ಹೊಸದಿಲ್ಲಿ: ಸದ್ಯ ಕ್ರಿಕೆಟ್‌ನಿಂದ ಬಿಡುವಿನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ , ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ಕಣಿವೆ ರಾಜ್ಯದಲ್ಲಿ ದೇಶದ ಸೇವೆ ಸಲ್ಲಿಸಲಿದ್ದಾರೆ. 106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ (ಪ್ಯಾರಾ) ವಿಭಾಗವು ಜುಲೈ 31ರಿಂದ ಆಗಸ್ಟ್ 2019ರ ವರೆಗೆ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲಿದೆ. ವಿಕ್ಟರ್ ಫೋರ್ಸ್ ಭಾಗವಾಗಿ ಪೆಟ್ರೋಲಿಂಗ್, ಗಾರ್ಡ್ ಇತ್ಯಾದಿ ಕರ್ತವ್ಯಗಳನ್ನು ಧೋನಿ ಕೂಡಾ ನಿರ್ವಹಿಸಲಿದ್ದಾರೆ. 2011ರಲ್ಲಿ ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿಯ ಪ್ಯಾರಾಚೂಟ್ ರೆಜಿಮೆಂಟ್‌ನಿಂದ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ಪಡೆದಿದ್ದರು. ಇತ್ತೀಚೆಗಷ್ಟೇ ಸಾಗಿದ ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಸಲ್ಲಿಸುವ ಬಗ್ಗೆ ಮಾಹಿತಿಗಳು ಬಂದಿದ್ದವು. ಸದ್ಯ ಕ್ರಿಕೆಟ್‌ಗೆ ಬಿಡುವು ನೀಡಿರುವ ಧೋನಿ, ಸೇನೆಯಲ್ಲಿ ತರಬೇತಿ ಪಡೆಯುವುದರಲ್ಲಿ ತಲ್ಲೀನವಾಗಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MbSW2V