ಇಂದು ಮಂಡ್ಯದ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಬಿಜೆಪಿಗೆ ಅಧಿಕಾರ ಸಾಧ್ಯತೆ

ಮಂಡ್ಯ: ಮನ್ಮುಲ್ ಅಧ್ಯಕ್ಷ ಸ್ಥಾನಕ್ಕಿಂದು ಚುನಾವಣೆ ನಡೆಯಲಿದ್ದು, ಬೆಳಿಗ್ಗೆ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ ಮನ್ಮಲ್ ಕಚೇರಿಯಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿಯ ಎಸ್ಪಿ ಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಎಚ್ ಟಿ ಮಂಜು ಕಣ್ಣಿಟ್ಟಿದ್ದಾರೆ. 16 ಮತಗಳು ಅಧ್ಯಕ್ಷ ಚುನಾವಣೆಯಲ್ಲಿ ಚಲಾವಣೆಯಾಗಲಿವೆ. 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8, ಕಾಂಗ್ರೆಸ್ ಬೆಂಬಲಿತ 3 ಹಾಗೂ ಬಿಜೆಪಿ ಬೆಂಬಲಿತ ಒಬ್ಬರು ಆಯ್ಕೆಯಾಗಿದ್ದರು. ಆದರೆ, ಒಬ್ಬ ಸದಸ್ಯನ ಅನರ್ಹತೆ ಹಾಗೂ ಎಸ್ಪಿ ಸ್ವಾಮಿ ಬಿಜೆಪಿ ಸೇರ್ಪಡೆಯಿಂದ ಜೆಡಿಎಸ್ ಬಳಿ ಕೇವಲ 6 ಮತಗಳಿವೆ. ಇಂದು (ಸೋಮವಾರ) ಮಧ್ಯಾಹ್ನ ಮನ್ಮುಲ್ ಅಧ್ಯಕ್ಷ ಸ್ಥಾನ ಚುನಾವಣೆಯ ಫಲಿತಾಂಶ ಹೊರ ಲಭ್ಯವಾಗಲಿದ್ದು, ಬಹುತೇಕ ಬಿಜೆಪಿಗೆ ಮನ್ಮುಲ್ ಅಧಿಕಾರ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


from India & World News in Kannada | VK Polls https://ift.tt/31UQh2A

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...