ಹೊಸದಿಲ್ಲಿ: ರಾಷ್ಟ್ರದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರ ಸಿಕ್ಕಿದೆ. ಕೇಂದ್ರ ಸಚಿವ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019 ನ್ನು ಮೂರನೇ ಬಾರಿಗೆ ಲೋಕಸಭೆಯಲ್ಲ ಮಂಡಿಸಿದರು. ಈ ಹಿಂದೆ ಎರಡು ಬಾರಿಯೂ ವಿಧೇಯಕ ಅಂಗೀಕಾರಕ್ಕೆ ಬಹುಮತದ ಇಲ್ಲವಾಗಿದ್ದರಿಂದ ವಿಧೇಯಕ ಅಂಗೀಕಾರವಾಗಿರಲಿಲ್ಲ. ಈ ಬಾರಿಯೂ ಲೋಕಸಭೆಯಲ್ಲಿ ತಿದ್ದುಪಡಿ ವಿಧೇಯಕಕ್ಕೆ ಪ್ರಾದೇಶಿಕ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ರೆವೆಲ್ಯೂಷನರಿ ಸೋಷಲಿಸ್ಟಿಕ್ ಪಾರ್ಟಿಯ ಸಂಸದ ಎನ್‌ಕೆ ರಾಮಚಂದ್ರನ್, ವಿವಾಹ ವಿಚ್ಛೇದನ ಪಡೆದರೆ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಏಕೆ ಶಿಕ್ಷೆ. ವಿಚ್ಛೇದನ ಪಡೆದರೆ ಜೈಲು ಶಿಕ್ಷೆ ಎಂಬ ಕಾನೂನನ್ನು ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯ ಸೇರಿ ಎಲ್ಲ ವರ್ಗಕ್ಕೂ ಅನ್ವಯಿಸಬಹುದಲ್ಲವೇ ಎಂದು ಪ್ರತಿಪಾದಿದ್ದಾರೆ. ಸಾರ್ವಜನಿಕರಿಂದ ದಾಳಿ ಸೇರಿದಂತೆ ಇನ್ನಿತರ ವಿಚಾರಗಳ ಮೇಲೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗಳನ್ನು ಕೇಂದ್ರ ಏಕೆ ಪಾಲಿಸುತ್ತಿಲ್ಲ. ಕೇವಲ ಮುಸ್ಲಿಂ ಸಮುದಾಯದ ಮೇಲೆ ಕಾನೂನು ಹೇರುವ ಹಿಂದಿರುವ ಉದ್ದೇಶವೇನು ಎಂದು ಪ್ರೇಮಚಂದ್ರನ್ ಪ್ರಶ್ನಿಸಿದರು. ಎಲ್ಲ ಮಹಿಳೆಯರು ಕಾನೂನಿನ ದೃಷ್ಟಿಯಲ್ಲಿ ಒಂದು. ಇದರಲ್ಲಿ ಸಮುದಾಯ, ಜಾತಿಯ ಅಡೆತಡೆಗಳಿಲ್ಲ. ಭಾರತ ಮಾತ್ರವಲ್ಲದೆ ಅನೇಕ ರಾಷ್ಟ್ರಗಳು ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೊಳಿಸುತ್ತಿದೆ. ಭಾರತದಲ್ಲಿ ಇಂತಹ ವ್ಯವಸ್ಥೆ ಏಕೆ ಆಗಬಾರದು ಎಂದು ರವಿಶಂಕರ್ ಪ್ರಸಾದ್ ತಿದ್ದುಪಡಿ ಕಾಯ್ದೆ ಪ್ರಸ್ತಾಪದ ವೇಳೆ ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಬಾನೋ ಎಂಬ ಮಹಿಳೆಗೆ ತ್ರಿವಳಿ ತಲಾಖ್ ನೀಡಲಾಗಿದೆ. ಪತಿ ಹಾಗೂ ಮನೆ ಮಂದಿ ವರದಕ್ಷಿಣೆಗಾಗಿ ಆಕೆಯನ್ನು ಹಿಂಸೆ ಮಾಡುತ್ತಿದ್ದರು. ತ್ರಿವಳಿ ತಲಾಖ್ ಮಹಿಳೆಯ ವೈವಾಹಿಕ ಜೀವನದ ರಕ್ಷಣೆಗೆ ತರಲಾಗುತ್ತಿದೆ ಎಂದು ಪ್ರಸಾದ್ ವಿವರಿಸಿದರು. ಪ್ರತಿಪಕ್ಷಗಳು ವಿಧೇಯಕವನ್ನು ಸದನ ಸಮಿತಿಗೆ ವರ್ಗಾಯಿಸಿದ್ದರು. ರಾಜ್ಯ ಸಭೆಯಲ್ಲಿ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಿತಿಗೆ ಪರಾಮರ್ಶಿಸಲು ವರ್ಗಾವಣೆ ಮಾಡಲಾಗಿತ್ತು. 2018 ರ ಅಂತ್ಯದಲ್ಲಿ ಲೋಕಸಭೆಯಲ್ಲಿ ಮರು ಮಂಡನೆ ಮಾಡಲಾಗಿತ್ತಾದರೂ, ಎನ್‌ಡಿಎ ಸರಕಾರದ ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಅನುಮತಿ ಸಿಕ್ಕಿರಲಿಲ್ಲ.
from India & World News in Kannada | VK Polls https://ift.tt/2SFTJdR