ಟೆಸ್ಟ್‌ನಲ್ಲಿ ಧೋನಿ ನಂ.7 ಜೆರ್ಸಿ ಯಾರಿಗೆ?

ಹೊಸದಿಲ್ಲಿ: ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಹೊಸ ಸ್ವರೂಪ ನೀಡುವ ನಿಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲೂ ಏಕದಿನದಂತೆ ಜೆರ್ಸಿ ನಂಬರ್‌ಗಳನ್ನು ಬಳಕೆ ಮಾಡಲಾಗುವುದು. ಹಾಗಾಗಿ ಆಗಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿರುವ ಅವರ ನಂ.7 ಅಂಕಿಯನ್ನು ಭಾರತ ಬಳಕೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್‌ಗೆ ನೀಡಿರುವ ಅಪಾರ ಕೊಡುಗೆಗಳಿಗೆ ಗೌರವ ಸೂಚಕವಾಗಿ ಅವರು ಬಳಕೆ ಮಾಡುತ್ತಿದ್ದ ನಂ.10 ಜೆರ್ಸಿಯನ್ನು ಬಿಸಿಸಿಐ ಶಾಶ್ವತವಾಗಿ ನಿವೃತ್ತಿಗೊಳಿಸಿದೆ. ಇದೀಗ ಸಚಿನ್ ಅವರ ನಂ.10 ಜತೆಗೆ ಧೋನಿ ಅವರ ನಂ.7 ಅಂಕಿಯನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಬಳಕೆ ಮಾಡುವ ಸಾಧ್ಯತೆ ಕಡಿಮೆಯಾಗಿದೆ. ಏಕದಿನ ಹಾಗೂ ಟ್ವೆಂಟಿ-20 ಮಾದರಿಗಳಲ್ಲಿರುವುದಕ್ಕೆ ಸಮಾನವಾಗಿ ನಾಯಕ ವಿರಾಟ್ ಕೊಹ್ಲಿ 18 ಹಾಗೂ ರೋಹಿತ್ ಶರ್ಮಾ 45 ಜೆರ್ಸಿ ನಂಬರ್ ಬಳಕೆ ಮಾಡಲಿದ್ದಾರೆ. ಹಿಂದೊಮ್ಮೆ ಸಚಿನ್ 10 ಅದೃಷ್ಟ ಸಂಖ್ಯೆಯನ್ನು ಶಾರ್ದೂಲ್ ಠಾಕೂರ್‌ಗೆ ನೀಡಿದಾಗ ವ್ಯಾಪಕ ಆಕ್ರೋಶ ಎದ್ದಿದ್ದವು. ಧೋನಿ ವಿಷಯದಲ್ಲೂ ಇದು ಮರುಕಳಿಸುವ ಸಾಧ್ಯತೆಯಿದೆ. ಹಾಗಾಗಿ ವಿಶ್ವಕಪ್ ವಿಜೇತ ನಾಯಕನ 7 ಅಂಕಿ ಜೆರ್ಸಿಯನ್ನು ಇತರೆ ಆಟಗಾರರಿಗೆ ನೀಡುವ ಸಾಧ್ಯತೆ ಕ್ಷೀಣಿಸಿದೆ. ಆಗಸ್ಟ್ 1ರಂದು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕದನದೊಂದಿಗೆ ಆರಂಭವಾಗಲಿದೆ. ಇದಕ್ಕೆ ಮುನ್ನುಡಿಯಾಗಿ ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲೂ ಇಂಗ್ಲೆಂಡ್ ಬಿಳಿ ಜೆರ್ಸಿಯಲ್ಲಿ ಆಟಗಾರರ ಅಂಕಿಗಳೊಂದಿಗೆ ಕಣಕ್ಕಿಳಿದಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MbSX6Z

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...