
ಬೆಂಗಳೂರು: ಹೊಸ ಹುರುಪಿನಲ್ಲಿ ಎದುರಾಗಲು ಸಜ್ಜಾಗಿದೆ. ಈ ಬಾರಿ ಟ್ರೋಫಿಗಾಗಿ ಒಟ್ಟು 10 ತಂಡಗಳು ಕಾದಾಟ ನಡೆಸಲಿದ್ದು, ಲೀಗ್ ಹಂತದಲ್ಲೇ ಬರೋಬ್ಬರಿ 70 ಪಂದ್ಯಗಳ ಆಯೋಜನೆ ಆಗಲಿದೆ. ಮಾರ್ಚ್ 26ರಿಂದ ಮೇ 29ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಉದ್ಘಾಟನಾ ಪಂದ್ಯದಲ್ಲಿ ತಂಡ ಎದುರು ಪೈಪೋಟಿ ನಡೆಸಲಿದೆ. ಹಾಲಿ ಚಾಂಪಿಯನ್ಸ್ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಟ್ರೋಫಿ ಉಳಿಸಿಕೊಳ್ಳುವುದರ ಜೊತೆಗೆ ದಾಖಲೆಯ ಐದನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಈ ಸಲುವಾಗಿ ಸೂರತ್‌ನಲ್ಲಿ ಅಭ್ಯಾಸ ಶಿಬಿರ ಕೈಗೊಂಡಿದ್ದು, ನೆಟ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಎಂಎಸ್‌ಡಿ ದೈತ್ಯ ಸಿಕ್ಸರ್‌ಗಳನ್ನು ಸಿಡಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿದೆ. ಕಳೆದ ಫೆ.12-13ರಂದು ಬೆಂಗಳೂರಿನಲ್ಲಿ ನಡೆದ ಮೆಗಾ ಆಕ್ಷನ್‌ನಲ್ಲಿ ಹಣದ ಹೊಳೆ ಹರಿಸಿದ ಸಿಎಸ್‌ಕೆ, ತನ್ನ ಹಳೇ ಆಟಗಾರರನ್ನು ಬಹುತೇಕ ಮರಳಿ ಖರೀದಿ ಮಾಡುವಲ್ಲಿ ಯಶಶ್ವಿಯಾಯಿತು. ಆದರೂ, ಫಾಫ್ ಡು'ಪ್ಲೆಸಿಸ್, ಶಾರ್ದುಲ್ ಠಾಕೂರ್, ಲುಂಗಿ ಎನ್ಗಿಡಿ ಮತ್ತು ಸ್ಯಾಮ್ ಕರ್ರನ್ ಅವರಂತಹ ಸ್ಟಾರ್‌ಗಳ ಸೇವೆಯನ್ನು ಕಳೆದುಕೊಂಡಿದೆ. ಆದರೂ, ಹರಾಜಿನಲ್ಲಿ ಸೂಕ್ತ ಬದಲಿ ಆಟಗಾರರನ್ನು ಖರೀದಿ ಮಾಡಿ ಟ್ರೋಫಿ ಗೆಲ್ಲಲು ಬೇಕಿರುವ ಬಲಿಷ್ಠ ತಂಡವನ್ನೇ ರಚಿಸಿಕೊಂಡಿದೆ. ಅಭ್ಯಾಸದಲ್ಲಿ ಎಂಎಸ್ ಧೋನಿ ಬಾರಿಸಿರುವ ದೈತ್ಯ ಸಿಕ್ಸರ್‌ಗಳನ್ನು ಈ ನಲ್ಲಿ ವೀಕ್ಷಿಸ ಬಹುದಾಗಿದೆ. ಸೂರತ್‌ನಲ್ಲಿ ಸಿಎಸ್‌ಕೆಗೆ ಭರ್ಜರಿ ಸ್ವಾಗತ ಮಹಾರಾಷ್ಟ್ರದಲ್ಲಿನ ನಾಲ್ಕು ಕ್ರೀಡಾಂಗಣಗಳಲ್ಲಿ ಐಪಿಎಲ್ 2022 ಟೂರ್ನಿಯ 70 ಲೀಗ್ ಪಂದ್ಯಗಳ ಆಯೋಜನೆ ಆಗಲಿವೆ. ಮುಂಬೈನ ವಾಂಖೆಡೆ, ಡಿವೈ ಪಾಟಿಲ್ ಮತ್ತು ಬ್ರಬೋರ್ನ್ ಕ್ರೀಡಾಂಗಣಗಳಲ್ಲಿ ಒಟ್ಟು 55 ಪಂದ್ಯಗಳು ಮತ್ತು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ 15 ಪಂದ್ಯಗಳ ಆಯೋಜನೆ ಆಗಲಿವೆ. ಈ ಸಲುವಾಗಿ ಸೂರತ್‌ಗೆ ಬಂದಿಳಿದಿರುವ ಸಿಎಸ್‌ಕೆ ತಂಡಕ್ಕೆ ಅಲ್ಲಿನ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ. ಐಪಿಎಲ್ 2020 ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಅಂಕಪಟ್ಟಿಯ ಕೊನೆಯ ಸ್ಥಾನ ಪಡೆದಿದ್ದ ಸಿಎಸ್‌ಕೆ, ಐಪಿಎಲ್ 2021 ಟೂರ್ನಿಯಲ್ಲಿ ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದು, ತನ್ನ 4ನೇ ಟ್ರೋಫಿ ಎತ್ತಿ ಹಿಡಿದಿತ್ತು. ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡವನ್ನು 7 ರನ್‌ಗಳಿಂದ ಮಣಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಲೀಗ್‌ಗೆ ಹೊಸ ಮಾದರಿ ಪರಿಚಯ ಲಖನೌ ಸೂಪರ್ ಜಯಂಟ್ಸ್ ಮತ್ತು ಗುಜರಾತ್ ಜಯಂಟ್ಸ್ ಈ ಬಾರಿ ಟೂರ್ನಿಗೆ ಕಾಲಿಟ್ಟಿರುವ ಎರಡು ಹೊಸ ಫ್ರಾಂಚೈಸಿಗಳಾಗಿವೆ. ಹೀಗಾಗಿ ಎಲ್ಲಾ 10 ತಂಡಗಳಿಗೆ ತಲಾ 14 ಲೀಗ್ ಪಂದ್ಯಗಳು ಸಿಗುವಂತೆ ಮಾಡುವ ಉದ್ದೇಶದಿಂದ ತಲಾ 5 ತಂಡಗಳಾಗಿ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಸಿಎಸ್‌ಕೆ, ತನ್ನದೇ ಗುಂಪಿನಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಎದುರು ಎರಡು ಪಂದ್ಯಗಳನ್ನು ಆಡಲಿದೆ. ಅದೇ ಮತ್ತೊಂದು ಗುಂಪಿನಲ್ಲಿರುವ ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ಎದುರು ಒಂದು ಪಂದ್ಯವನ್ನಾಡಿ ತನ್ನದೇ ಶ್ರೇಯಾಂಕ ಹೊಂದಿರುವ ಎದುರು ಮಾತ್ರ ಎರಡು ಪಂದ್ಯಗಳನ್ನು ಆಡಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಎಂಎಸ್ ಧೋನಿ (ನಾಯಕ), ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಅಂಬಾಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹರ್, ಕೆ.ಎಂ, ಆಸಿಫ್, ತುಷಾರ್ ದೇಶಪಾಂಡೆ, ಶಿವಂ ದುಬೆ, ಮಹೀಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಡೆವೊನ್ ಕಾನ್ವೇ, ಡ್ವೇನ್ ಪ್ರೆಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನ್, ಸುಭ್ರಾಂಶು ಸೇನಾಪತಿ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜಾರ್ಡನ್, ಕೆ ಭಗತ್ ವರ್ಮಾ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/R5FaWcY