ಮುಂಬಯಿ: ಮುಂದಿನ ಸೆಪ್ಟೆಂಬರ್ ತಿಂಗಳಿನಿಂದ ಜೆರ್ಸಿಯಲ್ಲಿ ಹೊಸ ಬ್ರ್ಯಾಂಡ್ ಕಾಣಿಸಿಕೊಳ್ಳಲಿದೆ. ಚೀನಾ ಮೂಲದ ಮೊಬೈಲ್ ತಯಾರಕ ಸಂಸ್ಥೆ ಬ್ರ್ಯಾಂಡ್ ಅನ್ನು ಕೇರಳ ಮೂಲದ ಬೈಜು ರವೀಂದ್ರನ್ ಒಡೆತನದ ಬದಲಾಯಿಸಲಿದೆ. 2017 ಮಾರ್ಚ್ ತಿಂಗಳಲ್ಲಿ ಐದು ವರ್ಷಗಳ ಅವಧಿಗಾಗಿ ಬರೋಬ್ಬರಿ 1079 ಕೋಟಿ ರೂಪಾಯಿಗಳಿಗೆ ಒಪ್ಪೋ ಬಿಡ್ ಗೆದ್ದಿತ್ತು. ಇದೀಗ ಅನೇಕ ಕಾರಣಗಳಿಂದಾಗಿ ಒಪ್ಪೋ ತನ್ನ ಬಿಡ್ ಹಕ್ಕನ್ನು ಬೆಂಗಳೂರು ತಳಹದಿಯ ಶೈಕ್ಷಣಿಕ ತಂತ್ರಜ್ಞಾನ ಒನ್ಲೈನ್ ಟೂರಿಂಗ್ ಸಂಸ್ಥೆಯಾದ ಬೈಜೂಸ್‌ಗೆ ಹಸ್ತಾಂತರಿಸಲು ನಿರ್ಧರಿಸಿದೆ. ಮುಂಬರುವ ವೆಸ್ಟ್‌ಇಂಡೀಸ್ ಸರಣಿ ವರೆಗೆ ಒಪ್ಪೋ ಬ್ರ್ಯಾಂಡ್ ಮುಂದುವರಿಯಲಿದೆ. ಅಲ್ಲಿಂದ ಬಳಿಕ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ವೇಳೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಬೈಜೂಸ್ ಲೊಗೊ ಕಂಡುಬರಲಿದೆ. 2022 ಮಾರ್ಚ್ 31ರ ವರೆಗೆ ಬೈಜೂಸ್‌ನಿಂದ ಸಮಾನ ಪಾವತಿಯನ್ನು ಬಿಸಿಸಿಐ ಪಡೆಯಲಿದೆ. ಹಾಗಾಗಿ ತಾಂತ್ರಿಕವಾಗಿ ಮಂಡಳಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಇನ್ನೊಂದೆಡೆ ತನ್ನ ನಷ್ಟವನ್ನು ಕಡಿತಗೊಳಿಸಲು ಮುಂದಾಗಿರುವ ಒಪ್ಪೋ ತನ್ನ ಹಕ್ಕನ್ನು ಬೈಜೂಸ್‌ಗೆ ಹಸ್ತಾಂತರಿಸಿದೆ. ಹಾಗೆಯೇ ಇದಕ್ಕಾಗಿ ಸಣ್ಣ ಪ್ರಮಾಣದ ಮೊತ್ತವನ್ನು ಬೈಜೂಸ್‌ಗೆ ಪಾವತಿಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JQTZ6M