'ಅಂದಿನ ರಾತ್ರಿ ನಿದ್ರೆ ಮಾಡಿರಲಿಲ್ಲ' : ಗೆಳೆಯ ಶೇನ್‌ ವಾರ್ನ್‌ ಬಗ್ಗೆ ಅಕ್ರಮ್‌ ಭಾವುಕ!

ಹೊಸದಿಲ್ಲಿ: ಸ್ಪಿನ್‌ ದಂತಕತೆ ಶೇನ್ ವಾರ್ನ್‌ ವಿಧಿವಶರಾದ ಸುದ್ದಿ ಕೇಳಿ ಅಂದು ರಾತ್ರಿಯೀಡಿ ನಿದ್ರೆಯೇ ಮಾಡಿರಲಿಲ್ಲವೆಂದು ಮಾಜಿ ವೇಗಿ ತಿಳಿಸಿದ್ದಾರೆ. 52ರ ಪ್ರಾಯದ ಆಸೀಸ್‌ ಮಾಜಿ ಸ್ಪಿನ್ನರ್‌ ಕಳೆದ ಶನಿವಾರ ಥಾಯ್ಲೆಂಡ್‌ನಲ್ಲಿ ಕೊನೆಯುಸಿರೆಳೆದಿದ್ದರು. ಫಾಕ್ಸ್‌ ಕ್ರಿಕೆಟ್‌ ಜೊತೆ ಮಾತನಾಡಿದ ಅಕ್ರಮ್‌, "ಎಲ್ಲರಿಗೂ ಆದಂತೆ ನನಗೂ ಸುದ್ದಿ ಕೇಳಿ ಆಘಾತವಾಯಿತು. ಕಳೆದ 5-6 ವರ್ಷಗಳಿಂದ ನಾನು ಶೇನ್‌ ವಾರ್ನ್‌ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೆ. ಅವರು ನನಗೆ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಏಕೆಂದರೆ ನನ್ನ ಪತ್ನಿಯ ಕುಟುಂಬದ ಸ್ನೇಹಿತ ಅವರು. ವಾರ್ನ್‌ ಅವರ ಪೋಷಕರು ಹಾಗೂ ಅವರ ಮಕ್ಕಳಾದ ಜಾಕ್ಸನ್‌, ಬ್ರೂಕ್‌ ಮತ್ತು ಸಮ್ಮರ್‌ಗೆ ನನ್ನ ಹೃದಯ ಸದಾ ಮಿಡಿಯುತ್ತದೆ," ಎಂದರು. ಕಳೆದ 2015ರಲ್ಲಿ ಶೇನ್‌ವಾರ್ನ್‌ ಕೊನೆಯ ಬಾರಿ ಕ್ರಿಕೆಟ್‌ ಪಂದ್ಯವಾಡಿದ್ದರು. ಯುಎಸ್‌ಎನಲ್ಲಿ ನಡೆದಿದ್ದ ಶೇನ್‌ ವಾರಿಯರ್ಸ್ ಹಾಗೂ ಸಚಿನ್‌ ಬ್ಲಾಸ್ಟರ್ಸ್‌ ನಡುವಣ ಪ್ರದರ್ಶನ ಪಂದ್ಯಗಳಲ್ಲಿ ಹಲವು ಕ್ರಿಕೆಟ್ ದಿಗ್ಗಜರು ಕಣಕ್ಕೆ ಇಳಿದಿದ್ದರು. ಈ ಪಂದ್ಯಗಳಲ್ಲಿ ವಸೀಮ್‌ ಅಕ್ರಮ್‌, ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್‌ ಅವರ ತಂಡದಲ್ಲಿ ಆಡಿದ್ದರು. "ಕಳೆದ 4-5 ವರ್ಷಗಳ ಹಿಂದೆ ಶೇನ್‌ ವಾರ್ನ್‌ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರು 50 ವರ್ಷ ತುಂಬಿದ ಆಟಗಾರರನ್ನು ಸೇರಿಸಿಕೊಂಡು ಕ್ರಿಕೆಟ್‌ ಆಡಿದ್ದರು. ಯುಎಸ್‌ಎದಲ್ಲಿನ ನ್ಯೂಯಾರ್ಕ್, ಲಾ ಹಾಗೂ ಹೌಸ್ಟಿಂಗ್‌ನಲ್ಲಿ ನಡೆದಿದ್ದ ಮೂರು ಪಂದ್ಯಗಳಲ್ಲಿ ಎಲ್ಲಾ ನಿವೃತ್ತಿ ಆಟಗಾರರು ಭಾಗವಹಿಸಿದ್ದರು. ಪ್ರತಿಯೊಂದು ರಾತ್ರಿಯೂ ಅವರು(ಶೇನ್‌ ವಾರ್ನ್‌) ಭೋಜನಕ್ಕೆ ಹೊರಗಡೆ ಕರೆದುಕೊಂಡು ಹೋಗುತ್ತಿದ್ದರು. ಇವರಿಗೆ ಎಲ್ಲಿ ಏನು ಸಿಗುತ್ತದೆ ಎಂಬ ಎಲ್ಲಾ ಮಾಹಿತಿ ಗೊತ್ತಿತ್ತು," ಎಂದು ಭಾವುಕರಾದರು. ತಮ್ಮ ಕ್ರಿಕೆಟ್‌ ವೃತ್ತಿ ಜೀವನ ಮುಗಿದ ಬಳಿಕ ವಸೀಮ್‌ ಅಕ್ರಮ್‌ ಹಾಗೂ ಶೇನ್‌ ವಾರ್ನ್‌ ಇಬ್ಬರೂ ಜೊತೆಯಲ್ಲಿ ಸಾಕಷ್ಟು ಪಂದ್ಯಗಳಲ್ಲಿ ಕಾಮೆಂಟರಿ ಮಾಡಿದ್ದರು. ಆಸ್ಟ್ರೇಲಿಯಾ ಮಾಜಿ ಆಟಗಾರ ಕಾಮೆಂಟರಿ ವೇಳೆ ಸಾಕಷ್ಟು ಮ್ಯಾಜಿಕ್ ಮಾಡುತ್ತಿದ್ದರು ಎಂಬುದನ್ನು ಪಾಕ್‌ ಮಾಜಿ ನಾಯಕ ಸ್ಮರಿಸಿಕೊಂಡರು. ಅಂದಹಾಗೆ ಶೇನ್‌ ವಾರ್ನ್‌ ನನಗೆ ನಿಷ್ಠಾವಂತ ಸ್ನೇಹಿತರಾಗಿದ್ದರು ಎಂದಿದ್ದಾರೆ. "ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು 50 ರಿಂದ 60 ಓವರ್‌ ಬೌಲ್‌ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ನೀವು ಈ ರೀತಿ ಚಿಂತಿಸಲು ಸಾಧ್ಯವಿಲ್ಲ. ಬಾಲ್‌ ಆಫ್‌ ದಿ ಸೆಂಚುರಿ, ಕ್ರಿಕೆಟರ್‌ ಆಫ್‌ ದಿ ಸೆಂಚುರಿ ಹಾಗೂ ನನ್ನ ಅಭಿಪ್ರಾಯದಂತೆ ಪರ್ಸನ್‌ ಆಫ್‌ ದಿ ಸೆಂಚುರಿ ಕೂಡ ಅವರಾಗಿದ್ದಾರೆ. ಎಂಥಾ ಮನುಷ್ಯ. ಆಸ್ಟ್ರೇಲಿಯನ್ನರಿಗೆ ನನ್ನ ಹೃದಯ ಸದಾ ಮಿಡಿಯುತ್ತದೆ. ಕೇವಲ ಸ್ನೇಹಿತರು, ಸಹೋದ್ಯೋಗಿಗಳಲ್ಲ. ಇಡೀ ಕ್ರಿಕೆಟ್ ಪ್ರೇಮಿಗಳನ್ನು ಅವರು ಬಿಟ್ಟು ಹೋಗಿದ್ದಾರೆ," ಎಂದು ಅಕ್ರಮ್‌ ತಿಳಿಸಿದ್ದಾರೆ. "ಕ್ರಿಕೆಟ್ ಕಾಮೆಂಟರಿಗ ಮರಳುವುದಾದರೆ ಅವರು ಅತ್ಯಂತ ಭಾವೋದ್ರಿಕ್ತರಾಗಿದ್ದರು. ಅವರು ಯಾವಾಗಲೂ ಹೊಸ ಹೊಸ ಆಲೋಚನೆ ಹಾಗೂ ಉಪಾಯಗಳೊಂದಿಗೆ ಬರುತ್ತಿದ್ದರು. ಎಲ್ಲದಕ್ಕಿಂತ ಮಿಗಿಲಾಗಿ ಅವರು ತುಂಬಾ ವಿಭಿನ್ನರಾಗಿದ್ದರು. ಇವರ ಪಾಲಿಗೆ ಮುಖ್ಯ ಸಂಗತಿಯೇನೆಂದರೆ ಅವರು ಎಲ್ಲರಿಗೂ ನಿಷ್ಠಾವಂತ ಸ್ನೇಹತನಾಗಿ ಇರುತ್ತಿದ್ದರು. ಇದೀಗ ಅವರ ಬಗ್ಗೆ ಮಾತನಾಡುವುದು ಕೂಡ ತುಂಬಾ ಕಠಿಣವಾಗಿದೆ. ಅಗಲಿಕೆ ಸುದ್ದಿ ಕೇಳಿ ಅಂದಿನ ರಾತ್ರಿ ನನಗೆ ನಿದ್ರೆಯೇ ಬಂದಿರಲಿಲ್ಲ. ಇದರಿಂದ ನಾನು ಚೇತರಿಸಿಕೊಳ್ಳಲು ಇನ್ನಷ್ಟ ದಿನಗಳು ಬೇಕಾಗಬಹುದು," ಎಂದು ಪಾಕ್‌ ಮಾಜಿ ನಾಯಕ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/JEQetOD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...