48 ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನ ವಿಶೇಷ ದಾಖಲೆ ಬರೆದ ರವೀಂದ್ರ ಜಡೇಜಾ!

ಮೊಹಾಲಿ: 'ರಾಕ್‌ಸ್ಟಾರ್‌' ಎಂದೇ ಹೆಸರು ಮಾಡಿರುವ ಆಲ್‌ರೌಂಡರ್‌ , ಇಲ್ಲಿನ ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪ್ರವಾಸಿ ವಿರುದ್ಧ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಹಣಾಹಣಿಯಲ್ಲಿ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. ಬ್ಯಾಟಿಂಗ್‌ನಲ್ಲಿ ಅಜೇಯ 175 ರನ್‌ ಮತ್ತು ಬೌಲಿಂಗ್‌ನಲ್ಲಿ ಎರಡೂ ಇನಿಂಗ್ಸ್‌ಗಳಿಂದ ಒಟ್ಟು 9 ವಿಕೆಟ್‌ಗಳನ್ನು ಕಿತ್ತು, ಭಾರತಕ್ಕೆ ಇನಿಂಗ್ಸ್‌ ಮತ್ತು 222 ರನ್‌ಗಳ ಭರ್ಜರಿ ಜಯ ತಂದುಕೊಡುವ ಮೂಲಕ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದು ಇನಿಂಗ್ಸ್‌ ಮತ್ತು ರನ್‌ಗಳ ಅಂತರದಲ್ಲಿ ಶ್ರೀಲಂಕಾ ತಂಡಕ್ಕೆ ಎದುರಾದ 3ನೇ ಅತ್ಯಂತ ಹೀನಾಯ ಸೋಲಾಗಿದೆ. ಜಡೇಜಾ, ಇದೇ ವೇಳೆ ಭಾರತದಲ್ಲಿ 7ಕ್ಕೂ ಹೆಚ್ಚು ಬಾರಿ ಇನಿಂಗ್ಸ್‌ ಒಂದರಲ್ಲಿ ಐದು ವಿಕೆಟ್‌ಗಳ ಸಾಧನೆ ಮೆರೆದ ಟೀಮ್ ಇಂಡಿಯಾದ ಮೂರನೇ ಎಡಗೈ ಸ್ಪಿನ್ನರ್‌ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಪ್ರಜ್ಞಾನ್‌ ಓಜಾ ಮತ್ತು ಬಿಷನ್‌ ಸಿಂಗ್‌ ಬೇಡಿ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿಬದುಕಿನಲ್ಲಿ 8 ಬಾರಿ ಈ ಸಾಧನೆ ಮಾಡಿದ್ದಾರೆ. ಜಡೇಜಾ ಈ ದಾಖಲೆ ಮುರಿದು ಮತ್ತಷ್ಟು ಬಲಪಡಿಸಿಕೊಳ್ಳುವ ಅತ್ಯುತ್ತಮ ಅವಕಾಶ ಹೊಂದಿದ್ದಾರೆ. ಶ್ರೀಲಂಕಾ ಎದುರು ಮೊದಲ ಇನಿಂಗ್ಸ್‌ನಲ್ಲಿ 5 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಿತ್ತು ಮಿಂಚಿದರು. ದಶಕಗಳ ಬಳಿಕ ಟೆಸ್ಟ್‌ನಲ್ಲಿ ವಿಶೇಷ ದಾಖಲೆ ಬ್ಯಾಟಿಂಗ್‌ನಲ್ಲಿ ಅಜೇಯ 175 ರನ್‌ ಮತ್ತು ಬೌಲಿಂಗ್‌ನಲ್ಲಿ ಇನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಸಾಧನೆ ಮೆರೆಯುವ ಮೂಲಕ ರವೀಂದ್ರ ಜಡೇಜಾ ಇತಿಹಾಸದ ಪುಟ ಸೇರಿದ್ದಾರೆ. ಪಂದ್ಯ ಒಂದರಲ್ಲಿ 150ಕ್ಕೂ ಹೆಚ್ಚು ರನ್‌ ಮತ್ತು 5 ವಿಕೆಟ್‌ ಸಾಧನೆ ಮಾಡಿದ ವಿಶ್ವದ 6ನೇ ಆಟಗಾರ ಎಂಬ ಕೀರ್ತಿ ಸಂಪಾದಿಸಿ ವೆಸ್ಟ್‌ ಇಂಡೀಸ್‌ ದಂತಕತೆ ಇರುವಂತಹ ದಿಗ್ಗಜರ ಪಟ್ಟಿ ಸೇರಿದ್ದಾರೆ. ಇನ್ನು 7 ಮತ್ತು ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ 150fಕೂ ಹೆಚ್ಚು ರನ್‌ ಮತ್ತು ಅದೇ ಪಂದ್ಯದಲ್ಲಿ 5 ವಿಕೆಟ್‌ ಸಾಧನೆ ಮೆರೆದ ವಿಶ್ವದ ಎರಡನೇ ಆಟಗಾರ ಎನಿಸಿದ್ದಾರೆ. ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ನ ಡೆನಿಸ್‌ ಅಟ್ಕಿನ್ಸನ್‌, ಆಸ್ಟ್ರೇಲಿಯಾ ಎದುರು 1955ರಲ್ಲಿ ಈ ಸಾಧನೆ ಮೆರೆದಿದ್ದರು. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊನೆಯ ಬಾರಿ ಈ ಸಾಧನೆ ದಾಖಲಾಗಿರುವುದು 1973ರಲ್ಲಿ. ಪಾಕಿಸ್ತಾನದ ಮುಷ್ತಾಕ್‌ ಮೊಹಮ್ಮದ್, 1973ರಲ್ಲಿ ನ್ಯೂಜಿಲೆಂಡ್‌ ಎದುರು ಅಬ್ಬರಿಸಿದ್ದರು. ಇದಾಗ ಬಳಿಕ ಇದೀಗ ರವೀಂದ್ರ ಜಡೇಜ ಈ ವಿಶೇಷ ಸಾಧನೆ ಮೆರೆದಿದ್ದಾರೆ. ಟೆಸ್ಟ್‌ ಪಂದ್ಯ ಒಂದರಲ್ಲಿ 150+ ಸ್ಕೋರ್‌, ಮತ್ತು 5 ವಿಕೆಟ್‌ ಸಾಧನೆ ಮೆರೆದ ಆಟಗಾರರು ವಿನೂ ಮಂಕಡ್‌ (ಭಾರತ): 184 ರನ್‌ ಮತ್ತು 196ಕ್ಕೆ 5ವಿಕೆಟ್, 1952ರಲ್ಲಿ ಇಂಗ್ಲೆಂಡ್ ವಿರುದ್ಧ ಡೆನಿಸ್‌ ಅಟ್ಕಿನ್ಸನ್‌ (ವೆಸ್ಟ್‌ ಇಂಡೀಸ್‌): 219 ರನ್‌ ಮತ್ತು 56ಕ್ಕೆ 5 ವಿಕೆಟ್‌, 1955ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಲಿ ಉಮ್ರೀಗರ್‌ (ಭಾರತ): 172* ರನ್‌ ಮತ್ತು 107ಕ್ಕೆ 5, 1962ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಗ್ಯಾರಿ ಸೊಬರ್ಸ್‌ (ವೆಸ್ಟ್‌ ಇಂಡೀಸ್‌): 174 ರನ್‌ ಮತ್ತು 41ಕ್ಕೆ 5, 1966ರಲ್ಲಿ ಇಂಗ್ಲೆಂಡ್‌ ವಿರುದ್ಧ ಮುಷ್ತಾಕ್‌ ಮೊಹಮ್ಮದ್‌ (ಪಾಕಿಸ್ತಾನ): 201 ಮತ್ತು 49ಕ್ಕೆ 5, 1973ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ರವೀಂದ್ರ ಜಡೇಜಾ (ಭಾರತ): 175* ರನ್‌ ಮತ್ತು41ಕ್ಕೆ 5, 2022ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್‌ಗೆ ಜಯದ ಸಂಭ್ರಮ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡದ ನೂತನ ಕ್ಯಾಪ್ಟನ್‌ ಆಗಿರುವ ರೋಹಿತ್‌ ಶರ್ಮಾ, ಕಳೆದ ನವೆಂಬರ್‌ನಿಂದ ಈವರೆಗೆ ಸತತ 13 ಪಂದ್ಯಗಳನ್ನು ಗೆದ್ದಿದ್ದಾರೆ. ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯದೊಂದಿಗೆ ಭಾರತದ ಟೆಸ್ಟ್‌ ತಂಡದ ನಾಯಕನಾಗಿಯೂ ಶುಭಾರಂಭ ಮಾಡಿದ್ದಾರೆ. ಸರಣಿಯ ಎರಡನೇ ಪಂದ್ಯ ಬೆಂಗಳೂರಿನ ಎಂ. ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಹೊನಲು ಬೆಳಕಿನಡಿ ಪಿಂಕ್‌ ಬಾಲ್‌ನಲ್ಲಿ ಜರುಗಲಿದೆ. ರೋಹಿತ್‌ ನಾಯಕತ್ವಕ್ಕೆ ಮತ್ತೊಂದು ಸವಾಲು ಎದುರಾಗಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/adV9pCf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...