70ರ ತಾತನಿಗೆ ತೀಟೆ ತೀರಿಸಿಕೊಳ್ಳುವ ಚಪಲ; ಹೆಣ್ಣಿನ ಮೋಹಕ್ಕಾಗಿ ಈ ಮುದುಕ ಮಾಡಿದ್ದೆಂಥಾ ಕೆಲಸ!

ಬೆಂಗಳೂರು: ಜೂಜಿಗಾಗಿ, ಮೋಜಿಗಾಗಿ ಕಳ್ಳತನಕ್ಕಿಳಿಯುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ 70 ವರ್ಷದ ಚಪಲ ಚೆನ್ನಿಗರಾಯ ಹೆಣ್ಣಿನ ಚಟ ತೀರಿಸಿಕೊಳ್ಳಲೆಂದೇ ಕಳ್ಳತನ ಮಾಡಿ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿಕ್ಕಮಗಳೂರು ಮೂಲದ ರಮೇಶ್‌ ಅಲಿಯಾಸ್‌ ತಾತ (70) ಬಂಧಿತ ಆರೋಪಿಯಾಗಿದ್ದು, ಈತನಿಂದ 8 ಲಕ್ಷ ರೂ. ಮೌಲ್ಯದ 162 ಗ್ರಾಂ ಚಿನ್ನಾಭರಣ, ಐದು ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಮೇಶ್‌ ಎರಡು ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ. ಆದರೆ, ಅದು ಸಾಲದೆಂಬಂತೆ ಮೂರನೇ ಮದುವೆಗೂ ಪ್ರಯತ್ನಿಸಿದ್ದನಂತೆ. ಇದಕ್ಕೆ ಮನೆಯವರು ಒಪ್ಪದಿದ್ದಾಗ, ಮನೆಯಲ್ಲಿದ್ದ ಹಣ, ಚಿನ್ನಾಭರಣವನ್ನು ಕದ್ದು ತನಗೆ ಸುಖ ನೀಡುವ ಮಹಿಳೆಯ ಮೈಮೇಲೆ ಹಾಕಿ ತನ್ನ ಚಟ ತೀರಿಸಿಕೊಳ್ಳುತ್ತಿದ್ದ. ಹಣ, ಚಿನ್ನಾಭರಣ ಖಾಲಿಯಾದ ಬಳಿಕ 12 ವರ್ಷಗಳ ಹಿಂದೆ ಮನೆ ತೊರೆದಿದ್ದ ಈತ, ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ. ಇದರಿಂದ ಬಂದ ಹಣ್ಣದಲ್ಲಿ ಚಟ ತೀರಿಸಿಕೊಳ್ಳುತ್ತಿದ್ದ. ಇದೇ ರೀತಿ ಕಳ್ಳತನ ಪ್ರಕರಣವೊಂದರಲ್ಲಿ ತಮಿಳುನಾಡಿನ ಪೊಲೀಸರು, ರಮೇಶ್‌ನನ್ನು ಬಂಧಿಸಿದ್ದರು. ಅಲ್ಲಿಂದ ಬಿಡುಗಡೆಯಾದ ಬಳಿಕ ಬೆಂಗಳೂರಿಗೆ ಬಂದು ತನ್ನ ಹಳೆ ಚಾಳಿ ಮುಂದುವರಿಸಿದ್ದ. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದ ಈತ ಮನೆಗಳ್ಳತನ ಮಾಡಿ ಶೋಕಿ ಮಾಡುತ್ತಿದ್ದ. ಕದ್ದ ಚಿನ್ನಾಭರಣ ಹಾಕುತ್ತಿದ್ದ:ತಾನು ಮನೆಗಳ್ಳತನ ಮಾಡುವಾಗ ಕದ್ದ ಚಿನ್ನಾಭರಣಗಳನ್ನು ತನ್ನ ತೀಟೆ ತೀರಿಸುತ್ತಿದ್ದ ಮಹಿಳೆಯ ಮೇಲೆ ಹಾಕಿ ಖುಷಿಪಟ್ಟು ಬರುತ್ತಿದ್ದ. ಹೀಗಾಗಿ, ಪ್ರತಿ ಬಾರಿಯೂ ಕಳ್ಳತನ ಮಾಡಿದಾಗಲೂ ಹೊಸ ಹೊಸ ಮಹಿಳೆಯನ್ನು ಹುಡುಕಿ ಹೋಗುತ್ತಿದ್ದ. ಹಾಗಾಗಿ, ಎಷ್ಟು ಜನರಿಗೆ ಚಿನ್ನಾಭರಣ ನೀಡಿದ್ದಾನೆ ಎಂದು ತಿಳಿಯುವುದೇ ದೊಡ್ಡ ಸವಾಲಾಗಿದೆ. ಈತನ ಮೊಬೈಲ್‌ ಸಂಪರ್ಕದಲ್ಲಿದ್ದ ಕೆಲವು ಮಹಿಳೆಯರನ್ನು ಪತ್ತೆಹಚ್ಚಿ 162 ಗ್ರಾಂ ಚಿನ್ನಾಭರಣ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದರು. ಬಂಧನ ಹೇಗೆ?ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಟಿಎಂ 1ನೇ ಹಂತದ ನಿಮ್ಹಾನ್ಸ್‌ ಲೇಔಟ್‌ನ ಮನೆಯೊಂದರ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಮಾಲೀಕರು ಎಸ್‌.ಜಿ. ಪಾಳ್ಯ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಪೊಲೀಸರು, ಅಕ್ಕಪಕ್ಕದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ತಾತನ ಕೈಚಳಕ ಪತ್ತೆಯಾಗಿದೆ.


from India & World News in Kannada | VK Polls https://ift.tt/lARuqNt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...