Russia Ukraine Crisis: ರಷ್ಯಾ ತೈಲದ ಮೇಲೆ ಅಮೆರಿಕ ನಿರ್ಬಂಧ! ಪುಟಿನ್‌ಗೆ ಜೋ ಬಿಡೆನ್‌ ಮಾಸ್ಟರ್‌ ಸ್ಟ್ರೋಕ್‌

ವಾಷಿಂಗ್‌ಟನ್‌ ಡಿಸಿ: ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಮೇಲೆ ಮಂಗಳವಾರ ತೈಲ ನಿರ್ಬಂಧ ಹೇರಿದೆ. ಉಕ್ರೇನ್‌ ಮೇಲೆ ದಾಳಿ ನಿಲ್ಲಿಸದ ರಷ್ಯಾಗೆ ಪಾಠ ಕಲಿಸುವ ಸಲುವಾಗಿ ಅಮರಿಕೆ ಅಧ್ಯಕ್ಷ ರಷ್ಯಾದ ತೈಲ ಆಮದುಗಳ ಮೇಲೆ ನಿರ್ಬಂಧ ಘೋಷಿಸಿದ್ದಾರೆ. ಇದರಿಂದ ರಷ್ಯಾಗೆ ಆರ್ಥಿಕ ನಿರ್ಬಂಧದ ಬಳಿಕ ಮತ್ತೊಂದು ಪೆಟ್ಟು ಬಿದ್ದಂತಾಗಿದೆ. ಈ ಬಗ್ಗೆ ಮಂಗಳವಾರ ಶ್ವೇತಭವನದಲ್ಲಿ ಮಾತನಾಡಿದ ಜೋ ಬಿಡೆನ್‌ ನಾವು ರಷ್ಯಾದ ತೈಲ ಮತ್ತು ಅನಿಲ ಮತ್ತು ಶಕ್ತಿಯ ಎಲ್ಲಾ ಆಮದುಗಳನ್ನು ನಿಷೇಧಿಸುತ್ತಿದ್ದೇವೆ. ಇದರ ಅರ್ಥ ಅಮೆರಿಕದ ಬಂದರುಗಳಲ್ಲಿ ರಷ್ಯಾದ ತೈಲವನ್ನು ಇನ್ನು ಮುಂದೆ ಸ್ವೀಕರಿಸುವಂತಿಲ್ಲ. ಈ ಮೂಲಕ ಅಮೆರಿಕದ ಜನರು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್‌ಗೆ ಮತ್ತೊಂದು ದೊಡ್ಡ ಹೊಡೆತ ನೀಡುತ್ತಾರೆ ಎಂದು ಹೇಳಿದರು. ಪುಟಿನ್ ಯುದ್ಧಕ್ಕೆ ನಾವು ಸಬ್ಸಿಡಿ ನೀಡುವ ಭಾಗವಾಗಿರುವುದಿಲ್ಲ ಎಂದು ಹೇಳಿರುವ ಬಿಡೆನ್‌, ಯುರೋಪಿಯನ್ ಮಿತ್ರ ರಾಷ್ಟ್ರಗಳೊಂದಿಗೆ ಸಮಾಲೋಚಿಸಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ರಷ್ಯಾದ ಶಕ್ತಿಯ ಮೇಲಿನ ಅವಲಂಬನೆ ಕಡಿಮೆ ಮಾಡಲು ದೀರ್ಘಾವಧಿಯ ಯೋಜನೆ ಅಭಿವೃದ್ಧಿಗೆ ಯುರೋಪಿಯನ್ ಮಿತ್ರ ರಾಷ್ಟ್ರಗಳೊಂದಿಗೆ ಅಮೆರಿಕ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಬಿಡೆನ್‌ ತಿಳಿಸಿದರು. ಅಮೆರಿಕ ಆಮದಿನ ಮೇಲೆ ಅಮೆರಿಕ ನಿರ್ಬಂಧ ಹೇರಿರುವುದರಿಂದ ಜಾಗತಿಕವಾಗಿ ತೈಲ ಬೆಲೆ ಮತ್ತಷ್ಟು ಗಗನಕ್ಕೇರುವ ಸಾಧ್ಯತೆ ಇದೆ. ಭಾರತದಲ್ಲಿಯೂ ಇದರ ಪ್ರಭಾವವನ್ನು ಕಾಣಬಹುದಾಗಿದೆ. ಅಮೆರಿಕ ಮತ್ತು ಯುರೋಪಿಯನ್‌ ಮಿತ್ರರಾಷ್ಟ್ರಗಳು ಈ ಹಿಂದೆ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದವು. ಆದರೆ, ಜಾಗತಿಕ ಇಂಧನ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುವ ಕಾರಣಕ್ಕೆ ರಷ್ಯಾದ ತೈಲವನ್ನು ಹೊರಗಿಟ್ಟಿದ್ದವು. ಆದರೆ, ಈಗ ರಷ್ಯಾಗೆ ಪ್ರಭಲ ಹೊಡೆತ ನೀಡುವ ಉದ್ದೇಶದಿಂದ ರಷ್ಯಾ ತೈಲದ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಅಮೆರಿಕ ಅನುಸರಿಸಿದ ನಡೆಯನ್ನು ಇತರ ದೇಶಗಳು ಅನುಸರಿಸುವ ಸಾಧ್ಯತೆ ಇದೆ. ರಷ್ಯಾದ ಆದಾಯದ ಶೇ.40ಕ್ಕಿಂತ ಹೆಚ್ಚು ತೈಲ ಮತ್ತು ಅನಿಲ ಉತ್ಪಾದನೆಯಿಂದಲೇ ಬರುತ್ತಿದ್ದು, ಅಮೆರಿಕದ ನಿರ್ಬಂಧ ರಷ್ಯಾವನ್ನು ಇಕ್ಕಟ್ಟಿಗೆ ಸಿಲುಕಿಸುವುದರಲ್ಲಿ ಎರಡು ಮಾತಿಲ್ಲ. ಭಾರತದ ಮೇಲೆ ನಿರ್ಬಂಧ ಮೂರ್ಖತನ ರಷ್ಯಾದಿಂದ ಎಸ್‌-400 ವಾಯುದಾಳಿ ನಿರೋಧಕ ವ್ಯವಸ್ಥೆ ಖರೀದಿಯ ನೆಪವೊಡ್ಡಿ ಅಮೆರಿಕ ಸರಕಾರವು ಭಾರತದ ಮೇಲೆ ನಿರ್ಬಂಧಗಳನ್ನು ಹೇರಲು ಮುಂದಾದರೆ, ಅದೊಂದು ‘ಅಸಾಧಾರಣ ಮೂರ್ಖ ನಡೆ’ ಎನಿಸಲಿದೆ ಎಂದು ಅಮೆರಿಕದ ಪ್ರತಿಪಕ್ಷದ ಸಂಸದ ಟೆಡ್‌ ಕ್ರೂಜ್‌ ಎಚ್ಚರಿಸಿದ್ದಾರೆ. ಅವರು ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಅವರ ಕಚೇರಿಗೂ ಪತ್ರ ಬರೆದಿದ್ದಾರೆ. ‘‘ಅಮೆರಿಕವು ತನ್ನ ಎದುರಾಳಿಗಳನ್ನು ಹತ್ತಿಕ್ಕುವ ಸಲುವಾಗಿಯೇ ನಿರ್ಬಂಧಗಳನ್ನು ಹೇರಲು ‘ಕ್ಯಾಟ್ಸಾ’ ಕಾಯಿದೆ ಜಾರಿಗೆ ತಂದಿದೆ. ಇದನ್ನೇ ಅಸ್ತ್ರವನ್ನಾಗಿ ಕೂಡ ಬಳಸಿಕೊಂಡು ಬರುತ್ತಿದೆ. ಹಾಗಂತ, ವಿಶ್ವದಲ್ಲೇ ಅತ್ಯಂತ ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ಭಾರತದ ಮೇಲೆ ಕ್ಯಾಟ್ಸಾ ಹೇರಿಕೆಯ ಚಿಂತನೆ ದೂರವಿರಲಿ. ರಷ್ಯಾ ಜತೆಗಿನ ಭಾರತದ ಆಪ್ತ ಸಂಬಂಧದ ನೆಪವೊಡ್ಡಿ ನಿರ್ಬಂಧ ಹೇರಿದರೆ ಪರಿಣಾಮ ಕೆಟ್ಟದ್ದಾಗಲಿದೆ,’’ ಎಂದು ಟೆಕ್ಸಾಸ್‌ ಸಂಸದ ಟೆಡ್‌ ಕ್ರೂಜ್‌ ಅವರು ಸಂಸದೀಯ ಸಮಿತಿ ಸಭೆಯಲ್ಲಿಯೂ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.


from India & World News in Kannada | VK Polls https://ift.tt/ky2bh3t

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...