ಚೆಸ್ಟರ್ ಲಿ ಸ್ಟ್ರೀಟ್: ಪ್ರಸಕ್ತ ಸಾಲಿನ ವಿಶ್ವಕಪ್ ಸರಣಿಯಲ್ಲಿ ಮಂಗಳವಾರದ ಪಂದ್ಯದಲ್ಲಿ ವಿರುದ್ಧ 23 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಅವಿಷ್ಕ ಫರ್ನಾಂಡೊ (104) ಅವರ ಶತಕ ಮತ್ತು ಕುಸಾಲ್ ಪೆರೇರಾ (64) ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ ವಿಶ್ವಕಪ್ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 338 ರನ್ ಬೃಹತ್ ಮೊತ್ತದ ಗುರಿ ನೀಡಿತ್ತು. ಇಲ್ಲಿನ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 338 ರನ್ ಕಲೆಹಾಕಿತು. ಬಳಿಕ ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 315 ರನ್ ಗಳಿಸಿತ್ತು. ಸೆಮಿಫೈನಲ್ಸ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವ ಲಂಕಾ ತಂಡದ ಪರ ಮಿಂಚಿದ ಫರ್ನಾಂಡೊ, 103 ಎಸೆತಗಳಲ್ಲಿ 9 ಫೋರ್, 2 ಸಿಕ್ಸರ್ ಒಳಗೊಂಡ 104 ರನ್‌ಗಳ ಕೊಡುಗೆ ನೀಡಿದರೆ, ಪೆರೇರಾ 51 ಎಸೆತಗಳಲ್ಲಿ 64 ರನ್‌ಗಳ ಕಾಣಿಕೆ ನೀಡಿದರು. 59ಕ್ಕೆ 2 ವಿಕೆಟ್ ವಿಕೆಟ್ ಉರುಳಿಸಿದ ಜೇಸನ್ ಹೋಲ್ಡರ್ ವಿಂಡೀಸ್ ಪರ ಯಶಸ್ವಿ ಬೌಲರ್ ಎನಿಸಿದರು. ಸಂಕ್ಷಿಪ್ತ ಸ್ಕೋರ್ ಶ್ರೀಲಂಕಾ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 338 (ಅವಿಷ್ಕ ಫೆರ್ನಾಂಡೊ 104, ಕುಸಾಲ್ ಪೆರೇರಾ 64, ಲಾಹಿರು ತಿರಿಮನ್ನೆ 45*; ಜೇಸನ್ ಹೋಲ್ಡರ್ 59ಕ್ಕೆ 2). ಈಗಾಗಲೆ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ ತಂಡ ತನ್ನ 8ನೇ ಪಂದ್ಯದಲ್ಲಿ ರನ್ ಮಳೆಯನ್ನೇ ಹರಿಸಿತ್ತು. ಅವಿಷ್ಕಾ ಫೆರ್ನಾಂಡೊ ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ ಚೊಚ್ಚಲ ಶತಕದ ನೆರವಿನಿಂದ ಈಗಾಗಲೆ ವಿಶ್ವಕಪ್ ಸವಾಲು ಮುಗಿಸಿರುವ ಇನ್ನೊಂದು ಟೀಮ್ ವೆಸ್ಟ್‌ಇಂಡೀಸ್ ತಂಡದ ಗೆಲುವಿಗೆ ಬೃಹತ್ ಸವಾಲು ನೀಡಿತು. ಬ್ಯಾಟಿಂಗ್ ವಿಭಾಗದಲ್ಲೆ ಸತತ ವೈಫಲ್ಯ ಕಂಡಿದ್ದ ಲಂಕಾ ಅದೇ ವಿಭಾಗದಲ್ಲಿ ಅಬ್ಬರಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಬಾರಿ 300ಕ್ಕೂ ಅಧಿಕ ಮೊತ್ತ ಪೇರಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ಬಲಗೈ ಬ್ಯಾಟ್ಸ್‌ಮನ್ ಅವಿಷ್ಕಾ ಫೆರ್ನಾಂಡೋ (104ರನ್, 103ಎಸೆತ, 9ಬೌಂಡರಿ, 2ಸಿಕ್ಸರ್) ಬಾರಿಸಿದ ಆಕರ್ಷಕ ಶತಕದಿಂದ 6 ವಿಕೆಟ್‌ಗೆ 338ರನ್ ಪೇರಿಸಿತು. ಅಲ್ಲದೆ ಆರಂಭದಲ್ಲಿ ಕುಸಲ್ ಪೆರೇರಾ (64ರನ್, 51ಎಸೆತ, 8ಬೌಂಡರಿ) ಬಿರುಸಿನ ಅರ್ಧಶತಕ ಬಾರಿಸಿ ಲಂಕಾಗೆ ಉತ್ತಮ ಆರಂಭ ಒದಗಿಸಿದರು. ಶ್ರೀಲಂಕಾ ತಂಡ ವಿಶ್ವಕಪ್ ಇತಿಹಾಸದ 3ನೇ ಅತ್ಯಧಿಕ ಮೊತ್ತ ಪೇರಿಸಿತು. 1996ರ ವಿಶ್ವಕಪ್‌ನಲ್ಲಿ ಕೀನ್ಯಾ ವಿರುದ್ಧ ಪೇರಿಸಿದ 5 ವಿಕೆಟ್‌ಗೆ 398ರನ್ ಅತ್ಯಧಿಕ ಮೊತ್ತವಾಗಿದೆ. ಶ್ರೀಲಂಕಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್ ತಂಡದ ವಿರುದ್ಧ ಅತ್ಯಧಿಕ ಮೊತ್ತ ಪೇರಿಸಿತು. ಇಂಗ್ಲೆಂಡ್‌ನಲ್ಲೂ ಇದು ತನ್ನ ಅತ್ಯಧಿಕ ಮೊತ್ತವಾಗಿದೆ. ಸ್ಕೋರ್ ವಿವರ: ಶ್ರೀಲಂಕಾಇತರ - (b 4, lb 5, w 5, nb 5, Penalty 0) ಪ್ರಸ್ತುತ ರನ್ ರೇಟ್ - 6.76 ಬ್ಯಾಟಿಂಗ್ ಮಾಡದವರು: ಜೆಫ್ರಿ ವಾಂಡೇರ್ಸೆ, ಕಸುನ್ ರಜಿತಾ, ಲಸಿತ್ ಮಾಲಿಂಗ ವಿಕೆಟ್ ಪತನ: 93-1 (ದಿಮುತ್ ಕರುಣಾರತ್ನೆ 15.2), 104-2 (Kusal Perera 18.1), 189-3 (ಕುಸಾಲ್ ಮೆಂಡಿಸ್ 31.5), 247-4 (ಏಂಜೆಲೋ ಮ್ಯಾಥ್ಯೂಸ್ 39.1), 314-5 (ಅವಿಷ್ಕಾ ಫರ್ನಾಂಡೊ 47.2), 327-6 (ಇಸುರು ಉದಾನ 49). ವೆಸ್ಟ್ ಇಂಡೀಸ್ ಸ್ಕೋರ್ ವಿವರಇತರ - (b 3, lb 2, w 20, nb 2, Penalty 0) ಪ್ರಸ್ತುತ ರನ್ ರೇಟ್ - 6.30 ವಿಕೆಟ್ ಪತನ - 12-1 (Sunil Ambris 2.2), 22-2 (ಶಾಯ್ ಹೋಪ್ 5), 71-3 (ಕ್ರಿಸ್ ಗೇಲ್ 15.2), 84-4 (ಶಿಮ್ರಾನ್ ಹೆಟ್ಮಾಯೆರ್ 17.5), 145-5 (ಜೇಸನ್ ಹೋಲ್ಡರ್ 28.2), 199-6 (ಕಾರ್ಲೊಸ್ ಬ್ರಾಥ್‌ವೇಟ್ 34.3), 282-7 (ಫ್ಯಾಬಿಯನ್ ಆಲೆನ್ 44.1), 308-8 (ನಿಕೋಲಸ್ ಪೂರನ್ 47.1), 311-9 (ಒಶೇನ್ ಥಾಮಸ್ 48.3).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KT7DZ5