
ಹೊಸದಿಲ್ಲಿ: ಉಕ್ರೇನ್‌ನಲ್ಲಿ ಇಂಟರ್ನ್‌ಶಿಪ್ ಮಾಡಲು ಸಾಧ್ಯವಾಗದೆ ಭಾರತಕ್ಕೆ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಶದಲ್ಲಿಯೇ ಇಂಟರ್ನ್‌ಶಿಪ್ ಕೈಗೊಳ್ಳುವ ದಿಸೆಯಲ್ಲಿ ರಾಷ್ಟ್ರೀಯ (ಎನ್‌ಎಂಸಿ)ಯು ಕೆಲ ನಿಯಮಗಳನ್ನು ಬದಲಾಯಿಸಿದೆ. ‘ಉಕ್ರೇನ್‌ನಲ್ಲಿ ಯುದ್ಧ ಹಾಗೂ ಕೊರೊನಾ ಬಿಕ್ಕಟ್ಟಿನಿಂದಾಗಿ 12 ತಿಂಗಳು ಇಂಟರ್ನ್‌ಶಿಪ್ ಮಾಡಲು ಸಾಧ್ಯವಾಗದ ವೈದ್ಯಕೀಯ ಪದವೀಧರರು ದೇಶದಲ್ಲಿಯೇ ತರಬೇತಿ ಪಡೆಯಬಹುದಾಗಿದೆ’ ಎಂದು ಎನ್‌ಎಂಸಿ ಅಧಿಸೂಚನೆ ಹೊರಡಿಸಿದೆ. ಇದಕ್ಕೂ ಮೊದಲು ದೇಶದ ವಿದ್ಯಾರ್ಥಿಗಳು ಯಾವ ದೇಶದ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪಡೆಯುತ್ತಾರೋ ಅದೇ ಸಂಸ್ಥೆಯಲ್ಲಿಇಂಟರ್ನ್‌ಶಿಪ್ ಮಾಡಬೇಕು ಎಂಬ ನಿಯಮವಿತ್ತು. ಈಗ ಅದನ್ನು ಬದಲಾಯಿಸಲಾಗಿದೆ. ಉಕ್ರೇನ್‌ನಿಂದ ಬಂದಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ನಿಯಮಗಳನ್ನೂ ಸಡಿಲಿಸಲಾಗಿದೆ ಎಂದು ಎನ್‌ಎಂಸಿ ತಿಳಿಸಿದೆ. ಉಕ್ರೇನ್‌ನಲ್ಲಿ ವೈದ್ಯಕೀಯ ಕೋರ್ಸ್‌ನ ಅಂತಿಮ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರಿಗೆ ಮಾತ್ರ ದೇಶದಲ್ಲಿ ಇಂಟರ್ನ್‌ಶಿಪ್ ಮಾಡಲು ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ಅವರು ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ದಾಖಲೆಯದ್ದೇ ಸಮಸ್ಯೆ Russia Ukraine Crisis: ಪುಟಿನ್ ಪಡೆಗಳ ದಾಳಿಯಿಂದ ನಲುಗಿ ಹೋಗಿರುವ ಉಕ್ರೇನ್‌ನಿಂದ ದೇಶದ ವಿದ್ಯಾರ್ಥಿಗಳು ಹಲವು ಸಂಕಷ್ಟ ಎದುರಿಸಿ ಬಂದಿದ್ದು, ಅವರ ಬಳಿ ಅಂತಿಮ ವರ್ಷದ ಪರೀಕ್ಷೆ ಉತ್ತೀರ್ಣರಾಗಿರುವ ಕುರಿತು ದಾಖಲೆ ಇಲ್ಲ ಎಂದು ತಿಳಿದುಬಂದಿದೆ. ಉಟ್ಟ ಬಟ್ಟೆಯಲ್ಲಿ, ಇರುವ ಜಾಗದಿಂದಲೇ ದೇಶಕ್ಕೆ ಮರಳಿದ ಕಾರಣ ಸಾವಿರಾರು ವಿದ್ಯಾರ್ಥಿಗಳ ಬಳಿ ದಾಖಲೆ ಇಲ್ಲ. ಅಲ್ಲದೆ, ಅವರು ಓದುತ್ತಿರುವ ಕಾಲೇಜು ಅಥವಾ ವಿವಿಗಳೇ ನಾಶವಾಗಿರುವ ಸಾಧ್ಯತೆ ಇದೆ. ಹಾಗಾಗಿ ದಾಖಲೆ ಸಮಸ್ಯೆ ಎದುರಾಗಿದೆ. ಅಲ್ಲದೆ, ದೇಶದಲ್ಲಿರುವುದೇ 85 ಸಾವಿರ ಎಂಬಿಬಿಎಸ್ ಸೀಟುಗಳಿದ್ದು, ಹೆಚ್ಚುವರಿಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಹೇಗೆ ಇಂಟರ್ನ್‌ಶಿಪ್ ಮಾಡಲು ಅವಕಾಶ ನೀಡಲಾಗುತ್ತದೆ ಎಂಬ ಪ್ರಶ್ನೆಗಳು ಸಹ ಉದ್ಭವಿಸಿವೆ. ಉಕ್ರೇನ್‌ನಲ್ಲಿ ದೇಶದ ಸುಮಾರು 18 ಸಾವಿರ ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನ ಮಾಡುತ್ತಿದ್ದಾರೆ.
from India & World News in Kannada | VK Polls https://ift.tt/PewGirl