ವಿಕೆಟ್ ತುದಿಯಲ್ಲಿ ಕೂತ ಬೇಲ್ಸ್; ಔಟ್ ಅಥಾ ನಾಟೌಟ್ ?

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತಂಡೂಲ್ಕರ್ ತಮ್ಮ ಅಧಿಕೃತ ಖಾತೆಯಲ್ಲಿ ವಿಚಿತ್ರವಾದ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅಭಿಮಾನಿಗಳಲ್ಲಿ ಅಂಪೈರ್ ಆಗಿ ಔಟ್ ಅಥವಾ ನಾಟೌಟ್ ಎಂಬುದನ್ನು ನಿರ್ಧರಿಸಲು ಕರೆ ನೀಡಿದ್ದಾರೆ. ಸಚಿನ್ ಅವರಿಗೆ ಸ್ನೇಹಿತರೊಬ್ಬರು ಕ್ರಿಕೆಟ್ ಪಂದ್ಯದ ವೀಡಿಯೋವನ್ನು ಫಾರ್ವಡ್ ಮಾಡಿದ್ದರು. ಅದರಲ್ಲಿ ಬ್ಯಾಟ್ಸ್‌ಮನ್ ಬೇಧಿಸಿರುವ ಚೆಂಡು ನೇರವಾಗಿ ಬೇಲ್ಸ್‌ಗೆ ಬಡಿಯುತ್ತದೆ. ಬೇಲ್ಸ್ ವಿಕೆಟ್‌ನಿಂದ ಹಾರಿದರೂ ನೇರವಾಗಿ ಎಡ ವಿಕೆಟ್ ತುದಿಯಲ್ಲಿ ಕುಳಿತುಕೊಳ್ಳುತ್ತದೆ. ಈ ದೃಶ್ಯವನ್ನು ಕಂಡು ಎದುರಾಳಿ ತಂಡದ ಆಟಗಾರರು ಸೇರಿದಂತೆ ಬ್ಯಾಟ್ಸ್‌ಮನ್ ಬೆರಗಾಗುತ್ತಾರೆ. ಬೇಲ್ಸ್ ವಿಕೆಟ್‌ನಿಂದ ಬೀಳದಿರುವ ಪರಿಣಾಮ ಅಂಪೈರ್ ನಾಟೌಟ್ ಎಂದು ಘೋಷಿಸುತ್ತಾರೆ. ಪ್ರಸ್ತುತ ಘಟನೆಯು ಕ್ರಿಕೆಟ್ ಲೋಕವನ್ನು ಗಾಢವಾಗಿ ಚಿಂತಿಸುವಂತೆ ಮಾಡಿದೆ. ಸಚಿನ್ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿ ಪ್ರಕಾರ ಬೇಲ್ಸ್ ತನ್ನ ನೈಜ ಸ್ಥಾನದಿಂದ ಬೇರ್ಪಟ್ಟಿದ್ದರಿಂದ ಔಟ್ ನೀಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಸಚಿನ್ ಟ್ವೀಟ್‌ಗೆ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಈ ವಿಡಿಯೋ ವೀಕ್ಷಿಸಿದ ಬಳಿಕ ಔಟ್ ಅಥವಾ ನಾಟೌಟ್? ಹಾಗೂ ಅದಕ್ಕಿರುವ ಕಾರಣಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ಗಳನ್ನು ತಿಳಿಸಲು ಮರೆಯದಿರಿ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ybQktW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...