Petrol Diesel Price: ಎಲೆಕ್ಷನ್‌ ಮುಗಿತು ಪೆಟ್ರೋಲ್‌ ಬೆಲೆ ಏರಿಕೆಗೆ ರೆಡಿಯಾಗಿ! ಕನಿಷ್ಠ 15 ರೂ. ಹೆಚ್ಚಳ ಸಾಧ್ಯತೆ

ಹೊಸದಿಲ್ಲಿ: ಉತ್ತರ ಪ್ರದೇಶ ಸೇರಿ ಪಂಚ ರಾಜ್ಯಗಳ ಚುನಾವಣೆ ಬೆನ್ನಲ್ಲೇ ಪೆಟ್ರೋಲ್‌ ಮತ್ತು ಗಗನ ಮುಟ್ಟುವ ಸಾಧ್ಯತೆ ಇದೆ. ಕಚ್ಚಾ ತೈಲ ಬೆಲೆ 13 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಪ್ರತಿ ಬ್ಯಾರೆಲ್‌ಗೆ 140 ಡಾಲರ್‌ ಆಗಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆ ಕಳೆದ 4 ತಿಂಗಳಿಂದ ಪೆಟ್ರೋಲ್‌, ಡಿಸೇಲ್‌ ದರವನ್ನು ಸ್ಥಿರವಾಗಿಟ್ಟಿದ್ದ ತೈಲ ಕಂಪನಿಗಳು ದರ ಹೆಚ್ಚಿಸಲು ಮುಂದಾಗಿದೆ. ಪೆಟ್ರೋಲ್‌ ಮತ್ತು ಡಿಸೇಲ್‌ ದರ ಕನಿಷ್ಠ 15 ರೂ. ಹೆಚ್ಚುವ ಸಾಧ್ಯತೆ ಇದೆ. ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮಿಡಿಯೆಟ್‌ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ಭಾನುವಾರ ಸಂಜೆ 130.50 ಡಾಲರ್‌ಗೆ ಏರಿಕೆಯಾಗಿದೆ. ಇದು 2008ರ ಜುಲೈ ಬಳಿಕ ಅತ್ಯಧಿಕ ದರವಾಗಿದೆ. ಇದೆಲ್ಲದರ ಪರಿಣಾಮ ರೂಪಾಯಿ ಮೌಲ್ಯ ದಾಖಲೆಯ ಪ್ರಮಾಣದಲ್ಲಿ ಕುಸಿದಿದ್ದು, ಪ್ರತಿ ಡಾಲರ್‌ಗೆ ಕನಿಷ್ಠ 77.01ಕ್ಕೆ ಕುಸಿದಿದೆ. ಭಾರತವು ತನ್ನ ತೈಲ ಅಗತ್ಯದ ಸುಮಾರು ಶೇ.85ರಷ್ಟನ್ನು ಪಡೆಯಲು ಸಾಗರೋತ್ತರ ಮೂಲಗಳನ್ನು ಅವಲಂಬಿಸಿದೆ. ಇದರಿಂದ ಏಷ್ಯಾದಲ್ಲಿಯೇ ಅತಿ ಹೆಚ್ಚಿನ ತೈಲ ಬೆಲೆಗೆ ಕಾರಣವಾಗಿದೆ. ಈಗಾಗಲೇ ಈ ವರ್ಷ ತೈಲ ಬೆಲೆ ಶೇ.60ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಅದಲ್ಲದೇ ರೂಪಾಯಿ ಮೌಲ್ಯವು ಕುಸಿಯುತ್ತಿರುವುದರಿಂದ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದ್ದು, ಹಣದುಬ್ಬರವನ್ನು ಹೆಚ್ಚಾಗುವ ಸಾಧ್ಯತೆಯೂ ಕಾಣುತ್ತಿದೆ. 2017ರಿಂದ ಪ್ರತಿ ದಿನವೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಪೆಟ್ರೋಲ್‌ ಮತ್ತು ಡಿಸೇಲ್‌ ದರವನ್ನು ತೈಲ ಕಂಪನಿಗಳು ನಿಗದಿಪಡಿಸುತ್ತಿದ್ದವು. ಆದರೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ನವೆಂಬರ್ 4, 2021 ರಿಂದ ತೈಲ ದರವನ್ನು ಏರಿಸಿಲ್ಲ. ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ (ಪಿಪಿಎಸಿ) ಮಾಹಿತಿ ಪ್ರಕಾರ ಮಾರ್ಚ್‌ 1ರಂದು ಭಾರತವು ಖರೀದಿಸುವ ಕಚ್ಚಾ ತೈಲದ ಬ್ಯಾರೆಲ್‌ ದರ 111 ಡಾಲರ್‌ಗಿಂತಲೂ ಹೆಚ್ಚಿದೆ. ನಾಲ್ಕು ತಿಂಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕೊನೆ ಬಾರಿ ಏರಿಸಿದಾಗ ಭಾರತ ಖರೀದಿಸುತ್ತಿದ್ದ ಕಚ್ಚಾ ತೈಲದ ಪ್ರತಿ ಬ್ಯಾರೆಲ್ ಬೆಲೆ ಸರಾಸರಿ 81.5 ಡಾಲರ್‌ ಇತ್ತು. ಸೋಮವಾರ ಪಂಚರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಬೆಲೆ ಪರಿಷ್ಕರಿಸಲು ಅನುಮತಿ ನೀಡುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ತೈಲ ಕಂಪನಿಗಳು ಒಂದೇ ಬಾರಿ ದರ ಏರಿಸುವ ಸಾಧ್ಯತೆ ಕಡಿಮೆ. ಪ್ರತಿ ದಿನ ಲೀಟರ್‌ಗೆ 50 ಪೈಸೆ ಏರಿಸುವ ಸಾಧ್ಯತೆ ಇದೆ. ಕಳೆದ ತಿಂಗಳು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗಿನಿಂದಲೂ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನು ಹೇರಿರುವದರಿಂದ ತೈಲ ಬೆಲೆ ಹೆಚ್ಚಾಗಿದೆ. ಆದರೆ, ಪಾಶ್ಚಿಮಾತ್ಯ ದೇಶಗಳು ನಿರ್ಬಂಧಗಳೀಂದ ಇಂಧನ ವ್ಯಾಪಾರವನ್ನು ಹೊರಗಿಟ್ಟಿದ್ದವೆ. ಆದರೂ, ರಷ್ಯಾದ ತೈಲ ಮತ್ತು ಉತ್ಪನ್ನಗಳ ಮೇಲೆ ಸಂಪೂರ್ಣ ನಿರ್ಬಂಧದ ನಿರೀಕ್ಷೆಯು ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಎಲೆಕ್ಷನ್‌ ಬಳಿಕ ಬೆಲೆ ಏರಿಕೆಗೆ ತೈಲ ಕಂಪನಿಗಳು ಸಿದ್ಧವಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿಳುವುದು ಗ್ಯಾರಂಟಿ.


from India & World News in Kannada | VK Polls https://ift.tt/UwfNuHG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...