ಗೃಹಜ್ಯೋತಿಯಡಿ ಶೇ.60 ರಷ್ಟು ಮನೆಗಳಿಗೆ ಮಾತ್ರ ಶೂನ್ಯ ಬಿಲ್‌! ಹೆಚ್ಚು ವಿದ್ಯುತ್‌ ಬಳಸಿದ 10 ಲಕ್ಷ ಮನೆಗಳಿಗೆ ನಿರಾಸೆ

​ಬೆಂಗಳೂರು: ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ 'ಗೃಹ ಜ್ಯೋತಿ' ಯೋಜನೆಯಡಿ ಆಗಸ್ಟ್‌ 1 ರಿಂದ 5ವರೆಗೂ 14.5 ಲಕ್ಷ ಮನೆಗಳಿಗೆ ಶೂನ್ಯ ಬಿಲ್‌ ನೀಡಲಾಗಿದೆ. 10 ಲಕ್ಷ ಮನೆಗಳು ನಿಗದಿಗಿಂತ ಹೆಚ್ಚು ಬಳಸಿದ ಕಾರಣ ಒಂದಿಷ್ಟು ಮೊತ್ತದ ಬಿಲ್‌ ಪಡೆದಿವೆ ಎಂದು ಇಂಧನ ಇಲಾಖೆಯು ಮಾಹಿತಿ ನೀಡಿದೆ. ​​ಆಗಸ್ಟ್ 1 ರಿಂದ ಇಂಧನ ಇಲಾಖೆಯು ಸರಿಸುಮಾರು 24.5 ಲಕ್ಷ ಮನೆಗಳಿಗೆ ವಿದ್ಯುತ್ ಬಿಲ್‌ಗಳನ್ನು ವಿತರಿಸಿದ್ದು, ಅದರಲ್ಲಿ 14.5 ಲಕ್ಷ ಒಟ್ಟು ಶೂನ್ಯ ಬಿಲ್‌ಗಳು. ಅಂದರೆ, ಇದು ಒಟ್ಟು ಬಿಲ್‌ಗಳ ಶೇ.60 ರಷ್ಟು. ಉಳಿದ ಶೇ. 40 ಗ್ರಾಹಕರು ತಮ್ಮ ಮಾಸಿಕ ವಿದ್ಯುತ್ ಬಿಲ್‌ಗಳಿಗೆ ಅಲ್ಪ ಮೊತ್ತವನ್ನು ಪಾವತಿಸಬೇಕಿದೆ. ಆದರೆ, ನಿಗದಿತ ಪ್ರಮಾಣದ ಉಚಿತ ಸೌಲಭ್ಯ ಪಡೆದ ಕಾರಣಕ್ಕೆ ಅವರು ಕೂಡಾ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/3Cb9fg5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...