ಪ.ಬಂಗಾಳ ಮುನ್ಸಿಪಾಲಿಟಿ ಚುನಾವಣೆ: 108ರ ಪೈಕಿ 102 ಕ್ಷೇತ್ರದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಟಿಎಂಸಿ

ಕೋಲ್ಕತಾ: ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ದಾಖಲಿಸಿದ ಹತ್ತು ತಿಂಗಳ ಬಳಿಕ, ಮುಖ್ಯಮಂತ್ರಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುನ್ಸಿಪಾಲಿಟಿ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿದೆ. ಪ್ರತಿಪಕ್ಷಗಳನ್ನು ಧೂಳಿಪಟ ಮಾಡಿದೆ. ಬುಧವಾರ () ಮುನ್ಸಿಪಲ್‌ ಎಲೆಕ್ಷನ್‌ ಫಲಿತಾಂಶ ಪ್ರಕಟವಾಗಿದ್ದು, 108 ಮುನ್ಸಿಪಾಲಿಟಿಗಳ ಪೈಕಿ 102ರಲ್ಲಿ ಸಾಧಿಸಿದೆ. ವಿಶೇಷವೆಂದರೆ, ಸುಮಾರು 40 ವರ್ಷಗಳ ಬಳಿಕ ಅಧಿಕಾರಿ ಕುಟುಂಬದ ಭದ್ರ ಕೋಟೆಯಾಗಿದ್ದ ಕಾಂತಿ ಮುನ್ಸಿಪಾಲಿಟಿಯನ್ನು ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಟಿಎಂಸಿ ಯಶಸ್ಸು ಕಂಡಿದೆ. ಪಶ್ಚಿಮ ಬಂಗಾಳದ ಪ್ರತಿಪಕ್ಷ ಮುಖಂಡ, ನಂದಿ ಗ್ರಾಮದಲ್ಲಿ ಮಮತಾ ಅವರ ಪ್ರಮುಖ ಎದುರಾಳಿಯಾಗಿದ್ದ ಸುವೇಂದು ಅಧಿಕಾರಿ ಕುಟುಂಬದ ಭದ್ರಕೋಟೆ ಇದಾಗಿತ್ತು. ಕಾಂತಿ ಮುನ್ಸಿಪಾಲಿಟಿಯಲ್ಲಿ 4 ದಶಕಗಳಲ್ಲಿ ಮೊದಲ ಬಾರಿ ಅಧಿಕಾರಿ ಕುಟುಂಬಕ್ಕೆ ಅಧಿಕಾರ ಕೈತಪ್ಪಿದೆ. ಈ ಮಧ್ಯೆ, ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಸಾಮಾಜಿಕ ಕಾರ್ಯಕರ್ತ ಅಜೋಯ್‌ ಎಡ್ವರ್ಡ್‌ ನೇತೃತ್ವದ ಹ್ಯಾಮ್ರೊ ಪಕ್ಷವು ಡಾರ್ಜಿಲಿಂಗ್‌ ಮುನ್ಸಿಪಾಲಿಟಿಯಲ್ಲಿ ಜಯ ಸಾಧಿಸಿದೆ. ಟಿಎಂಸಿ, ಜಿಜೆಎಂ ಮತ್ತು ಬಿಜೆಪಿ ಪಕ್ಷಗಳನ್ನು ಮೀರಿಸಿ 'ಹ್ಯಾಮ್ರೊ' ಅಚ್ಚರಿಯ ಗೆಲುವು ಗಿಟ್ಟಿಸಿ ಕೊಂಡಿದೆ. ನಾದಿಯಾ ಜಿಲ್ಲೆಯ ತಹೇರ್‌ಪುರ್‌ ಮುನ್ಸಿಪಾಲಿಟಿಯಲ್ಲಿ ಸಿಪಿಐ (ಎಂ) ನೇತೃತ್ವದ ಎಡರಂಗ ಗೆಲುವು ಸಾಧಿಸಿದೆ. ಮುರ್ಷಿದಾಬಾದ್‌ ಜಿಲ್ಲೆಯ ಬೆಲ್ದಾಂಗ, ಝಾಲ್ಡಾ ಜಿಲ್ಲೆಯ ಪುರುಲಿಯಾ, ಹೂಗ್ಲಿ ಜಿಲ್ಲೆಯ ಚಂಪ್‌ದನಿ ಮತ್ತು ಪುಬ್ರಾ ಜಿಲ್ಲೆಯ ಈಗ್ರಾ ಮುನ್ಸಿಪಾಲಿಟಿಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಇಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಪಕ್ಷವು ಅಧಿಕಾರ ಹಿಡಿಯಲು ಪಕ್ಷೇತರರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಫೆ.27ರಂದು ಚುನಾವಣೆ ನಡೆದಿತ್ತು. ಒಟ್ಟು ಮುನ್ಸಿಪಾಲಿಟಿಗಳ ಪೈಕಿ ದಿನ್ಹಾತಾದಲ್ಲಿ ಟಿಎಂಸಿ ಅವಿರೋಧವಾಗಿ ಗೆಲುವು ಸಾಧಿಸಿತ್ತು.


from India & World News in Kannada | VK Polls https://ift.tt/doC7Rjs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...