'ರಾಯುಡುಗೆ ನಾನೇ ದುಃಸ್ವಪ್ನ', ಕುತೂಹಲದ ಸಂಗತಿ ತೆರೆದಿಟ್ಟ ಬ್ರಾವೋ!

ಬೆಂಗಳೂರು: ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಹಾಗೂ ಸ್ಟಾರ್‌ ಆಲ್‌ರೌಂಡರ್‌ , ಟಿ20 ಕ್ರಿಕೆಟ್‌ನಲ್ಲಿ ಯಾವುದೇ ತಂಡದ ಪರ ಆಡಿದರೂ ಅಪ್ಪಟ ಮ್ಯಾಚ್‌ ವಿನ್ನರ್‌ ಎಂಬುದರಲ್ಲಿ ಅನುಮಾನವೇ ಇಲ್ಲ. ಆಟದ ಜೊತೆಗೆ ತಂಡದ ಡ್ರೆಸಿಂಗ್‌ ರೂಮ್ನಲ್ಲಿ ಮತ್ತು ಫ್ಯಾನ್ಸ್‌ಗೆ ಅದ್ಭುತ ಮನೋರಂಜನೆ ನೀಡುವ ಚಾಂಪಿಯನ್‌ ಆಟಗಾರ. ಆಟದೊಂದಿಗೆ ಹಾಡು ಮತ್ತು ಕುಣಿತದಿಂದಲೂ ಅಭಿಮಾನಿಗಳ ಮನ ಗೆದ್ದಿರುವ ಡ್ವೇನ್‌ ಬ್ರಾವೋ, ಇಂದು ವಿಶ್ವದ ಜನಪ್ರಿಯೆ ಕ್ರಿಕೆಟ್‌ ಲೀಗ್‌ಗಳಲ್ಲಿ ಅಭಿಮಾನಿಗಳ ಅಚ್ಚು ಮೆಚ್ಚಿನ ಆಟಗಾರನಾಗಿದ್ದಾರೆ. ತಮ್ಮ ಸ್ನೇಹ ಪೂರ್ವ ವ್ಯಕ್ತಿತ್ವದೊಂದಿಗೆ ಕ್ರಿಕೆಟ್‌ ಲೋಕದಲ್ಲೂ ಬ್ರಾವೋ ಅಪಾರ ಗೆಳೆಯರ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷ ಟಿ20 ಕ್ರಿಕೆಟ್‌ ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ 38 ವರ್ಷದ ಆಲ್‌ರೌಂಡರ್‌, ಕೇವಲ ಲೀಗ್‌ ಟೂರ್ನಿಗಳಲ್ಲಿ ಮಾತ್ರ ಟಿ20 ಕ್ರಿಕೆಟ್‌ ಆಡುವುದನ್ನು ಮುಂದುವರಿಸಿದ್ದಾರೆ. ಟೂರ್ನಿಯಲ್ಲಿ ಆಡಿದ 151 ಪಂದ್ಯಗಳಿಂದ 167 ವಿಕೆಟ್‌ಗಳನ್ನು ಪಡೆದ ಹೆಗ್ಗಳಿಕೆ ಅವರದ್ದು. ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳಲ್ಲಿ ಒಬ್ಬರು ಕೂಡ. ಹೀಗಾಗಿ ಟೂರ್ನಿ ಸಲುವಾಗಿ ನಡೆದ ಮೆಗಾ ಆಕ್ಷನ್‌ನಲ್ಲಿ ಬ್ರಾವೋ 2 ಕೋಟಿ ರೂ.ಗಳ ಮೂಲ ಬೆಲೆ ಹೊಂದಿದ್ದರು. ತನ್ನ ಆಟಗಾರನನ್ನು ಮರಳಿ ಖರೀದಿಸಲು ಹಿಂದೆ ಮುಂದೆ ನೋಡದ ಸಿಎಸ್‌ಕೆ, ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳನ್ನು ಹಿಂದಿಕ್ಕಿ 4.4 ಕೋಟಿ ರೂ. ಬೆಲೆಗೆ ಬ್ರಾವೋ ಸೇವೆಯನ್ನು ಮರಳಿ ಸಂಪಾದಿಸಿತು. ಇದರ ಬೆನ್ನಲ್ಲೇ ಸಿಎಸ್‌ಕೆ ಅನುಭವಿ ಬ್ಯಾಟ್ಸ್‌ಮನ್‌ ಅವರನ್ನು 6.75 ಕೋಟಿ ರೂ. ಬೆಲೆಗೆ ಮರಳಿ ಖರೀದಿ ಮಾಡಿತ್ತು. ರಾಯುಡುಗೆ ನಾನೇ ದೂಃಸ್ವಪ್ನ: ಬ್ರಾವೋ ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಬ್ರಾವೋ, ಐಪಿಎಲ್‌ 2022 ಟೂರ್ನಿಯ ಮೆಗಾ ಆಕ್ಷನ್‌ ಸಮಯದಲ್ಲಿ ಅಂಬಾಟಿ ರಾಯುಡುಗೆ ತಾವು ದುಃಸ್ವಪ್ನವಾಗಿ ಕಾಡಿದ ಘಟನೆಯನ್ನು ತೆರೆದಿಟ್ಟಿದ್ದಾರೆ. 'ರಾಯುಡು ನೀನು ಈ ಬಾರಿ ಅನ್‌ಸೋಲ್ಡ್‌' ಎಂದು ಸಿಕ್ಕಾಪಟ್ಟೆ ಕಾಲೆಳೆದ ಘಟನೆಯನ್ನು ವಿವರಿಸಿದ್ದಾರೆ. "ರಾಯುಡುಗೆ ನಾನೇ ದುಃಸ್ವಪ್ನ. ಮೆಗಾ ಆಕ್ಷನ್‌ ವೇಳೆ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ ಮಾಡುತ್ತಿದ್ದೆವು. ಈ ಬಾರಿ ನೀನು ಅನ್‌ಸೋಲ್ಡ್‌. ಯಾರೊಬ್ಬರೂ ನಿನ್ನನ್ನು ಖರೀದಿಸುವುದಿಲ್ಲ ಎಂದು ಸಿಕ್ಕಾಪಟ್ಟೆ ಕಾಲೆಳೆದಿದ್ದೆ. ನಾವು ಹೀಗೆ ಕೆಲಸಕ್ಕೆ ಬಾರದ ಸಂಗತಿಗಳನ್ನೇ ಹೆಚ್ಚು ಚರ್ಚೆ ಮಾಡುವುದು. ಅಂತ್ಯದಲ್ಲಿ ಇಬ್ಬರೂ ಸಿಎಸ್‌ಕೆ ತಂಡಕ್ಕೆ ಮರಳಿದ್ದು ಬಹಳಾ ಸಂತಸ ನೀಡಿತು. ಸಿಎಸ್‌ಕೆ ನನ್ನನ್ನು ಮರಳಿ ಖರೀದಿಸಿದ ಬಗ್ಗೆ ಆತನಿಗೂ ಬಹಳಾ ಖುಷಿಯಿದೆ. ಆತ ಮತ್ತೆ ಸಿಎಸ್‌ಕೆ ತಂಡ ಸೇರಿದ್ದಕ್ಕೆ ನನಗೂ ಸಂತಸವಿದೆ," ಎಂದು ಬ್ರಾವೋ ಹೇಳಿರುವ ವಿಡಿಯೋವನ್ನು ಸಿಎಸ್‌ಕೆ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದೆ. "ಅಂಬಾಗೆ ಬೇರೆ ಫ್ರಾಂಚೈಸಿ ಪರ ಆಡಲು ಇಷ್ಟವಿರಲಿಲ್ಲ. ತಂಡದಲ್ಲಿ ನನಗಂತೂ ಅವರು ಬಹಳಾ ಕಾಟ ಕೊಡುತ್ತಾರೆ. ಈ ಆವೃತ್ತಿಯಲ್ಲೂ ನಮ್ಮಿಬ್ಬರ ನಡುವಣ ಕಿತ್ತಾಟ ಮುಂದುವರಿಯಲಿದೆ. ನಾವಿಬ್ಬರು ಕಿತ್ತಾಡುವುದನ್ನು ಮುಂದುವರಿಸಿದಷ್ಟೂ ತಂಡ ಗೆಲ್ಲುತ್ತಿರುತ್ತದೆ, ಅದೇ ಮುಖ್ಯ," ಎಂದು ಬ್ರಾವೋ ಹೇಳಿದ್ದಾರೆ. 2020ರ ಆವೃತ್ತಿಯಲ್ಲಿ ಅಂಕಪಟ್ಟಿಯ ಕೊನೆಯ ಸ್ಥಾನ ಪಡೆದಿದ್ದ , 2021ರ ಆವೃತ್ತಿಯಲ್ಲಿ ಅಮೋಘವಾಗಿ ಕಮ್‌ಬ್ಯಾಕ್‌ ಮಾಡುವ ಮೂಲಕ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿ ತನ್ನ ನಾಲ್ಕನೇ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈಗ ತನ್ನ 5ನೇ ಟ್ರೋಫಿಗೆ ಕಣ್ಣಿಟ್ಟಿದ್ದು, ಮಾರ್ಚ್‌ 26ರಂದು ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಉದ್ಘಾಟನಾ ಪಂದ್ಯವನ್ನಾಡಲಿದೆ. ಮೇ 29ಕ್ಕೆ ಟೂರ್ನಿ ಮುಗಿಯಲಿದ್ದು, 70 ಲೀಗ್‌ ಪಂದ್ಯಗಳಿಗೆ ಮಹಾರಾಷ್ಟ್ರ ಆತಿಥ್ಯ ವಹಿಸಲಿದೆ. ನಾಕ್‌ಔಟ್‌ ಹಂತವನ್ನು ಎಲ್ಲಿ ನಡೆಸಲಾಗುವುದು ಎಂಬ ಬಗ್ಗೆ ಬಿಸಿಸಿಐ ಈವರೆಗೆ ಮಾಹಿತಿ ಬಿಡುಗಡೆ ಮಾಡಿಲ್ಲ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/m7nxe5w

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...