ಜಮೈಕಾ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದ ಆದ ವಿಶಿಷ್ಟ ಆರ್ಮಿ ಶೈಲಿಯ ಸೆಲೆಬ್ರೇಷನ್ ಮೂಲಕ ಹೆಚ್ಚಿನ ಗಮನ ಸೆಳೆದಿರುವ ವೆಸ್ಟ್‌ಇಂಡೀಸ್‌ನ ಎಡಗೈ ವೇಗಿ ಇದೀಗ ತಮ್ಮ ಮಾನವೀಯ ಗುಣಕ್ಕಾಗಿ ಎಲ್ಲರ ಹೃದಯ ಗೆದ್ದಿದ್ದಾರೆ. ತಮ್ಮ ಆರ್ಮಿ ಕ್ಯಾಂಪ್‌ಗೆ ಭೇಟಿ ನೀಡಿರುವ ವಿಶ್ವ ಚಾಂಪಿಯನ್ ಭಾರತೀಯ ಅಂಧರ ಕ್ರಿಕೆಟ್ ತಂಡದ ಸದಸ್ಯರ ಜತೆ ಅಮೂಲ್ಯ ಸಮಯವನ್ನು ವಿನಿಯೋಗಿಸಿರುವ ಶೆಲ್ಡನ್, ಸೆಲ್ಯೂಟ್ ಹೊಡೆಯುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಪ್ರೀತಿಯನ್ನು ಗೆದ್ದಿದ್ದಾರೆ. ಜಮೈಕಾ ಅಂಧರ ಕ್ರಿಕೆಟ್ ತಂಡದ ಜತೆಗೆ ಮೂರು ಏಕದಿನ ಹಾಗೂ ಎರಡು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತೀಯ ಅಂಧರ ಕ್ರಿಕೆಟ್ ತಂಡವು ಭಾಗವಹಿಸಲಿದೆ. ಇದರಂತೆ ಇದೇ ಮೊದಲ ಬಾರಿಗೆ ಜಮೈಕಾಗೆ ಭೇಟಿ ನೀಡಿರುವ ಭಾರತ ತಂಡವನ್ನು ಕಾಟ್ರೆಲ್ ಸೆಲ್ಯೂಟ್ ಮೂಲಕ ಬರ ಮಾಡಿಕೊಂಡಿದ್ದಾರೆ. ಈ ಸಂತಸದಾಯಕ ಸುದ್ದಿಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಟ್ರೆಲ್ ಹಂಚಿಕೊಂಡಿದ್ದಾರೆ. ಅಲ್ಲದೆ ಕ್ರೀಡಾಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JQTLws