ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ನಾಯಕ ಬಿರುಸಿನ ಅರ್ಧಶತಕದ (79*) ನೆರವಿನಿಂದ ತಂಡವು ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವನ್ನು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 1-1ರ ಅಂತರದಲ್ಲಿ ಸಮಬಲಗೊಳಿಸಿದೆ. ಈ ಮೊದಲು ಧರ್ಮಾಶಾಲಾದಲ್ಲಿ ನಡೆಯಬೇಕಾಗಿದ್ದ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದರೆ ಮೊಹಾಲಿಯ ದ್ವಿತೀಯ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ಬೆಂಬಲದೊಂದಿಗೆ ಭಾರತ ಏಳು ವಿಕೆಟ್ ಅಂತರದ ಅರ್ಹ ಗೆಲುವನ್ನು ದಾಖಲಿಸಿತ್ತು. ಇದರೊಂದಿಗೆ ದಕ್ಷಿಣ ಆಫ್ರಿಕಾ ನಾಯಕ ಕ್ವಿಂಟನ್ ಡಿ ಕಾಕ್ ವಿಶಿಷ್ಟ ದಾಖಲೆಯನ್ನು ಬರೆದಿದ್ದಾರೆ. ಭಾರತ ವಿರುದ್ದ ಸರಣಿಗೆ ಟ್ವೆಂಟಿ-20 ನಾಯಕರಾಗಿ ಆಯ್ಕೆಯಾಗಿದ್ದ ಕ್ವಿಂಟನ್ ಡಿ ಕಾಕ್ ತಮ್ಮ ಚೊಚ್ಚಲ ಸರಣಿಯಲ್ಲಿ ಸ್ಮರಣೀಯ ಸಾಧನೆಯನ್ನು ಮೆರೆದಿದ್ದಾರೆ. ಭಾರತದ ವಿರುದ್ದ ಟಿ20 ಸರಣಿಯ ಎರಡೂ ಪಂದ್ಯಗಳಲ್ಲೂ ಅರ್ಧಶತಕ ಸಾಧನೆ ಮಾಡಿದ್ದಾರೆ. ಈ ಮೊದಲು ನಡೆದ ಮೊಹಾಲಿ ಪಂದ್ಯದಲ್ಲೂ ಡಿ ಕಾಕ್ ಫಿಫ್ಟಿ ಬಾರಿಸಿದ್ದರು. ಇದರೊಂದಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಾಯಕರಾಗಿ ಆಡಿದ ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಸಾಧನೆ ಮಾಡಿದ ಹಿರಿಮೆಗೆ ಪಾತ್ರವಾಗಿದ್ದಾರೆ. ಟ್ವೆಂಟಿ-20 ತಂಡದ ನಾಯಕರಾಗಿ ಮೊದಲೆರಡು ಪಂದ್ಯಗಳಲ್ಲಿ ಫಿಫ್ಟಿ ಸಾಧನೆ:
- ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್)
- ನವನೀತ್ ಸಿಂಗ್ (ಕೆನೆಡಾ)
- ಕ್ವಿಂಟನ್ ಡಿ ಕಾಕ್ (ದ.ಆಫ್ರಿಕಾ)
- ಬ್ರೆಂಡನ್ ಮೆಕಲಮ್ 31
- ಮೊಹಮ್ಮದ್ ಶಹಜಾದ್/ಕ್ವಿಂಟನ್ ಡಿ ಕಾಕ್ 37
- ಕುಮಾರ ಸಂಗಕ್ಕರ 38
- ಜೋಸ್ ಬಟ್ಲರ್ 42
- ಫಾಫ್ ಡು ಪ್ಲೆಸಿಸ್: 85 (ಶ್ರೀಲಂಕಾ ವಿರುದ್ಧ 2013)
- ಫಾಫ್ ಡು ಪ್ಲೆಸಿಸ್: 79* (ಬಾಂಗ್ಲಾದೇಶ ವಿರುದ್ಧ 2015)
- ಕ್ವಿಂಟನ್ ಡಿ ಕಾಕ್: 79* (ಭಾರತ ವಿರುದ್ಧ 2019)
- ಎಬಿಡಿ ವಿಲಿಯರ್ಸ್: 69* (ಇಂಗ್ಲೆಂಡ್ ವಿರುದ್ದ 2014)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32XyjwD