ಚೆನ್ನೈ: ಮಾಜಿ ಪ್ರಧಾನಿ ಅಪರಾಧಿಗಳಾದ ಗೆ 30 ದಿನಗಳ ಪರೋಲ್ ಸಿಕ್ಕಿದೆ. ಪುತ್ರಿ ಮದುವೆ ಸಂಬಂಧ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಒಂದು ತಿಂಗಳ ಪರೋಲ್ ಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಲಾಗಿದೆ. ವೆಲ್ಲೂರಿನ ಕೇಂದ್ರೀಯ ಕಾರಾಗೃಹದಲ್ಲಿದ್ದ ನಳಿನಿಯನ್ನು ಬುಧವಾರ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಜುಲೈ 5 ರಂದು ಪರೋಲ್ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ ಷರತ್ತು ಬದ್ಧ ಒಂದು ತಿಂಗಳ ಪರೋಲ್ ನೀಡಲು ಅನುಮತಿ ನೀಡಿದೆ. ಜೈಲಿನಿಂದ ಹೊರಗಿರುವ ವೇಳೆ ಯಾವುದೇ ಸುದ್ದಿ ಮಾಧ್ಯಮದ ಜತೆ ಸಂದರ್ಶನ ಅಥವಾ ಹೇಳಿಕೆಗಳನ್ನು ನೀಡಬಾರದು ಎಂದು ಷರತ್ತು ಹಾಕಿದೆ. ಮದ್ರಾಸ್ ಹೈಕೋರ್ಟ್‌ಗೆ ತನ್ನ ಪುತ್ರಿಯ ವಿವಾಹ ಸಂಬಂಧ ತಯಾರಿಗಾಗಿ 6 ತಿಂಗಳು ಪರೋಲ್ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್, 30 ದಿನಗಳ ಕಾಲ ಷರತ್ತು ಬದ್ಧ ಪರೋಲ್‌ಗೆ ಅನುಮತಿ ನೀಡಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶ್ರೀಹರನ್ ಗೆ ಜೀವಿತಾವಧಿ ಶಿಕ್ಷೆಗೆ ಒಳಗಾಗಿದ್ದರು. ಕಳೆದ 28 ವರ್ಷಗಳಿಂದ ಆಕೆ ವೆಲ್ಲೂರು ಕೇಂದ್ರೀಯ ಕಾರಾಗೃಹದಲ್ಲಿ ಇದ್ದರು. ಈ ಮೊದಲು ತನ್ನ ತಂದೆಯ 2016ರಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 12 ಗಂಟೆಗಳ ಪರೋಲ್ ನೀಡಲಾಗಿತ್ತು ಎಂದು ತಿಳಿದು ಬಂದಿದೆ.
from India & World News in Kannada | VK Polls https://ift.tt/2Z8DEQp