ಮುಂಬಾಗೆ ಮಣಿದ ಗುಜರಾತ್; ಪ್ಯಾಂಥರ್ಸ್ ವಿರುದ್ಧ ವಾರಿಯರ್ಸ್‌ಗೆ ರೋಚಕ ಗೆಲುವು

ಜೈಪುರ: ಆಲ್‌ರೌಂಡ್ ಪ್ರದರ್ಶನ ತೋರಿದ ಮಾಜಿ ಚಾಂಪಿಯನ್ ತಂಡ ಪ್ರೊ ಕಬಡ್ಡಿ ಲೀಗ್‌ನ 7ನೇ ಆವೃತ್ತಿಯ 102ನೇ ಹಣಾಹಣಿಯಲ್ಲಿ ವಿರುದ್ಧ ಜಯ ಗಳಿಸಿ ಪೂರ್ಣ ಐದು ಅಂಕಗಳೊಂದಿಗೆ ತನ್ನ ಪ್ಲೇ ಆಫ್ ಸಾಧ್ಯತೆಯನ್ನು ಭದ್ರಪಡಿಸಿಕೊಳ್ಳುವತ್ತ ದಾಪುಗಾಲಿಟ್ಟಿತು. ಇಲ್ಲಿನ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮುಂಬಾ 31-25 ಅಂಕಗಳಿಂದ ಗುಜರಾತ್ ತಂಡಕ್ಕೆ ಸೋಲಿನ ಆಘಾತ ನೀಡಿತು. ಇದರೊಂದಿಗೆ ಮುಂಬಾ ತಂಡ ಒಟ್ಟಾರೆ 17 ಪಂದ್ಯಗಳಿಂದ 53 ಅಂಕಗಳನ್ನು ಕಲೆ ಹಾಕಿತು. 18 ಪಂದ್ಯಗಳನ್ನಾಡಿರುವ ಗುಜರಾತ್ 39 ಅಂಕ ಸಂಪಾದಿಲಷ್ಟೇ ಶಕ್ತಗೊಂಡಿದ್ದು, ಪ್ಲೇ ಆಫ್‌ನಿಂದ ಬಹುತೇಕ ಹೊರಬಿದ್ದಿದೆ. ಸೂಪರ್ 10 ಜತೆಗೆ ಒಟ್ಟು 11 ಅಂಕ ಗಳಿಸಿದ ಅಭಿಷೇಕ್ ಸಿಂಗ್ ಮುಂಬಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸುರೇಂದರ್ ಸಿಂಗ್, ಹರೇಂದ್ರ ಕುಮಾರ್ ತಲಾ ಮೂರು ಅಂಕಗಳ ಕೊಡುಗೆ ನೀಡಿದರು. ಗುಜರಾತ್ ಪರ ರೋಹಿತ್ ಗುಲಿಯಾ 9 ಅಂಕ ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರೆ, ಜಿಬಿ ಮೋರೆ 5 ಅಂಕಗಳ ಕಾಣಿಕೆ ನೀಡಿದರು. ಪ್ಯಾಂಥರ್ಸ್ ವಿರುದ್ದ ವಾರಿಯರ್ಸ್‌ಗೆ ಥ್ರಿಲ್ಲಿಂಗ್ ಗೆಲುವು... ದಿನದ ಎರಡನೇ ಪಂದ್ಯದಲ್ಲಿ ಕಂಗೊಳಿಸಿದ 41-40 ಅಂಕಗಳಿಂದ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಎರಡು ಬಾರಿ ಟ್ಯಾಕಲ್ ಪಾಯಿಂಟ್ಸ್ ಗಿಟ್ಟಿಸಿದ ಬೆಂಗಾಲ್ ಉಭಯ ಅವಧಿಗಳಲ್ಲೂ ಪಾರಮ್ಯ ಸಾಧಿಸಿತು. ವಾರಿಯರ್ಸ್ ಪರ ಮಣಿಂದರ್ ಸಿಂಗ್ 19 ಅಂಕ ಗಳಿಸಿ ತಂಡದ ಗೆಲುವಿನ ರೂವಾರಿಯೆನಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/30IbhIs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...