ಟೀಂ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡ ಫ್ಯಾನ್ಸ್

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧದ ಭಾರತ ತಂಡದ ನಿಧಾನ ಗತಿಯ ಆಟ ವ್ಯಾಪಕ ಟೀಕೆಗೊಳಗಾಗಿದೆ. ರನ್‌ ಚೇಸಿಂಗ್‌ ವೇಳೆ ಭಾರತೀಯರು ನೈಜ ಆಟ ಪ್ರದರ್ಶಿಸಿಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರರು ಆರೋಪಿಸಿದರೆ, ಅಂತಿಮ ಓವರ್‌ಗಳಲ್ಲಿ ಧೋನಿ ಹಾಗೂ ಕೇದಾರ್‌ ಜಾಧವ್‌ ನಿಧಾನ ಗತಿಯ ಆಟವಾಡಿದ್ದನ್ನು ಭಾರತ ತಂಡದ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ನಿಧಾನ ಬ್ಯಾಟಿಂಗ್‌ಧೋನಿ ಹಾಗೂ ಕೇದಾರ್‌ ಜಾಧವ್‌ ಜೋಡಿ ಕೊನೆಯ 5 ಓವರ್‌ಗಳಲ್ಲಿ 39 ರನ್‌ ಪೇರಿಸಿರುವ ಬಗ್ಗೆಯೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಐದು ವಿಕೆಟ್‌ಗಳು ಉಳಿದಿರುವಾಗ ನಿಧಾನ ಆಟಕ್ಕೆ ಮೊರೆ ಹೋಗುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಧೋನಿ ತಪ್ಪಲ್ಲಪಂದ್ಯದ 11ನೇ ಓವರ್‌ನಲ್ಲಿ ಇಂಗ್ಲೆಂಡ್‌ ತಂಡದ ಜೇಸನ್‌ ರಾಯ್‌ ಗ್ಲವ್ಸ್‌ಗೆ ಚೆಂಡು ಸವರಿ ಹೋಗಿ ಧೋನಿ ಕೈ ಸೇರಿದ್ದರೂ, ಅವರಾರ‍ಯಕೆ ಡಿಆರ್‌ಎಸ್‌ ಮೊರೆ ಹೋಗಿಲ್ಲ ಎಂದು ಭಾರತದ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಪಂದ್ಯೋತ್ತರದ ಪತ್ರಿಕಾ ಗೋಷ್ಠಿಯಲ್ಲಿ ಇದಕ್ಕೆ ಉತ್ತರ ನೀಡಿದ ಟೀಮ್‌ ಇಂಡಿಯಾದ ಉಪನಾಯಕ ರೋಹಿತ್‌ ಶರ್ಮಾ ಡಿಆರ್‌ಎಸ್‌ ಮೊರೆ ಹೋಗುವುದು ಧೋನಿಯೊಬ್ಬರ ಕೆಲಸವಲ್ಲ. ಇಂಥ ಸಂದರ್ಭದಲ್ಲಿ ಚೆಂಡು ಬಡಿದಿರುವುದು ಕೆಲವರಿಗೆ ಗೊತ್ತಾದರೆ, ಕೆಲವರಿಗೆ ಗೊತ್ತಾಗಿರುವುದಿಲ್ಲ. ನಾಯಕ ಒತ್ತಡದಲ್ಲಿರುವ ಕಾರಣ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಯಿತು ಎಂದು ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/305yKno

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...