ಡೇ-ನೈಟ್‌ ಟೆಸ್ಟ್‌ಗೆ ಪತುಮ್‌ ನಿಸಂಕ ಸೇವೆ ಕಳೆದುಕೊಂಡ ಶ್ರೀಲಂಕಾ!

ಬೆಂಗಳೂರು: ಆತಿಥೇಯ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಹಣಾಹಣಿಯಲ್ಲಿ ಇನಿಂಗ್ಸ್‌ ಮತ್ತು 222 ರನ್‌ಗಳ ಸೋಲಿನ ಮುಖಭಂಗಕ್ಕೊಳಗಾಗಿದ್ದ ತಂಡ, ಈಗ ದ್ವಿತೀಯ ಟೆಸ್ಟ್‌ ಆರಂಭಕ್ಕೂ ಮೊದಲೇ ಮರ್ಮಾಘಾತಕ್ಕೀಡಾಗಿದೆ. ಸರಣಿಯ ಎರಡನೇ ಪಂದ್ಯ ಇತ್ತಂಡಗಳ ನಡುವಣ ಮೊತ್ತ ಮೊದಲ ಪಂದ್ಯವಾಗಿದೆ. ಉದ್ಯಾನ ನಗರಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 12ರಿಂದ 16ರವರೆಗೆ ಈ ಡೇ-ನೈಟ್‌ ಟೆಸ್ಟ್‌ ಪಂದ್ಯ ಜರುಗಲಿದೆ. ಈ ಮಹತ್ವದ ಪಂದ್ಯಕ್ಕೆ ಇನ್‌ ಫಾರ್ಮ್‌ ಬ್ಯಾಟರ್‌ ನಿಸಂಕ ಅಲಭ್ಯರಾಗಲಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಶ್ರೀಲಂಕಾದ ಮಾಧ್ಯಮಗಳು ಮಾಡಿರುವ ವರದಿ ಪ್ರಕಾರ 23 ವರ್ಷದ ಯುವ ಬಲಗೈ ಬ್ಯಾಟ್ಸ್‌ಮನ್‌, ದ್ವಿತೀಯ ಟೆಸ್ಟ್‌ಗೆ ಅಭ್ಯಾಸ ನಡೆಸುವಾಗ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಮೊಹಾಲಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳ ಎದುರು ಪ್ರಥಮ ಇನಿಂಗ್ಸ್‌ನಲ್ಲಿ ದಿಟ್ಟ ಬ್ಯಾಟಿಂಗ್‌ ನಡೆಸಿದ್ದ ನಿಸಂಕ, 133 ಎಸೆತಗಳಲ್ಲಿ 61 ರನ್‌ ಗಳಿಸಿ ಔಟಾಗದೆ ಉಳಿದಿದ್ದರು. ಇದರಲ್ಲಿ 11 ಫೋರ್‌ಗಳು ಸೇರಿದ್ದವು. ಆದರೆ, ತಂಡವನ್ನು ಇನಿಂಗ್ಸ್‌ ಸೋಲಿನ ಮುಖಭಂಗದಿಂದ ಪಾರು ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಶ್ರೀಲಂಕಾ ಕ್ರಿಕೆಟ್‌ ಬೆಳವಣಿಗೆಗಳ ಬಗ್ಗೆ ಅಧಿಕೃತ ವರದಿ ಮಾಡುವ ಕ್ರಿಕ್‌ವೈರ್‌, " ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಹಿಂದೆಯೂ ಅವರು ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಅವರ ಸ್ಥಿತಿಗತಿ ಬಗ್ಗೆ ಹದ್ದಿನ ಕಣ್ಣಿಡಲಾಗಿದ್ದು, ಟೆಸ್ಟ್‌ ಸರಣಿಯ ಎರಡನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ," ಎಂದು ಬರೆದಿದೆ. ನಿಸಂಕ, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಪರ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಟೆಸ್ಟ್‌ ಸರಣಿಗೂ ಮುನ್ನ ನಡೆದ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ 76 ರನ್‌ ಗಳಿಸಿ ಲಂಕಾ ಪರ ಗರಿಷ್ಠ ರನ್‌ ಸ್ಕೋರರ್‌ ಆಗಿದ್ದರು. ಪತುಮ್‌ ಸ್ಥಾನದಲ್ಲಿ ಯಾರು ಆಡಲಿದ್ದಾರೆ? ಶ್ರೀಲಂಕಾ ತಂಡದಲ್ಲಿ ಕಾಯ್ದಿರಿಸಲ್ಪಟ್ಟ ಬ್ಯಾರ್‌ಗಳಲ್ಲಿ ಅನುಭವಿಗಳೇ ಇದ್ದಾರೆ. ಮಾಜಿ ನಾಯಕ ದಿನೇಶ್‌ ಚಾಂದಿಮಾಲ್‌ ಮತ್ತು ಕುಶಲ್‌ ಪೆರೆರಾ ಇಬ್ಬರಲ್ಲಿ ಒಬ್ಬರು ಆಡುವ ಹನ್ನೊಂದರ ಬಳಗ ಸೇರಿಕೊಳ್ಳಲಿದ್ದಾರೆ. ಮೆಂಡಿಸ್‌, ಗಾಯದ ಸಮಸ್ಯೆ ಕಾರಣ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಸ್ನಾಯು ಸೆಳೆತದ ಸಮಸ್ಯೆಯಿಂದ ಚೇತರಿಸಿರುವ ಅವರು ತಂಡ ಸೇರುವ ರೇಸ್‌ನಲ್ಲಿ ಮುಂದಿದ್ದಾರೆ. ಶ್ರೀಲಂಕಾ ಪರ 47 ಟೆಸ್ಟ್‌ ಆಡಿರುವ ಕುಶಲ್‌ ಮೆಂಡಿಸ್‌ 3022 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 11 ಅರ್ಧಶತಕಗಳು ಸೇರಿವೆ. ಆದರೆ, ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಬಯೋ ಬಬಲ್‌ ನಿಯಮ ಉಲ್ಲಂಘಿಸಿದ ಕಾರಣ ಕಳೆದ 6 ತಿಂಗಳು ನಿಷೇಧದಲ್ಲಿದ್ದರು. ಮೆಂಡಿಸ್‌ ನಿಷೇಧ ಕಾರಣ ನಿಸಂಕಗೆ ಲಂಕಾ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಶ್ರೀಲಂಕಾ ಟೆಸ್ಟ್‌ ತಂಡ ಪಾತುಮ್ ನಿಸ್ಸಂಕ, ಕುಶಲ್ ಮೆಂಡಿಸ್, ಚರಿತ್ ಅಸಲಂಕ, ದಿನೇಶ್ ಚಾಂದಿಮಾಲ್, ಚಮಿಕ ಕರುಣಾರತ್ನೆ, ದುಷ್ಮಾಂತ ಚಮೀರ, ಲಾಹಿರು ಕುಮಾರ, ಜೆಫ್ರಿ ವಾಂಡರ್ಸೆ, ನಿರೋಶನ್ ಡಿಕ್ವೆಲ್ಲ, ಧನಂಜಯ ಡಿ'ಸಿಲ್ವಾ, ದಿಮುತ್ ಕರುಣಾರತ್ನೆ (ನಾಯಕ), ಲಸಿತ್ ಎಂಬುಲ್ದೇನಿಯ, ವಿಶ್ವ ಫರ್ನಾಂಡೊ, ಪ್ರವೀಣ್‌ ಜಯವಿಕ್ರಮ, ಸುರಂಗ ಲಕ್ಮಲ್‌, ಏಂಜಲೊ ಮ್ಯಾಥ್ಯೂಸ್, ಲಾಹಿರು ತಿರಿಮಾನ್ನೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/qGRrNDn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...