ಹೊಸದಿಲ್ಲಿ: ಕ್ರಿಕೆಟ್ ಸೀಸನ್ ಶುರುವಾಗಿದ್ದು, ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಲು ಸಾಲು ಕ್ರಿಕೆಟ್ ಸರಣಿಗಳು ನಡೆಯಲಿವೆ, ಕೂಡ ಈ ವರ್ಷ ಸಿಕ್ಕಾಪಟ್ಟೆ ಸರಣಿಗಳನ್ನು ಆಡುವ ಯೋಜನೆ ಹಾಕಿಕೊಂಡಿದ್ದು, ಈ ವರ್ಷದ ವೇಳಾಪಟ್ಟಿಯನ್ನು ಇದೀಗ ಪ್ರಕಟ ಮಾಡಿದೆ. ಐರ್ಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟ ಮಾಡಿರುವ 2022ರ ಸಾಲಿನ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಪ್ರಕಾರ, ಟಿ20 ಕ್ರಿಕೆಟ್ನಲ್ಲಿ ವಿಶ್ವದ ನೂತನ ನಂ.1 ತಂಡವಾಗಿರುವ ಜೂನ್ನಲ್ಲಿ ಐರ್ಲೆಂಡ್ ಪ್ರವಾಸ ಕೈಗೊಂಡು ಎರಡು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಆಡಲಿದೆ. ಅಂದಹಾಗೆ ಭಾರತ ತಂಡ ಜೂನ್ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದು ಈ ಮೊದಲೇ ಖಾತ್ರಿಯಾಗಿದೆ. ಕಳೆದ ವರ್ಷ ಮುಂದೂಡಲ್ಪಟ್ಟ ನಾಲ್ಕು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯವನ್ನು ಇದೇ ವರ್ಷ ಜೂನ್ನಲ್ಲಿ ಆಯೋಜಿಸಲಾಗುತ್ತಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ಎದುರು ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನೂ ಆಡಲಿದೆ. ಆದರೆ, ಇವೆಲ್ಲದಕ್ಕೂ ಮುನ್ನ ಐರ್ಲೆಂಡ್ ಸವಾಲು ಎದುರಿಸಲಿದೆ ಎಂಬುದು ಇದೀಗ ತಿಳಿದು ಬಂದಿದೆ. ಇದೇ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ಧತೆ ಕೈಗೊಳ್ಳುವ ಯೋಜನೆ ಹಾಕಿಕೊಂಡಿರುವ ಐರ್ಲೆಂಡ್ ತಂಡ, ವಿಶ್ವಕಪ್ಗೂ ಮುನ್ನ ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ತಂಡಗಳ ಎದುರು ದ್ವಿಪಕ್ಷೀಯ ಟಿ20 ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಭಾರತ-ಐರ್ಲೆಂಡ್ ಟಿ20 ಸರಣಿ ವೇಳಾಪಟ್ಟಿಜೂನ್ 26: ಮೊದಲ ಟಿ20 (ಮಲಾಹೈಡ್)ಜೂನ್ 28: ಎರಡನೇ ಟಿ20 (ಮಲಾಹೈಡ್) ಭಾರತ ಹೊರತಾಗಿ ನ್ಯೂಜಿಲೆಂಡ್ ಎದುರು 3 ಪಂದ್ಯಗಳ ಟಿ20 ಸರಣಿ, ದಕ್ಷಿಣ ಆಫ್ರಿಕಾ ಎದುರು 2 ಪಂದ್ಯಗಳ ಹಾಗೂ ಅಫಘಾನಿಸ್ತಾನ ಎದುರು 5 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಗಳನ್ನು ಆಡಲು ಕ್ರಿಕೆಟ್ ಐರ್ಲೆಂಡ್ ಯೋಜನೆ ರೂಪಿಸಿದೆ. ಭಾರತ ತಂಡ 2018ರ ಬಳಿಕ ಇದೇ ಮೊದಲ ಬಾರಿ ಐರ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದೆ. ಕಳೆದ ಬಾರಿಯ ಪ್ರವಾಸದಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಅಂದಹಾಗೆ ಟಿ20 ಕ್ರಿಕೆಟ್ನಲ್ಲಿ ಐರ್ಲೆಂಡ್ ಈವರೆಗೆ ಒಮ್ಮೆಯೂ ಭಾರತ ವಿರುದ್ಧ ಗೆದ್ದಿಲ್ಲ. ಮೂರು ಬಾರಿ ಮುಖಾಮುಖಿ ಆಗಿದ್ದು, ಬಲಿಷ್ಠ ಭಾರತದ ಎದುರು ಪ್ರತಿಬಾರಿ ಮಣ್ಣುಮುಕ್ಕಿದೆ. ಅಂದಹಾಗೆ ಭಾರತ ಮತ್ತು ಐರ್ಲೆಂಡ್ ತಂಡಗಳು ಮೊದಲ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಾಮುಖಿ ಆಗಿರುವುದು 1936ರಲ್ಲಿ ಎಂಬುದು ವಿಶೇಷ. ಅಂದಹಾಗೆ ಐರ್ಲೆಂಡ್ ತಂಡ ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದ್ದು, ಪ್ರಥಮಿಕ ಗ್ರೂಪ್ ಹಂತದಲ್ಲಿ ಸ್ಕಾಟ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಇರುವ ಎರಡನೇ ಗುಂಪಿನಲ್ಲಿ ಕಾದಾಟ ನಡೆಸಲಿದೆ. ಈ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್ 12 ಹಂತಕ್ಕೆ ತೇರ್ಗಡೆ ಆಗಲಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yDcPu8