Russia Ukraine Crisis: ರಷ್ಯಾದಲ್ಲಿ ಆಹಾರ ಉತ್ಪನ್ನಗಳ ಅಭಾವ ಸಾಧ್ಯತೆ! ಫುಡ್‌ ಖರೀದಿಗೆ ಮಿತಿ ಹೇರಿದ ಸರ್ಕಾರ

ಮಾಸ್ಕೊ: ಉಕ್ರೇನ್‌ ಮೇಲಿನ ಆಕ್ರಮಣದ ಬಳಿಕ ಆರ್ಥಿಕ ದಿಗ್ಬಂಧನಕ್ಕೆ ತುತ್ತಾಗಿರುವ ರಷ್ಯಾಕ್ಕೆ ಈಗ ನಿಧಾನವಾಗಿ ಬಿಸಿ ತಾಗುತ್ತಿದೆ. ದೇಶದಲ್ಲಿಆಹಾರ ಪದಾರ್ಥಗಳ ಅಭಾವ ಕಾಣಿಸಿಕೊಳ್ಳುವ ಲಕ್ಷಣ ಗೋಚರಿಸತೊಡಗಿದ್ದು, ಸರಕಾರವು ಖರೀದಿ ಮಿತಿ ಹೇರಲು ಮುಂದಾಗಿದೆ. ಜತೆಗೆ , ಮಾಂಸ, ಬೇಕರಿ ಪದಾರ್ಥಗಳು, ಡೈರಿ ಉತ್ಪನ್ನಗಳು ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆಯನ್ನೂ ಸರಕಾರವೇ ನಿಯಂತ್ರಿಸಲಿದೆ. ''ದೇಶದ ಹಲವು ಕಡೆಗಳಲ್ಲಿ ಜನರು ಅಗತ್ಯಕ್ಕಿಂತ ಬಹಳ ಹೆಚ್ಚಿನ ಪ್ರಮಾಣದಲ್ಲಿಆಹಾರ ಪದಾರ್ಥಗಳನ್ನು ಖರೀದಿಸುತ್ತಿರುವುದು ಕಂಡುಬಂದಿದೆ. ಇದರ ಹಿಂದೆ ಮಾರಾಟ ಅಥವಾ ವೈಯಕ್ತಿಕ ಬಳಕೆಯ ಉದ್ದೇಶವೇ ಇದ್ದಿರಬಹುದು, ಆದರೆ ಸದ್ಯದ ಸ್ಥಿತಿಯಲ್ಲಿಎಲ್ಲರಿಗೂ ಕಡಿಮೆ ದರದಲ್ಲಿಆಹಾರ ಪದಾರ್ಥಗಳು ಸಿಗಲಿ ಎನ್ನುವ ಉದ್ದೇಶದಿಂದ ಖರೀದಿ ಮಿತಿ ಮತ್ತು ದರ ನಿಯಂತ್ರಣಕ್ಕೆ ಸರಕಾರ ಮುಂದಾಗಿದೆ,'' ಎಂದು ರಷ್ಯಾದ ಕೈಗಾರಿಕೆ ಮತ್ತು ವ್ಯಾಪಾರ ಸಚಿವಾಲಯ ತಿಳಿಸಿದೆ. ಹೀಗಾಗಿ ಇನ್ನು ಮುಂದೆ ಮಳಿಗೆಗಳಲ್ಲಿ ಒಬ್ಬ ವ್ಯಕ್ತಿಗೆ ಒಮ್ಮೆ ನಿರ್ದಿಷ್ಟ ಪ್ರಮಾಣದ ಆಹಾರ ಪದಾರ್ಥಗಳು ಮಾತ್ರ ಲಭ್ಯವಾಗಲಿವೆ. ಎರಡು ವಾರ ಹಿಂದೆ ಉಕ್ರೇನ್‌ ಮೇಲೆ ದಾಳಿ ಶುರುವಾದ ಬೆನ್ನಲ್ಲಿಯೇ ರಷ್ಯಾದ ಕಡೆಗಳಲ್ಲಿ ಜನರು ಆಹಾರ ಪದಾರ್ಥಗಳ ಖರೀದಿಗೆ ಮುಗಿಬಿದ್ದಿದ್ದರು. ಕೆಲವರು ಟನ್‌ಗಟ್ಟಳೆ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿದ್ದಾರೆ. ಜನರನ್ನು ನಿಯಂತ್ರಿಸುವ ಉದ್ದೇಶದಿಂದ ಖರೀದಿಗೆ ನಿರ್ಬಂಧ ವಿಧಿಸುವಂತೆ ಚಿಲ್ಲರೆ ವರ್ತಕರು ಸಹ ಸರಕಾರವನ್ನು ಕೋರಿದ್ದವು. ಅದಕ್ಕೂ ಸ್ಪಂದಿಸಿರುವ ಸರಕಾರ, ಮಳಿಗೆಯೊಂದರಲ್ಲಿಒಬ್ಬ ವ್ಯಕ್ತಿ ಒಮ್ಮೆ ಖರೀದಿಸಿದ ಬಳಿಕ ಕೆಲವು ದಿನಗಳ ಕಾಲ ಆತ ಮತ್ತೆ ಖರೀದಿ ಮಾಡುವುದನ್ನು ನಿರ್ಬಂಧ ವಿಧಿಸಲಾಗಿದೆ. ಉಕ್ರೇನ್‌ ದಾಳಿ ನಿಲ್ಲಿಸುವವರೆಗೆ ಆಕ್ರಮಣ ನಿಲ್ಲಿಸಲ್ಲ!ಉಕ್ರೇನ್‌ ಹಾಗೂ ಮಧ್ಯೆ ಸೋಮವಾರ ಮೂರನೇ ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧವಾಗಿರುವ ಬೆನ್ನಲ್ಲೇ, ಉಕ್ರೇನ್‌ ದಾಳಿ ನಿಲ್ಲಿಸುವವರೆಗೆ ನಮ್ಮ ಆಕ್ರಮಣ ಮುಂದುವರಿಯುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ಟರ್ಕಿ ಅಧ್ಯಕ್ಷ ಎರ್ಡೋಗನ್‌ ತಯ್ಯಿಪ್‌ ಜತೆ ದೂರವಾಣಿ ಮೂಲಕ ಚರ್ಚಿಸುವಾಗ ತಮ್ಮ ನಿಲುವು ಸ್ಪಷ್ಟಪಡಿಸಿದ ಅವರು, ನಮ್ಮ ಯೋಧರ ಮೇಲೆ ಉಕ್ರೇನ್‌ ಮಾಡುತ್ತಿರುವ ದಾಳಿ ನಿಲ್ಲಿಸುವವರೆಗೂ ಆಕ್ರಮಣ ಮುಂದುವರಿಯುತ್ತದೆ. ಶಾಂತಿ ಸ್ಥಾಪನೆಯಾಗಬೇಕು ಎಂದರೆ ಮೊದಲು ಉಕ್ರೇನ್‌ ಪಡೆಗಳು ದಾಳಿ ನಿಲ್ಲಿಸಬೇಕು. ಅಷ್ಟಕ್ಕೂ ನಮ್ಮ ಬೇಡಿಕೆಗಳು ಸಂಪೂರ್ಣವಾಗಿ ಈಡೇರಿದ ಬಳಿಕವೇ ಕದನ ವಿರಾಮ ಎಂದಿದ್ದಾರೆ. ಇದಕ್ಕೂ ಮುನ್ನ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರು, ಮತ್ತೊಂದು ಬಂದರು ನಗರ ಒಡೆಸ್ಸಾ ಮೇಲೆ ಬಾಂಬ್‌ ದಾಳಿ ನಡೆಸಲು ರಷ್ಯಾ ಸಿದ್ಧವಾಗಿದೆ. ಜತೆಗೆ ಮೈಕೋಲೇಯಿವ್‌ ವ್ಯಾಪ್ತಿಯಲ್ಲಿರುವ ಯುಜ್ನೌಕ್ರೇನ್‌ಸ್ಕ್‌ ಪರಮಾಣು ಘಟಕದ ಮೆಲೂ ದಾಳಿಗೆ ಯೋಜನೆ ರೂಪಿಸಿದೆ ಎಂದು ಆರೋಪಿಸಿದ್ದರು. ರಷ್ಯಾದ 11 ಸಾವಿರ ಸೈನಿಕರ ಹತ್ಯೆ ಫೆ.24ರಂದು ಆಕ್ರಮಣ ಮಾಡಿದಾಗಿನಿಂದ ಇದುವರೆಗೆ ರಷ್ಯಾದ 11 ಸಾವಿರಕ್ಕೂ ಅಧಿಕ ಸೈನಿಕರನ್ನು ಹತ್ಯೆಗೈಯಲಾಗಿದೆ ಎಂದು ಉಕ್ರೇನ್‌ ತಿಳಿಸಿದೆ. 'ಪುಟಿನ್‌ ಪಡೆಗಳಿಗೆ ಉಕ್ರೇನ್‌ ಯೋಧರು ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ. ರಷ್ಯಾ ದಾಳಿ ಮಾಡಿದ ಬಳಿಕ ಇದುವರೆಗೆ 11 ಸಾವಿರ ಯೋಧರನ್ನು ಹತ್ಯೆಗೈಯುವ ಜತೆಗೆ ಎರಡು ಸಾವಿರ ಸೇನಾ ಶಸ್ತ್ರಸ್ತ್ರ ಘಟಕಗಳನ್ನು ನಾಶಪಡಿಸಲಾಗಿದೆ. ಇವುಗಳಲ್ಲಿ285 ಟ್ಯಾಂಕ್‌ಗಳು, 44 ಯುದ್ಧವಿಮಾನ ಹಾಗೂ 48 ಹೆಲಿಕಾಪ್ಟರ್‌ಗಳು ಸಹ ಸೇರಿವೆ ಎಂದು ಉಕ್ರೇನ್‌ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.


from India & World News in Kannada | VK Polls https://ift.tt/Z6h7FA3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...