
ಲಕ್ನೋ: ಉತ್ತರ ಪ್ರದೇಶದ ವಿಧಾನಸಭೆಗೆ ಏಳು ಹಂತಗಳಲ್ಲಿ ನಡೆದಿದ್ದ ಮತದಾನದ ಅಂತಿಮ ಫಲಿತಾಂಶ ಗುರುವಾರ ಪ್ರಕಟವಾಗುತ್ತಿದೆ. 403 ವಿಧಾನಸಭೆ ಕ್ಷೇತ್ರಗಳಿಗೆ ಪೈಪೋಟಿ ನಡೆಯುತ್ತಿದ್ದು, 202ರ ಮ್ಯಾಜಿಕ್ ಸಂಖ್ಯೆಯನ್ನು ತಲುಪುವುದು ರಾಜಕೀಯ ಪಕ್ಷಗಳ ಪ್ರಮುಖ ಗುರಿಯಾಗಿದೆ. ಹಾಲಿ ಮುಖ್ಯಮಂತ್ರಿ ನೇತೃತ್ವದ ಬಿಜೆಪಿ ಹಾಗೂ ಮಾಜಿ ಮುಖ್ಯಮಮತ್ರಿ ಅವರ ಸಮಾಜವಾದಿ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಇನ್ನು ಕಾಂಗ್ರೆಸ್ ಕೂಡ ಕಣದಲ್ಲಿದ್ದರೂ, ಅದು ತನ್ನ ಕರಾಮತ್ತು ಪ್ರದರ್ಶಿಸುವ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿಲ್ಲ. ಮಾಜಿ ಸಿಎಂ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಚುನಾವಣೆಯ ಪ್ರಚಾರದಲ್ಲಿಯೂ ಹೆಚ್ಚು ಸುದ್ದಿಯಲ್ಲಿ ಇರಲಿಲ್ಲ. ಹಾಗಾದರೆ ಉತ್ತರ ಪ್ರದೇಶದಲ್ಲಿ ಫಲಿತಾಂಶ ಯಾವ ರೀತಿ ಇರಲಿದೆ? ಯೋಗಿಯನ್ನು ಮತದಾರ ಮತ್ತೆ ಒಪ್ಪಿಕೊಳ್ಳುತ್ತಾರೆಯೇ ಅಥವಾ ಅಖಿಲೇಶ್ ಯಾದವ್ ಅವರೇ ಸರಿ ಎಂದು ಅವರನ್ನು ಅಪ್ಪಿಕೊಳ್ಳುತ್ತಾರೆಯೇ? ಈ ಕುತೂಹಲವನ್ನು ತಣಿಸುವ ಮಾಹಿತಿ ಇಲ್ಲಿ ಸಿಗಲಿದೆ. elections 9. 30: ಬಿಜೆಪಿ 229 ಮತ್ತು ಎಸ್‌ಪಿ 103 ಸೀಟುಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಎಸ್‌ಪಿ 9, ಕಾಂಗ್ರೆಸ್ 4, ಇತರರು 3 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಬಿಜೆಪಿ 207 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಅಧಿಕಾರ ಹಿಡಿಯಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆಯನ್ನು ದಾಟಿದೆ. ಎಸ್‌ಪಿ 108 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಈ ಫಲಿತಾಂಶ ಬದಲಾಗಬಹುದು. ಆರಂಭಿಕ ಮತ ಎಣಿಕೆಗಳಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗಮನಾರ್ಹ ಮುನ್ನಡೆ ಸಾಧಿಸಿದೆ. ಎಸ್‌ಪಿ ಕೂಡ ಬಿಜೆಪಿಯನ್ನು ಹಿಂಬಾಲಿಸುತ್ತಿದೆ. 289 ಕ್ಷೇತ್ರಗಳ ಆರಂಭಿಕ ಮತ ಎಣಿಕೆಯಲ್ಲಿ ಬಿಜೆಪಿ 155 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಸಮಾಜವಾದಿ ಪಕ್ಷ, ತಾನೇನೂ ಕಮ್ಮಿ ಇಲ್ಲ ಎಂಬಂತೆ 120 ಸೀಟುಗಳಲ್ಲಿ ಮುನ್ನಡೆ ಪಡೆದಿದೆ. ಬಿಎಸ್‌ಪಿ 8, ಕಾಂಗ್ರೆಸ್ 3 ಮತ್ತು ಇತರರು 3 ಕ್ಷೇತ್ರಗಳಲ್ಲಿ ಮುಂದಿದ್ದಾರೆ.
from India & World News in Kannada | VK Polls https://ift.tt/G5xEobR