IND vs SL 1st Test: ಬೃಹತ್‌ ಮೊತ್ತದತ್ತ ಟೀಮ್‌ ಇಂಡಿಯಾ ಕಣ್ಣು!

ಮೊಹಾಲಿ: ಶುಕ್ರವಾರ ಆರಂಭವಾಗಿರುವ ಹಾಗೂ ನಡುವಣ ಮೊದಲನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟ ಶುರುವಾಗಲು ಕ್ಷಣಗಣನೆ ಶುರುವಾಗಿದೆ. ರಿಷಭ್‌ ಪಂತ್‌ ಅವರ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ 85 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 357 ರನ್‌ ಕಲೆ ಹಾಕಿತ್ತು. ರವೀಂದ್ರ ಜಡೇಜಾ(45*) ಹಾಗೂ ಆರ್‌ ಅಶ್ವಿನ್‌(10*) ಅವರು ಶನಿವಾರ ಎರಡನೇ ದಿನದಾಟವನ್ನು ಮುಂದುವರಿಸಲಿದ್ದಾರೆ. ಅಂದಹಾಗೆ ಭಾರತ ತಂಡ ಎರಡನೇ ದಿನದಾಟದಲ್ಲಿ ಬೃಹತ್‌ ಮೊತ್ತ ದಾಖಲಿಸುವ ಯೋಜನೆಯೊಂದಿಗೆ ಕಣಕ್ಕೆ ಇಳಿಯಲಿದೆ. ಬಹುಶಃ ಪ್ರಥಮ ಇನಿಂಗ್ಸ್‌ನಲ್ಲಿ ಟೀಮ್‌ ಇಂಡಿಯಾ 500ರ ಸನಿಹ ರನ್‌ ಗಳಿಸುವ ಸಾಧ್ಯತೆ ಇದೆ. ಈಗಾಗಲೇ 6 ವಿಕೆಟ್‌ ಕಳೆದುಕೊಂಡಿರುವ ಭಾರತ ತಂಡಕ್ಕೆ ಇನ್ನುಳಿದಿರುವುದು ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ. ರವೀಂದ್ರ ಜಡೇಜಾ ಹಾಗೂ ಆರ್‌ ಅಶ್ವಿನ್‌ ಬಿಟ್ಟರೆ ಜಯಂತ್‌ ಯಾದವ್‌ ಬ್ಯಾಟ್‌ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರ ಬಳಿಕ ಮೊಹಮ್ಮದ್‌ ಶಮಿ, ಜಸ್‌ಪ್ರಿತ್‌ ಕೊನೆಯ ಎರಡು ಕ್ರಮಾಂಕಗಳಲ್ಲಿ ಆಡಲಿದ್ದಾರೆ. ಮೊದಲ ದಿನ ಅಬ್ಬರಿಸಿದ್ದ ಪಂತ್‌: ಉತ್ತಮ ಆರಂಭದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಬಹಳಾ ಜವಾಬ್ದಾರಿಯುತ ಬ್ಯಾಟ್‌ ಮಾಡಿದ ರಿಷಭ್‌ ಪಂತ್‌ 97 ಎಸೆತಗಳಲ್ಲಿ 9 ಫೋರ್‌ ಮತ್ತು 4 ಸಿಕ್ಸರ್‌ಗಳೊಂದಿಗೆ 96 ರನ್‌ ಸಿಡಿಸಿದ್ದರು. ಆ ಮೂಲಕ ಶತಕ ಸಿಡಿಸುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ಆದರೆ ಸುರಂಗ ಲಕ್ಮಲ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಆ ಮೂಲಕ ನಿರಾಶೆಯಿಂದ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ್ದರು. ಶ್ರೇಯಸ್‌ ಅಯ್ಯರ್‌ ಜೊತೆ 53 ರನ್‌ಗಳ ಜೊತೆಯಾಟವಾಡಿದ್ದ ಪಂತ್, ನಂತರ ಸ್ಪೋಟಕ ಬ್ಯಾಟಿಂಗ್‌ಗೆ ಕೈಹಾಕಿ 6ನೇ ವಿಕೆಟ್‌ಗೆ ರವೀಂದ್ರ ಜಡೇಜಾ ಅವರೊಂದಿಗೆ 118 ಎಸೆತಗಳಲ್ಲಿ 104 ರನ್‌ಗಳ ಜೊತೆಯಾಟ ಕಟ್ಟಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಇದು ಮೊದಲನೇ ದಿನದಾಟದಲ್ಲಿ ಆಕರ್ಷಣೆಯಿಂದ ಕೂಡಿತ್ತು. ಪ್ರಥಮ ಇನಿಂಗ್ಸ್‌ ರೋಹಿತ್‌ ಶರ್ಮಾ(29), ಮಯಾಂಕ್‌ ಅಗರ್ವಾಲ್‌(33) ವಿರಾಟ್‌ ಕೊಹ್ಲಿ(45), ಹನುಮ ವಿಹಾರಿ(58) ಹಾಗೂ ಶ್ರೇಯಸ್‌ ಅಯ್ಯರ್ (27) ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಶ್ರೀಲಂಕಾ ಪರ ಲಸಿತ್‌ ಎಂಬುಲ್ದೇನಿಯ 107 ಕ್ಕೆ 2 ವಿಕೆಟ್‌ ಪಡೆದರು. ಸಂಕ್ಷಿಪ್ತ ಸ್ಕೋರ್‌ (ಮೊದಲನೇ ದಿನದಾಟದ ಅಂತ್ಯಕ್ಕೆ) ಭಾರತ: ಪ್ರಥಮ ಇನಿಂಗ್ಸ್‌ನಲ್ಲಿ 85 ಓವರ್‌ಗಳಿಗೆ 357/6 (ಮಯಾಂಕ್‌ ಅಗರ್ವಾಲ್‌ 33, 29, ಹನುಮ ವಿಹಾರಿ 58, ವಿರಾಟ್‌ ಕೊಹ್ಲಿ 45, ರಿಷಭ್ ಪಂತ್ 95, ರವೀಂದ್ರ ಜಡೇಜಾ 45*; ಲಸಿತ್‌ ಎಂಬುಲ್ದೇನಿಯ 107 ಕ್ಕೆ 2). ಎರಡೂ ತಂಡಗಳ ಪ್ಲೇಯಿಂಗ್‌ ಇಲೆವೆನ್‌ ಭಾರತ: ರೋಹಿತ್ ಶರ್ಮಾ(ನಾಯಕ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರಿತ್‌ ಬುಮ್ರಾ. ಶ್ರೀಲಂಕಾ: ದಿಮುತ್ ಕರುಣಾರತ್ನೆ(ನಾಯಕ), ಲಾಹಿರು ತಿರಿಮಾನ್ನೆ, ಪತುಮ್‌ ನಿಸಂಕ, ಚರಿತ್ ಅಸಲಂಕಾ, ಏಂಜಲೊ ಮ್ಯಾಥ್ಯೂಸ್, ಧನಂಜಯ ಡಿ'ಸಿಲ್ವಾ, ನಿರೋಶನ್ ಡಿಕ್ವೆಲ್ಲಾ(ವಿ.ಕೀ), ಸುರಂಗ ಲಕ್ಮಲ್, ವಿಶ್ವ ಫರ್ನಾಂಡೊ, ಲಸಿತ್ ಎಂಬುಲ್ದೇನಿಯ, ಲಾಹಿರು ಕುಮಾರ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/g1xOoAd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...