ಜಪಾನ್ ಓಪನ್: ಅಂತಿಮ ಎಂಟರ ಘಟ್ಟಕ್ಕೆ ಸಿಂಧೂ ನೆಗೆತ

ಟೊಕಿಯೊ: ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ನಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ದ್ವಿತೀಯ ಸುತ್ತಿನ ಸೆಣಸಾಟದಲ್ಲಿ ಜಪಾನ್‌ನ ಅಯಾ ಓಹೊರಿ ವಿರುದ್ಧ 11-21, 21-10, 21-13ರ ಕಠಿಣ ಅಂತರದ ಗೆಲುವು ದಾಖಲಿಸಿರುವ ಸಿಂಧೂ ಅಂತಿಮ ಎಂಟರ ಘಟ್ಟಕ್ಕೆ ಮುನ್ನಡೆದರು. ಬಿಡಬ್ಲ್ಯುಎಫ್‌ ವರ್ಲ್ಡ್‌ ಟೂರ್‌ ಸೂಪರ್‌ 750 ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಿಂಧೂಗೆ ಎದುರಾದ ಮೊದಲ ಪ್ರಯಾಸದ ಗೆಲುವು ಇದಾಗಿತ್ತು. ಮೊದಲ ಸೆಟ್ ಕಳೆದುಕೊಂಡ ಸಿಂಧೂ ಅಪಾಯಕ್ಕೆ ಧುಮುಕಿದ್ದರು. ಆದರೆ ಕೂಟದಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಸಿಂಧೂ, ವಿಚಲಿತರಾಗದೆ ಮತ್ತಷ್ಟು ಶಕ್ತಿಶಾಲಿಯಾಗಿ ತಿರುಗೇಟು ನೀಡುವ ಮೂಲಕ ಪಂದ್ಯ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸಿಂಧೂ ಹಾಗೂ ಓಹೊರಿ ನಡುವಣ ಹೋರಾಟವು ಒಂದು ತಾಸು ಒಂದು ನಿಮಿಷದ ವರೆಗೂ ಮುಂದುವರಿದಿತ್ತು. ಕೊನೆಗೂ ಸ್ಥಳೀಯ ಆಟಗಾರ್ತಿ ವಿರುದ್ಧ ಮೇಲುಗೈ ಪಡೆದರು. ಇನ್ನೊಂದೆಡೆ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಸಾಯಿ ಪ್ರಣೀತ್ ಹಾಗೂ ಪುರುಷ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪ್ರಣೋಯ್ ಔಟ್... ಏತನ್ಮಧ್ಯೆ ಪ್ರಥಮ ಸುತ್ತಿನಲ್ಲಿ ಕಿಡಂಬಿ ಶ್ರೀಕಾಂತ್‌ಗೆ ಸೋಲುಣಿಸಿದ್ದ ಭಾರತೀಯರೇ ಆದ ಎಚ್‌ಎಸ್ ಪ್ರಣೋಯ್ ದ್ವಿತೀಯ ಸುತ್ತಿನಲ್ಲಿ ಡೆನ್ಮಾರ್ಕ್‌ನ ರೆಸ್ಮಾಸ್ ಗೆಮ್ಕೆ ವಿರುದ್ಧ 9-21, 15-21ರ ಅಂತರದಲ್ಲಿ ಮಣಿದು ಕೂಟದಿಂದಲೇ ಹೊರನಡೆದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JQU0aQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...