ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರತ್ಯೇಕ ಯಾತ್ರೆ ಪ್ರಸ್ತಾಪಕ್ಕೆ ಹೈಕಮಾಂಡ್ ಕಡಿವಾಣ ಹಾಕಿದ್ದು ಜಂಟಿ ಯಾತ್ರೆ ಕೈಗೊಳ್ಳಲು ತಾಕೀತು ಮಾಡಿದೆ. ಅದರಂತೆ ಜನವರಿ ಮೊದಲ ವಾರದಿಂದ ಕಾಂಗ್ರೆಸ್ ನಾಯಕರ ಸಾಮೂಹಿಕ ಯಾತ್ರೆ ಪ್ರಾರಂಭವಾಗಲಿದೆ. ಪಕ್ಷದ ಎಲ್ಲ ನಾಯಕರು ಒಟ್ಟಿಗೆ 224 ಕೇತ್ರಗಳಲ್ಲೂ ಸಂಚರಿಸಲಿದ್ದಾರೆ. ಈ ಮೂಲಕ ಒಗ್ಗಟ್ಟಿನ ಸಂದೇಶದೊಂದಿಗೆ ವಿಧಾನಸಭೆ ಚುನಾವಣೆಗೆ ಸಜ್ಜಾಗುವುದು ಕಾಂಗ್ರೆಸ್ ಪಕ್ಷದ ಕಾರ್ಯಸೂಚಿಯಾಗಿದೆ.
from India & World News in Kannada | VK Polls https://ift.tt/mI7b5fe