1KC
ಅನ್ನ ಯೋಜನೆ 6 ತಿಂಗಳು ವಿಸ್ತರಿಸಿದ ಕೇಂದ್ರ, ಸೆಪ್ಟೆಂಬರ್‌ವರೆಗೆ ಸಿಗಲಿದೆ ಉಚಿತ ಪಡಿತರ
ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಬಡವರಿಗೆ ಉಚಿತವಾಗಿ ಆಹಾರಧಾನ್ಯ ವಿತರಿಸಲು ರೂಪಿಸಲಾಗಿದ್ದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೂ ಬಡ ಜನರಿಗೆ ಉಚಿತ ಪಡಿತರ ಸಿಗಲಿದೆ.
from India & World News in Kannada | VK Polls https://ift.tt/OVeswDg
from India & World News in Kannada | VK Polls https://ift.tt/OVeswDg
ಕೋರಮಂಗಲ ಆರ್‌ಟಿಒದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ; 224 ಐಷಾರಾಮಿ ಕಾರುಗಳ ತೆರಿಗೆ ಕಟ್ಟದೆ 50 ಕೋಟಿ ವಂಚನೆ!
ತೆರಿಗೆ ಹಣವನ್ನು ಸರಕಾರಿ ಖಜಾನೆಗೆ ಜಮೆ ಮಾಡದೆಯೇ ಕಾರುಗಳನ್ನು ನೋಂದಣಿ ಮಾಡಿ ಅಕ್ರಮವೆಸಗಿರುವ ಕುರಿತು ‘ವಿಜಯ ಕರ್ನಾಟಕ’ವು 2021ರ ಡಿ. 14ರಂದು 'ನಕಲಿ ನೋಂದಣಿ, ತೆರಿಗೆ ಗುಳುಂ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆಯು, 2015ರ ಏ. 1 ರಿಂದ 2021ರ ನ. 30ರವರೆಗೆ ನೋಂದಣಿಯಾಗಿರುವ 20 ಲಕ್ಷ ಮೇಲ್ಪಟ್ಟ ಮೌಲ್ಯದ ಕಾರುಗಳ ತೆರಿಗೆ ಪಾವತಿಯನ್ನು ಪರಿಶೀಲಿಸಿ ವರದಿ ಸಲ್ಲಿಸಲು ಬೆಂಗಳೂರು (ಕೇಂದ್ರ) ಕಚೇರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ.ಪ್ರಸಾದ್ ನೇತೃತ್ವದಲ್ಲಿ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿತ್ತು.
from India & World News in Kannada | VK Polls https://ift.tt/q6nBVoh
from India & World News in Kannada | VK Polls https://ift.tt/q6nBVoh
ರಿಲಯನ್ಸ್‌ನ 2 ಕಂಪನಿಗಳ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ! ಇದು ಸೆಬಿ ಆದೇಶದ ಎಫೆಕ್ಟ್
ಸೆಬಿ ಆದೇಶದ ಬಳಿಕ ರಿಲಯನ್ಸ್‌ನ 2 ಕಂಪನಿಗಳ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ. ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗಳ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದು, ಎರಡಕ್ಕೂ ರಾಹುಲ್ ಸರಿನ್ ಅವರನ್ನು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
from India & World News in Kannada | VK Polls https://ift.tt/D3TZH21
from India & World News in Kannada | VK Polls https://ift.tt/D3TZH21
Russia Ukraine War: ಉಕ್ರೇನ್‌ನಲ್ಲಿಆಹಾರಕ್ಕೆ ಹಾಹಾಕಾರ; ಹಲವು ನಗರಗಳಲ್ಲಿ ಪರಿಸ್ಥಿತಿ ಚಿಂತಾಜನಕ
ರಷ್ಯಾ ಆಕ್ರಮಣದಿಂದ ಉಕ್ರೇನ್‌ನ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಒಂದು ಕಡೆ ರಷ್ಯಾ ಸೇನೆಯ ದಾಳಿ ಇದ್ದರೆ, ಮತ್ತೊಂದು ಕಡೆ ಅನ್ನ-ನೀರು ಇಲ್ಲದೇ ಉಕ್ರೇನ್‌ನಲ್ಲಿ ಜನ ಪರದಾಡುತ್ತಿದ್ದಾರೆ. ಅದರಲ್ಲೂ ಪ್ರಮುಖ ನಗರಗಳಾದ ಕೀವ್ ಮತ್ತು ಕಾರ್ಕೀವ್‌ನಲ್ಲಿ ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಯುದ್ಧ ಹೀಗೆ ಮುಂದುವರಿದರೆ ಎಷ್ಟು ಜನ ಸಾಯುತ್ತಾರೋ ಎಂಬ ಆತಂಕ ಮನೆ ಮಾಡಿದೆ.
from India & World News in Kannada | VK Polls https://ift.tt/PSlzOdF
from India & World News in Kannada | VK Polls https://ift.tt/PSlzOdF
ಕೊನೆಗೂ ಲಡಾಕ್ ಗಡಿ ತಂಟೆ ಒಪ್ಪಿದ ಚೀನಾ! ಜೈಶಂಕರ್, ದೋವಲ್ ಜತೆ ವಾಂಗ್ ಯಿ ಚರ್ಚೆ
ಕೊನೆಗೂ ಲಡಾಕ್ ಗಡಿ ತಂಟೆಯನ್ನು ಚೀನಾ ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ವಿವಾದಿತ ಸ್ಥಳಗಳಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯುವ ಭರವಸೆ ನೀಡಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಚರ್ಚೆ ನಡೆಸಿದ್ದಾರೆ.
from India & World News in Kannada | VK Polls https://ift.tt/oPMKnHa
from India & World News in Kannada | VK Polls https://ift.tt/oPMKnHa
ನಾನು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ; ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯ ಸ್ಪಷ್ಟನೆ
ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ, ಹೆಣ್ಮಕ್ಕಳು ಹಾಕೋಬಾರ್ದಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ವಿವಾದದ ರೂಪ ಪಡೆದ ಬೆನ್ನಲ್ಲೇ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ನಾನು ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/CiX4mfe
from India & World News in Kannada | VK Polls https://ift.tt/CiX4mfe
ಬಸವರಾಜ ಬೊಮ್ಮಾಯಿ ವಿರುದ್ಧ ಮಹಾರಾಷ್ಟ್ರದಿಂದ ಖಂಡನಾ ನಿರ್ಣಯ! ಬೆಳಗಾವಿ ಗಡಿ ಕುರಿತು ಹೇಳಿಕೆಗೆ ಆಕ್ಷೇಪ
ಬೆಳಗಾವಿ ಗಡಿ ಕುರಿತು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಹೇಳಿಕೆ ಖಂಡಿಸಿ ಮಹಾರಾಷ್ಟ್ರ ಶುಕ್ರವಾರ ಖಂಡನಾ ನಿರ್ಣಯ ಅಂಗೀಕರಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಈಗ ಗಡಿ ವಿವಾದವಿಲ್ಲ ಎಂಬ ಬೊಮ್ಮಾಯಿ ಹೇಳಿಕಯನ್ನು ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ತೀವ್ರವಾಗಿ ವಿರೋಧಿಸಲಾಗಿದೆ.
from India & World News in Kannada | VK Polls https://ift.tt/t0w5PxW
from India & World News in Kannada | VK Polls https://ift.tt/t0w5PxW
'2022ರ ಐಪಿಎಲ್ ಎಂಎಸ್ ಧೋನಿ ಪಾಲಿಗೆ ಕೊನೆಯ ಟೂರ್ನಿ': ಆಕಾಶ್ ಚೋಪ್ರಾ!
ಬಹುನಿರೀಕ್ಷಿತ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವ ಕೇವಲ ಎರಡು ದಿನಗಳ ಮೊದಲೇ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟರು. ಆ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಎಂಎಸ್ ಧೋನಿಯ ಐಪಿಎಲ್ ವೃತ್ತಿ ಜೀವನ ಬಹಿತೇಕ ಮುಗಿದಂತೆ ಎಂದು ಹೇಳಿದ್ದಾರೆ. ಅವರು 2022ರ ಟೂರ್ನಿಯ ಬಳಿಕ ಐಪಿಎಲ್ ವೃತ್ತಿ ಜೀವನಕ್ಕೆ ಪೂರ್ಣ ವಿರಾಮ ಇಡಲಿದ್ದಾರೆಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Yud09kl
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Yud09kl
ಮೇ 15 ರಂದು ಬೆಂಗಳೂರಿನಲ್ಲಿ ಟಿಸಿಎಸ್ ವಿಶ್ವ 10ಕೆ ಓಟ : ನೋಂದಣಿ ಶುರು!
ಕೋವಿಡ್-19 ಕಾರಣದಿಂದಾಗಿ ಕಳೆದ ಎರಡು ವರ್ಷ ಟಿಸಿಎಸ್ ವಿಶ್ವ 10ಕೆ ಓಟವನ್ನು ಬೆಂಗಳೂರಿನಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ, 2022ರ ಆವೃತ್ತಿಯ ಸ್ಪರ್ಧೆಯ ಕಾರ್ಯಚಟುವಟಿಕೆಗಳಿಗೆ ಮಾರ್ಚ್ 24 ರಂದು ಗುರುವಾರ ಐಟಿಸಿ ವಿಂಡ್ಸರ್ ಹೊಟೇಲ್‌ನಲ್ಲಿ ಅಧಿಕೃತವಾಗಿ ಚಾಲನೆ ದೊರೆಯಿತು. ಮೇ. 15ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 10ಕೆ ಓಟ ನಡೆಯಲಿದೆ. ಆದರೆ ಈ ಬಾರಿ ಮೈದಾನ ಮತ್ತು ಆನ್‌ಲೈನ್ ಮೂಲಕ ಎರಡು ಸ್ವರೂಪದಲ್ಲಿ ಟಿಸಿಎಸ್ ವಿಶ್ವ 10ಕೆ ಓಟ ಜರುಗಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಮಾರ್ಚ್ 25 ರಿಂದ https://ift.tt/SpldXrZ ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/iBZHjRW
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/iBZHjRW
74ರ ಹರೆಯದಲ್ಲೂ ಹಳೇ ಸ್ನೇಹಿತರ ಜೊತೆ 40 ನಿಮಿಷ ‘ವೀರಕುಣಿತ’ ಮಾಡಿದ ಸಿದ್ದರಾಮಯ್ಯ..!
ಚಿಕ್ಕಂದಿನಿಂದಲೂ ಸಿದ್ದರಾಮೇಶ್ವರ ಜಾತ್ರೆ ನೋಡಿ ಬೆಳೆದ ಸಿದ್ದರಾಮಯ್ಯ ಮೊದಲು ಕುಣಿತಕ್ಕೆ ಹೆಜ್ಜೆ ಹಾಕಲು ಹಿಂದೇಟು ಹಾಕಿದ್ರು. ಆದ್ರೆ ಗ್ರಾಮಸ್ಥರ ಒತ್ತಾಯ ಹಾಗೂ ಉತ್ಸಾಹ ಕಂಡು ಕುಣಿಯಲು ಆರಂಭಿಸಿದರು. ನೋಡುನೋಡ್ತಿದಂತೆ ಉತ್ಸಾಹ ಇಮ್ಮಡಿಯಾಗಿ ಸರಿಸುಮಾರು 40 ನಿಮಿಷ ಭರ್ಜರಿಯಾಗಿ ಕುಣಿದು ಕುಪ್ಪಳಿಸಿ ಸಂತಸಪಟ್ಟರು. ಅಚ್ಚರಿಯ ವಿಷಯ ಅಂದ್ರೆ ಸದಾ ರಾಜಕೀಯದ ಜಂಜಾಟದಲ್ಲಿ ಮುಳುಗಿರುವ ಸಿದ್ದರಾಮಯ್ಯ ಈ ಕಾಲದಲ್ಲೂ ಕೂಡ ಪ್ರತಿಯೊಂದು ಡ್ಯಾನ್ಸ್ ಸ್ಟೆಪ್ಸ್ ಮರೆಯದೆ ಹಾಕಿದ್ದು ನಿಜಕ್ಕೂ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿತು.
from India & World News in Kannada | VK Polls https://ift.tt/tPEGsDj
from India & World News in Kannada | VK Polls https://ift.tt/tPEGsDj
‘ನಿಮ್ಗೆ ಅಷ್ಟು ಕಾಳಜಿಯಿದ್ದರೆ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಯೂಟ್ಯೂಬ್‌ಗೆ ಹಾಕಿ’; ಬಿಜೆಪಿಗೆ ಕೇಜ್ರಿವಾಲ್ ಸವಾಲು
The Kashmir Files:‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸುವಂತೆ ನಮ್ಮನ್ನೇಕೆ ಕೇಳುತ್ತಿದ್ದೀರಿ? ನಿಮಗೆ ಅಷ್ಟು ಕಾಳಜಿಯಿದ್ದರೆ ಈ ಸಿನಿಮಾವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವಂತೆ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರಿಗೆ ಸಲಹೆ ನೀಡಿ. ಆಗ ಎಲ್ಲರೂ ಒಂದೇ ದಿನದಲ್ಲಿ ಉಚಿತವಾಗಿ ಸಿನಿಮಾ ನೋಡಬಹುದು. ಆಗ ತೆರಿಗೆ ಮುಕ್ತಗೊಳಿಸುವ ಅಗತ್ಯ ಎಲ್ಲಿದೆ?’ ಎಂದು ಹೇಳುವ ಮೂಲಕ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಬೇಕು ಎಂಬ ಬಿಜೆಪಿ ಸದಸ್ಯರ ಬೇಡಿಕೆಯನ್ನು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿರಸ್ಕರಿಸಿದರು.
from India & World News in Kannada | VK Polls https://ift.tt/S3WF2ov
from India & World News in Kannada | VK Polls https://ift.tt/S3WF2ov
Transformer Blast: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ; ಅಪಾಯಕಾರಿ ಟ್ರಾನ್ಸ್‌ಫಾರ್ಮರ್‌ಗಳ ಆಡಿಟ್‌ಗೆ ಆದೇಶ
ಮಂಗನಹಳ್ಳಿಯಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಧ್ಯಾಹ್ನ 12.50 ಕ್ಕೇ 112 ಸಹಾಯವಾಣಿಗೆ ಕರೆ ಬಂದಿದೆ. ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ ಬಹುಶಃ ಘಟನೆಯನ್ನು ತಡೆಯಬಹುದಿತ್ತು. ಆದರೆ 3.10ಕ್ಕೆ ಅದು ಸ್ಫೋಟಗೊಂಡಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು. ‘ಸ್ವಲ್ಪ ಬೇಗ ಕಾರ್ಯಪ್ರವೃತ್ತವಾಗಿದ್ದರೆ ಸಾವು ತಡೆಯಬಹುದಿತ್ತು. ಇಂಧನ ಇಲಾಖೆ ಇಂತಹ ಅಪಾಯಕಾರಿ ವಿದ್ಯುತ್ ಪರಿವರ್ತಕಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಆಗ್ರಹಿಸಿದರು.
from India & World News in Kannada | VK Polls https://ift.tt/pfvOTMX
from India & World News in Kannada | VK Polls https://ift.tt/pfvOTMX
ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಒಡಿಐ ಸರಣಿ ಗೆದ್ದ ಬಾಂಗ್ಲಾದೇಶ!
ದಕ್ಷಿಣ ಆಫ್ರಿಕಾ ನೆಲದಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡ ಐತಿಹಾಸಿಕ ಏಕದಿನ ಕ್ರಿಕೆಟ್ ಸರಣಿ ಗೆದ್ದಿದೆ. ಹೊಸ ಕ್ಯಾಪ್ಟನ್ ತಮಿಮ್ ಇಕ್ಬಾಲ್ ಸಾರಥ್ಯದಲ್ಲಿ ಅವಿಸ್ಮರಣೀಯ ಪ್ರದರ್ಶನ ನೀಡಿದ ಬಾಂಗ್ಲಾ ಪಡೆ 2-1 ಅಂತರದಲ್ಲಿ ಮೂರು ಪಂದ್ಯಗಳ ಒಡಿಐ ಸರಣಿಯನ್ನು ಗೆದ್ದುಕೊಂಡಿದೆ. ಗುರುವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಕದನದಲ್ಲಿ ಅಕ್ಷರಶಃ ಅಬ್ಬರಿಸಿ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿತು. ತಂಡದ ಯುವ ವೇಗದ ಬೌಲರ್ 5 ವಿಕೆಟ್‌ಗಳನ್ನು ಉರುಳಿಸಿ ಅಬ್ಬರಿಸಿದರೆ, ನಾಯಕ ತಮಿಮ್ ಇಕ್ಬಾಲ್ ಜವಾಬ್ದಾರಿಯುತ ಅರ್ಧಶತಕ ಬಾರಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/idCjGAt
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/idCjGAt
ಕ್ಯಾಪ್ಟನ್ಸಿ ಬಿಟ್ಟ ಎಂಎಸ್ ಧೋನಿಗೆ ವಿಶೇಷ ಸಂದೇಶ ಬರೆದ ವಿರಾಟ್ ಕೊಹ್ಲಿ!
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವಾಗ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಶಾಕ್ ಕೊಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಲ್ಕು ಬಾರಿ ಐಪಿಎಲ್ ಕಿರೀಟ ಗೆದ್ದುಕೊಟ್ಟಿರುವ ದಿಗ್ಗಜ ಕಪ್ತಾನ ಈಗ ನಾಯಕತ್ವದ ಜವಾಬ್ದಾರಿಯನ್ನು ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಹಸ್ತಾಂತರಿಸಿದ್ದಾರೆ. ಸಿಎಸ್‌ಕೆ ತಂಡ ಈ ಮಹತ್ವದ ಬೆಳವಣಿಗೆಯನ್ನು ತನ್ನ ಸೋಷಿಯಲ್ ಮೀಡಿಯಾ ವೇದಿಕೆಗಳ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಧೋನಿಯ ಆಪ್ತರದಾದ ವಿರಾಟ್ ಕೊಹ್ಲಿ ಕೂಡ ವಿಶೇಷ ಸಂದೇಶ ರವಾನಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/OzB7yN4
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/OzB7yN4
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪ; ಸಚಿವ ವಿ.ಸೋಮಣ್ಣ ರಾಜೀನಾಮೆಗೆ ಒತ್ತಾಯ
Disproportionate assets: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ಸಚಿವ ವಿ ಸೋಮಣ್ಣ ಪರ ಮಾತನಾಡಿದ ಜೆಡಿಎಸ್‌ನ ಎಚ್. ಡಿ ರೇವಣ್ಣ, ‘ಯಾರೋ ಅರ್ಜಿ ನೀಡಿದರು, ಯಾರೋ ನೋಟಿಸ್ ಪಡೆದರು ಎಂದು ರಾಜೀನಾಮೆ ಕೇಳುವುದು ಸರಿಯಲ್ಲ. ಗೌಡರ ಮೇಲೂ ಈ ಆರೋಪ ಇತ್ತು. ನಮ್ಮ ಮೇಲೂ ಇದೆ’ ಎಂದು ಹೇಳಿದರು. ಆಗ ಸಿದ್ದರಾಮಯ್ಯ, ‘ಸಚಿವ ಸೋಮಣ್ಣ ವಿರುದ್ಧ ನ್ಯಾಯಾಲಯವೇ ವಿಚಾರಣೆ ಆರಂಭಿಸಿದೆ. ರಾಜೀನಾಮೆ ಪಡೆಯಲು ಇದಕ್ಕಿಂತ ಏನು ಬೇಕು’ ಎಂದು ಪ್ರಶ್ನಿಸಿದರು.
from India & World News in Kannada | VK Polls https://ift.tt/bNdnFE5
from India & World News in Kannada | VK Polls https://ift.tt/bNdnFE5
ಕಾಶ್ಮೀರಕ್ಕಾಗಿ ಪ್ರಧಾನಿ ಮೋದಿ 8 ವರ್ಷಗಳಲ್ಲಿ ಮಾಡಿದ್ದೇನು..?! ಕಾಶ್ಮೀರ್ ಫೈಲ್ಸ್ ತೆರೆದ ಇತಿಹಾಸ - ಭಾಗ-3
ಜಮ್ಮು ಕಾಶ್ಮೀರದಲ್ಲಿ ಪೂರಕ ಪರಿಸ್ಥಿತಿ ಸುಧಾರಿಸಿದ ನಂತರ ವಿಧಾನಸಭೆಗೆ ಚುನಾವಣೆ ಕೈಗೊಳ್ಳಲಾಗುವುದು ಎಂದು ಸರಕಾರ ತಿಳಿಸಿದೆ. ಕ್ಷೇತ್ರ ಮರು ವಿಂಗಡಣೆ ಆಯೋಗವು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಕ್ಷೇತ್ರಗಳು ಹಾಗೂ ಲೋಕಸಭೆ ಕ್ಷೇತ್ರದ ಉದ್ದೇಶಿತ ಮರು ವಿಂಗಡಣೆಯ ಬದಲಾವಣೆಗಳ ಬಗ್ಗೆ ಕರಡನ್ನು ಮುಂದಿಟ್ಟಿದ್ದು, ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಉದ್ದೇಶಿತ ಪ್ರಸ್ತಾಪದ ಪ್ರಕಾರ, ಜಮ್ಮು ಕಾಶ್ಮೀರದ ಲೋಕಸಭೆ ಕ್ಷೇತ್ರಗಳನ್ನು 5ರ ಯಥಾಸ್ಥಿತಿಯಲ್ಲಿರಿಸಲಾಗಿದೆ. ಆದರೆ ವಿಧಾನಸಭೆ ಕ್ಷೇತ್ರಗಳನ್ನು ಈಗಿನ 83ರಿಂದ 90ಕ್ಕೆ ಏರಿಸಲಾಗಿದೆ. ಜಮ್ಮುವಿಗೆ 6 ಮತ್ತು ಕಾಶ್ಮೀರಕ್ಕೆ 1 ಕ್ಷೇತ್ರವನ್ನು ಸೇರಿಸಲಾಗಿದೆ.
from India & World News in Kannada | VK Polls https://ift.tt/LWz5iFl
from India & World News in Kannada | VK Polls https://ift.tt/LWz5iFl
Russia-Ukraine Crisis: ಈ ಸನ್ನಿವೇಶ ಎದುರಾದರೆ ಮಾತ್ರ ಉಕ್ರೇನ್ ಮೇಲೆ ಅಣ್ವಸ್ತ್ರ ಬಳಕೆ ಎಂದ ರಷ್ಯಾ
ಉಕ್ರೇನ್ ಮೇಲಿನ ದಾಳಿ ವೇಳೆ ಅಣ್ವಸ್ತ್ರ ಬಳಕೆ ಸಾಧ್ಯತೆ ಈಗಿನ ಸನ್ನಿವೇಶದಲ್ಲಿ ಇಲ್ಲ ಎಂದು ರಷ್ಯಾ ಹೇಳಿದೆ. ತನ್ನ ಅಸ್ತಿತ್ವವಾದಕ್ಕೆ ಅಪಾಯ ಎದುರಾಗುವ ಸಂದರ್ಭ ಬಂದರೆ ಮಾತ್ರವೇ ಅಣ್ವಸ್ತ್ರ ಉಪಯೋಗ ಮಾಡಲಾಗುವುದು ಎಂದು ಅದು ತಿಳಿಸಿದೆ. ಈ ನಡುವೆ ಮಾರಿಯುಪೋಲ್ ಬಂದರು ನಗರದ ಮೇಲೆ ರಷ್ಯಾ ಪಡೆಗಳು ಮತ್ತೆ ಎರಡು ಸೂಪರ್ ಪವರ್‌ಫುಲ್ ಬಾಂಬ್‌ಗಳನ್ನು ಹಾಕಿದೆ. ಇದರಿಂದ ನಗರದಿಂದ ನಾಗರಿಕರ ಸ್ಥಳಾಂತರ ಕಾರ್ಯಕ್ಕೆ ಪುನಃ ತೊಡಕು ಎದುರಾಗಿದೆ. ಅಲ್ಲಿ ಇನ್ನೂ ಎರಡು ಲಕ್ಷ ಜನರು ಸಿಲುಕಿದ್ದಾರೆ.
from India & World News in Kannada | VK Polls https://ift.tt/u95SZCr
from India & World News in Kannada | VK Polls https://ift.tt/u95SZCr
IPL 2022: ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಡೇನಿಯಲ್ ವೆಟೋರಿ!
ಮುಂಬರುವ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕೆಂದು ನ್ಯೂಜಿಲೆಂಡ್ ಮಾಜಿ ನಾಯಕ ಡೇನಿಯಲ್ ವೆಟೋರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದರೆ, ಪವರ್‌ಪ್ಲೇನಲ್ಲಿ ರನ್‌ಗಳ ವೇಗವನ್ನು ಹೆಚ್ಚಿಸಬಲ್ಲರು ಮತ್ತು ಅವರು ಹೆಚ್ಚಿನ ಸಮಯ ಕ್ರೀಸ್‌ನಲ್ಲಿದ್ದರೆ ಶರವೇಗದಲ್ಲಿ ತಂಡದ ಮೊತ್ತವನ್ನು ಹೆಚ್ಚಿಸಬಲ್ಲರು. ಈ ಕಾರಣದಿಂದ ವಿರಾಟ್ ಕೊಹ್ಲಿಯನ್ನು ಆರಂಭಿಕನನ್ನಾಗಿ ಆಡಿಸಬೇಕೆಂದು ಕಿವೀಸ್ ಮಾಜಿ ಸ್ಪಿನ್ನರ್ ಸಲಹೆ ನೀಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CmVln1i
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CmVln1i
ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿಷೇಧ: ಆಕ್ಷನ್‌ಗೆ ರಿಯಾಕ್ಷನ್ ಅಂದ್ರು ಆರಗ ಜ್ಞಾನೇಂದ್ರ..!
'ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ಶಾಂತಿ ಸುವ್ಯವಸ್ಥೆ ಕದಡದಂತೆ ನೋಡಿಕೊಳ್ಳುತ್ತೇವೆ. ಹಿಜಾಬ್ ತೀರ್ಪು ವಿರೋಧಿಸಿ ಒಂದು ಕೋಮಿನವರು ಅಂಗಡಿ ಬಂದ್ ಮಾಡಿದ್ರು. ಇದೀಗ ಆಕ್ಷನ್‌ಗೆ ರಿಯಾಕ್ಷನ್ ಎನ್ನುವಂತೆ ಆಗಿದೆ. ಈ ಬಗ್ಗೆ ನಾನು ವರದಿ ಪಡೆಯುತ್ತೇನೆ' - ಆರಗ ಜ್ಞಾನೇಂದ್ರ
from India & World News in Kannada | VK Polls https://ift.tt/FE1dJVy
from India & World News in Kannada | VK Polls https://ift.tt/FE1dJVy
ದೀರ್ಘಕಾಲದ ಗೆಳತಿ ಸ್ಟೆಲ್ಲಾ ಮಾರಿಸ್ ಜತೆ ಜೈಲಿನಲ್ಲಿಯೇ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಮದುವೆ
ಮಹತ್ವದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಪ್ರಕರಣದಲ್ಲಿ ಲಂಡನ್ ಜೈಲಿನಲ್ಲಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಅವರು ತಮ್ಮ ದೀರ್ಘಕಾಲದ ಸಂಗಾತಿ ಹಾಗೂ ವಕೀಲೆ ಸ್ಟೆಲ್ಲಾ ಮಾರಿಸ್ ಅವರನ್ನು ಕಾರಾಗೃಹದಲ್ಲಿಯೇ ಬುಧವಾರ ಮದುವೆಯಾಗಲಿದ್ದಾರೆ. ಅಸ್ಸಾಂಜ್ ಅವರು ಅಮೆರಿಕಕ್ಕೆ ಗಡಿಪಾರಾಗುವ ಭೀತಿ ಎದುರಿಸುತ್ತಿದ್ದಾರೆ.
from India & World News in Kannada | VK Polls https://ift.tt/YbpGViM
from India & World News in Kannada | VK Polls https://ift.tt/YbpGViM
Secunderabad Fire: ಗೋದಾಮಿನಲ್ಲಿ ಭೀಕರ ಅಗ್ನಿ ಅನಾಹುತ: 11 ಕಾರ್ಮಿಕರು ಜೀವಂತ ದಹನ
ತೆಲಂಗಾಣದ ಸಿಕಂದರಾಬಾದ್‌ನ ಭೋಯಿಗುಡ ಪ್ರದೇಶದಲ್ಲಿನ ಟಿಂಬರ್ ಗೋದಾಮು ಒಂದರಲ್ಲಿ ಬುಧವಾರ ನಸುಕಿನಲ್ಲಿ ಉಂಟಾಗಿ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಬಿಹಾರದಿಂದ ವಲಸೆ ಬಂದವರಾಗಿದ್ದಾರೆ. ನಾಲ್ಕೈದು ಮಂದಿ ಬೆಂಕಿಯ ಜ್ವಾಲೆಗಳಿಂದ ತಪ್ಪಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
from India & World News in Kannada | VK Polls https://ift.tt/K9UpjPh
from India & World News in Kannada | VK Polls https://ift.tt/K9UpjPh
'7 ರಿಂದ 8 ಗಂಟೆಗಳವರೆಗೆ ನೋವು ಕಾಡಿತ್ತು' : ಗಾಯದ ಅನುಭವ ಹಂಚಿಕೊಂಡ ಶುಭಮನ್ ಗಿಲ್!
ಕಳೆದ ಎರಡು ವರ್ಷಗಳಿಂದ ಕೋವಿಡ್-19 ಸೋಂಕು ಇಡೀ ಜಗತ್ತಿನಾದ್ಯಂತ ಕಾಡುತ್ತಿದೆ. ಇದು ಕ್ರೀಡಾ ಜಗತ್ತಿನ ಮೇಲೆಯೂ ಗಂಭೀರ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಅಂತಾಷ್ಟ್ರೀಯ ಕ್ರಿಕೆಟ್ ಕೂಡ ಕಳೆದ ಎರಡು ವರ್ಷಗಳಿಂದ ಬಯೋ-ಬಬಲ್ ವತಾವರಣದಲ್ಲಿ ನಡೆಯುತ್ತಿದೆ. ಇದರಿಂದ ಆಟಗಾರರು ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ಸಾಕಷ್ಟು ಹಿನ್ನಡೆ ಅನುಭವಿಸಿದ್ದಾರೆ. ಅದರಂತೆ ಟೀಮ್ ಇಂಡಿಯಾ ಆರಂಭಿಕ ಶುಭಮನ್ ಗಿಲ್ 2021ರ ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರ ನಡೆದಿದ್ದರು. ಇದೀಗ ಅವರು ತಮ್ಮ ಗಾಯದ ಅನುಭವವನ್ನು ವಿವರಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/bQEoIGP
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/bQEoIGP
ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿ.ಮೀಗೆ ಒಂದೇ ಟೋಲ್ ಬೂತ್: ನಿತಿನ್ ಗಡ್ಕರಿ
ವಾಹನ ಸವಾರರಿಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಭ ಸುದ್ದಿ ನೀಡಿದ್ದಾರೆ. ದೇಶಾದ್ಯಂತ ಎಲ್ಲಾ ಹೆದ್ದಾರಿಗಳಲ್ಲಿ ಪ್ರತಿ 60 ಕಿ.ಮೀ.ಗೆ ಒಂದೇ ಟೋಲ್ ಸಂಗ್ರಹ ಕೇಂದ್ರ ಇರಲಿದ್ದು, 60 ಕಿ.ಮೀ. ಅಂತರದ ನಡುವೆ ಇರುವಂತಹ ಹೆಚ್ಚುವರಿ ಟೋಲ್ ಬೂತ್‌ಗಳನ್ನು ಮೂರು ತಿಂಗಳಲ್ಲಿ ಮುಚ್ಚಲಾಗುವುದು ಎಂದು ಅವರು ತಿಳಿಸಿದ್ದಾರೆ.
from India & World News in Kannada | VK Polls https://ift.tt/1dL6n3Y
from India & World News in Kannada | VK Polls https://ift.tt/1dL6n3Y
ಹಳ್ಳಿಗರಿಗೆ ಸಾರಿಗೆ ದುಸ್ವಪ್ನ; ಟಾಪ್ ಮೇಲೆ ನೇತಾಡೋದು, ಅತಿವೇಗದ ಚಾಲನೆ ಮಾಮೂಲು!
Pavagada Accident: ರಾಜ್ಯ ಮಟ್ಟದಲ್ಲಿಅವಘಡಗಳು ಸಂಭವಿಸಿದ ವೇಳೆ ಮಾತ್ರ ನಾಮ್‌ಕೇವಾಸ್ಥೆ ರಸ್ತೆ ಬದಿ ತಮ್ಮ ಆರ್‌ಟಿಒ ಕಾರಿನೊಂದಿಗೆ ಕಾಣಿಸಿಕೊಳ್ಳುವ ಅಧಿಕಾರಿ ವರ್ಗ, ಘಟನೆಯ ಬಿಸಿ ಕಡಿಮೆಯಾದ ಕೂಡಲೇ ಕಚೇರಿಗಳಿಗೆ ಸೀಮಿತವಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಅವಧಿ ಮೀರಿದ ನಂತರ ರಸ್ತೆಗಿಳಿಯುತ್ತಿರುವ ಬಸ್‌ಗಳು, ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಸೇರಿದಂತೆ ಸಂಚಾರಿ ನಿಯಮಗಳು ಸಂಪೂರ್ಣ ಉಲ್ಲಂಘನೆಯಾಗುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಕಡಿವಾಣಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ, ಜನಸಾಮಾನ್ಯರು ಆತಂಕದಲ್ಲೇ ನಿತ್ಯ ಸಂಚರಿಸಬೇಕಾದ ದುಸ್ಥಿತಿಯಿದೆ.
from India & World News in Kannada | VK Polls https://ift.tt/migqXPv
from India & World News in Kannada | VK Polls https://ift.tt/migqXPv
ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣಾ ಕೆಲಸಗಳಿಂದ ಮುಕ್ತಿ ನೀಡಲು ಸರ್ಕಾರ ನಿರ್ಧಾರ
ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ಉಪ ಚುನಾವಣೆಗಳೂ ಸೇರಿದಂತೆ ಪ್ರತಿ ವರ್ಷ ನಾನಾ ಚುನಾವಣೆಗಳು ಜರುಗುತ್ತಿದ್ದು, ಶಿಕ್ಷಕರು ಹಾಗೂ ಇತರ ಅಧಿಕಾರಿಗಳೊಂದಿಗೆ ಬಿಎಲ್‌ಒಗಳನ್ನಾಗಿ ಅಂಗನವಾಡಿ ಕಾರ್ಯಕರ್ತೆಯರನ್ನೂ ಚುನಾವಣಾ ಕಾರ್ಯಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಇದರಿಂದಾಗಿ ಒಂದು ಚುನಾವಣೆ ಆರಂಭವಾಗಿ ಮುಕ್ತಾಯದವರೆಗೆ ಒಟ್ಟು 45 ದಿನಗಳ ಕಾಲ ಚುನಾಣಾ ಕಾರ್ಯಗಳನ್ನು ಹೊರತುಪಡಿಸಿ ಅಂಗನವಾಡಿ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಚುನಾವಣಾ ಕಾರ್ಯಗಳಿಂದ ಮುಕ್ತಿಗೊಳಿಸುವಂತೆ ಹಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯಾದ್ಯಂತ ಹೋರಾಟ ನಡೆಸುತ್ತಾ ಬಂದಿದ್ದರು.
from India & World News in Kannada | VK Polls https://ift.tt/Pltp2i5
from India & World News in Kannada | VK Polls https://ift.tt/Pltp2i5
ಹೆಬ್ಬಾಳ ರಸ್ತೆ ಅಪಘಾತ: ತನಿಖಾ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ
ಮಳೆಯಿಂದಾಗಿ ಕೆಳ ಸೇತುವೆಯಲ್ಲಿ ನೀರು ನಿಂತದ್ದು ಗಮನಕ್ಕೆ ಬಂದಿದೆ. ಮಳೆ ಬಂದಾಗ ಕೊಂಚ ನೀರು ನಿಲ್ಲುವುದು ಸಹಜ. ಆದರೆ, ಜನರು ಸ್ಕೈವಾಕ್, ಪಾದಚಾರಿ ಸುರಂಗ ಮಾರ್ಗ ಬಳಸದೆ ಅಪಾಯ ತಂದುಕೊಳ್ಳುವುದು ಸರಿಯಲ್ಲ. ಜನರು ರಸ್ತೆ ದಾಟುವುದನ್ನು ತಪ್ಪಿಸಲು ವಿಭಜಕದ ಎತ್ತರವನ್ನು ಇನ್ನೂ ಒಂದೂವರೆ ಅಡಿಯಷ್ಟು ಎತ್ತರಿಸಲಾಗುವುದು. ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
from India & World News in Kannada | VK Polls https://ift.tt/e9Zvr5g
from India & World News in Kannada | VK Polls https://ift.tt/e9Zvr5g
ವಿಶ್ವ ಜಲ ದಿನ 2022: ನೀರಲ್ಲವಿದು ಜೀವ ಜಲ! ಅಂತರ್ಜಲ ಸಂರಕ್ಷಣೆಯತ್ತ ಇರಲಿ ಕಾಳಜಿ!
ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಹೆಚ್ಚಾಗುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಶ್ರಮಿಸುತ್ತಿದೆ. ಸುಸ್ಥಿರ ಅಂತರ್ಜಲ ಅಭಿವೃದ್ಧಿಯ ಗುರಿಯೊಂದಿಗೆ ಪ್ರಸಕ್ತ ವರ್ಷ 'ವಿಶ್ವ ಜಲದಿನ'ವನ್ನು ಆಚರಿಸಲಾಗುತ್ತಿದೆ.
from India & World News in Kannada | VK Polls https://ift.tt/HioQmN2
from India & World News in Kannada | VK Polls https://ift.tt/HioQmN2
ಐಪಿಎಲ್ 2022: ಕ್ರಿಕೆಟ್ ನಿರೂಪಣೆಗೆ ಮರಳಲಿರುವ ಮಯಾಂತಿ ಲ್ಯಾಂಗರ್!
ಹಲವು ವರ್ಷಗಳಿಂದ ಕ್ರೀಡಾ ನಿರೂಪಣೆಯಿಂದ ದೂರ ಉಳಿದಿದ್ದ ಜನಪ್ರಿಯ ನಿರೂಪಕಿ ಮಯಾಂತಿ ಲ್ಯಾಂಗರ್, 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂಲಕ ಮತ್ತೆ ಕ್ಯಾಮೆರಾ ಮುಂದೆ ಹಾಜರಾಗಲಿದ್ದಾರೆ. ಭಾರತ ತಂಡದ ಮಾಜಿ ಆಟಗಾರ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಕೂಡ ಆಗಿರುವ ಮಯಾಂತಿ, ತಮ್ಮ ಮೊದಲ ಮಗುವಿನ ಬಳಿಕ ಕ್ರೀಡಾ ನಿರೂಪಣೆಯ ಕೆಲಸದಿಂದ ದೂರ ಉಳಿದಿದ್ದರು. ಐಪಿಎಲ್ 2022 ಟೂರ್ನಿ ಮಾರ್ಚ್ 26ರಂದು ಮುಂಬೈನಲ್ಲಿ ಶುರುವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಮತ್ತು ಕೋಲ್ಕತಾ ತಂಡಗಳು ಕಾದಾಟ ನಡೆಸಲಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Zjr0wR1
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Zjr0wR1
IPL 2022: ಮುಂಬೈನಲ್ಲಿ ಆರ್‌ಸಿಬಿ ಬಳಗ ಸೇರಿದ ವಿರಾಟ್ ಕೊಹ್ಲಿ!
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ಕೆಲ ದಿನಗಳು ಮಾತ್ರವೇ ಬಾಕಿಯಿದೆ. ಕಳೆದ 14 ಆವೃತ್ತಿಗಳಲ್ಲಿಯೂ ಆಡಿ ಈವರೆಗೆ ಒಮ್ಮೆಯೂ ಟ್ರೋಫಿ ಗೆಲ್ಲದೇ ಉಳಿದ ಮೂರು ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಒಂದು. ಉಳಿದ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತನ್ನ ಹೆಸರು ಬದಲಾಯಿಸಿ ಎಲ್ಲಾ ಅದೃಷ್ಟ ಪರೀಕ್ಷೆ ನಡೆಸಿವೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದೇ ಹೆಸರಲ್ಲಿ 14 ವರ್ಷಗಳ ಕಾಲ ದಂಡಯಾತ್ರೆ ನಡೆಸಿ, ಯಶಸ್ಸು ಕಾಣದೇ ಉಳಿದಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ruPGKwi
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ruPGKwi
ಕನ್ನಡಿಗ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ನಂಗೆ ತುಂಬಾ ಇಷ್ಟ ಎಂದ ಸಂಗಕ್ಕಾರ!
ಬಹುನಿರೀಕ್ಷಿತ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುವ ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮಾಯೆರ್ ಹಾಗೂ ರಿಯಾನ್ ಪರಾಗ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಕ್ರಿಕೆಟ್ ಡೈರೆಕ್ಟರ್ ಕುಮಾರ ಸಂಗಕ್ಕಾರ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅವರ ಲೆಗ್ ಸೈಡ್ ಬ್ಯಾಟಿಂಗ್, ಫ್ಲಿಕ್ ಶಾಟ್ ಹಾಗೂ ವೇಗದ ಬೌಲರ್‌ಗಳಿಗೆ ಆಡುವ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/BqRJHeh
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/BqRJHeh
ಮಾಸ್ಕ್‌ಗೆ ಗುಡ್‌ಬೈ? ನಿಯಮ ಸಡಿಲಿಕೆ ಮಾಡುವಂತೆ ಕೇಂದ್ರಕ್ಕೆ ತಜ್ಞರ ಸಲಹೆ
ಮುಂದಿನ ದಿನಗಳಲ್ಲಿ ಕೊರೊನಾ ವೈರಾಣು ರಚನೆ ಮಾರ್ಪಡಿಸಿಕೊಂಡು ದಾಳಿ ಇಟ್ಟರೂ ಕೂಡ 2ನೇ ಅಲೆಯಲ್ಲಿ ಆದಷ್ಟು ಗಂಭೀರ ಪರಿಣಾಮ ಬೀರಲಾಗುವುದಿಲ್ಲ ಎಂದು ಏಮ್ಸ್‌ನ ಹಿರಿಯ ವೈರಾಣು ತಜ್ಞ ವೈದ್ಯ ಡಾ. ಸಂಜಯ್ ರಾಯ್ ಹೇಳಿದ್ದಾರೆ.
from India & World News in Kannada | VK Polls https://ift.tt/nMlNV3Z
from India & World News in Kannada | VK Polls https://ift.tt/nMlNV3Z
ವಿರಾಟ್ ಕೊಹ್ಲಿ-ಬಾಬರ್ ಆಝಮ್ ನಡುವಣ ವ್ಯತ್ಯಾಸ ತಿಳಿಸಿದ ಕಮಿನ್ಸ್!
ಪಾಕಿಸ್ತಾನ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ನಿಮಿತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಝಮ್ ಬ್ಯಾಟಿಂಗ್ ಸಾಮರ್ಥ್ಯವನ್ನು ಹೋಲಿಕೆ ಮಾಡಿದರು. ಈ ಇಬ್ಬರೂ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಾಗಿದ್ದು, ಟೆಸ್ಟ್, ಓಡಿಐ ಹಾಗೂ ಟಿ20 ಎಲ್ಲಾ ಸ್ವರೂಪದಲ್ಲಿಯೂ ಪರಿಪೂರ್ಣ ಆಟಗಾರರಾಗಿದ್ದಾರೆ. ಅದರಂತೆ ಕಳೆದ ಹಲವು ವರ್ಷಗಳಿಂದ ಆಸ್ಟ್ರೇಲಿಯಾ ವಿರುದ್ಧ ಇವರಿಬ್ಬರೂ ಸಾಕಷ್ಟು ಶತಕಗಳನ್ನು ಸಿಡಿಸಿದ್ದಾರೆಂದು ಪ್ಯಾಟ್ ಕಮಿನ್ಸ್ ಗುಣಗಾನ ಮಾಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/x0F4bqn
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/x0F4bqn
ಔಷಧ ಬೆರೆಸಿದ ಜ್ಯೂಸ್ ಕುಡಿಸಿ ನಗ್ನ ವಿಡಿಯೊ ಮಾಡಿ ಬ್ಲ್ಯಾಕ್‌ಮೇಲ್; ಮೂವರ ಬಂಧನ, ಮಹಿಳೆಗೆ ಶೋಧ
ಗೌತಮ್ ಅವರಿಗೆ ಹೊಸಕೋಟೆ ಸಮೀಪದ ಐಶ್ವರ್ಯ ಹೋಟೆಲ್‌ನಲ್ಲಿ ಜ್ಯೋತಿ ವಿಶ್ವನಾಥ್ ಪರಿಚಯವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಸ್ನೇಹಿತರಾಗಿ ಆತ್ಮೀಯರಾಗಿದ್ದರು. ಕೆಲ ದಿನಗಳ ಬಳಿಕ ಭಟ್ಟರ ಹಳ್ಳಿಯ ಹೋಟೆಲ್‌ಗೆ ಗೌತಮ್ ಅವರನ್ನು ಕರೆಸಿಕೊಂಡ ಜ್ಯೋತಿ, ಪ್ರತ್ಯೇಕ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಸಲುಗೆಯಿಂದ ವರ್ತಿಸಿದ್ದಳು. ಗೌತಮ್ ನಿದ್ರೆಯ ಮಂಪರಿನಿಂದ ಹೊರಬಂದು ನೋಡಿದಾಗ ಮಹಿಳೆ ಪರಾರಿಯಾಗಿದ್ದಳು.
from India & World News in Kannada | VK Polls https://ift.tt/tfVYrun
from India & World News in Kannada | VK Polls https://ift.tt/tfVYrun
ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ; ಕನ್ನಡಿಗನೇ ನನ್ನ ನೆಚ್ಚಿನ ನಾಯಕ ಎಂದ ಶ್ರೇಯಸ್ ಅಯ್ಯರ್!
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಜ್ಜಾಗುತ್ತಿರುವ ಶ್ರೇಯಸ್ ಅಯ್ಯರ್ ತಮ್ಮ ಟೀಮ್ ಇಂಡಿಯಾ ಸಹ ಆಟಗಾರ ಕೆ.ಎಲ್ ರಾಹುಲ್ ನಾಯಕತ್ವವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಶ್ರೇಯಸ್ ಅಯ್ಯರ್ ಆಡಿದ್ದರು. ಇದರ ಆಧಾರದ ಮೇಲೆ ಕೆ.ಎಲ್ ರಾಹುಲ್ ತಮ್ಮ ನೆಚ್ಚಿನ ನಾಯಕ ಎಂದು ಶ್ರೇಯಸ್ ಅಯ್ಯರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ರಾಹುಲ್ ನಾಯಕತ್ವದ ಅಡಿಯಲ್ಲಿ ಅಯ್ಯರ್ ಮೂರು ಓವರ್ ಬೌಲ್ ಕೂಡ ಮಾಡಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/rNz3QiD
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/rNz3QiD
ರಂಗಾಯಣದಲ್ಲಿ ಮಾಜಿ ಸಿಎಂ ಮಗನ ಶ್ರದ್ಧಾಂಜಲಿ ಸಭೆ ಮಾಡಿದಾಗ ಯಾಕೆ ಪ್ರಶ್ನಿಸಲಿಲ್ಲ?; ಅಡ್ಡಂಡ ಕಾರ್ಯಪ್ಪ ಟೀಕೆ
‘ತನ್ನ ಹೆಂಡತಿ, ಮಕ್ಕಳಿಗೆ ನಿರ್ದೇಶಕರೊಬ್ಬರು ಸಂಭಾವನೆ ಕೊಡಿಸಿಕೊಂಡಾಗ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಬಿ.ವಿ.ಕಾರಂತರ ಹೆಸರಿನಲ್ಲಿ ಕಾಸು ಮಾಡಿಕೊಂಡಾಗಲೂ ಎಲ್ಲರೂ ಸುಮ್ಮನಿದ್ದರು. ಬಿಳಿ ಶರ್ಟು- ಬಿಳಿ ಪ್ಯಾಂಟು ಹಾಕಿಕೊಂಡು ಇದೇ ಸಮಾಜವಾದ ಎನ್ನುತ್ತಾ ಕನ್ನಡ ಸಂಸ್ಕೃತಿ ಇಲಾಖೆಯಿಂದ 75 ಲಕ್ಷ ಹಣವನ್ನು ಪಡೆದುಕೊಂಡು, 2 ಎಕರೆ ಜಾಗವನ್ನು ಲಪಟಾಯಿಸಿದ ಪೆಟ್ರೋಲ್ ಬಂಕ್ ಮಾಲೀಕನನ್ನೂ ಯಾರೂ ಪ್ರಶ್ನಿಸಲಿಲ್ಲ. ಶ್ರೇಷ್ಠ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರನ್ನು ಈ ಹಿಂದೆ ರಂಗಾಯಣಕ್ಕೆ ಒಮ್ಮೆಯೂ ಆಹ್ವಾನಿಸದಿದ್ದರೂ ಯಾರು ಯಾಕೆ ಪ್ರಶ್ನಿಸಲಿಲ್ಲ’ ಎಂದು ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದರು.
from India & World News in Kannada | VK Polls https://ift.tt/6v1eg2O
from India & World News in Kannada | VK Polls https://ift.tt/6v1eg2O
4 ರಾಜ್ಯಗಳಲ್ಲಿ ಬಿಜೆಪಿಯಿಂದ ಸರ್ಕಾರ ರಚನೆ ಕಸರತ್ತು! ಮಣಿಪುರಕ್ಕೆ ಬಿರೇನ್ ಸಿಂಗ್; ಉತ್ತರಾಖಂಡ, ಗೋವಾಕ್ಕೆ ಯಾರು?
ಹೊಸದಿಲ್ಲಿ: ಹೋಳಿ ಹುಣ್ಣಿಮೆ ಮುಗಿಯುತ್ತಿದ್ದಂತೆಯೇ ನಾಲ್ಕು ರಾಜ್ಯಗಳಲ್ಲಿ ಸರಕಾರ ರಚನೆ ಪ್ರಕ್ರಿಯೆಗೆ ಬಿಜೆಪಿ ಚಾಲನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಭಾನುವಾರ ಸಂಜೆ ನಡೆದ ಉನ್ನತ ಮಟ್ಟದ ಸಭೆಯು ಮುಖ್ಯಮಂತ್ರಿಗಳ ಆಯ್ಕೆಯನ್ನು ಬಹುತೇಕ ಅಂತಿಮಗೊಳಿಸಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿಅಧಿಕೃತವಾಗಿ ಘೋಷಿಸುವ ಔಪಚಾರಿಕ ಪ್ರಕ್ರಿಯೆ ಸೋಮವಾರ ನಡೆಯಲಿದೆ.ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಮಾರ್ಚ್ 25ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉತ್ತರಾಖಂಡದಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಮುಂದುವರಿಸುವ ಚರ್ಚೆ ನಡೆದಿದೆ. ಚುನಾವಣೆಯಲ್ಲಿ ಧಾಮಿ ಸೋತಿದ್ದರಿಂದ ವರಿಷ್ಠರಿಗೆ ಆಯ್ಕೆ ಇಕ್ಕಟ್ಟು ಸೃಷ್ಟಿಯಾಗಿದೆ. ಇನ್ನು ಗೋವಾದಲ್ಲಿಎರಡನೇ ಅವಧಿಗೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ಪ್ರಮೋದ್ ಸಾವಂತ್ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸುವುದು ಬಹುತೇಕ ಖಚಿತವಾಗಿದೆ.
from India & World News in Kannada | VK Polls https://ift.tt/BTEFoYC
from India & World News in Kannada | VK Polls https://ift.tt/BTEFoYC
ಭಾರತಕ್ಕೆ ಸಲಾಂ ಎಂದ ಇಮ್ರಾನ್ ಖಾನ್! ಸ್ವತಂತ್ರ ವಿದೇಶಾಂಗ ನೀತಿಗೆ ಪಾಕ್ ಪ್ರಧಾನಿ ಮೆಚ್ಚುಗೆ
ರಷ್ಯಾ ಉಕ್ರೇನ್ ಸಮರದ ವೇಳೆ ಭಾರತ ಇಡುತ್ತಿರುವ ಎಚ್ಚರಿಕೆಯ ಹೆಜ್ಜೆಗಳನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರಶಂಸಿಸಿದ್ದಾರೆ. ಭಾರತದ ಸ್ವತಂತ್ರ ವಿದೇಶಾಂಗ ನೀತಿಗೆ ಇಮ್ರಾನ್ ಖಾನ್ ಮೆಚ್ಚುಗೆ ಸೂಚಿಸಿದ್ದು, ಎಲ್ಲ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/oDBObNc
from India & World News in Kannada | VK Polls https://ift.tt/oDBObNc
'ಕಾಶ್ಮೀರ್ ಫೈಲ್ಸ್' ಮೇಲೆ ತೋರಿದ ಆಸಕ್ತಿಯನ್ನು 'ಕರ್ನಾಟಕ ಫೈಲ್ಸ್' ಮೇಲೆಯೂ ತೋರಿ: ಪ್ರಿಯಾಂಕ್ ಖರ್ಗೆ
ಕಳೆದ ವಾರ ರಾಜ್ಯದಲ್ಲಿ ಬಿಜೆಪಿ ಟೂಲ್ ಕಿಟ್ ಪ್ರಚಾರದ ಸಿನಿಮಾ 'ಕಾಶ್ಮೀರ್ ಫೈಲ್ಸ್' ಬಗ್ಗೆ ಸಾಕಷ್ಟು ಪ್ರಚಾರ ಮಾಡಿದರು. 'ಕಾಶ್ಮೀರ ಫೈಲ್ಸ್' ಚಿತ್ರದ ಬಗೆಗಿನ ಆಸಕ್ತಿಯನ್ನು ಕರ್ನಾಟಕ ಫೈಲ್ಸ್ ಕಡೆಗೂ ತೋರಬೇಕು ಎಂದಿರುವ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ, ನಾನಾ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 2019-20 ಹಾಗೂ 2020-21ನೇ ಸಾಲಿನಲ್ಲಿ 14,577 ಕೊಳವೆ ಬಾವಿ ಕೊರೆಯುವ ಸಂಬಂಧ 431 ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.
from India & World News in Kannada | VK Polls https://ift.tt/xvh2Xdf
from India & World News in Kannada | VK Polls https://ift.tt/xvh2Xdf
ಸೋಲಿಗೆ ಗಾಂಧಿ ಕುಟುಂಬವನ್ನು ಮಾತ್ರ ದೂರುವುದು ಸಲ್ಲ: ಮಲ್ಲಿಕಾರ್ಜುನ ಖರ್ಗೆ
ಚುನಾವಣೆಗಳಲ್ಲಿನ ಸೋಲಿಗೆ ಗಾಂಧಿ ಕುಟುಂಬವನ್ನು ಮಾತ್ರವೇ ದೂರುವುದು ಸರಿಯಲ್ಲ, ಏಕೆಂದರೆ ಸೋಲಿಗೆ ಪಕ್ಷದ ಎಲ್ಲ ನಾಯಕರೂ ಕಾರಣರು ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಪಕ್ಷವನ್ನು ಬಲಪಡಿಸಬೇಕು. ಹಾಗೆಯೇ ಸೋಲಿಗೆ ಸಹ ಎಲ್ಲರೂ ಸಮಾನ ಕಾರಣರು. ಅದಕ್ಕೆ ಗಾಂಧಿ ಕುಟುಂಬವನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲಾಗದು ಎಂದಿದ್ದಾರೆ.
from India & World News in Kannada | VK Polls https://ift.tt/hDqPCdm
from India & World News in Kannada | VK Polls https://ift.tt/hDqPCdm
ತಡೆಯಾಜ್ಞೆ ಇದ್ದಾಗ ಪಾಸ್‌ಪೋರ್ಟ್ ನವೀಕರಣಕ್ಕೆ ಅನುಮತಿ ಅನಗತ್ಯ: ಹೈಕೋರ್ಟ್ ಆದೇಶ
ಅಪರಾಧ ಪ್ರಕರಣಗಳಲ್ಲಿ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದಾಗ ಪಾಸ್‌ಪೋರ್ಟ್ ನವೀಕರಣಕ್ಕೆ ಮತ್ತೆ ವಿಚಾರಣಾ ನ್ಯಾಯಾಲಯದ ಅನುಮತಿ ಅನಗತ್ಯ ಎಂದು ಹೈಕೋರ್ಟ್ ಆದೇಶಿಸಿದೆ. ಕ್ರಿಮಿನಲ್ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ಇಲ್ಲದಿದ್ದಾಗ ಮಾತ್ರ ವಿಚಾರಣಾ ನ್ಯಾಯಾಧೀಶರು ತಮ್ಮ ಕೆಲಸ ಮಾಡಲು ಸ್ವತಂತ್ರರಾಗಿರುತ್ತಾರೆ. ಆದರೆ, ಹೈಕೋರ್ಟ್ ತಡೆ ನೀಡಿರುವ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಅನುಮತಿ ತರುವಂತೆ ಸೂಚಿಸುವುದು ಜನರಿಂದ ಅಸಾಧ್ಯವಾದ ಕಾರ್ಯ ಮಾಡಿಸಿದಂತಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
from India & World News in Kannada | VK Polls https://ift.tt/FqGVKyY
from India & World News in Kannada | VK Polls https://ift.tt/FqGVKyY
Hijab Row: ಹಿಜಾಬ್ ತೀರ್ಪು: ನ್ಯಾಯಮೂರ್ತಿಗೆ ಬೆದರಿಕೆ ಹಾಕಿದವನ ವಿರುದ್ಧ ಎಫ್‌ಐಆರ್
ಹಿಜಾಬ್ ಕುರಿತು ಮಹತ್ವದ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಾಮೂರ್ತಿಗಳಿಗೆ ಪ್ರಾಣ ಬೆದರಿಕೆ ಹಾಕಿದ್ದ ತಮಿಳುನಾಡು ಮೂಲದ ಅಪರಿಚಿತ ವ್ಯಕ್ತಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳುನಾಡಿನಲ್ಲಿ ಕೂಡ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
from India & World News in Kannada | VK Polls https://ift.tt/IA7q3dk
from India & World News in Kannada | VK Polls https://ift.tt/IA7q3dk
ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ $42 ಬಿಲಿಯನ್ ಹೂಡಿಕೆಗೆ ಜಪಾನ್ ಗುರಿ: ನರೇಂದ್ರ ಮೋದಿ
ಜಪಾನ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 42 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಗುರಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಅವರ ಮೊದಲ ಭಾರತ ಭೇಟಿಯ ವೇಳೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಅವರು ಈ ಹೇಳಿಕೆ ನೀಡಿದರು.
from India & World News in Kannada | VK Polls https://ift.tt/Kit7z5c
from India & World News in Kannada | VK Polls https://ift.tt/Kit7z5c
ಬಿಸಿಲು ತಣಿಸಲು ಎಳನೀರು, ಕಲ್ಲಂಗಡಿಗೆ ಮೊರೆ; ಹಾಸನದ ರಸ್ತೆ ಬದಿಗಳಲ್ಲಿ ಭರ್ಜರಿ ವ್ಯಾಪಾರ
ಬೇಸಿಗೆ ಕಾಡುತ್ತಿರುವುದನ್ನು ಅರಿತು ಎಲ್ಲೆಡೆ ರಸ್ತೆ ಬದಿಗಳಲ್ಲಿ ಎಳನೀರು ಮಾರಾಟಗಾರರು ಕಳೆದ ವಾರದಿಂದ ಹೆಚ್ಚಾಗಿದ್ದು ಚನ್ನರಾಯಪಟ್ಟಣ ಹಾಗೂ ವಿವಿಧೆಡೆಗಳಿಂದ ಎಳನೀರು ತಂದು ಮಾರಾಟ ನಡೆಸುತ್ತಿದ್ದಾರೆ. ಬಿಸಿಲಿನ ಧಗೆಯಿಂದ ರಕ್ಷಿಸಿಕೊಳ್ಳಲು ಎಳನೀರು ಮತ್ತು ಕಲ್ಲಂಗಡಿ ಹಣ್ಣಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ನಗರದ ಬಹುತೇಕ ಹಣ್ಣಿನ ಜ್ಯೂಸ್ ಸೆಂಟರ್‌ಗಳಲ್ಲಿಯೂ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಅನೇಕ ರಸ್ತೆ ಬದಿಗಳಲ್ಲಿಎಳನೀರು, ಕಲ್ಲಂಗಡಿ, ಸೌತೆಕಾಯಿ ಮಾರಾಟದ ಭರಾಟೆ ಜೋರಾಗಿ ನಡೆಯುತ್ತಿದೆ. ಬಹುತೇಕ ರಸ್ತೆ ಬದಿಗಳಲ್ಲಿ ಎಳನೀರು ಮತ್ತು ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ಕಂಡು ಬರುತ್ತಿದ್ದಾರೆ.
from India & World News in Kannada | VK Polls https://ift.tt/zIVyCQn
from India & World News in Kannada | VK Polls https://ift.tt/zIVyCQn
'ನಾನು ಕೂಡ 20 ರನ್ ಕೊಟ್ಟಿದ್ದೆ' : ಸ್ಟೋಕ್ಸ್‌ನಿಂದ ಕಲಿತ ಪಾಠ ನೆನೆದ ಚೇತನ್ ಸಾಕರಿಯ!
ರಾಜಸ್ಥಾನ್ ರಾಯಲ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪದಾರ್ಪಣೆ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೇಳಿಕೊಟ್ಟಿದ್ದ ಪಾಠ ನನ್ನಲ್ಲಿ ಅಪಾರ ವಿಶ್ವಾಸವನ್ನು ಹೆಚ್ಚಿಸಿತ್ತು ಎಂದು ಡೆಲ್ಲಿ ಕ್ಯಾಪಿಟಲ್ಸ್ ಯುವ ವೇಗಿ ಚೇತನ್ ಸಾಕರಿಯ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಚೊಚ್ಚಲ ಪಂದ್ಯದ ತಮ್ಮ ಮೂರನೇ ಓವರ್‌ನಲ್ಲಿ ಸಾಕರಿಯ ನೋ ಬಾಲ್ ಜೊತೆಗೆ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಈ ವೇಳೆ ಚೇತನ್ ಸಾಕರಿಯಗೆ ಬೆನ್ ಸ್ಟೋಕ್ಸ್ ಮರೆಯಾಗದ ಪಾಠವನ್ನು ಹೇಳಿಕೊಟ್ಟಿದ್ದರು. ಈ ಸಂಗತಿಯನ್ನು ಇದೀಗ ಚೇತನ್ ಸ್ಮರಿಸಿಕೊಂಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CR73YOX
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/CR73YOX
ಮದುವೆಗೆ ಜಾತಿ ಕಾರಣ ಹೇಳಿ 3 ವರ್ಷ ಪ್ರೀತಿಸಿದ ಯುವತಿಯನ್ನೇ ಪೆಟ್ರೋಲ್ ಸುರಿದು ಕೊಂದ ಕಿರಾತಕ!
ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ದಾನೇಶ್ವರಿ ಮತ್ತು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಕುಮಾರ್ ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಆತನ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಕುಮಾರ್, ದಾನೇಶ್ವರಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ. ಆಕೆಗೂ ತನ್ನಿಂದ ದೂರ ಇರುವಂತೆ ಸೂಚಿಸಿದ್ದ. ಆದರೆ, ಆಕೆ ‘ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಿಲ್ಲ’ ಎಂದು ಪ್ರಿಯಕರನಿಗೆ ಹೇಳಿದ್ದರು. ಆದರೆ, ‘ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಲು ಸಾಧ್ಯವಿಲ್ಲ’ ಎಂದು ಶಿವಕುಮಾರ್ ಹೇಳಿದ್ದ ಎಂದು ತಿಳಿದುಬಂದಿದೆ.
from India & World News in Kannada | VK Polls https://ift.tt/V3euGhT
from India & World News in Kannada | VK Polls https://ift.tt/V3euGhT
ವಿಮಾನದಲ್ಲಿ ಬಂದು ಮನೆಗಳವು ಮಾಡುತ್ತಿದ್ದ 2 ಅಂತಾರಾಜ್ಯ ಖದೀಮರ ಬಂಧನ
ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ ಆರೋಪಿಗಳು, ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ನಗರದಲ್ಲಿ ಬೈಕ್‌ಗಳನ್ನು ಕಳವು ಮಾಡಿ ಸುತ್ತಾಡುತ್ತಿದ್ದರು. ಮನೆ ಮುಂದೆ ಐದಾರು ದಿನಗಳಿಂದ ಬಿದ್ದಿರುವ ದಿನಪತ್ರಿಕೆಗಳನ್ನು ಗಮನಿಸಿ ಆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕ ಅಕ್ಕ-ಪಕ್ಕದ ಮನೆಯವರ ಚಲನವಲನಗಳ ಮೇಲೆ ನಿಗಾ ವಹಿಸುತ್ತಿದ್ದರು. ಅದೇ ರಾತ್ರಿ ಆ ಮನೆಯ ಬೀಗ ಮುರಿದು ಮನೆ ಕಳವು ಮಾಡಿ ಪರಾರಿಯಾಗುತ್ತಿದ್ದರು.
from India & World News in Kannada | VK Polls https://ift.tt/Ge4xhJZ
from India & World News in Kannada | VK Polls https://ift.tt/Ge4xhJZ
ರಾಜ್ಯದ ಯಾವುದೇ ಆಸ್ತಿಗಳನ್ನು ಮಾರಾಟ ಮಾಡುವ ಉದ್ದೇಶ ಸರಕಾರಕ್ಕಿಲ್ಲ; ಬಸವರಾಜ ಬೊಮ್ಮಾಯಿ
‘ಬಿಜೆಪಿ ಅವಧಿಯಲ್ಲಿ 12 ಪಾರಂಪರಿಕ ಕಟ್ಟಡಗಳನ್ನು ಅಡಮಾನವಿಡಲಾಗಿತ್ತು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಲ್ಲ ಕಟ್ಟಡಗಳನ್ನು ಋುಣಮುಕ್ತಗೊಳಿಸಲಾಯಿತು. ಹಾಗೇನಾದರೂ ಅಡಮಾನವಿಡಲು ನಿರ್ಧರಿಸಿದರೆ, 100 ವರ್ಷದ ಅವಧಿಗೆ ಗುತ್ತಿಗೆಗೆ ನೀಡಿರುವ ಕಟ್ಟಡಗಳನ್ನು ಅಡವಿಟ್ಟು ಸಾಲ ಪಡೆಯಿರಿ. ಬಡವರು, ವಲಸಿಗರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಕೊಡದೆ, ಮುಚ್ಚುವ ಷಡ್ಯಂತ್ರ ನಡೆಸಲಾಗುತ್ತಿದೆ. ಕ್ಯಾಂಟೀನ್‌ಗಳಿಗೆ ಬೆಂಜ್ ಕಾರಿನಲ್ಲಿ ಬಂದು ತಿಂದು ಹೋಗುತ್ತಿಲ್ಲ. ಅಲ್ಲಿ ಬಡವರು, ಕೂಲಿ ಕಾರ್ಮಿಕರಷ್ಟೇ ಬರುತ್ತಿದ್ದಾರೆ. ಹಾಗಾಗಿ, ಅನುದಾನ ಒದಗಿಸಬೇಕು’ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದರು.
from India & World News in Kannada | VK Polls https://ift.tt/P3VrLZz
from India & World News in Kannada | VK Polls https://ift.tt/P3VrLZz
ಎಂಎಸ್ ಧೋನಿ ಎಂದರೆ ಅಪಾರ ಗೌರವವಿದೆ ಎಂದ ಗೌತಮ್ ಗಂಭಿರ್!
ಅವಕಾಶ ಸಿಕ್ಕರೆ ಸಾಕು ಎಂಎಸ್ ಧೋನಿ ವಿರುದ್ಧ ಟೀಕೆಗಳ ಸುರಿ ಮಳೆ ಹರಿಸಲು ಸದಾ ಮುಂದಿರುತ್ತಿದ್ದ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಈಗ ಯೂ ಟರ್ನ್ ಹೊಡೆದು ಅಚ್ಚರಿ ಮೂಡಿಸಿದ್ದಾರೆ. ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಚಿಂಗ್ ಅಭಿಯಾನ ಆರಂಭಿಸುತ್ತಿರುವ ಗಂಭೀರ್, ಲಖನೌ ಸೂಪರ್ ಜಯಂಟ್ಸ್ ತಂಡದ ಪರ ಮೆಂಟರ್ ಆಗಿ ಕೆಲಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನೀಡಿರುವ ಸಂದರ್ಶನ ಒಂದರಲ್ಲಿ ಎಂಎಸ್ ಧೋನಿ ಬಗ್ಗೆ ಗುಣಗಾನ ಮಾಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/MJ8pAcn
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/MJ8pAcn
ನನ್ನ ವೃತ್ತಿ ಜೀವನದ ಯಶಸ್ಸಿಗೆ ವಿರಾಟ್ ಕೊಹ್ಲಿಯೇ ಕಾರಣ ಎಂದ ಸಿರಾಜ್!
ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಮೊಹಮ್ಮದ್ ಸಿರಾಜ್, 2018 ನನ್ನ ಪಾಲಿಗೆ ಅತ್ಯಂತ ಕೆಟ್ಟ ವರ್ಷವಾಗಿತ್ತು. ಆದರೆ ವೇಳೆ ವಿರಾಟ್ ಕೊಹ್ಲಿ ನನ್ನನ್ನು ಬೆಂಬಲಿಸಿದ್ದರು. ಈ ವೇಳೆ ಬೇರೆ ಯಾವುದೇ ತಂಡವಾಗಿದ್ದರೂ ನನ್ನನ್ನು ಕಿತ್ತು ಹೊಗೆಯುತ್ತಿದ್ದರು ಎಂದು ಹೇಳಿದ್ದಾರೆ. ಮಾರ್ಚ್ 26 ರಿಂದ ಆರಂಭವಾಗಲಿರುವ 2022ರ ಐಪಿಎಲ್ ಟೂರ್ನಿಯಲ್ಲಿ ಸಿರಾಜ್ ಕಣಕ್ಕೆ ಇಳಿಯಲಿದ್ದಾರೆ. ಅಂದಹಾಗೆ ಆರ್‌ಸಿಬಿ ಮಾರ್ಚ್ 27 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಮೊದಲನೇ ಪಂದ್ಯವಾಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/c8qOpju
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/c8qOpju
ಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿದ್ದ ಮಂಗಳೂರು-ಮೈಸೂರು ವಿಮಾನಯಾನ ಮರು ಆರಂಭಕ್ಕೆ ಬೇಡಿಕೆ
ಮಂಗಳೂರು-ಮೈಸೂರು ನಡುವೆ ಸುಮಾರು 250 ಕಿ.ಮೀ. ದೂರವಿದೆ. ರಸ್ತೆ ಮೂಲಕ ಖಾಸಗಿ ವಾಹನದಲ್ಲಿ ಸಂಚರಿಸಿದರೆ ಕನಿಷ್ಠ ಐದು ಗಂಟೆ ಬೇಕಾಗುತ್ತದೆ. ಬಸ್ ಮೂಲಕ ಸಂಚರಿಸಿದರೆ ಸುಮಾರು ಆರು ಗಂಟೆ ಬೇಕಾಗುತ್ತದೆ. ಇಷ್ಟೊಂದು ಸುದೀರ್ಘ ಪ್ರಯಾಣ ಹಲವರಿಗೆ ತುಂಬಾ ಸಮಯ ವ್ಯರ್ಥ ಮಾಡುವುದಲ್ಲದೆ ಒಂದೇ ದಿನದಲ್ಲಿ ಹೋಗಿ ಬರುವುದು ಕಷ್ಟದ ಕೆಲಸವಾಗುತ್ತದೆ. ಈ ಕಾರಣದಿಂದ ವಿಮಾನಯಾನ ಸೇವೆ ಇದ್ದಲ್ಲಿ ನೂರಾರು ಪ್ರಯಾಣಿಕರಿಗೆ ಅನುಕೂಲ ಆಗುತ್ತಿತ್ತು.
from India & World News in Kannada | VK Polls https://ift.tt/VlOzsnd
from India & World News in Kannada | VK Polls https://ift.tt/VlOzsnd
ಮಾರುಕಟ್ಟೆಯಲ್ಲಿ ಚಿಕನ್ ದರ ಏರಿಕೆ ಬಿಸಿ; ದುಪ್ಪಟ್ಟು ದರದಿಂದ ಕಂಗಾಲಾದ ಮಾಂಸಪ್ರಿಯರು!
ಕೊರೊನಾದಿಂದ ಹೊರಬಂದಿರುವ ಜನತೆಗೆ ಜಾತ್ರಾ ಮಹೋತ್ಸವಗಳು, ಧಾರ್ಮಿಕ ಕಾರ‍್ಯಕ್ರಮಗಳು, ಸಭೆ ಸಮಾರಂಭಗಳು ಹೆಚ್ಚುತ್ತಿದ್ದು, ಮಾರುಕಟ್ಟೆಯಲ್ಲಿ ಚಿಕನ್, ಮಟನ್‌ಗೆ ಬೇಡಿಕೆ ಹೆಚ್ಚಿದೆ. ಆದರೆ ಅಗತ್ಯಗನುಗುಣವಾಗಿ ಪೂರೈಕೆ ಇಲ್ಲವಾಗಿದೆ. ನಾಟಿ ಕೋಳಿ ಮಾಂಸ ಕೆಜಿಗೆ 450ರಿಂದ 500ರೂ.ಗೆ ಏರಿಕೆಯಾಗಿದೆ. ಸ್ಕಿನ್‌ಔಟ್ ಚಿಕನ್ 300ರೂ. ತಲುಪಿದ್ದು, ಏಕಾಏಕಿ ಚಿಕನ್ ದರ ಏರಿಕೆ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಮುಂದಿನ ದಿನಗಳಲ್ಲೂ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.
from India & World News in Kannada | VK Polls https://ift.tt/CxKpIvS
from India & World News in Kannada | VK Polls https://ift.tt/CxKpIvS
ಅಡಕೆ ಮರಗಳಿಗೆ ಎಲೆ ಚುಕ್ಕೆ ರೋಗ; ಬೆಲೆ ಏರಿಕೆ ಖುಷಿಯಲ್ಲಿದ್ದ ಬೆಳೆಗಾರರಿಗೆ ಮತ್ತೆ ಸಂಕಷ್ಟ!
ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಣಿಸಿದ್ದ ಅಡಕೆಯ ಹಿಂಗಾರ ಕರಟುವ ರೋಗಕ್ಕೆ ಕಾರಣವಾಗಿದ್ದ ಕೊಲೆಟೋಟ್ರೈಕಮ್ ಶಿಲೀಂದ್ರದ ರೂಪಾಂತರಿಯೇ ಎಲೆ ಚುಕ್ಕೆ ರೋಗಕ್ಕೆ ಕಾರಣ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ಎಲೆ ಚುಕ್ಕೆ ರೋಗಕಾರಕ ಶಿಲೀಂದ್ರಗಳು ಗಾಳಿಯಲ್ಲಿ ಶೀಘ್ರವಾಗಿ ಪಸರಿಸುತ್ತಿದ್ದು ಕಿ.ಮೀ. ಉದ್ದಕ್ಕೂ ರೋಗ ಹರಡುವಿಕೆಗೆ ಕಾರಣವಾಗುತ್ತಿದೆ. ಹಿಂಗಾರ ಒಣಗುವ ರೋಗದ ಜತೆಗೆ ಎಲೆ ಚುಕ್ಕೆ ರೋಗವೂ ಕಾಣಿಸಿರುವುದು ಅಡಕೆ ಬೆಳೆಗಾರರನ್ನು ಮತ್ತಷ್ಟು ಕಂಗೆಡಿಸಿದೆ.
from India & World News in Kannada | VK Polls https://ift.tt/zYEt8Lo
from India & World News in Kannada | VK Polls https://ift.tt/zYEt8Lo
ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್‌ಗೆ ಭಿನ್ನರ ಕಾಟ; ಗುಲಾಂ ನಬಿ ಆಜಾದ್ ನಿವಾಸದಲ್ಲಿ ಜಿ-23 ಗುಂಪು ಸಭೆ
congress g-23 leaders: ಭಿನ್ನಮತೀಯ ಹಿರಿಯರ ಬಣ, ‘ಸದ್ಯದ ಸ್ಥಿತಿಯಲ್ಲಿ ಗಾಂಧಿ ಕುಟುಂಬಕ್ಕೆ ಪಕ್ಷ ಸಂಘಟಿಸುವ ಸಾಮರ್ಥ್ಯ ಇಲ್ಲ. ಘನತೆಯಿಂದ ಅವರು ನಾಯಕತ್ವವನ್ನು ಯುವಕರಿಗೆ ಬಿಟ್ಟುಕೊಟ್ಟು ಹಿಂದಕ್ಕೆ ಸರಿಯಬೇಕು’ ಎಂದು ಆಗ್ರಹಿಸಿದೆ. ಇದಕ್ಕೆ ಸೋನಿಯಾ ಗಾಂಧಿ ನಿಷ್ಠರ ಬಣ ವಿರೋಧಿಸಿದ್ದು, ‘ಅಪಸ್ವರ ಎತ್ತಿರುವ ನಾಯಕರನ್ನೆಲ್ಲ ಪಕ್ಷದಿಂದ ಹೊರ ದಬ್ಬಬೇಕು. ಇಲ್ಲದಿದ್ದರೆ ಪಕ್ಷ ಉಳಿಯುವುದಿಲ್ಲ’ ಎಂದು ಪಟ್ಟು ಹಿಡಿದಿದೆ. ಇದರಿಂದ ಕಾಂಗ್ರೆಸ್ ಮತ್ತೊಮ್ಮೆ ಇಬ್ಭಾಗಗೊಳ್ಳುವ ಅಪಾಯಕ್ಕೆ ಸಿಲುಕಿದೆ.
from India & World News in Kannada | VK Polls https://ift.tt/qgNWc9J
from India & World News in Kannada | VK Polls https://ift.tt/qgNWc9J
ಯೋಗಿ ಆದಿತ್ಯನಾಥ್ ಅದ್ಧೂರಿ ಪ್ರಮಾಣವಚನಕ್ಕೆ ಸಿದ್ಧತೆ; ಪ್ರಧಾನಿ ಸೇರಿ 45,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ
ಉತ್ತರ ಪ್ರದೇಶ ಸರಕಾರಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಸಮಾರಂಭದಲ್ಲಿ ಸುಮಾರು 45 ಸಾವಿರ ಜನರು ಜಮಾವಣೆಗೊಳ್ಳುವ ನಿರೀಕ್ಷೆಯಿದೆ. ಇವರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ 200 ವಿವಿಐಪಿಗಳಿಗೆ ಆಸನ ವ್ಯವಸ್ಥೆ ಸಮೇತ ತಂಗುವ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ. ಕೇಂದ್ರ ಸಚಿವರ ಸಂಪುಟದ ಪ್ರಭಾವಿ ಸಚಿವರ ದಂಡೇ ಸಮಾರಂಭದಲ್ಲಿ ವೇದಿಕೆ ಮೇಲಿರಲಿದೆ ಎನ್ನಲಾಗುತ್ತಿದೆ. ಈ ಮೂಲಕ ಉತ್ತರ ಪ್ರದೇಶಕ್ಕೆ ಕೇಂದ್ರ ಸರಕಾರದ ಪೂರ್ಣ ಬೆಂಬಲವಿದೆ ಎಂಬ ಸಂದೇಶವನ್ನು ಸಾರಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
from India & World News in Kannada | VK Polls https://ift.tt/AdiZ1h2
from India & World News in Kannada | VK Polls https://ift.tt/AdiZ1h2
ಭಾರತೀಯ ರೈಲ್ವೇ ಖಾಸಗೀಕರಣ?: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಉತ್ತರಿಸಿದ್ದು ಹೀಗೆ...
ಲೋಕಸಭೆಯಲ್ಲಿ ಅನುದಾನಗಳ ಬೇಡಿಕೆ ಮೇಲೆ ನಡೆದ ಚರ್ಚೆಯಲ್ಲಿ ಅವರು ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರ ನೀಡಿದ್ದಾರೆ. 'ರೈಲ್ವೇ ಪಟ್ಟಿ, ರೈಲ್ವೇ ಸ್ಟೇಷನ್, ಓವರ್ ಹೆಟ್ ಕೇಬಲ್‌ಗಳು, ರೈಲು ಎಂಜಿನ್‌ಗಳು, ಬೋಗಿಗಳು, ಸಿಗ್ನಲಿಂಗ್ ವ್ಯವಸ್ಥೆ ಇವೆಲ್ಲವೂ ರೈಲ್ವೇ ಮಂತ್ರಾಲಯಕ್ಕೆ ಸೇರಿದ್ದು. ಇವುಗಳನ್ನು ಖಾಸಗೀಕರಣ ಮಾಡವು ಯಾವುದೇ ಮಾತುಕತೆಗಳು ಎಲ್ಲಿಯೂ ನಡೆದಿದಿಲ್ಲ. ರೈಲ್ವೆಯನ್ನು ಖಾಸಗೀಕರಣಗೊಳಿಸಲು ಸಾಂಸ್ಥಿಕ ತೊಂದರೆ ಇದೆ ಎಂದು ಲೋಕಸಭೆಯಲ್ಲಿ ಈ ಹಿಂದೆ ರೈಲ್ವೇ ಸಚಿವರಾಗಿದ್ದ ಪಿಯೂಷ್ ಗೋಯಲ್ ಅವರೇ ಸ್ಪಷ್ಟ ಪಡಿಸಿದ್ದಾರೆ' ಎಂದು ವೈಷ್ಣವ್ ಉತ್ತರಿಸಿದಿದ್ದಾರೆ.
from India & World News in Kannada | VK Polls https://ift.tt/HmK26n9
from India & World News in Kannada | VK Polls https://ift.tt/HmK26n9
Organ Donation: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಅಂಗಾಂಗ ದಾನಿಗಳ ಸಂಖ್ಯೆ
Organ Donation: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾನ್ಯತೆ ಪಡೆದ 61 ಅಂಗ ಕಸಿ ಆಸ್ಪತ್ರೆಗಳಿವೆ. ಇದರಲ್ಲಿ 42ಕ್ಕೂ ಹೆಚ್ಚು ಆಸ್ಪತ್ರೆಗಳು ಬೆಂಗಳೂರು ನಗರದಲ್ಲಿಯೇ ಇವೆ. 'ಜೀವ ಸಾರ್ಥಕತೆ' ಸಂಸ್ಥೆಯಲ್ಲಿ ಅಂಗಾಂಗ ವೈಫಲ್ಯಕ್ಕೊಳಗಾದವರು ಹೆಸರು ನೋಂದಾಯಿಸಿಕೊಂಡಿದ್ದರೆ, ಅಂತಹವರಿಗೆ ಆದ್ಯತೆ ಮೇರೆಗೆ ಕಸಿಗೆ ವ್ಯವಸ್ಥೆ ಮಾಡಲಾಗುವುದು. ಹಾಗಾಗಿ, ಬೇರೆ ಯಾವುದೇ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿದರೂ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಮಾತ್ರ ಕಸಿ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಂಗಾಂಗಗಳ ರವಾನೆಗೆ ಗ್ರೀನ್ ಕಾರಿಡಾರ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.
from India & World News in Kannada | VK Polls https://ift.tt/t90P1YU
from India & World News in Kannada | VK Polls https://ift.tt/t90P1YU
ಮಾ.21ರಿಂದ ಬೃಹತ್ ಬೆಂಗಳೂರು ಚಲೋ ಜಾಥಾ; 15,000 ಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ
ಒಂದು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರಕಾರ ಮೂರು ರೈತವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆದಿದೆ. ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಎಂಪಿಎಂಸಿ ತಿದ್ದುಪಡಿ ಕಾಯಿದೆ, ಭೂ ಸುಧಾರಣೆ ತಿದ್ದುಪಡಿ ಕಾಯಿದೆಗಳನ್ನು ವಾಪಸ್ ಇನ್ನೂ ಹಿಂದಕ್ಕೆ ಪಡೆದಿಲ್ಲ. ಈ ಕಾಯಿದೆಗಳ ಜತೆಗೆ ಜಾನುವಾರು ಹತ್ಯೆ ನಿಷೇಧ ಕಾಯಿದೆಯನ್ನು ರಾಜ್ಯ ಸರಕಾರ ನಿಷೇಧಿಸ ಬೇಕು ಎಂದು ಈ ಆಂದೋಲನದಲ್ಲಿ ಒತ್ತಾಯಿಸಲಾಗುವುದು ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.
from India & World News in Kannada | VK Polls https://ift.tt/BMWvAcx
from India & World News in Kannada | VK Polls https://ift.tt/BMWvAcx
ಸಿಧು-ಜಾಖಡ್ ಕಿತ್ತಾಟವೇ ಸೋಲಿಗೆ ಕಾರಣ; ಸೋನಿಯಾ ಗಾಂಧಿಗೆ ಪಂಜಾಬ್ ನಾಯಕರ ದೂರು
Punjab Congress: ಜಾಖಡ್ ಅವರನ್ನು ಕೆಳಗಿಳಿಸಿ ಸಿಧು ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ತಾವೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಜಾಖಡ್ ಹಲವು ಸಲ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇನ್ನು, ಪಕ್ಷದ ರಾಜ್ಯ ಉಸ್ತುವಾರಿಗಳಾದ ಅಜಯ್ ಮಾಕೇನ್ ಮತ್ತು ಹರೀಶ್ ಚೌಧರಿ ಟಿಕೆಟ್‌ಗಳನ್ನು ಮಾರಿಕೊಂಡಿದ್ದು ಸಹ ಪಕ್ಷಕ್ಕೆ ಹೊಡೆತ ನೀಡಿದೆ ಎಂದು ಕೆಲವು ಸಂಸದರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲಿ ತಮ್ಮ ದೂರುಗಳನ್ನು ನೀಡಿದರು.
from India & World News in Kannada | VK Polls https://ift.tt/RxZBWv1
from India & World News in Kannada | VK Polls https://ift.tt/RxZBWv1
5ಜಿ ನೆಟ್‌ವರ್ಕ್‌ಗಳ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ; ಟವರ್ ಅಳವಡಿಸಲು ಜಮೀನು ಕೊಡುವ ಮುನ್ನ ಎಚ್ಚರ.. ಎಚ್ಚರ!
ಟೆಲಿಕಾಂ ಕಂಪನಿಗಳ ನಕಲಿ ವೆಬ್‌ತಾಣಗಳನ್ನು ಸೃಷ್ಟಿಸಿ, ಅವುಗಳನ್ನು ಸಹ ಟೆಕ್ಸ್ಟ್ ಮೆಸೇಜ್‌ನೊಂದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ಇಲ್ಲಿ ಬ್ರೌಸ್ ಮಾಡುವವರು ಸಹ ಇದು ಅಸಲಿ ಕಂಪನಿಯ ನೆಟ್‌ವರ್ಕ್‌ಗಳೆಂದು ನಂಬಿ ಮೋಸ ಹೋಗುತ್ತಿದ್ದಾರೆ. ಇದಲ್ಲದೆ ಸಂದೇಶಗಳನ್ನು ನೋಡಿ, ಕರೆ ಮಾಡುವ ನಂಬರ್‌ಗಳು ಸಹ ನಕಲಿಯಾಗಿಯೇ ಇರುತ್ತವೆ. ಹಣ ಕಳೆದುಕೊಂಡ ಬಳಿಕವಷ್ಟೇ ದೂರು ನೀಡುವುದರಿಂದ ಪೊಲೀಸರಿಗೂ ಪ್ರಕರಣ ಬೇಧಿಸುವುದು ಕಷ್ಟದ ಕೆಲಸವಾಗಿದೆ. ಎಲ್ಲ ದಾಖಲೆಗಳು ಮಾತ್ರವಲ್ಲ, ಕಂಪನಿ ಹೆಸರಿನಲ್ಲಿ ನೀಡಿರುವ ವೆಬ್‌ಸೈಟ್ ಸಹ ಐಪಿ ಟ್ರ್ಯಾಕ್‌ನಲ್ಲಿ ಬೇರೆ ವಿಳಾಸಗಳನ್ನು ತೋರುತ್ತಿವೆ.
from India & World News in Kannada | VK Polls https://ift.tt/pus2IlU
from India & World News in Kannada | VK Polls https://ift.tt/pus2IlU
ರಾಜ್ಯದಲ್ಲಿ ಗುರುವಾರ ಮುಸ್ಲಿಮರ ವ್ಯಾಪಾರ ಬಂದ್; ಮುಸ್ಲಿಂ ಒಕ್ಕೂಟ ಹೇಳಿದ್ದೇನು?
‘ಮುಸ್ಲಿಂ ಹೆಣ್ಣು ಮಕ್ಕಳು ಧರ್ಮದ ಆಚರಣೆ ಭಾಗವಾಗಿ ಸ್ವಯಂ ಪ್ರೇರಿತರಾಗಿ ಹಿಜಾಬ್ ಧರಿಸುತ್ತಾರೆ. ಆದರೆ, ಹಿಜಾಬ್ ಬಗ್ಗೆ ಕುರಾನ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದು ಹೈಕೋರ್ಟ್ ತೀರ್ಪು ಇಡೀ ಮುಸ್ಲಿಂ ಸಮುದಾಯಕ್ಕೆ ಭಾರಿ ಆಘಾತವನ್ನು ಉಂಟು ಮಾಡಿದೆ. ಈ ಅಂಶವನ್ನು ವಕೀಲರು ಕೋರ್ಟ್‌ನ ಗಮನಕ್ಕೆ ತಂದಿಲ್ಲವೋ ಅಥವಾ ಕೋರ್ಟ್ ಇದನ್ನು ಗಮನಿಸಿಲ್ಲವೋ ತಿಳಿಯದು. ಹಾಗಾಗಿ, ಎಲ್ಲಾ ಮುಸ್ಲಿಂ ಬಾಂಧವರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಶಾಂತಿಯುತ ಪ್ರತಿಭಟನೆ ಮೂಲಕ ನಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದೇವೆ’ ಎಂದು ಮೌಲಾನ ಸಗೀರ್ ಅಹಮದ್ ರಶಾದಿ ತಿಳಿಸಿದ್ದಾರೆ.
from India & World News in Kannada | VK Polls https://ift.tt/GdcMr5o
from India & World News in Kannada | VK Polls https://ift.tt/GdcMr5o
ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುಂದಾದ ಟಾಟಾ: 5 ವರ್ಷದಲ್ಲಿ 15 ಸಾವಿರ ಕೋಟಿ ರೂ. ಹೂಡಿಕೆ!
' ಭವಿಷ್ಯದ ದೃಷ್ಠಿಯಿಂದ ನಾವು ಇಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಿಲು ನಿರ್ಧರಿಸಲಾಗಿದ್ದು, ಹೀಗಾಗಿ ಮುಂದಿನ 5 ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ 15,000 ಕೋಟಿ ಬಂಡವಾಳ ಹೂಡಲಾಗುವುದು. ಅಲ್ಲದೇ ಬೇರೆ ಬೇರೆ ಶೈಲಿಯ, ಬೇರೆ ಬೇರೆ ಗುಣಮಟ್ಟದ, ವಿಭಿನ್ನ ದರದ ವಾಹನಗಗಳನ್ನು ತಯಾರಿಸಲು ನಾವು ಯೋಜನೆ ಹಾಕಿಕೊಂಡಿದ್ದೇವೆ' ಎಂದು ಶೈಲೇಶ್ ಚಂದ್ರ ಹೇಳಿದ್ದಾರೆ. ಔರಂಗಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.ಇನ್ನು ಈ ಬಗ್ಗೆ ಈಗಾಗಲೇ ಕಾರ್ಯ ಪ್ರವೃತ್ತವಾಗಿರುವ ಟಾಟಾ ಮೋಟಾರ್ಸ್, ಟಿಜಿಪಿ ಕಂಪನಿಯಿಂದ 1 ಬಿಲಿಯನ್ ಡಾಲರ್ ಸಾಲವನ್ನು ಪಡೆದಿದೆ. ಅಲ್ಲಿಗೆ ಒಟ್ಟು ವ್ಯವಹಾರ 9.1 ಮಿಲಿಯನ್ ಡಾಲರ್‌ಗೆ ಬಂದು ಮುಟ್ಟಿದಂತಾಗಿದೆ.
from India & World News in Kannada | VK Polls https://ift.tt/coFWX3e
from India & World News in Kannada | VK Polls https://ift.tt/coFWX3e
ಇಸ್ರೇಲ್‌ನಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ಪತ್ತೆ! ಮತ್ತೆ ಶುರುವಾಗುತ್ತಾ ಸೋಂಕಿನ ಅಬ್ಬರ?
ಜಗತ್ತಲ್ಲಿ ಮತ್ತೆ ಕೊರೊನಾ ವೈರಸ್ ಹಾವಳಿ ಜೋರಾಗುತ್ತಿದ್ದು, ಇಸ್ರೇಲ್‌ನಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ಪತ್ತೆಯಾಗಿದೆ. ಇಬ್ಬರಲ್ಲಿ ಹೊಸ ರೂಪಾಂತರ ಪತ್ತೆಯಾಗಿದೆ. ಈ ರೂಪಾಂತರ ಜಗತ್ತಿನಲ್ಲಿ ಇದುವರೆಗೂ ಎಲ್ಲಿ ಕಂಡುಬಂದಿಲ್ಲ ಎಂದು ಇಸ್ರೇಲ್‌ನ ಆರೋಗ್ಯ ಸಚಿವಾಲಯ ತಿಳಿಸಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
from India & World News in Kannada | VK Polls https://ift.tt/eArEUDp
from India & World News in Kannada | VK Polls https://ift.tt/eArEUDp
ದಾಖಲೆ ಪುಡಿಪುಡಿ, ಆಸೀಸ್ ಎದುರು ಪಾಕ್‌ಗೆ ಟೆಸ್ಟ್ ಸೋಲು ತಪ್ಪಿಸಿದ ಬಾಬರ್ ಆಝಮ್!
ಟೆಸ್ಟ್ ಕ್ರಿಕೆಟ್‌ನಲ್ಲಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಶತಕ ಬಾರಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಎದುರಾಗಬೇಕಿದ್ದ ಸೋಲು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕ್ ತಂಡದ ಯುವ ನಾಯಕ ಬಾಬರ್, ಈ ಸಂದರ್ಭದಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಪಂದ್ಯದ ಐದನೇ ಹಾಗೂ ಅಂತಿಮ ದಿನವಾದ ಬುಧವಾರ ಪಾಕ್‌ಪರ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಝ್ವಾನ್ ಕೂಡ ಮನಮೋಹಕ ಶತಕ ಬಾರಿಸಿದರು. ಮೊದಲ ಇನಿಂಗ್ಸ್‌ನಲ್ಲಿ 148ಕ್ಕೆ ಆಲ್‌ಔಟ್ ಆಗಿದ್ದ ಪಾಕ್, 2ನೇ ಇನಿಂಗ್ಸ್‌ನಲ್ಲಿ ಅದ್ಭುತ ಪ್ರತಿರೋಧವೊಡ್ಡಿತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/YkoKS79
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/YkoKS79
Navjot Singh Sidhu: ಸೋನಿಯಾ ಸೂಚನೆಯಂತೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿದ್ದಾರೆ. ಪಂಜಾಬ್ ಸೇರಿದಂತೆ ಚುನಾವಣೆ ನಡೆದ ಎಲ್ಲ ಐದು ರಾಜ್ಯಗಳಲ್ಲಿನ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುವಂತೆ ಪಕ್ಷ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದರು.
from India & World News in Kannada | VK Polls https://ift.tt/9Ij4iYz
from India & World News in Kannada | VK Polls https://ift.tt/9Ij4iYz
ಭಗವಂತ್ ಮನ್ ಪ್ರಮಾಣವಚನ ಸಮಾರಂಭ: ಪಾರ್ಕಿಂಗ್‌ಗಾಗಿ 40 ಎಕರೆ ಗೋಧಿ ಬೆಳೆ ನಾಶ!
ಪಂಜಾಬ್‌ನಲ್ಲಿ ಎಎಪಿಯ ಶಕೆ ಬುಧವಾರ ಆರಂಭವಾಗಲಿದೆ. ಭಗವಂತ್ ಮನ್ ಅವರು ನೂತನ ಸಿಎಂ ಆಗಿ ಭಗತ್ ಸಿಂಗ್ ಅವರ ಹುಟ್ಟೂರು ಖಟ್ಕರ್ ಕಲಾನ್‌ನಲ್ಲಿ ಪದಗ್ರಹಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಆಗಷ್ಟೇ ಬೆಳೆಯುತ್ತಿರುವ 40 ಎಕರೆ ಗೋಧಿ ಬೆಳೆಯನ್ನು ನಾಶ ಪಡಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಿರುವುದು ವಿವಾದ ಸೃಷ್ಟಿಸಿದೆ.
from India & World News in Kannada | VK Polls https://ift.tt/HePOGnd
from India & World News in Kannada | VK Polls https://ift.tt/HePOGnd
ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ 4 ವಿಕೆಟ್ ಸೋಲಿನ ಆಘಾತ!
ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ 2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ತಮ್ಮ ನಾಲ್ಕನೇ ಪಂದ್ಯದಲ್ಲಿ ಮಿಥಾಲಿ ರಾಜ್ ನಾಯಕತ್ವದ ಭಾರತ ಮಹಿಳಾ ತಂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ 4 ವಿಕೆಟ್‌ಗಳ ಸೋಲು ಅನುಭವಿಸಿದೆ. ಆ ಮೂಲಕ ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಪಡೆದಿದ್ದ ಭಾರತ ವನಿತೆಯರಿಗೆ ಆಂಗ್ಲರ ವಿರುದ್ಧದ ಸೋಲು ಭಾರಿ ನಿರಾಶೆಯನ್ನು ತಂದೊಡ್ಡಿತು. ಇಲ್ಲಿಯವರೆಗೂ ನಾಲ್ಕು ಪಂದ್ಯಗಳಾಡಿರುವ ಭಾರತ ಎರಡರಲ್ಲಿ ಗೆದ್ದು, ಇನ್ನುಳಿದ ಎರಡರಲ್ಲಿ ಸೋಲು ಅನುಭವಿಸಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/icKayZ1
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/icKayZ1
Russia-Ukraine Crisis: ರಷ್ಯಾದಿಂದ ಮುಯ್ಯಿಗೆ ಮುಯ್ಯಿ: ಬೈಡನ್, ಟ್ರುಡೋ ಮೇಲೆ ನಿರ್ಬಂಧ!
ಉಕ್ರೇನ್ ಮೇಲೆ ದಾಳಿ ನಡೆಸಿದ್ದಕ್ಕೆ ಕ್ರಮವಾಗಿ ತನ್ನ ಮೇಲೆ ವಿವಿಧ ನಿರ್ಬಂಧಗಳನ್ನು ಜಾರಿಗೆ ತಂದಿರುವ ಅಮೆರಿಕಕ್ಕೆ ರಷ್ಯಾ ಪ್ರತೀಕಾರದ ರುಚಿ ತೋರಿಸಲು ಮುಂದಾಗಿದೆ. ಜೋ ಬೈಡನ್ ಸೇರಿದಂತೆ ಅಮೆರಿಕದ ಅನೇಕ ಹಿರಿಯ ಅಧಿಕಾರಿಗಳ ಮೇಲೆ ರಷ್ಯಾ ನಿರ್ಬಂಧ ವಿಧಿಸಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರಿಗೂ ನಿರ್ಬಂಧ ವಿಧಿಸಿದೆ.
from India & World News in Kannada | VK Polls https://ift.tt/lfj7mFp
from India & World News in Kannada | VK Polls https://ift.tt/lfj7mFp
'ಫಾರ್ಮ್‌ಗೆ ಮರಳಬೇಕೆಂದರೆ ಅಕಾಡೆಮಿಗೆ ಬನ್ನಿ' : ಶಿಷ್ಯ ಕೊಹ್ಲಿಗೆ ರಾಜ್‌ಕುಮಾರ್ ಶರ್ಮಾ ಸಲಹೆ!
ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಅಕಾಡೆಮಿಗೆ ಮರಳಿ ತಮ್ಮ ಮೂಲ ಅಂಶಗಳ ಮೇಲೆ ಹೆಚ್ಚಿನ ಕೆಲಸ ಮಾಡಬೇಕೆಂದು ಟೀಮ್ ಇಂಡಿಯಾ ಮಾಜಿ ನಾಯಕನ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಮಹತ್ವದ ಸಲಹೆ ನೀಡಿದ್ದಾರೆ. ಸತತ ಎರಡೂವರೆ ವರ್ಷಗಳಿಂದ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ 71ನೇ ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ ಮುಗಿದಿದ್ದ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿಯೂ ವಿರಾಟ್ ಕೊಹ್ಲಿ ಕನಿಷ್ಢ ಅರ್ಧಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/d9mXpoz
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/d9mXpoz
'ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಅತ್ಯುತ್ತಮ ಟೆಸ್ಟ್ ನಾಯಕನಾಗಬಹುದು' : ಜಾಫರ್!
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬಳಿಕ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಈ ಹಿನ್ನೆಲೆಯಲ್ಲಿ ಟೆಸ್ಟ್ ನಾಯಕತ್ವವನ್ನು ರೋಹಿತ್ ಶರ್ಮಾಗೆ ವಹಿಸಲಾಯಿತು.ಅದರಂತೆ ನಾಯಕನಾಗಿ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆಲ್ಲುವ ಮೂಲಕ ಶುಭಾರಂಭ ಕಂಡಿದ್ದಾರೆ. ಈ ಬಗ್ಗೆ ಇಎಸ್‌ಪಿಎನ್ ಕ್ರಿಕ್‌ಇನ್ಪೊ ಜೊತೆ ಮಾತನಾಡಿದ ಮಾಜಿ ಕ್ರಿಕೆಟಿಗ ವಸೀಮ್ ಜಾಫರ್ ಅವರು ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಅತ್ಯುತ್ತಮ ನಾಯಕರಾಗಬಲ್ಲರು ಎಂದು ಭವಿಷ್ಯ ನುಡಿದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3UjXMoq
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3UjXMoq
Russia Ukraine Crisis: ಕೀವ್‌ಗೆ ಭೇಟಿ ನೀಡಲು ನ್ಯಾಟೋ ನಾಯಕರ ನಿರ್ಧಾರ; ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರ
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಉಕ್ರೇನ್‌ಗೆ ಬೆಂಬಲ ನೀಡುವ ಸಲುವಾಗಿ ನ್ಯಾಟೊದ ಮೂರು ಸದಸ್ಯ ರಾಷ್ಟ್ರಗಳ ಪ್ರಧಾನಿಗಳು ರಾಜಧಾನಿ ಕೀವ್‌ಗೆ ಭೇಟಿ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ರಷ್ಯಾ ಪಡೆಗಳು ಕೀವ್ ಮೇಲೆ ದಾಳಿಯನ್ನು ತೀವ್ರಗೊಳಿಸಿವೆ.
from India & World News in Kannada | VK Polls https://ift.tt/OCUrBDy
from India & World News in Kannada | VK Polls https://ift.tt/OCUrBDy
2025ಕ್ಕೆ ಕರ್ನಾಟಕ ನಂ.1 ರಾಜ್ಯ! ದೇಶಕ್ಕೆ 1.5 ಟ್ರಿಲಿಯನ್ ಡಾಲರ್ ಕೊಡುಗೆ: ಬಸವರಾಜ ಬೊಮ್ಮಾಯಿ ವಿಶ್ವಾಸ
2025ಕ್ಕೆ ಕರ್ನಾಟಕ ಸಮಗ್ರ ಆರ್ಥಿಕ ಬೆಳವಣಿಗೆಯಲ್ಲಿ ನಂಬರ್ ಒನ್ ರಾಜ್ಯವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಲ್ಲದೇ ದೇಶದ ಆದಾಯಕ್ಕೆ 1.5 ಟ್ರಿಲಿಯನ್ ಡಾಲರ್ ಕೊಡುಗೆಯನ್ನು ಕರ್ನಾಟಕ ನೀಡಲಿದೆ ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/lYJ6O2I
from India & World News in Kannada | VK Polls https://ift.tt/lYJ6O2I
ಭಾರತದಿಂದ ಪಾಕಿಸ್ತಾನಕ್ಕೆ 'ಆಕಸ್ಮಿಕ' ಕ್ಷಿಪಣಿ ಉಡಾವಣೆ: ಅಮೆರಿಕ ಪ್ರತಿಕ್ರಿಯೆ ಇದು...
ವಾಷಿಂಗ್ಟನ್: ಇತ್ತೀಚೆಗೆ ಭಾರತದಿಂದ ಉಡಾವಣೆಯಾದ ಕ್ಷಿಪಣಿಯೊಂದು ಪಾಕಿಸ್ತಾನದ ನೆಲದಲ್ಲಿ ಬಿದ್ದಿರುವುದು ಆಕಸ್ಮಿಕ ಘಟನೆಯ ಹೊರತಾಗಿ ಬೇರೆ ಯಾವ ಸುಳಿವೂ ಕಾಣಿಸುತ್ತಿಲ್ಲ ಎಂದು ಹೇಳಿಕೆ ನೀಡಿದೆ. ಎರಡು ದಿನಗಳ ಹಿಂದೆ ಕ್ಷಿಪಣಿಯೊಂದನ್ನು ಆಕಸ್ಮಿಕವಾಗಿ ಹಾರಿಸಲಾಗಿತ್ತು. ಅದು ಪಾಕಿಸ್ತಾನದ ಮೇಲೆ ಬಿದ್ದಿತ್ತು. ದೈನಂದಿನ ನಿರ್ವಹಣಾ ಕಾರ್ಯದ ವೇಳೆ ಉಂಟಾದ ತಾಂತ್ರಿಕ ದೋಷದಿಂದಾಗಿ ಈ ಘಟನೆ ಉಂಟಾಗಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಭಾರತ ಶುಕ್ರವಾರ ಹೇಳಿತ್ತು. "ಈ ಘಟನೆಯು ಆಕಸ್ಮಿಕವೇ ಹೊರತು ಬೇರೇನೂ ಅಲ್ಲ ಎಂದು ನಮ್ಮ ಭಾರತದ ಸಹಭಾಗಿಗಳು ಹೇಳಿರುವಂತೆ ನಮಗೆ ಬೇರೆ ಯಾವುದೇ ಸೂಚನೆ ಕಾಣಿಸುತ್ತಿಲ್ಲ" ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸೋಮವಾರ ತಮ್ಮ ದೈನಂದಿನ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ. "ಯಾವುದೇ ಹೆಚ್ಚಿನ ಮಾಹಿತಿಗೆ ಭಾರತೀಯ ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಲು ನಿಮಗೆ ಸಲಹೆ ನೀಡುತ್ತೇವೆ. ಅಂದು ಏನು ನಡೆಯಿತು ಎಂದು ಅವರು ಮಾರ್ಚ್ 9ರಂದು ವಿವರಣೆ ನೀಡುವ ಹೇಳಿಕೆ ಹೊರಡಿಸಿದ್ದಾರೆ. ಅದರ ಆಚೆಗೆ ನಾವು ಹೇಳಿಕೆ ನೀಡುವುದಿಲ್ಲ" ಎಂದು ಪ್ರಶ್ನೆಯೊಂದಕ್ಕೆ ಪ್ರೈಸ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಸೂಪರ್‌ಸಾನಿಕ್ ಆಕಸ್ಮಿಕವಾಗಿ ಪಾಕಿಸ್ತಾನದ ಭೂಪ್ರದೇಶದ ಒಳಗೆ ಹೋಗಿರುವುದನ್ನು ಭಾರತದ ಒಪ್ಪಿಕೊಂಡಿತ್ತು. ತಾಂತ್ರಿಕ ಸಮಸ್ಯೆಯಿಂದ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆಯಾಗಿದ್ದು, ಈ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು. ಜತೆಗೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಎಂದು ಹೇಳಿತ್ತು. ತಾಂತ್ರಿಕ ದೋಷದಿಂದ ಉಡಾವಣೆಯಾಗಿರುವ ಕ್ಷಿಪಣಿ ಪಾಕಿಸ್ತಾನದ ಪ್ರದೇಶದಲ್ಲಿ ಇಳಿದಿದೆ ಎಂದು ತಿಳಿದುಬಂದಿದೆ ಎಂದಿರುವ ಕೇಂದ್ರ ರಕ್ಷಣಾ ಸಚಿವಾಲಯ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ಅದಲ್ಲದೇ ಅವಘಡದಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನಕರ ವಿಷಯ ಎಂದು ತಿಳಿಸಿದೆ. ಸಿರ್ಸಾದಿಂದ ಉಡಾವಣೆಯಾದ ಕ್ಷಿಪಣಿಯು ಬುಧವಾರ ಸಂಜೆ ಪಾಕಿಸ್ತಾನದ ಗಡಿಯೊಳಗೆ 124 ಕಿಮೀಯಷ್ಟು ದೂರ ಬಂದಿಳಿದಿದೆ. ಕ್ಷಿಪಣಿಯು 40,000 ಅಡಿ ಎತ್ತರದಲ್ಲಿ ಹಾರಾಟ ನಡೆಸಿದ್ದು, ಇದರಿಂದ ಭಾರತ ಮತ್ತು ಎರಡೂ ದೇಶಗಳ ವಾಯು ಪ್ರದೇಶದಲ್ಲಿನ ಪ್ರಯಾಣಿಕ ವಿಮಾನಗಳಿಗೆ ಅಪಾಯ ತಂದೊಡ್ಡಿತ್ತು ಎಂದು ಪಾಕಿಸ್ತಾನ ಆರೋಪಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವೆ 2005ರಲ್ಲಿ ನಡೆದ ಒಪ್ಪಂದದ ಪ್ರಕಾರ, ಮೇಲ್ಮೈನಿಂದ ಮೇಲ್ಮೈ, ಭೂಮಿ ಅಥವಾ ಸಮುದ್ರ ಉಡಾವಣಾ ಕ್ಷಿಪಣಿಗಳ ಪರೀಕಾರ್ಥ ಪ್ರಯೋಗ ನಡೆಸುವುದಕ್ಕೂ ಕನಿಷ್ಠ ಮೂರು ದಿನಗಳ ಮುನ್ನ ಇನ್ನೊಂದು ದೇಶಕ್ಕೆ ಅದರ ಮಾಹಿತಿ ನೀಡಬೇಕು ಎಂದು ಖಂಡಾಂತರ ಕ್ಷಿಪಣಿ ಪರೀಕ್ಷೆಗಳ ಹಾರಾಟದ ಪೂರ್ವ ಅಧಿಸೂಚನೆ ಮಾಡಿಕೊಳ್ಳಲಾಗಿತ್ತು. ಜತೆಗೆ ಉಡಾವಣಾ ಸ್ಥಳಗಳು ಎರಡೂ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿ ಅಥವಾ ಎಲ್‌ಒಸಿಯ 40 ಕಿಮೀ ಒಳಗೆ ಇರಬಾರದು ಹಾಗೂ ಅದರ ಪರಿಣಾಮ ಉಂಟಾಗುವ ವಲಯವು 75 ಕಿಮೀ ಒಳಗೆ ಇರಬಾರದು ಎಂದು ಹೇಳಲಾಗಿತ್ತು.
from India & World News in Kannada | VK Polls https://ift.tt/B9FU67X
Hijab Verdict Live Updates: ಹಿಜಾಬ್ ಪ್ರಕರಣದ ತೀರ್ಪಿಗೆ ಕೌಂಟ್‌ಡೌನ್; ಎಲ್ಲರ ಚಿತ್ತ ಹೈಕೋರ್ಟ್‌ನತ್ತ!
ಬೆಂಗಳೂರು: ರಾಜ್ಯದಲ್ಲಿ ಶುರುವಾಗಿದ್ದ ಹಿಜಾಬ್-ಕೇಸರಿ ಶಾಲು ವಿವಾದ ರಾಷ್ಟ್ರ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಿದ್ಯಾರ್ಥಿಗಳು ಹಿಜಾಬ್ (hijab row) ಪರ ಮತ್ತು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದರು. ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆರಂಭವಾಗಿದ್ದ ಈ ವಿವಾದ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಹಬ್ಬುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದಿತ್ತು. ಬಳಿಕ ಈ ಪ್ರಕರಣ ಹೈಕೋರ್ಟ್ (High court of Karnataka) ಮೆಟ್ಟಿಲೇರಿತ್ತು. ಮೊದಲು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಕೆಲ ದಿನ ವಿಚಾರಣೆ ನಡೆಸಿತ್ತಾದರೂ, ಧಾರ್ಮಿಕ ಸೂಕ್ಷ್ಮ ಪ್ರಕರಣವಾದ್ದರಿಂದ ವಿಸ್ತೃತ ಪೀಠ ವಿಚಾರಣೆ ನಡೆಸುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟಿತ್ತು. ಅದರಂತೆ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠ ರಚಿಸಲಾಗಿತ್ತು. ಪೂರ್ಣಪೀಠದ ಮುಂದೆ ಸುಪ್ರೀಂಕೋರ್ಟ್ (Supreme Court) ಮತ್ತು ಹೈಕೋರ್ಟ್‌ನ ಘಟಾನುಘಟಿ ಹಿರಿಯ ವಕೀಲರು ವಾದ- ಪ್ರತಿವಾದ ಮಂಡಿಸಿದ್ದರು. ಹಲವು ಸಾಂವಿಧಾನಿಕ, ಧಾರ್ಮಿಕ ಹಾಗೂ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವ ಈ ಪ್ರಕರಣದ ತೀರ್ಪು ಮಾರ್ಚ್ 15ರಂದು ಅಂದರೆ ಇಂದು ಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ಹಿಜಾಬ್ ಪ್ರಕರಣದ ಹೈಕೋರ್ಟ್ ತೀರ್ಪಿನ ಕ್ಷಣ ಕ್ಷಣದ ಮಾಹಿತಿ ನಿಮ್ಮ ವಿಜಯ ಕರ್ನಾಟಕ ವೆಬ್‌ನಲ್ಲಿ ಲಭ್ಯ. ** 9.20 am: 'ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅಂತಹ ಸನ್ನಿವೇಶ ಸೃಷ್ಟಿಯಾಗಲ್ಲ ಅನ್ನೋ ಭರವಸೆ ಇದೆ. ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು' - ಗೃಹ ಸಚಿವ ಆರಗ ಜ್ಞಾನೇಂದ್ರ ** 9.15 am: 'ಹೈಕೋರ್ಟ್ ಆದೇಶ ಏನೇ ಬಂದರೂ ನಾವು ಅದನ್ನು ಪಾಲಿಸುತ್ತೇವೆ. ಶಿಕ್ಷಣ ಬೇಕಾದವರು ಕೋರ್ಟ್ ತೀರ್ಪು ಪಾಲಿಸಬೇಕು. ಹಿಜಾಬ್ ಪರ ತೀರ್ಪು ಬಂದರೂ ನಾವು ಅದನ್ನು ಪಾಲಿಸುತ್ತೇವೆ. ನಂತರ ಸುಪ್ರೀಂ ಮೆಟ್ಟಿಲೇರುತ್ತೇವೆ.'- ಉಡುಪಿ ಶಾಸಕ ರಘುಪತಿ ಭಟ್ ಹೇಳಿಕೆ ** 9.12 am: ಹಿಜಾಬ್ ತೀರ್ಪು ಪ್ರಕಟ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಮಾ.15ರಿಂದ 21ರವರೆಗೆ ಬೆಂಗಳೂರು ನಗರಾದಾದ್ಯಂತ ನಿಷೇಧಾಜ್ಞೆ ಜಾರಿ ** 9.08 am: ಧಾರವಾಡ ಜಿಲ್ಲೆಯಾದ್ಯಂತ (ಗ್ರಾಮೀಣ) ಮತೀಯ ಸೌಹಾರ್ದತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮಾ. 15ರಂದು ಬೆಳಗ್ಗೆ 6 ಗಂಟೆಯಿಂದ ಮಾ. 19ರ ಬೆಳಗ್ಗೆ 6 ಗಂಟೆಯವರೆಗೆ ಸಿ.ಆರ್.ಪಿ.ಸಿ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಆದೇಶ ಹೊರಡಿಸಿದ್ದಾರೆ. ** 9.05 am: ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಕಾಲೇಜುಗಳಿಗೆ ಮಾ.15ರಂದು ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಹಾಗೂ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ. ಬಾಹ್ಯ ಪರೀಕ್ಷೆಗಳು ಇದ್ದರೆ ನಿಗದಿಯಂತೆ ನಡೆಯಲಿದ್ದು, ಆಂತರಿಕ ಪರೀಕ್ಷೆಗಳನ್ನು ಮುಂದೂಡುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ** 9.03 am : ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಇಂದು ಬೆಳಗ್ಗೆ 6 ಗಂಟೆಯಿಂದ ಮಾ.20 ತಾತ 12 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ** 9.00 am: ಉಡುಪಿಯಲ್ಲಿ ಶುರುವಾಗಿದ್ದ ಹಿಜಾಬ್ ವಿವಾದಉಡುಪಿ: ರಾಜ್ಯ ಮಾತ್ರವಲ್ಲ ದೇಶದಲ್ಲೂ ಸಂಚಲನ ಮೂಡಿಸಿದ್ದ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಮಾ. 15 ಬೆಳಗ್ಗೆ 10.30ಕ್ಕೆ ಅಂತಿಮ ತೀರ್ಪು ನೀಡಲಿದೆ. ಉಡುಪಿ ಸರಕಾರಿ ಬಾಲಕಿಯರ ಪ. ಪೂ. ಕಾಲೇಜಿನ ಆರು ವಿದ್ಯಾರ್ಥಿನಿಯರು ಡಿ. 28ರಿಂದ ತರಗತಿಯಲ್ಲಿ ಹಿಜಾಬ್ ಧರಿಸಿ ಪಾಠ ಕೇಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಮೆಟ್ಟಿಲುಗಳಲ್ಲೇ ಕೂತು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಅಲ್‌ಜಜೀರಾ, ಬಿಬಿಸಿಯಲ್ಲೂ ಸುದ್ದಿ ಪ್ರಸಾರವಾಗಿತ್ತು. ಫೆ. 3ರ ಬಳಿಕ ಹಿಜಾಬ್ ವಿವಾದ ಕುಂದಾಪುರ ಸರಕಾರಿ ಪ. ಪೂ. ಕಾಲೇಜು, ಭಂಡಾರ್‌ಕಾರ್ಸ್, ಉಡುಪಿ ಎಂಜಿಎಂ ಕಾಲೇಜು ಸಹಿತ ಅನ್ಯ ಜಿಲ್ಲೆಗೂ ವಿಸ್ತರಣೆಯಾಗಿತ್ತು. ಹಿಜಾಬ್, ಕೇಸರಿಶಾಲು ಬದಲು ಕೇವಲ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಂತೆ ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದ್ದು ತರಗತಿ, ಪರೀಕ್ಷೆಗೆ ಹಿಜಾಬ್ ಧರಿಸಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ 250ಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಕಳೆದ 20ದಿನಗಳಿಂದ ಗೈರು ಹಾಜರಾಗಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ಪ್ರಯೋಗ ಪರೀಕ್ಷೆ ಮತ್ತೆ ನಡೆಸುವಂತೆ ವಿದ್ಯಾರ್ಥಿಗಳು ಪ. ಪೂ. ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ.
from India & World News in Kannada | VK Polls https://ift.tt/l3R7qB2
ಸರ್ಕಾರಿ ಇಲಾಖೆ-ಕಿಯೋನಿಕ್ಸ್ ನಡುವೆ ಭಾರೀ ಭ್ರಷ್ಟಾಚಾರ! 2-3 ಪಟ್ಟು ಹೆಚ್ಚು ಬಿಲ್ ಮಾಡಿ ಕೋಟ್ಯಂತರ ಹಣ ಗುಳುಂ!
ಫಾಲಲೋಚನ ಆರಾಧ್ಯ ಚಾಮರಾಜನಗರ: ಸರಕಾರದ ನಾನಾ ಇಲಾಖೆಗಳಿಗೆ ಕಿಯೋನಿಕ್ಸ್ ಮೂಲಕ ಪೂರೈಕೆಯಾಗಿರುವ ವಾಷಿಂಗ್‌ಮೆಷಿನ್, ನೀರು ಶುದ್ಧೀಕರಣ ಘಟಕ ಹಾಗೂ ಕಂಪ್ಯೂಟರ್‌ಗಳಿಗೆ ಮಾರುಕಟ್ಟೆ ದರಕ್ಕಿಂತ ಎರಡ್ಮೂರು ಪಟ್ಟು ಹೆಚ್ಚು ಬಿಲ್ ಮಾಡಿಕೊಂಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಆ ಮೂಲಕ ಸರಕಾರಿ ಇಲಾಖೆಗಳು ಹಾಗೂ ಕಿಯೋನಿಕ್ಸ್ ನಡುವೆ ನಡೆದಿರುವ ಭ್ರಷ್ಟಾಚಾರ, ವಂಚನೆಗಳು ಬಗೆದಷ್ಟು ಹೊರ ಬರುತ್ತಿವೆ. ಈ ವಸ್ತುಗಳ ಪೂರೈಕೆ ಮೂಲಕ ಹೆಚ್ಚುವರಿಯಾಗಿ ಕೋಟ್ಯಂತರ ರೂ. ಬಿಲ್ ಆಗಿರುವುದು ಮಹಾಲೇಖ ಪಾಲರ ತಪಾಸಣೆ ವೇಳೆ ಪತ್ತೆಯಾಗಿದೆ. 2019-20ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತನ್ನ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ಗಳಿಗೆ 15 ಕೆಜಿ ಸಾಮರ್ಥ್ಯದ ವಾಷಿಂಗ್ ಮೆಷಿನ್ ಪೂರೈಕೆಗಾಗಿ ಕಿಯೋನಿಕ್ಸ್‌ಗೆ ಬೇಡಿಕೆ ಸಲ್ಲಿಸುತ್ತದೆ. ಒಟ್ಟು 270 ವಾಷಿಂಗ್ ಮೆಷಿನ್‌ಗಳ ಪೂರೈಕೆಗೆ ಒಪ್ಪಂದವೂ ಆಗುತ್ತದೆ. ಅದು ಸ್ಟಾರ್ ಫಿಶ್ ಕಂಪನಿಯ ವಾಷಿಂಗ್ ಮೆಷಿನ್‌ಗಳನ್ನು ಪೂರೈಸಿರುವ ಬಗ್ಗೆ ದಾಖಲೆಗಳು ಹೇಳುತ್ತವೆಯಾದರೂ ವಾಸ್ತವವಾಗಿ ಪರಿಶೀಲನೆ ವೇಳೆ ಎಲ್‌ಜಿ ಮತ್ತು ಬೇರೆ ಬೇರೆ ಕಂಪನಿಯ ಹಾಗೂ ಕಡಿಮೆ ಸಾಮರ್ಥ್ಯದ ಮೆಷಿನ್‌ಗಳನ್ನು ಪೂರೈಸಲಾಗಿರುವುದು ಪತ್ತೆಯಾಗಿದೆ. ಒಂದು ವೇಳೆ ಸ್ಟಾರ್‌ಫಿಶ್ ವಾಷಿಂಗ್ ಮೆಷಿನ್ ಅನ್ನೇ ಎಲ್ಲ 270 ಕಡೆಗಳಿಗೂ ಪೂರೈಸಿದ್ದರೂ ಅದರ ಮಾರುಕಟ್ಟೆ ದರ 3.18 ಲಕ್ಷ. ಆದರೆ, ಕಿಯೋನಿಕ್ಸ್ ಪೂರೈಕೆ ಮಾಡಿ, ವಿಧಿಸಿರುವ ದರ 5.54 ಲಕ್ಷ ರೂ., ಅಂದರೆ ಒಂದೇ ವಾಷಿಂಗ್ ಮೆಷಿನ್‌ನ ದರದ ವ್ಯತ್ಯಾಸ 1.55 ಲಕ್ಷ ರೂ. ವಾಸ್ತವವಾಗಿ 66 ಸ್ಟಾರ್‌ಫಿಶ್ ಹಾಗೂ 179 ಎಲ್‌ಜಿ ಕಂಪನಿಯ ವಾಷಿಂಗ್ ಮೆಷಿನ್‌ಗಳನ್ನು ಪೂರೈಸಲಾಗಿದೆ ಎಂಬುದಾಗಿದೆ. ಎಲ್‌ಜಿ ಕಂಪನಿ ವಾಷಿಂಗ್ ಮೆಷಿನ್ ಮಾರುಕಟ್ಟೆ ದರ ಕೇವಲ 99 ಸಾವಿರ ರೂ. ಇದ್ದು, ಇಲ್ಲಿ ಅದಕ್ಕೂ 5.54 ಲಕ್ಷ ರೂ. ಬಿಲ್ ಮಾಡಲಾಗಿದೆ. ಹೀಗಾಗಿ ಮಾರುಕಟ್ಟೆ ದರಕ್ಕಿಂತ ಒಟ್ಟು 9.28 ಕೋಟಿ ರೂ. ಬಿಲ್ ಮಾಡಿಕೊಳ್ಳಲಾಗಿದೆ ! ಇನ್ನು ಇದೇ ರೀತಿಯಲ್ಲಿ ಕೃಷಿ ಇಲಾಖೆಗೆ ಒಟ್ಟು 472 ಕಂಪ್ಯೂಟರ್ (ಡೆಸ್ಕ್‌ಟಾಪ್)ಗಳ ಪೂರೈಕೆಗಾಗಿ ಒಪ್ಪಂದವಾಗಿ, 45 ಸಾವಿರ ರೂ. ಮಾರುಕಟ್ಟೆ ದರದ ಕಂಪ್ಯೂಟರ್‌ಗಳಿಗೆ 80 ಸಾವಿರ ರೂ. ಬಿಲ್ ಮಾಡಲಾಗಿದೆ. ಇದರ ಒಟ್ಟಾರೆ ವ್ಯತ್ಯಾಸದ ಹಣ 1.68 ಕೋಟಿ ರೂ. ಎಂಬುದು ಅಚ್ಚರಿ ಜತೆಗೆ ನೀರು ಕುಡಿದಷ್ಟೇ ಸಲೀಸಾಗಿ ಮಾಡಿರುವ ಭ್ರಷ್ಟಾಚಾರದ ಬಗ್ಗೆ ದಿಗಿಲು ಮೂಡಿಸುತ್ತದೆ. ಇದಲ್ಲದೇ ಮಸೀದಿ, ಜೈನ ಬಸದಿ, ದರ್ಗಾಗಳಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 100 ಲೀಟರ್‌ನ ನೀರು ಶುದ್ಧೀಕರಣ ಘಟಕಗಳ ಪೂರೈಕೆಗೆ ಅದೇ ಕಿಯೋನಿಕ್ಸ್‌ಗೆ ಬೇಡಿಕೆ ಇಟ್ಟಿದ್ದು, ಮಾರುಕಟ್ಟೆ ದರ 60 ಸಾವಿರ ರೂ. ಇರುವ ಘಟಕಗಳಿಗೆ 1.5 ಲಕ್ಷ ರೂ. ಬಿಲ್ ಮಾಡಲಾಗಿದೆ. ಅದರಂತೆ ಒಟ್ಟು 3,225 ನೀರು ಶುದ್ಧೀಕರಣ ಘಟಕಗಳಿಗೆ ಆದ ಹೆಚ್ಚುವರಿ ಬಿಲ್ 29.2 ಕೋಟಿ ರೂ. ಇದರೊಂದಿಗೆ ರಾಜ್ಯ ತಾಂಡಾ ಅಭಿವೃದ್ಧಿ ಕಾರ್ಪೋರೇಷನ್ ಮನವಿ ಮೇರೆಗೆ ನಾನಾ ಕಡೆಗಳಿಗೆ ಒಟ್ಟು 375 ದೊಡ್ಡ ಮಟ್ಟದ ನೀರು ಶುದ್ಧೀಕರಣ ಘಟಕಗಳನ್ನು ಪೂರೈಸಿದ್ದು, ಇವುಗಳ ಮಾರುಕಟ್ಟೆ ದರ ತಲಾ 2.40 ಲಕ್ಷ ರೂ. ಇದ್ದರೆ ಬಿಲ್ ಆಗಿರುವುದು 11 ಲಕ್ಷ ರೂ.ಗೆ. ಹೀಗಾಗಿ ಒಟ್ಟಾರೆ ತಲಾ ಒಂದರ ವ್ಯತ್ಯಾಸದ ದರ 8.6 ಲಕ್ಷ ರೂ. ಇದ್ದು, ಒಟ್ಟಾರೆ ಹೆಚ್ಚುವರಿಯಾಗಿ 32.2 ಕೋಟಿ ರೂ. ಬಿಲ್ ಮಾಡಿಕೊಂಡಿರುವುದನ್ನು ಆಡಿಟ್ ವೇಳೆ ಬಯಲಿಗೆ ಎಳೆಯಲಾಗಿದೆ.
from India & World News in Kannada | VK Polls https://ift.tt/KUbGEF0
'ಫೈನಲ್ ತಲುಪುವುದು ನಮ್ಮ ಗುರಿ' : ಮುಂದಿನ ಪ್ಲಾನ್ ರಿವೀಲ್ ಮಾಡಿದ ರೋಹಿತ್ ಶರ್ಮಾ!
ಬೆಂಗಳೂರು: ಭಾರತ ಟೆಸ್ಟ್ ತಂಡವನ್ನು ಮೊಟ್ಟ ಮೊದಲ ಬಾರಿ ಮುನ್ನಡೆಸಿದ ಅನುಭವವನ್ನು ಹಂಚಿಕೊಂಡ , ಅಗತ್ಯ ಸಂದರ್ಭಗಳಲ್ಲಿ ಹಿರಿಯ ಆಟಗಾರರ ಸಹಾಯ ಪಡೆದುಕೊಂಡಿದ್ದೇನೆಂದು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬಳಿಕ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗೆ ಇಳಿದಿದ್ದರು. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವದ ಜೊತೆಗೆ ಟೆಸ್ಟ್ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಇದೀಗ ರೋಹಿತ್ ನಾಯಕತ್ವದಲ್ಲಿ ಭಾರತ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರೋಹಿತ್ ಶರ್ಮಾ, "ರೆಡ್ ಬಾಲ್ ಕ್ರಿಕೆಟ್‌ನಲ್ಲಿ ನನಗೆ ನಾಯಕತ್ವದ ಅನುಭವ ಇಲ್ಲ. ರಣಜಿ ಟ್ರೋಫಿ ಟೂರ್ನಿಯ ಕೆಲ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದೇನೆ. ಆದರೆ ನನಗೆ ಸಾಕಷ್ಟು ನೆರವು ಸಿಕ್ಕಿದೆ. ಪಂದ್ಯದಲ್ಲಿ ಏನು ಮಾಡಬೇಕು? ಅಥವಾ ಏನು ಮಾಡಬಾರದು? ಎಂದು ಹಲವರಿಂದ ತಿಳಿದುಕೊಂಡಿದ್ದೇನೆ," ಎಂದರು. "ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಹಲವು ಹಿರಿಯ ಆಟಗಾರರು ತಂಡದಲ್ಲಿದ್ದಾರೆ. ಪಂದ್ಯದಲ್ಲಿ ಹೇಗೆ ಮುನ್ನಡೆಯಬೇಕು ಹಾಗೂ ಹೇಗೆ ಅರ್ಥಮಾಡಿಕೊಳ್ಳಬೇಕೆಂದು ಅವರು ನನಗೆ ತಿಳಿಸಿದ್ದಾರೆ. ಇದರ ಜೊತೆಗೆ ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಮೂಲಕ ಮೊದಲ ಟೆಸ್ಟ್ ಸರಣಿಯನ್ನು ಮುಗಿಸಿದ್ದೇನೆ," ಎಂದು ಹೇಳಿದರು. "ಪಂದ್ಯದ ಪ್ರವೃತ್ತಿಯ ಮೂಲಕ ನಾನು ಸಾಗುತ್ತೇನೆ. ಪಂದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ನನ್ನ ಸಿದ್ದಾಂತ. ಮೈದಾನದಲ್ಲಿ ಈ ಎಲ್ಲಾ ಸಂಗತಿಗಳನ್ನು ವಿಶ್ಲೇಷಣೆ ನಡೆಸಲು ಪ್ರಯತ್ನಿಸುತ್ತೇನೆ," ಎಂದು ತಿಳಿಸಿದರು. "ನಮ್ಮ ಐವರು ಬೌಲರ್‌ಗಳ ಬೌಲಿಂಗ್ ಅನ್ನು ನಾನು ಸಾಕಷ್ಟು ದಿನಗಳಿಂದ ನೋಡಿದ್ದೇನೆ ಹಾಗೂ ಅವರ ಬಲಾ-ಬಲ ಹಾಗೂ ದೌರ್ಬಲ್ಯ ಏನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಎದುರಾಳಿ ತಂಡದ ಬಗ್ಗೆಯೂ ಅರಿತುಕೊಳ್ಳಲು ಪ್ರಯತ್ನಿಸುತ್ತೇನೆ. ಎಲ್ಲಾ ನಿರ್ಧಾರಗಳು ನಿಮ್ಮ ಕೈ ಹಿಡಿಯುವುದಿಲ್ಲ. ಆದರೆ ನೀವು ಅಂದುಕೊಂಡ ರೀತಿಯಲ್ಲಿ ಸಾಗುವ ಶೇಕಡಾವಾರು ಪ್ರಮಾಣವನ್ನು ತೆಗೆದುಕೊಳ್ಳಲು ನೀವು ಪ್ರಯತ್ನಿಸಬೇಕು ಹಾಗೂ ಅದಕ್ಕೆ ಅನುಗುಣವಾಗಿ ಮುಂದುವರಿಯಬೇಕು," ಎಂದರು. ಎರಡನೇ ಟೆಸ್ಟ್ ಪಂದ್ಯದಲ್ಲಿ 447 ರನ್ ಗುರಿ ಹಿಂಬಾಲಿಸಿದ ತಂಡ ದಿಮುತ್ ಕರುಣಾರತ್ನೆ(107 ರನ್) ಅವರ ಶತಕದ ಹೊರತಾಗಿಯೂ 208 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ 238 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ನನ್ನ ಗುರಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋಲು ನಮ್ಮ ಪಾಲಿಗೆ ತುಂಬಾ ಕಠಿಣವಾಗಿತ್ತು. ಇದೀಗ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಂಕ ಕಲೆ ಹಾಕುವುದು ತುಂಬಾ ನಿರ್ಣಾಯಕವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದರು. "ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಆಡುವುದು ನಮ್ಮ ದೀರ್ಘಾವಧಿ ಗುರಿಯಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾವು ಅದರ ಕಡೆಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಏನು ನಡೆಯುತ್ತಿದೆ ಹಾಗೂ ನಾವು ಹೇಗೆ ಮುನ್ನಡೆಯಬೇಕು ಎಂಬ ಬಗ್ಗೆ ನಾವು ಚಿಂತಿಸುತ್ತಿದ್ದೇವೆ. ಫೈನಲ್‌ಗೆ ತಲುಪಲು ನಿಮಗೆ ಕೆಲ ಹಂತಗಳು ಬಾಕಿ ಇವೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆಲುವು ನಮಗೆ ಸ್ವಲ್ಪ ಹಿನ್ನಡೆ ತಂದಿದೆ," ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/qirO3Ig
Hijab Verdict: ಹಿಜಾಬ್ ತೀರ್ಪು ತಿರುಚಿ ವಿಮರ್ಶೆ, ಪ್ರಸಾರ ಮಾಡಿದರೆ ಕಠಿಣ ಕ್ರಮ; ಜಾಲತಾಣಗಳ ಮೇಲೂ ಕಣ್ಣು
ಕಲಬುರಗಿ: ಹಿಜಾಬ್ ಕುರಿತಂತೆ ಮಂಗಳವಾರ ಹೈಕೋರ್ಟ್‌ನಿಂದ ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ಮಾರ್ಚ್ 14 ರ ರಾತ್ರಿ 8 ರಿಂದ ಮಾ. 19ರ ಬೆಳಗ್ಗೆ 6 ಗಂಟೆವರೆಗೆ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಡಿ.ಸಿ. ಯಶವಂತ ವಿ. ಗುರುಕರ್ ಅದೇಶ ಹೊರಡಿಸಿದ್ದಾರೆ. ಸೋಮವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಜೆ ಘೋಷಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘನೆ ಮಾಡಿದವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ತೀರ್ಪು ಹಿಜಾಬ್ ಪರ ಅಥವಾ ವಿರುದ್ಧ ಅಂತ ಬಿಂಬಿಸುವುದನ್ನು ಮಾಡಬಾರದು. ಎಲ್ಲರೂ ಅದನ್ನು ಪಾಲಿಸಬೇಕು ಮತ್ತು ಗೌರವಿಸಬೇಕು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಂಘಟನೆಯವರಾಗಲಿ, ರಾಜಕೀಯ ಪಕ್ಷದವರಾಗಲಿ, ವ್ಯಕ್ತಿಗಳಾಗಲಿ ವಿಜಯೋತ್ಸವ ಅಥವಾ ಪ್ರತಿಭಟನೆಯಾಗಲಿ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಾಮಾಜಿಕ ಜಾಲ ತಾಣಗಳ ವಿರುದ್ಧ ಕ್ರಮ:ಸಾಮಾಜಿಕ ಜಾಲ ತಾಣಗಳಲ್ಲಿ ತೀರ್ಪಿನ ಬಗ್ಗೆ ತಿರುಚಿ ಪ್ರಸಾರ ಮಾಡುವುದಾಗಲಿ, ಟೀಕೆ ಟಿಪ್ಪಣಿಯಾಗಲಿ, ವಿಮರ್ಶೆಯಾಗಲಿ ಮಾಡಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಲಾ-ಕಾಲೇಜುಗಳ ಮುಂದೆ ಹೋಗಿ ಹಿಜಾಬ್ ಬಗ್ಗೆ ಮಕ್ಕಳ ಪ್ರತಿಕ್ರಿಯೆ ಪಡೆಯುವುದನ್ನು ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಎಷ್ಟೇ ದೊಡ್ಡ ಮಾಧ್ಯಮ ಸಂಸ್ಥೆ ಇದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸ್ಪಷ್ಟ ಆದೇಶವಿದ್ದು, ಎಲ್ಲರೂ ಪಾಲಿಸಬೇಕು ಎಂದು ಸೂಚಿಸಿದರು. ಹಿಜಾಬ್ ವಿಷಯದಲ್ಲಿ ಮಕ್ಕಳನ್ನು ತೋರಿಸಬಾರದು. ಈಗಾಗಲೇ ಮಧ್ಯಂತರ ಆದೇಶ ನೀಡಿದೆ. ಅದನ್ನು ಪಾಲಿಸಲಾಗುತ್ತಿದ್ದು, ಅಂತಿಮ ಆದೇಶವನ್ನೂ ಪಾಲಿಸಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲ ಶಿಕ್ಷಕ ವರ್ಗ ಮತ್ತು ಮಕ್ಕಳು ಇದನ್ನು ಪಾಲಿಸುತ್ತಾರೆ ಎಂದರು. ಬಿಗಿ ಭದ್ರತೆ:ನಿಷೇಧಾಜ್ಞೆ ಇರುವುದರಿಂದ ಎಲ್ಲರೂ ಕಾನೂನು ಸುವ್ಯವಸ್ಥೆ ಪಾಲಿಸಬೇಕು. ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಗಸ್ತು ಇರಲಿದ್ದು, ಆಯಕಟ್ಟಿನ ಜಾಗದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗುವುದು. ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಪೊಲೀಸ್ ವಾಹನ ಗಸ್ತು ತಿರುಗಲಿದೆ ಎಂದು ಎಸ್‌ಪಿ ಇಶಾ ಪಂತ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತೀರ್ಪು ಯಾವುದೇ ರೀತಿ ಬರಲಿ ಅದನ್ನು ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಜನರು ಯಾವುದೇ ಪ್ರಚೋದನೆಗೆ ಒಳಗಾಗಬಾರದು. ಗಲಾಟೆಯಾದರೆ ಮುಗ್ಧರು, ಬಡವರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಸಂವೇದನಾಶೀಲರಾಗಿ ವರ್ತಿಸಬೇಕು ಎಂದು ಕಿವಿ ಮಾತು ಹೇಳಿದರು. ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, 144 ಉಲ್ಲಂಘಿಸಿದರೆ ತಕ್ಷಣವೇ ಬಂಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
from India & World News in Kannada | VK Polls https://ift.tt/pjDv9VC
Hijab Verdict: ಬೆಂಗಳೂರಿನಲ್ಲಿ 7 ದಿನ ನಿಷೇಧಾಜ್ಞೆ, ಪ್ರತಿಭಟನೆ-ಸಂಭ್ರಮಾಚರಣೆ ಬ್ಯಾನ್; ಎಲ್ಲೆಡೆ ಕಟ್ಟೆಚ್ಚರ
ಬೆಂಗಳೂರು: ಹಿಜಾಬ್ ಕುರಿತ ವಿಚಾರಣೆ ಮುಕ್ತಾಯಗೊಳಿಸಿರುವ ಹೈಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಮಾ.15ರಿಂದ 21ರವರೆಗೆ ನಗರಾದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಆದೇಶ ಹೊರಡಿಸಿದ್ದಾರೆ. ಮಾ.15ರ ಬೆಳಗ್ಗೆ 6ರಿಂದ ಮಾ.21ರ ತಡರಾತ್ರಿ 12 ಗಂಟೆವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ವೇಳೆ ಯಾವುದೇ ಪ್ರತಿಭಟನೆ, ಮೆರವಣಿಗೆ ಹಾಗೂ ಐದು ಜನಕ್ಕಿಂತ ಹೆಚ್ಚಿನ ಜನ ಒಂದೆಡೆ ಸೇರುವಂತಿಲ್ಲ. ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು, ಸಾಗಾಟ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ನ್ಯಾಯಾಲಯದ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಕಟ್ಟೆಚ್ಚರ ವಹಿಸಬೇಕು ಎಂದು ನಗರದ ಎಂಟು ವಲಯಗಳ ಡಿಸಿಪಿಗಳಿಗೂ ಸೂಚಿಸಲಾಗಿದೆ. ಅಗತ್ಯಕ್ಕನುಗುಣವಾಗಿ ಹೆಚ್ಚುವರಿ ಕೆಎಸ್‌ಆರ್‌ಪಿ ತುಕಡಿಗಳು ಹಾಗೂ ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಇನ್ನು ನಗರದ ಸೂಕ್ಷ್ಮ ಪ್ರದೇಶಗಳಲ್ಲೂ ಹೆಚ್ಚಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಇನ್ನಷ್ಟು ಕೆಎಸ್‌ಆರ್‌ಪಿ ಹಾಗೂ ಸಿಎಆರ್ ತುಕಡಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅನುಮತಿ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸುಧೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್‌ಉಡುಪಿಯ ಕಾಲೇಜಿನಲ್ಲಿ ಉಂಟಾಗಿದ್ದ ಹಿಜಾಬ್ ವಿವಾದ ರಾಜ್ಯಾದ್ಯಂತ ಹಬ್ಬುತ್ತಿದ್ದಂತೆ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಮೊದಲು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಕೆಲ ದಿನ ವಿಚಾರಣೆ ನಡೆಸಿತ್ತಾದರೂ, ಧಾರ್ಮಿಕ ಸೂಕ್ಷ್ಮ ಪ್ರಕರಣವಾದ್ದರಿಂದ ವಿಸ್ತೃತ ಪೀಠ ವಿಚಾರಣೆ ನಡೆಸುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟಿತ್ತು. ಅದರಂತೆ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠ ರಚಿಸಲಾಗಿತ್ತು. ಪೂರ್ಣಪೀಠದ ಮುಂದೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ಘಟಾನುಘಟಿ ಹಿರಿಯ ವಕೀಲರು ವಾದ- ಪ್ರತಿವಾದ ಮಂಡಿಸಿದ್ದರು. ಹಲವು ಸಾಂವಿಧಾನಿಕ, ಧಾರ್ಮಿಕ ಹಾಗೂ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವ ಈ ವಿವಾದ ರಾಷ್ಟ್ರ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿತ್ತು. ಮಧ್ಯಂತರ ಆದೇಶಹಿಜಾಬ್ ನಿರ್ಬಂಧಿಸಿದ ಬಳಿಕ ರಾಜ್ಯದಲ್ಲಿ ಹಲವೆಡೆ ಪ್ರತಿಭಟನೆ, ಗಲಾಟೆ ನಡೆದಿತ್ತು. ಶಾಲಾ-ಕಾಲೇಜುಗಳ ವಾತಾವರಣ ಹದಗೆಟ್ಟಿತ್ತು. ಹೈಕೋರ್ಟ್ ಫೆ.10ರಂದು ಮಧ್ಯಂತರ ಆದೇಶ ನೀಡಿ, ಅರ್ಜಿಗಳನ್ನು ಇತ್ಯರ್ಥಪಡಿಸುವವರೆಗೂ ಸಮವಸ್ತ್ರ ಸಂಹಿತೆ ಜಾರಿ ಮಾಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್, ಕೇಸರಿ ಶಾಲು ಸೇರಿ ಯಾವುದೇ ಧಾರ್ಮಿಕ ಸಂಕೇತ ಹೊಂದಿರುವ ಉಡುಪು ಧರಿಸಿ ಹೋಗಬಾರದು ಎಂದು ಸ್ಪಷ್ಟಪಡಿಸಿತ್ತು.
from India & World News in Kannada | VK Polls https://ift.tt/hk7vF3Q
ಶ್ರೇಯಸ್ ಅಯ್ಯರ್ ಮೇಲಿನ ಜವಾಬ್ದಾರಿ ದೊಡ್ಡದಿದೆ ಎಂದ ಕ್ಯಾಪ್ಟನ್ ರೋಹಿತ್ ಶರ್ಮಾ!
ಬೆಂಗಳೂರು: ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಿಂದ ಭಾರತ ತಂಡದ ಇಬ್ಬರು ಅನುಭವಿ ಬ್ಯಾಟ್ಸ್‌ಮನ್‌ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರನ್ನು ಹೊರಗಿಡಲಾಗಿತ್ತು. ಅನುಭವಿಗಳ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ಯುವ ಬ್ಯಾಟ್ಸ್‌ಮನ್ ಎಲ್ಲರ ಗಮನ ತಮ್ಮತ್ತ ಸೆಳೆದಿದ್ದಾರೆ. ಶ್ರೀಲಂಕಾ ವಿರುದ್ಧ ನಡೆದ ಮೊತ್ತ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಶ್ರೇಯಸ್ ಪಂದ್ಯ ಶ್ರೇಷ್ಠ ಗೌರವಕ್ಕೂ ಭಾಜನರಾದರು. ಪಂದ್ಯವನ್ನು 238 ರನ್‌ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಮಾತನಾಡಿದ ಕ್ಯಾಪ್ಟನ್ , ಯುವ ಬ್ಯಾಟ್ಸ್‌ಮನ್‌ನ ಅಮೋಘ ಆಟವನ್ನು ಗುಣಗಾನ ಮಾಡಿದ್ದಾರೆ. "ಇದೊಂದು ಅಮೋಘ ಓಟ. ತಂಡವಾಗಿ ಮತ್ತು ವೈಯಕ್ತಿಕವಾಗಿ ಬಹಳಾ ತೃಪ್ತಿ ನೀಡಿದೆ. ಒಂದು ತಂಡವಾಗಿ ಕೆಲ ಸಾಧನೆಗಳನ್ನು ಮೆಟ್ಟಿನಿಲ್ಲುವ ಗುರಿ ಹೊಂದಿದ್ದೆವು. ಅದನ್ನು ಸಾಧಿಸಿರುವುದಕ್ಕೆ ಸಂತಸವಿದೆ. ಬ್ಯಾಟ್ಸ್‌ಮನ್ ಆಗಿ ಜಡೇಜಾ ಅವರ ಪ್ರಗತಿ ಕಂಡಿದ್ದೇವೆ. ಅವರ ಬೌಲಿಂಗ್ ಪ್ರದರ್ಶನ ಮತ್ತಷ್ಟು ಸುಧಾರಿಸಿದೆ. ಅವರ ಫೀಲ್ಡಿಂಗ್ ಬಗ್ಗೆ ಮಾತೇ ಇಲ್ಲ," ಎಂದು ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಹೇಳಿದ್ದಾರೆ. "ಶ್ರೇಯಸ್ ಟಿ20 ಸರಣಿಯಲ್ಲಿ ನೀಡಿದ ಅದ್ಭುತ ಪ್ರದರ್ಶನವನ್ನು ಇಲ್ಲೂ ಮುಂದುವರಿಸಿದರು. ಭಾರತ ತಂಡದಲ್ಲಿ ಅವರ ಮೇಲಿನ ಜವಾಬ್ದಾರಿ ದೊಡ್ಡದಿದೆ. ಪೂಜಾರ ಮತ್ತು ರಹಾನೆ ಅವರಂತಹ ದಿಗ್ಗಜರ ಸ್ಥಾನವನ್ನು ಅವರು ತುಂಬಬೇಕಿದೆ. ಇದನ್ನು ಸಾಧಿಸಲು ಬೇಕಾದ ಎಲ್ಲಾ ಸಾಮರ್ಥ್ಯ ಅವರಲ್ಲಿದೆ. ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಅವರಿಗೆ ನೈಜ ಸವಾಲು ಎದುರಾಗಲಿದೆ," ಎಂದಿದ್ದಾರೆ. ಪಿಂಕ್ ಬಾಲ್ ಟೆಸ್ಟ್‌ನ ಸಂಕ್ಷಿಪ್ತ ಸ್ಕೋರ್‌ಭಾರತ: ಮೊದಲ ಇನಿಂಗ್ಸ್‌ನಲ್ಲಿ 59.1 ಓವರ್‌ಗಳಲ್ಲಿ 252/10 (ಶ್ರೇಯಸ್ ಅಯ್ಯರ್ 92, ಹನುಮ ವಿಹಾರಿ 31, ವಿರಾಟ್ ಕೊಹ್ಲಿ 23, ರಿಷಭ್ ಪಂತ್ 39; ಲಸಿತ್ ಎಂಬುಲ್ದೇನಿಯಾ 94ಕ್ಕೆ 3, ಪ್ರವೀಣ್ ಜಯವಿಕ್ರಮ 81 ಕ್ಕೆ 3, ಧನಂಜಯ್ ಡಿ ಸಿಲ್ವಾ 32ಕ್ಕೆ 2). ಶ್ರೀಲಂಕಾ: ಪ್ರಥಮ ಇನಿಂಗ್ಸ್‌ನಲ್ಲಿ 35.5 ಓವರ್‌ಗಳಿಗೆ 109/10 (ಏಂಜೆಲೊ ಮ್ಯಾಥ್ಯೂಸ್ 43, ನಿರೋಶನ್ ಡಿಕ್ವೆಲ್ಲಾ 21; ಜಸ್‌ಪ್ರಿತ್ ಬುಮ್ರಾ 24 ಕ್ಕೆ 5, ಮೊಹಮ್ಮದ್ ಶಮಿ 18ಕ್ಕೆ 2, ಆರ್ ಅಶ್ವಿನ್ 30 ಕ್ಕೆ 2). ಭಾರತ: ಎರಡನೇ ಇನಿಂಗ್ಸ್ 68.5 ಓವರ್‌ಗಳಲ್ಲಿ 9 ವಿಕೆಟ್‌ಗೆ 303 ರನ್ ಡಿಕ್ಲೇರ್ (ರೋಹಿತ್ ಶರ್ಮಾ 46, ಹನುಮ ವಿಹಾರಿ 35, ರಿಷಭ್ ಪಂತ್ 50, ಶ್ರೇಯಸ್ ಅಯ್ಯರ್ 67; ಪ್ರವೀಣ್ ಜಯವಿಕ್ರಮ 78ಕ್ಕೆ 4, ಲಸಿತ್ ಎಂಬುಲ್ದೇನಿಯ 87ಕ್ಕೆ 3). ಶ್ರೀಲಂಕಾ: ದ್ವಿತೀಯ ಇನಿಂಗ್ಸ್ 59.3 ಓವರ್‌ಗಳಲ್ಲಿ 208/10 (ದಿಮುತ್ ಕರುಣಾರತ್ನೆ 107, ಕುಶಾಲ್ ಮೆಂಡಿಸ್ 54; ಜಸ್‌ಪ್ರೀತ್ ಬುಮ್ರಾ 23ಕ್ಕೆ 3 ಕ್ಕೆ 1, ಆರ್ ಅಶ್ವಿನ್ 55 ಕ್ಕೆ 4, ಅಕ್ಷರ್ ಪಟೇಲ್ 37 ಕ್ಕೆ 2, ರವೀಂದ್ರ ಜಡೇಜಾ 48 ಕ್ಕೆ 1). ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್‌ಸರಣಿಶ್ರೇಷ್ಠ: ರಿಷಭ್ ಪಂತ್
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/7gYIFMx
IND vs SL 2nd Test: 3ನೇ ದಿನ ಗೆಲುವಿನ ವಿಶ್ವಾಸದಲ್ಲಿ ಟೀಮ್ ಇಂಡಿಯಾ!
ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ತಂಡ ಎರಡನೇ ದಿನದಾಟದ ಅಂತ್ಯಕ್ಕೆ ಮೇಲುಗೈ ಸಾಧಿಸಿತ್ತು. ಮೂರನೇ ದಿನವಾದ ಸೋಮವಾರ ಟೀಮ್ ಇಂಡಿಯಾ ಗೆಲುವು ಪಡೆಯಲು 9 ವಿಕೆಟ್‌ಗಳನ್ನು ಪಡೆಯುವ ಅಗತ್ಯವಿದೆ. ಭಾನುವಾರ 68.5 ಓವರ್‌ಗಳಿಗೆ 9 ವಿಕೆಟ್ 303 ರನ್ ಗಳಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಅನ್ನು ಡಿಕ್ಲೆರ್ ಮಾಡಿಕೊಂಡಿತ್ತು. ಆ ಮೂಲಕ ಪ್ರವಾಸಿ ತಂಡಕ್ಕೆ 447 ರನ್ ಕಠಿಣ ಗುರಿ ನೀಡಿತ್ತು. ನಂತರ ಗುರಿ ಹಿಂಬಾಲಿಸಿದ್ದ ಶ್ರೀಲಂಕಾ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 7 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು. ಪಿಂಕ್ ಬಾಲ್ ಚೆಂಡಿನಲ್ಲಿ ಬ್ಯಾಟಿಂಗ್‌ಗೆ ಕಠಿಣವಾಗಿರುವ ಬೆಂಗಳೂರು ಪಿಚ್‌ನಲ್ಲಿ ಶ್ರೀಲಂಕಾ ತಂಡ ಇನ್ನುಳಿದ 419 ರನ್‌ಗಳನ್ನು ಚೇಸ್ ಮಾಡಲು ಇನ್ನೂ ಮೂರು ದಿನಗಳ ಸಮಯವಿದೆ. ಆದರೆ ಭಾರತ ತಂಡದ ಬಲಿಷ್ಠ ಬೌಲಿಂಗ್ ಲೈನ್ ಅಪ್ ಅನ್ನು ಮೆಟ್ಟಿ ನಿಲ್ಲುವುದು ಹೇಳಿಕೊಳ್ಳುವಷ್ಟು ಸುಲಭವಲ್ಲ. ಏಕೆಂದರೆ ಪ್ರಥಮ ಇನಿಂಗ್ಸ್‌ನಲ್ಲಿ 109 ರನ್‌ಗಳಿಂದ ಪ್ರವಾಸಿಗರು ಆಲ್‌ಔಟ್ ಆಗಿದ್ದರು. ಆದರೆ ನಾಯಕತ್ವದ ಟೀಮ್ ಇಂಡಿಯಾ ಇನ್ನುಳಿದ 9 ವಿಕೆಟ್‌ಗಳನ್ನು ಸೋಮವಾರ ಉರುಳಿಸುವ ಮೂಲಕ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಎರಡನೇ ಟೆಸ್ಟ್‌ನಲ್ಲಿ ಗೆಲುವು ತನ್ನದಾಗಿಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಸಂಕ್ಷಿಪ್ತ(ಎರಡನೇ ದಿನದಾಟದ ಅಂತ್ಯಕ್ಕೆ) ಭಾರತ: ಮೊದಲ ಇನಿಂಗ್ಸ್‌ನಲ್ಲಿ 59.1 ಓವರ್‌ಗಳಲ್ಲಿ 252/10 (ಶ್ರೇಯಸ್ ಅಯ್ಯರ್ 92, ಹನುಮ ವಿಹಾರಿ 31, ವಿರಾಟ್ ಕೊಹ್ಲಿ 23, ರಿಷಭ್ ಪಂತ್ 39; ಲಸಿತ್ ಎಂಬುಲ್ದೇನಿಯಾ 94ಕ್ಕೆ 3, ಪ್ರವೀಣ್ ಜಯವಿಕ್ರಮ 81 ಕ್ಕೆ 3, ಧನಂಜಯ್ ಡಿ ಸಿಲ್ವಾ 32ಕ್ಕೆ 2). ಶ್ರೀಲಂಕಾ: ಪ್ರಥಮ ಇನಿಂಗ್ಸ್‌ನಲ್ಲಿ 35.5 ಓವರ್‌ಗಳಿಗೆ 109/10 (ಏಂಜೆಲೊ ಮ್ಯಾಥ್ಯೂಸ್ 43, ನಿರೋಶನ್ ಡಿಕ್ವೆಲ್ಲಾ 21; ಜಸ್‌ಪ್ರಿತ್ ಬುಮ್ರಾ 24 ಕ್ಕೆ 5, ಮೊಹಮ್ಮದ್ ಶಮಿ 18ಕ್ಕೆ 2, ಆರ್ ಅಶ್ವಿನ್ 30 ಕ್ಕೆ 2). ಭಾರತ: ಎರಡನೇ ಇನಿಂಗ್ಸ್ 68.5 ಓವರ್‌ಗಳಲ್ಲಿ 9 ವಿಕೆಟ್‌ಗೆ 303 ರನ್ ಡಿಕ್ಲೇರ್ (ರೋಹಿತ್ ಶರ್ಮಾ 46, ಹನುಮ ವಿಹಾರಿ 35, ರಿಷಭ್ ಪಂತ್ 50, ಶ್ರೇಯಸ್ ಅಯ್ಯರ್ 67; ಪ್ರವೀಣ್ ಜಯವಿಕ್ರಮ 78ಕ್ಕೆ 4, ಲಸಿತ್ ಎಂಬುಲ್ದೇನಿಯ 87ಕ್ಕೆ 3). ಶ್ರೀಲಂಕಾ: ದ್ವಿತೀಯ ಇನಿಂಗ್ಸ್ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 28 ರನ್ ( 10*, ಕುಶಲ್ ಮೆಂಡಿಸ್ 16*; ಜಸ್‌ಪ್ರೀತ್ ಬುಮ್ರಾ 9ಕ್ಕೆ 1).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/AKoYnS9
ಲಾಭದಾಯಕ ಡ್ರ್ಯಾಗನ್ ಫ್ರೂಟ್ ಬೆಳೆದ ಪದವೀಧರ ರೈತ; ನೀವೂ ಬೆಳೆಯಬೇಕೇ? ಹಾಗಿದ್ದರೆ ಇಲ್ಲಿದೆ ಮಾಹಿತಿ
ಸುನೀಲ್‌ಕುಮಾರ್ ಎಸ್.ಎಂ. ಸಿರಿಗೆರೆ: ಸದಾ ಮೆಕ್ಕೆಜೋಳ, ಹತ್ತಿ ಬೆಳೆದು ನಷ್ಟಕ್ಕೊಳಾಗಿದ್ದ ರೈತನೊಬ್ಬ, ತನ್ನ ಒಂದು ಎಕರೆಯಲ್ಲಿ ಹೊಸ ಪ್ರಯೋಗವೊಂದನ್ನು ಕೈಗೊಂಡಿದ್ದು, ಫಲ ನಿರೀಕ್ಷೆಯಲ್ಲಿದ್ದಾರೆ. ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ಪದವೀಧರ ಬೀರವಾರದ ದರ್ಶನ್ ಎಂಬುವರು ಎಂಬ ಬೆಳೆಗೆ ಕೈಹಾಕುವುದರ ಮೂಲಕ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ಮೊದಲ ಬಾರಿಗೆ ಸಸಿನೆಟ್ಟು ಪ್ರಯೋಗಶೀಲ ಕೃಷಿಗೆ ಕೈ ಹಾಕಿದ್ದಾರೆ. ರಾಷ್ಟೀಯ ಮತ್ತು ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್‌ಗೆ ಬಹು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಬೆಳೆ ಬೆಳೆಯಲು ರೈತ ಮುಂದಾಗಿದ್ದಾರೆ. ಬೆಳೆ ವಿಧಾನ : ಡ್ರ್ಯಾಗನ್ ಫ್ರೂಟ್ ಬೆಳೆಯಲು ಜಮೀನು ಹದ ಮಾಡಬೇಕು. ನಂತರ ಬದುಗಳಾಗಿ ನಿರ್ಮಿಸಿ, ಆ ಬದುಗಳ ಮೇಲೆ ಕಲ್ಲುಕಂಬ ಅಳವಡಿಸಬೇಕು. 1 ಕಲ್ಲುಕಂಬದ ಮೇಲೆ ಬೈಕಿನ ಹಳೆ ಟೈರ್‌ಗಳನ್ನು ಕಬ್ಬಿಣದ ಸರಳುಗಳ ಜೊತೆ ಜೋಡಿಸಬೇಕು. 1 ಕಂಬದಿಂದ 8 ಅಡಿ ಅಂತರದಲ್ಲಿ ಮತ್ತೊಂದು ಕಂಬ ಮತ್ತು ಬದುವಿಂದ ಬದುವಿಗೆ 12 ಅಡಿ ಅಂತರ ಇರಬೇಕು. 1 ಎಕರೆಗೆ 500 ಕಂಬಗಳು ಬರುತ್ತವೆ ಎನ್ನುತ್ತಾರೆ ರೈತ. ನಾಟಿ : ಒಂದು ಕಂಬಕ್ಕೆ 4 ರಿಂದ 5 ಹಣ್ಣಿನ ಸಸಿಗಳಂತೆ ಒಟ್ಟು 2000 ಹೆಚ್ಚು ಕೆಂಪು, ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು ತಂದು ನಾಟಿ ಮಾಡಲಾಗಿದೆ. ಇವುಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತಿದೆ. ಒಂದು ಎಕರೆಗೆ 5 ರಿಂದ 6 ಲಕ್ಷ ಖರ್ಚು ಮಾಡಿದ್ದು, ನಿಧಾನವಾಗಿ ಫಲ ಬರಲಿದೆ ಎಂಬುದು ರೈತನ ಅಭಿಪ್ರಾಯ. ಅವಧಿ ಎಷ್ಟು : 15 ರಿಂದ ರಿಂದ 18 ತಿಂಗಳ ಒಳಗೆ ಡ್ರ್ಯಾಗನ್ ಹಣ್ಣು ಕೈಗೆ ಸಿಗುತ್ತದೆ. ಮಹಾರಾಷ್ಟ್ರದಿಂದ 1 ಸಸಿಗೆ 60 ರೂ.ಕೊಟ್ಟು ತರಲಾಗಿದೆ. ಕಡಿಮೆ ನೀರಿನಲ್ಲಿ ಈ ಬೆಳೆ ಬೆಳೆಯಬಹುದು. ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ ಸೇರಿದಂತೆ ಅಗತ್ಯ ಪೋಷಕಾಂಶಗಳ ಗೊಬ್ಬರ ಅಗತ್ಯವಿದೆ. ಬೇಡಿಕೆ ಹೆಚ್ಚು ಹಾಗೂ ಮಾರುಕಟ್ಟೆ ಸೌಲಭ್ಯ : ಡ್ರ್ಯಾಗನ್ ಪ್ರೂಟ್ಸ್ ಥೈಲ್ಯಾಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಅಮೆರಿಕಾ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಈಗ ಮಾರುಕಟ್ಟೆಯಲ್ಲಿ 1 ಕೆಜಿ ಡ್ರ್ಯಾಗನ್ ಪ್ರೂಟ್ಸ್‌ಗೆ 180 ರಿಂದ 250 ವರೆಗೆ ಇದೆ. ಬಾಂಬೆ, ಬೆಂಗಳೂರು, ಮಹಾರಾಷ್ಟ ಮುಂತಾದ ಕಡೆಗಳಿಂದ ಬೇಡಿಕೆದಾರರು ಕೊಳ್ಳಲು ಮುಂದೆ ಬರುತ್ತಿದ್ದಾರೆ. ಏನಿದು ಡ್ರ್ಯಾಗನ್ ಫ್ರೂಟ್ಸ್? ಯಾಕೆ ತಿನ್ನಬೇಕು? : ಡ್ರ್ಯಾಗನ್ ಫ್ರೂಟ್ಸ್ ತಿನ್ನಲು ರುಚಿಕರವಾಗಿರುತ್ತದೆ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ. ಇದರಿಂದ ಬಹುಬೇಡಿಕೆ ಈ ಹಣ್ಣಿಗಿದೆ. ಇದು ಹೆಚ್ಚು ನೀರಿನಾಂಶ, ಪ್ರೋಟೀನ್ ಒಮೆಗಾ-3, 6 ಹಾಗೂ ಕೊಬ್ಬಿನ ಆಮ್ಲಗಳಿಂದ ಕೂಡಿದೆ. ಸಕ್ಕರೆ ಕಾಯಿಲೆ, ಬಿ.ಪಿ, ಹೃದಯಸಂಬಂಧಿ, ಗ್ಯಾಸ್ಟಿಕ್, ಕೊಲೆಸ್ಟ್ರಾಲ್ ಕಡಿಮೆಗೊಳಿಸುವಲ್ಲಿ, ಬಿಳಿರಕ್ತಕಣಗಳನ್ನು ಹೆಚ್ಚಿಸುವಲ್ಲಿ ಮತ್ತು ಡೆಂಗಿ ಜ್ವರಕ್ಕೆ, ಕ್ಯಾನ್ಸರ್ ಮತ್ತು ಸೇರಿದಂತೆ ಇತರೆ ಕಾಯಿಲೆಗಳಿಗೆ ಈ ಹಣ್ಣು ರಾಮಬಾಣ. ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜೊತೆಗೆ ಇದರ ಸಿಪ್ಪೆ ತೆಗೆದು ಚರ್ಮ ಕಾಯಿಲೆ ಇರುವವರು 2 ರಿಂದ 3 ಬಾರಿ ಸ್ನಾನ ಮಾಡಿದರೆ ಚರ್ಮ ಕಾಯಿಲೆ ಮಾಯವಾಗುತ್ತದೆ ಎನ್ನುತ್ತಾರೆ ವೈದ್ಯರು. ನಿರ್ವಹಣೆ
- ಈ ಬೆಳೆಗೆ ಹೆಚ್ಚು ನೀರು ಬೇಕಾಗಿಲ್ಲ
- ಸ್ವಲ್ಪ ನೀರುಕೊಟ್ಟರೆ ಸಾಕು ಬದುಕುತ್ತದೆ
- ಬೇಸಿಗೆ ಕಾಲದಲ್ಲಿ ಒಂದು ಗಿಡಕ್ಕೆ ವಾರಕ್ಕೆ 10 ಲೀಟರ್ ನೀರು
- ಒಮ್ಮೆ ನೆಡುವುದು ಕಷ್ಟದ ಕೆಲಸ ಬಳಿಕ ನಿರ್ವಹಣೆ ಸುಲಭ.
- ಕೀಟ-ರೋಗ ಸಮಸ್ಯೆಗಳು ಕಡಿಮೆ.
- ನಿರಂತರ ಆದಾಯ ಬರುತ್ತದೆ.
from India & World News in Kannada | VK Polls https://ift.tt/swbPSMV
ಜಾಲತಾಣದಲ್ಲಿ ಬ್ಲ್ಯಾಕ್‌ಮೇಲ್: ಮರ್ಯಾದೆಗೆ ಹೆದರಿ ಜೀವ ಬಿಡುವವರ ಸಂಖ್ಯೆಯೂ ಹೆಚ್ಚಳ!; ಯುವಜನರೇ ಟಾರ್ಗೆಟ್!
ರವಿಕುಮಾರ ಬೆಟ್ಟದಪುರ ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತರುಣಿಯರ ಹೆಸರಿನಲ್ಲಿ ಖಾತೆ ತೆರೆದು ಬ್ಲ್ಯಾಕ್ ಮೇಲ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಬ್ಲ್ಯಾಕ್‌ಮೇಲ್‌ಗೆ ಒಳಗಾದವರು ಮರ್ಯಾದೆಗೆ ಅಂಜಿ ಪ್ರಾಣ ಕಳೆದುಕೊಳ್ಳುವ ವಿದ್ಯಮಾನಗಳೂ ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ಈ ರೀತಿ ಪ್ರಾಣ ಕಳೆದುಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು ಯುವಜನರೇ ಆಗಿದ್ದಾರೆ. ಜನ ಜಾಲತಾಣ ಸಕ್ರಿಯತೆ ಮತ್ತು ಯಾವುದೇ ಅಡೆತಡೆ ಇಲ್ಲದೆ ತೆರೆದುಕೊಳ್ಳುವ ಸೆಕ್ಸ್ ಲೋಕದ ಬಗೆಗಿನ ಕುತೂಹಲವನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ದುರುಳರು ಸ್ನೇಹದ ಜಾಲ ಬೀಸಿ ಟ್ರ್ಯಾಪ್‌ಗೆ ಸಿಲುಕಿಸುತ್ತಾರೆ. ಕೆಲವರು ಸಲುಗೆ ಬೆಳೆಸಿ ನಗ್ನ ವಿಡಿಯೊ ಮಾಡಿಸಿಕೊಳ್ಳುತ್ತಾರೆ, ಫೋಟೊ ತೆಗೆದುಕೊಳ್ಳುತ್ತಾರೆ. ಅವುಗಳನ್ನೇ ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಕೆಲವರು ಈ ಚಿತ್ರಗಳನ್ನೇ ಎಡಿಟ್ ಮಾಡಿ, ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಗೌರವ, ಘನತೆಗೆ ಹೆದರುವವರು ಮೊದ ಮೊದಲು ಹಣ ನೀಡಿದರೂ, ನಂತರವೂ ಬ್ಲ್ಯಾಕ್‌ಮೇಲ್ ಮುಂದುವರಿದಾಗ ಹಣ ನೀಡಲಾಗದೆ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಈಗಾಗಲೇ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ವೈದ್ಯಕೀಯ ವಿದ್ಯಾರ್ಥಿಗಳು, ಯುವ ವೈದ್ಯ, ಎಂಜಿನಿಯರ್, ಬೆಸ್ಕಾಂ ನೌಕರ, ಕಾಲೇಜು ವಿದ್ಯಾರ್ಥಿಗಳು ಹಾಗೂ ಎಂಬಿಎ ಪದವಿ ವಿದ್ಯಾರ್ಥಿಗಳು ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವೊಂದು ಪ್ರಕರಣಗಳಷ್ಟೇ ಬಯಲಿಗೆ ಬರುತ್ತಿವೆ. ಉಳಿದಂತೆ ಯಾವುದೇ ಕಾರಣವಿಲ್ಲದೆ ಪ್ರಾಣ ಕಳೆದುಕೊಳ್ಳುವ ನೂರಾರು ಯುವಜನರ ಸಾವಿನ ಹಿಂದೆಯೂ ಇದೇ ಟ್ರ್ಯಾಪ್ ಇರಬಹುದೆಂಬ ಸಂಶಯವೂ ಕೇಳಿಬಂದಿದೆ. ರಾಜ್ಯದಲ್ಲಿ ಅಮಾಯಕರ ಜೀವಬಲಿ
- 26 ವರ್ಷದ ಯುವ ವೈದ್ಯರೊಬ್ಬರನ್ನು ಭೋಪಾಲ್‌ನ ಸೈಬರ್ ದುರುಳನೊಬ್ಬ ಯುವತಿಯ ಸೋಗಿನಲ್ಲಿ ಸಲುಗೆ ಬೆಳೆಸಿ ನಗ್ನ ವಿಡಿಯೊ ಮಾಡಿಕೊಂಡಿದ್ದ. ವೈದ್ಯರು ಮೊದಲು 67 ಸಾವಿರ ನೀಡಿದ್ದರೂ ಬ್ಲ್ಯಾಕ್‌ಮೇಲ್ ಮುಂದುವರಿದಿತ್ತು. ಕೊನೆಗೆ ಅವರು ಡೆತ್‌ನೋಟ್ ಬರೆದಿಟ್ಟು, 2021 ಆಗಸ್ಟ್ 13ರಂದು ಕೆಂಗೇರಿ ಹೆಜ್ಜಾಲದಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
- 24 ವರ್ಷದ ಎಂಜಿನಿಯರ್‌ರನನ್ನು ಪ್ರಚೋದಿಸಿ ಅಶ್ಲೀಲ ವಿಡಿಯೊ ಮಾಡಿಕೊಂಡ ದುರುಳರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲಾಗದೆ ಮಾನಕ್ಕೆ ಅಂಜಿ ಜ.24ರಂದು ಮಲ್ಲೇಶ್ವರದ ರೈಲ್ವೆ ಹಳಿ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- ಎಂಬಿಎ ಪದವಿ ವಿದ್ಯಾರ್ಥಿಯೊಬ್ಬರು ಕೆಲವು ವಾರದ ಹಿಂದೆ ಕೆಂಗೇರಿ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.
- ಬೆಸ್ಕಾಂ ನೌಕರನೊಬ್ಬ ಇತ್ತೀಚೆಗೆ ತನ್ನ ಪ್ರೇಯಸಿ ಜತೆ ಅರಸೀಕೆರೆಗೆ ತೆರಳಿದ್ದರು. ಅಲ್ಲಿನ ಏಕಾಂತದ ಖಾಸಗಿ ಕ್ಷಣವನ್ನು ಸ್ಥಳೀಯ ಅಪ್ರಾಪ್ತ ಯುವಕರು ವಿಡಿಯೊ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಶುರು ಮಾಡಿದ್ದರು. ಕೊನೆಗೆ ಹಣ ನೀಡಲಾಗದೆ ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
- ಕಳೆದ ವರ್ಷ ಇಬ್ಬರು ಪತ್ರಕರ್ತರಿಗೂ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡುವ ಪ್ರಯತ್ನ ನಡೆಸಿದ್ದರು. ಕೊನೆಗೆ ಸೈಬರ್ ಪೊಲೀಸರ ನೆರವಿನಿಂದ ಆರೋಪಿಗಳ ಬೆನ್ನತ್ತಿದಾಗ ಬೆಂಗಳೂರಿನವರೇ ಕೃತ್ಯವೆಸಗಿರುವುದು ತಿಳಿದುಬಂದಿತ್ತು.
- ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬಾರದು.
- ಸ್ವೀಕರಿಸಿದರೂ, ಅವರೊಂದಿಗೆ ಚಾಟ್ ಮಾಡಬಾರದು. ಒಡನಾಟ ಬೆಳೆಸಿಕೊಳ್ಳಬಾರದು.
- ಮೊಬೈಲ್ ನಂಬರ್ ಹಾಗೂ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬಾರದು.
- ಅಪರಿಚಿತ ವ್ಯಕ್ತಿಗಳು ವಿಡಿಯೊ ಕರೆ ಮಾಡಿದಾಗ ಸ್ವೀಕರಿಸಬಾರದು.
- ಒಂದು ವೇಳೆ ಸ್ವೀಕರಿಸಿ ವಿಡಿಯೊ ರೆಕಾರ್ಡ್ ಆದ ನಂತರ ಅವರ ಬ್ಲ್ಯಾಕ್‌ಮೇಲ್‌ಗೆ ಹೆದರಬಾರದು.
- ಅವರ ನಂಬರ್ ಬ್ಲ್ಯಾಕ್ ಮಾಡಬೇಕು. ಇಲ್ಲ ತಮ್ಮ ಸಾಮಾಜಿಕ ಜಾಲತಾಣಗಳನ್ನು ನಿಷ್ಕ್ರೀಯಗೊಳಿಸಿ
- ಯಾವುದೇ ಕಾರಣಕ್ಕೂ ಹಣ ನೀಡಬಾರದು.
- ಬ್ಲ್ಯಾಕ್‌ಮೇಲ್ ಹೆಚ್ಚಾದರೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಬೇಕು.
- ಇಲ್ಲವೇ ಬ್ಲ್ಯಾಕ್‌ಮೇಲ್ ಪ್ರೊಫೈಲ್ ಚಿತ್ರ ಹಾಗೂ ಚಾಟ್ ಮಾಡಿರುವುದನ್ನು ಸ್ಕ್ರೀನ್‌ಶಾಟ್ ತೆಗೆದು ಅಟ್ಯಾಚ್ ಮಾಡಿ ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದೂರು ದಾಖಲಿಸುವುದು.
- ಇಂತಹ ತಪ್ಪುಗಳ ನಡೆದಾಗ ಯಾವುದೇ ಮುಚ್ಚುಮರೆ ಇಲ್ಲದೇ ಸ್ನೇಹಿತರು ಅಥವಾ ಪೋಷಕರ ಬಳಿ ಹೇಳಿಕೊಳ್ಳುವುದು.
from India & World News in Kannada | VK Polls https://ift.tt/zT0xMuO
ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ! ವಿಡಿಯೋ
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಡೇ-ನೈಟ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆ ಭಾರತ ತಂಡದ ಹೆಡ್ ಕೋಚ್ ಹಾಗೂ ಮಾಜಿ ನಾಯಕ ನಡೆದುಕೊಂಡ ಹಾದಿಗೆ ಕೋಟ್ಯಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೀಲಂಕಾ ತಂಡದ ಹಿರಿಯ ವೇಗಿ ಅವರು ಎರಡನೇ ದಿನದಾಟದ ವೇಳೆ ಡ್ರೆಸ್ಸಿಂಗ್ ಕೊಠಡಿಯತ್ತ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಲಂಕಾ ವೇಗಿಯನ್ನು ಬೆನ್ನು ತಟ್ಟಿ ಅಭಿನಂದಿಸಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎರಡನೇ ದಿನದಾಟದ ವೇಳೆ ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ನಡೆದುಕೊಂಡ ಹಾದಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಅಭಿಮಾನಿಗಳ ಜೊತೆಗೆ ಶ್ರೀಲಂಕಾ ಅಭಿಮಾನಿಗಳು ಕೂಡ ಭಾರತೀಯ ದಿಗ್ಗಜರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವೃತ್ತಿ ಬದುಕಿನ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸುರಂಗ ಲಕ್ಮಲ್ ಅವರು ಒಂದೇ ಒಂದು ವಿಕೆಟ್ ಪಡೆದಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡ 109 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ಎರಡನೇ ದಿನದಾಟದ ವೇಳೆ ಬಹುಬೇಗ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ, 9 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿ ಡಿಕ್ಲೆರ್ ಘೋಷಿಸಿತು. ಆ ಮೂಲಕ ಎದುರಾಳಿ ತಂಡಕ್ಕೆ 447 ರನ್‌ಗಳ ಕಠಿಣ ಗುರಿ ನೀಡಿತು. ದ್ವಿತೀಯ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ನಿರ್ಣಾಯಕ ಅರ್ಧಶತಕಗಳನ್ನು ಸಿಡಿಸಿದರು. ಲಂಕೆಗೆ ಆರಂಭಿಕ ಆಘಾತ: ಕಠಿಣ ಗುರಿ ಹಿಂಬಾಲಿಸಿದ ಶ್ರೀಲಂಕಾ ತಂಡಕ್ಕೆ ಜಸ್‌ಪ್ರಿತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಲಹಿರು ತಿರಿಮಾನ್ನೆ ಅವರನ್ನು ಬುಮ್ರಾ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ನಾಯಕ ದಿಮುತ್ ಕರುಣಾರತ್ನೆ(10*) ಮತ್ತು ಕುಸಾಲ್ ಮೆಡಿಸ್(16*) ಅವರು ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ: ಎರಡನೇ ದಿನದಾಟದ ಅಂತ್ಯಕ್ಕೆ ಇಎಸ್‌ಪಿಎನ್ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಸುರಂಗ ಲಕ್ಮಲ್, ಕಳೆದ 13 ವರ್ಷಗಳಿಂದ ಶ್ರೀಲಂಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದೇನೆ. ಇದೀಗ ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ. "ನನ್ನ ತಂಡಕ್ಕೆ ನಾನು ಏನು ಮಾಡಬಹುದು ಹಾಗೂ ನನ್ನ ಪ್ರದರ್ಶನದ ಬಗ್ಗೆ ಸಾಕಷ್ಟು ಚಿಂತಿಸಿದ್ದೇನೆ. ನನಗೀಗ 35 ವರ್ಷ, 13 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇನೆ. ಇನ್ನುಷ್ಟು ವರ್ಷಗಳ ಕಾಲ ಆಡುವ ಮೂಲಕ ಯುವ ಆಟಗಾರರ ಅವಕಾಶವನ್ನು ಕಿತ್ತುಕೊಳ್ಳಲು ನನಗೆ ಮನಸಿಲ್ಲ. ಶ್ರೀಲಂಕಾ ಕ್ರಿಕೆಟ್ ತೊರೆಯಲು ಇದು ನನಗೆ ಸಕಾಲ," ಎಂದು 70 ಟೆಸ್ಟ್ ಪಂದ್ಯಗಳಿಂದ 171 ವಿಕೆಟ್ ಕಿತ್ತಿರುವ ಸುರಂಗ ಲಕ್ಮಲ್ ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Cls1OGt
ಸರ್ಕಾರಿ ವಸತಿ ಶಾಲೆಗಳಿಗೆ ಫ್ರಿಜ್ ಪೂರೈಕೆಯಾಗದೆಯೇ ಲಕ್ಷಾಂತರ ಬಿಲ್! ಕೋಟ್ಯಂತರ ರೂಪಾಯಿ ಅವ್ಯವಹಾರ?
ಫಾಲಲೋಚನ ಆರಾಧ್ಯ ಚಾಮರಾಜನಗರ: ಸರಕಾರಿ ವಸತಿ ಶಾಲೆಗಳಿಗೆ ರೆಫ್ರಿಜರೇಟರ್‌ಗಳನ್ನು ಪೂರೈಕೆ ಮಾಡದೇ, ಪೂರೈಸಲಾಗಿದೆ ಎಂಬ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿರುವ ಪೂರೈಕೆದಾರ ಸಂಸ್ಥೆ ಕುರಿತು ಮಹಾಲೇಖಪಾಲರ (ಆಡಿಟ್) ವರದಿ ಬಲವಾದ ಆಕ್ಷೇಪ ಎತ್ತಿದೆ. ರಾಜ್ಯ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 2020-21ನೇ ಸಾಲಿನಲ್ಲಿ ಕಿಯೋನಿಕ್ಸ್ ಸಂಸ್ಥೆ ಮೂಲಕ ರೆಫ್ರಿಜರೇಟರ್ ಚಿಲ್ಲರ್ಸ್ ಪೂರೈಸುವ ವ್ಯವಹಾರದಲ್ಲಿ ಅಕ್ರಮದ ವಾಸನೆ ಬಡಿದಿದೆ. ಪೂರೈಕೆದಾರ ಪಾತ್ರ ನಿರ್ವಹಿಸಿರುವ ನ್ಯೂಜೆನ್ ಸೆಕ್ಯೂರಿಟಿ ಸೆಲ್ಯೂಶನ್ಸ್ ಸಂಸ್ಥೆಯ ವ್ಯವಹಾರ ಕುರಿತು ಅನುಮಾನಗಳು ಎದ್ದಿವೆ. ಪೂರೈಸದೇ ರೆಫ್ರಿಜರೇಟರ್ ಪೂರೈಕೆ ಆಗಿದೆ ಎಂಬ ರೀತಿಯಲ್ಲಿ ಹಾಸ್ಟೆಲ್ ಪ್ರಾಂಶುಪಾಲರ ಸಹಿಯನ್ನೇ ಫೋರ್ಜರಿ ಮಾಡಿರುವುದು ಹಾಗೂ ಮೂರನೇ ವ್ಯಕ್ತಿ ಪರಿಶೀಲನೆ ವರದಿಯನ್ನೇ ನಕಲಿ ಮಾಡಿರುವುದು ಆಡಿಟ್ ತಪಾಸಣೆ ವೇಳೆ ಸಾಕ್ಷಿಯಾಗಿ ಸಿಕ್ಕಿವೆ. ಇದೆಲ್ಲದಕ್ಕಿಂತ ಅಚ್ಚರಿಯ ವಿಷಯವೆಂದರೆ, ರೆಫ್ರಿಜರೇಟರ್ ಪೂರೈಕೆಯಾಗದಿದ್ದರೂ ಅಧಿಕಾರಿಗಳು ಬಿಲ್ ಚುಕ್ತಗೊಳಿಸಿದ್ದಾರೆ. ಹಾಗಾಗಿ, ಅಧಿಕಾರಿಗಳ ಬಗ್ಗೆಯೂ ಅನುಮಾನದ ಬೊಟ್ಟು ತಿರುಗಿದೆ. ಕೆಲ ಪ್ರಾಂಶುಪಾಲರು ಹಾಗೂ ಮೂರನೇ ವ್ಯಕ್ತಿ ತಪಾಸಣೆ ಅಧಿಕಾರಿಗಳು ಈ ಸಹಿ ನಮ್ಮದಲ್ಲ ಎಂಬುದಾಗಿ ತಿಳಿಸಿ ಬರೆದಿರುವ ಪತ್ರ, ಆಡಿಟ್‌ನಲ್ಲಿ ಆಕ್ಷೇಪಣೆ ಮಾಡಿರುವ ದಾಖಲೆಗಳು ವಿಜಯ ಕರ್ನಾಟಕಕ್ಕೆ ಲಭ್ಯವಾಗಿವೆ. ಏನಿದು ಹಗರಣ?ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯು ತನ್ನ ಮೊರಾರ್ಜಿ ವಸತಿ ಶಾಲೆ/ ಹಾಸ್ಟೆಲ್‌ಗಳಿಗೆ ಒಟ್ಟು 70 ರೆಫ್ರಿಜರೇಟರ್‌ಗಳನ್ನು ಸರಬರಾಜು ಮಾಡುವಂತೆ ಕೋರಿ ಪೂರೈಕೆದಾರ ಸಂಸ್ಥೆ ಕಿಯೋನಿಕ್ಸ್‌ಗೆ 2020ರ ಮಾ.10ರಂದು ಪತ್ರ ಬರೆಯುತ್ತದೆ. ಬಳಿಕ, 650 ಲೀಟರ್‌ನ ಡಿಜಿಟಲ್ ಮೈಕ್ರೋ ಆಧಾರಿತ ತಾಪಮಾನ ನಿಯಂತ್ರಿತ ರೆಫ್ರಿಜರೇಟರ್‌ಗಳನ್ನು ರಾಜ್ಯದ ನಾನಾ ಕಡೆಯ ಮೊರಾರ್ಜಿ ಹಾಸ್ಟೆಲ್‌ಗಳಿಗೆ ಪೂರೈಸಲು ಆದೇಶಿಸಿತು. ಆ ಸಂದರ್ಭದಲ್ಲಿಯೇ ನಿಯಮದಂತೆ ಒಂದಿಷ್ಟು ನಿರ್ದೇಶನಗಳನ್ನು ನೀಡಿತ್ತು. ‘ಪ್ರತಿ ರೆಫ್ರಿಜರೇಟರ್‌ಗಳ ದರದ ವಿವರಗಳನ್ನು ಒದಗಿಸಬೇಕು. 2 ವರ್ಷಗಳ ವಾರ್ಷಿಕ ನಿರ್ವಹಣೆ ಒಪ್ಪಂದವನ್ನು ಒಳಗೊಂಡಿರಬೇಕು. ಮೂರನೇ ವ್ಯಕ್ತಿಯ ತಪಾಸಣೆಗಳನ್ನು ಸರಬರಾಜುದಾರರಿಂದ ನಡೆಸಿ, ಇಲಾಖೆಗೆ ವರದಿ ಸಲ್ಲಿಸಬೇಕು. ಅಲ್ಲದೇ ವಿತರಣಾ ಚಲನ್‌ಗಳನ್ನು ಹಾಸ್ಟೆಲ್‌ಗಳ ಪ್ರಾಂಶುಪಾಲರು ಫೋಟೋಗಳೊಂದಿಗೆ ಪ್ರಮಾಣೀಕರಿಸಬೇಕು ಮತ್ತು ಪಾವತಿಸಲು ಇಲಾಖೆಗೆ ಸಲ್ಲಿಸಬೇಕು’ ಎಂದು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರು. ಈ ಆದೇಶದಂತೆ ಪೂರೈಕೆದಾರ ಸಂಸ್ಥೆ ಕಿಯೋನಿಕ್ಸ್, ತನ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ನ್ಯೂಜೆನ್ ಸೆಕ್ಯೂರಿಟಿ ಸೆಲ್ಯೂಶನ್ಸ್ ಸಂಸ್ಥೆಗೆ ಈ ರೆಫ್ರಿಜರೇಟರ್‌ಗಳನ್ನು ಪೂರೈಸಲು ತಿಳಿಸುತ್ತದೆ. ಅದರಂತೆ 70 ಹಾಸ್ಟೆಲ್‌ಗಳಿಗೆ ರೆಫ್ರಿಜರೇಟರ್‌ಗಳನ್ನು ಪೂರೈಕೆ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರಿಂದ ಸ್ವೀಕೃತ ಪತ್ರ ಹಾಗೂ ಮೂರನೇ ವ್ಯಕ್ತಿಯ ತಪಾಸಣೆ ಪತ್ರವನ್ನು ಒದಗಿಸಲಾಗಿದೆ ಎಂದು ನ್ಯೂಜೆನ್ ಸೆಕ್ಯೂರಿಟಿ ಸೆಲ್ಯೂಶನ್ಸ್ ಸಂಸ್ಥೆ ಪ್ರಾಮಾಣೀಕರಿಸಿ ಬಿಲ್ ಪಡೆದಿದೆ.
from India & World News in Kannada | VK Polls https://ift.tt/xiQj4Ck
28 ಎಸೆತಗಳಲ್ಲಿ ರಿಷಭ್ ಪಂತ್ ಫಿಫ್ಟಿ, ಕಪಿಲ್ ದೇವ್ ದಾಖಲೆ ಪುಡಿಪುಡಿ!
ಬೆಂಗಳೂರು: ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ವಿಕೆಟ್‌ಕೀಪರ್ ರಿಷಭ್ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಸರಲ್ಲಿದ್ದ 40 ವರ್ಷ ಹಳೆಯ ಬ್ಯಾಟಿಂಗ್ ದಾಖಲೆ ಒಂದನ್ನು ಪುಡಿಪುಡಿ ಮಾಡಿದ್ದಾರೆ. ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ 24 ವರ್ಷದ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್, ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಭಾರತ-ಶ್ರೀಲಂಕಾ ತಂಡಗಳು ಇದೇ ಮೊದಲ ಬಾರಿ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮುಖಾಮುಖಿ ಆಗಿವೆ. ಪಂದ್ಯದ ಎರಡನೇ ದಿನವಾದ (ಮಾ.13) ಭಾನುವಾರ ಫೋರ್-ಸಿಕ್ಸರ್‌ಗಳ ಸುರಿಮಳೆಗೈದ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕಿಕ್ಕಿರಿದು ತುಂಪಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಬರೋಬ್ಬರಿ 2 ವರ್ಷಗಳ ಬಳಿಕ ಕ್ರಿಕೆಟ್ ವೀಕ್ಷಣೆಗಾಗಿ ಕ್ರೀಡಾಂಗಣಕ್ಕೆ ಬಂದಿದ್ದ ಬೆಂಗಳೂರು ಪ್ರೇಕ್ಷಕರಿಗೆ ಪಂತ್ ಭರಪೂರ ಮನೋರಂಜನೆ ಒದಗಿಸಿದರು. ಅಂದಹಾಗೆ ಇದಕ್ಕೂ ಮುನ್ನ ಭಾರತ ತಂಡಕ್ಕೆ ಮೊದಲ ವಿಶ್ವಕಪ್ (1983) ಗೆದ್ದು ಕೊಟ್ಟ ಕ್ಯಾಪ್ಟನ್ ಕಪಿಲ್ ದೇವ್ ಹೆಸರಲ್ಲಿ ಟೀಮ್ ಇಂಡಿಯಾ ಪರ ಅತಿ ವೇಗದ ಟೆಸ್ಟ್ ಫಿಫ್ಟಿ ಬಾರಿಸಿದ ದಾಖಲೆ ಇತ್ತು. 1982ರಲ್ಲಿ ಕಪಿಲ್ ದೇವ್ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಕರಾಚಿ ಟೆಸ್ಟ್ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿದಿದ್ದಾರೆ. ವಿಶ್ವ ಮಟ್ಟದಲ್ಲಿ ಅತಿ ವೇಗದ ಟೆಸ್ಟ್ ಫಿಫ್ಟಿ ಬಾರಿಸಿದ ದಾಖಲೆ ಪಾಕಿಸ್ತಾನದ ಶಾಹಿದ್ ಅಫ್ರಿದಿ ಹೆಸರಲ್ಲಿದೆ. ಪಂತ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗದ ಫಿಫ್ಟಿ
- ರಿಷಭ್ ಪಂತ್ (28 ಎಸೆತ): 2022ರಲ್ಲಿ ಶ್ರೀಲಂಕಾ ಎದುರು (ಬೆಂಗಳೂರು)
- ಕಪಿಲ್ ದೇವ್ (30 ಎಸೆತ): 1982ರಲ್ಲಿ ಪಾಕಿಸ್ತಾನ ಎದುರು (ಕರಾಚಿ)
- ಶಾರ್ದುಲ್ ಠಾಕೂರ್ (31 ಎಸೆತ): 2021ರಲ್ಲಿ ಇಂಗ್ಲೆಂಡ್ ಎದುರು (ಓವಲ್)
- ವೀರೇಂದ್ರ ಸೆಹ್ವಾಗ್ (32 ಎಸೆತ): 2008ರಲ್ಲಿ ಇಂಗ್ಲೆಂಡ್ ಎದುರು (ಚೆನ್ನೈ)
- ಶಾಹಿದ್ ಅಫ್ರಿದಿ (26 ಎಸೆತ): 2005ರಲ್ಲಿ ಭಾರತ ಎದುರು
- ಇಯಾನ್ ಬಾಥಮ್ (28 ಎಸೆತ): 1981ರಲ್ಲಿ ಭಾರತ ಎದುರು
- ರಿಷಭ್ ಪಂತ್ (28 ಎಸೆತ): 2022ರಲ್ಲಿ ಶ್ರೀಲಂಕಾ ಎದುರು
- ಕಪಿಲ್ ದೇವ್ (30 ಎಸೆತ): 1982ರಲ್ಲಿ ಪಾಕಿಸ್ತಾನ ಎದುರು
- ಅರ್ಜುನ ರಣತುಂಗ (31 ಎಸೆತ): 1986ರಲ್ಲಿ ಭಾರತ ಎದುರು
- ಶಾರ್ದುಲ್ ಠಾಕೂರ್ (31 ಎಸೆತ): 2021ರಲ್ಲಿ ಇಂಗ್ಲೆಂಡ್ ಎದುರು
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4JuSxGw
ಗೋವಾ, ಉತ್ತರಾಖಂಡ್‌ನಲ್ಲಿ ಮುಂದುವರಿದ ಸಿಎಂ ಆಯ್ಕೆ ಗೊಂದಲ! ರಿತು ಖಂಡೂರಿಗೆ ಒಲಿಯುತ್ತಾ ಅದೃಷ್ಟ?
ಹೊಸದಿಲ್ಲಿ: ಉತ್ತರಾಖಂಡ ಮತ್ತು ಗೋವಾಗಳಲ್ಲಿ ಆಯ್ಕೆ ಕುರಿತು ಬಿಜೆಪಿಯಲ್ಲಿ ಗೊಂದಲ ಮುಂದುವರಿದಿದೆ. ಉತ್ತರಾಖಂಡದಲ್ಲಿ ಹಾಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೋತಿದ್ದರೆ, ಗೋವಾದಲ್ಲಿ ಹಾಲಿ ಸಿಎಂ ಪ್ರಮೋದ್ ಸಾವಂತ್ ನಾಯಕತ್ವದ ಬಗ್ಗೆ ಕೆಲವರಿಂದ ಅಸಮಾಧಾನ ವ್ಯಕ್ತವಾಗಿರುವುದು ನಾಯಕರನ್ನು ಗೊಂದಲದಲ್ಲಿ ಸಿಲುಕಿಸಿದೆ. ಪಕ್ಷದಲ್ಲಿಉತ್ತರಾಖಂಡ ಉಸ್ತುವಾರಿಯಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಚುನಾವಣಾ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವೀಕ್ಷಕರಾಗಿ ಡೆಹ್ರಾಡೂನ್‌ಗೆ ತೆರಳಿರುವ ಕೇಂದ್ರ ಸಚಿವರಾದ ಪಿಯೂಶ್ ಗೋಯಲ್ ಮತ್ತು ಧರ್ಮೇಂದ್ರ ಪ್ರಧಾನ್ ಅವರು ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ರಾಜ್ಯ ನಾಯಕರು, ನೂತನ ಶಾಸಕರ ಜತೆ ಚರ್ಚೆ ನಡೆಸುತ್ತಿದ್ದಾರೆ. ಹಾಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿಸೋತಿದ್ದರೂ, ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆದ ಕಾರಣ ಧಾಮಿ ಅವರಿಗೆ ಮತ್ತೊಂದು ಅವಕಾಶ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದರೆ, ಸೋತಿರುವುದರಿಂದ ಮತ್ತೆ ಅವಕಾಶ ನೀಡುವುದು ಬೇಡ ಎಂಬ ಅಭಿಪ್ರಾಯವನ್ನು ಹಲವರು ಹೇಳುತ್ತಿದ್ದಾರೆ. ಹೀಗಾಗಿ ಪಕ್ಷದ ರಾಷ್ಟ್ರೀಯ ನಾಯಕರು ಗೊಂದಲದಲ್ಲಿ ಮುಳುಗಿದ್ದಾರೆ. ಈ ನಡುವೆ, ಕೇಂದ್ರ ನಾಯಕರು ಮಾಜಿ ಮುಖ್ಯಮಂತ್ರಿ ಬಿಸಿ ಖಂಡೂರಿ ಅವರ ಪುತ್ರಿ ರಿತು ಖಂಡೂರಿ ಅವರನ್ನು ಹೊಸದಿಲ್ಲಿಗೆ ಕರೆಸಿಕೊಂಡಿದ್ದಾರೆ. ರಿತು ಅವರು ಸತತ ಎರಡನೇ ಅವಧಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ರಿತು ಖಂಡೂರಿ ಅವರೇ ಮುಂದಿನ ಮುಖ್ಯಮಂತ್ರಿ ಆಗಬಹುದು ಎಂಬ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದೆ. ಆದರೆ, ಮೋದಿ, ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರ ಒಲವು ಯಾರತ್ತ ಇದೆ ಎಂಬುದು ಬಹಿರಂಗವಾಗಿಲ್ಲ. ಇನ್ನು, ಗೋವಾದಲ್ಲಿ ಪ್ರಮೋದ್ ಸಾವಂತ್ ನಾಯಕತ್ವದ ಕುರಿತು ಕೆಲವು ಶಾಸಕರು ಅಪಸ್ವರ ಎತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆ ಕುರಿತು ತೀರ್ಮಾನ ಅಂತಿಮವಾಗಿಲ್ಲ. ಇದರ ನಡುವೆಯೇ, ರಾಜ್ಯಪಾಲರು ಮಂಗಳವಾರ (ಮಾರ್ಚ್ 15)ದಿಂದ ವಿಧಾನಸಭೆ ಅಧಿವೇಶನ ಕರೆಯುವ ಸಂಬಂಧ ಆದೇಶ ಹೊರಡಿಸಿದ್ದಾರೆ. ಅಂದು ಹಿರಿಯ ಶಾಸಕ ಗಣೇಶ್ ಗಾಂವ್ಕರ್ ಅವರು ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಮಣಿಪುರದಲ್ಲಿ ಸಹ ನೂತನ ಮುಖ್ಯಮಂತ್ರಿ ಆಯ್ಕೆ ಕುರಿತು ಪಕ್ಷ ಯಾವುದೇ ಹೇಳಿಕೆ ನೀಡಿಲ್ಲ. ''ಪಕ್ಷವು ವೀಕ್ಷಕರನ್ನು ರವಾನಿಸಿ, ಶಾಸಕರ ಅಭಿಪ್ರಾಯ ಪಡೆದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿದೆ,'' ಎಂದು ಸಿಎಂ ಎನ್ ಬಿರೇನ್ ಸಿಂಗ್ ತಿಳಿಸಿದ್ದಾರೆ. ಪ್ರಧಾನಿಯನ್ನು ಭೇಟಿ ಮಾಡಿದ ಯೋಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೊಸದಿಲ್ಲಿಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿದರು. ಸಂಪುಟದ ಸ್ವರೂಪ, ಸಂಪುಟಕ್ಕೆ ಆಯ್ಕೆಯ ಮಾನದಂಡಗಳ ಕುರಿತು ಅವರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
from India & World News in Kannada | VK Polls https://ift.tt/6LQVuAl
ನಡುರಸ್ತೆಯಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ 8 ಮಂದಿಯನ್ನು ಬಂಧಿಸಿದ ಮಂಗಳೂರು ಪೊಲೀಸರು
ಮಂಗಳೂರು: ಯೌವನದಲ್ಲಿ ಹುಚ್ಚು ಮನಸ್ಸು ಏನೇನೋ ಸಾಹಸಕ್ಕೆ ಪ್ರೇರಣೆ ನೀಡುತ್ತಿದೆ. ಆದರೆ ಸ್ವಲ್ಪ ಎಡವಿದರೂ ಜೀವಕ್ಕೆ ಆಪತ್ತು ನಿಶ್ಚಿತ. ಇಂತಹುದೇ ಅತಿರೇಕದ ಸಾಹಸಕ್ಕೆ ಮುಂದಾಗಿ ಬೈಕ್ ಸ್ಟಂಟ್ ಮಾಡಿದ 8 ಮಂದಿ ಯುವಕರನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ತೌಸಿಫ್ ಮಹಮ್ಮದ್, ಮಹಮ್ಮದ್ ಸಫ್ವಾನ್, ಮಹಮ್ಮದ್ ಅನೀಸ್, ಮಹಮ್ಮದ್ ಸೊಹಾಲಿ, ಅಬೂಬಕ್ಕರ್ ಸಿದ್ಧಿಕ್, ಕಿಶನ್ ಕುಮಾರ್, ಇಲಿಯಾಸ್ ಎಂಬ ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಐದು ಬೈಕ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ನಗರದ ತೊಕ್ಕೊಟ್ಟು-ಉಳ್ಳಾಲ, ಅಡ್ಯಾರ್ ಸೇರಿದಂತೆ ನಾನಾ ಕಡೆ ಬೈಕ್ ಸ್ಟಂಟ್ ಮಾಡಿದ 8 ಆರೋಪಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ, ಟೀಕೆ ವ್ಯಕ್ತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೈಕ್ ಸ್ಟಂಟ್‌ಗೆ ಸಂಬಂಧಿಸಿ ನಾಲ್ಕು ಪ್ರಕರಣ ದಾಖಲಾಗಿದೆ. ಬೈಕ್ ಸ್ಟಂಟ್‌ಗೆ ವಾಟ್ಸ್ಯಾಪ್ ಗ್ರೂಪ್: ಅಪಾಯಕಾರಿ ಬೈಕ್ ಸ್ಟಂಟ್‌ಗೆ ಸಂಬಂಧಿಸಿ ನಾಲ್ಕು ಪ್ರಕರಣ ದಾಖಲಾಗಿದ್ದು, ಬೈಕ್ ಸ್ಟಂಟ್‌ಗಾಗಿಯೇ ಈ ಯುವಕರು ವಾಟ್ಸ್ಯಾಪ್ ಗ್ರೂಪ್ ಕೂಡ ರಚಿಸಿದ್ದು, ಆ ಗ್ರೂಪ್‌ನಲ್ಲಿ ಮತ್ತಷ್ಟು ಅಪಾಯಕಾರಿ ಬೈಕ್ ಸ್ಟಂಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ಸ್ಟಂಟ್ ಮಾಡಿದರೆ ಜೋಕೆ: ನಗರದಲ್ಲಿ ವೀಕೆಂಡ್ ಸೇರಿದಂತೆ ಇತರ ದಿನಗಳಲ್ಲಿ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ರೇಸಿಂಗ್, ಸ್ಟಂಟ್ ಮಾಡಿರುವುದು ಕಂಡು ಬರುತ್ತಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಬೈಕ್ ಸ್ಟಂಟ್ ಬಗ್ಗೆ ದೂರು ನೀಡಿದವರಲ್ಲಿಯೂ ಮಾಹಿತಿ ಕಲೆ ಹಾಕಲಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ನಿಗಾ ವಹಿಸುವ ಘಟಕಕ್ಕೂ ಕೆಲವೊಂದು ಕೀವರ್ಡ್‌ಗಳ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಇಂತಹ ಸ್ಟಂಟ್‌ಗಳನ್ನು ಅಪ್ಲೋಡ್ ಮಾಡಿರುವುದು ಕಂಡುಬಂದಿದೆ. ಮಂಗಳೂರು ಕೇಂದ್ರಿತ ಜಾಗ, ರಿಜಿಸ್ಪ್ರೇಶನ್ ನಂಬರ್, ರಸ್ತೆಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಅಪಾಯಕಾರಿ ವಾಹನ ಚಾಲನೆ, ಸಾರ್ವಜನಿಕ ರಸ್ತೆಗಳಲ್ಲಿ ಸರಕಾರದ ಅನುಮತಿ ಇಲ್ಲದೆ ರೇಸ್ ರೀತಿಯಲ್ಲಿ ಓಡಿಸುವಂತಿಲ್ಲ. ಆ ನಿಟ್ಟಿನಲ್ಲಿ ಈ ಪ್ರಕರಣ ದಾಖಲಾಗಿದೆ. ಇನ್ನಷ್ಟು ವಿಡಿಯೊಗಳನ್ನು ಸಾಮಾಜಿಕ ಜಾಲತಾಣ ಘಟಕ ನಿಗಾ ವಹಿಸುತ್ತಿದೆ. ಈಗಾಗಲೇ ಸುಮಾರು 30ಕ್ಕೂ ಅಧಿಕ ವಿಡಿಯೊಗಳು ದೊರಕಿದ್ದು, ಸ್ಟಂಟ್ ರೇಸ್ ಮಾಡುವ ವಾಹನಗಳನ್ನು ಗುರುತಿಸಲಾಗಿದೆ ಎಂದರು. ವಿಡಿಯೊ ಮಾಡಿದವರ ವಿರುದ್ಧವೂ ಕೇಸು: ಸ್ಟಂಟ್ ಮಾಡುವವರ ಜತೆ ಅದನ್ನು ಫಾಲೋ ಮಾಡಿಕೊಂಡು ವಿಡಿಯೊ ಮಾಡುವುದು ಕೂಡ ಅಪಾಯಕಾರಿ ಹಾಗೂ ತಪ್ಪು. ಈ ಬಗ್ಗೆ ಸಾರ್ವಜನಿಕರು ದೂರು ನೀಡುವ ಜತೆಗೆ ಪೋಷಕರೂ ತಮ್ಮ ಮಕ್ಕಳು ವಾಹನವನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಾರೆ ಎಂಬ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ. ವೀಕೆಂಡ್‌ಗಳಲ್ಲಿ ಪಾರ್ಟಿ ಮಾಡಿಕೊಂಡು, ಮದ್ಯ, ಡ್ರಗ್ಸ್ ನಶೆ ಮಾಡಿಕೊಂಡು ಇಂತಹ ಸ್ಟಂಟ್ ಮಾಡುವ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಾಹನ ತಪಾಸಣೆ ಸಂದರ್ಭ ವಶಕ್ಕೆ ಪಡೆದಾಗ ವಾದ ಮಾಡುವುದು ಅಥವಾ ಪೊಲೀಸರ ಜತೆ ವಿನಾಕಾರಣ ವಾಗ್ವಾದ ಮಾಡಿದರೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಕರಣವೂ ದಾಖಲು ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/VkgQw34
ಬಿಬಿಎಂಪಿ ಚುನಾವಣೆಗೆ ಶಾಸಕರುಗಳೇ ಅಡ್ಡಗಾಲು! ಕುಂಟುತ್ತಾ ಸಾಗಿದೆ ವಾರ್ಡ್‌ಗಳ ಮರುವಿಂಗಡಣೆ
ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು: ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಸದಸ್ಯರ ಅವಧಿ ಅಂತ್ಯಗೊಂಡು ಒಂದೂವರೆ ವರ್ಷ ಕಳೆದಿದ್ದು, ಚುನಾವಣೆ ನಡೆಯುವುದು ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ರಾಜಧಾನಿಯನ್ನು ಪ್ರತಿನಿಧಿಸುತ್ತಿರುವ ಶಾಸಕರುಗಳೇ ಚುನಾವಣೆಗೆ ಅಡ್ಡಗಾಲು ಹಾಕುತ್ತಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಇಂಬು ನೀಡುವಂತೆ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಕೂಡ ಕುಂಟುತ್ತಾ ಸಾಗಿದೆ. ಚುನಾವಣೆ ವ್ಯಾಜ್ಯವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದು, ತೀರ್ಪು ಹೊರಬೀಳುವವರೆಗೆ ಚುನಾವಣಾ ಕನವರಿಕೆ ಮುಂದುವರಿಯಲಿದೆ. ಚುನಾವಣೆ ಕುರಿತ ರಿಟ್ ಅರ್ಜಿ ಸಂಬಂಧ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸರಕಾರ ಸಲ್ಲಿಸಿರುವ ಮೇಲ್ಮನವಿಯು ಸುಪ್ರೀಂಕೋರ್ಟ್‌ನಲ್ಲಿ ಇದೇ 25ರಂದು ವಿಚಾರಣೆಗೆ ಬರುವ ಸಾಧ್ಯತೆಗಳಿವೆ. ಪಾಲಿಕೆಗೆ ಚುನಾವಣೆ ನಡೆಸುವುದು ಪಕ್ಷಾತೀತವಾಗಿ ಯಾವುದೇ ಶಾಸಕರಿಗೂ ಇಷ್ಟವಿಲ್ಲ. ಶಾಸಕರು ಮತ್ತು ಜನರ ಮಧ್ಯೆ ಕಾರ್ಪೊರೇಟರ್‌ಗಳು ಕೊಂಡಿಯಾಗಿರುವುದು ಬೇಕಿಲ್ಲ. 2023ರ ವಿಧಾನಸಭೆ ಚುನಾವಣೆ ಬಳಿಕವೇ ಪಾಲಿಕೆಗೆ ಚುನಾವಣೆ ನಡೆಸುವುದು ಒಳಿತು ಎಂಬುದು ಹಲವು ಶಾಸಕರ ಒಮ್ಮತದ ಅಭಿಪ್ರಾಯವಾಗಿದೆ. ಹಾಗಾಗಿಯೇ, ರಾಜ್ಯ ಸರಕಾರವು ಇನ್ನಿಲ್ಲದ ನೆಪ ಹೇಳಿಕೊಂಡು ಚುನಾವಣೆಯನ್ನು ಮುಂದೂಡುತ್ತಲೇ ಇದೆ. ಚುನಾವಣೆಗೆ ಶಾಸಕರೇ ಅಡ್ಡಗಾಲು:ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿರುವ ಹಲವು ಆಕಾಂಕ್ಷಿಗಳು ಟಿಕೆಟ್‌ಗಾಗಿ ತಮ್ಮ ಶಾಸಕರುಗಳ ಬೆನ್ನು ಬಿದ್ದಿದ್ದಾರೆ. ಪ್ರತಿಯೊಂದು ವಾರ್ಡ್‌ನಲ್ಲೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಇದು ಶಾಸಕರಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಬ್ಬರಿಗೆ ಟಿಕೆಟ್ ಕೊಡಿಸಿದರೆ, ಉಳಿದವರು ತಿರುಗಿ ಬೀಳುವುದರಿಂದ ವಿಧಾನಸಭಾ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ, ಬಹುತೇಕ ಶಾಸಕರುಗಳು ವಿಧಾನಸಭಾ ಚುನಾವಣೆ ನಂತರವೇ ಪಾಲಿಕೆಗೆ ಚುನಾವಣೆ ನಡೆಸಲು ಒಲವು ತೋರುತ್ತಿದ್ದಾರೆ. ‘ಪಾಲಿಕೆಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ, ಆಕಾಂಕ್ಷಿಗಳಿಗೆ ವಿಧಾನಸಭಾ ಚುನಾವಣೆಯ ಖರ್ಚು-ವೆಚ್ಚವನ್ನು ವಹಿಸಲು ಕೆಲ ಶಾಸಕರು ಉದ್ದೇಶಿಸಿದ್ದಾರೆ. ವಿಧಾನಸಭೆಗೆ ಮೊದಲೇ ಪಾಲಿಕೆಗೆ ಚುನಾವಣೆ ನಡೆದರೆ, ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಜತೆಗೆ ಸರಕಾರ ಮತ್ತು ಪಾಲಿಕೆಯಿಂದ ಬಿಡುಗಡೆಯಾಗುವ ಅನುದಾನದ ಪಾಲು ಹಂಚುವುದು ತಪ್ಪುತ್ತದೆ. ಈ ಎಲ್ಲ ಕಾರಣಗಳಿಂದಾಗಿಯೇ ಶಾಸಕರು ಪಾಲಿಕೆಗೆ ಚುನಾವಣೆ ನಡೆಸಲು ಬಿಡುತ್ತಿಲ್ಲ’ ಎಂದು ಬಿಬಿಎಂಪಿ ಮಾಜಿ ಸದಸ್ಯರೊಬ್ಬರು ತಿಳಿಸಿದರು. ನಗರದ ಮೇಲೆ ತಮ್ಮ ನಿಯಂತ್ರಣವೇ ಇರಬೇಕೆಂಬ ಉದ್ದೇಶವೂ ಚುನಾವಣಾ ವಿಳಂಬದ ಹಿಂದಿದೆ. ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಇಚ್ಛೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ. ಅಧಿಕಾರಿಗಳ ಮೂಲಕವೇ ನಗರದ ಆಡಳಿತ ನಡೆಸಬೇಕೆಂಬ ಸರಕಾರದ ತಂತ್ರಗಾರಿಕೆ ಇದರ ಹಿಂದೆ ಅಡಗಿದೆ. ಪಾಲಿಕೆಯ ಟಿಕೆಟ್ ಆಕಾಂಕ್ಷಿಗಳು ಮತದಾರರು ಕೈಬಿಟ್ಟು ಹೋಗದಂತೆ ಕಾಪಿಟ್ಟುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಹಣದ ಹೊಳೆ ಹರಿಸುತ್ತಿದ್ದು, ಇದರಿಂದ ಹೈರಾಣಾಗಿ ಹೋಗಿದ್ದಾರೆ. ಕುಂಟುತ್ತಿರುವ ವಾರ್ಡ್ ಮರುವಿಂಗಡಣೆ: ಪಾಲಿಕೆ ಗಡಿಯಿಂದಾಚೆಗೆ ಒಂದು ಕಿ.ಮೀ ಸುತ್ತಳತೆಯಲ್ಲಿರುವ ಪ್ರದೇಶಗಳನ್ನೂ ಸೇರಿಸಿಕೊಂಡು ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಹೆಚ್ಚಿಸಲು ರಾಜ್ಯ ಸರಕಾರ ಮುಂದಾಗಿತ್ತು. ಬಳಿಕ ಈ ಪ್ರಸ್ತಾವ ಕೈಬಿಟ್ಟು 198 ವಾರ್ಡ್‌ಗಳ ಪ್ರದೇಶಗಳಲ್ಲೇ 243 ವಾರ್ಡ್‌ಗಳನ್ನು ಸೃಷ್ಟಿಸುವ ತೀರ್ಮಾನ ಕೈಗೊಳ್ಳಲಾಗಿದೆ. ವಾರ್ಡ್‌ಗಳ ಮರುವಿಂಗಡಣೆಗೆ ಪಾಲಿಕೆಯ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ಸಮಿತಿಯು ಒಂದು ವರ್ಷ ಕಾಲಾವಕಾಶ ನೀಡಿದರೂ ವರದಿ ಸಲ್ಲಿಸಿಲ್ಲ. 2021ರ ಜ. 11ರಿಂದ ಬಿಬಿಎಂಪಿ ಕಾಯಿದೆ ಜಾರಿಗೆ ಬಂದಿತು. ಇದರಂತೆ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸಲಾಯಿತು. ವಾರ್ಡ್‌ಗಳ ಪುನರ್‌ವಿಂಗಡಣೆಗೆ 6 ತಿಂಗಳ ಅವಧಿಗೆ ಸೀಮಿತವಾಗಿ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ 2021ರ ಜ. 29ರಂದು ಸಮಿತಿ ರಚಿಸಲಾಯಿತು. ಕೋವಿಡ್ ಕಾರಣವೊಡ್ಡಿ ಮತ್ತೆ ಸಮಿತಿ ಅವಧಿಯನ್ನು 2021ರ ಜು. 28ರಿಂದ ಜಾರಿಗೆ ಬರುವಂತೆ 6 ತಿಂಗಳಿಗೆ ವಿಸ್ತರಿಸಲಾಯಿತು. ಈ ಅವಧಿಯು ಜನವರಿಗೆ ಮುಗಿದಿದ್ದು, ಇದುವರೆಗೆ ವಾರ್ಡ್‌ಗಳ ಮರುವಿಂಗಡಣೆ ಆಗಿಲ್ಲ. ಈ ಮಧ್ಯೆ ಸಮಿತಿಯ ಅವಧಿಯನ್ನು ಇನ್ನೂ ಎರಡು ತಿಂಗಳು ಕಾಲ ಸರಕಾರ ವಿಸ್ತರಿಸಿದೆ. ರಾಜ್ಯ ಸರಕಾರಕ್ಕೆ ಚುನಾವಣೆ ಮಾಡುವ ಮನಸ್ಸಿದ್ದರೆ, 243 ವಾರ್ಡ್‌ಗಳನ್ನು ರಚಿಸಿ ಅಗತ್ಯ ತಯಾರಿ ಮಾಡಿಕೊಳ್ಳಬೇಕಿತ್ತು. 243 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಸಿದ್ಧವಿರುವುದಾಗಿ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲು ಅವಕಾಶವಿದೆ. ಆದರೆ, ಸರಕಾರಕ್ಕೆ ಚುನಾವಣೆ ನಡೆಸಲು ಆಸಕ್ತಿ ಇಲ್ಲ. ಹೀಗಾಗಿಯೇ, ಸುಪ್ರೀಂಕೋರ್ಟ್‌ನ ತೀರ್ಪಿನ ನೆಪ ಮತ್ತು ವಾರ್ಡ್‌ಗಳ ಮರುವಿಂಗಡಣೆಯ ವಿಳಂಬವನ್ನು ಮುಂದಿಟ್ಟುಕೊಂಡು ಕಾಲ ದೂಡುತ್ತಿದೆ. 2020ರ ಸೆ.10ರಂದು ಪಾಲಿಕೆಯಲ್ಲಿ ಚುನಾಯಿತ ಸದಸ್ಯರ ಅವಧಿ ಅಂತ್ಯಗೊಂಡಿದೆ. ಹಳೆಯ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕೋ ಅಥವಾ 2020ರ ಕಾಯಿದೆಯಂತೆ 243 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕೋ ಎಂಬ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಈ ವ್ಯಾಜ್ಯದ ವಿಚಾರಣೆ ಮುಕ್ತಾಯಗೊಂಡು ತೀರ್ಪು ಹೊರಬಿದ್ದರೂ, ಪಾಲಿಕೆಯ ಚುನಾವಣಾ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಲು ಸಾಧ್ಯವಾಗದ ಸ್ಥಿತಿ ಇದೆ. ಸಿಲಿಕಾನ್ ಸಿಟಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕುತಂತ್ರದಿಂದ ಬಿಜೆಪಿ ಸರಕಾರವು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗುವಂತೆ ವಾರ್ಡ್‌ಗಳ ಮರುವಿಂಗಡಣೆ ಮಾಡುತ್ತಿದೆ. ಕಾಂಗ್ರೆಸ್ ಪ್ರಾಬಲ್ಯವಿರುವ ಪ್ರದೇಶಗಳನ್ನು ಬೇರೆ ವಾರ್ಡ್‌ಗಳಲ್ಲಿ ವಿಲೀನಗೊಳಿಸಲಾಗುತ್ತಿದೆ ಎಂಬುದು ಕಾಂಗ್ರೆಸ್ ಮುಖಂಡರ ಆರೋಪ.
from India & World News in Kannada | VK Polls https://ift.tt/ICFluMW
ನನಗೆ ಮತ್ತು ಮಗನಿಗೆ ಟಿಕೆಟ್ ನೀಡೋದು ಕನ್ಫರ್ಮ್ ಆದ ಬಳಿಕವಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆ; ಜಿಟಿ ದೇವೇಗೌಡ
ಮೈಸೂರು: ಮೊದಲು ತಮ್ಮ ಪುತ್ರ ಜಿ.ಡಿ ಹರೀಶ್ ಗೌಡರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತಾರೆ ಎನ್ನುವುದು ಖಚಿತವಾದ ನಂತರವಷ್ಟೇ ತಾವು ಕಾಂಗ್ರೆಸ್ ಸೇರುವ ವಿಚಾರದ ಮಾತುಕತೆ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಿಂದ ತಮ್ಮ ಮಗ ಜಿ.ಡಿ ಹರೀಶ್ ಗೌಡರಿಗೆ ಹಾಗೂ ನನಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದೇನೆ. ಮೊದಲು ಹರೀಶ್ ಗೌಡರ ವಿಷಯ ತೀರ್ಮಾನವಾಗಬೇಕು. ಅವರಿಗೆ ಮೂರು ಕ್ಷೇತ್ರಗಳ ಪೈಕಿ ಯಾವುದಾದರೊಂದು ಕ್ಷೇತ್ರದಲ್ಲಿ ಟಿಕೆಟ್ ಕೇಳಿದ್ದೇನೆ. ಮೊದಲ ಆದ್ಯತೆ ಹುಣಸೂರು ಕ್ಷೇತ್ರ. ಎರಡನೇ ಆದ್ಯತೆ ಕೆ.ಆರ್ ನಗರ. ಮೂರನೇ ಆದ್ಯತೆ ಮೈಸೂರಿನ ಚಾಮರಾಜ ಕ್ಷೇತ್ರ. ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡುವುದಾಗಿ ಭರವಸೆ ದೊರೆಯಬೇಕು. ಬಳಿಕ ಕಾಂಗ್ರೆಸ್ ಸೇರುವ ಕುರಿತು ಮಾತುಕತೆ ನಡೆಸುತ್ತೇನೆ. ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ’ ಎಂದು ಜಿ.ಟಿ ದೇವೇಗೌಡರು ಹೇಳಿದರು. ‘ಬಿಜೆಪಿ ಮುಖಂಡರು ಕೂಡ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ತಮಗೆ ಹಾಗೂ ಪುತ್ರ ಹರೀಶ್ ಗೌಡರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆರು ತಿಂಗಳ ನಂತರ ಯಾವ ಪಕ್ಷಕ್ಕೆ ಸೇರಬೇಕು ಎನ್ನುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಚಾಮುಂಡೇಶ್ವರಿ ದೇವಿ ಯಾವ ರೀತಿ ಅನುಗ್ರಹಿಸುತ್ತಾಳೆಯೋ ಅದೇ ರೀತಿ ನಾನು ನಡೆದುಕೊಳ್ಳುತ್ತೇನೆ. ಎಲ್ಲಾ ನಿರ್ಧಾರವನ್ನೂ ದೇವಿಗೆ ಬಿಟ್ಟಿದ್ದೇನೆ’ ಎಂದರು. ‘ಜೆಡಿಎಸ್ ನಾಯಕರು ಇಲ್ಲಿಯವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಕ್ಕೆ ಕರೆಯುತ್ತಿಲ್ಲ. ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ನಂತರ ನನ್ನ ಸಂಪರ್ಕದಲ್ಲಿ ಇಲ್ಲ’ ಎಂದು ಹೇಳಿದರು.
from India & World News in Kannada | VK Polls https://ift.tt/R307D9Z
ಉಕ್ರೇನ್‌ನಿಂದ ಬಂದವನು ನನ್ನ ಪುತ್ರನಲ್ಲ, ಮೋದಿಯವರ ಮಗ: ತಂದೆಯ ಭಾವುಕ ಮಾತು
ಹೊಸದಿಲ್ಲಿ: ಸಮರ ಪೀಡಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವ ಕಾರ್ಯ ಪೂರ್ಣಗೊಂಡಿದ್ದು, ಸಂತ್ರಸ್ತ ಕುಟುಂಬಗಳು ಶನಿವಾರ ಭಾವುಕ ಕ್ಷಣಗಳಿಗೆ ಸಾಕ್ಷಿಯಾದವು. ಹಲವು ದಿನಗಳ ತಳಮಳದ ಬಳಿಕ ಮನೆ ಸೇರಿದ ಮಗನನ್ನು ಕಂಡು ಶ್ರೀನಗರದ ಸಂಜಯ್ ಪಂಡಿತ್ ಸಂತೋಷದಿಂದ ಕಣ್ಣೀರು ಹಾಕಿದರು. ಉಕ್ರೇನ್‌ನ ಸುಮಿ ನಗರದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಸಂಜಯ್ ಪಂಡಿತ್ ಅವರ ಪುತ್ರ, ಯುದ್ಧ ಶುರುವಾದ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಕೀವ್, ಕಾರ್ಕಿವ್ ನಗರಗಳಿಂದ ಭಾರತೀಯರನ್ನು ಕರೆ ತರುವ ಕಾರ್ಯ ಮುಗಿದರೂ ಸಂಪರ್ಕ ಕಡಿದುಕೊಂಡಿದ್ದ ಸುಮಿ ನಗರದ ವಿದ್ಯಾರ್ಥಿಗಳು ಮಾತ್ರ ಅಲ್ಲಿಯೇ ಸಿಲುಕಿದ್ದರು. ರಷ್ಯಾ ನಿಯಂತ್ರಿತ ಸುಮಿಯಲ್ಲಿ ವಿದೇಶಿಯರಿಗೆ ತೀವ್ರ ಜೀವ ಭೀತಿ ಎದುರಾಗಿತ್ತು. ಪ್ರಧಾನಿ ಅವರು ವಿಶೇಷ ಮುತುವರ್ಜಿ ವಹಿಸಿ ನಡೆಸಿದ ಪ್ರಯತ್ನದ ಫಲವಾಗಿ ಈ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪಾರಾಗಿದ್ದರು. ಸುಮಿಯಿಂದ ಬಂದ ಭಾರತೀಯ ವಿದ್ಯಾರ್ಥಿಗಳ ಕೊನೆ ತಂಡದಲ್ಲಿ ಸಂಜಯ್ ಪಂಡಿತ್ ಅವರ ಪುತ್ರ ಕೂಡ ಇದ್ದರು. ಮಗ ಮನೆಗೆ ಬರುತ್ತಿದ್ದಂತೆ ಅತೀವ ಖುಷಿಗೊಂಡ ಪಂಡಿತ್, ಗಳಗಳನೆ ಕಣ್ಣೀರು ಹಾಕಿ ಕುಸಿದು ಕುಳಿತರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ''ನನ್ನ ಮಗ ಜೀವಂತ ವಾಪಸ್ ಬರುತ್ತಾನೆ ಎನ್ನುವ ಆಸೆಯೇ ಇರಲಿಲ್ಲ. ಭಾರತ ಸರಕಾರ, ಅದರಲ್ಲೂ ಪ್ರಧಾನಿ ಮೋದಿ ಅವರು ನಡೆಸಿದ ಪ್ರಯತ್ನದ ಫಲವಾಗಿ ಮಗ ವಾಪಸಾಗಿದ್ದಾನೆ. ಮರು ಹುಟ್ಟುಪಡೆದ ಇವನು ನನ್ನ ಮಗ ಅಲ್ಲ, ಮೋದಿ ಅವರ ಮಗ. ಇವನನ್ನು ಕರೆ ತಂದದ್ದು ಅವರೇ,'' ಎಂದು ಮಗನನ್ನು ತಬ್ಬಿಕೊಂಡು ಪಂಡಿತ್ ಭಾವುಕ ನುಡಿಗಳನ್ನಾಡಿದರು. 'ಆಪರೇಷನ್ ಗಂಗಾ' ಕಾರ್ಯಾಚರಣೆ ನಡೆಸಿದ ಭಾರತ ಸರಕಾರ, ಉಕ್ರೇನಿನಲ್ಲಿ ಸಿಲುಕಿದ್ದ 18000 ದೇಶವಾಸಿಗರನ್ನು ವಾಪಸ್ ಕರೆತಂದಿದೆ. ಏನೂ ಮಾಡದೆ ಇದ್ದಿದ್ದರೆ ಯಾರೂ ಬರುತ್ತಿರಲಿಲ್ಲ! ಉಕ್ರೇನ್ ಇಲ್ಲಿಂದ ಶ್ರೀನಿವಾಸ ಪುರನೋ, ಬಸವನ ಗುಡಿಯೋ ಅಷ್ಟು ಹತ್ರ ಇಲ್ಲ. ಮೋದಿ ಸರಕಾರ ಏನೂ ಮಾಡಿಲ್ಲ ಅಂತಿರುವವರ ಹಿಂದೆ ರಾಜಕೀಯದ ಶಂಕೆ ಇದೆ. ಈ ಬಗ್ಗೆ ಮಾತನಾಡೋದಿಲ್ಲ ಎಂದು ಸಂಸದ ತೇಜಸ್ವಿಸೂರ್ಯ ಗುಡುಗಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘‘ಅಲ್ಲಿಂದ ಬಂದ ಕೆಲವು ವಿದ್ಯಾರ್ಥಿಗಳು ಸರಕಾರ ಏನು ಮಾಡಿಲ್ಲ ಎಂದು ಹೇಳುತ್ತಾರೆ. ಉಕ್ರೇನ್‌ನಿಂದ ಬಂದವರು ಅವರೇ ಸ್ವಂತ ಮೊಬೈಲ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದ್ರಾ? ನಮ್ಮ ದೇಶ ಕಳಿಸಿದ ವಿಮಾನದಲ್ಲಿ ಬಂದ್ರಾ? ಏನು ಕೆಲಸ ಮಾಡದೆ ಇದ್ದಿದ್ರೆ ವಿದ್ಯಾರ್ಥಿಗಳು ಬರುತ್ತಿರಲಿಲ್ಲ,’’ಎಂದರು. ‘‘ಉಕ್ರೇನ್, ರಷ್ಯಾ ಅಧ್ಯಕ್ಷರ ಜತೆ ಮೋದಿ ನಿರಂತರ ಸಂಪರ್ಕದಿಂದ ಆಪರೇಷನ್ ಗಂಗಾ ಹೆಸರಿನಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ 19,448 ಭಾರತೀಯರನ್ನು ಏರ್‌ಲಿಫ್ಟ್ ಮಾಡಲಾಗಿದೆ. ಇದರಲ್ಲಿ633 ಕನ್ನಡಿಗರು ಸಹಿತ 16 ಸಾವಿರ ಜನ ವಿದ್ಯಾರ್ಥಿಗಳಿದ್ದಾರೆ. 3 ವಾರಗಳಿಂದ ಆಪರೇಶನ್ ಗಂಗಾ ಯೋಜನೆಗೆ ನನ್ನ ಕಚೇರಿ ಯಿಂದಲೂ ಸಾಕಷ್ಟು ಕೆಲಸವನ್ನು ಮಾಡಲಾಗಿದೆ,’’’’ ಎಂದರು. ‘‘ಉಕ್ರೇನ್ ಭಾರತೀಯ ರಾಯಭಾರ ಕಚೇರಿ ಮೃತ ದೇಹ ಪತ್ತೆ ಮಾಡಿದೆ. ಇಲ್ಲಿಗೆ ತರುವ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಉಕ್ರೇನ್ ಯುದ್ಧ ನಡೆಯುತ್ತಿರುವುದರಿಂದ ದೇಹದ ಸ್ಥಿತಿ ಹೇಗಿರುತ್ತೆ ಅನ್ನೋದು ಹೇಳುವುದು ಕಷ್ಟ. ಡಿಎನ್‌ಎ ಪರೀಕ್ಷೆ ಎಲ್ಲವನ್ನು ಕೂಡಾ ಮಾಡಲಾಗುತ್ತಿದೆ,’’ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/1zyv7gI
Subscribe to:
Posts (Atom)
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಬಾರಿಗೆ ಗೋಲ್ಡನ್ ಡಕ್ಗೆ ಬಲಿಯಾಗಿದ್ದಾರೆ. ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ...
-
ಬೆಂಗಳೂರು: ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ನಗರದ ಸಾಧಿಕ್ ಪಾಳ್ಯದಲ್ಲಿ ಹಲ್ಲೆಗೆ ಯತ್ನಿಸಿರುವ ಘಟನೆಗೆ ಆರೋಗ್ಯ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದು, ಹಲ್ಲೆಗೆ ಯತ್ನ...
-
ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 1 ಲಕ್ಷದ 84 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಭಾರತದಲ್ಲಿ 21,000ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರು...
-
ಕನ್ನಡದ ಶ್ರೇಷ್ಟ ಸಂಗೀತ ನಿರ್ದೇಶಕ ಜೋಡಿ ರಾಜನ್-ನಾಗೇಂದ್ರ ಅವರಿಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದಕ್ಕೆ ಸ್ಯಾಂಡಲ್ವುಡ್ ದಿಗ್ಭ್ರಮೆ ವ್ಯಕ್ತಪಡಿಸಿದೆ...
-
ಬೆಂಗಳೂರು: ಇಡೀ ಜಗತ್ತಿಗೆ ಮಾರಕವಾಗಿದ್ದ ಕೊರೊನಾ ಎಂಬ ವೈರಸ್‌ನ ಅಂತ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಕೊರೊನಾ ಸಂಹರಿಸಲು ಕೊರೊನಾ ಲಸಿಕೆಗಳು ಈಗಾಗಲೇ ಲಗ್ಗೆ ಇಟ್ಟ...