
ಹೊಸದಿಲ್ಲಿ: ಪಂಚರಾಜ್ಯ ಚುನಾವಣೆ ಬಳಿಕ ಇಂಧನ ದರ ಏರಿಕೆಯ ನಿರೀಕ್ಷೆಯ ನಡುವೆಯೇ ಮಂಗಳವಾರ ರಾಷ್ಟ್ರ ರಾಜಧಾನಿ ದಿಲ್ಲಿಸೇರಿದಂತೆ ಹಲವು ನಗರಗಳಲ್ಲಿ ಸಿಎನ್‌ಜಿ ದರವನ್ನು ಒಂದು ಕೆ.ಜಿ.ಗೆ 0.50 ರೂ. ಹೆಚ್ಚಳ ಮಾಡಲಾಗಿದೆ. ದಿಲ್ಲಿಯಲ್ಲಿ 56.51 ರೂ. ಇದ್ದ ಸಿಎನ್‌ಜಿ ದರವನ್ನು 57.51 ರೂ.ಗೆ ಹೆಚ್ಚಿಸಲಾಗಿದೆ. ಅದಲ್ಲದೇ ತೈಲದ ಮೇಲೆ ನಿರ್ಬಂಧ ವಿಧಿಸಿರುವುದು ತೈಲ ಬೆಲೆ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗುವ ಸಾಧ್ಯತೆ ಇದೆ. ನೋಯ್ಡಾ, ಘಾಜಿಯಾಬಾದ್‌ನಲ್ಲೂ ಸಿಎನ್‌ಜಿ ದರ 1 ರೂ. ಏರಿಕೆಯಾಗಿದೆ. ರಾಜ್ಯದಿಂದ ರಾಜ್ಯಕ್ಕೆ ತೆರಿಗೆಗೆ ಅನುಗುಣವಾಗಿ ಸಿಎನ್‌ಜಿ ದರವು ವ್ಯತ್ಯಾಸವಾಗುತ್ತದೆ. ಆದರೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಲು ಸರಕಾರ ಜಾಗತಿಕ ಕಚ್ಚಾತೈಲ ದರದ ಬಗ್ಗೆ ಮತ್ತಷ್ಟು ಸ್ಪಷ್ಟತೆಗಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ದರ ಏರಿಕೆ ಸುಳಿವು ನೀಡಿದ ಸಚಿವೆಪೆಟ್ರೋಲ್ ಮತ್ತು ಏರಿಕೆ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ. ಯುದ್ಧದಿಂದ ಕಚ್ಚಾ ತೈಲದ ದರ ಭಾರಿ ಏರಿಕೆಯಾಗುತ್ತಿದೆ. ಭಾರತ ಶೇ.80ರಷ್ಟು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ಪೆಟ್ರೋಲಿಯಂ ಕಂಪನಿಗಳೇ ತೈಲ ದರದ ಬಗ್ಗೆ ನಿರ್ಧರಿಸಲಿವೆ. ಪರ್ಯಾಯ ಮೂಲಗಳಿಂದ ತೈಲ ಆಮದು ಬಗ್ಗೆ ಚಿಂತಿಸಿದ್ದೇವೆ. ತೈಲ ದರ ಏರುಪೇರು ತಡೆಯಲು ಬಜೆಟ್‌ನಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದೆ. ಆದರೂ ಯುದ್ಧದಿಂದ ವ್ಯತಿರಿಕ್ತ ಪರಿಣಾಮ ಖಂಡಿತವಾಗಿಯೂ ಆಗಲಿದೆ ಎಂದಿದ್ದಾರೆ. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಸಹ, ದೇಶದಲ್ಲಿ ತೈಲ ಕಂಪನಿಗಳೇ ಇಂಧನ ಬೆಲೆ ನಿರ್ಧರಿಸಲಿವೆ ಎಂದು ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಇದು ಜಾಗತಿಕವಾಗಿ ತೈಲ ಬಿಕ್ಕಟ್ಟಿಗೂ ಕಾರಣವಾಗಿದೆ. ಹಾಗಾಗಿಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಆಧಾರದ ಮೇಲೆ ಇಂಧನ ಬೆಲೆ ನಿಗದಿಯಾಗುತ್ತದೆ. ಹಾಗಾಗಿ, ಭಾರತದಲ್ಲೂ ತೈಲ ಕಂಪನಿಧಿಧಿಗಳೇ ಬೆಲೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತವೆ. ಸರಕಾರವೂ ನಾಗರಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಿದೆ,'' ಎಂದು ಹೇಳಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ತೈಲ ಬೆಲೆ ಇಳಿಸಿತ್ತು, ಈಗ ಚುನಾವಣೆ ಮುಗಿದಿರುವುದರಿಂದ ದರ ಏರಿಕೆ ಮಾಡಲಾಗುತ್ತದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿಯೇ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿ ಮಂಗಳವಾರವೂ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಒಂದೇ ದಿನ ಬ್ಯಾರೆಲ್‌ಗೆ 37 ರೂ. ಜಾಸ್ತಿಯಾಗಿದ್ದು, ಸದ್ಯ ಒಂದು ಬ್ಯಾರೆಲ್‌ಗೆ 9,321 ರೂ. ತೆರಬೇಕಾಗಿದೆ. ಅಮೆರಿಕ ನಿರ್ಬಂಧದಿಂದ ತೈಲ ಬೆಲೆ ಗಗನಕ್ಕೆ?ರಷ್ಯಾ ತೈಲ ಆಮದು ಮೇಲೆ ಅಮೆರಿಕ ನಿರ್ಬಂಧ ಹೇರಿರುವುದರಿಂದ ತೈಲ ಬೆಲೆ ಮತ್ತಷ್ಟು ಹೇರುವ ಸಾಧ್ಯತೆ ಇದೆ. ಮಂಗಳವಾರ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ರಷ್ಯಾದ ತೈಲ ಮತ್ತು ಅನಿಲ ಆಮದಿನ ಮೇಲೆ ನಿರ್ಬಂಧ ಹೇರಿದರು. ಈ ಹಿನ್ನೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಲಕ್ಷಣಗಳು ಕಾಣುತ್ತಿದ್ದು, ಭಾರತದಲ್ಲಿಯೂ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
from India & World News in Kannada | VK Polls https://ift.tt/hSrDARx