'ಮಿಸ್‌ ಯೂ ವಾರ್ನಿ', ಶೇನ್‌ ವಾರ್ನ್‌ ಅಗಲಿಕೆಗೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು!

ಬೆಂಗಳೂರು: ಕ್ರಿಕೆಟ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ ಎಂದೇ ಕರೆಸಿಕೊಂಡಿರುವ ಆಸ್ಟ್ರೇಲಿಯಾದ ಮಾಜಿ ಲೆಗ್‌ ಸ್ಪಿನ್ನರ್‌ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. 52 ವರ್ಷದ ಮಾಜಿ ಕ್ರಿಕೆಟಿಗ ಥಾಯ್ಲೆಂಡ್‌ನ ಕ್ಹೊ ಸಮುಯ್ ದ್ವೀಪದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಶೇನ್‌ ವಾರ್ನ್‌ ಅಕಾಲಿಕ ನಿಧನ ವಾರ್ತೆ ಕ್ರಿಕೆಟ್‌ ಜಗತ್ತಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತು. ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಅಚ್ಚರಿ ಹೊರಹಾಕಿದ್ದು, ತಮ್ಮ ಸೋಷಿಯಲ್ ಮೀಡಿಯಾ ಗೋಡೆಗಳ ಮೇಲೆ ಭಾವನಾತ್ಮಕ ಸಂದೇಶಗಳನ್ನು ಬರೆದಿದ್ದಾರೆ. ಅದರಲ್ಲೂ ದೀರ್ಘಕಾಲದವರೆಗೆ ವಾರ್ನ್‌ ಎದುರು ಬದ್ಧ ಎದುರಾಳಿಯಾಗಿ ಆಡಿದ ಬ್ಯಾಟಿಂಗ್‌ ದಂತಕತೆ ಸಚಿನ್‌ ತಂಡೂಲ್ಕರ್‌, 'ವಿಲ್ ಮಿಸ್ ಯೂ ವಾರ್ನಿ', ಎಂದು ಕಂಬನಿ ಮಿಡಿದಿದ್ದಾರೆ. ಹೊರತಾಗಿ, ಭಾರತ ತಂಡದ ಮಾಜಿ ಮತ್ತು ಹಾಲಿ ಕ್ಯಾಪ್ಟನ್ಸ್‌ ವಿರಾಟ್ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ವಾರ್ನ್‌ ಜೊತೆಗೆ ತೆಗೆಸಿಕೊಂಡಿರುವ ಫೋಟೊ ಒಂದನ್ನು ಹಂಚಿಕೊಂಡಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌, ಇದೇ ವೇಳೆ ಭಾರತೀಯರ ಮೇಲೆ ವಾರ್ನ್‌ಗೆ ಇದ್ದ ಪ್ರೀತಿ ಮತ್ತು ಕಾಳಜಿ ಬಗ್ಗೆ ಬೆಳಕು ಚೆಲ್ಲಿದ್ದಾರೆ. "ಆಶ್ಚರ್ಯವಾಗಿದೆ, ಆಘಾತವಾಗಿದೆ ಮತ್ತು ವಿಚಿತ್ರ ಅನುಭವವಾಗಿದೆ. ವಿಲ್‌ ಮಿಸ್‌ ಯೂ ವಾರ್ನಿ.. ನೀನು ಜೊತೆಗಿದ್ದಾಗ ಮಂಕು ಆವರಿಸುವ ಮಾತೇ ಇಲ್ಲ. ಅಂಗಣದಲ್ಲಿ ನಮ್ಮ ಕಾದಾಟ ಮತ್ತು ಆಫ್‌ ದಿ ಫೀಲ್ಡ್‌ನಲ್ಲಿನ ಒಡನಾಟ ಸದಾ ಸಂಪತ್ಬರಿತವಾದದ್ದು. ಭಾರತಕ್ಕೆ ನಿಮ್ಮ ಹೃದಯದಲ್ಲಿ ಸದಾ ವಿಶೇಷ ಸ್ಥಾನವಿತ್ತು. ಭಾರತೀಯರು ಕೂಡ ನಿಮಗೆ ವಿಶೇಷ ಸ್ಥಾನ ಕೊಟ್ಟಿದ್ದಾರೆ. ಬಹಳಾ ಚಿಕ್ಕ ವಯಸ್ಸಿನಲ್ಲೇ ಅಗಲಿದ್ದೀರಿ," ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ. ಸೂಪರ್‌ ಸ್ಟಾರ್‌ ವಾರ್ನ್: ಸೆಹ್ವಾಗ್‌"ಕ್ರಿಕೆಟ್‌ ಲೋಕದ ದಿಗ್ಗಜ ಸ್ಪಿನ್ನರ್‌ಗಳಲ್ಲಿ ಒಬ್ಬರು. ಸ್ಪಿನ್‌ ಬೌಲಿಂಗ್‌ ಅಮೋಘವಾಗಿ ಕಾಣುವಂತೆ ಮಾಡಿದ ಆಟಗಾರ. ಸೂಪರ್‌ ಸ್ಟಾರ್‌ ಶೇನ್‌ ವಾರ್ನ್‌ ಇನ್ನಿಲ್ಲ. ಜೀವನ ನೀರ ಮೇಲಿನ ಗುಳ್ಳೆಯಂತೆ. ಆದರೆ, ಈ ಸುದ್ದಿಯನ್ನು ಅರಗಿಸಿಕೊಳ್ಳುವುದು ಬಹಳಾ ಕಷ್ಟವಾಗುತ್ತದೆ. ಅವರ ಕುಟುಂಬ, ಬಂಧು ಮಿತ್ರರು ಮತ್ತು ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ನನ್ನ ಹೃದಯ ಪೂರ್ವಕ ಸಾಂತ್ವಾನಗಳು," ಎಂದು ಸೆಹ್ವಾಗ್‌ ತಮ್ಮ ಟ್ವಿಟರ್‌ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ. ಮೊಹಾಲಿಯಲ್ಲಿ ಟೆಸ್ಟ್‌ ವೃತ್ತಿಬದುಕಿನ 100ನೇ ಪಂದ್ಯವನ್ನಾಡುತ್ತಿರುವ ಭಾರತ ತಂಡದ ಮಾಜಿ ನಾಯಕ ಕೂಡ ಟ್ವೀಟ್‌ ಮಾಡಿದ್ದಾರೆ. "ಜೀವನ ಹೇಗಿರುತ್ತದೆ ಎಂದು ಅಂದಾಜಿಸುವುದು ಬಹಳಾ ಕಷ್ಟ, ಅಷ್ಟೇ ಚಂಚಲ ಕೂಡ. ನಮ್ಮ ಕ್ರೀಡೆಯಲ್ಲಿನ ದಿಗ್ಗಜನ ಅಗಲಿಕೆ ಬಗ್ಗೆ ಹೇಗೆ ಮಾತನಾಡಬೇಕು ಎಂಬುದು ತಿಳಿಯುತ್ತಿಲ್ಲ. ಆಫ್‌ ದಿ ಫೀಲ್ಡ್‌ನಲ್ಲಿ ಅವರು ನನಗೆ ಬಹಳಾ ಹತ್ತಿರದವರು. ದಿಗ್ಗಜನ ಆತ್ಮಕ್ಕೆ ಶಂತಿ ಸಿಗಲಿ. ಕ್ರಿಕೆಟ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ. ಕ್ರಿಕೆಟ್‌ ಚೆಂಡನ್ನು ತಿರುಗಿಸಿದ ದಿಗ್ಗ," ಎಂದು ಕೊಹ್ಲಿ ಬರೆದಿದ್ದಾರೆ. ಬಹಳಾ ಬೇಸರವಾಗಿದೆ: ರೋಹಿತ್ "ನನಗೆ ಪದಗಳೇ ಬರುತ್ತಿಲ್ಲ. ಇದು ಬಹಳಾ ಬೇಸರದ ಸಂಗತಿ. ಅಪ್ಪಟ ದಿಗ್ಗಜ ಆಟಗಾರ. ನಮ್ಮ ಆಟದ ಚಾಂಪಿಯನ್‌ ಆಟಗಾರ ಇಂದು ಅಗಲಿದ್ದಾರೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಶೇನ್‌ ವಾರ್ನ್. ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ," ಎಂದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/6IW4iqP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...