ಗ್ಲೋಬಲ್ ಟಿ20 ಟೂರ್ನಿಯಲ್ಲಿ ಯುವಿ, ಗೇಲ್ ಮೋಜು ಮಸ್ತಿ!
ಟೊರಂಟೊ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಸದ್ಯ ಟೂರ್ನಮೆಂಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಯುವಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ತಾರೆಗಳ ದೊಡ್ಡ ಪಡೆಯೇ ಕೆನೆಡಾದಲ್ಲಿ ನಡೆಯುತ್ತಿರುವ ಟ್ವೆಂಟಿ20 ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ವೆಸ್ಟ್‌ಇಂಡೀಸ್‌ನ ಕ್ರಿಕೆಟ್ ದೈತ್ಯ , ಆಂಡ್ರೆ ರೆಸಲ್, ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್, ಪಾಕಿಸ್ತಾನದ ಶಾಹೀದ್ ಆಫ್ರಿದಿ ಇವರಲ್ಲಿ ಪ್ರಮುಖವಾಗಿದ್ದಾರೆ. ಒಟ್ಟು ಆರು ತಂಡಗಳು ಭಾಗವಹಿಸುವ ಟೂರ್ನಿಯಲ್ಲಿ ಮೈದಾನದೆ ಒಳಗೆ ಮಾತ್ರವಲ್ಲದೆ ಹೊರಗಡೆಯು ಆಟಗಾರರ ಅಬ್ಬರ ನಡೆಯುತ್ತಿದೆ. ಪ್ರಸ್ತುತ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿರುವ ವೀಡಿಯೋದಲ್ಲಿ ಯುವಿ, ಗೇಲ್ ಸೇರಿದಂತೆ ಅನೇಕ ತಾರೆಗಳು ಮೋಜು, ಮಸ್ತಿಯಲ್ಲಿ ಭಾಗಿಯಾಗಿದ್ದಾರೆ. ನೀರಿನಲ್ಲಿ ಬೋಟ್ ವಿಹಾರಕ್ಕೆ ತೆರಳಿರುವ ಯುವಿ, ಗೇಲ್ ಸೇರಿದ ಆಟಗಾರರು ಪಾರ್ಟಿ ಮಾಡಿದ್ದಷ್ಟೇ ಅಲ್ಲದೆ ಪಂಜಾಬಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KdsDqA
ಹೆಚ್ಚು ಆಡಿದರೆ ಅಧಿಕ ಜ್ಞಾನವಿದೆ ಎಂಬುದು ತಪ್ಪು ಕಲ್ಪನೆ: ಗವಾಸ್ಕರ್ ಬಾಯಿ ಮುಚ್ಚಿಸಿದ ಪ್ರಸಾದ್
ಹೊಸದಿಲ್ಲಿ: ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಏಕಪಕ್ಷೀಯವಾಗಿ ಟೀಮ್ ಇಂಡಿಯಾ ನಾಯಕರನ್ನಾಗಿ ವಿರಾಟ್ ಕೊಹ್ಲಿ ಅವರನ್ನು ಮುಂದುವರಿಸಿರುವ ಆಯ್ಕೆ ಸಮಿತಿ ನಿರ್ಧಾರವನ್ನು ಮಾಜಿ ಬ್ಯಾಟಿಂಗ್ ದಿಗ್ಗಜ ಟೀಕಿಸಿದ್ದರು. ಇದಕ್ಕೆ ಕಟವಾಗಿಯೇ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ , ನೀವು ಹೆಚ್ಚು ಆಡಿದರೆ ಅಧಿಕ ಜ್ಞಾನವಿರುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಆಯ್ಕೆ ಸಮಿತಿ ಸದಸ್ಯರಿಗೆ ಅನುಭವದ ಕೊರತೆಯಿದೆ ಎಂಬುದರ ಬಗ್ಗೆ ಸಾಕಷ್ಟು ಟೀಕೆಗಳು ಎದ್ದಿದ್ದವು. ಆಯ್ಕೆ ಸಮಿತಿ ಎಲ್ಲ ಸದಸ್ಯರು ಸೇರಿಯೂ 13 ಟೆಸ್ಟ್ ಪಂದ್ಯಗಳ ಅನುಭವನ್ನಷ್ಟೇ ಹೊಂದಿದ್ದಾರೆ ಎಂಬುದು ಆರೋಪಕ್ಕೆ ಕಾರಣವಾಗಿತ್ತು. ಇದಕ್ಕೆ ಬೇರೆ ದೇಶಗಳನ್ನು ಉದಾಹರಣೆಯಾಗಿ ನೀಡಿರುವ ಪ್ರಸಾದ್, ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಬೇಡಿಕೆಗಳಿರುತ್ತದೆ ಎಂದಿದ್ದಾರೆ. ನಮ್ಮನ್ನು ವಿಫಲ ವ್ಯಕ್ತಿ ಎಂಬುದನ್ನು ಜರೆದಿರುವುದು ದುರದೃಷ್ಟಕರ. ದಿಗ್ಗಜ ಕ್ರಿಕೆಟಿಗರ ಬಗ್ಗೆ ಅತೀವ ಗೌರವವಿದೆ. ಅವರು ವ್ಯಕ್ತಪಡಿಸುವ ಪ್ರತಿಯೊಂದು ಸಲಹೆಗಳನ್ನು ಶ್ರದ್ಧೆಯಿಂದ ತೆಗೆದುಕೊಳ್ಳಲಾಗುತ್ತದೆ. ಆದರೆ ಇಂತಹ ಹೇಳಿಕೆಗಳು ಆಯ್ಕೆ ಸಮಿತಿಯನ್ನು ಮತ್ತಷ್ಟು ಬಲಿಷ್ಠ, ಬದ್ಧತೆ ಹಾಗೂ ಏಕತೆಯನ್ನುಂಟು ಮಾಡಿದೆ ಎಂದರು. ಆಯ್ಕೆ ಬಗ್ಗೆ ಕೋಚ್ ಹಾಗೂ ನಾಯಕರ ಜತೆಗೆ ಆರೋಗ್ಯಕರ ಚರ್ಚೆ ನಡೆಯುತ್ತದೆ. ನಮ್ಮೊಳಗೂ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಆದರೆ ಅವೆಲ್ಲವನ್ನು ನಾಲ್ಕು ಗೋಡೆಯೊಳಗೆ ಇಡುತ್ತೇವೆ. ಅಂತಿಮವಾಗಿ ದೇಶದ ಹಾಗೂ ತಂಡದ ಹಿತಕ್ಕಾಗಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2LTbOV2
IAF Mobile Game: ನೀವೂ ಅಭಿನಂದನ್ ಆಗಬಹುದು!
ಭಾರತೀಯ ವಾಯುಸೇನೆಯ ಬಿಡುಗಡೆಯಾಗಿದೆ. ಇದರ ಹೆಸರು "ಇಂಡಿಯನ್ ಏರ್ ಫೋರ್ಸ್: ಎ ಕಟ್ ಎಬೋವ್" ಅಂತ. ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಬಳಕೆದಾರರಿಗೆ ಇದು ಈಗ ಆಟಕ್ಕೆ ಲಭ್ಯವಿದೆ. ಭಾರತೀಯ ವಾಯುಪಡೆಯ ಬಗ್ಗೆ ಯುವಜನರಲ್ಲಿ ಡಾಗೃತಿ ಮೂಡಿಸಲು ಮತ್ತು ಅವರು ವಾಯುಪಡೆ ಸೇರುವಂತೆ ಪ್ರೋತ್ಸಾಹಿಸುವ ಸದುದ್ದೇಶದಿಂದ ಈ ಗೇಮ್ ಡೆವಲಪ್ ಮಾಡಲಾಗಿದೆ. ವಾಯು ಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅವರು ವಾಯು ಸೇನಾ ಸಾಮರ್ಥ್ಯವನ್ನು ಪ್ರಚುರಪಡಿಸುವ ಈ ಗೇಮ್ ಅನ್ನು ಬಿಡುಗಡೆ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಗೇಮಿಂಗ್ ಚಟುವಟಿಕೆಗಳಿಗೆ ಭಾರಿ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಪ್ರಯೋಜನ ಪಡೆದುಕೊಳ್ಳಲು ಮತ್ತು ಯುವಜನರನ್ನು ರಕ್ಷಣಾ ಪಡೆಗಳಿಗೆ ಸೇರುವಂತೆ ಮಾಡುವ ನಿಟ್ಟಿನಲ್ಲಿ ಈ ವಾಯು ಸಮರದ ಥೀಮ್ ಇರುವ : ಎಂಬ ಈ ಗೇಮ್ ರೂಪಿಸಲಾಗಿದೆ. ಭಾರತೀಯ ವಾಯುಪಡೆಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಫೈಟರ್ ಜೆಟ್‌ಗಳು ಮತ್ತು ವಿಮಾನಗಳ ಚಿತ್ರಣ ಈ ಗೇಮ್‌ನಲ್ಲಿದೆ. ಸುಖೋಯ್, ಮಿಗ್ 17 ಹೆಲಿಕಾಪ್ಟರ್‌ಗಳೊಂದಿಗೆ ಆಕಾಶದಲ್ಲೇ ಇಂಧನ ತುಂಬುವ ಟ್ಯಾಂಕರ್ ಕೂಡ ಇದರಲ್ಲಿದೆ. ಇದರ ಪ್ರಧಾನ ಆಕರ್ಷಣೆಯೆಂದರೆ, ಇದರಲ್ಲಿರುವ ಪಾತ್ರವು ವಿಂಗ್ ಕಮಾಂಡರ್ ವರ್ಧಮಾನ್ ಅವರನ್ನೇ ಹೋಲುತ್ತದೆ. ಮಿಗ್ 21 ಬೈಸನ್ ಫೈಟರ್ ಜೆಟ್ ವಿಮಾನವು ಪಾಕಿಸ್ತಾನಿ ನೆಲದಲ್ಲಿ ಬಿದ್ದ ಸಂದರ್ಭದಲ್ಲಿ ಅಭಿನಂದನ್ ಅವರು ಪಾಕಿಸ್ತಾನಿ ಪಡೆಗಳ ಸೆರೆಯಾಳಾಗಿ, ಬಳಿಕ ಬಿಡುಗಡೆ ಹೊಂದಿದ್ದರು. ಪಾಕಿಸ್ತಾನ ಮೂಲದ ಜೈಶೆ ಉಗ್ರಗಾಮಿಗಳು ಪುಲ್ವಾಮಾದಲ್ಲಿ ಫೆ.14ರಂದು ನಡೆಸಿದ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಉಗ್ರರನ್ನು ಸದೆಬಡಿಯುವ ಕಾರ್ಯಾಚರಣೆಗೆ ಮುಂದಾಗಿತ್ತು. ಈ ಗೇಮ್‌ನಲ್ಲಿರುವ ಪಾತ್ರದಲ್ಲಿ ಅಭಿನಂದನ್ ಅವರ ಟ್ರೇಡ್‌ಮಾರ್ಕ್ ಮೀಸೆಯೂ ಗೋಚರಿಸುತ್ತದೆ. ಸದ್ಯಕ್ಕೆ ಸಿಂಗಲ್ ಪ್ಲೇಯರ್ ಮೋಡ್‌ನಲ್ಲಿ ಮಾತ್ರ ಇದು ಲಭ್ಯವಿದೆ. ಮುಂದಿನ ಅಪ್‌ಡೇಟ್‌ಗಳಲ್ಲಿ ಮಲ್ಟಿ ಪ್ಲೇಯರ್ (ಹಲವು ಆಟಗಾರರು ಏಕಕಾಲದಲ್ಲಿ ಗುಂಪಿನಲ್ಲಿ ಆಡಲು) ಮೋಡ್ ಬಿಡುಗಡೆಗೊಳಿಸುವುದಾಗಿ ಭಾರತೀಯ ವಾಯು ಪಡೆ ಹೇಳಿದೆ.
from India & World News in Kannada | VK Polls https://ift.tt/2YBigSR
Thailand Open 2019: ಸೈನಾ, ಕಿಡಂಬಿ, ಕಶ್ಯಪ್ ಶುಭಾರಂಭ
ಹೊಸದಿಲ್ಲಿ: ಪ್ರತಿಷ್ಠಿತ ಥಾಯ್ಲೆಂಡ ಓಪನ್ 2019 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ , ಹಾಗೂ ಪರುಪ್ಪಳ್ಳಿ ಕಶ್ಯಪ್ ತಮ್ಮ ತಮ್ಮ ವೈಯಕ್ತಿಕ ವಿಭಾಗಳಲ್ಲಿ ಮೊದಲ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿಕೊಂಡಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೂಟದಲ್ಲಿ ಏಳನೇ ಶ್ರೇಯಾಂಕಿತೆಯಾಗಿರುವ ಸೈನಾ ನೆಹ್ವಾಲ್, ಸ್ಥಳೀಯ ಆಟಗಾರ್ತಿ ಪಿಟ್ಟಯಪಾರ್ನ್ ಚೈವಾನ್ ವಿರುದ್ಧ 21-17, 21-19ರ ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಪುರುಷ ಸಿಂಗಲ್ಸ್ ವಿಭಾಗದಲ್ಲಿ ಕೂಟದಲ್ಲಿ ಐದನೇ ಶ್ರೇಯಾಂಕಿತರಾಗಿರುವ ಕಿಡಂಬಿ ಶ್ರೀಕಾಂತ್, ಚೀನಾದ ರೆನ್ ಪೆಂಗ್ ಬೊ ವಿರುದ್ಧ 21-13, 17-21, 21-19ರ ಕಠಿಣ ಅಂತರದಲ್ಲಿ ಗೆದ್ದು ಬೀಗಿದರು. ಇನ್ನೊಂದೆಡೆ ಎಚ್‌ಎಸ್ ಪ್ರಣೋಯ್ ಅವರು ಹಾಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ 21-16, 22-20ರ ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ ಹಂತಕ್ಕೆ ಮುನ್ನಡೆದರು. ಹಾಗೆಯೇ ಪರುಪ್ಪಳ್ಳಿ ಕಶ್ಯಪ್ ಅವರು ಇಸ್ರೇಲ್‌ನ ಮಿಶ್ರಾ ಜಿಲ್‌ಬರ್ಮನ್ ವಿರುದ್ದ 18-21, 21-8, 21-14ರ ಕಠಿಣ ಅಂತರದಲ್ಲಿ ವಿಜಯ ದಾಖಲಿಸಿದರು. ಏತನ್ಮಧ್ಯೆ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಜಪಾನ್‌ನ ಕೆಂಟೊ ಮೊಮೊಟಾ ಕೂಟದಿಂದ ಹಿಂದೆ ಸರಿದಿರುವ ಹಿನ್ನಲೆಯಲ್ಲಿ ಭಾರತದ ಶುಭಾಂಕರ್ ದೇವ್ ವಾಕೋವರ್ ಪಡೆದಿದ್ದು, ಪ್ರಿ-ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿದ್ದಾರೆ. ಇತ್ತೀಚೆಗಷ್ಟೇ ಜಪಾನ್ ಓಪನ್‌ನಲ್ಲಿ ಕೆಂಟೊ ಚಾಂಪಿಯನ್ ಎನಿಸಿಕೊಂಡಿದ್ದರು. ಪ್ರಮುಖ ಫಲಿತಾಂಶಗಳು ಇಂತಿದೆ: ಗೆದ್ದವರು: ಮಹಿಳಾ ಸಿಂಗಲ್ಸ್: ಸೈನಾ ನೆಹ್ವಾಲ್ ಪುರುಷ ಸಿಂಗಲ್ಸ್: ಕಿಡಂಬಿ ಶ್ರೀಕಾಂತ್, ಎಚ್‌ಎಸ್ ಪ್ರಣೋಯ್, ಪರುಪ್ಪಳ್ಳಿ ಕಶ್ಯಪ್, ಶುಭಾಕರ್ ದೇವ್. ಮಿಶ್ರ ಡಬಲ್ಸ್: ಸಾತ್ವಿಕ್ ಸಾಯ್ ರಾಜ್ ರಾಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಪುರುಷ ಡಬಲ್ಸ್: ಪ್ರಣೋಯ್ ಜೆರ್ರಿ ಚೋಪ್ರಾ ಹಾಗೂ ರೆಡ್ಡಿ ಎನ್. ಸಿಕ್ಕಿ ಸೋತವರು: ಸೌರವ್ ವರ್ಮಾ, ಸಾಯ್ ಉತ್ತೇಜಿತ ರಾವ್ ಚುಕ್ಕ,
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Kfa99k
ಸ್ವಾತಂತ್ರ್ಯ ದಿನಾಚರಣೆ ವರೆಗೆ ಕಾಶ್ಮೀರದಲ್ಲಿ ಸೇವೆ ನಿರ್ವಹಿಸಲಿರುವ ಲೆ. ಕರ್ನಲ್ ಧೋನಿ
ಹೊಸದಿಲ್ಲಿ: ಕ್ರಿಕೆಟ್‌ಗೆ ಎರಡು ತಿಂಗಳುಗಳ ಬಿಡುವು ನೀಡಿರುವ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ , ದೇಶ ಸೇವೆಗೆ ಆದ್ಯತೆ ನೀಡಿದ್ದಾರೆ. ಪ್ರಾದೇಶಿಕ ಸೇನೆಯ (ಟೆರಿಟೋರಿಯಲ್ ಆರ್ಮಿ) ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ಗೌರವಾನ್ವಿತ ಹುದ್ದೆಯನ್ನು ಹೊಂದಿರುವ ಧೋನಿ, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ವರೆಗೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ವಿಕ್ಟರ್ ಫೋರ್ಸ್ ಭಾಗವಾಗಿ 106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್‌ನಲ್ಲಿ (ಪ್ಯಾರಾ) ಧೋನಿ 15 ದಿನಗಳ ಕರ್ತವ್ಯವನ್ನು ನಿಭಾಯಿಸಲಿದ್ದಾರೆ. 2011ನೇ ಇಸವಿಯಲ್ಲಿ ಭಾರತೀಯ ಸೇನೆಯಿಂದ ಧೋನಿ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪಡೆದಿದ್ದರು. ಅಲ್ಲದೆ ತಮ್ಮ ಹುದ್ದೆಯನ್ನು ಅತ್ಯಂತ ಗೌರವಯುತವಾಗಿಯೇ ಸ್ವೀಕರಿಸಿರುವ ಧೋನಿ, ತರಬೇತಿಯಲ್ಲೂ ಭಾಗವಹಿಸಿದ್ದರು. 2015ರಲ್ಲಿ ಆಗ್ರಾ ತರಬೇತಿ ಶಿಬಿರದಲ್ಲಿ ಭಾರತೀಯ ಸೇನೆಯ ವಿಮಾನಗಳಿಂದ ಐದು ಪ್ಯಾರಾಚೂಟ್ ಟ್ರೈನಿಂಗ್ ಜಂಪ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ನುರಿತ ಪ್ಯಾರಾಟ್ರೂಪರ್ ಎಂದೆನಿಸಿಕೊಂಡಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ke8UHd
ಅನುಷ್ಕಾ ಪ್ರಕಾರ ವಿರಾಟ್ ಕೊಹ್ಲಿ ಶಾಂತ ವ್ಯಕ್ತಿಯಂತೆ!
ಹೊಸದಿಲ್ಲಿ: ಮೈದಾನದಲ್ಲಿ ಟೀಮ್ ಇಂಡಿಯಾ ಕಪ್ತಾನ ಆಕ್ರಮಣಕಾರಿ ಶೈಲಿಯ ನಾಯಕತ್ವವನ್ನು ಮೈಗೂಡಿಸಿ ಬಂದಿರಬಹುದು. ಆದರೆ ತಾವು ಭೇಟಿ ಮಾಡಿರುವ ಪೈಕಿ ಅತ್ಯಂತ ಶಾಂತವಾದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಪತ್ನಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಅನೇಕ ಸಂದರ್ಶನಗಳಲ್ಲಿ ಪತ್ನಿ ಅನುಷ್ಕಾ ಬೀರಿರುವ ಪ್ರಭಾವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈಗ ಪತಿ ಬಗ್ಗೆ ಅನುಷ್ಕಾ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮೈದಾನದ ಹೊರಗಡೆ ವಿರಾಟ್ ಶಾಂತವಾಗಿರುತ್ತಾರೆ. ನೀವಿದನ್ನು ಬೇಕಾದರೆ ನನ್ನ ಸ್ನೇಹಿತರು ಅಥವಾ ತಂಡದ ಸದಸ್ಯರಲ್ಲಿ ಕೇಳಬಹುದು ಎಂದು ಅನುಷ್ಕಾ ಹೇಳಿದ್ದಾರೆ. ಟೀಮ್ ಇಂಡಿಯಾ ಪರ ಶ್ರೇಷ್ಠ ನಿರ್ವಹಣೆ ನೀಡಲು ಅತ್ಯಂತ ಭಾವೋದ್ವೇಗವನ್ನು ಹೊಂದಿರುವ ವಿರಾಟ್ ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವವನ್ನು ಹೊಂದಿರುತ್ತಾರೆ. ಆದರೆ ನಿಜ ಜೀವನದಲ್ಲಿ ಅಗ್ರೇಸಿವ್ ಅಲ್ಲ. ಅದು ಮೈದಾನದಲ್ಲಿರುವ ವರ್ತನೆ ಮಾತ್ರವಾಗಿದೆ. ನನಗೆ ಗೊತ್ತಿರುವ ಪೈಕಿ ಅತ್ಯಂತ ಶಾಂತ ವ್ಯಕ್ತಿಯಾಗಿದ್ದಾರೆ. ನಾನು ಅವರನ್ನು ನೋಡುತ್ತೇನೆ ಮತ್ತು ಇಷ್ಟಪಡುತ್ತೇನೆ. ವಾಹ್ ನೀವು ತುಂಬಾನೇ ಚಿಲ್ ಆಗಿದ್ದೀರಿ ಎಂದು ಅನುಷ್ಕಾ ಅಭಿಪ್ರಾಯಪಟ್ಟರು. ಅದೇ ಹೊತ್ತಿಗೆ ಪರಸ್ಪರ ಗೌರವದಿಂದ ಬಿಡುವಿಲ್ಲದ ಜೀವನದಲ್ಲೂ ಪ್ರೀತಿಯಿಂದ ಹೊಂದಿಕೊಂಡು ಮುಂದಕ್ಕೆ ಹೋಗಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32Uh0NM
ಅಂದು ಭಾರತ ಸೈನಿಕರ ವಿರುದ್ಧ ತೊಡೆ ತಟ್ಟಿದ ಹಸನ್; ಇದೀಗ ಭಾರತೀಯ ಹುಡುಗಿಯನ್ನೇ ವಿವಾಹಿತವಾಗುತ್ತಿದ್ದಾರಂತೆ!
ಹೊಸದಿಲ್ಲಿ: ಭಾರತ ಹಾಗೂ ನಡುವೆ ಗಡಿ ಹಂಚಿಕೆ ಪ್ರದೇಶವಾದ ವಾಘಾ ಗಡಿಯಲ್ಲಿ ಅಂದು ಭಾರತೀಯ ಸೈನಿಕರ ವಿರುದ್ಧ ತೊಡೆ ತಟ್ಟುವ ಮೂಲಕ ಪ್ರಚೋದನೆ ಮಾಡಿರುವ ಪಾಕ್ ವೇಗಿ ಇದೀಗ ಭಾರತೀಯ ಮೂಲದ ಹುಡುಗಿಯನ್ನೇ ವಿವಾಹಿತರಾಗಲು ಮುಂದಾಗಿದ್ದಾರೆ. ಪಾಕ್ ತಂಡದ ವೇಗದ ಬೌಲರ್ ಹಸನ್ ಅಲಿ, ಹರಿಯಾಣ ಮೂಲದ ಯುವತಿಯೊಬ್ಬಳನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ಹಸನ್ ಅಲಿ ಭಾರತದ ಮೂಲದ ಯುವತಿ ಶಮಿಯಾ ಅರ್ಝೂ ಎಂಬುವರನ್ನು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಪ್ರಕಟಿಸಿವೆ. ಇಂಗ್ಲೆಂಡ್‌ನಲ್ಲಿ ಎಂಜಿನಿಯರಿಂಗ್ ಓದಿರುವ ಶಮಿಯಾ, ದುಬೈನಲ್ಲಿ ಖಾಸಗಿ ಏರ್‌ಲೈನ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ವಾಘಾ ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸೈನಿಕರ ನಡುವಣ ಧ್ವಜ ಗೌರವ ಸಂದರ್ಭದಲ್ಲಿ ಪರೇಡ್ ಸ್ಥಳಕ್ಕೆ ಧಾವಿಸಿ ಬಂದಿದ್ದ , ಭಾರತೀಯ ಸೈನಿಕರನ್ನು ಪ್ರಚೋದಿಸುವ ರೀತಿಯಲ್ಲಿ ಸೈನಿಕರ ನಡೆಯನ್ನು ನಕಲು ಮಾಡಿದ್ದರು. ಇದು ಕ್ರಿಕೆಟ್ ಜಗತ್ತಿನಲ್ಲಿ ವ್ಯಾಪಕ ಟೀಕೆಗಳಿಗೆ ಕಾರಣವಾಗಿತ್ತು. ವೇಗಿ ಅಸನ್ ಅಲಿ ಪಾಕಿಸ್ತಾನ ತಂಡದ ಪರ ಒಂಬತ್ತು ಟೆಸ್ಟ್, 53 ಏಕದಿನ ಹಾಗೂ 30 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೆಲವು ವರ್ಷಗಳ ಹಿಂದೆ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾದಾಗ ದೊಡ್ಡ ಸುದ್ದಿಯಾಗಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KizLC0
ಸಿದ್ಧಾರ್ಥ ಸಾವು: ಕೇಂದ್ರದ ವಿರುದ್ಧ ಕಿಡಿ ಕಾರಿದ ಮಮತಾ
ಕೋಲ್ಕತ: ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ ಅವರ ದುರಂತ ಸಾವಿನ ಸುದ್ದಿ ತಿಳಿದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಸುದೀರ್ಘ ಪತ್ರವನ್ನು ಪ್ರಕಟಿಸಿರುವ ಅವರು, ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಅಕಾಲಿಕ ಹಾಗೂ ಅನಿರೀಕ್ಷಿತ ಮರಣದಿಂದ ತೀವ್ರ ಆಘಾತವಾಗಿದೆ. ಇದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ ಘಟನೆ ಎಂದು ಹೇಳಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಮತಾ ಅವರ ಬರಹದ ಸಂಪೂರ್ಣ ವಿವರ ಇಲ್ಲಿದೆ: * ತೆರಿಗೆ ಇಲಾಖೆಯೂ ಸೇರಿದಂತೆ ನಾನಾ ಸಂಸ್ಥೆಗಳ ಕಿರುಕುಳದಿಂದ ಅವರಿಗೆ ಉದ್ಯಮವನ್ನು ನೆಮ್ಮದಿಯಿಂದ ನಡೆಸಲು ಸಾಧ್ಯವಾಗಲಿಲ್ಲ ಎಂಬ ವಿಚಾರ ತಿಳಿದು ಅತ್ಯಂತ ನೋವಾಯಿತು. ಅಂತಹ ಕಿರುಕುಳವನ್ನು ತಡೆದುಕೊಳ್ಳುವ ಶಕ್ತಿ ಅವರಿಗಿರಲಿಲ್ಲ. * ಅವರು ಅತ್ಯಂತ ಹೆಚ್ಚು ಒತ್ತಡದಲ್ಲಿದ್ದರು ಎಂಬ ವಿಚಾರ ನಾನಾ ಮೂಲಗಳಿಂದ ತಿಳಿದುಬಂತು. ದೇಶದಲ್ಲಿ ಉದ್ಯಮಿಗಳಿಗೆ ಉಂಟಾಗುತ್ತಿರುವ ಕಿರುಕುಳಗಳನ್ನು ತಡೆಯಲು ಏನಾದರೂ ಮಾಡಲೇಬೇಕಿದೆ. * ರಾಜಕೀಯ ದ್ವೇಷ ಸಾಧನೆಗಾಗಿ ಕುದುರೆ ವ್ಯಾಪಾರ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಎಲ್ಲ ಪ್ರತಿಪಕ್ಷಗಳು ಆತಂಕಕ್ಕೆ ಈಡಾಗಿವೆ. * ಇನ್ನೊಂದೆಡೆ ದೇಶದ ಆರ್ಥಿಕ ಬೆಳವಣಿಗೆ ತೀವ್ರ ಕುಸಿದಿದೆ. 2018-19ರ ಕೊನೆಯ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ 5.8ಕ್ಕೆ ಕುಸಿದಿತ್ತು. ಇದು ಕಳೆದ 5 ವರ್ಷಗಳಲ್ಲೇ ಅತಿ ಕಡಿಮೆ. ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಎನ್ನುವಷ್ಟು ಹೆಚ್ಚಿದೆ. * ಇನ್ನೊಂದೆಡೆ ಕೇಂದ್ರ ಸರಕಾರ ಶಸ್ತ್ರಾಸ್ತ್ರ ಕಾರ್ಖಾನೆಯಿಂದ ತೊಡಗಿ ಬಿಎಸ್‌ಎನ್‌ಎಲ್ ವರೆಗೆ, ಏರ್ ಇಂಡಿಯಾದಿಂದ ರೈಲ್ವೇ ತನಕ ಎಲ್ಲ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದೆ. ಒಟ್ಟಾರೆ ಅರ್ಥ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಜನಸಾಮಾನ್ಯರು ತೊಂದರೆಗೆ ಈಡಾಗಿದ್ದಾರೆ.
* ಉದ್ಯಮ ಮತ್ತು ಕೃಷಿ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಯಲ್ಲೇ ನಮ್ಮ ದೇಶದ ಭವಿಷ್ಯ ಅಡಗಿದೆ. ಉದ್ಯಮ ವಲಯದ ಸ್ಥೈರ್ಯಗೆಡಿಸಿದರೆ, ಆರ್ಥಿಕ ಮತ್ತು ಉದ್ಯೋಗಾವಕಾಶಗಳ ಬೆಳವಣಿಗೆ ಇರುವುದಿಲ್ಲ. ಹೀಗಾಗಿ ಹೆಚ್ಚು ಹೆಚ್ಚು ಜನ ನಿರುದ್ಯೋಗಿಗಳಾಗುತ್ತಿದ್ದಾರೆ. * ಸರಕಾರಕ್ಕೆ ನನ್ನ ಮನವಿ ಇಷ್ಟೆ, ನೀವು ಅಧಿಕಾರಕ್ಕೆ ಬಂದ ಬಳಿಕ ಜನತೆ ನಿಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬರದಂತೆ ಶಾಂತಿಯುತವಾಗಿ ಬದುಕುವ ಮತ್ತು ನೆಮ್ಮದಿಯಿಂದ ಉದ್ಯಮ ನಡೆಸುವ ವಾತಾವರಣ ಸೃಷ್ಟಿಸಬೇಕು. ಅದಿಲ್ಲದಿದ್ದರೆ ನಮ್ಮ ದೇಶಕ್ಕೆ ಭವಿಷ್ಯವೇ ಇರುವುದಿಲ್ಲ. * ಸಿದ್ಧಾರ್ಥ ಅವರ ಕುಟುಂಬ ಸದಸ್ಯರಿಗೆ ನನ್ನ ಭಾವಪೂರ್ಣ ಸಾಂತ್ವನಗಳು. ಈ ದುರದೃಷ್ಟಕರ ಸುದ್ದಿ ತಿಳಿದು ನನಗೆ ನಿಜಕ್ಕೂ ನೋವಾಗಿದೆ. ನಿಮ್ಮೆಲ್ಲರ ನೋವಿನಲ್ಲಿ ನಾನೂ ಭಾಗಿಯಾಗಿರುತ್ತೇನೆ.
from India & World News in Kannada | VK Polls https://ift.tt/2K8R8oI
ಮತ್ತಷ್ಟು ವೇಗ ಹಾಗೂ ಪ್ರಬಲವಾಗಿ ತಿರುಗಿ ಬರುವೆ: ಪೃಥ್ವಿ ಶಾ
ಹೊಸದಿಲ್ಲಿ: ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ () ಎಂಟು ತಿಂಗಳುಗಳ ನಿಷೇಧ ಶಿಕ್ಷೆಯನ್ನು ಎದುರಿಸಿರುವ ಉದಯೋನ್ಮುಖ ಬ್ಯಾಟ್ಸ್‌ಮನ್ ಮತ್ತಷ್ಟು ವೇಗ ಹಾಗೂ ಪ್ರಬಲವಾಗಿ ತಿರುಗಿ ಬರುವ ಭರವಸೆ ನೀಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಾ, ಪ್ರಾಮಾಣಿಕವಾಗಿ ತಪ್ಪೊಪ್ಪಿಗೆ ನಡೆಸಿದ್ದಾರೆ. ತಮ್ಮ ತಿಳುವಳಿಕೆ ಇಲ್ಲದೆ ಅಶ್ರದ್ಧೆಯಿಂದ ಸಿರಪ್ ತೆಗೆದುಕೊಂಡಿದ್ದು ಬಿಸಿಸಿಐ ಉದ್ದೀಪನ ಮದ್ದು ನಿಯಮವನ್ನು ಉಲ್ಲಂಘಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಕ್ರಿಕೆಟ್ ತನ್ನ ಜೀವನವಾಗಿದ್ದು, ದೇಶವನ್ನು ಪ್ರತಿನಿಧಿಸುವುದು ನನ್ನ ಧ್ಯೇಯವಾಗಿದೆ ಎಂದು ಉಲ್ಲೇಖಿಸಿರುವ ಪೃಥ್ವಿ ಶಾ, ಬಿಸಿಸಿಐ ಸೇರಿದಂತೆ ಎಲ್ಲರ ಬೆಂಬಲಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಪೃಥ್ವಿ ಶಾ ಮೇಲೆ 2019ರ ಮಾರ್ಚ್ 16ರಿಂದ ಆರಂಭಗೊಂಡು ನವೆಂಬರ್ 15ರವರೆಗೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿಷೇಧ ಹೇರಲಾಗಿದೆ. ಫೆಬ್ರವರಿ 22ರಂದು ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಟೂರ್ನಿಯ ವೇಳೆ ಪೃಥ್ವಿ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಅವರ ದೇಹದಲ್ಲಿ 'ಟಬ್ರ್ಯುಟಲೈನ್' ಎನ್ನುವ ನಿಷೇಧಿತ ವಸ್ತು ಪತ್ತೆಯಾಗಿತ್ತು. (ಈ ರಾಸಾಯನಿಕ ಕೆಮ್ಮಿನ ಚಿಕಿತ್ಸೆಗೆ ಕೊಡುವ ಸಿರಪ್‌ಗಳಲ್ಲಿ ಸಾಮಾನ್ಯವಾಗಿರುತ್ತದೆ). ಬಳಿಕ ಪೃಥ್ವಿ ಶಾ ಅವರನ್ನು ವಿಚಾರಣೆ ನಡೆಸಿ, ಸೂಕ್ತ ಸಮಜಾಯಿಷಿಗಳನ್ನು ಪಡೆದ ಬಿಸಿಸಿಐ ನಿಷೇಧ ಶಿಕ್ಷೆ ಪ್ರಕಟಿಸಿದೆ. ಇದರಿಂದಾಗಿ ಪೃಥ್ವಿ, ತವರಿನಲ್ಲಿ ನಡೆಯುವ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಇವರ ಜತೆಗೆ ಅಕ್ಷಯ್ ದುಲ್ಲರ್‌ವಾರ್ ಹಾಗೂ ರಾಜಸ್ಥಾನದ ದಿವ್ಯ ಗಜರಾಜ್‌ಗೂ ನಿಷೇಧ ಹೇರಲಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YGBKJS
ಹೊಸ ಕೋಚ್ ಆಯ್ಕೆಯಲ್ಲಿ ವಿರಾಟ್ ಪ್ರಭಾವ ಬೀರಲು ಸಾಧ್ಯವಿಲ್ಲ!
ಕೋಲ್ಕತಾ: ಟೀಮ್ ಇಂಡಿಯಾ ಮುಖ ತರಬೇತುದಾರನಾಗಿ ಅವರೇ ಮುಂದುವರಿಯಬೇಕು ಎಂದು ಟೀಮ್ ಇಂಡಿಯಾ ನಾಯಕ ಅಭಿಪ್ರಾಯಪಟ್ಟಿದ್ದರು. ಆದರೆ ಭಾರತ ತಂಡದ ನಾಯಕನ ಹೇಳಿಕೆಯು ನೂತನ ಕೋಚ್ ಆಯ್ಕೆಯಲ್ಲಿ ಯಾವುದೇ ಪರಿಣಾಮ ಬೀರಲ್ಲ ಎಂದು ಕೋಚ್ ಆಯ್ಕೆ ತ್ರಿದಸ್ಯ ಸಮಿತಿಯಲ್ಲಿರುವ ಮಾಜಿ ಕೋಚ್ ಸ್ಪಷ್ಟಪಡಿಸಿದ್ದಾರೆ. ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಭಾರತ ನೂತನ ಕೋಚ್ ಆಯ್ಕೆ ಮಾಡಲಿದೆ. ಈ ತ್ರಿಸದಸ್ಯ ಸಮಿತಿಯಲ್ಲಿ ಅಂಶುಮನ್ ಕೂಡಾ ಸದಸ್ಯರಾಗಿದ್ದಾರೆ. ಆಯ್ದ ಅಭ್ಯರ್ಥಿಗಳನ್ನು ಕೋಚ್ ಹುದ್ದೆಗಾಗಿ ಆಯ್ಕೆ ಮಾಡುವಾಗ ತೆರೆದ ಮುಖದೊಂದಿಗೆ ಸಂದರ್ಶನವನ್ನು ನಡೆಸಲಿದ್ದೇವೆ ಎಂದು ಅಂಶುಮನ್ ತಿಳಿಸಿದ್ದಾರೆ. ಈ ಮೊದಲು ಕಳೆದೆರಡು ವರ್ಷಗಳಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ರವಿಶಾಸ್ತ್ರಿ ಎರಡನೇ ಬಾರಿಗೆ ಕೋಚ್ ಸ್ಥಾನದಲ್ಲಿ ಮುಂದುವರಿಯುವುದು ಬಹುತೇಕ ಖಚಿತ ಎಂದು ಅಂಶುಮನ್ ಹೇಳಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ನಾಯಕ ಏನೇ ಬೇಕಾದರೂ ಹೇಳಬಹುದು. ಇದು ನಮಗೆ ಬಾಧಕವಲ್ಲ. ನಾವೊಂದು ಸಮಿತಿಯನ್ನು ಹೊಂದಿದ್ದೇವೆ. ಅದು ನಾಯಕನ ವೈಯಕ್ತಿಕ ಅಭಿಮತವಾಗಿದ್ದು, ಬಿಸಿಸಿಐ ಗಮನಿಸಲಿದೆ. ನಾವಲ್ಲ ಎಂದರು. ಇವೆಲ್ಲವೂ ಬಿಸಿಸಿಐ ಮೇಲೆ ಅವಲಂಬಿತವಾಗಿದೆ. ಬಿಸಿಸಿಐ ಮಾರ್ಗನಿರ್ದೇಶನ ನೀಡಿದರೆ ನಾವದನ್ನು ಅನುಸರಿಸಲಿದ್ದೇವೆ. ಕೊಹ್ಲಿ ತಮಗೆ ಅನಿಸಿದ್ದನ್ನು ಹೇಳಿದ್ದಾರೆ. ಮಹಿಳಾ ಕೋಚ್ ಆಯ್ಕೆಯ ವೇಳೆಯೂ ನಾವು ಯಾರನ್ನೂ ಸಂಪರ್ಕಿಸಿಲ್ಲ ಎಂದರು. ನಾನು ಕೋಚ್ ಆಗಿದ್ದೆ. ಕಪಿಲ್ ಕೂಡಾ ಕೋಚ್ ಆಗಿದ್ದರು. ಅತ್ಯುತ್ತಮ ಮ್ಯಾನ್ ಮ್ಯಾನೇಜ್‌ಮೆಂಟ್, ರಣತಂತ್ರ ರೂಪಿಸುವುದು ಹಾಗೂ ತಾಂತ್ರಿಕ ಪರಿಣತಿ ಅತಿ ಮುಖ್ಯ ಎಂದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2SSoHQ5
ರಾಜಕೀಯಕ್ಕೆ ಗುಡ್ ಬೈ ಹೇಳಿದ ಜಯಲಲಿತಾ ಸೊಸೆ ದೀಪಾ ಜಯಕುಮಾರ್
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಸಾವಿನ ಬೆನ್ನಲ್ಲೇ 'ಎಂಜಿಆರ್ ಅಮ್ಮಾ ದೀಪಾ ಫೋರಂ' ಸ್ಥಾಪನೆಯೊಂದಿಗೆ ರಾಜಕೀಯಕ್ಕೆ ಕಾಲಿಟ್ಟ್ಟಿದ್ದ ಅವರ ಅಣ್ಣನ ಮಗಳು ಬಂದಷ್ಟೇ ವೇಗದಲ್ಲಿ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ತಾವು ರಾಜಕೀಯ ತೊರೆಯುತ್ತಿರುವುದಾಗಿ ಮಂಗಳವಾರ ಘೋಷಿಸಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಜಕೀಯದಲ್ಲಿ ತಮ್ಮ ಅನುಭವ "ನಿರಾಶಾದಾಯಕ" ಎಂದು ಹೇಳಿದ್ದು, ಮಹಿಳೆಯಾಗಿ ರಾಜಕಾರಣದಲ್ಲಿ ಉಳಿದುಕೊಳ್ಳುವುದು ತುಂಬಾ ಕಷ್ಟ ಎಂದರು. ಮತ್ತೆ ರಾಜಕೀಯಕ್ಕೆ ಮರಳುವ ಪ್ರಶ್ನೆಯೇ ಇಲ್ಲ. ಯಾವುದೇ ವೃತ್ತಿಯಲ್ಲಿ ಮಹಿಳೆಯರಿಗೆ ಸ್ಥಳ ಮತ್ತು ಸ್ವಾತಂತ್ರ್ಯ ಬೇಕು. ಒಬ್ಬ ಮಹಿಳೆಯಾದ ನನ್ನನ್ನು ಮನಬಂದಂತೆ ನಿಂದಿಸಲಾಗಿದೆ. ಸಾಂಪ್ರದಾಯಿಕ ಕುಟುಂಬದ ಹಿನ್ನೆಲೆಯ ನಾನು ಇದನ್ನೆಲ್ಲ ಇನ್ನು ಹೆಚ್ಚು ದಿನ ಸಹಿಸಲು ಸಾಧ್ಯವಿಲ್ಲ,ಅವರು ತಮ್ಮ ಮಿತಿಯನ್ನು ದಾಟಿದ್ದಾರೆ, ಎಂದವರು ಹೇಳಿದ್ದಾರೆ. ಅಸಭ್ಯವಾಗಿ ತಮ್ಮನ್ನು ಟ್ರೋಲ್ ಮಾಡುತ್ತಿರುವುದನ್ನು ಖಂಡಿಸಿರುವ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ. ಯಾವುದೇ ಅಧಿಕೃತ ಕಾರ್ಯಕ್ರಮ ನಡೆಯದಿದ್ದರೂ, ಮಾರ್ಚ್‌ನಲ್ಲಿ ಅವರು ತಮ್ಮ ''ಎಂಜಿಆರ್ ಅಮ್ಮ ದೀಪಾ ಫೋರಂ'', ನ್ನು ಎಐಎಡಿಎಂಕೆ ಜೊತೆ ವಿಲೀನಗೊಳಿಸಿದ್ದರು. "ಅನಿವಾರ್ಯವಾಗಿ ನಾನು ರಾಜಕೀಯಕ್ಕೆ ಬಂದೆ. ಜೀವನದಲ್ಲಿ ಮಾಡಲೇಬೇಕಾದ ಇದಕ್ಕಿಂತ ಉತ್ತಮ ಕೆಲಸಗಳಿವೆ. ಜನರ ಸೇವೆಗೆ ನನ್ನನ್ನು ನಾನು ತೊಡಗಿಸಿಕೊಳ್ಳಬೇಕಂದಿದ್ದೆ. ಆದರೆ ಆದರೆ ಮುಕ್ತವಾಗಿ ಕೆಲಸ ಮಾಡಲಾಗಲಿಲ್ಲ. ರಾಜಕೀಯದಲ್ಲಿ ಕೆಲವರು ಅಡ್ಡ ದಾರಿಯನ್ನು ತುಳಿಯುತ್ತಾರೆ. ಆದರೆ ನನಗದು ಒಪ್ಪಿತವಲ್ಲ. ನನ್ನ ಸಂಘಟನೆ ಬೇರೆಯದೇ ದಾರಿಯತ್ತ ಸಾಗಿತು, ಹಲವು ನನಗೆ ದ್ರೋಹವೆಸಗಿದರು ಎಂದು ದೀಪಾ ಅಳಲು ತೋಡಿಕೊಂಡಿದ್ದಾರೆ.
from India & World News in Kannada | VK Polls https://ift.tt/2YgOUgU
ಭ್ರಷ್ಟಾಚಾರ ಪ್ರಕರಣ: ಅಲಹಾಬಾದ್ ಹೈಕೋರ್ಟ್ ಜಡ್ಜ್ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಸಿಜೆಐ ಅನುಮತಿ
ಹೊಸದಿಲ್ಲಿ: ಅಭೂತಪೂರ್ವ ಬೆಳವಣಿಗೆಯೊಂದರಲ್ಲಿ, ಅಡಿಯಲ್ಲಿ ಅಲಹಾಬಾದ್ ಹೈಕೋರ್ಟಿನ ಹಾಲಿ ನ್ಯಾಯಾಧೀಶ ಎಸ್.ಎನ್ ಶುಕ್ಲಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಆದೇಶ ನೀಡಿದ್ದಾರೆ. ಖಾಸಗಿ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆಗೆ ನೆರವಾಗಿದ್ದರೆಂಬ ಆರೋಪ ಶುಕ್ಲಾ ವಿರುದ್ಧ ಕೇಳಿ ಬಂದಿತ್ತು. ಸುಮಾರು 30 ವರ್ಷಗಳ ಹಿಂದೆ- 1991ರ ಜುಲೈ 25ರಂದು- ಕೆ. ವೀರಾಸ್ವಾಮಿ ಪ್ರಕರಣದಲ್ಲಿ, ಸಿಜೆಐ ಅನುಮತಿ ಪಡೆಯದೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಹಾಲಿ ನ್ಯಾಯಾಧೀಶರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಂತೆ ತಡೆ ವಿಧಿಸಲಾಗಿತ್ತು. 1991ಕ್ಕೆ ಮೊದಲು ಯಾವ ತನಿಖಾ ಸಂಸ್ಥೆಯೂ ಹಾಲಿ ನ್ಯಾಯಾಧೀಶರ ಬಗ್ಗೆ ಯಾವುದೇ ತನಿಖೆ ನಡೆಸಿರಲಿಲ್ಲ. ಇದೀಗ ಸಿಜೆಐ ಅನುಮತಿ ನೀಡಿರುವುದರಿಂದ ಜಸ್ಟಿಸ್ ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಿದೆ. ಬಹುಶಃ ಶೀಘ್ರವೇ ಅವರ ಬಂಧನವೂ ಆಗಬಹುದೆಂದು ಕಾನೂನು ತಜ್ಞರು ಹೇಳುತ್ತಾರೆ. ಜಸ್ಟಿಸ್ ಶುಕ್ಲಾ ವಿರುದ್ಧ ತನಿಖೆಗೆ ಅನುಮತಿ ಕೋರಿ ಸಿಜೆಐ ಗೊಗೋಯ್ ಅವರಿಗೆ ಸಿಬಿಐ ಪತ್ರ ಬರೆದಿತ್ತು. 'ಮೇಲೆ ತಿಳಿಸಿದ ಕಾರಣಕ್ಕಾಗಿ ಅಲಹಾಬಾದ್ ಹೈಕೋರ್ಟಿನ ಜಸ್ಟಿಸ್ ನಾರಾಯಣ್ ಶುಕ್ಲಾ ಅವರ ವಿರುದ್ಧ ಪ್ರಾಥಮಿಕ ತನಿಖೆ ನಡೆಸಬೇಕಾಗಿದೆ. ಆಗಿನ ಸಿಜೆಐ ದೀಪಕ್ ಮಿಶ್ರಾ ಅವರ ಸೂಚನೆಯಂತೆ ಜಸ್ಟಿಸ್ ಶುಕ್ಲಾ ಅವರ ದುರ್ನಡತೆ ಬಗ್ಗೆ ತನಿಖೆಗೆ ಉದ್ದೇಶೀಸಲಾಗಿದೆ' ಎಂದು ಸಿಬಿಐ ಮುಖ್ಯ ನ್ಯಾಯಮೂರ್ತಿ ಗೊಗೋಯ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು. ಪೂರ್ಣ ಘಟನಾವಳಿಯ ಚಿತ್ರಣದೊಂದಿಗೆ ಪ್ರಾಥಮಿಕ ತನಿಖಾ ವರದಿಯ ಸಂಕ್ಷಿಪ್ತ ಮಾಹಿತಿಯನ್ನು ಸಿಜೆಐ ಅವರಿಗೆ ಒದಗಿಸಲಾಗಿತ್ತು. ಕಳೆದ ತಿಂಗಳು ಜಸ್ಟಿಸ್ ಶುಕ್ಲಾ ಅವರ ಪದಚ್ಯುತಿಗೆ ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸುವಂತೆ ಶಿಫಾರಸು ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಜೆಐ ಗೊಗೋಯ್ ಪತ್ರ ಬರೆದಿದ್ದರು. 19 ತಿಂಗಳ ಹಿಂದೆ ಸಿಜೆಐ ಮಿಶ್ರಾ ಅವರ ನೇತೃತ್ವದಲ್ಲಿ ನಡೆಸಿದ ಆಂತರಿಕ ನ್ಯಾಯಾಂಗ ತನಿಖೆಯಲ್ಲಿ ಜಸ್ಟಿಸ್ ಶುಕ್ಲಾ ವಿರುದ್ಧ ಗಂಭೀರ ಆರೋಪಗಳಿರುವುದು ಪತ್ತೆಯಾಗಿತ್ತು. ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುವ ಮುನ್ನ ಸಿಜೆಐ ಗೊಗೋಯ್, ತಮಗೆ ನ್ಯಾಯಾಂಗ ಕಾರ್ಯಗಳ ಮರು ಹಂಚಿಕೆ ಮಾಡುವಂತೆ ಕೋರಿ ಜಸ್ಟಿಸ್ ಶುಕ್ಲಾ ಬರೆದ ಪತ್ರವನ್ನು ತಿರಸ್ಕರಿಸಿದ್ದರು.
from India & World News in Kannada | VK Polls https://ift.tt/2YhrGaH
ಪ್ರೀತಿಸಿ ಮದುವೆಯಾದ; ರೈಲಿನಿಂದ ತಳ್ಳಿ, ತಾನು ಹಾರಿದ
ಬರೇಲಿ: ಆಕೆ ಆಸ್ಸಾಂನ ಹುಡುಗಿ. ಇನ್ನು 18ರ ಹರೆಯ. ಉತ್ತರ ಪ್ರದೇಶದ ಮುರಾಬಾದ್‌ನ ಹುಡುಗನನ್ನು ಪ್ರೀತಿಸಿದ್ದಳು. ಆತನ ಪ್ರೀತಿಯಯಲ್ಲಿ ಜಗವನ್ನೇ ಮರೆತಿದ್ದ ಆಕೆ ಒಂದು ದಿನ ಆತನಿಗಾಗಿ ಮನೆ ಬಿಟ್ಟು ಓಡಿ ಬಂದಳು. ಪಟ್ನಾದಲ್ಲಿ ಇಬ್ಬರು ಮದುವೆಯಾದರು. ಇನ್ನೇನಿದ್ದರೂ ತಾನು ಪ್ರೀತಿಸಿದವನ ಜತೆ ಬದುಕು ಎಂದುಕೊಂಡಿದ್ದ ಆಕೆಯ ಮುಂದೆ ದೊಡ್ಡ ದುರಂತ ಕಾದಿತ್ತು. ಹೊಂಗನಿಸಿನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆಕೆಯನ್ನಾತ ರೈಲಿನಿಂದ ಕೆಳಕ್ಕೆ ತಳ್ಳಿದ. ಅಷ್ಟೇ ಅಲ್ಲ ತಾನು ಕೂಡ ಹಾರಿದ. ರೈಲ್ವೆ ಹಳಿಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದಂಪತಿಯನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ಕರೆತಂದರು. ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತೆ ಬೇಬಿ (18) ನೀಡಿರುವ ಹೇಳಿಕೆ ಪ್ರಕಾರ ಆಕೆಯ ಪತಿ ಹಿರಾ (25) ಆಕೆಯನ್ನು ಕೆಳಕ್ಕೆ ತಳ್ಳಿ, ತಾನು ಕೂಡ ಜಿಗಿದಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಅಪರಿಚಿತ ಸಂಖ್ಯೆಯೊಂದರಿಂದ ನನಗೆ ಮೊಬೈಲ್ ಕರೆ ಬರುತ್ತಿತ್ತು. ನಿಧಾನಕ್ಕೆ ನಾವಿಬ್ಬರು ಹತ್ತಿರವಾಗಿ ಪ್ರೀತಿಸಲು ಆರಂಭಿಸಿದೆವು. ನಾವಿಬ್ಬರು ಮದುವೆಯಾಗಲು ನಿರ್ಧಿರಿಸಿದೆವು. ಜುಲೈ 26 ರಂದು ಆತ ನಾನಿದ್ದಲ್ಲಿಗೆ ಬಂದ. ನಾವವನ ಜತೆ ಓಡಿ ಹೋದೆ. ಮರುದಿನ ಪಟ್ನಾಕ್ಕೆ ಹೋಗಿ ಹೋಟೆಲೊಂದರಲ್ಲಿ ಉಳಿದುಕೊಂಡು ಜುಲೈ 29ರಂದು ಮದುವೆಯಾದೆವು. ಮಂಗಳವಾರ ಮೊರಾದಾಬಾದ್‌ಗೆ ಹೋಗುವ ರೈಲನ್ನು ಹತ್ತಿದ್ದೆವು. ಬರೇಲಿ ನಿಲ್ದಾಣವನ್ನು ದಾಟುತ್ತಿದ್ದಂತೆ ಆತ ನನ್ನನ್ನು ತಳ್ಳಿ , ತಾನು ಕೂಡ ಹಾರಿದ, ಎಂದಾಕೆ ಹೇಳಿದ್ದಾಳೆ. ಗಂಭೀರ ಸ್ಥಿತಿಯಲ್ಲಿರುವ ಹಿರಾ ಪೊಲೀಸ್ ವಿಚಾರಣೆಗೆ ಸಹಕಾರ ನೀಡುವ ಸ್ಥಿತಿಯಲ್ಲಿಲ್ಲ. ಬೇಬಿ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
from India & World News in Kannada | VK Polls https://ift.tt/313LMC7
54 ಎಸೆತಗಳಲ್ಲಿ 122 ರನ್ ಚಚ್ಚಿದ ದೈತ್ಯ ಗೇಲ್
ಟೊರಂಟೊ: ತಮ್ಮಲ್ಲಿ ಇನ್ನು ಕ್ರಿಕೆಟ್ ಬಾಕಿ ಉಳಿದಿದೆ ಎಂಬುದನ್ನು ಸಾಬೀತು ಮಾಡಿರುವ ವೆಸ್ಟ್‌ಇಂಡೀಸ್‌ನ ದೈತ್ಯ ಕೇವಲ 54 ಎಸೆತಗಳಲ್ಲಿ 122 ರನ್‌ಗಳನ್ನು ಚಚ್ಚುವ ಮೂಲಕ ಗಮನ ಸೆಳೆದಿದ್ದಾರೆ. 2019 ಟೂರ್ನಮೆಂಟ್‌ನಲ್ಲಿ ವ್ಯಾಂಕೋವರ್ ನೈಟ್ಸ್ ತಂಡವನ್ನು ಮುನ್ನಡೆಸುತ್ತಿರುವ 40ರ ಹರೆಯದ ಗೇಲ್ 54 ಎಸೆತಗಳಲ್ಲಿ ಅಜೇಯ 122 ರನ್ ಸೊರೆಗೈದರು. ಇದರಲ್ಲಿ 12 ಸಿಕ್ಸರ್ ಹಾಗೂ ಏಳು ಬೌಂಡರಿಗಳು ಸೇರಿದ್ದವು. ಈ ಮೂಲಕ ಮಾಂಟ್ರಿಯಲ್ ಟೈಗರ್ಸ್ ವಿರುದ್ದ ಮೂರು ವಿಕೆಟ್ ನಷ್ಟಕ್ಕೆ 276 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಇದು ಟ್ವೆಂಟಿ-20 ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮೊತ್ತವಾಗಿದೆ. ಆದರೆ ಬಳಿಕ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಇದರಿಂದಾಗಿ ವ್ಯಾಂಕೋವರ್ ತಂಡವು ಅರ್ಹ ಗೆಲುವಿನಿಂದ ವಂಚಿತವಾಯಿತು. ಇದು ಗೇಲ್ ಬ್ಯಾಟ್‌ನಿಂದ ಸಿಡಿದ 22ನೇ ಟಿ20 ಶತಕವಾಗಿದೆ. ಈ ಮೂಲಕ ಭಾರತ ವಿರುದ್ಧ ಏಕದಿನ ಸರಣಿಗೂ ಮುನ್ನ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZmD01M
ಭಾರತದ ವಿಂಡೀಸ್ ಪ್ರವಾಸ; ಸಂಪೂರ್ಣ ವಿವರ ಇಲ್ಲಿದೆ
ಹೊಸದಿಲ್ಲಿ: ಏಕದಿನ ವಿಶ್ವಕಪ್ ಅಭಿಯಾನದ ಬಳಿಕ ಇದೀಗ ಒಂದು ತಿಂಗಳ ಪರ್ಯಂತ ಪ್ರವಾಸವನ್ನು ಕೈಗೊಂಡಿದೆ. ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನ್ನಪ್ಪಿರುವ ಭಾರತ ತಂಡವೀಗ ಪುನರ್ ರಚನೆಯ ಹಂತದಲ್ಲಿದೆ. ವಿಂಡೀಸ್ ಸರಣಿಯಲ್ಲಿ ಭಾರತ ತಂಡವು ತಲಾ ಮೂರು ಟ್ವೆಂಟಿ-20, ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ. ಎಲ್ಲ ಮೂರು ಪ್ರಕಾರದ ಸರಣಿಗಳಿಗೂ ಭಾರತ ತಂಡವನ್ನು ಘೋಷಿಸಲಾಗಿದೆ. ಅತ್ತ ಏಕದಿನ ಹಾಗೂ ಟ್ವೆಂಟಿ-20 ಸರಣಿಗಾಗಿ ಆತಿಥೇಯ ವಿಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಟ್ವೆಂಟಿ-20 ರ‍್ಯಾಂಕಿಂಗ್ ಇಂತಿದೆ: ಭಾರತ: 05 ವೆಸ್ಟ್‌ಇಂಡೀಸ್: 09 ಏಕದಿನ ರ‍್ಯಾಂಕಿಂಗ್ ಇಂತಿದೆ: ಭಾರತ: 02 ವೆಸ್ಟ್‌ಇಂಡೀಸ್: 09 ಟೆಸ್ಟ್ ರ‍್ಯಾಂಕಿಂಗ್ ಇಂತಿದೆ: ಭಾರತ: 01 ವೆಸ್ಟ್‌ಇಂಡೀಸ್: 08 ಟ್ವೆಂಟಿ-20 ಸರಣಿಗಾಗಿನ ಭಾರತ ತಂಡ ಇಂತಿದೆ: (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೃುಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ರಾಹುರ್ ಚಹರ್, ಭುವನೇಶ್ವರ್ ಕುಮಾರ್, ಕೆ ಖಲೀಲ್ ಅಹ್ಮದ್, ದೀಪಕ್ ಚಹರ್ ಮತ್ತು ನವದೀಪ್ ಸೈನಿ. ಟ್ವೆಂಟಿ-20 ಸರಣಿಗಾಗಿನ ವೆಸ್ಟ್‌ಇಂಡೀಸ್ ತಂಡ ಇಂತಿದೆ: ಕಾರ್ಲೊಸ್ ಬ್ರಾತ್‌ವೇಟ್ (ನಾಯಕ), ಎವಿನ್ ಲೆವಿಸ್, ಶಿಮ್ರಾನ್ ಹೆಟ್ಮಾಯೆರ್, ರೊವ್‌ಮ್ಯಾನ್ ಪೊವೆಲ್, ಜಾನ್ ಕ್ಯಾಂಪ್‌ಬೆಲ್, ಕೀರಾನ್ ಪೊಲಾರ್ಡ್, ಕೀಮೊ ಪೌಲ್, ಆಂಡ್ರೆ ರಸೆಲ್, ಖಾರಿ ಪಿಯರ್ರಿ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಂಥನ್ ಬ್ರಾಂಬ್ಲ್, ಸುನಿಲ್ ನರೈನ್, ಶೆಲ್ಡನ್ ಕಾಟ್ರೆಲ್ ಮತ್ತು ಒಶಾನೆ ಥಾಮಸ್. ಏಕದಿನ ಸರಣಿಗಾಗಿನ ಭಾರತ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೇದರ್ ಜಾಧವ್, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಕುಲ್‌ದೀಪ್ಯ ಯಾದವ್, ಯುಜ್ವೇಂದ್ರ ಚಹಲ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಕೆ ಖಲೀಲ್ ಅಹ್ಮದ್ ಮತ್ತು ನವದೀಪ್ ಸೈನಿ. ಏಕದಿನ ಸರಣಿಗಾಗಿನ ವೆಸ್ಟ್‌ಇಂಡೀಸ್ ತಂಡ ಇಂತಿದೆ: ಜೇಸನ್ ಹೋಲ್ಡರ್ (ನಾಯಕ), ಎವಿನ್ ಲೆವಿಸ್, ಶಿಮ್ರಾನ್ ಹೆಟ್ಮಾಯೆರ್, ಕ್ರಿಸ್ ಗೇರ್, ಜಾನ್ ಕ್ಯಾಂಪ್‌ಬೆಲ್, ಫ್ಯಾಬಿಯನ್ ಅಲೆನ್, ರೋಸ್ಟನ್ ಚೇಸ್, ಕಾರ್ಲೊಸ್ ಬ್ರಾತ್‌ವೇಟ್, ಕೀಮೊ ಪೌಲ್, ನಿಕೋಲಸ್ ಪೂರನ್ (ವಿಕೆಟ ಕೀಪರ್), ಶಾಯ್ ಹೋಪ್, ಶೆಲ್ಡನ್ ಕಾಟ್ರೆಲ್, ಒಶಾನ್ ಥಾಮಸ್ ಮತ್ತು ಕೆಮರ್ ರೂಚ್. ಟೆಸ್ಟ್ ಸರಣಿಗಾಗಿನ ಭಾರತ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕೆಎಲ್ ರಾಹುಲ್, ವೃದ್ದಿಮಾನ್ ಸಹಾ, ರಿಷಬ್ ಪಂತ್, ಕುಲ್‌ದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್. ಟ್ವೆಂಟಿ-20 ಸರಣಿ ವೇಳಾಪಟ್ಟಿ ಇಂತಿದೆ: ಮೊದಲ ಟಿ20: ಆಗಸ್ಟ್ 03, ಶನಿವಾರ, ಫ್ಲೋರಿಡಾ, ರಾತ್ರಿ 8 ಗಂಟೆಗೆ ದ್ವಿತೀಯ ಟಿ20: ಆಗಸ್ಟ್ 04, ಭಾನುವಾರ, ಫ್ಲೋರಿಡಾ, ರಾತ್ರಿ 8 ಗಂಟೆಗೆ ತೃತೀಯ ಟಿ20: ಆಗಸ್ಟ್ 06, ಮಂಗಳವಾರ, ಗಯಾನಾ, ರಾತ್ರಿ 8 ಗಂಟೆಗೆ ಏಕದಿನ ಸರಣಿ ವೇಳಾಪಟ್ಟಿ ಇಂತಿದೆ: ಮೊದಲ ಏಕದಿನ: ಆಗಸ್ಟ್ 08, ಗುರುವಾರ, ಗಯಾನಾ, ರಾತ್ರಿ 7 ಗಂಟೆಗೆ ದ್ವಿತೀಯ ಏಕದಿನ: ಆಗಸ್ಟ್ 11, ಭಾನುವಾರ, ಟ್ರಿನಿಡಾಡ್, ರಾತ್ರಿ 7 ಗಂಟೆಗೆ ತೃತೀಯ ಏಕದಿನ: ಆಗಸ್ಟ್ 14, ಬುಧವಾರ, ಟ್ರಿನಿಡಾಡ್, ರಾತ್ರಿ 7 ಗಂಟೆಗೆ ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ: ಮೊದಲ ಟೆಸ್ಟ್: ಆಗಸ್ಟ್ 22ರಿಂದ 26ರ ವರೆಗೆ, ಆ್ಯಂಟಿಗುವಾ, ರಾತ್ರಿ 7 ಗಂಟೆಗೆ ದ್ವಿತೀಯ ಟೆಸ್ಟ್: ಆಗಸ್ಟ್ 30ರಿಂದ ಸೆಪ್ಟೆಂಬರ್ 03ರ ವರೆಗೆ, ಜಮೈಕಾ, ರಾತ್ರಿ 8 ಗಂಟೆಗೆ (ಸಮಯ ಭಾರತೀಯ ಕಾಲಮಾನದಂತೆ ಕೊಡಲಾಗಿದೆ.)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2K6lGra
ಬನ್ನೇರುಘಟ್ಟ ಹುಲಿ ಮರಿಗೆ 'ಹಿಮಾ' ಹೆಸರು ನಾಮಕರಣ
ಬೆಂಗಳೂರು: ಅಂತಾರಾಷ್ರೀಯ ಕ್ರೀಡಾಕೂಟಗಳಲ್ಲಿ ಭರ್ಜರಿ ಸಾಧನೆ ಮಾಡುವ ಮೂಲಕ ಸತತ ಐದು ಚಿನ್ನಗಳನ್ನು ದೇಶದ ಕೀರ್ತಿ ಪತಾಕೆ ಎತ್ತಿ ಹಿಡಿದಿರುವ ಗೋಲ್ಡನ್ ಗರ್ಲ್ ಅವರ ಹೆಸರನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮರಿಯೊಂದಕ್ಕೆ ಇಡಲಾಗಿದೆ. ವಿಶ್ವ ಹುಲಿ ದಿನದಂಗವಾಗಿ 6 ತಿಂಗಳ ರಾಯಲ್ ಬೆಂಗಾಲ್ ಹುಲಿ ಮರಿಯೊಂದಕ್ಕೆ 'ಹಿಮಾ' ಎಂದು ಹೆಸರಿಡಲಾಗಿದೆ. ರನ್ನಿಂಗ್ ರೇಸ್‌ನಲ್ಲಿ ಸಾಧನೆ ಮಾಡಿರುವ ಹಿಮಾದಾಸ್ ಅವರ ಗೌರವಾರ್ಥ 'ಹಿಮಾ' ಎಂದು ಹೆಸರಿಡಲಾಗಿದೆ. 2018 ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಸಾಧನೆ ಮಾಡಿರುವ ಹಿಮಾ ದಾಸ್, ಕಳೆದ ತಿಂಗಳೊಂದರಲ್ಲಿ ಓಟದ ಸ್ಪರ್ಧೆಯಲ್ಲಿ ಐದು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದರು. ಸೆಲೆಬ್ರಿಟಿಗಳ ಹೆಸರುಗಳನ್ನು ಇಡುವ ಮೂಲಕ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಜತೆಗೆ ಹುಲಿ ಸಂರಕ್ಷಣಾ ಜಾಗೃತ್ತಿ ಮೂಡಿಸುವ ಇರಾದೆಯನ್ನು ಹೊಂದಲಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32WL37y
ತ್ರಿವಳಿ ತಲಾಖ್ ವಿಧೇಯಕ ರಾಜ್ಯಸಭೆಯಲ್ಲಿ ಮಂಡನೆ
ಹೊಸದಿಲ್ಲಿ: ತ್ರಿವಳಿ ತಲಾಖ್ ನಿಷೇಧ ವಿಧೇಯಕವನ್ನು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ರಾಜ್ಯಸಭೆಯಲ್ಲಿ ಮಂಡಿಸಿದರು. ಈ ವಿಧೇಯಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಉದ್ದೇಶ ಹೊಂದಿದೆಯೇ ಹೊರತು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಅವರು ಹೇಳಿದರು. 'ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ವಿಧೇಯಕ 2019' ಅನ್ನು ಸದನ ಅಂಗೀಕರಿಸಬೇಕು ಎಂದು ಮನವಿ ಮಾಡಿದ ಸಚಿವರು, ಸುಪ್ರೀಂ ಕೋರ್ಟ್ ಆದೇಶದಂತೆ ಈ ವಿಧೇಯಕ ರೂಪಿಸಲಾಗಿದೆ ಎಂದರು. 'ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ವಿಷಯವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಇದು ಮಾನವೀಯತೆಯ ಪ್ರಶ್ನೆ. ಇದು ಮಹಿಳೆಯರಿಗೆ ನ್ಯಾಯ, ಘನತೆ, ಲಿಂಗ ಸಮಾನತೆ ಒದಗಿಸುವುದರ ಜತೆಗೆ ಅವರ ಸಬಲೀಕರಣದ ಖಾತ್ರಿಗಾಗಿ ಇರುವ ವಿಧೇಯಕ' ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. ತ್ರಿವಳಿ ತಲಾಖ್ ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನುಸಾರ ಈ ವಿಧೇಯಕ ಸಿದ್ಧಪಡಿಸಲಾಗಿದೆ. ಈ ರೀತಿ ಕಾನೂನೂ ಬಾಹಿರವಾಗಿ ತಲಾಖ್ ನೀಡಿದ 574 ಪ್ರಕರಣಗಳು ಕೋರ್ಟಿನ ಮುಂದೆ ವಿಚಾರಣೆಗೆ ಬಂದಿದ್ದವು ಎಂದು ಸಚಿವರು ವಿವರಿಸಿದರು. ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವೆಂದು ಘೋಷಿಸಿ ಸರಕಾರ ಕಳೆದ ಬಾರಿ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ 101 ತಲಾಖ್ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪ್ರಸಾದ್ ತಿಳಿಸಿದರು. ಈಗಾಗಲೇ 20ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳು ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿವೆ. ಆದರೆ ಜಾತ್ಯತೀತ ಭಾರತ ಯಾವ್ಯಾವುದೋ ಕಾರಣಕ್ಕೆ ಇದುವರೆಗೂ ಇಂತಹದೊಂದು ಕಾನೂನು ಜಾರಿಗೆ ತಂದಿಲ್ಲ ಎಂದು ಸಚಿವರು ನುಡಿದರು. ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸಿದೆ. ಪಕ್ಷದ ನಾಯಕ ಅಮೀ ಯಾಜ್ಞಿಕ್, ಈ ವಿಧೇಯಕದ ಮೂಲಕ ಸರಕಾರ ಮುಸ್ಲಿಂ ಮಹಿಳೆಯರ ಕೌಟುಂಬಿಕ ವಿಚಾರದಲ್ಲಿ ಮೂಗು ತೂರಿಸಿದೆ ಎಂದು ಆರೋಪಿಸಿದರು. ವಿಧೇಯಕದ ಕುರಿತು ಚರ್ಚೆಗೆ ನಾಲ್ಕು ಗಂಟೆಗಳ ಕಾಲಾವಕಾಶವನ್ನು ಮೇಲ್ಮನೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ನೀಡಿದ್ದಾರೆ. ಲೋಕಸಭೆ ಕಳೆದ ವಾರ ಈ ವಿಧೇಯಕವನ್ನು ಅನುಮೋದಿಸಿತ್ತು.
from India & World News in Kannada | VK Polls https://ift.tt/2LOIyyN
ಗವಾಸ್ಕರ್ ವಾದವನ್ನು ತಳ್ಳಿ ಹಾಕಿದ ಮಂಜ್ರೇಕರ್
ಹೊಸದಿಲ್ಲಿ: ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಿಂದಲೇ ಹೊರನಡೆದಿರುವ ಹೊರತಾಗಿಯೂ ಅವರನ್ನು ಆಯ್ಕೆ ಸಮಿತಿಯು ಏಕಪಕ್ಷೀಯವಾಗಿ ನಾಯಕರನ್ನಾಗಿ ಆಯ್ಕೆ ಮಾಡಿರುವುದು ಮಾಜಿ ಬ್ಯಾಟಿಂಗ್ ದಿಗ್ಗಜ ಅಸಮಾಧಾನಕ್ಕೆ ಕಾರಣವಾಗಿತ್ತು. ಇದಕ್ಕೀಗ ಉತ್ತರ ನೀಡಿರುವ ಮಾಜಿ ಆಟಗಾರ , ನಾಯಕ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ ಏಕದಿನ ವಿಶ್ವಕಪ್ ಅಂಕಿಅಂಶಗಳನ್ನು ಉಲ್ಲೇಖಿಸುತ್ತಾ ಆಯ್ಕೆ ಸಮಿತಿ ನಿರ್ಧಾರವನ್ನು ಸಮರ್ಥಿಸಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ನಾಯಕರನ್ನಾಗಿ ಉಳಿಸಿಕೊಂಡಿರುವುದು ಹಾಗೂ ಭಾರತೀಯ ಆಯ್ಕೆದಾರರ ಬಗ್ಗೆ ಗವಾಸ್ಕರ್ ಸರ್ ಅಭಿಪ್ರಾಯಗಳನ್ನು ಗೌರವಯುತವಾಗಿಯೇ ಒಪ್ಪುವುದಿಲ್ಲ. ಇಲ್ಲ ಏಕದಿನ ವಿಶ್ವಕಪ್‌ನಲ್ಲಿ ಭಾರತ ಕೆಟ್ಟ ನಿರ್ವಹಣೆ ನೀಡಿಲ್ಲ. ಅವರು ಏಳರಲ್ಲಿ ಗೆದ್ದು, ಎರಡರಲ್ಲಷ್ಟೇ ಸೋತರು. ಕೊನೆಯದ್ದು ಬಹಳ ಕಿರಿದಾದ ಅಂತರ. ನಿಲುವುಗಿಂತ ಆಯ್ಕೆದಾರರ ಪ್ರಾಮಾಣಿಕತೆಯು ಹೆಚ್ಚು ಮುಖ್ಯವೆನಿಸುತ್ತದೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಮೊದಲು ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಲ್ಲಿ ಮುಂದುವರಿಸಿರುವ ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ನಿರ್ಧಾರವನ್ನು ಗವಾಸ್ಕರ್ ಪ್ರಶ್ನಿಸಿದ್ದರು. ವಿರಾಟ್ ಕೊಹ್ಲಿ ಮರು ಆಯ್ಕೆ ಮಾಡುವ ಮೊದಲು ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು ಎಂದು ಗವಾಸ್ಕರ್ ಅಸಮಾಧಾನ ತೋಡಿಕೊಂಡಿದ್ದರು. ವಿರಾಟ್ ಕೊಹ್ಲಿ ತಾವು ಬಯಸಿದ ಆಟಗಾರರನ್ನೇ ತಂಡದಲ್ಲಿ ಆಯ್ಕೆ ಮಾಡುವುದರ ಬಗ್ಗೆಯೂ ಗವಾಸ್ಕರ್ ಟೀಕೆ ಮಾಡಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2K0ShQq
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು!
ದುಬೈ: ಬಹು ನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಧಿಕೃತ ಚಾಲನೆ ನೀಡಿತು. ಇಂಗ್ಲೆಂಡ್ ಮತ್ತು ಆಸ್ಪ್ರೇಲಿಯಾ ತಂಡಗಳು ಆಗಸ್ಟ್ 1ರಂದು ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಮುಖಾಮುಖಿಯಾಗುವುದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭಗೊಳ್ಳಲಿದೆ. 2021ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಏಕದಿನ ಹಾಗೂ ಟಿ20 ಅಬ್ಬರದಿಂದಾಗಿ ನೈಜ ಕ್ರಿಕೆಟ್ ಎಂದೇ ಪರಿಗಣಿತವಾಗಿರುವ ಟೆಸ್ಟ್ ಕ್ರಿಕೆಟ್ ಜನಮಾನಸದಿಂದ ದೂರವಾಗುತ್ತಿದೆ ಎನ್ನುವ ಕಾಳಜಿಗೆ ಸಮರ್ಪಕ ಜವಾಬು ನೀಡುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಯೋಜಿಸುತ್ತಿದೆ. ''ವಿಶ್ವದ ಬಲಿಷ್ಠ ತಂಡಗಳ ನಡುವಣ ಸೆಣಸಾಟ ಹೇಗೆ ಜನಮನ ಸೂರೆಗೈಯ್ಯುತ್ತದೆ ಎಂಬುದನ್ನು ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ತೋರಿಸಿಕೊಟ್ಟಿದೆ. ಟೆಸ್ಟ್ ಪಂದ್ಯಗಳನ್ನೂ ವಿಶ್ವ ಚಾಂಪಿಯನ್‌ಶಿಪ್‌ನ ವ್ಯಾಪ್ತಿಗೆ ತರುವುದರಿಂದ ಆ ಮಾದರಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ,'' ಎಂದು ಐಸಿಸಿಯ ಪ್ರಧಾನ ವ್ಯವಸ್ಥಾಪಕ ಜೆಫ್ ಅಲಾರ್ಡೈಸ್ ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 9 ತಂಡಗಳ ಹಣಾಹಣಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೆಸ್ಟ್ ಮಾನ್ಯತೆ ಪಡೆದಿರುವ ಅಗ್ರ 9 ತಂಡಗಳು (ಆಸ್ಪ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್) ಸೆಣಸಲಿವೆ. ಎರಡು ವರ್ಷಗಳ ಕಾಲ ನಡೆಯುವ ಈ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 27 ಸರಣಿಗಳು (71 ಪಂದ್ಯ) ಇರಲಿವೆ. ಅಂತಿಮವಾಗಿ ಗರಿಷ್ಠ ಅಂಕ ಕಲೆಹಾಕುವ ಎರಡು ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ 2021ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಸೆಣಸಲಿವೆ. ಅಂಕ ಹಂಚಿಕೆ: ಹೋಮ್ ಆ್ಯಂಡ್ ಅವೇ (ತವರು ಹಾಗೂ ಎದುರಾಳಿಯ ತವರು) ಸರಣಿಗಳಲ್ಲಿ ಆಡಲಾಗುವ ಪ್ರತಿ ಟೆಸ್ಟ್ ಪಂದ್ಯಕ್ಕೆ ಅಂಕಗಳನ್ನು ನೀಡಲಾಗುತ್ತದೆ. ಒಂದು ಸರಣಿಗೆ ಒಟ್ಟು 120 ಅಂಕಗಳಿವೆ. ಉದಾಹರಣೆಗೆ ಸರಣಿಯಲ್ಲಿ ಎರಡು ಪಂದ್ಯಗಳಿದ್ದರೆ, ತಲಾ 60 ಮತ್ತು ಮೂರು ಪಂದ್ಯಗಳಿದ್ದರೆ ತಲಾ 40ರಂತೆ ಅಂಕಗಳು ಹಂಚಿಕೆಯಾಗಲಿವೆ. ಸರಣಿ ಟೈ ಆದರೆ ಸಮಾನ ಹಂಚಿಕೆಯಾದರೆ, ಡ್ರಾ ಆದಾಗ 3:1 ಅನುಪಾತದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಒಂದು ಸರಣಿಯಲ್ಲಿ ಗರಿಷ್ಠ 5 ಮತ್ತು ಕನಿಷ್ಠ ಎರಡು ಪಂದ್ಯಗಳು ಇರಲಿವೆ. ಪ್ರಸ್ತುತ ಹಗಲಿನ ಪಂದ್ಯಗಳನ್ನು ಮಾತ್ರ ಚಾಂಪಿಯನ್‌ಶಿಪ್‌ಗೆ ಪರಿಗಣಿಲಾಗುತ್ತದೆ. ಭವಿಷ್ಯದಲ್ಲಿ ಹಗಲು-ರಾತ್ರಿ ಪಂದ್ಯಗಳು ಸೇರ್ಪಡೆಯಾಗಲಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ)ನಲ್ಲಿ ಆಡಲಿರುವ ತಂಡಗಳು: ಆಸ್ಪ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದ.ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್. ಐರ್ಲೆಡ್, ಅಫಘಾನಿಸ್ತಾನ ತಂಡಗಳಿಗೆ ಟೆಸ್ಟ್ ಮಾನ್ಯತೆಯಿದ್ದರೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಒಳಪಟ್ಟಿರುವುದಿಲ್ಲ. ಹಾಗೆಯೇ ಜಿಂಬಾಬ್ವೆ ಮೇಲೆ ನಿಷೇಧ ಹೇರಲಾಗಿದೆ. ಒಟ್ಟು ಸರಣಿ: 27 ಒಟ್ಟು ಪಂದ್ಯ: 71 ಅವಧಿ: 2 ವರ್ಷ ಅಗ್ರ 2 ತಂಡಗಳ ನಡುವೆ 2021ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಫೈನಲ್. ಪ್ರತಿ ತಂಡ ಉಳಿದ 8 ತಂಡಗಳ ಪೈಕಿ 6 ತಂಡಗಳೊಂದಿಗೆ ಸೆಣಸಾಡಲಿದೆ. ಒಂದು ಸರಣಿಯಲ್ಲಿ ಪಂದ್ಯಗಳು: ಕನಿಷ್ಠ 2ರಿಂದ ಗರಿಷ್ಠ 5 ಪ್ರತಿ ತಂಡ ತವರಿನಲ್ಲಿ ಹಾಗೂ ಎದುರಾಳಿಯ ತವರಿನಲ್ಲಿ ತಲಾ 3 ಸರಣಿಗಳಲ್ಲಿ ಆಡಬೇಕು. ಪ್ರತಿ ಸರಣಿಗೆ 120 ಅಂಕಗಳು. ಪ್ರತಿ ಪಂದ್ಯಕ್ಕೆ ಅಂಕ: ಸರಣಿ (ಪಂದ್ಯಗಳ ಸಂಖ್ಯೆ): 2, ಜಯ: 60, ಡ್ರಾ: 20, ಟೈ: 30, ಸೋಲು: 0 ಸರಣಿ (ಪಂದ್ಯಗಳ ಸಂಖ್ಯೆ): 3, ಜಯ: 40, ಡ್ರಾ: 13.3, ಟೈ: 20, ಸೋಲು: 0 ಸರಣಿ (ಪಂದ್ಯಗಳ ಸಂಖ್ಯೆ): 4, ಜಯ: 30, ಡ್ರಾ: 10, ಟೈ: 15, ಸೋಲು: 0 ಸರಣಿ (ಪಂದ್ಯಗಳ ಸಂಖ್ಯೆ): 5, ಜಯ: 24, ಡ್ರಾ: 8, ಟೈ: 12, ಸೋಲು: 0 (ಪ್ರತಿ ಸರಣಿಯಲ್ಲಿ ದೊರೆಯಬಹುದಾದ ಒಟ್ಟು ಅಂಕ 120) ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವೇಳಾಪಟ್ಟಿ: ಆಗಸ್ಟ್ 2019: ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ (ವೆಸ್ಟ್ ಇಂಡೀಸ್‌ನಲ್ಲಿ) ಅಕ್ಟೋಬರ್ 2019: ದ.ಆಫ್ರಿಕಾ ವಿರುದ್ಧ 3 ಟೆಸ್ಟ್ (ತವರಿನಲ್ಲಿ) ನವೆಂಬರ್ 2019: ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ (ತವರಿನಲ್ಲಿ) ಫೆಬ್ರವರಿ 2020: ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್ (ನ್ಯೂಜಿಲೆಂಡ್‌ನಲ್ಲಿ) ಡಿಸೆಂಬರ್-ಜನವರಿ 2020-21: ಆಸ್ಪ್ರೇಲಿಯಾ ವಿರುದ್ಧ 4 ಟೆಸ್ಟ್ (ಆಸ್ಪ್ರೇಲಿಯಾದಲ್ಲಿ) ಫೆಬ್ರವರಿ-ಮಾರ್ಚ್ 2021: ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ (ತವರಿನಲ್ಲಿ)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/311QOPB
ನನಗೆ ಯಾರಾದರೂ ಇಷ್ಟವಿಲ್ಲದಿದ್ದರೆ, ಅದು ನನ್ನ ಮುಖದಲ್ಲಿ ಪ್ರತಿಬಿಂಬಿಸುತ್ತದೆ: ಕೊಹ್ಲಿ
ಮುಂಬಯಿ: ಟೀಮ್ ಇಂಡಿಯಾ ಉಪ ನಾಯಕ ಜತೆಗಿನ ಭಿನ್ನಾಭಿಪ್ರಾಯದ ಬಗ್ಗೆ ನಾಯಕ ಕೊನೆಗೂ ಮೌನ ಮುರಿದಿದ್ದಾರೆ. ವೆಸ್ಟ್‌ಇಂಡೀಸ್ ಪ್ರವಾಸಕ್ಕೂ ಮುನ್ನ ಮುಂಬಯಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಂಡದ ಒಳ ಜಗಳದ ಬಗ್ಗೆ ವಿರಾಟ್ ಖಡಕ್ ಮಾತುಗಳಲ್ಲೇ ಉತ್ತರಿಸಿದ್ದಾರೆ. ನನ್ನ ಮತ್ತು ರೋಹಿತ್ ಶರ್ಮ ನಡುವೆ ಯಾವುದೇ ಮನಸ್ತಾಪವಿಲ್ಲ. ಒಳಜಗಳವೆಂಬ ಶುದ್ಧ ಸುಳ್ಳನ್ನು ಸೃಷ್ಟಿ ಮಾಡಿ ಹರಿಯಬಿಡಲಾಗಿದೆ. ಇದು ನಮಗೆ ತೋರುವ ಅಗೌರವ ಎಂದು ತೀಕ್ಷ್ಣವಾಗಿ ಪ್ರತಿಬಿಂಬಿಸಿದ್ದಾರೆ. ನನಗೆ ಯಾರನ್ನಾದರೂ ಇಷ್ಟವಿಲ್ಲದಿದ್ದರೆ ಅದು ನನ್ನ ಮುಖದಲ್ಲಿ ಪ್ರತಿಬಿಂಬಿಸುತ್ತದೆ. ಅದು ಅಷ್ಟೇ ಸರಳವಾಗಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ವಾತಾವರಣ ಇಲ್ಲದಿರುವ ಹೊರತು ಮೈದಾನದಲ್ಲಿ ಅತ್ಯುತ್ತಮ ನಿರ್ವಹಣೆ ನೀಡುವುದು ಅಸಾಧ್ಯ ಎಂದು ವಿರಾಟ್ ನುಡಿದರು. ಮೈದಾನದಲ್ಲಿ ನಾವೆಲ್ಲರೂ ಆಟವಾಡುತ್ತಿರುವ ರೀತಿಯನ್ನೇ ನೋಡಿದರೆ ನಿಮಗೆ ಮನಗಾಣಬಹುದಾಗಿದೆ. ಅಷ್ಟಕ್ಕೂ ಸಂಶಯಗಳಿದ್ದರೆ ನಮ್ಮ ಜತೆಗೆ ನೇರವಾಗಿ ಡ್ರೆಸ್ಸಿಂಗ್ ಕೊಠಡಿಗೆ ಬನ್ನಿ. ಅಲ್ಲಿಯೇ ನಾವೆಲ್ಲರೂ ಜತೆಯಾಗಿ ಬೆರೆತುಕೊಳ್ಳುತ್ತಿದ್ದೇವೆ ಎಂಬುದನ್ನು ಕಣ್ಣಾರೆಯಾಗಿ ನೋಡಿ. ವೀಡಿಯೋ ಕಳುಹಿಸಿಕೊಡಲು ಸಾಧ್ಯವಿಲ್ಲ ಎಂದು ಪತ್ರಕರ್ತರನ್ನು ಆಹ್ವಾನಿಸಿದರು. ''ನಾನು 11 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ರೋಹಿತ್ ಶರ್ಮ 10 ವರ್ಷಗಳಿಂದ ಆಡುತ್ತಿದ್ದಾರೆ. ನಮ್ಮ ಮಧ್ಯೆ ಯಾವುದೇ ಜಗಳವಿಲ್ಲ. ಪದೇಪದೆ ಸುಳ್ಳುಗಳನ್ನು ಹರಿಯಬಿಡುವ ಕಾರ್ಯ ಸರಿಯಲ್ಲ. ಬಣ ಜಗಳದ ಆರೋಪವೇ ಮೂರ್ಖತನದ್ದು,'' ಎಂದು ಕಿಡಿಕಾರಿದ್ದಾರೆ. ''ಕಳೆದ ಅನೇಕ ದಿನಗಳಿಂದ ಈ ರೀತಿಯ ಮಿಥ್ಯಾರೋಪಗಳನ್ನು ಕೇಳಿಸಿಕೊಳ್ಳುತ್ತಿದ್ದೇನೆ. ಅದರಲ್ಲೂ ಖಾಸಗಿ ವಿಷಯವನ್ನು ಮುನ್ನೆಲೆಗೆ ತರುತ್ತಿರುವುದು ದುರದೃಷ್ಟಕರ. ಒಳ್ಳೆಯ ವಿಚಾರಗಳ ಕುರಿತು ಜಾಣ ಕುರುಡುತನ ಪ್ರದರ್ಶಿಸಲಾಗುತ್ತಿದೆ. ಕಾಲ್ಪನಿಕ ಕತೆಗಳನ್ನು ಸೃಷ್ಟಿಸಿ ಅದನ್ನು ಪೋಷಿಸಲಾಗುತ್ತಿದೆ,'' ಎಂದರು. ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸಂಬಂಧಿಸಿದಂತೆ ಪ್ರಶ್ನೆಗಳು ಎದ್ದಾಗ, ಇದನ್ನು ಬಹಳ ಸಮಯದಿಂದ ನೋಡುತ್ತಿದ್ದೇನೆ. ಖಾಸಗಿ ಬದುಕನ್ನು ಎಳೆದು ತರದಿರಿ. ಇದು ನಮಗೆ ತೋರುವ ಅಗೌರವ ಎಂದು ಹೇಳಿದರು. ಇದಕ್ಕೆ ಕೈಜೋಡಿಸಿದ ರವಿಶಾಸ್ತ್ರಿ, ಕೆಲವೇ ದಿನಗಳಲ್ಲಿ ಪತ್ನಿಯರು ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದ್ದೀರಿ ಎಂಬುದನ್ನು ಆಲಿಸುವಿರಿ ಎಂದರು. ಕ್ರಿಕೆಟ್‌ಗಿಂತಲೂ ಮಿಗಿಲಾಗಿ ಯಾರೂ ಇಲ್ಲ. ನಾನೇ ಆಗಲಿ, ವಿರಾಟ್ ಆಗಲಿ, ತಂಡದಲ್ಲಿರುವ ಯಾವ ವ್ಯಕ್ತಿಯೂ ಕ್ರಿಕೆಟಿಗಿಂತಲೂ ಮಿಗಿಲಲ್ಲ. ನಾನು ಕೂಡಾ ಡ್ರೆಸ್ಸಿಂಗ್ ಕೊಠಡಿಯ ಭಾಗವಾಗಿದ್ದು, ಇವೆಲ್ಲವೂ ಅಸಂಬಂಧ ಎಂದು ಎಂದು ಕಿಡಿ ಕಾರಿದರು. ನನಗೆ ಅವಕಾಶ ಸಿಕ್ಕಾಗೆಲ್ಲಾ ರೋಹಿತ್ ಶರ್ಮಾರನ್ನು ಅಭಿನಂದಿಸುತ್ತೇನೆ. ಏಕಂದರೆ ಅವರು ಅತ್ಯುತ್ತಮ ಆಟಗಾರನೆಂಬುದು ನನ್ನ ನಂಬಿಕೆಯಾಗಿದೆ. ಈ ಎಲ್ಲ ಕಥೆಗಳನ್ನು ರಚಿಸಿ ಯಾರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿದಿಲ್ಲ. ಭಾರತ ತಂಡವನ್ನು ಪ್ರಗತಿಯತ್ತ ಮುನ್ನಡೆಸುವುದು ನಮ್ಮೆಲ್ಲರ ಧ್ಯೇಯವಾಗಿದೆ ಎಂದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2LOfBTw
ನಾಯಕತ್ವ ನಷ್ಟವಾಗುವ ಭಯದಿಂದ ಕೊಹ್ಲಿ ಸಂಪೂರ್ಣ ವಿಂಡೀಸ್ ಪ್ರವಾಸ ಕೈಗೊಂಡಿದ್ದಾರೆಯೇ?
ಮುಂಬಯಿ: ನಾಯಕ ಸ್ಥಾನ ನಷ್ಟವಾಗುವ ಭಯದಿಂದಾಗಿ ಸಂಪೂರ್ಣ ಪ್ರವಾಸವನ್ನು ಕೈಗೊಳ್ಳಲು ನಾಯಕ ನಿರ್ಧರಿಸಿದ್ದರು ಎಂಬ ಬಗ್ಗೆ ವರದಿಗಳು ಬಂದಿದ್ದವು. ಈ ಹಿಂದೆ ವಿಶ್ವಕಪ್ ಸೆಮಿಫೈನಲ್ ಸೋಲಿನ ಬೆನ್ನಲ್ಲೇ ನಾಯಕತ್ವದಲ್ಲಿ ವಿಭಜನೆಯಾಗಲಿದೆ ಎಂಬುದು ವರದಿಯಾಗಿತ್ತು. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ರೋಹಿತ್ ಶರ್ಮಾರನ್ನು ಹಾಗೂ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಗೆ ನಾಯಕ ಪಟ್ಟ ನೀಡುವ ಸಾಧ್ಯತೆಯಿದೆ ಎಂಬುದನ್ನು ಮೂಲಗಳು ತಿಳಿಸಿದ್ದವು. ಆದರೆ ಆಯ್ಕೆ ಸಮಿತಿಯು ಎಲ್ಲ ಮೂರು ಪ್ರಕಾರಗಳಿಗೂ ವಿರಾಟ್ ಕೊಹ್ಲಿ ಅವರನ್ನೇ ನಾಯಕರನ್ನಾಗಿ ನೇಮಕಗೊಳಿಸಿತ್ತು. ಈ ಸಂಬಂಧ ಪ್ರಶ್ನೆಗಳು ಎದುರಾದಾಗ ಕೆಲಸದೊತ್ತಡಗಳ ಬಗ್ಗೆ ನನ್ನ ಬಳಿ ಯಾರು ಚರ್ಚಿಸಿಲ್ಲ. ಅವೆಲ್ಲವನ್ನು ನನ್ನ ಫಿಸಿಯೋ ನಿರ್ಧರಿಸುತ್ತಾರೆ ಎಂದು ಕೊಹ್ಲಿ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ನಮ್ಮ ವಿಶ್ರಾಂತಿ ಅವಧಿಯನ್ನು ದಾಖಲಾತಿ ಮಾಡಲಾಗುತ್ತದೆ. ಇವೆಲ್ಲವೂ ಇ-ಮೇಲ್ ಮೂಲಕ ಮಂಡಳಿಗೆ ಸಲ್ಲಿಸಲಾಗುತ್ತದೆ. ಹಾಗಾಗಿ ನನ್ನ ಬಗ್ಗೆ ಎಂತಹ ವರದಿ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಇನ್ನು ನನ್ನ ವಿಚಾರಕ್ಕೆ ಬಂದಾಗ ಟ್ರೈನರ್ ಅಥವಾ ಫಿಸಿಯೋ ಎಲ್ಲ ಪಂದ್ಯಗಳ ಡೇಟಾಗಳನ್ನು ಕಲೆ ಹಾಕಿ ನನ್ನ ಪ್ರಗತಿ ಹೀಗಿದೆ. ಹಾಗಾಗಿ ವಿಶ್ರಾಂತಿ ಪಡೆಯಬೇಕು ಎಂದು ಸೂಚಿಸುತ್ತಾರೆ. ಅಲ್ಲದೆ ಈ ಸಂಬಂಧ ಆಯ್ಕೆ ಸಮಿತಿಗೆ ಏನು ಸಂದೇಶ ರವಾನಸಿದ್ದಾರೆ ಗೊತ್ತಿಲ್ಲ. ಹಾಗೆಯೇ ವಿಶ್ರಾಂತಿ ಸಂಬಂಧ ನನ್ನ ಬಳಿಯೂ ಏನನ್ನು ಚರ್ಚಿಸಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಕಪ್ ಸೋಲಿನ ಈ ಸಂದರ್ಭದಲ್ಲಿ ತಂಡವನ್ನು ಪುನರ್ ರಚಿಸಲು ತಮ್ಮ ಸಾನಿಧ್ಯ ಹೆಚ್ಚು ಅಗತ್ಯವಿದೆ ಎಂದು ಹೇಳಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ziwg4Q
ಪೊಲೀಸ್‌ಗೆ ಮುತ್ತಿಕ್ಕಿ ಜೈಲು ಪಾಲಾದ; ವೀಡಿಯೋ ವೈರಲ್
: ಕರ್ತವ್ಯ ನಿರತ ಪೊಲೀಸರೊಬ್ಬರಿಗೆ ಮುತ್ತಿಕ್ಕಿದ ಕಾರಣಕ್ಕೆ ವ್ಯಕ್ತಿಯೊಬ್ಬ ಜೈಲು ಪಾಲಾಗಿದ್ದಾನೆ. ಮುತ್ತಿನ ನಗರಿ ಹೈದಾರಾಬಾದಿನಲ್ಲಿ ಈ ಸ್ವಾರಸ್ಯಕರ ಘಟನೆ ನಡೆದಿದ್ದು, ಉತ್ಸವದಲ್ಲಿ ಜುಲೈ 28, ರವಿವಾರ ಈ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಮುತ್ತಿಕ್ಕಿದ ವ್ಯಕ್ತಿ ಕುಡಿದ ನಶೆಯಲ್ಲಿದ್ದ ಎಂದು ತಿಳಿದುಬಂದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲೇನಿದೆ: ಜನರ ಗುಂಪೊಂದು ರಸ್ತೆಯಲ್ಲಿ ನೃತ್ಯ ಮಾಡುತ್ತಿದ್ದು, ಅದರಲ್ಲೊಬ್ಬ ಏಕಾಏಕಿ ಪೊಲೀಸ್ ಅಧಿಕಾರಿ ಬಳಿ ಹೋಗಿ ತಬ್ಬಿಕೊಂಡು ಮುತ್ತಿಕ್ಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪೊಲೀಸ್ ಆತನನ್ನು ದೂಡಿದ್ದಾನೆ ಮತ್ತು ಕೆನ್ನೆಗೆ ಬಾರಿಸಿದ್ದಾನೆ. ಆ ವ್ಯಕ್ತಿ ಬ್ಯಾಂಕ್ ನೌಕರನೆಂದು ತಿಳಿದು ಬಂದಿದ್ದು, ಆತನೀಗ ಪೊಲೀಸ್ ಠಾಣೆಯಲ್ಲಿದ್ದಾನೆ. ಏನಿದು ಬೋನಾಲು? ತೆಲಂಗಾಣದಲ್ಲಿ ವಾರ್ಷಿಕವಾಗಿ ಆಯೋಜನೆಯಾಗುವ ಹಿಂದೂ ಉತ್ಸವವಾಗಿದ್ದು, ದೇವಿ ಮೀನಾಕ್ಷಿಯ ಆರಾಧನೆ ಮಾಡಲು ತೆಲಂಗಾಣ ಮತ್ತು ಆಂಧ್ರದಿಂದ ಸಾವಿರಾರು ಭಕ್ತರು ಒಂದೆಡೆ ಸೇರುತ್ತಾರೆ.
from India & World News in Kannada | VK Polls https://ift.tt/2MqRY30
ಮಸೀದಿ ಮಾರ್ಗವಾಗಿ ಸಾಗುತ್ತಿದ್ದ ಕನ್ವರ್ ಯಾತ್ರಾರ್ಥಿಗಳ ಮೇಲೆ ಕಲ್ಲು ತೂರಾಟ
ಪಾಟ್ನಾ: ಗೆ ತೆರಳುತ್ತಿದ್ದ ಭಕ್ತರ ಮೇಲೆ (ಕನ್ವರಿಯಾ) ಅನ್ಯ ಕೋಮಿನ ಗುಂಪೊಂದು ಕಲ್ಲು ತೂರಾಟ ನಡೆಸಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. 'ಮುಜಾಫರ್‌ಪುರ ಜಿಲ್ಲೆಯ ಬಾರಾರೂಜ್ ಪ್ರದೇಶದ ಮಸೀದಿಯೊಂದರ ಮಾರ್ಗವಾಗಿ ಕನ್ವರ್ ಯಾತ್ರೆಗೆ ತೆರಳುತ್ತಿದ್ದೇವು. ಈ ವೇಳೆ ಸಮಾಜ ವಿರೋಧ ಶಕ್ತಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿವೆ' ಎಂದು ಭಕ್ತರು ಹೇಳಿಕೊಂಡಿದ್ದಾರೆ. ಕನ್ವರ್ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಸಮಾಜ ಘಾತುಕ ಶಕ್ತಿಗಳು ಕಲ್ಲು ತೂರಾಟ ನಡೆಸಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಮುಜಾಫರ್‌ಪುರನ ಪಶ್ಚಿಮ ವಲಯದ ಉಪ ವಿಭಾಗೀಯ ಅಧಿಕಾರಿ ಅನಿಲ್ ಕುಮಾರ್ ದಾಸ್ ತಿಳಿಸಿದ್ದಾರೆ. ಶಿವನ ದರ್ಶನಕ್ಕಾಗಿ ಕನ್ವರ್ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರನ್ನು ಕನ್ವರಿಯಾಗಳು ಎಂದು ಕರೆಯುತ್ತಾರೆ. ಕನ್ವರ್ ಯಾತ್ರೆ ಪವಿತ್ರ ಶ್ರಾವಣ ಮಾಸದಲ್ಲಿ ಶಿವನಿಗೆ ಗಂಗಾ ನದಿಯ ನೀರಿನಿಂದ ಪೂಜೆ ಸಲ್ಲಿಸುವ ಮೂಲಕ ಕನ್ವರ್ ಯಾತ್ರೆ ನಡೆಸಲಾಗುತ್ತದೆ. ಕನ್ವರಿಗಳು ಅಥವಾ ಭೋಲೆ ಎಂದು ಕರೆಸಿಕೊಳ್ಳುವ ಶಿವನ ಆರಾಧಕರು ಪ್ರತಿವರ್ಷ ಕೈಗೊಳ್ಳುವ ಧಾರ್ಮಿಕ ಯಾತ್ರೆ ಇದಾಗಿದೆ. ಈ ಯಾತ್ರೆಯಲ್ಲಿ ಕನ್ವರಿಗಳು ಹರಿದ್ವಾರ, ಗೋಮುಖ, ಗಂಗೋತ್ರಿ ಮತ್ತು ಸುಲ್ತಾನ್‌ಗಂಜ್‌ನಲ್ಲಿ ಪವಿತ್ರ ಗಂಗೋದಕದಿಂದ ಶಿವನನ್ನು ಪೂಜಿಸುತ್ತಾರೆ.
from India & World News in Kannada | VK Polls https://ift.tt/2yl3k0p
ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸಿದ ಗವಾಸ್ಕರ್
ಹೊಸದಿಲ್ಲಿ: ಟೀಮ್ ಇಂಡಿಯಾ ನಾಯಕ ಸ್ಥಾನದಲ್ಲಿ ಮುಂದುವರಿದಿರುವುದನ್ನು ಮಾಜಿ ಬ್ಯಾಟಿಂಗ್ ದಿಗ್ಗಜ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಪ್ರಶ್ನಿಸಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತದಿಂದಲೇ ಹೊರಬಿದ್ದಿತ್ತು. ತದಾ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಲ್ಲಿ ಮುಂದುವರಿಸಿರುವ ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ನಿರ್ಧಾರವನ್ನು ಗವಾಸ್ಕರ್ ಪ್ರಶ್ನಿಸಿದ್ದಾರೆ. ''ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡುವಾಗ ಕೊಹ್ಲಿಯನ್ನು ಏಕಪಕ್ಷೀಯವಾಗಿ ನಾಯಕರೆಂದು ಘೋಷಿಸಲಾಗಿದೆ. ನಮಗೆ ಗೊತ್ತಿರುವ ಮಾಹಿತಿ ಪ್ರಕಾರ ಕೊಹ್ಲಿ ನಾಯಕತ್ವ ವಿಶ್ವಕಪ್ ಟೂರ್ನಿಯೊಂದಿಗೆ ಅಂತ್ಯಗೊಂಡಿತ್ತು. ಹೀಗಾಗಿ ಅವರನ್ನು ಮರು ಆಯ್ಕೆ ಮಾಡುವ ಮೊದಲು ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು,'' ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ಎಂಎಸ್‌ಕೆ ಪ್ರಸಾದ್ ಮುಂದಾಳತ್ವದ ಆಯ್ಕೆ ಸಮಿತಿಯು ಕೊಹ್ಲಿಯ ಸಲಹೆಗೆ ಪೂರಕವಾಗಿ ಟೆಸ್ಟ್, ಏಕದಿನ ಹಾಗೂ ಟಿ20 ತಂಡಗಳನ್ನು ಆಯ್ಕೆ ಮಾಡಿದೆ. ವಿಶ್ವಕಪ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ ಎನ್ನುವ ಕಾರಣವೊಡ್ಡಿ ಕೇದಾರ್ ಜಾಧವ್ ಹಾಗೂ ದಿನೇಶ್ ಕಾರ್ತಿಕ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಆದರೆ, ಭಾರತ ತಂಡ ವಿಶ್ವಕಪ್ ಗೆಲ್ಲದೇ ಅವರಿಬ್ಬರು ಮಾತ್ರ ನಿರೀಕ್ಷಿತ ಆಟವಾಡಿಲ್ಲ ಎಂದರೆ ಹೇಗೆ,'' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OrPrsd
ಕೋಚ್ ಸ್ಥಾನದಲ್ಲಿ ರವಿಶಾಸ್ತ್ರಿ ಮುಂದುವರಿಯಬೇಕು: ಕೊಹ್ಲಿ
ಮುಂಬಯಿ: ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನಾಗಿ ಅವರೇ ಮುಂದುವರಿಯುವಂತೆ ನಾಯಕ ಬಯಸಿದ್ದಾರೆ. ವೆಸ್ಟ್‌ಇಂಡೀಸ್ ಪ್ರವಾಸಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ವಿರಾಟ್ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಈ ವಿಚಾರಕ್ಕೆಸಂಬಂಧಪಟ್ಟಂತೆ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಹಹಾ ಸಮಿತಿಯು ನನ್ನನ್ನು ಇದುವರೆಗೆ ಸಂಪರ್ಕಿಸಿಲ್ಲ. ಆದರೆ ನಾವೆಲ್ಲವೂ ರವಿ ಬಾಯ್ ಜತೆ ಉತ್ತಮ ಒಡನಾಟವನ್ನು ಹೊಂದಿದ್ದೇವೆ. ಅವರೇ ಕೋಚ್ ಆಗಿ ಮುಂದುವರಿಯಲು ಬಯಸುತ್ತೇವೆ. ಆದರೆ ನಾನೀಗಲೇ ಹೇಳಿರುವಂತೆಯೇ ಇದನ್ನು ಸಿಎಸಿ ನಿರ್ಧರಿಸಲಿದೆ ಎಂದು ಹೇಳಿದರು. 2017ರಲ್ಲಿ ಅನಿಲ್ ಕುಂಬ್ಳೆ ಜತೆಗಿನ ಭಿನ್ನಾಭಿಪ್ರಾಯದ ಬೆನ್ನಲ್ಲೇ ರವಿಶಾಸ್ತ್ರಿ ಪ್ರಧಾನ ಕೋಚ್ ಹುದ್ದೆಯನ್ನು ವಹಿಸುವಂತೆ ಕೊಹ್ಲಿ ಬಯಸಿದ್ದರು. ಅಲ್ಲದೆ ಶಾಸ್ತ್ರಿ ಆಯ್ಕೆಯಲ್ಲಿ ಕೊಹ್ಲಿ ಆಸಕ್ತಿಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗಿತ್ತು. ಕಳೆದರೆಡು ವರ್ಷಗಳಲ್ಲಿ ಉತ್ತಮ ನಿರ್ವಹಣೆ ನೀಡಿರುವುದು ರವಿಶಾಸ್ತ್ರಿ ಅವರನ್ನೇ ಕೋಚ್ ಸ್ಥಾನದಲ್ಲೇ ಉಳಿಸುವ ಸಾಧ್ಯತೆಯಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ynNqT2
ಕರ್ನಾಟಕ ಮೂಲದ ಮಹಿಳೆಯಿಂದ ಮಕ್ಕಳ ಕೊಲೆ, ಆತ್ಮಹತ್ಯೆ; ಪ್ರಕರಣಕ್ಕೆ ಹೊಸ ತಿರುವು
: ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೂವರು ಮಕ್ಕಳನ್ನು ಕೊಂದು ಮೂಲದ ಮಹಿಳೆಯೊಬ್ಬರು ಮಾಡಿಕೊಂಡ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಶವಗಳ ಮರಣೋತ್ತರ ಪರೀಕ್ಷಾ ವರದಿಗಳ ಪ್ರಕಾರ ಮೃತ ಹೆಣ್ಣು ಮಕ್ಕಳ ಮೇಲೆ ನಡೆದಿತ್ತು ಎಂದು ತಿಳಿದು ಬಂದಿದೆ. ಮಹಿಳೆಯ ಪತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು ತಾನು ತನ್ನದೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದೆ, ಇದೇ ಕಾರಣಕ್ಕೆ ಪತ್ನಿ ಮತ್ತು ನನ್ನ ನಡುವೆ ಜಗಳವಾಗುತ್ತಿತ್ತು, ಎಂದಾತ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಮಹಿಳೆ ಇಂತಹ ಕೃತ್ಯಕ್ಕೆ ಕೈ ಹಾಕಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪಿಂಪ್ರಿ ಚಿಂಚವಾಡ ಪ್ರದೇಶದಲ್ಲಿ ವಾಸವಾಗಿದ್ದ ಕರ್ನಾಟಕ ಮೂಲದ 28 ವರ್ಷದ ಫಾತಿಮಾ, ಭಾನುವಾರ ದಿನ ಮಕ್ಕಳಾದ ಅಲಿಯಾ (9), ಜೋಭಾ (7) ಮತ್ತು ಜಿಯಾನ್ (6) ಅವರನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಳು. ಈ ಘಟನೆ ನಡೆದಾಗ ಫಾತಿಮಾ ಪತಿ ಅಕ್ರಮ್ ಮನೆಯಲ್ಲಿರಲಿಲ್ಲ. ಕುಟುಂಬಕ್ಕೆ ಆರ್ಥಿಕ ಹೊಡೆತ ಬಡಿದಿತ್ತು. ಹಣ್ಣಿನ ವ್ಯಾಪಾರಿಯಾಗಿದ್ದ ಅಕ್ರಮ್ ಇತ್ತೀಚಿಗೆ ಭಾರಿ ನಷ್ಟವನ್ನು ಅನುಭವಿಸಿದ್ದ. ಹಣಕಾಸಿನ ಸಮಸ್ಯೆ ಹಿನ್ನೆಲೆಯಲ್ಲಿ ದಂಪತಿ ನಡುವೆ ಸದಾ ಜಗಳವಾಗುತ್ತಿತ್ತು. ಇದೆಲ್ಲದರಿಂದ ಬೇಸತ್ತ ಫಾತಿಮಾ ತನ್ನ ಮೂವರು ಮಕ್ಕಳಿಗೂ ನೇಣು ಹಾಕಿ ಸಾಯಿಸಿ ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೊದಲು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
from India & World News in Kannada | VK Polls https://ift.tt/2MoMKVC
ಸಮಾಜಕ್ಕೆ ತಕ್ಕಂತೆ ಬದಲಾದ ಪಠ್ಯ: ಲಿವಿಂಗ್ ರಿಲೇಷನ್ ಬಗ್ಗೆಯೂ ಇದೆ ಮಾಹಿತಿ!
ಮುಂಬಯಿ: ಕುಟುಂಬ ವಿಭಾಗೀಕರಣ, ಕೌಟುಂಬಿಕ ಸಂಬಂಧಗಳ ಬಗ್ಗೆ ತನ್ನದೇ ಆದ ಪರಂಪರೆ ಹೊಂದಿರುವ ದೇಶದಲ್ಲಿ ಇದೀಗ ಕೂಡು ಕುಟುಂಬ ಕಾಣುವುದು ಬಲು ಅಪರೂಪ. ಸಮಾಜದಲ್ಲಿ ಇದೀಗ ಲಿವಿಂಗ್ ರಿಲೇಶನ್‌ಶಿಪ್, ಸಲಿಂಗ ಕಾಮ ಇತ್ಯಾದಿಗಳು ಅಧಿಕ. ಹೀಗಾಗಿಯೇ ಸರಕಾರ ಕ್ಲಾಸ್ 11ರ ಸೋಷಿಯಾಲಜಿ ಪಠ್ಯಕ್ರಮದಲ್ಲಿ ಈ ಎಲ್ಲ ವಿಧಗಳನ್ನು ನಮೂದಿಸಿದೆ. ಈ ಹಿಂದೆ ಕೇವಲ ವಿಭಕ್ತ ಹಾಗೂ ಅವಿಭಕ್ತ ಕುಟುಂಬದ ಬಗ್ಗೆ ಮಾತ್ರವೇ ಮಾಹಿತಿ ಇತ್ತು. ಈ ವರ್ಷದಿಂದ ಈ ಎರಡು ಕುಟುಂಬ ವಿಧಗಳು ಮಾತ್ರವಲ್ಲದೆ, ಪೋಷಕರಲ್ಲಿ ಒಬ್ಬರು ಮಾತ್ರ ಇರುವವರು, ಸಲಿಂಗ ಪೋಷಕರು ಹಾಗೂ ಸ್ಟೆಪ್ ಪೇರೆಂಟ್ಸ್ ಕುಟುಂಬಗಳ ಬಗ್ಗೆಯೂ ಪಠ್ಯದಲ್ಲಿ ಮಾಹಿತಿ ಒದಗಿಸಲಾಗಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಪಬ್ಲಿಷಿಂಗ್ ಬ್ಯೂರೋದಿಂದ ಪ್ರಕಟವಾಗುವ ಪಠ್ಯ ಪುಸ್ತಕವು ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಈ ಎಲ್ಲ ಹೊಸ ಕುಟುಂಬ ವಿಧಗಳನ್ನು ಹೊಂದಿರಲಿದೆ. ಸಮಾಜಿಕ ತಾಣಗಳ ಯುಗದಲ್ಲಿ ಸಲಿಂಗ ಕಾಮ ಮದುವೆ, ಲಿಂಗ ಸಮಾನತೆಗಳು ಹೊಸ ಸಂಸ್ಕೃತಿಯನ್ನು ಆರಂಭಿಸುತ್ತಿದೆ. ಇವನ್ನು ಕಲ್ಚರಲ್ ಹೈಬ್ರಿಡೈಸೇಷನ್ ಎನ್ನಬಹುದೆಂದು ವ್ಯಾಖ್ಯಾನಿಸಲಾಗಿದೆ. ಅಲ್ಲದೆ 2018 ಸೆಪ್ಟೆಂಬರ್ 6 ರಂದು ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಈ ಎಲ್ಲ ಹೊಸ ವಿಚಾರಗಳು ಸಮಾಜದಲ್ಲಿ ಬದುಕಿನ ಆಯಾಮವನ್ನು ಬದಲಾವಣೆ ಮಾಡಲಾಗುತ್ತಿದೆ. ಯುರೋಪ್ ಸೇರಿದಂತೆ ಭಾರತದ ಅನೇಕ ಮೆಟ್ರೋ ಸಿಟಿಗಳನ್ನು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವವರು ಅನೇಕ ಮಂದಿಯನ್ನು ಕಾಣಬಹುದು. ಯುವ ಸಮುದಾಯ ಇಂದಿನ ದಿನಲ್ಲಿ ಇಂತಹ ಸಂಸ್ಕೃತಿಯನ್ನು ಅನುಸರಿಸುತ್ತಿರುವುದರಿಂದ ಈ ಬಗ್ಗೆ ಪಠ್ಯದಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗದೆ. ಪ್ರಚಲಿತ ವಿದ್ಯಮಾನಗಳ ಕುರಿತ ಪಠ್ಯ ಇಂದಿನ ಅವಶ್ಯಕತೆಯಾಗಿದೆ. ಇದರಿಂದ ಮಕ್ಕಳಿಗೆ ಜೀವನದಲ್ಲಿ ಎದರಾಗುವ ಅನೇಕ ಸವಾಲುಗಳ ಬಗ್ಗೆ ಮಾಹಿತಿ ನೀಡಿದಂತಾಗುತ್ತದೆ. ಕೇವಲ ಮಾಹಿತಿಗಾಗಿ ಮಾತ್ರವಲ್ಲದೆ ಇಂತಹುಗಳಿಂದ ಎದುರಾಗುವ ವಿಚಾರಗಳ ಬಗ್ಗೆಯೂ ಮಕ್ಕಳು ಅರಿತುಕೊಳ್ಳಬೇಕಿದೆ. ಪಠ್ಯ ಸಮಾಜದ ಬದಲಾವಣೆಗಳ ಕೈಗನ್ನಡಿಯಾಗಿರಬೇಕು ಎಂಬ ಆಶಯ ಇದಾಗಿದೆ ಎಂದು ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷ ವೈಶಾಲಿ ದಿವಾಕರ್ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದರಿಂದ, ತಪ್ಪು-ಒಪ್ಪಗಳ ಬಗ್ಗೆ, ಸಮಾಜ ಕಾಣುವ ದೃಷ್ಟಿಕೋನಗಳ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಿಜಿ ವೇಜ್ ಕಾಲೇಜಿನ ಸೋಷಿಯಾಲಜಿ ಮುಖ್ಯಸ್ಥೆ ತ್ರಿಪ್ತಿ ವೈಟಿ ಹೇಳಿದ್ದಾರೆ. ಇಂದಿನ ದಿನಕ್ಕೆ ಅನುಗುಣವಾಗಿ ಪಠ್ಯ ಪುಸ್ತಕವನ್ನು ಪ್ರಸ್ತುತ ಪಡಿಸುವ ಇರಾದೆ ಇದೆ. ಹೊಸ ವಿಚಾರದ ಜತೆ ಸಮಾಜಕ್ಕೆ ಹತ್ತಿರುವ ಆಗಿರುವ, ದೈನಂದಿನ ಜೀವನಕ್ಕೆ ಅಗತ್ಯವಾಗಿರುವ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಲಾಗುತ್ತಿದೆ ಎಂದು ಬಾಲಭಾರತಿ ಮುಖ್ಯ ಸಮನ್ವಯ ಅಧಿಕಾರಿ ಪ್ರಾಚಿ ಸಾಥೆ ಹೇಳಿದ್ದಾರೆ.
from India & World News in Kannada | VK Polls https://ift.tt/2SK3bg8
ಅತ್ಯಾಚಾರಕ್ಕೆ ಯತ್ನಿಸಿದವನನ್ನು ಕೊಂದು ಹೂತು ಹಾಕಿದಳು?
ಕೋಲ್ಕತಾ: ತನ್ನ ಮೇಲೆ ಎಸಗಲು ಪ್ರಯತ್ನಿಸಿದ ಕಾಮುಕನನ್ನು ಕೊಂದ ಮಹಿಳೆ, ಬಳಿಕ ಮೃತ ದೇಹವನ್ನು ಹೂತು ಹಾಕಿದ ಗುರುವಾರ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಆಕೆಯ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶವಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶನಿವಾರ ಸಾಯಂಕಾಲ ಉಸ್ತಿ ಪೊಲೀಸ್ ಠಾಣೆಗೆ ಪೋನ್ ಕರೆ ಮಾಡಿದ ಮಹಿಳೆಯೊಬ್ಬಳು ನನ್ನ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಮತ್ತು ನನ್ನ ಮಗಳನ್ನು ಕೊಲ್ಲಲು ಯತ್ನಿಸಿದ ವ್ಯಕ್ತಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಸಾಯಿಸಿದ್ದಾಗಿ ಹೇಳಿದ್ದಳು. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ತನ್ನ ನೆರೆಮನೆ ನಿವಾಸಿ ತಪನ್ ಶಾ (35), ಗುರುವಾರ ಸಂಜೆ ನನ್ನನ್ನು ಪೊದೆಯೊಂದರ ಬಳಿ ಎಳೆದೊಯ್ದು ಅತ್ಯಾಚಾರ ಎಸಗಲು ಪ್ರಯತ್ನಿಸಿದ. ನನ್ನ ಕಿರುಚಾಟ ಕೇಳಿ 6 ವರ್ಷದ ಮಗಳು ಓಡಿ ಬಂದಾಗ ಆಕೆಯ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ. ತಕ್ಷಣ ಮನೆಗೆ ಓಡಿದ ನಾನು ಕಬ್ಬಿಣದ ರಾಡ್ ತಂದು ಆತನ ತಲೆಗೆ ಹೊಡೆದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ. ಮಗಳನ್ನು ಮನೆಗೆ ತಂದು ಬಿಟ್ಟು, ಬಳಿಕ ಮತ್ತೆ ಕೃತ್ಯ ನಡೆದ ಸ್ಥಳಕ್ಕೆ ಹೋಗಿ ಆತನ ದೇಹವನ್ನು ಬಾಳೆ ತೋಟದಲ್ಲಿ ಹೊಂಡ ತೆಗೆದು ಮುಚ್ಚಿದೆ. ಈ ವಿಷಯ ನನ್ನ ಗಂಡನಿಗೂ ಗೊತ್ತಿಲ್ಲ. ಬಳಿಕ ಪಶ್ಚಾತಾಪವಾಗಿ ನಿಮಗೆ ಫೋನ್ ಕರೆ ಮಾಡಿದೆ ಎಂದಾಕೆ ಹೇಳಿದ್ದಳು. ಕಥೆಗೆ ಹೊಸ ತಿರುವು ಆಕೆಯನ್ನು ಸುದೀರ್ಘ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಆಕೆಯದು ಕಟ್ಟು ಕಥೆ ಎನಿಸಿತು. ಮೃತ ವ್ಯಕ್ತಿ ಮತ್ತು ಮಹಿಳೆ ಸಂಬಂಧಿಕರಾಗಿದ್ದು ಆಸ್ತಿ ವಿವಾದವೂ ಸಹ ಕೊಲೆಗೆ ಕಾರಣವಾಗಿರಬಹುದೆಂದು ಪೊಲೀಸರು ಅನುಮಾನಗೊಂಡಿದ್ದು, ಅದಕ್ಕೆ ಪೂರಕವಾಗಿ ಆಕೆಯ ಪತಿ ಸಹ ನಾಪತ್ತೆಯಾಗಿದ್ದಾನೆ. ಇಬ್ಬರು ಸೇರಿ ಮಾಡಿರುವ ಶಂಕೆಯಿಂದ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
from India & World News in Kannada | VK Polls https://ift.tt/30YCeIH
ಉನ್ನಾವೋ ರೇಪ್ ಸಂತ್ರಸ್ತೆ ಅಪಘಾತ ಪ್ರಕರಣ ಸಿಬಿಐಗೆ
ಹೊಸದಿಲ್ಲಿ: ಸಂತ್ರಸ್ತೆ ಕಾರು ಅಪಘಾತ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಉತ್ತರ ಪ್ರದೇಶದ ಪೊಲೀಸರು ನಿರ್ಧರಿಸಿದ್ದಾರೆ. ಪ್ರಕರಣ ತನಿಖೆಗೊಳಪಡಬೇಕು ಎಂಬ ಸಂತ್ರಸ್ತೆ ಕುಟುಂಬದ ಮನವಿಯನ್ನು ಪೊಲೀಸರು ಸರಕಾರಕ್ಕೆ ಕಳುಹಿಸಿದ್ದಾರೆ. ಈ ಪತ್ರವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಬೇಕಾಗಿದ್ದು, ಬಳಿಕವಷ್ಟೇ ಸಿಬಿಐ ತನಿಖೆ ಬಗ್ಗೆ ಖಾತ್ರಿ ಸಿಗಲಿದೆ. ಉನ್ನಾವೋ ಬಿಜೆಪಿ ಶಾಸಕ ಆರೋಪಿಯಾಗಿರುವ ಈ ಪ್ರಕರಣ ಕಳೆದೊಂದು ವರ್ಷದ ಹಿಂದೆ ನಡೆದಿತ್ತು. ಭಾನುವಾರ ಸಂತ್ರಸ್ತೆ, ಆಕೆಯ ವಕೀಲ, ಮತ್ತು ಇಬ್ಬರು ಚಿಕ್ಕಮ್ಮಂದಿರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿತ್ತು. ಅವರೆಲ್ಲರು ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿರುವ ಸಂತ್ರಸ್ತೆಯ ಚಿಕ್ಕಮ್ಮನ್ನನ್ನು ಭೇಟಿಯಾಗಲು ಹೊರಟಿದ್ದಾಗ ದುರ್ಘಟನೆ ನಡೆದಿತ್ತು. ರಾಯಬರೇಲಿ ಬಳಿ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಆಕೆಯ ಇಬ್ಬರು ಚಿಕ್ಕಮ್ಮಂದಿರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಾಯಗೊಂಡ ಸಂತ್ರಸ್ತೆ ಮತ್ತು ವಕೀಲನನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಬಾಲಕಿ ಹಾಗೂ ಆಕೆಯ ಪರ ವಕೀಲರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೆಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲಖನೌ ವಿಭಾಗದ ಎಡಿಜಿಪಿ ರಾಜೀವ್ ಕೃಷ್ಣನ್ ತಿಳಿಸಿದ್ದಾರೆ. 2017ರಲ್ಲಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿದ್ದ ಬಾಲಕಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿದ್ದಳು.
from India & World News in Kannada | VK Polls https://ift.tt/2LLUjWM
ದಲಿತ ಶಾಸಕಿ ಪ್ರತಿಭಟನೆ: ಸ್ಥಳಕ್ಕೆ ಸಗಣಿ ನೀರು ಸಿಂಪಡಿಸಿ ಶುಚಿಗೊಳಿಸಿದ ಕಾಂಗ್ರೆಸ್
ತ್ರಿಶೂರ: ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಯುವ ಕಾರ್ಯಕರ್ತರು ನೀರು ಸಿಂಪಡಿಸಿ ಶುದ್ಧೀಕರಣಗೊಳಿಸಿರುವ ಘಟನೆ ಕೇರಳದ ತ್ರಿಶೂರದಲ್ಲಿ ನಡೆದಿದೆ. ನಾನು ದಲಿತ ಸಮುದಾಯಕ್ಕೆ ಸೇರಿದವಳೆಂಬ ಕಾರಣಕ್ಕೆ ನಾನು ಪ್ರತಿಭಟನೆ ನಡೆಸಿದ್ದ ಸ್ಥಳವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಸೆಗಣಿ ನೀರು ಸಿಂಪಡಿಸಿ ಶುಚ್ಚಿಗೊಳಿಸಿದ್ದಾರೆ. ಇದು ಜಾತಿ ನಿಂದನೆಯ ಸಂಕೇತ ಎಂದು ಶಾಸಕಿ ಚೆರ್ಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏನಿದು ಘಟನೆ ಚೆರ್ಪು, ತ್ರಿಪ್ರಯಾರ್ ಮತ್ತು ಗುರುವಾಯೂರ್ ರಸ್ತೆ ದುರಸ್ತಿ ಕಾರ್ಯ ವಿಳಂಬ ಖಂಡಿಸಿ ತ್ರಿಶೂರ್ ಜಿಲ್ಲೆಯ ನಾಟ್ಟಿಕಾ ವಿಧಾನಸಭಾ ಕ್ಷೇತ್ರದ ಆಡಳಿತಾರೂಢ ಎಲ್‌ಡಿಎಫ್ ಪಕ್ಷದ ದಲಿತ ಶಾಸಕಿಯಾಗಿರುವ ಗೀತಾ ಗೋಪಿ ಅವರು ಶನಿವಾರ ಪಿಡಬ್ಲ್ಯೂಡಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಶೀಘ್ರದಲ್ಲಿಯೇ ರಸ್ತೆ ದುರಸ್ಥಿ ಕಾರ್ಯ ಮುಗಿಸುತ್ತೇವೆಂದು ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯಲ್ಲಿ ಹಿಂಪಡೆದಿದ್ದರು. ಆದರೆ, ಶಾಸಕಿ ಪ್ರತಿಭಟನೆಯನ್ನು ಕೈ ಬಿಟ್ಟು, ಕಚೇರಿಯಿಂದ ಹೊರಬಂದ ಬಳಿಕ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸ್ಥಳ ಮತ್ತು ಕಚೇರಿಗೆ ಸಗಣಿ ನೀರು ಸಿಂಪಡಿಸಿ ಶುದ್ಧಗೊಳಿಸಿದ್ದಾರೆ.
from India & World News in Kannada | VK Polls https://ift.tt/2Or8tPn
ಸ್ವಾತಂತ್ರ್ಯ ದಿನ ಐಎಸ್‌ಐ ವಿಧ್ವಂಸಕ ತೃತ್ಯ ತಡೆಯಲು ಹೆಚ್ಚುವರಿ ಮಿಲಿಟರಿ ನಿಯೋಜನೆ: ಕೇಂದ್ರ ಸ್ಪಷ್ಟನೆ
ಶ್ರೀನಗರ: ಸ್ವಾತಂತ್ರ್ಯ ದಿನಾಚರಣೆ ವೇಳೆ ಪಾಕಿಸ್ತಾನದ ಐಎಸ್‌ಐ ಉಗ್ರ ದಾಳಿ ನಡೆಸಲು ಸಂಚು ಹೂಡಿದೆ ಎಂಬ ಗುಪ್ತಚರ ಮಾಹಿತಿಗಳ ಮೇರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. 35ಎ ಮತ್ತು 370 ವಿಧಿಗಳ ರದ್ದತಿ ಪ್ರಸ್ತಾಪಕ್ಕೂ ಭದ್ರತಾ ಪಡೆಗಳ ಈ ನಿಯೋಜನೆಗೂ ಸಂಬಂಧವಿಲ್ಲ ಎಂದು ಸರಕಾರ ಹೇಳಿದೆ. ಎರಡು ದಿನಗಳ ಹಿಂದೆಯಷ್ಟೇ 100 ಕಂಪನಿಗಳಷ್ಟು (ಸುಮಾರು 10,000 ಯೋಧರು) ಅರೆ ಮಿಲಿಟರಿ ಪಡೆಗಳನ್ನು ಹೆಚ್ಚುವರಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು. 35ಎ ಮತ್ತು ರದ್ದತಿಯ ಪೂರ್ವಭಾವಿ ಕ್ರಮವಾಗಿಯೇ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಕಾಶ್ಮೀರದಲ್ಲಿ ಗುಲ್ಲೆದ್ದಿತ್ತು. ಆಗಸ್ಟ್ 15ರಂದು ಪಾಕಿಸ್ತಾನದ ಐಎಸ್‌ಐ ನಡೆಸಬಹುದಾದ ಯಾವುದೇ ವಿಧ್ವಂಸಕ ಕೃತ್ಯಗಳು ಮತ್ತು ದುಸ್ಸಾಹಸಗಳನ್ನು ತಡೆಯುವುದಷ್ಟೇ ಈ ವಿಶೇಷ ಭದ್ರತಾ ಪಡೆಗಳ ನಿಯೋಜನೆಯ ಉದ್ದೇಶ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರತ್ಯೇಕತಾವಾದಿ ಶಕ್ತಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸಮರ ಸಾರಿದ್ದು, ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಐಎಸ್‌ಐ ಹತಾಶೆಗೊಂಡಿದೆ. ರಾಜ್ಯದಲ್ಲೀಗ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಹೋಟೆಲ್‌ಗಳು ಭರ್ತಿಯಾಗಿವೆ. ಅಮರನಾಥ ಯಾತ್ರಿಕರ ಸಂಖ್ಯೆಯೂ ಹೆಚ್ಚಾಗಿದೆ. ಕಲ್ಲು ತೂರಾಟದ ಪ್ರಕರಣಗಳು ತಗ್ಗಿವೆ. 'ಬಂದ್, ಮುಷ್ಕರದ ಕರೆಗಳೂ ಕಡಿಮೆಯಾಗಿವೆ. ಜನತೆಯೂ ಇಂತಹ ಕರೆಗಳಿಗೆ ಸ್ಪಂದಿಸುತ್ತಿಲ್ಲ. ಜಮ್ಮು ಕಾಶ್ಮೀರದ ಬಗ್ಗೆ ಪಾಕಿಸ್ತಾನ ಬಿಂಬಿಸಲು ಯತ್ನಿಸುತ್ತಿರುವ ಚಿತ್ರಣಗಳೆಲ್ಲವೂ ಸುಳ್ಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರುಳುವುದನ್ನು ಐಎಸ್‌ಐ ಸಹಿಸುತ್ತಿಲ್ಲ. ಹೀಗಾಗಿ ಶತಾಯಗತಾಯ ವಿಧ್ವಂಸಕ ಕೃತ್ಯಗಳನ್ನು ನಡೆಸಲೇಬೇಕೆಂದು ಸಂಚು ಹೂಡಿದೆ. ಅದನ್ನು ವಿಫಲಗೊಳಿಸಲು ನಮ್ಮ ಭದ್ರತಾ ಪಡೆಗಳು ಸಮರ್ಥವಾಗಿವೆ ಎಂದು ಅವರು ತಿಳಿಸಿದರು.
from India & World News in Kannada | VK Polls https://ift.tt/2ymykNj
ಗ್ರಿಲ್ಸ್ ಜತೆ ಕಾಡು ಸುತ್ತಾಡಲಿದ್ದಾರೆ ಪ್ರಧಾನಿ ಮೋದಿ
ಹೊಸದಿಲ್ಲಿ: ಹೊಸ ಕಾರ್ಯಕ್ರಮ, ಯೋಜನೆಗಳಲ್ಲಿ ಸದಾ ಒಂದು ಹೆಜ್ಜೆ ಮುಂದಿಡುವ ಪ್ರಧಾನಿ ಮೋದಿ, ಇದೀಗ ಅಡ್ವೆಂಚರಸ್ ಕಾರ್ಯಕ್ರಮವೊಂದರಲ್ಲಿ ಸುದ್ದಿಯಾಗಿದ್ದಾರೆ. ಪ್ರತಿಷ್ಠಿತ ವಾಹಿನಿಯ ಕಾರ್ಯಕ್ರಮದಲ್ಲಿ ಪ್ರಧಾನಿ ಕಾಣಿಸಿಕೊಳ್ಳಲಿದ್ದಾರೆ. ಕಾಡು ಮೇಡು ಅಲೆದು, ಹೊಸ ವಿಚಾರ, ಪ್ರಾಣಿ ಪಕ್ಷಿ, ಸರೀಸೃಪ ಎಲ್ಲ ವಿಧಗಳನ್ನು ತಿಳಿಸುತ್ತಿದ್ದ ಟಿವಿ ಶೋನಲ್ಲಿ ಪ್ರಧಾನಿ ಮೋದಿಯೂ ಭಾಗಿಯಾಗಿರುವುದು ಇದೀಗ ಸಾಮಾಜಿಕ ತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಡಿಸ್ಕವರಿ ಚಾನಲ್‌ನಲ್ಲಿ ಬಿಯರ್ ಗ್ರಿಲ್ಸ್ ನಡೆಸಿಕೊಡುವ ಆಗಸ್ಟ್ 12 ರಂದು ರಾತ್ರಿ 9ಯ ಮ್ಯಾನ್ ವರ್ಸಸ್ ವೈಲ್ಡ್ ಶೋನಲ್ಲಿ ಮೋದಿಯ ಮತ್ತೊಂದು ಆಸಕ್ತಿಯು ಜಗತ್ತಿಗೆ ಕಾಣಸಿಗಲಿದೆ. ಕಾಡು, ನದಿಯಲ್ಲಿ ಮೋದಿ ಗ್ರಿಲ್ಸ್ ಜತೆ ಸುತ್ತಾಡುವ ಶೋ ಪ್ರೋಮೋ ಇದೀಗ ಟ್ವಿಟರ್ ಹಾಗೂ ಎಲ್ಲರ ವಾಟ್ಸ್‌ಪ್ ಸ್ಟೇಟಸ್‌ಗಳಲ್ಲಿ ಹರಿದಾಡಿದೆ. ಪ್ರೊಮೋ ವಿಶೇಷತೆ! ಗ್ರಿಲ್ಸ್‌ನ್ನು ಭಾರತಕ್ಕೆ ಸ್ವಾಗತಿಸುತ್ತಿದ್ದು, ಗ್ರಿಲ್ ಜತೆಗೆ ಕಾಡುದಾರಿಯಲ್ಲಿ ಸಾಗಿದ್ದಾರೆ. ಅಷ್ಟೇ ಅಲ್ಲದೆ, ನದಿಯಲ್ಲಿ ತೆಪ್ಪದಲ್ಲಿ ಕುಳಿತು ಅರಣ್ಯ ಸಂಪತ್ತಿನ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ. ನೀವು ಭಾರತದ ಅತ್ಯಂತ ಪ್ರಮುಖ ವ್ಯಕ್ತಿ, ನಿಮ್ಮನ್ನು ಜೀವಂತವಾಗಿರಿಸುವುದು ನನ್ನ ಆದ್ಯ ಕರ್ತವ್ಯ ಎಂದು ಗ್ರಿಲ್ಸ್ ವೀಡಿಯೋದಲ್ಲಿ ಹೇಳಿಕೆ ನೀಡಿ, ಮೋದಿಗೆ ವಿಶೇಷ ವಸ್ತ್ರಗಳನ್ನು ಧರಿಸಲು ನೀಡುವುದನ್ನೂ ಕಾಣಬಹುದು! 180 ದೇಶದಲ್ಲಿರುವ ಜನರು, ಮೋದಿ ಅವರ ಮತ್ತೊಂದು ಮುಖವನ್ನು ಆಗಸ್ಟ್ 12 ರಂದು ಡಿಸ್ಕವರಿ ಚಾನಲ್‌ನಲ್ಲಿ ಪ್ರಸಾರವಾಗುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಮೂಲಕ ನೋಡಲಿದ್ದಾರೆ ಎಂದು ಗ್ರಿಲ್ಸ್ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಈ ಹಿಂದೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಗ್ರಿಲ್ಸ್ ಜತೆ ಇಂತಹ ಅಡ್ವೆಂಚರಸ್ ಟ್ರಿಪ್ ಆಯೋಜಿಸಿ, ಟಿವಿ ಶೋನಲ್ಲಿ ಪಾಲ್ಗೊಂಡಿದ್ದರು. 2018ರಲ್ಲಿ ದೇಶದಲ್ಲಿನ ಹುಲಿಗಳ ಸಂಖ್ಯೆ 2967ರಷ್ಟಾಗಿದೆ. 2014ರಲ್ಲಿ ದೇಶದಲ್ಲಿ 2226 ಇದ್ದವು. ನಾಲ್ಕು ವರ್ಷದಲ್ಲಿ ಹುಲಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿರುವುದಾಗಿ ಮೋದಿ ಘೋಷಣೆ ಮಾಡಿದ ಬಳಿಕ, ಮೋದಿ ಜತೆಗೆ ಮ್ಯಾನ್ ವರ್ಸಸ್ ವೈಲ್ಡ್ ಶೋ ವೀಡಿಯೋ ಬಿಡುಗಡೆ ಮಾಡಲಾಗಿದೆ. 2022 ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಸಂಬಂಧ ಸೈಂಟ್ ಪೀಟರ್ಸ್ಬರ್ಗ್‌ನಲ್ಲಿ ನಡೆದ ಸಮ್ಮೇಳನದಲ್ಲಿ ತೀರ್ಮಾನಿಸಲಾಗಿತ್ತು. ಭಾರತದಲ್ಲಿ ಈ ಗುರಿಯನ್ನು ನಾಲ್ಕು ವರ್ಷ ಮುಂಚಿತವಾಗಿಯೇ ತಲುಪುವ ವಿಶ್ವಾಸವಿದೆ ಎಂದು ಮೋದಿ ವಿಶ್ವ ಹುಲಿ ದಿನಾಚರಣೆಯ ಅಂಗವಾಗಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
from India & World News in Kannada | VK Polls https://ift.tt/2MqOlKr
ಮೂವರು ಮಕ್ಕಳನ್ನು ಕೊಂದು ಸಾವಿಗೆ ಶರಣಾದ ಕರ್ನಾಟಕದ ಮಹಿಳೆ
: ಆರ್ಥಿಕ ಸಮಸ್ಯೆಯಿಂದ ನೊಂದಿದ್ದ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳನ್ನು ಕೊಂದು ತಾನು ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ಮೃತಳನ್ನು ಮೂಲದ 28 ವರ್ಷದ ಫಾತಿಮಾ, ಆಕೆಯ ಮಕ್ಕಳಾದ ಅಲಿಯಾ (9), ಜೋಭಾ (7) ಮತ್ತು ಜಿಯಾನ್ (6) ಎಂದು ಗುರುತಿಸಲಾಗಿದೆ. ಈ ಘಟನೆ ನಡೆದಾಗ ಫಾತಿಮಾ ಪತಿ ಅಕ್ರಮ್ ಮನೆಯಲ್ಲಿರಲಿಲ್ಲ. ಪಿಂಪ್ರಿ ಚಿಂಚವಾಡ ಪ್ರದೇಶದಲ್ಲಿ ವಾಸವಾಗಿದ್ದ ಕುಟುಂಬಕ್ಕೆ ಆರ್ಥಿಕ ಹೊಡೆತ ಬಡಿದಿತ್ತು. ಹಣ್ಣಿನ ವ್ಯಾಪಾರಿಯಾಗಿದ್ದ ಅಕ್ರಮ್ ಇತ್ತೀಚಿಗೆ ಭಾರಿ ನಷ್ಟವನ್ನು ಅನುಭವಿಸಿದ್ದ. ಹಣಕಾಸಿನ ಸಮಸ್ಯೆ ಹಿನ್ನೆಲೆಯಲ್ಲಿ ದಂಪತಿ ನಡುವೆ ಸದಾ ಜಗಳವಾಗುತ್ತಿತ್ತು. ಇದೆಲ್ಲದರಿಂದ ಬೇಸತ್ತ ಫಾತಿಮಾ ತನ್ನ ಮೂವರು ಮಕ್ಕಳಿಗೂ ನೇಣು ಹಾಕಿ ಸಾಯಿಸಿ ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಂಜೆ ಪತಿ ಮನೆಗೆ ಮರಳಿದಾಗ ಬಾಗಿಲು ಒಳಗಡೆಯಿಂದ ಮುಚ್ಚಿತ್ತು. ಎಷ್ಟೇ ತಟ್ಟಿದರೂ ಬಾಗಿಲು ತೆರೆಯದಿದ್ದಾಗ ಆತ ಪೊಲೀಸರಿಗೆ ಕರೆ ಮಾಡಿದ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ನಾಲ್ಕು ಮೃತದೇಹಗಳು ಕಂಡು ಬಂದಿವೆ. ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿಲ್ಲ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.
from India & World News in Kannada | VK Polls https://ift.tt/2ylPuL8
ಆಪ್ ಮುಜೆ ಫ್ಯಾರಿ ಲಗ್ತೀ ಹೆ ಎಂದ ಅಜಾಂ ಖಾನ್ ಕ್ಷಮೆ ಯಾಚನೆ!
ಹೊಸದಿಲ್ಲಿ: ಸ್ಪೀಕರ್ ಸ್ಥಾನದಲ್ಲಿದ್ದ ಬಿಜೆಪಿ ಸಂಸದೆ ರಮಾದೇವಿ ಅವರ ಮೇಲೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದ ಅಜಾಂ ಖಾನ್ ಲೋಕಸಭೆಯಲ್ಲಿ ಸೋಮವಾರ ಕ್ಷಮೆ ಕೇಳಿದ್ದಾರೆ. ನಾನು 9 ಬಾರಿ ಶಾಸಕನಾಗಿದ್ದೆ. ಹಲವಾರು ಬಾರಿ ರಾಜ್ಯ ಮಂತ್ರಿಯೂ ಆಗಿದ್ದೆ. ಸಂಸದೀಯ ವ್ಯವಹಾರಗಳ ಸಚಿವನಾಗಿಯೂ ಕಾರ್ಯನಿರ್ವಹಿಸಿದ್ದೆ. ಸಂಸದೀಯ ಪ್ರಕ್ರಿಯೆ, ಕಾರ್ಯಕಲಾಪಗಳ ಬಗ್ಗೆ ಚೆನ್ನಾಗಿ ತಿಳಿದು ಕೊಂಡಿದ್ದೇನೆ. ನನ್ನ ಮಾತಿನಿಂದ ಯಾರಿಗಾದರೂ ಬೇಸರವಾಗಿದ್ದಲ್ಲಿ, ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿಕೆ ನೀಡಿದರು. ಆದರೆ ಅವರ ಕ್ಷಮೆಯನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದು ರಮಾದೇವಿ ಹೇಳಿದ್ದಾರೆ. ಅಜಾಂ ಖಾನ್ ಅವರ ಹೇಳಿಕೆ ಕೇವಲ ನನಗೆ, ಅಥವಾ ಮಹಿಳೆಯರಿಗೆ ಬೇಸರ ತಂದಿಲ್ಲ. ಬದಲಾಗಿ ದೇಶದ ಪುರುಷರಿಗೂ ಬೇಸರವಾಗಿದೆ. ಈ ವಿಚಾರ ಅವರಿಗೆ ಅರ್ಥವೂ ಆಗಲಿಕ್ಕಿಲ್ಲ. ಅಂತಹ ಮಾತುಗಳನ್ನು ಕೇಳಲು ನಾನು ಲೋಕಸಭೆಗೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಎಸ್‌ಪಿ ನಾಯಕ ಅಖಿಲೇಷ್ ಯಾದವ್, ಅಜಾಂ ಖಾನ್ ಅವರ ಪರವಾಗಿ ಮಾತನಾಡಲು ಮುಂದಾದರು. ಈ ವೇಳೆ ರಮಾದೇವಿ ಯಾದವ್ ಮಧ್ಯಪ್ರವೇಶ ಸರಿಯಲ್ಲ. ಅವರು ಈ ವಿಚಾರದಲ್ಲಿ ಮಾತನಾಡಬಾರದು ಎಂದು ಕಟುವಾಗಿ ಅಖಿಲೇಷ್ ಮಾತುಗಳಿಗೆ ಬ್ರೇಕ್ ಹಾಕುವಂತೆ ಪಟ್ಟು ಹಿಡಿದರು. ಇದೇ ವೇಳೆ ಅಜಾಂ ಖಾನ್ ಕೇಳಿದ ಕ್ಷಮಾಪಣೆಯ ಮಾತು, ಯಾರಿಗೂ ಕೇಳಿಲ್ಲ ಎಂದು ಸಂಸದರು ಸ್ಪೀಕರ್ ಗೆ ತಿಳಿಸಿದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಮತ್ತೆ ಪದಗಳನ್ನು ಪುನರಾವರ್ತಿಸುವಂತ ಹೇಳಿದರು. ಅಜಾಂ ಖಾನ್ ಮತ್ತೆ ತಮ್ಮ ಮಾತುಗಳನ್ನು ಪುನರಾವರ್ತಿಸಿದರು. ಈ ಬಳಿಕ ಲೋಕಸಭೆಗೆ ಅದರದ್ದೇ ಆದ ಗೌರವವಿದೆ. ಯಾವುದೇ ಸಂಸದರು ಈ ಗೌರವಕ್ಕೆ ಧಕ್ಕೆ ತರುವಂತಹ ಮಾತುಗಳನ್ನು ಆಡಬಾರದು. ಅಷ್ಟೇ ಅಲ್ಲ, ಮಾತನಾಡುವ ವೇಳೆ ಬಳಸುವ ಶಬ್ಧ ಪ್ರಯೋಗಗಳ ಮೇಲೆ ಹೆಚ್ಚು ಎಚ್ಚರಿಕೆ ಇರಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
from India & World News in Kannada | VK Polls https://ift.tt/2YykJBa
ಆಧುನಿಕ ಶ್ರವಣಕುಮಾರರು: ತಂದೆ-ತಾಯಿ ಹೊತ್ತು ಕನ್ವರ್ ಯಾತ್ರೆ
ಪಾಣಿಪತ್: ವೃದ್ಧ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತು ಅವರಿಗೆ ತೀರ್ಥ ಕ್ಷೇತ್ರಗಳ ಯಾತ್ರೆ ಮಾಡಿಸಿದ ಶ್ರವಣ ಕುಮಾರನ ಪ್ರಸಂಗ ''ದಲ್ಲಿ ಉಲ್ಲೇಖವಾಗಿದೆ. ಮಾತಾ ಪಿತೃಗಳ ಸೇವೆಗೆ ಅನ್ವರ್ಥಕ ಹೆಸರೇ . ಅದು ತ್ರೇತಾಯುಗದ ಕಥೆಯಾಯಿತು. ವೃದ್ಧ ತಂದೆತಾಯಿಗಳು ಭಾರ ಎಂದು ವೃದ್ಧಾಶ್ರಮಕ್ಕೆ ತಳ್ಳುವ, ಮನೆಯಿಂದ ಹೊರಹಾಕುವ ಮಕ್ಕಳೇ ಹೆಚ್ಚಿರುವ ಈ ಕಲಿಯುಗದಲ್ಲಿ ಶ್ರವಣಕುಮಾರನಂತವರು ಇರಲು ಸಾಧ್ಯವೇ? ಹರಿಯಾಣಾದ ಈ ನಾಲ್ವರು ಸಹೋದರರನ್ನು ನೋಡಿದರೆ ನಿಜಕ್ಕೂ ನೀವು ಅಹುದಹುದು ಎನ್ನುತ್ತೀರ. ಈ ನಾಲ್ವರು ಸಹೋದರರು ತಮ್ಮ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಕನ್ವರ್ ಯಾತ್ರೆಗೆ ಹೊರಟಿದ್ದಾರೆ. ಪಾಣಿಪತ್‌ನಿಂದ ತಮ್ಮ ಯಾತ್ರೆ ಆರಂಭಿಸಿರುವ ಅವರು ಭಾನುವಾರ ಉತ್ತರಾಖಂಡದ ಹರಿದ್ವಾರಕ್ಕೆ ಭೇಟಿ ಇತ್ತು ಉತ್ತರ ಪ್ರದೇಶದ ಶಾಮ್ಲಿ ಕಡೆ ನಡೆದಿದ್ದಾರೆ. ವಯೋವೃದ್ಧ ತಂದೆ-ತಾಯಿಗಳನ್ನು ಎರಡು ಬುಟ್ಟಿಗಳಲ್ಲಿ ಕೂರಿಸಿಕೊಂಡು ಇಬ್ಬರು ಹೆಗಲಿಗೆ ಹಾಕಿಕೊಳ್ಳುತ್ತಾರೆ. ಅವರಿಗೆ ಆಯಾಸವಾದ ಮೇಲೆ ಉಳಿದ ಇಬ್ಬರು ತಂದೆತಾಯಿಗಳನ್ನು ತಮ್ಮ ಹೆಗಲಿಗೆ ಹಾಕಿಕೊಂಡು ನಡೆಯುತ್ತಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪವಿತ್ರ ಶ್ರಾವಣ ಮಾಸದಲ್ಲಿ ಶಿವನಿಗೆ ಗಂಗಾ ನದಿಯ ನೀರಿನಿಂದ ಪೂಜೆ ಸಲ್ಲಿಸುವ ಮೂಲಕ ಕನ್ವರ್ ಯಾತ್ರೆ ನಡೆಸಲಾಗುತ್ತದೆ. ಕನ್ವರಿಗಳು ಅಥವಾ ಭೋಲೆ ಎಂದು ಕರೆಸಿಕೊಳ್ಳುವ ಶಿವನ ಆರಾಧಕರು ಪ್ರತಿವರ್ಷ ಕೈಗೊಳ್ಳುವ ಧಾರ್ಮಿಕ ಯಾತ್ರೆ ಇದಾಗಿದೆ. ಈ ಯಾತ್ರೆಯಲ್ಲಿ ಕನ್ವರಿಗಳು ಹರಿದ್ವಾರ, ಗೋಮುಖ, ಗಂಗೋತ್ರಿ ಮತ್ತು ಸುಲ್ತಾನ್‌ಗಂಜ್‌ನಲ್ಲಿ ಪವಿತ್ರ ಗಂಗೋದಕದಿಂದ ಶಿವನನ್ನು ಪೂಜಿಸುತ್ತಾರೆ.
from India & World News in Kannada | VK Polls https://ift.tt/2K7bJdc
ಇಸ್ರೇಲ್ ಚುನಾವಣಾ ಬ್ಯಾನರ್‌ಗಳಲ್ಲಿ 'ನಮೋ' ಹವಾ!
ಹೊಸದಿಲ್ಲಿ: 17ನೇ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಂತ ಬಲದಿಂದ ಕೇಂದ್ರದಲ್ಲಿ ಎರಡನೇ ಅವಧಿಗೆ ಸರಕಾರ ರಚಿಸಿರುವ ಪ್ರಧಾನಿ ಅವರು, ಈಗ ಇಸ್ರೇಲ್ ಪ್ರಧಾನಿ ಬೆಂಬಲಕ್ಕೆ ನಿಂತಿದ್ದಾರೆಂದು ಭಾಸವಾಗುತ್ತಿದೆ. ಹೌದು, ಇಸ್ರೇಲ್‌ನಲ್ಲಿ ಚುನಾವಣಾ ಕಾವು ರಂಗೇರುತ್ತಿದ್ದು, ಎಲೆಕ್ಷನ್ ಬ್ಯಾನರ್‌ಗಳಲ್ಲಿ ನೆತ್‌ನ್ಯಾಹು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಶೈನ್ ಆಗುತ್ತಿದ್ದಾರೆ. ಕಟ್ಟಡವೊಂದರ ಮೇಲೆ ನಮೋ ಮತ್ತು ನೆತ್‌ನ್ಯಾಹು ಇರುವ ಚುನಾವಣಾ ಬ್ಯಾನರ್‌ವೊಂದನ್ನು ಇಸ್ರೇಲ್ ಪತ್ರಕರ್ತ ಅಮಿಚೈ ಸ್ಟೇಯಿನ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜತೆಗೆ ನೆತ್‌ನ್ಯಾಹು ಇರುವ ಚುನಾವಣಾ ಬ್ಯಾನರ್‌ಗಳು ರಾರಾಜಿಸುತ್ತಿವೆ. ಪ್ರಸಕ್ತ ಸಾಲಿನ ಸೆಪ್ಟೆಂಬರ್ 17ರಂದು ಇಸ್ರೇಲ್‌ನಲ್ಲಿ ಚುನಾವಣೆ ನಡೆಯಲಿದೆ. ಜಾಗತಿಕ ನಾಯಕರ ಜತೆ ಇರುವ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಚುನಾವಣೆ ಎದುರಿಸಲು ನೆತ್‌ನ್ಯಾಹು ತಂತ್ರ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.
from India & World News in Kannada | VK Polls https://ift.tt/2yocWao
ಕೋಟಿ ಸಂಬಳದ ಕೆಲಸಕ್ಕೆ ಗುಡ್ ಬೈ, ಸಾವಯವ ಕೃಷಿಗೆ ಜೈ ಎಂದ ದಂಪತಿ
ಅಹಮದಾಬಾದ್: ಕೆಲವರ ಕನಸುಗಳು ನಿಜಕ್ಕೂ ನಮ್ಮನ್ನು ದಂಗು ಬಡಿಸುವಂತಿರುತ್ತವೆ. ಈ ದಂಪತಿಯನ್ನೇ ನೋಡಿ. ಪರಿಸರ ಸಂರಕ್ಷಣೆ ಕನಸು ಕಂಡಿದ್ದ ಅವರೀಗ ಅಮೆರಿಕಾ ಬಿಟ್ಟು ಭಾರತಕ್ಕೆ ಮರಳಿದ್ದಾರೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದ ಇವರಿಬ್ಬರು ಕೋಟಿ ಕೋಟಿ ಲೆಕ್ಕದಲ್ಲಿ ಸಂಬಳವನ್ನು ಜೇಬಿಗಿಳಿಸುತ್ತಿದ್ದರು. ಮತ್ತೀಗ ತಮ್ಮ ತವರು ಗುಜರಾತಿಗೆ ಮರಳಿದ್ದು ಕೈಗೆ ಕೆಸರು ಮೆತ್ತಿಕೊಂಡು ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದಾರೆ. ನಡಿಯಾದ್ ನಗರದಲ್ಲಿ 10 ಎಕರೆ ಜಮೀನನ್ನು ಖರೀದಿಸಿರುವ ವಿವೇಕ್ ಶಾ ಮತ್ತು ವೃಂದಾ ಅಲ್ಲಿ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಅವರಿಬ್ಬರು ಕೆಲ ವರ್ಷದ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸಮಾನ ಮನಸ್ಕರಾದ ಅವರ ಚಿತ್ತ ಸದಾ ಕೃಷಿಯ ಕಡೆ ತುಡಿಯುತ್ತಿತ್ತು. ಹೀಗಾಗಿ ಭಾರತಕ್ಕೆ ಮರಳಲು ನಿರ್ಧರಿಸಿದರು. ಕೃಷಿ ಬಗ್ಗೆ ಅಧ್ಯಯನ ತಮ್ಮನ್ನು ತಾವು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮುನ್ನ ಅವರಿಬ್ಬರು ಕೃಷಿಗೆ ಸಂಬಂಧಿಸಿದಂತೆ ಒಂದುವರೆ ತಿಂಗಳ ಕೋರ್ಸ್ ಓದಿದ್ದಾರೆ. ಬಳಿಕ ಪರಿಸರಕ್ಕೆ ಪೂರಕವಾದ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಏನೇನು ಬೆಳೆಯುತ್ತಾರೆ? ರಾಗಿ, ಗೋಧಿ, ಆಲೂಗಡ್ಡೆ, ಬಾಳೆಹಣ್ಣು, ಪಪ್ಪಾಯಿ, ಕೊತ್ತಂಬರಿ, ಬದನೆಕಾಯಿ ಸೇರಿದಂತೆ ಹಲವು ತರಕಾರಿ, ಧಾನ್ಯಗಳನ್ನು ಅವರು ಬೆಳೆಯುತ್ತಿದ್ದಾರೆ. ದಂಪತಿ ತಮ್ಮ ಹೊಲದಲ್ಲಿ ಒಂದು ಕೊಳವನ್ನು ನಿರ್ಮಿಸಿದ್ದಾರೆ. ಅದರ ಜತೆಗೆ ನೀರನ್ನು ಸ್ವಚ್ಛಗೊಳಿಸುವ ಗಿಡಗಳನ್ನು ಸಹ ಬೆಳೆಸಿದ್ದಾರೆ. ಅಷ್ಟೇ ಅಲ್ಲ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಂಡು, 20ಸಾವಿರ ಲೀಟರ್ ನೀರು ಸಂರಕ್ಷಣೆ ಮಾಡುತ್ತಾರೆ. ಆ ನೀರು ದೀರ್ಘಕಾಲದವರೆಗೆ ಅವರ ಹೊಲಗದ್ದೆಗಳಿಗೆ ಅಗತ್ಯ ನೀರನ್ನು ಪೂರೈಸುತ್ತದೆ. ಇವರಿಬ್ಬರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವುದಷ್ಟೇ ಅಲ್ಲ, ಈ ಕುರಿತು ಉಪನ್ಯಾಸವನ್ನು ಸಹ ನೀಡುತ್ತಿರುತ್ತಾರೆ.
from India & World News in Kannada | VK Polls https://ift.tt/2MqEeoX
9 ರೂ ಆಸೆಗೆ ಬಿದ್ದು 15 ಲಕ್ಷ ಕಳೆದುಕೊಂಡ ಬಸ್ ಕಂಡಕ್ಟರ್
ಅಹಮದಾಬಾದ್: ಒಂದು ಸಣ್ಣ ದುರಾಸೆಗೆ, ಗುಜರಾತಿನ ಸರಕಾರಿ ಭಾರಿ ದೊಡ್ಡ ಬೆಲೆಯನ್ನು ತೆರುವಂತಾಗಿದೆ. ಪ್ರಯಾಣಿಕನೊಬ್ಬನಿಗೆ ಟಿಕೆಟ್ ಕೊಡದೇ 9 ರೂಪಾಯಿ ಜೇಬಿಗಿಳಿಸಲು ಪ್ರಯತ್ನಿಸಿದ್ದಕ್ಕಾಗಿ ಆತನ ಸಂಬಳದಲ್ಲಿ 15 ಲಕ್ಷ ರೂಪಾಯಿಗೆ ಕತ್ತರಿ ಬಿದ್ದಿದೆ. ತಪ್ಪಿತಸ್ಥ ನಿರ್ವಾಹಕ ಚಂದ್ರಕಾಂತ್ ಪಟೇಲ್ ಮೇಲೆ ಶಿಸ್ತು ಕ್ರಮ ಕೈಗೊಂಡಿರುವ ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮ (), ಆತನ ವೇತನ ಪ್ರಮಾಣವನ್ನು ಈಗಿರುವ ವೇತನಕ್ಕಿಂತ ಎರಡು ಹಂತಗಳಿಗೆ ಇಳಿಸುವ ಮೂಲಕ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲ ಉಳಿದ ಸೇವೆಯನ್ನು ಸ್ಥಿರ ವೇತನದಲ್ಲಿ ಪೂರ್ಣಗೊಳಿಸಬೇಕಾಗುತ್ತದೆ ಎಂದು ತೀರ್ಪು ನೀಡಿದೆ. ಕೈಗಾರಿಕಾ ನ್ಯಾಯಮಂಡಳಿ ಮತ್ತು ಗುಜರಾತ್ ಹೈಕೋರ್ಟ್ ಸಹ ಈ ನಿರ್ವಾಹಕನ ಅರ್ಜಿಯನ್ನು ತಿರಸ್ಕರಿಸಿದ್ದು, ಸಾರಿಗೆ ಇಲಾಖೆ ಕೊಟ್ಟಿರುವ ಶಿಕ್ಷೆಯನ್ನು ಎತ್ತಿಹಿಡಿದಿದೆ. ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮ ಹೇಳಿರುವ ಪ್ರಕಾರ ಈ ಹಿಂದೆ ಕನಿಷ್ಠ 35 ಬಾರಿ ಈ ನಿರ್ವಾಹಕ ದಾಖಲೆ ಲೆಕ್ಕಕ್ಕೆ ಸಿಗದ ಹಣದೊಂದಿಗೆ ಸಿಕ್ಕಿ ಬಿದ್ದಿದ್ದ. ಜುಲೈ 5, 2003ರಲ್ಲಿ ತಪಾಸಣಾಧಿಕಾರಿಗಳು ಪಟೇಲ್ ನಿರ್ವಾಹಕನಾಗಿದ್ದ ಬಸ್ ಹತ್ತಿದಾಗ ಒಬ್ಬ ಪ್ರಯಾಣಿಕನ ಬಳಿ ಟಿಕೆಟ್ ಇರಲಿಲ್ಲ. ನಾನು 9 ರೂ ಕೊಟ್ಟಿದ್ದೇನೆ. ನಿರ್ವಾಹಕನೇ ಟಿಕೆಟ್ ಕೊಟ್ಟಿಲ್ಲ ಎಂದಾತ ಹೇಳಿದ್ದ. ಪ್ರಕರಣದ ತನಿಖೆ ನಡೆಸಿದ ಇಲಾಖೆಗೆ ಪಟೇಲ್ ತಪ್ಪು ಬೆಳಕಿಗೆ ಬಂದಿತ್ತು. ಹೀಗಾಗಿ ಆತನ ಸಂಬಳದಲ್ಲಿ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಪಟೇಲ್ ಈ ಕುರಿತು ಕೈಗಾರಿಕಾ ನ್ಯಾಯಮಂಡಳಿ ಮತ್ತು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. 35ಕ್ಕೂ ಹೆಚ್ಚು ಬಾರಿ ಎಚ್ಚರಿಕೆ ಮತ್ತು ಅಲ್ಪ ದಂಡದೊಂದಿಗೆ ಎಚ್ಚರಿಕೆ ನೀಡಿದರೂ ಸುಧಾರಿಸಿಕೊಳ್ಳದ ಆತನಿಗೆ ಇಷ್ಟು ದೊಡ್ಡ ಮಟ್ಟದ ಶಿಕ್ಷೆ ನೀಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
from India & World News in Kannada | VK Polls https://ift.tt/2MkobJn
ರಸ್ತೆ ಅಪಘಾತ: ಬಿಜೆಪಿ ಶಾಸಕನ ವಿರುದ್ಧ ರೇಪ್ ಆರೋಪ ಮಾಡಿದ್ದ ಬಾಲಕಿ ಸ್ಥಿತಿ ಗಂಭೀರ
ಹೊಸದಿಲ್ಲಿ: ಉತ್ತರ ಪ್ರದೇಶದ ಶಾಸಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಅಪ್ರಾಪ್ತ ಬಾಲಕಿ ಮತ್ತು ವಕೀಯ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ರಾಯಬರೇಲಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಇವರನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಅಪಘಾತದಲ್ಲಿ ಗಾಯ ಗೊಂಡಿರುವ ಬಾಲಕಿ ಹಾಗೂ ಆಕೆಯ ಪರ ವಕೀಲರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೆಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲಖನೌ ವಿಭಾಗದ ಎಡಿಜಿಪಿ ರಾಜೀವ್ ಕೃಷ್ಣನ್ ತಿಳಿಸಿದ್ದಾರೆ. 2017ರಲ್ಲಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿದ್ದ ಬಾಲಕಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿದ್ದಳು.
from India & World News in Kannada | VK Polls https://ift.tt/2OpJonG
PKL 2019: ಪವನ್ ಶೇರವಾತ್ ಅಬ್ಬರ, ಬೆಂಗಳೂರು ತಂಡಕ್ಕೆ ಜಯ
ಮುಂಬಯಿ: ಪ್ರದೀಪ್ ಶೇರವಾತ್ ಅಬ್ಬರದ ರೈಡಿಂಗ್ ನೆರವಿನಿಂದ ಇಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮೇಲುಗೈ ಸಾಧಿಸಿತು. ಆರಂಭದಲ್ಲೇ ಬೆಂಗಳೂರು ಮತ್ತು ತಂಡದ ರೈಡರ್‌ಗಳು ತಪ್ಪು ಎಸಗಿದ್ದು ಅಂಕಗಳನ್ನು ಪರಸ್ಪರ ಬಿಟ್ಟುಕೊಟ್ಟರು. ನಂತರ ಉಭಯ ತಂಡಗಳ ನಡುವೆ ರೋಚಕ ಹೋರಾಟ ಕಂಡುಬಂತು. ಒಂದು ಹಂತದಲ್ಲಿ ಬೆಂಗಳೂರು ಆಲೌಟ್ ಆಗುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಸೂಪರ್ ಟ್ಯಾಕಲ್ ಮೂಲಕ 2 ಅಂಕ ಸಂಪಾದಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಒಟ್ಟಾರೆಯಾಗಿ ಪವನ್ ಶೇರವಾತ್ ಅತ್ಯುತ್ತಮ ರೀತಿಯಲ್ಲಿ ರೈಡಿಂಗ್ ಸಂಘಟಿಸಿ ಸೂಪರ್ 10 ಗಿಟ್ಟಿಸಿಕೊಂಡರು. ಒಟ್ಟು 11 ಅಂಕಗಳೊಂದಿಗೆ ಪವನ್ ಶೇರವಾತ್ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಒಂದು ಹಂತದಲ್ಲಿ ಆತಿಥೇಯ ತಂಡ ಯು ಮುಂಬಾ ಹಿಡಿತದಲ್ಲಿ ಪಂದ್ಯ ಇತ್ತು. ಆದರೆ ಉತ್ತರಾರ್ಧದಲ್ಲಿ ಪವನ್ ಶೇರವಾನ್ ಅಬ್ಬರಿಸಿದ್ದರಿಂದ ಬೆಂಗಳೂರು ತಂಡ ನಿರಂತರವಾಗಿ ಅಂಕಗಳನ್ನು ಸಂಪಾದಿಸಿಕೊಂಡು ಮುನ್ನುಗ್ಗಿತು. ಒಟ್ಟಾರೆಯಾಗಿ ಪವನ್ ಶೇರವಾತ್ ನೆರವಿನಿಂದ ಬೆಂಗಳೂರು ಬುಲ್ಸ್ ಜಯ ದಕ್ಕಿಸಿಕೊಂಡಿತು. ವಿರಾಮದ ವೇಳೆಗೆ ಬೆಂಗಳೂರು ತಂಡ 13-11 ಅಂಕಗಳೊಂದಿಗೆ ಮುನ್ನಡೆ ಪಡೆದುಕೊಂಡಿತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YnXFB3
PKL 2019: ಹರಿಯಾಣದಿಂದ ಜಯ 'ಸ್ಟೀಲ್' ಮಾಡಿದ ದಬಾಂಗ್ ಡೆಲ್ಲಿ
ಮುಂಬಯಿ: ರೈಡರ್‌ಗಳ ಆಕ್ರಮಣಕಾರಿ ಆಟದ ನೆರವಿನಿಂದ ದಬಾಂಗ್ ಡೆಲ್ಲಿ ತಂಡ ವಿರುದ್ಧ ಭರ್ಜರಿ ಜಯ ಗಳಿಸಿದೆ. ಇಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು. ದಬಾಂಗ್ ಡೆಲ್ಲಿ ತಂಡ 41-21 ಅಂಕಗಳ ಅಂತರದಲ್ಲಿ ಹರಿಯಾಣ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಚಂದ್ರನ್ ರಂಜಿತ್ ಮತ್ತು ನವೀನ್ ಸೂಪರ್ ಟೆನ್ ಸಂಪಾದಿಸಿದರು. ಚಂದ್ರನ್ 11 ಹಾಗೂ ನವೀನ್ 10 ಅಂಕ ಸಂಪಾದಿಸಿ ದಬಾಂಗ್ ಡೆಲ್ಲಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಡೆಲ್ಲಿಪರವಾಗಿ ಅತ್ಯುತ್ತಮ ಡಿಫೆಂಡರ್ ಆದ ಸಯೀದ್ ಗಫಾರಿ 4 ಅಂಕ ಸಂಪಾದಿಸಿ ತಂಡದಲ್ಲಿ ಜಯದಲ್ಲಿ ಕೊಡುಗೆ ನೀಡಿದರು. ವಿರಾಮದ ವೇಳೆಗೆ ದಬಾಂಗ್ ಡೆಲ್ಲಿ ತಂಡ 15-10 ಅಂಕಗಳೊಂದಿಗೆ ಮುನ್ನಡೆ ಪಡೆದುಕೊಂಡಿತು. ವಿರಾಮಕ್ಕೆ ಮುನ್ನ ನಡೆದ ಆರಂಭದಲ್ಲಿ ಹರಿಯಾಣ ಸ್ಟೀಲರ್ಸ್ ಪರವಾಗಿ ನವೀನ್ 5 ಅಂಕ ಪಡೆದು ಉತ್ತಮ ರೀತಿಯಲ್ಲಿ ರೈಡ್ ಮಾಡಿದರೆ, ದಬಾಂಗ್ ಪರವಾಗಿ ಚಂದ್ರನ್ ರಂಜಿತ್ 5 ಅಂಕ ಸಂಪಾದಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ml9x4D
ಉಗ್ರರಿಗೆ ಹಣಕಾಸು ನೆರವು: ಬಾರಾಮುಲ್ಲಾದಲ್ಲಿ ಎನ್‌ಐಎ ದಾಳಿ
ಶ್ರೀನಗರ: ಉಗ್ರರಿಗೆ ಹಣಕಾಸು ನೆರವು ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿ ತಂಡ ಉತ್ತರ ಕಾಶ್ಮೀರದ ಜಿಲ್ಲೆಯಲ್ಲಿ ಶೋಧಕಾರ್ಯ ನಡೆಸಿದೆ. ನಾಲ್ವರು ಉದ್ಯಮಿಗಳಿಗೆ ಸೇರಿದ ಕೆಲವು ಮನೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು, ಪೊಲೀಸರು ಮತ್ತು ಸಿಆರ್‌ಪಿಎಫ್ ಜತೆಗೂಡಿ ಶೋಧಕಾರ್ಯ ನಡೆಸಿದರು. ಈ ಉದ್ಯಮಿಗಳು ಗಡಿಯಂಚಿನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮ ಉಗ್ರರ ದಾಳಿಯ ಬಳಿಕ ಗಡಿ ಭಾಗದ ವ್ಯಾಪಾರ-ವಹಿವಾಟನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಇದಕ್ಕೂ ಮೊದಲು ಉಗ್ರರಿಗೆ ಹಣಕಾಸು ನೆರವು ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ ದಾಖಲಿಸಿದ್ದ ದೂರಿನ ಅನ್ವಯ ಎನ್‌ಐಎ, ಕಾಶ್ಮೀರ ಕಣಿವೆಯ ವಿವಿಧೆಡೆ ದಾಳಿ ನಡೆಸಿ ಪರಿಶೀಲಿಸಿತ್ತು. ಹಲವು ಪ್ರತ್ಯೇಕತಾವಾದಿ ನಾಯಕರು ಮತ್ತು ಕೆಲವು ಉದ್ಯಮಿಗಳನ್ನು ಎನ್‌ಐಎ ಬಂಧಿಸಿದೆ. ಬಹುತೇಖ ಮಂದಿ ಹೊಸದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾರೆ.
from India & World News in Kannada | VK Polls https://ift.tt/2Km2ciL
ಮಾಜಿ ಕೇಂದ್ರ ಸಚಿವ ಎಸ್. ಜೈಪಾಲ್ ರೆಡ್ಡಿ ನಿಧನ
ಹೈದರಾಬಾದ್: ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎಸ್. ಜೈಪಾಲ್ ರೆಡ್ಡಿ ಭಾನುವಾರ ಬೆಳಗಿನ ಜಾವ ನಿಧನರಾದರು. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. 77 ವರ್ಷದ ರೆಡ್ಡಿ ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ಹಿರಿಯ ಕಾಂಗ್ರೆಸ್ ನಾಯಕನ ನಿಧನಕ್ಕೆ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಶೋಕ ವ್ಯಕ್ತಪಡಿಸಿದ್ದಾರೆ. ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲವು ದಿನಗಳಿಂದ ಹೈದರಾಬಾದ್‌ನ ಏಷಿಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟೆರಾಲಜಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ರಾತ್ರಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ಮಧ್ಯರಾತ್ರಿ 1:29ಕ್ಕೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜೈಪಾಲ್ ರೆಡ್ಡಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. 'ರೆಡ್ಡಿ ಸಾರ್ವಜನಿಕ ಜೀವನದಲ್ಲಿ ಹಲವು ವರ್ಷಗಳ ಅಪಾರ ಅನುಭವ ಹೊಂದಿದ್ದರು. ಉತ್ತಮ ವಾಗ್ಮಿ ಹಾಗೂ ಯಶಸ್ವೀ ಆಡಳಿತಗಾರರಾಗಿದ್ದರು. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬ ಹಾಗೂ ಬಂಧು-ಬಾಂಧವರ ಜತೆ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ಪ್ರಧಾನಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಎಸ್. ಜೈಪಾಲ್ ರೆಡ್ಡಿ 1942ರ ಜನವರಿ 16ರಂದು ಈಗಿನ ತೆಲಂಗಾಣದ ಮುದ್ಗಲ್ ಗ್ರಾಮದಲ್ಲಿ ಸುದಿನಿ ದುರ್ಗಾ ರೆಡ್ಡಿ ಮತ್ತು ಯಶೋದಮ್ಮ ದಂಪತಿಗಳ ಮಗನಾಗಿ ಜನಿಸಿದ್ದರು. ಹೈದರಾಬಾದ್‌ನಲ್ಲಿ ಶಿಕ್ಷಣ ಪಡೆದರು. ಪ್ರತಿಷ್ಠಿತ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ರೆಡ್ಡಿ, 1975ರಲ್ಲಿ ತುರ್ತು ಪರಿಸ್ಥಿತಿ ವೇಳೆ ಕಾಂಗ್ರೆಸ್‌ನಿಂದ ಹೊರಬಂದರು. ಬಳಿಕ ಜನತಾ ಪಾರ್ಟಿ ಸೇರಿದರು. 1985ರಿಂದ 1988ರ ವರೆಗೆ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಂತರ 1990ರಲ್ಲಿ ಪುನಃ ಕಾಂಗ್ರೆಸ್‌ಗೆ ಮರಳಿದರು. 1969ರಲ್ಲಿ ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕುಲ್ವಕುರ್ತಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಾಲ್ಕು ಬಾರಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1984ರಲ್ಲಿ ಮೆಹಬೂಬ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಬಳಿಕ 1999ರಲ್ಲಿ ಮಿರಿಯಾಲಗುಡ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 2004ರಲ್ಲಿ ಮತ್ತೊಮ್ಮೆ ಮಿರಿಯಾಲಗುಡದಿಂದ ಚುನಾಯಿತರಾದರು. ಬಳಿಕ 2009ರಲ್ಲಿ ಚೆವಲ್ಲಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಯೆಯಾದರು. ತಮ್ಮ ರಾಜಕೀಯ ಜೀವನದಲ್ಲಿ ಎರಡು ಬಾರಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು. 1998ರಲ್ಲಿ ಶ್ರೇಷ್ಠ ಸಂಸದೀಯ ಪಟು ಪ್ರಶಸ್ತಿಗೆ ಪಾತ್ರರಾಗಿದ್ದರು.
from India & World News in Kannada | VK Polls https://ift.tt/2OmW9j2
ಪೊಲೀಸ್ ಠಾಣೆಯಲ್ಲಿ ಕೇಕ್ ಕತ್ತರಿಸಿ ಆರೋಪಿ ಜನ್ಮದಿನಾಚರಣೆ: ವೀಡಿಯೋ ವೈರಲ್
ಮುಂಬಯಿ: ರಕ್ಷಕರೇ ಭಕ್ಷಕರ ಪರ ನಿಂತರೇ? ಇದಕ್ಕೊಂದು ನಿದರ್ಶನ ಈ ಘಟನೆ. ಅಪಹರಣ ಮತ್ತು ಹೊಡೆದಾಟ ಪ್ರಕರಣದ ಆರೋಪಿಯೊಬ್ಬನ ಜನ್ಮ ದಿನವನ್ನಾಚರಿಸುವ ಮೂಲಕ ವಾಣಿಜ್ಯ ನಗರಿಯ ಠಾಣೆಯೊಂದರ ಪೊಲೀಸರು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ. 23 ಜುಲೈನಂದು ಈ ಘಟನೆ ನಡೆದಿದ್ದು, ಕೇಕ್ ಜತೆ ಠಾಣೆಗೆ ಬಂದ ಆರೋಪಿ ಅಯಾನ್ ಖಾನ್ ಪೊಲೀಸರ ಜತೆಗೆ ಕೇಕ್ ಕತ್ತರಿಸಿ ತನ್ನ ಜನ್ಮದಿನವನ್ನಾಚರಿಸಿಕೊಂಡಿದ್ದಾನೆ. ವೀಡಿಯೋದಲ್ಲಿ ಖಾನ್ ಕೇಕ್ ಕತ್ತರಿಸಿದ ಬಳಿಕ, ಪೊಲೀಸರಲ್ಲೊಬ್ಬರು ಆತನಿಗೆ ಕೇಕ್ ತಿನ್ನಿಸಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಖಾನ್ ಮೇಲೆ ಈಗ ಆರೋಪವಿಲ್ಲ . ಆತ ನಿರಪರಾಧಿ ಎಂದು ಸಾಬೀತಾಗಿದೆ ಎಂದು ಹೇಳಿದ್ದಾರೆ. ಪ್ರಸಂಗದ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಲುಪೊಲೀಸ್ ಉಪ ಆಯುಕ್ತರು ತನಿಖೆಗೆ ಆದೇಶಿಸಿದ್ದು, ಇನ್ನು ಮೇಲೆ ಠಾಣೆಯಲ್ಲಿ ಯಾರ ಜನ್ಮದಿನವನ್ನು ಕೂಡ ಆಚರಿಸಬಾರದು ಎಂದು ಆದೇಶಿಸಿದ್ದಾರೆ. ಇದೇ ವರ್ಷ ಜೂನ್ ತಿಂಗಳಲ್ಲಿ ಉತ್ತರ ಪ್ರದೇಶದ ಕಾರಾಗೃಹವೊಂದರಲ್ಲಿ ಮದ್ಯದ ಪಾರ್ಟಿ ನಡೆಸಿದ್ದು ವೈರಲ್ ಆಗಿತ್ತು.
from India & World News in Kannada | VK Polls https://ift.tt/2SJCLeE
ಮನೆಯಿಂದ ನಾಪತ್ತೆಯಾಗಿತ್ತು 1.5ಕೆಜಿ ಆಭರಣ, 90 ನಾಣ್ಯ, ಸಿಕ್ಕಿದ್ದೆಲ್ಲಿ ಗೊತ್ತಾ?
ಕೋಲ್ಕತಾ: ಆ ಮನೆಯಲ್ಲಿ ಇದ್ದಕ್ಕಿದ್ದಂತೆ ಚಿನ್ನಾಭರಣಗಳು ನಾಪತ್ತೆಯಾಗುತ್ತಿದ್ದವು. ಕಳ್ಳರು ನುಸುಳಿದ ಸುಳಿವು ಕೂಡ ಇರಲಿಲ್ಲ. ಏನಾಗುತ್ತಿವೆ ಎಲ್ಲ ಆಭರಣಗಳು ಎಂದು ಆ ಮನೆಯವರೆಲ್ಲ ಚಿಂತಿತರಾಗಿದ್ದರು. ಇದರ ಮಧ್ಯೆ ಆ ಮನೆಯ ಸದಸ್ಯರೊಬ್ಬರಿಗೆ ವಾಂತಿ ಸಮಸ್ಯೆ ಕಾಣಿಸಿಕೊಂಡಿತು. ಎರಡು ತಿಂಗಳಿಂದ ಅಸ್ವಸ್ಥಳಾಗಿದ್ದ ಆಕೆಯನ್ನು ಹಲವು ಆಸ್ಪತ್ರೆಗಳಿಗೆ ತೋರಿಸಲಾಗಿತ್ತು. ಆದರೆ ವಾಸಿಯಾಗದಿದ್ದರಿಂದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಹೊಟ್ಟೆಯ ಸ್ಕ್ಯಾನಿಂಗ್ ಮಾಡಿ ವೈದ್ಯರಿಗೆ ಹೊಟ್ಟೆಯಲ್ಲಿ ಏನೇನೋ ತುಂಬಿಕೊಂಡಿರುವುದು ಕಾಣಿಸಿತು. ತಕ್ಷಣ ಅವರು ಶಸ್ತ್ರಚಿಕಿತ್ಸೆ ಕೈಗೊಂಡರು. ಆಕೆಯ ಹೊಟ್ಟೆ ಕುಯ್ದ ವೈದ್ಯರೇ ಒಂದು ಕ್ಷಣ ದಂಗಾಗಿ ಹೋದರು. ಅಲ್ಲಿ ಆಭರಣ, ನಾಣ್ಯಗಳೇ ತುಂಬಿದ್ದವು. ಅಲ್ಲಿಗೆ ಅವರ ಮನೆಯಿಂದ ನಾಪತ್ತೆಯಾಗುತ್ತಿದ್ದ ಅಭರಣ, ನಾಣ್ಯಗಳ ರಾಶಿ ಮರಳಿ ಸಿಕ್ಕಿತ್ತು. ಪಶ್ಚಿಮ ಬಂಗಾಳದ ರಾಂಪುರ್ಹತ್‌ನಲ್ಲಿ ಬೆಳಕಿಗೆ ಬಂದ ಪ್ರಸಂಗವಿದು. 26 ವರ್ಷದ ಮಹಿಳೆಗೆ ಊಟವಾದ ಕೂಡಲೇ ವಾಂತಿಯಾಗುತ್ತಿತ್ತು. ನಮ್ಮಲ್ಲಿಗೆ ಬಂದಾಗ ಸ್ಕ್ಯಾನಿಂಗ್‌ನಲ್ಲಿ ಹೊಟ್ಟೆಯಲ್ಲಿ ರಾಶಿ ರಾಶಿ ಲೋಹಗಳೇ ತುಂಬಿರುವುದು ಬೆಳಕಿಗೆ ಬಂತು. ಆಕೆಯ ಹೊಟ್ಟೆಯಲ್ಲಿ ಸುಮಾರು 1.5 ಕೆಜಿ ಆಭರಣ ಮತ್ತು 5 ಮತ್ತು 10 ರೂಪಾಯಿಯ 90 ನಾಣ್ಯಗಳು ಕಂಡುಬಂದವು. ಅಷ್ಟೇ ಅಲ್ಲದೆ, ಸರ, ಮೂಗುತಿ, ಕಿವಿಯೋಲೆ, ಬಳೆ ಸೇರಿದಂತೆ ಆಭರಣಗಳ ರಾಶಿಯೇ ಇತ್ತು. ಆಭರಣಗಳಲ್ಲಿ ಹೆಚ್ಚಿನವು ತಾಮ್ರ ಮತ್ತು ಹಿತ್ತಾಳೆಯದಾಗಿದ್ದು, ಚಿನ್ನದ ಆಭರಣಗಳು ಸಹ ಇದ್ದವು ಎಂದು ವೈದ್ಯರು ಹೇಳಿದ್ದಾರೆ. ಮಗಳ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ, ನಮ್ಮ ಕಣ್ಣು ತಪ್ಪಿಸಿ ಆಭರಣ ಮತ್ತು ನುಂಗುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದಾರೆ.
from India & World News in Kannada | VK Polls https://ift.tt/2MmIKoG
ಮಕ್ಕಳ ಕಳ್ಳರೆಂದು ಭಾವಿಸಿ ಕಾಂಗ್ರೆಸ್ ನಾಯಕರನ್ನು ಥಳಿಸಿದ ಗ್ರಾಮಸ್ಥರು
ಭೋಪಾಲ: ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ನಾಯಕರನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ನವಾಲ್ ಸಿಂಘನಾ ಎಂಬ ಗ್ರಾಮದಲ್ಲಿ ಗುರುವಾರ ಮಧ್ಯ ರಾತ್ರಿ ಈ ಘಟನೆ ಸಂಭವಿಸಿದೆ. ಬೆತುಲ್ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಶುಕ್ಲಾ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡ ಧರ್ಮು ಸಿಂಗ್ ಲಂಜಿವಾರ್ ಹಲ್ಲೆಗೊಳಗಾದವರು. ನವಾಲ್ ಸಿಂಘನಾ ಗ್ರಾಮದಲ್ಲಿ ಮಕ್ಕಳ ಕಳ್ಳರ ಗ್ಯಾಂಗ್ ಓಡಾಡುತ್ತಿದೆ ಎಂಬ ವಂದತಿ ಮೇರೆಗೆ ಗ್ರಾಮಸ್ಥರು ಮರಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದರು. ಈ ವೇಳೆ ಮಾರ್ಗದಲ್ಲಿ ಕಾಂಗ್ರೆಸ್ ನಾಯಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ರಸ್ತೆಯಲ್ಲಿ ಮರಗಳು ಬಿದ್ದಿರುವುದನ್ನು ನೋಡಿ ಕಾರನ್ನು ಹಿಂದಿರುಗಿಸಿ ಹೊರಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಇವರನ್ನೆ ಎಂದು ಭಾವಿಸಿದ ಗ್ರಾಮಸ್ಥರು, ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಅವರ ಕಾರ್ ಜಖಂಗೊಳಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
from India & World News in Kannada | VK Polls https://ift.tt/2OoY7zv
ಒಂದು ಮಗು, ಮೂವರು ತಂದೆಯಂದಿರು!
ಕೋಲ್ಕತಾ: ಮಗುವಿನ ನಾನೆಂದು ಇಬ್ಬರು ಗಂಡಸರು ಕಿತ್ತಾಡಿಕೊಳ್ಳುವುದನ್ನು, ಕೋರ್ಟ್ ಮೆಟ್ಟಿಲೇರುವುದನ್ನು ಸಿನಿಮಾಗಳಲ್ಲಿ ನೋಡಿರುತ್ತೀರ. ಆದರೆ ಇನ್ನು ಹುಟ್ಟದಿರುವ ಮಗುವಿಗಾಗಿ ಮೂವರು ಪುರುಷರು ಕಿತ್ತಾಡಿಕೊಂಡಿರುವ ಸ್ವಾರಸ್ಯಕರ ಘಟನೆ ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಅಲ್ಲಿ ಮೂವರು ಗಂಡಸರು ಮಗುವಿನ ತಂದೆ ತಾವೆಂದು ಹೇಳಿ ಗಲಾಟೆ ಮಾಡಿದ್ದಾರೆ. ಕೊನೆಗೂ ಪೊಲೀಸರು ಸಹಾಯದಿಂದ ಸಮಸ್ಯೆ ಸುಖಾಂತ್ಯ ಕಂಡಿದೆ. ವರದಿಗಳ ಪ್ರಕಾರ, 21 ವರ್ಷದ ಗರ್ಭಿಣಿಯೊಬ್ಬಳು ಶನಿವಾರ ಸಾಯಂಕಾಲ 6 ಗಂಟೆ, 30 ನಿಮಿಷಕ್ಕೆ ಪ್ರಸವಕ್ಕೆಂದು ಕೋಲ್ಕತಾದ ಐರಿಶ್ ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಯ ಜತೆ ತಾಯಿ ಮತ್ತೊಬ್ಬ ವ್ಯಕ್ತಿ ಇದ್ದ. ಜೊತೆಗೆ ಬಂದಿದ್ದ ವ್ಯಕ್ತಿ ತಾನು ಮಹಿಳೆಯ ಪತಿ ಎಂದು ಹೇಳಿಕೊಂಡು ಡೆಲಿವರಿಗೆ ಸಂಬಂಧಿಸಿದಂತ ಎಲ್ಲ ಕಾಗದ ಪತ್ರಗಳಿಗೆ ಹಸ್ತಾಕ್ಷರ ಮಾಡಿದ್ದ. ಜತೆಗೆ ಆಸ್ಪತ್ರೆಯಲ್ಲಿ ಮುಂಗಡವಾಗಿ ಕಟ್ಟಬೇಕಾಗಿದ್ದ ಹಣವನ್ನು ಸಹ ಕಟ್ಟಿದ್ದ. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಬಂದು ತಾನು ಆ ಮಹಿಳೆಯ ಪತಿ ಎನ್ನುವ ಮೂಲಕ ಸುಗಮವಾಗಿ ಸಾಗುತ್ತಿದ್ದ ಕಥೆಗೆ ಹೊಸ ತಿರುವು ಸಿಕ್ಕಿತು. ನಾನು ಆ ಮಹಿಳೆಯ ಪತಿ, ಅವಳನ್ನು ಈಗಲೇ ಭೇಟಿಯಾಗಲು ಬಯಸುತ್ತೇನೆ ಎಂದಾತ ವೈದ್ಯರಲ್ಲಿ ಮನವಿ ಮಾಡಿಕೊಂಡ. ಕಕ್ಕಾಬಿಕ್ಕಿಯಾದ ಆಸ್ಪತ್ರೆ ಸಿಬ್ಬಂದಿ, ನೀನು ಆಕೆಯ ಪತಿಯಾಗಿದ್ದರೆ ಮೊದಲೇ ಯಾಕೆ ಬರಲಿಲ್ಲ, ಆಕೆಯ ಪತಿ ಎಂದು ಹೇಳಿಕೊಂಡ ವ್ಯಕ್ತಿ ಕಾಗದ ಪತ್ರಗಳಿಗೆ ಸಹಿ ಮಾಡಿ ಆಗಿದೆ ಎಂದರು. ಗರ್ಭಿಣಿ ಮಹಿಳೆಯ ತಾಯಿ ಕೂಡ ಆಗಂತುಕನನ್ನು ಅಳಿಯನೆಂದು ಒಪ್ಪಲಿಲ್ಲ. ಇಬ್ಬರ ನಡುವೆ ಗಲಾಟೆಯಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರನ್ನು ಕರೆಸಲಾಯಿತು. ನಿಮ್ಮ ಮದುವೆಯ ಪ್ರಮಾಣಪತ್ರ ತೋರಿಸಿ ಎಂದಾಗ ಮೊದಲಿಗೆ ಬಂದವರ ವರಸೆ ಬದಲಾಯಿತು. ನಾನು ಮಹಿಳೆಯ ಮಿತ್ರ ಎಂದಾತ ಒಪ್ಪಿಕೊಂಡ. ಬಳಿಕ ಬಂದವ ಮದುವೆ ಪ್ರಮಾಣಪತ್ರವನ್ನು ತೋರಿಸಿದ. ಆದರೆ ಮಹಿಳೆಯ ತಾಯಿ ಮೊದಲನೆಯವನೇ ನನ್ನ ಅಳಿಯ ಎಂದಾಗ ಪೊಲೀಸರು ತಲೆ ಹಣೆಗೆ ಚಚ್ಚಿಕೊಳ್ಳುವಂತಾಯಿತು. ಅಷ್ಟರಲ್ಲಿ ಮತ್ತೊಬ್ಬ ಆಗಮಿಸುವುದರೊಂದಿಗೆ ಪೊಲೀಸರು ಪೆಚ್ಚಾಗಿ ಹೋದರು. ಆತ ನಾನು ಆಕೆಯ ಪತಿ ಇಲ್ಲ, ಆದರೆ ಮಗುವಿಗೆ ತಂದೆ ಎಂದಾತ ಹೊಸ ವಾದ ಮಂಡಿಸಿದ. ಈ ಎಲ್ಲದರ ಮಧ್ಯೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯ ಹೇಳಿಕೆ ಪಡೆಯಲು ಪೊಲೀಸರು ವಿಫಲರಾದರು. ಕೊನೆಗೂ ಮಂಗಳವಾರ ದಿನ ಮಹಿಳೆಯನ್ನು ಮಾತನಾಡಿಸಲು ಯಶ ಕಂಡ ಪೊಲೀಸರಿಗೆ ನಿಜವಾದ ಪತಿ ಮತ್ತು ತಂದೆ ಯಾರೆಂಬುದಕ್ಕೆ ಉತ್ತರ ದೊರಕಿತು. ಮದುವೆ ಪ್ರಮಾಣಪತ್ರ ತೋರಿಸಿದವನೇ ನನ್ನ ಪತಿ. ಏಪ್ರಿಲ್ ತಿಂಗಳಲ್ಲಿ ನನ್ನ ಮದುವೆಯಾಗಿತ್ತು. ಆತನೇ ನನ್ನ ಮಗುವಿನ ತಂದೆ ಎಂದಾಕೆ ಸ್ಪಷ್ಟಪಡಿಸಿದ್ದಾಳೆ. ನಾವಿಬ್ಬರು ಪ್ರೀತಿಸಿದ್ದೆವು. ಆದರೆ ಆತನ ಪರಿವಾರ ನನ್ನನ್ನು ಸೊಸೆ ಎಂದು ಸ್ವೀಕರಿಸಲಿಲ್ಲ. ಬಳಿಕ ನಮ್ಮಿಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರಾಗಿದ್ದೆವು. ಆದರೆ ನಾನಾಗ ಗರ್ಭಿಣಿಯಾಗಿದ್ದೆ. ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದು ಆತ ಜೈಲು ಪಾಲಾಗಿದ್ದ. ಶಿಕ್ಷೆ ಮುಗಿಸಿ ಹೊರಗೆ ಬಂದ ಮೇಲೆ ನಾವಿಬ್ಬರು ರಾಜಿ ಮಾಡಿಕೊಂಡು ಮದುವೆಯಾದೆವು, ಎಂದಾಕೆ ಹೇಳಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಆಕೆಯ ನಿಜವಾದ ಪತಿ. ನಾವಿಬ್ಬರು ಕ್ಲಬ್‌ನಲ್ಲಿ ಭೇಟಿಯಾಗಿದ್ದೆವು. ನಮ್ಮಿಬ್ಬರ ಸ್ನೇಹ ಪ್ರೀತಿಯಾಗಿ , ದೈಹಿಕ ಸಂಬಂಧ ಏರ್ಪಟ್ಟು ಆಕೆ ಗರ್ಭಿಣಿಯಾದಳು. ಆಗ ಆಕೆ ಮದುವೆಗೆ ಒತ್ತಾಯ ಮಾಡಲು ಆರಂಭಿಸಿದಳು. ನಾನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಬೇಡ ಎಂದಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಬಳಿಕ ರಾಜಿ ಮಾಡಿಕೊಂಡು ಮದುವೆಯಾದೆವು. ಆದರೆ ನಮ್ಮ ಮನೆಯಲ್ಲಿ ಈ ಮದುವೆ ಸಮ್ಮತವಿಲ್ಲವಾದ್ದರಿಂದ ದೂರ ದೂರ ಇದ್ದೆವು. ಮತ್ತೀಗ ಆಕೆ Whatsappನಿಂದ ನಾನು ತಂದೆಯಾಗುತ್ತಿರುವುದು ತಿಳಿದು ಓಡೋಡಿ ಬಂದೆ , ಎಂದಾತ ಹೇಳಿದ್ದಾನೆ. ಅಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿದೆ.
from India & World News in Kannada | VK Polls https://ift.tt/2YbszS7
ಬುಡಕಟ್ಟು ಬಾಲಕಿ ಜತೆ ಪ್ರೇಮ: ಮುಸ್ಲಿಂ ಯುವಕನ ಭೀಕರ ಹತ್ಯೆ
ಅಹಮದಾಬಾದ್: ಸಮುದಾಯದ ಬಾಲಕಿ ಜತೆ ಸಂಬಂಧ ಹೊಂದಿದ್ದ ಅಪ್ರಾಪ್ತ ಯುವಕನನ್ನು ಅಮಾನವೀಯವಾಗಿ ಥಳಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತಿನ ಭರುಚ್ ಎಂಬಲ್ಲಿ ನಡೆದಿದೆ. ಫೈಜ್ (17) ಹಲ್ಲೆಗೊಳಗಾಗಿ ಸಾವನ್ನಪ್ಪಿರುವಯ ಯುವಕ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಿರುವ ಪೊಲೀಸರು, ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕಳೆದ ಕೆಲ ದಿನಗಳಿಂದ ಫೈಜ್ ಎಂಬ ಯುವಕ ಬೋರಿದ್ರಾ ಗ್ರಾಮದ ಬಡಕಟ್ಟು ಸಮುದಾಯದ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೇಮ ಸಂಬಂಧ ವಿಷಯ ತಿಳಿದು ಬಾಲಕಿಯ ಸಮುದಾಯಕ್ಕೆ ಸೇರಿದ್ದ ಪುಂಡರ ತಂಡ, ಫಜ್ ಮೇಲೆ ಕಟ್ಟಿಗೆ ಮತ್ತು ಪೈಪ್‌ನಿಂದ ಹಲ್ಲೆ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮುತಪಟ್ಟಿದ್ದಾನೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಂತ್ರಸ್ತ ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
from India & World News in Kannada | VK Polls https://ift.tt/2OnULwI
ಭಾರತ ಕೋಚ್ ಆಗಿ ಎರಡನೇ ಬಾರಿ ಆಯ್ಕೆಯಾಗಲಿರುವ ರವಿಶಾಸ್ತ್ರಿ?
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಯ್ಕೆಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಆದರೆ ತಾಜಾ ಮಾಹಿತಿಗಳ ಪ್ರಕಾರ ಕೋಚ್ ಅವರೇ ಎರಡನೇ ಬಾರಿಗೂ ಮುಖ್ಯ ತರಬೇತುದಾರನಾಗಿ ಆಯ್ಕೆಯಾಗುವುದು ಬಹುತೇಕ ಖಚಿತವೆನಿಸಿದೆ. ಕಪಿಲ್ ದೇವ್ ನೇತೃತ್ವದ ತ್ರಿ ಸದಸ್ಯರ ಸಮಿತಿಯು ನೂತನ ಕೋಚ್ ಆಯ್ಕೆ ಮಾಡಲಿದೆ. ಇದರಂತೆ ಸಮಿತಿ ಸದಸ್ಯರೂ ಆಗಿರುವ ಭಾರತದ ಮಾಜಿ ಕೋಚ್ , ಮುಖ್ಯ ತರಬೇತುದಾರ ಸ್ಥಾನವನ್ನು ರವಿಶಾಸ್ತ್ರಿ ಉಳಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಕೋಚ್ ಆಗಿ ಅತ್ಯುತ್ತಮ ದಾಖಲೆಯನ್ನು ಕಾಪಾಡಿಕೊಂಡಿರುವುದೇ ರವಿಶಾಸ್ತ್ರಿಗೆ ವರದಾನವಾಗಿ ಪರಿಣಮಿಸಲಿದೆ ಎಂದು 1997ರಿಂದ 1999ರ ವರೆಗೆ ಭಾರತದ ಕೋಚ್ ಹುದ್ದೆಯನ್ನು ನಿರ್ವಹಿಸಿರುವ ಗಾಯಕ್‌ವಾಡ್ ತಿಳಿಸಿದ್ದಾರೆ. ಮುಖ್ಯ ತರಬೇತುದಾರನ ಹೊರುತಪಡಿಸಿ ಇತರೆಲ್ಲ ಸಹಾಯಕ ಕೋಚ್‌ಗಳ ಸ್ಥಾನವನ್ನು ಬದಲಾಯಿಸುವುದರ ಬಗ್ಗೆ ಗಂಭೀರವಾದ ಚರ್ಚೆ ನಡೆಯಬಹುದಾಗಿದೆ ಎಂದು ಗಾಯಕ್‌ವಾಡ್ ಸೇರಿಸಿದರು. ಅಂದ ಹಾಗೆ ಟೀಮ್ ಇಂಡಿಯಾ ಹೊಸ ಕೋಚ್‌ಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 30 ಆಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ygqbdj
ವಾಟ್ಸ್ಆ್ಯಪ್ ಸಂದೇಶಗಳನ್ನು ಟ್ರೇಸ್ ಮಾಡಬಹುದೇ?
ಚೆನ್ನೈ: ನಕಲಿ (ಫೇಕ್) ಸಂದೇಶಗಳು ಮಾಡುವ ರಾದ್ಧಾಂತ ಅಷ್ಟಿಷ್ಟಲ್ಲ. ಇಂಥ ಫೇಕ್ ಸಂದೇಶ ಎಲ್ಲಿಂದ ಹುಟ್ಟಿಕೊಂಡಿತು, ಯಾರ ಮೂಲಕ ಸಾಗಿ ಬಂತು ಎಂಬುದನ್ನು ಪತ್ತೆ ಮಾಡಬಹುದೇ? ಇಂಥ ಪ್ರಶ್ನೆಯನ್ನು ಮದ್ರಾಸ್ ಹೈಕೋರ್ಟ್ ಮುಂದಿಟ್ಟಿದೆ. ಇದೀಗ ನ್ಯಾಯಾಲಯಕ್ಕೆ ಈ ನಿಟ್ಟಿನಲ್ಲಿ ಸಹಕರಿಸಲಿದ್ದಾರೆ ಐಐಟಿ ಮದ್ರಾಸ್ ಪ್ರೊಫೆಸರ್ ಆಗಿರುವ ವಿ.ವಿ. ಕಾಮಕೋಟಿ. ಈ ಸಾಧ್ಯತೆಯ ಕುರಿತು ವರದಿ ಸಲ್ಲಿಸುವಂತೆ ನ್ಯಾಯಾಲಯವು ಕಾಮಕೋಟಿ ಅವರಿಗೆ ಸೂಚಿಸಿದೆ. ಆಧಾರ್ ಗುರುತು ದೃಢೀಕರಣಕ್ಕೆ ಸಾಮಾಜಿಕ ಜಾಲ ತಾಣಗಳ ಪ್ರೊಫೈಲ್ ಬಳಸುವುದಕ್ಕೆ ಸಂಬಂಧಿಸಿದ ಮೇಲ್ಮನವಿ ಅರ್ಜಿಯೊಂದರ ವಿಚಾರಣೆ ಸಂದರ್ಭ ನ್ಯಾಯಾಲಯವು ಪರಿಶೀಲನೆ ನಡೆಸಿ, ಈ ಕುರಿತು ಮಾಹಿತಿ ಸಂಗ್ರಹಿಸುವಂತೆ ತಿಳಿಸಿದೆ. ತನ್ನ ಸಂದೇಶ ಮೂಲ ಪತ್ತೆ ಹಚ್ಚುವ ಸರಕಾರದ ಎಲ್ಲ ಪ್ರಯತ್ನಗಳನ್ನೂ ವಾಟ್ಸ್ಆ್ಯಪ್ ವಿರೋಧಿಸುತ್ತಲೇ ಬಂದಿದೆ. ಇದು ಎನ್‌ಕ್ರಿಪ್ಟ್ ಆಗಿದೆ, ಸುರಕ್ಷಿತವಾಗಿದೆ ಮತ್ತು ಈ ಕಾರಣದಿಂದ ಅದರ ಮೂಲ ಪತ್ತೆ ಮಾಡುವುದು ಸಾಧ್ಯವಿಲ್ಲ ಎಂದು ವಾಟ್ಸ್ಆ್ಯಪ್ ಹೇಳಿದೆ. ಆದರೂ ಸಂದೇಶ ಮೂಲವನ್ನು ಪತ್ತೆ ಮಾಡಬಹುದು ಎನ್ನುತ್ತಾರೆ ವಿ.ವಿ.ಕಾಮಕೋಟಿ. ವಾಟ್ಸ್ಆ್ಯಪ್‌ನ ಎನ್‌ಕ್ರಿಪ್ಷನ್ ಮೇಲೆ ಯಾವುದೇ ತೊಂದರೆಯಾಗದಂತೆ ಮತ್ತು ಅದರ ನೀತಿಗೂ ಧಕ್ಕೆಯಾಗದಂತೆ, 'ಮೂಲ' ಎಂಬ ಐಡೆಂಟಿಟಿ ಟ್ಯಾಗ್ ಸೇರಿಸಬಹುದು ಎಂದು ಕಾಮಕೋಟಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಂದೇಶಗಳನ್ನು ಫಾರ್ವರ್ಡ್ ಮಾಡಿದಾಗ, ಅದರಲ್ಲಿ 'Forwarded' ಎಂಬ ಟ್ಯಾಗ್ ಕಾಣಿಸುತ್ತದೆ. ಇದೇ ರೀತಿ, ಯಾವುದೇ ಸಂದೇಶವು ಫಾರ್ವರ್ಡ್ ಆಗುವಾಗ, ಅದನ್ನು ಸೃಷ್ಟಿಸಿದವರ ಸಂಖ್ಯೆಯೊಂದಿಗೆ Originator ಎಂಬ ಟ್ಯಾಗ್ ಸೇರಿಸುವುದು ಸಾಧ್ಯ ಎಂದು ನ್ಯಾಯಾಲಯದ ವಿಭಾಗೀಯ ಪೀಠಕ್ಕೆ ಪ್ರೊಫೆಸರ್ ಸಲಹೆ ನೀಡಿದ್ದಾರೆ. ಇದರಿಂದ, ಯಾವುದೇ ಹಂತದಲ್ಲಿಯೂ ವಾಟ್ಸ್ಆ್ಯಪ್‌ಗೆ ಈ ಸಂದೇಶವನ್ನು ಓದಲೇಬೇಕಾದ ಅನಿವಾರ್ಯತೆ ಬರುವುದಿಲ್ಲ ಎಂದಿದ್ದಾರವರು. ಬಳಕೆದಾರರು ಯಾವುದೇ ಅನುಮತಿಯಿಲ್ಲದೆ ಯಾವುದೇ ಸಂದೇಶಗಳನ್ನು ಮುಕ್ತವಾಗಿ ಫಾರ್ವರ್ಡ್ ಮಾಡುತ್ತಿರುವಾಗ, ನಮ್ಮದು 'ಗೌಪ್ಯತೆ ಬಗ್ಗೆ ಕಾಳಜಿ' ವಹಿಸುತ್ತಿರುವ ಸಂಸ್ಥೆ ಎಂದು ವಾಟ್ಸ್ಆ್ಯಪ್ ಹೇಳಿಕೊಳ್ಳುವಂತಿಲ್ಲ ಎಂದೂ ಅವರು ವಾದಿಸಿದ್ದಾರೆ. ಈ ಖಟ್ಲೆಯಲ್ಲಿ ವಾಟ್ಸ್ಆ್ಯಪ್, ಫೇಸ್‌ಬುಕ್, ಗೂಗಲ್, ಟ್ವಿಟರ್ ಅಂತೆಯೇ ಕೇಂದ್ರ ಹಾಗೂ ತಮಿಳುನಾಡು ಸರಕಾರಗಳು ಪ್ರತಿವಾದಿಗಳು. ಸಂದೇಶಗಳ ಮೂಲ ಪತ್ತೆ ಹಚ್ಚುವ ನಿಟ್ಟಿನಲ್ಲಿ ಡಿಜಿಟಲ್ ರೂಪದಲ್ಲಿ ಬೆರಳಚ್ಚಿನ ವ್ಯವಸ್ಥೆಯನ್ನು ಅಳವಡಿಸುವಂತೆ ಕೇಂದ್ರ ಸರಕಾರವು ವಾಟ್ಸ್ಆ್ಯಪ್‌ಗೆ ಜೂನ್ ತಿಂಗಳಲ್ಲಿ ಸೂಚಿಸಿತ್ತು. ಭಾರತದಲ್ಲಿ ಸುಮಾರು 35ರಿಂದ 40 ಕೋಟಿ ಮಂದಿ ವಾಟ್ಸ್ಆ್ಯಪ್ ಬಳಸುತ್ತಿದ್ದು, ಇದು ಕಿರು ತಂತ್ರಾಂಶದ ಅತಿದೊಡ್ಡ ಮಾರುಕಟ್ಟೆಯೂ ಆಗಿದೆ. ಸೈಬರ್ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಆಧಾರ್ ಜತೆ ಸೋಷಿಯಲ್ ಮೀಡಿಯಾ ಖಾತೆಗಳನ್ನು ಬೆಸೆಯಬೇಕೆಂದು ಆ್ಯಂಟನಿ ಕ್ಲೆಮೆಂಟ್ ರುಬಿನ್ ಎಂಬವರು ಮದ್ರಾಸ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು. ಗಮನಿಸಬೇಕಾದ ಅಂಶವೆಂದರೆ, ಕಾಮಕೋಟಿ ಅವರು ಪ್ರಧಾನಿ ಕಾರ್ಯಾಲಯಕ್ಕೆ ಭದ್ರತೆ ಕುರಿತು ಸಲಹೆ ನೀಡುವ ರಾಷ್ಟ್ರೀಯ ಸುರಕ್ಷತೆ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ.
from India & World News in Kannada | VK Polls https://ift.tt/2SI9yAM
Subscribe to:
Posts (Atom)
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕನೇ ಬಾರಿಗೆ ಗೋಲ್ಡನ್ ಡಕ್ಗೆ ಬಲಿಯಾಗಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ...
-
ಬೆಂಗಳೂರು: ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ನಗರದ ಸಾಧಿಕ್ ಪಾಳ್ಯದಲ್ಲಿ ಹಲ್ಲೆಗೆ ಯತ್ನಿಸಿರುವ ಘಟನೆಗೆ ಆರೋಗ್ಯ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದು, ಹಲ್ಲೆಗೆ ಯತ್ನ...
-
ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 1 ಲಕ್ಷದ 84 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಭಾರತದಲ್ಲಿ 21,000ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರು...
-
ಕನ್ನಡದ ಶ್ರೇಷ್ಟ ಸಂಗೀತ ನಿರ್ದೇಶಕ ಜೋಡಿ ರಾಜನ್-ನಾಗೇಂದ್ರ ಅವರಿಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದಕ್ಕೆ ಸ್ಯಾಂಡಲ್ವುಡ್ ದಿಗ್ಭ್ರಮೆ ವ್ಯಕ್ತಪಡಿಸಿದೆ...
-
ಬೆಂಗಳೂರು: ಇಡೀ ಜಗತ್ತಿಗೆ ಮಾರಕವಾಗಿದ್ದ ಕೊರೊನಾ ಎಂಬ ವೈರಸ್ನ ಅಂತ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೊರೊನಾ ಸಂಹರಿಸಲು ಕೊರೊನಾ ಲಸಿಕೆಗಳು ಈಗಾಗಲೇ ಲಗ್ಗೆ ಇಟ್ಟ...