ಪ್ರೇಮವಿವಾಹವಾದ ಸಚಿವರ ಪುತ್ರಿಗೆ ತಂದೆಯಿಂದಲೇ ಜೀವ ಬೆದರಿಕೆ; ಪೊಲೀಸ್ ಆಯುಕ್ತರ ಮೊರೆ ಹೋದ ಲವ್​ಬರ್ಡ್ಸ್​

ಬೆಂಗಳೂರು: ಪ್ರೀತಿಸಿ ಮದುವೆಯಾಗಿರುವುದಕ್ಕೆ ತಂದೆಯಿಂದಲೇ ಜೀವ ಬೆದರಿಕೆಯಿದೆ ಎಂದು ಆರೋಪಿಸಿ ಭದ್ರತೆ ನೀಡುವಂತೆ ಪ್ರಭಾವಿ ಸಚಿವರೊಬ್ಬರ ಪುತ್ರಿ ನಗರ ಪೊಲೀಸ್‌ ಆಯುಕ್ತರ ಮೊರೆ ಹೋಗಿದ್ದಾರೆ. ಮುಜರಾಯಿ ಇಲಾಖೆ ಸಚಿವ ಶೇಖರ್‌ ಬಾಬು (Shekar Babu) ಪುತ್ರಿ ಜಯಕಲ್ಯಾಣಿ(Jaya Kalyani), ಆಯುಕ್ತರ ಬಳಿ ರಕ್ಷಣೆ ಕೋರಿದ್ದಾರೆ. ಸೋಮವಾರ ಪತಿಯ ಜತೆಗೆ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಭೇಟಿ ನೀಡಿ ರಕ್ಷಣೆ ನೀಡುವಂತೆ ಆಕೆ ಕೋರಿದ್ದಾರೆ. ಆದರೆ, ಪೊಲೀಸ್‌ ಆಯುಕ್ತರು ಸಭೆಯೊಂದರಲ್ಲಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ ಬರುವಂತೆ ಸೂಚಿಸಿದ್ದರು. ಇದೀಗ ಜಯಕಲ್ಯಾಣಿ ದಂಪತಿ ಮಂಗಳವಾರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರನ್ನು ಭೇಟಿ ಮಾಡಿ ರಕ್ಷಣೆ ನೀಡುವಂತೆ ಮನವಿ ಪತ್ರ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಏನಿದು ಪ್ರಕರಣ?: ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಶೇಖರ್‌ಬಾಬು ಪುತ್ರಿ ಜಯಕಲ್ಯಾಣಿ ಸತೀಶ್‌ ಕುಮಾರ್‌ ಎಂಬುವವರನ್ನು ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಜಯಕಲ್ಯಾಣಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹಿಂದೂಪರ ಮುಖಂಡ ಭರತ್‌ ಶೆಟ್ಟಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಿದ ಪ್ರೇಮಿಗಳು ಸಹಾಯ ಕೋರಿದ್ದರು. ಭರತ್‌ ಶೆಟ್ಟಿ ಸಹಾಯ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಹೀಗಾಗಿ ನಗರಕ್ಕೆ ಬಂದ ಪ್ರೇಮಿಗಳು ಮದುವೆಯಾಗಿದ್ದಾರೆ. ಜೀವ ಬೆದರಿಕೆ: ಪ್ರೇಮ ವಿವಾಹವಾಗಿರುವ ಕುರಿತು ಸುದ್ದಿಗಾರರ ಜತೆ ಮಾತನಾಡಿರುವ ಜಯಕಲ್ಯಾಣಿ ‘ಕೆಲ ತಿಂಗಳ ಹಿಂದೆ ಮದುವೆ ಮಾಡಿಕೊಳ್ಳಲು ಮುಂದಾದಾಗ ಸತೀಶ್‌ ಅವರನ್ನು ಅಕ್ರಮವಾಗಿ 2 ತಿಂಗಳ ಕಾಲ ತಮಿಳುನಾಡಿನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದರ ಹಿಂದೆ ನಮ್ಮ ತಂದೆಯ ಕೈವಾಡವಿದೆ. ನಾನು ಪ್ರೌಢ ವಯಸ್ಕಳಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ತಮಿಳುನಾಡಿಗೆ ಹೋದರೆ ನಮ್ಮನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ನಮಗೆ ರಕ್ಷಣೆ ನೀಡಬೇಕೆಂದು ಕರ್ನಾಟಕ ಪೊಲೀಸರಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಜಯಕಲ್ಯಾಣಿ ತಿಳಿಸಿದ್ದಾರೆ.


from India & World News in Kannada | VK Polls https://ift.tt/XqQVnix

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...