
ಬೆಂಗಳೂರು: ಹದಿನೈದನೇ ಆವೃತ್ತಿಯ ಟೂರ್ನಿ ಆರಂಭಕ್ಕೆ ಇನ್ನು ಎರಡು ವಾರಗಳ ಸಮಯ ಬಾಕಿಯಿದ್ದು, ಈ ಸಂದರ್ಭದಲ್ಲಿ ಭಾರತ ತಂಡದ ಯುವ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಪ್ರೇಯಸಿ ಅವರನ್ನು ಗೋವಾದ ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಅಂದಹಾಗೆ 2019ರಲ್ಲೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮುಂದಿನ ಶನಿವಾರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ವರದಿಗಳು ಹೇಳಿವೆ. "ನಮ್ಮ ಅತ್ಯಂತ ಸಂಭ್ರಮದ ಕ್ಷಣ," ಎಂದು ತಮ್ಮ ಸೋಷಿಯಲ್ ಮೀಡಿಯಾ ಗೋಡೆಯ ಮೇಲೆ ಬರೆದುಕೊಂಡಿರುವ ಚಹರ್, ಸಮಾರಂಭದ ಫೋಟೊ ಮತ್ತು ವಿಡಿಯೋಗಳನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಿರುವ ಯುವ ಕ್ರಿಕೆಟಿಗನಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಶುಭ ಹಾರೈಸಿವೆ. ಕಳೆದ ಬಾರಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಯುವ ಲೆಗ್ ಸ್ಪಿನ್ನರ್‌ನ ಈ ಬಾರಿ ಪಂಜಾಬ್ ಕಿಂಗ್ಸ್ ತಂಡ ಖರೀದಿ ಮಾಡಿದೆ. ಮೆಗಾ ಆಕ್ಷನ್‌ನಲ್ಲಿ ಪಂಜಾಬ್ ತಂಡ 5.25 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಯುವ ಲೆಗ್ ಸ್ಪಿನ್ನರ್ ಸೇವೆಯನ್ನು ತನ್ನದಾಗಿಸಿಕೊಂಡಿತ್ತು. 2021ರ ಜುಲೈ ಬಳಿಕ ಚಹರ್ ಪರ ಆಡಿಲ್ಲ. ರಾಹುಲ್ ಚಹರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ದೀಪಕ್ ಚಹರ್ ಅವರ ಸಹೋದರ ಕೂಡ ಆಗಿದ್ದಾರೆ. ರಾಹುಲ್ ಭಾರತ ತಂಡದ ಪರ 7 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೂರ್ನಿ ಮಾರ್ಚ್ 26ರಿಂದ ಮೇ 29ರವರೆಗೆ ನಡೆಯಲಿದೆ. ಲೀಗ್ ಹಂತದ ಎಲ್ಲಾ 70 ಪಂದ್ಯಗಳು ಮಹಾರಾಷ್ಟ್ರದ ನಾಲ್ಕು ಕ್ರೀಡಾಂಗಣಗಳಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದ್ದು, ಅಧಿಕೃತ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಐಪಿಎಲ್ 2022 ಟೂರ್ನಿಯಲ್ಲಿ ರಾಹುಲ್ ಚಹರ್ ಆಡಲಿರುವ ಪಂಜಾಬ್ ಕಿಂಗ್ಸ್ ತಂಡದ ವಿವರ ಹೀಗಿದೆಮಯಾಂಕ್ ಅಗರ್ವಾಲ್, ಅರ್ಷದೀಪ್ ಸಿಂಗ್, ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, , ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಪ್ರಭಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್ ಮಂಕಡ್, ವೈಭವ್ ಅರೋರಾ, ರಿತಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ತಾಯ್ದೆ, ಭಾನುಕಾ ರಾಜಪಕ್ಸ, ಬೆನ್ನಿ ಹೋವೆಲ್. ಟೂರ್ನಿಯಲ್ಲಿ ಪಂಜಾಬ್ ತಂಡ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/XQTyF6w