Russia Ukraine War: ನ್ಯಾಟೋ ಸದಸ್ಯತ್ವದ ಆಸೆ ಕೈಬಿಟ್ಟ ಉಕ್ರೇನ್..! ಯುದ್ಧ ನಿಲ್ಲಿಸುತ್ತಾ ರಷ್ಯಾ..?

ಕೀವ್ (): ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಕೊನೆಗೂ ಸೇರುವ ಆಸೆ ಕೈಬಿಟ್ಟಿದ್ದಾರೆ. ಹಿತಾಸಕ್ತಿಗೆ ವಿರುದ್ಧವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಗುಂಪು ಸೇರುವ ಇರಾದೆಯಿಂದ ಜೆಲೆನ್‌ಸ್ಕಿ ಹಿಂದೆ ಸರಿದಿದ್ದಾರೆ. ಈ ಮೂಲಕ ಉಕ್ರೇನ್ ವಿರುದ್ಧ ಸಮರ ಸಾರಲು ರಷ್ಯಾಗೆ ಇದ್ದ ಪ್ರಮುಖ ಕಾರಣವೊಂದು ದೂರವಾಗಿದೆ. ಆದ್ರೆ, ಸಂಧಾನ ಮಾತುಕತೆ ನಡೆದು ಉಭಯ ರಾಷ್ಟ್ರಗಳೂ ಒಮ್ಮತದ ನಿಲುವಿಗೆ ಸಮ್ಮತಿ ಸೂಚಿಸಿದ ಬಳಿಕಷ್ಟೇ ನಿಲ್ಲಬಹುದಾಗಿದೆ. ಇನ್ನು ರಷ್ಯಾ ಪರವಾಗಿ ಇರುವ ಉಕ್ರೇನ್‌ನ 2 ಪ್ರಾಂತ್ಯಗಳ ವಿಚಾರದಲ್ಲೂ ಪುಟಿನ್ ಜೊತೆಗೆ ರಾಜಿ ಮಾಡಿಕೊಳ್ಳಲು ಸಿದ್ಧ ಎಂದು ಉಕ್ರೇನ್ ಹೇಳಿದೆ. ಉಕ್ರೇನ್‌ನ ಭಾಗವಾಗಿದ್ದ ಬೆಲಾರೆಸ್ ಹಾಗೂ ಕ್ರಿಮಿಯಾ ಪ್ರಾಂತ್ಯಗಳನ್ನು ಯುದ್ಧ ಆರಂಭಕ್ಕೂ ಮುನ್ನವೇ ಪುಟಿನ್ ಅವರು ಸ್ವತಂತ್ರ ಎಂದು ಘೋಷಿಸಿದ್ದರು. ಈ ಘೋಷಣೆಗೆ ತಾನು ಬದ್ಧನಾಗಿರೋದಾಗಿ ಜೆಲೆನ್‌ಸ್ಕಿ ಹೇಳಿದ್ದಾರೆ. ಸೋಮವಾರ ರಾತ್ರಿ ಎಬಿಸಿ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಜೆಲೆನ್‌ಸ್ಕಿ, ನಮ್ಮ ದೇಶಕ್ಕೆ ಸದಸ್ಯತ್ವ ನೀಡಲು ನ್ಯಾಟೋ ಸಿದ್ಧವಿಲ್ಲ ಅನ್ನೋದು ನಮಗೆ ಮನವರಿಕೆಯಾಗಿದೆ. ಹೀಗಾಗಿ, ನಾವು ರಷ್ಯಾದ ಎಲ್ಲಾ ಷರತ್ತುಗಳನ್ನೂ ಒಪ್ಪಿ ಸಂಧಾನಕ್ಕೆ ಸಿದ್ಧವಿರೋದಾಗಿ ಉಕ್ರೇನ್ ಹೇಳಿದೆ. ನ್ಯಾಟೋ ಸದಸ್ಯ ರಾಷ್ಟ್ರ ಪೋಲೆಂಡ್ ತನ್ನ ಯುದ್ಧ ವಿಮಾನಗಳನ್ನು ಉಕ್ರೇನ್‌ಗೆ ಕಳಿಸಲು ನಿರಾಕರಿಸಿದ ಬೆನ್ನಲ್ಲೇ ಜೆಲೆನ್‌ಸ್ಕಿ ಕೂಡಾ ನ್ಯಾಟೋ ಸದಸ್ಯತ್ವದ ಆಸೆ ಕೈಬಿಡಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ರಷ್ಯಾ ವಿರುದ್ಧ ಆರ್ಥಿಕ ಸಮರ ಸಾರಿರುವ ಅಮೆರಿಕ ಹಾಗೂ ಐರೋಪ್ಯ ದೇಶಗಳು, ಹಲವು ವಿಧದ ನಿರ್ಬಂಧಗಳನ್ನು ಹೇರಿವೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳೋದನ್ನೂ ನಿಲ್ಲಿಸಲು ನಿರ್ಧರಿಸಿವೆ. ಈಗಾಗಲೇ ವೀಸಾ, ಮಾಸ್ಟರ್ ಕಾರ್ಡ್ ಸೇರಿದಂತೆ ಎಲ್ಲಾ ವಿಧದ ಪ್ಲಾಸ್ಟಿಕ್ ಕರೆನ್ಸಿಗಳ ಚಲಾವಣೆಯನ್ನು ರಷ್ಯಾದಲ್ಲಿ ರದ್ದುಪಡಿಸಲಾಗಿದೆ. ಅಂತಾರಾಷ್ಟ್ರೀಯ ಸ್ವಿಫ್ಟ್ ಪಾವತಿಯನ್ನೂ ತಡೆಹಿಡಿಯಲಾಗಿದೆ. ರಷ್ಯಾದ ಬ್ಯಾಂಕ್‌ಗಳ ಆಸ್ತಿ ಮುಟ್ಟುಗೋಲು, ಕಾರ್ಯಾಚರಣೆಗೆ ನಿರ್ಬಂಧ ಸೇರಿದಂತೆ ಹಲವು ನಿರ್ಬಂಧಗಳನ್ನು ಅಮೆರಿಕ ವಿಧಿಸಿದೆ. ಆದ್ರೂ ಕೂಡಾ ರಷ್ಯಾ ತನ್ನ ಪಟ್ಟು ಸಡಿಲ ಮಾಡಿಲ್ಲ. ಅಮೆರಿಕಗೆ ತಿರುಗೇಟು ಎಂಬಂತೆ ರಷ್ಯಾ ಕೂಡಾ ಕೆಲವು ಐರೋಪ್ಯ ದೇಶಗಳಿಗೆ ಕಚ್ಚಾ ವಸ್ತು ರಫ್ತು ನಿಲ್ಲಿಸಲು ನಿರ್ಧರಿಸಿದೆ. ರಷ್ಯಾದಿಂದ ತೈಲ ಆಮದು ನಿಲ್ಲಿಸಿರುವ ಅಮೆರಿಕದ ನಡೆಯನ್ನು ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಸ್ವಾಗತಿಸಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಜೆಲೆನ್‌ಸ್ಕಿ ಜೊತೆ ಮಾತುಕತೆ ನಡೆಸಿದ್ದು, ಉಕ್ರೇನ್‌ಗೆ ಎಲ್ಲಾ ರೀತಿಯ ನೆರವು ನೀಡೋದಾಗಿ ಭರವಸೆ ನೀಡಿದ್ದಾರೆ. ಇನ್ನು ಕೋಕಾಕೋಲಾ, ಸ್ಟಾರ್‌ ಬಕ್ಸ್ ಸೇರಿದಂತೆ ಹಲವು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿವೆ. ಆದರೆ ಬಿಬಿಸಿ ಮಾತ್ರ ರಷ್ಯಾದಲ್ಲಿ ತನ್ನ ಇಂಗ್ಲಿಷ್ ಭಾಷಾ ಚಾನಲ್ ಪ್ರಸಾರವನ್ನು ಪುನಾರಂಭಿಸಲು ಮನಸ್ಸು ಮಾಡಿದೆ. ಬ್ರಿಟನ್ ಸಂಸತ್‌ನಲ್ಲಂತೂ ಎಲ್ಲ ಸದಸ್ಯರೂ ಎದ್ದು ನಿಂತು ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಅವರ ಧೈರ್ಯ ಹಾಗೂ ರಷ್ಯಾ ವಿರುದ್ಧದ ಅವರ ನಿಲುವಿಗೆ ಗೌರವ ಸೂಚಿಸಿದ್ದಾರೆ.


from India & World News in Kannada | VK Polls https://ift.tt/W3hAZfY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...