Dakshina Kannada | ಕಬ್ಬಿಣದ ತಂತಿಗಳನ್ನೇ ಬಳಸಿ ಗೂಡು ನಿರ್ಮಾಣ: ಕಾಗೆ ಗೂಡಿಗೂ ಬಂತು ಆಧುನಿಕತೆ ಸ್ಪರ್ಶ!

ಸುಳ್ಯ ತಾಲೂಕಿನ ಅಮರ ಮೂಡ್ನೂರು ಗ್ರಾಮದ ಚೊಕ್ಕಾಡಿಯ ಭಗವಾನ್‌ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಒಂದು ಮರ ಬೆಳೆಸಲಾಗಿತ್ತು. ಈ ಮರ ಅಪಾಯಕಾರಿ ಸ್ಥಿತಿಯಲ್ಲಿತ್ತು. ಮರದ ಗೆಲ್ಲನ್ನು ತೆರವುಗೊಳಿಸಲು ಮುಂದಾದಾಗ ಈ ಕೊಂಬೆಯಲ್ಲಿ ಎರಡು ಕಾಗೆಯ ಗೂಡುಗಳು ಪತ್ತೆಯಾಗಿವೆ. ಒಂದು ಗೂಡಿನಲ್ಲಿ ಕಾಗೆಗಳು ವಾಸವಿದ್ದರೆ, ಇನ್ನೊಂದು ಗೂಡಿನಲ್ಲಿದ್ದ ಕಾಗೆಗಳು ಹಾರಿ ಹೋಗಿದ್ದವು. ಈ ಗೂಡುಗಳನ್ನು ನೋಡಿದವರು ಅರೆ ಕ್ಷಣ ದಂಗಾಗಿ ಹೋಗಿದ್ದರು. ಕಾಗೆಯ ಗೂಡುಗಳು ಸುಮಾರು ಎರಡು ಕೆಜಿಯಷ್ಟು ಸಣ್ಣ-ಸಣ್ಣ ಕಬ್ಬಿಣದ ತಂತಿಗಳಿಂದಲೇ ಸಂಪೂರ್ಣವಾಗಿ ನಿರ್ಮಾಣವಾಗಿದ್ದವು.

from India & World News in Kannada | VK Polls https://ift.tt/p8qnoCM

ಡಿಡಿಗಳ ಮಡಿಲಿಗೆ ಶಾಲೆಗಳು: ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ನಾನಾ ತಂತ್ರ, ನಂ.1 ಸ್ಥಾನಕ್ಕಾಗಿ ಪೈಪೋಟಿ

ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆ ಮೂಡಿಸಿದ್ದ ಡಿಸಿ ಆರ್‌.ಲತಾ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯಕ್ಕೆ ನಂ.1 ಸ್ಥಾನಕ್ಕೇರಲು ನಾನಾ ಪ್ರಯತ್ನ ಆರಂಭಿಸಿದ್ದಾರೆ. ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಎಲ್ಲಾ ಇಲಾಖೆ ಉಪನಿರ್ದೇಶಕರಿಗೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲೆಯಲ್ಲೊಂದು ಶಾಲೆ ದತ್ತು ಪಡೆಯಲು ಸೂಚಿಸುತ್ತಿದ್ದಾರೆ. ಅಧಿಕಾರಿಗಳು ಆಗಾಗ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಪರಿಶೀಲಿಸಲು ವ್ಯವಸ್ಥೆ ರೂಪಿಸಲಾಗಿದೆ.

from India & World News in Kannada | VK Polls https://ift.tt/i6DPobs

Mangaluru News | ಅಂಜಲ್, ಬಂಗುಡೆ ಭಾರಿ ಅಗ್ಗ: ಬೋಟ್‌ ಮಾಲೀಕರಿಗೆ ನಷ್ಟ, ಮೀನುಪ್ರಿಯರು ಖುಷ್‌

''ಕರಾವಳಿಯಾದ್ಯಂತ ಅಂಜಲ್‌, ಬಂಗುಡೆ, ಬೊಳೆಂಜಿರ್‌, ಫಿಶ್‌ ಮೀಲ್‌ಗೆ ಹೋಗುವ ಚಮ್ಮೀನ್‌ ಇತ್ಯಾದಿ 25-30 ಟನ್‌ ಬಂದಿದೆ. ಈಗ ನವರಾತ್ರಿ ಸಂದರ್ಭ ಹಿಂದುಗಳು ಮೀನು ತಿನ್ನಲು ಕೊಂಡೊಯ್ಯುವುದು ಕಡಿಮೆ. ಸಾಮಾನ್ಯವಾಗಿ ಈಗಿನ ತಾಜಾ ಬಂಗುಡೆ ಫ್ರೀಝಿಂಗ್‌ಗೆ ಕೊಂಡೊಯ್ಯುವುದು ವಾಡಿಕೆ. ಈ ಬಾರಿ ಕೊಂಡೊಯ್ಯದೆ, ರಫ್ತೂ ಆಗದೆ ಬಂಗುಡೆ ದರ ನೆಲಕಚ್ಚಿದೆ. ರಫ್ತಾಗುವ ಬೊಂಡಾಸ್‌, ಕಪ್ಪೆ ಬೊಂಡಾಸ್‌ ಮಾತ್ರ ರಫ್ತಾಗುತ್ತಿದೆ'' ಎನ್ನುತ್ತಾರೆ ಮೀನುಗಾರರ ಮುಖಂಡ ನಿತಿನ್‌ ಕುಮಾರ್‌.

from India & World News in Kannada | VK Polls https://ift.tt/4JvYPM0

ರಸ್ತೆ ಗುಂಡಿ ಮುಚ್ಚುವುದು ಕಾಗದದಲ್ಲೇ ಇದೆ: ಒತ್ತುವರಿ ತೆರವು ವಿಳಂಬಕ್ಕೆ ಹೈಕೋರ್ಟ್‌ ಅಸಮಾಧಾನ

ಬೆಂಗಳೂರು ನಗರದಲ್ಲಿನ ರಸ್ತೆ ದುಸ್ಥಿತಿ ಕುರಿತು ಕೋರಮಂಗಲದ ವಿಜಯ್‌ ಮೆನನ್‌ ಸಲ್ಲಿಸಿರುವ ಪಿಐಎಲ್‌ ಹಂಗಾಮಿ ಸಿಜೆ ಅಲೋಕ್‌ ಅರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತು. ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿ, ''2022ರ ಸೆಪ್ಟೆಂಬರ್‌ 19ರಿಂದ ಈವರೆಗೆ 10 ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 592 ಒತ್ತುವರಿ ತೆರವುಗೊಳಿಸಬೇಕಾಗಿದೆ. ಎಲ್ಲಾ ಒತ್ತುವರಿಗಳನ್ನು ತೆರವು ಮಾಡಲು ಇನ್ನೂ ಸ್ವಲ್ಪ ಕಾಲಾವಕಾಶ ನೀಡಬೇಕು'' ಎಂದು ಕೋರಿದರು.

from India & World News in Kannada | VK Polls https://ift.tt/uWSeBh6

PAK vs ENG: ವಿರಾಟ್‌ ಕೊಹ್ಲಿ ದಾಖಲೆ ಸರಿಗಟ್ಟಿದ ಬಾಬರ್‌ ಆಝಮ್‌!

Pakistan vs England T20 Cricket Series 2022: ಇಂಗ್ಲೆಂಡ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ 6ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಕ್ಯಾಪ್ಟನ್‌ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಬಾಬರ್‌ ಆಝಮ್‌ ಭರ್ಜರಿ ಅರ್ಧಶತಕ ಬಾರಿಸಿದ್ದಾರೆ. 59 ಎಸೆತಗಳಲ್ಲಿ ಅಜೇಯ 87 ರನ್‌ ಸಿಡಿಸಿದ ಬಾಬರ್‌ ಆಝಮ್‌, ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3 ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/dt8rAFl

Mysuru Yuva Dasara | ಯುವ ದಸರಾದಲ್ಲಿ 'ಉಪ್ಪಿ' ಡೈಲಾಗ್ ಪಂಚ್: ಮತ್ತೆ ಮತ್ತೆ ನೆನಪಾದ 'ಅಪ್ಪು'

Sandalwood stars in Yuva Dasara: ಮೈಸೂರಿನ (Mysuru) ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ 3ನೇ ದಿನದ ಯುವ ದಸರಾದ ಸ್ಯಾಂಡಲ್ ವುಡ್ ನೈಟ್‌ನಲ್ಲಿ ಉಪೇಂದ್ರ ಹಾಗೂ ಸಾಧುಕೋಕಿಲ ಅವರು ರಕ್ತ ಕಣ್ಣೀರು ಚಿತ್ರದ ಹಾಡನ್ನು ಹಾಡುವುದರ ಜೊತೆಗೆ ನರ್ತಿಸಿ ಅಭಿಮಾನಿಗಳನ್ನು ರಂಜಿಸಿದರು. ಚಿಕ್ಕಣ್ಣ ಅವರು ಮಾತನಾಡಿ, ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ. ಅದನ್ನು ಯಶಸ್ವಿಯಾಗಿ ಬೆಳೆಸಬೇಕು ಎಂದು ಹೇಳಿ, ಪುನೀತ್ ರಾಜ್ ಕುಮಾರ್ ಅವರಿಗಾಗಿ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಹಾಡಿದರು.

from India & World News in Kannada | VK Polls https://ift.tt/BrETuCK

IPL 2023: ಕ್ಯಾಮೆರಾನ್‌ ಗ್ರೀನ್‌ ಐಪಿಎಲ್‌ನ ಭವಿಷ್ಯದ ಸ್ಟಾರ್‌ ಆಟಗಾರ ಎಂದ ಪ್ಯಾಟ್‌ ಕಮಿನ್ಸ್‌!

Pat Cummins on Cameron Green's IPL Future: ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಭವಿಷ್ಯದ ಬಹು ಬೇಡಿಕೆಯ ಆಟಗಾರನಾಗಿ ಹೊರಹೊಮ್ಮಲ್ಲಿದ್ದಾರೆಂದು ಆಸ್ಟ್ರೇಲಿಯಾ ತಂಡದ ಹಿರಿಯ ಪ್ಯಾಟ್‌ ಕಮಿನ್ಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ವಿರುದ್ಧ ಕಳೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಯಾಮೆರಾನ್‌ ಗ್ರೀನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಡೇವಿಡ್‌ ವಾರ್ನರ್ ಅನುಪಸ್ಥಿತಿಯಲ್ಲಿ ಕ್ಯಾಮೆರಾನ್ ಗ್ರೀನ್‌, ಭಾರತ ತಂಡದ ಬೌಲರ್‌ಗಳನ್ನು ಬೆವರಿಳಿಸಿದ್ದರು. ಆ ಮೂಲಕ ತಮ್ಮ ಟಿ20 ಕ್ರಿಕೆಟ್‌ನಲ್ಲಿನ ತಮ್ಮ ಸಾಮಾರ್ಥ್ಯವನ್ನು ಸಾಬೀತುಪಡಿಸಿದ್ದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/SRmXuBr

Bharat Jodo Yatra | ಭಾರತ್ ಜೋಡೋ ಯಾತ್ರೆ:‌ ರಾಹುಲ್ ಗಾಂಧಿಯನ್ನು ಸ್ವಾಗತಿಸಲು ‘ಕೈ’ ನಾಯಕರು‌ ಸಜ್ಜು

ಭಾರತ್ ಜೋಡೋ ಯಾತ್ರೆಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆಗಮಿಸಲಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ರಾಜ್ಯ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಗುರುವಾರ ರಾತ್ರಿಯೂ ಸರಣಿ ಸಭೆಗಳನ್ನು ನಡೆಸಿರುವ ಮುಖಂಡರು ಅಂತಿಮ ಹಂತದ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.‌ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‌ನೇತೃತ್ವದಲ್ಲಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

from India & World News in Kannada | VK Polls https://ift.tt/AD2fTQP

ರಾಜ್ಯಕ್ಕೆ ಎಂಟ್ರಿ ಕೊಡಲಿದೆ ಭಾರತ್ ಜೋಡೋ ಯಾತ್ರೆ: 22 ದಿನಗಳ ನಡಿಗೆ ಎಲ್ಲಿ ಹೇಗೆ ಎತ್ತ? ಇಲ್ಲಿದೆ ಸಂಪೂರ್ಣ ವಿವರ..

ಸೆಪ್ಟೆಂಬರ್ 30 ಬೆಳಗ್ಗೆ 9 ಗಂಟೆ, ಚಾಮರಾಜನಗರದ ಗುಂಡ್ಲುಪೇಟೆಯಿಂದ ಬೇಗೂರು ಯಾತ್ರೆ ಆರಂಭ. ಸಂಜೆ ಏಳು ಗಂಟೆಗೆ ಬೇಗೂರು ತ್ರಿಪುರಾ ಕನೆಕ್ಷನ್ ಸೆಂಟರ್‌ ಎದುರಿನ ಮೈದಾನದಲ್ಲಿ ರಾತ್ರಿ ನಿಲುಗಡೆ. ಎರಡು ದಿನ ಗುಂಡ್ಲುಪೇಟೆಯಲ್ಲಿ ಯಾತ್ರೆ ಸಂಚರಿಸಲಿದೆ. ಮೊದಲ ದಿನ ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು, ಭಾಗಿ. ಒಟ್ಟು 7 ವಿಧಾನಸಭಾ ಕ್ಷೇತ್ರದ ಕೈ ನಾಯಕರು ಭಾಗಿಯಾಗಲಿದ್ದಾರೆ.

from India & World News in Kannada | VK Polls https://ift.tt/nMeVEjq

ಸಮೃದ್ಧ ಕೃಷಿಗೆ 'ಬತ್ತಿ ನೀರಾವರಿ' ವ್ಯವಸ್ಥೆ: ಕರೆಂಟ್‌ ಬೇಡ, ಬೋರ್‌ವೆಲ್‌ ಕೂಡ ಅನಗತ್ಯ

ಸಣ್ಣ ರೈತರು 'ಬತ್ತಿ ನೀರಾವರಿ ವ್ಯವಸ್ಥೆ'ಯಲ್ಲಿ ಭರಪೂರ ಕೃಷಿ ಮಾಡಬಹುದು. ಮನೆ ಬಳಕೆಗೆ ನೀರಿನ ಸಿಂಟೆಕ್ಸ್‌ ಬಳಸಿದಂತೆ ತೋಟಕ್ಕೂ ಟ್ಯಾಂಕ್‌ ಬಳಸಬಹುದು. ನಿಂತ ನೀರಿಗೆ ಬತ್ತಿ ಹಾಕುವುದಷ್ಟೇ ಮುಖ್ಯ. ತಾನಾಗಿಯೇ ಬೆಳೆಗೆ ನೀರು ಸೇರಿಕೊಳ್ಳುತ್ತದೆ. ಬತ್ತಿ ನೀರಾವರಿ ವ್ಯವಸ್ಥೆಯು ರೈತರಿಗೆ ಕೈಗೆಟಕುವಂತಿದ್ದು, ಬಗೆ ಬಗೆಯ ಹೂವು, ತರಕಾರಿ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಬಹುದು. ಇಂತಹ ವಿಧಾನದ ನೀರಾವರಿ ವ್ಯವಸ್ಥೆಯನ್ನು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ವಾಣಿಜ್ಯ ಉದ್ದೇಶಕ್ಕಾಗಿ ಮೊದಲ ಬಾರಿಗೆ ಆವಿಷ್ಕರಿಸಿದೆ.

from India & World News in Kannada | VK Polls https://ift.tt/OuiomYL

ಜೆಸಿಬಿ, ಹಿಟಾಚಿಗಳ ಗರ್ಜನೆ ಬಂದ್‌: ಬಡವರು, ಮಧ್ಯಮವರ್ಗದವರೇ ಮೇಲಷ್ಟೇ ಪಾಲಿಕೆ ಕ್ರಮ

ವಿಧಾನ ಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದರು. ಅಧಿವೇಶನ ಮುಗಿಯುತ್ತಿದ್ದಂತೆಯೇ ಜೆಸಿಬಿ, ಹಿಟಾಚಿ, ಬುಲ್ಡೋಜರ್‌ಗಳ ಸದ್ದಡಗಿದೆ. ನಾಮ್‌ಧಿಕೇವಾಸ್ತೆಗೆ ಅಲ್ಲೊಂದು ಇಲ್ಲೊಂದು ಶೆಡ್‌, ಕಾಂಪೌಂಡ್‌, ಖಾಲಿ ಜಾಗಗಳನ್ನು ತೆರವುಗೊಳಿಸಲಾಗುತ್ತಿದೆ. ಪ್ರಭಾವಿಗಳ ಕಟ್ಟಡಗಳು, ಪ್ರತಿಷ್ಠಿತ ಕಂಪನಿಗಳು ಕಬಳಿಸಿರುವ ರಾಜಕಾಲುವೆ ಜಾಗವನ್ನು ವಶಕ್ಕೆ ಪಡೆಯುವ ಧೈರ್ಯ ಮಾಡುತ್ತಿಲ್ಲ. 2015-16ರಲ್ಲೂ ಇದೇ ರೀತಿ ಶುರುವಾದಷ್ಟೇ ವೇಗದಲ್ಲಿತೆ ರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

from India & World News in Kannada | VK Polls https://ift.tt/xd5etAQ

PFI Ban ಎಫೆಕ್ಟ್‌: ರಾಜ್ಯದಲ್ಲಿ ಪಿಎಫ್‌ಐನ 42 ಕಚೇರಿಗಳಿಗೆ ಬೀಗಮುದ್ರೆ ಜಡಿದ ಪೊಲೀಸರು!

ಪಿಎಫ್‌ಐ ಮತ್ತದರ ಅಂಗ ಸಂಸ್ಥೆಗಳನ್ನು ಮುಂದಿನ ಐದು ವರ್ಷಗಳ ಕಾಲ ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯದೆಲ್ಲೆಡೆ ಕಾರ್ಯಾಚರಣೆಗಿಳಿದ ಖಾಕಿ ಪಡೆ ಪಿಎಫ್‌ಐ ಕಚೇರಿಗಳಿಗೆ ಲಗ್ಗೆಯಿಟ್ಟು ಬೀಗ ಮುದ್ರೆ ಹಾಕಿದೆ. ರಾಜಧಾನಿ ಬೆಂಗಳೂರಿನಲ್ಲಿ 4 ಕಚೇರಿ, ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ 12, ಉಡುಪಿ ಜಿಲ್ಲೆಯಲ್ಲಿ 9, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7, ಕಲಬುರಗಿ ಜಿಲ್ಲೆಯಲ್ಲಿ 4 ಕಚೇರಿ ಸೇರಿದಂತೆ ರಾಜ್ಯದ ಹಲವೆಡೆ ಕಚೇರಿಗಳನ್ನು ಬಂದ್‌ ಮಾಡಿಸಲಾಗಿದೆ.

from India & World News in Kannada | VK Polls https://ift.tt/92lT4ne

ಮಂಗಳೂರು ಶಾರದೆಗೆ ಶತಮಾನದ ಸಂಭ್ರಮ: ಈ ಬಾರಿ ಭಕ್ತರಿಗೆ ಸಿಗಲಿದೆ 11 ದಿನದ ದರ್ಶನ

ಮಂಗಳೂರು ಶಾರದೆ ಈ ಬಾರಿ ಹತ್ತು ದಿನಗಳ ಭಕ್ತರಿಗೆ ದರುಶನ ನೀಡುವ ಕಾರಣ ಶಾರದೆಗೆ ಸರಸ್ವತಿ ಅಲಂಕಾರ, ಮಹಾಲಕ್ಷ್ಮೀ, ಧನಲಕ್ಷ್ಮೀ, ನಾರಾಯಣೀ ದೇವಿ ಅಲಂಕಾರ, ಮಹಾಲಕ್ಷ್ಮೀ ದೇವಿ ಅಲಂಕಾರ, ದುರ್ಗಾದೇವಿ ಅಲಂಕಾರ, ಸಿಂಹವಾಹಿನಿ, ನರಸಿಂಹಿಣಿ ದೇವಿ, ರಕ್ತಬೀಜ ಸಂಹಾರಿಣಿ ಅಲಂಕಾರ, ಪಂಚದುರ್ಗಾಲಂಕಾರ, ದುರ್ಗಾಪರಮೇಶ್ವರಿ ಅಲಂಕಾರ, ಅನ್ನಪೂರ್ಣೇಶ್ವರಿ, ಸ್ಕಂದ ಮಾತಾ, ಚಂದ್ರಘಂಟಾ, ಶಾರದೆ ಸೇರಿದಂತೆ ಆಯ್ಕೆಮಾಡಿ 11 ಅಲಂಕಾರಗಳನ್ನು ಮಾಡಲಾಗುತ್ತದೆ.

from India & World News in Kannada | VK Polls https://ift.tt/UWzP3xR

Jasprit Bumrah: ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಟೀಮ್ ಇಂಡಿಯಾ ಸೇರಬಲ್ಲ ಟಾಪ್‌ 3 ಬೌಲರ್‌ಗಳಿವರು!

ICC T20 World Cup 2022: ಆಸ್ಟ್ರೇಲಿಯಾ ಆತಿಥ್ಯದಲ್ಲಿ ಅಕ್ಟೋಬರ್‌ 16ರಿಂದ ನವೆಂಬರ್‌ 13ರವರೆಗೆ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಭಾರತ ತಂಡ ಟೂರ್ನಿಯಲ್ಲಿ ಟ್ರೋಫಿ ಗೆಲುವಿನ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಆದರೆ, ಟೀಮ್ ಇಂಡಿಯಾ ತನ್ನ ಪ್ರಮುಖ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರ ಸೇವೆಯನ್ನು ಕಳೆದುಕೊಂಡು ಭಾರಿ ಹಿನ್ನಡೆ ಅನುಭವಿಸಿದೆ. ಏಷ್ಯಾ ಕಪ್‌ 2022 ಟೂರ್ನಿಯಲ್ಲೂ ಬುಮ್ರಾ ಸೇವೆ ಕಳೆದುಕೊಂಡು ಭಾರತ ತಂಡ ಕಷ್ಟ ಪಟ್ಟಿತ್ತು. ಈಗ ವಿಶ್ವಕಪ್‌ನಲ್ಲೂ ಅಂಥದ್ದೇ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/ijI6MJa

Mangaluru Dasara | 'ದಸರಾ ದರ್ಶನ'ಕ್ಕೆ ಭರ್ಜರಿ ಸ್ಪಂದನೆ: ಮೂರೇ ದಿನದಲ್ಲಿ 9 ಬಸ್‌ ವ್ಯವಸ್ಥೆ

ದಸರಾ ದರ್ಶನಕ್ಕೆ ಆನ್‌ಲೈನ್‌ನಲ್ಲೇ ಬುಕ್ಕಿಂಗ್‌ ಅವಕಾಶ ನೀಡಲಾಗಿದ್ದು, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು, ಕುಂದಾಪುರ, ಉಡುಪಿ, ಹಾಸನ, ತುಮಕೂರು ಸೇರಿದಂತೆ ನಾನಾ ಜಿಲ್ಲೆಯ ಪ್ರವಾಸಿಗರು ಬುಕ್‌ ಮಾಡುತ್ತಿದ್ದಾರೆ. ಪ್ರಾರಂಭ ದಿನ 3 ಬಸ್‌ ಹೊರಟಿದ್ದು, ಎರಡನೇ ದಿನ 5, ಮೂರನೇ ದಿನ 3, ನಾಲ್ಕನೇ ದಿನ 7 ಬಸ್‌ಗಳು ಪ್ರವಾಸ ಹೊರಟಿದೆ. ಸೆ.5ರವರೆಗೆ ಬುಕ್ಕಿಂಗ್‌ ಅವಕಾಶ ನೀಡಲಾಗಿದ್ದು, ದಿನದಿಂದ ದಿನಕ್ಕೆ ಬುಕ್ಕಿಂಗ್‌ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ವೋಲ್ವೋ, ನರ್ಮ್ ಬಸ್‌ಗಳನ್ನು ನಿಯೋಜಿಸಲಾಗಿದ್ದು, 3 ದಿನದಲ್ಲೇ 790ಕ್ಕೂ ಅಧಿಕ ಮಂದಿ ಪ್ರವಾಸ ಮಾಡಿದ್ದಾರೆ.

from India & World News in Kannada | VK Polls https://ift.tt/35jn0qN

ಚಿನ್ನಾಭರಣ ಹರಾಜಿಗೆ ಮುಂದಾದ ಕೆಎಸ್ಸಾರ್ಟಿಸಿ: ಸಾಲದ ಸುಳಿಯಿಂದ ಹೊರ ಬರಲು ಮುಂದಾದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ

ಕೇರಳ ರಾಜ್ಯಾದ್ಯಂತ 2012ರ ಅಕ್ಟೋಬರ್‌ನಿಂದ 2022ರ ಆಗಸ್ಟ್‌ವರೆಗೆ ಕೆಎಸ್‌ಆರ್‌ಟಿಸಿ ಬಸ್‌, ಬಸ್‌ ನಿಲ್ದಾಣ, ಡಿಪೊಗಳಲ್ಲಿ ಪ್ರಯಾಣಿಕರು ಮರೆತು ಹೋದ ಅಥವಾ ಕಳೆದುಕೊಂಡ ಸುಮಾರು 1.25 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ. ಮೋಟಾರು ವಾಹನ ಕಾಯಿದೆ ಮತ್ತು ಹ್ಯಾಂಡ್‌ ಬುಕ್‌ ಆಫ್‌ ಕಮರ್ಷಿಯಲ್‌ ಅಕೌಂಟ್ಸ್‌ ಪಾರ್ಟ್‌-1 ನಿಬಂಧನೆಗಳಿಗೆ ಅನುಗುಣವಾಗಿ ಸೆ.30ರಂದು ತಿರುವನಂತಪುರಂ ಸಾರಿಗೆ ಭವನದಲ್ಲಿ 338 ಪವನ್‌ ಚಿನ್ನ ಹಾಗೂ 1.942 ಕೆಜಿ ಬೆಳ್ಳಿ ಆಭರಣಗಳ ಹರಾಜು ನಡೆಯಲಿದೆ.

from India & World News in Kannada | VK Polls https://ift.tt/KXxAFzc

Road Pothole ಮೋದಿ ದ.ಕ. ಜಿಲ್ಲೆಗೆ ಮತ್ತೆ ಬನ್ನಿ: ಮಂಗಳೂರಿನಲ್ಲಿ ಯುವಕನ ಏಕಾಂಗಿ ಪ್ರತಿಭಟನೆ

'ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಎಂದು ಕೇವಲ ಎರಡು ದಿನದಲ್ಲಿ ಕೂಳೂರು ರಸ್ತೆ ದುರಸ್ತಿ ಮಾಡಿದ್ದಾರೆ. ಹಾಗಾದರೆ ರಸ್ತೆ ದುರಸ್ತಿಯಾಗಲು ಪ್ರಧಾನಿಯೇ ಬರಬೇಕಾ? ಪ್ರಧಾನಿ ಮತ್ತೆ ಬರಲಿ. ಅವರಿಂದ ಮಾತ್ರ ಹೆದ್ದಾರಿ ದುರಸ್ತಿ ಮಾಡಿಸಲು ಸಾಧ್ಯ. ಹೆದ್ದಾರಿ ಯೋಜನಾ ನಿರ್ದೇಶಕರು ನಿದ್ದೆಯಲ್ಲಿದ್ದಂತಿದೆ. ಹೆದ್ದಾರಿ ದುರಸ್ತಿ ಸಾಧ್ಯ ಎಂದಾದರೆ, ನಮ್ಮ ತೆರಿಗೆ ಮರಳಿಸಿ'', ಎಂದು ಲಿಖಿತ್‌ ರೈ ಎಂಬ ಯುವಕ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್‌ ನಂತೂರಿನಲ್ಲಿ ಒಂದು ಗಂಟೆ ನಿಂತು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

from India & World News in Kannada | VK Polls https://ift.tt/gmlrMtB

PSI Recruitment Exam: ಪಿಎಸ್‌ಐ ಹುದ್ದೆಯ ಮರು ಪರೀಕ್ಷೆಗೆ ತಡೆ ನೀಡಿದ ಹೈಕೋರ್ಟ್‌

ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆರ್‌.ಸುಬ್ರಮಣ್ಯ, ಪ್ರಕರಣ ವ್ಯಾಪಕವಾಗಿ ಹರಡಿದ್ದು, ಹಲವು ಅಧಿಕಾರಿಗಳು, ಅಭ್ಯರ್ಥಿಗಳು, ಮಧ್ಯವರ್ತಿಗಳು ಭಾಗಿಯಾಗಿದ್ದಾರೆ. ಪರೀಕ್ಷೆಯಲ್ಲೇ ಅಕ್ರಮವಾಗಿರುವುದರಿಂದ ಸರಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಸಮರ್ಥಿಸಿಕೊಂಡರು.

from India & World News in Kannada | VK Polls https://ift.tt/Aig6aqf

BJP OBC conference | ರಾಜ್ಯ ಒಬಿಸಿ ಸಮಾವೇಶ ರಾಜಕೀಯ ದಿಕ್ಕು ಬದಲಿಸಲಿದೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

OBC conference in Kalaburagi: ರಾಜ್ಯದಲ್ಲಿ 208 ಜಾತಿ, 675 ಉಪಜಾತಿಗಳಿವೆ. ಈ ಸಮುದಾಯಗಳ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಹಲವಾರು ಯೋಜನೆ ಹಾಕಿಕೊಂಡಿವೆ. ಇಡೀ ಒಬಿಸಿ ಸಮುದಾಯ ಬಿಜೆಪಿಯತ್ತ (BJP) ದೃಷ್ಟಿ ಹರಿಸಲಿದ್ದು, ಬಿಜೆಪಿ ಕಟ್ಟಿದ್ದು ಕೇವಲ ಅಧಿಕಾರಕ್ಕಾಗಿ ಅಲ್ಲ ಸಮೃದ್ಧ ಭಾರತ ನಿರ್ಮಿಸಲು. ವಿಶ್ವಮಟ್ಟದಲ್ಲಿ ಹಿಂದೆ ಇದ್ದ ನಿರ್ಲಕ್ಷ್ಯ ಧೋರಣೆ ಹೋಗಿ ಭಾರತಕ್ಕೆ ಈಗ ಎಲ್ಲೆಡೆ ಗೌರವ ಸಿಗುತ್ತಿದ್ದು, ಇದು ಬದಲಾದ ಸಮೃದ್ಧ ಭಾರತ. ಇದರ ನಾಯಕ ಪ್ರಧಾನಿ ಮೋದಿ ಎಂದರು.

from India & World News in Kannada | VK Polls https://ift.tt/kBvtapl

IND vs SA: ಅರ್ಧಶತಕ ಸಿಡಿಸಿ ಶಿಖರ್‌ ಧವನ್‌ ದಾಖಲೆ ಮುರಿದ ಸೂರ್ಯಕುಮಾರ್‌ ಯಾದವ್!

Suryakumar Yadav broke Shikhar Dhawan's record: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್‌ ಯಾದವ್‌, ಶಿಖರ್‌ ಧವನ್‌ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. 107 ರನ್‌ ಸಾಧಾರಣ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಬಿರುಸಿನ ಬ್ಯಾಟ್‌ ಮಾಡಿದ ಸೂರ್ಯಕುಮಾರ್‌ ಯಾದವ್, ಕೇವಲ 33 ಎಸೆತಗಳಲ್ಲಿ ಅಜೇಯ 50 ರನ್‌ ಸಿಡಿಸಿದರು. ಆ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಭಾರತದ ಪರ ಅತಿ ಹೆಚ್ಚು ಟಿ20 ರನ್‌ ಗಳಿಸಿದ ಶಿಖರ್‌ ಧವನ್‌ ಅವರ ದಾಖಲೆಯನ್ನು ಬಲಗೈ ಬ್ಯಾಟ್ಸ್‌ಮನ್‌ ಮುರಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/haAkOuf

Mangaluru Dasara | ಮಂಗಳೂರು ಶಾರದೆ 11 ದಿನ ದರ್ಶನ: ಮಹಾಂಕಾಳಿ ಅಲಂಕಾರವಿಲ್ಲ, ಸ್ವರ್ಣಾಲಂಕಾರದಿಂದ ಶೋಭಿಸುವ ಮಾತೆ

ಮಂಗಳೂರು ಶಾರದೆ ಅಂದರೆ ಆಕೆ ಪುಷ್ಪಾಲಂಕಾರ ಪ್ರಿಯೆ, ಸ್ವರ್ಣಾಲಂಕಾರ, ದೀಪಾಲಂಕಾರ ಪ್ರಿಯೆ, ವಸ್ತ್ರಾಲಂಕಾರ ಪ್ರಿಯೆಯೂ ಹೌದು. ಅಲಂಕಾರವಾದ ಬಳಿಕ ವರ್ಣನೆಗೆ ನಿಲುಕದ ಮಹಾಮಾತೆ ಆಕೆ. ರೇಷ್ಮೆ ಸೀರೆ ಉಟ್ಟು, ಮುಡಿ ತುಂಬಾ ಮಲ್ಲಿಗೆ ಮುಡಿದು, ಕೊರಳಲ್ಲಿ ಸ್ವರ್ಣಾಲಂಕಾರದೊಂದಿಗೆ ಶೋಭಿತಳಾಗಿ ಮದುವಣಗಿತ್ತಿಯಾಗಿ ಶೋಭಿಸುವ ಕ್ಷಣವನ್ನು ಸಹಸ್ರಾರು ಮಂದಿ ಕಣ್ತುಂಬಿಕೊಳ್ಳುತ್ತಾರೆ. ಸಾಮಾನ್ಯವಾಗಿ 5 ದಿನ 5 ರೀತಿಯ ಅಲಂಕಾರದಲ್ಲಿ ಶಾರದೆ ಶೋಭಿಸುತ್ತಾಳೆ.

from India & World News in Kannada | VK Polls https://ift.tt/DyAp5Nq

ಬೆಂಗಳೂರಿನಲ್ಲಿ ಬಾಲಕನ ಕಿಡ್ನಾಪ್‌ ಮಾಡಿ 15 ಲಕ್ಷ ರೂ. ಸುಲಿಗೆ: ಕಾಲೇಜು ಫೀಸ್‌ ಕಟ್ಟಲು ಕೃತ್ಯ ಎಸಗಿದ ಬಿಕಾಂ ವಿದ್ಯಾರ್ಥಿ

ಮಾನ್ಯತಾ ಲೇಔಟ್‌ನ ನಿವಾಸಿ ಖಾಸಗಿ ಕಂಪನಿ ಮ್ಯಾನೇಜರ್‌ ರಮೇಶ್‌ ಬಾಬು ಅವರ 14 ವರ್ಷದ ಮಗ ಭವೇಶ್‌ ತಳಮಹಡಿಯ ಕೊಠಡಿಯಲ್ಲಿ ಒಬ್ಬನೇ ಮಲಗುತ್ತಿದ್ದ. ಸೆ.2ರಂದು ಮುಂಜಾನೆ ಇಬ್ಬರು ಮಾಸ್ಕ್‌ ಧರಿಸಿದ್ದ ಯುವಕರು ಭವೇಶ್‌ ಕೊಠಡಿ ಬಾಗಿಲು ಬಡಿದಿದ್ದರು. ಪೋಷಕರಿರಬಹುದು ಎಂದು ಭವೇಶ್‌ ಬಾಗಿಲು ತೆಗೆಯುತ್ತಿದ್ದಂತೆಯೇ ಕತ್ತಿನ ಮೇಲೆ ಚಾಕು ಇಟ್ಟು ಕೊಲ್ಲುವ ಬೆದರಿಕೆ ಒಡ್ಡಿದ್ದರು. ಭವೇಶ್‌ ತಂದೆಯ ಕಾರಿನ ಕೀ ಪಡೆದು ಅದೇ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿಕೊಂಡು ಪರಾರಿಯಾಗಿದ್ದರು.

from India & World News in Kannada | VK Polls https://ift.tt/ljrmG7t

ಅನಧಿಕೃತ ಡ್ರೋನ್‌ ಹಾರಾಟಕ್ಕೆ 'ಈಗಲ್‌ ಐ' ಬ್ರೇಕ್‌: ದೇಶದಲ್ಲೇ ಪ್ರಥಮವಾಗಿ ಕೇರಳದಲ್ಲಿ ಪ್ರಯೋಗ

ದೇಶದ ವಿವಿಧ ರಾಜ್ಯಗಳ ಪೊಲೀಸ್‌ ಇಲಾಖೆಯಲ್ಲಿ ಈ ರೀತಿಯ ವ್ಯವಸ್ಥೆ ಇದೇ ಮೊದಲನೆಯದಾಗಿ ಕೇರಳದಲ್ಲಿ ಜಾರಿಗೆ ತರಲಾಗಿದೆ. ಸರಕಾರದ ಅನುಮತಿ ಇಲ್ಲದೆ ಹಾರಾಟ ನಡೆಸುವ ಡ್ರೋನ್‌ಗಳನ್ನು ಪತ್ತೆ ಮಾಡಿ ಅದನ್ನು ಹೊಡೆದುರುಳಿಸುವುದು ಅಥವಾ ವಶಕ್ಕೆ ಪಡೆದು ತಟಸ್ಥಗೊಳಿಸುವ ನಿಟ್ಟಿನಲ್ಲಿ ಕೇರಳ ಪೊಲೀಸ್‌ ಡ್ರೋನ್‌ ಫೊರೆನ್ಸಿಕ್‌ ಇಲಾಖೆ 'ಈಗಲ್‌ ಐ' ಆ್ಯಂಟಿ ಡ್ರೋನ್‌ ವ್ಯವಸ್ಥೆಗೆ ಚಾಲನೆ ನೀಡಿದೆ.

from India & World News in Kannada | VK Polls https://ift.tt/p4mLzN2

ವ್ಯಸನ ಬಿಡಿಸಿದ 'ಮದ್ಯವರ್ಜನ ಶಿಬಿರ': ಶಿಬಿರಾರ್ಥಿಗಳಿಂದ ಉತ್ತಮ ಸ್ಪಂದನೆ, 75 ಮಂದಿ ಕುಡಿತದ ಚಟದಿಂದ ಪಾರು

ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯ ಕೃಷ್ಣೋದಯ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ 6ನೇ ದಿನದ ಮದ್ಯವರ್ಜನ ಶಿಬಿರದಲ್ಲಿ ಸುಮಾರು 75 ಮದ್ಯವ್ಯಸನಿಗಳು ಮದ್ಯಸೇವನೆಯ ಚಟದಿಂದ ಹೊರಬರಲು ಶಿಬಿರಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಪಾತ್ರವಾಗಿದೆ.

from India & World News in Kannada | VK Polls https://ift.tt/fMCSarE

ಯಶವಂತಪುರ- ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆ ವರ್ಷಾಂತ್ಯದವರೆಗೂ ವಿಸ್ತರಣೆ

ವಿಜಯಪುರದಿಂದ ಪ್ರತಿದಿನ ರಾತ್ರಿ 8ಕ್ಕೆ ಹೊರಡುತ್ತಿದ್ದ ರೈಲು ಹೊಸ ವೇಳಾಪಟ್ಟಿಯಂತೆ ರಾತ್ರಿ 7.45ಕ್ಕೆ ಹೊರಟು ಮರುದಿನ ಬೆಳಿಗ್ಗೆ 11.15ಕ್ಕೆ ಯಶವಂತಪುರ ತಲುಪಲಿದೆ. ಇವುಗಳ ಜತೆಗೆ ಹುಬ್ಬಳ್ಳಿ -ರಾಮೇಶ್ವರ-ಹುಬ್ಬಳ್ಳಿ ಎಕ್ಸ್‌ಪ್ರೆಸ್‌, ಶಿವಮೊಗ್ಗ -ಚೆನ್ನೈ ಎಕ್ಸ್‌ಪ್ರೆಸ್‌ ರೈಲುಗಳ ಓಡಾಟ ಅವಧಿ ಕೂಡ ಸೆ.30ಕ್ಕೆ ಅಂತ್ಯವಾಗುತ್ತಿದ್ದು, ಪ್ರಯಾಣಿಕರ ಉತ್ತಮ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಈ ಎರಡೂ ರೈಲುಗಳ ಸೇವೆಯನ್ನು ಡಿಸೆಂಬರ್‌ವರೆಗೂ ವಿಸ್ತರಿಸಲಾಗಿದೆ.

from India & World News in Kannada | VK Polls https://ift.tt/ptPRjDl

ಬಿಬಿಎಂಪಿಯಲ್ಲಿ ಗುತ್ತಿಗೆದಾರರಿಂದ ಜಿಎಸ್‌ಟಿ ವಸೂಲು ಮಾಡದ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಪತ್ರ

ಸಿಎಜಿ 2018-19ನೇ ಸಾಲಿನ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಸುಮಾರು 6 ಕೋಟಿಗೂ ಅಧಿಕ ಜಿಎಸ್‌ಟಿ ತೆರಿಗೆ ವಸೂಲು ಮಾಡದಿರುವ ಅಂಶ ಪತ್ತೆಯಾಗಿದೆ. ಈ ಅಂಶವನ್ನು ವರದಿಯ ಪುಟ ಸಂಖ್ಯೆ 231ರಿಂದ 250ರವರೆಗೆ ಉಲ್ಲೇಖಿಸಲಾಗಿದ್ದು, ಯಾವ್ಯಾವ ಗುತ್ತಿಗೆದಾರರರಿಂದ ಎಷ್ಟೆಷ್ಟು ಬಾಕಿ ಇದೆ ಎಂಬುದನ್ನೂ ಪಟ್ಟಿ ಮಾಡಲಾಗಿದೆ. ಹಾಗಾಗಿ ಇದನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಟ್ರಸ್ಟಿ ಬಿ.ಎಚ್‌.ವೀರೇಶ್‌ ಒತ್ತಾಯಿಸಿದ್ದಾರೆ.

from India & World News in Kannada | VK Polls https://ift.tt/F71GwHo

KSRTC | ಕೆಎಸ್‌ಆರ್‌ಟಿಸಿ: ದಸರಾ ರಜೆ ಪ್ರಯುಕ್ತ ಸೆ.30ರಿಂದ ಹೆಚ್ಚುವರಿಯಾಗಿ 2000 ಬಸ್‌

Mysuru Dasara: ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್‌ ಮತ್ತು ಶಾಂತಿನಗರದಲ್ಲಿನ ಬಿಎಂಟಿಸಿ ಬಸ್‌ ನಿಲ್ದಾಣದಿಂದ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆಗೊಳ್ಳಲಿವೆ. ಅ. 7 ರಿಂದ ಅ. 9ರವರೆಗೆ ರಾಜ್ಯ ಮತ್ತು ಅಂತಾರಾಜ್ಯದ ನಾನಾ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳನ್ನು ಆಚರಣೆ ಮಾಡಲಾಗುವುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ/ KSRTC) ಮೈಸೂರು ದಸರಾ ಹಾಗೂ ದಸರಾ ರಜೆ (Dasara Holiday) ಪ್ರಯುಕ್ತ ಸೆಪ್ಟೆಂಬರ್‌ 30 ರಿಂದ ಅಕ್ಟೋಬರ್ 3ರವರೆಗೆ ಹೆಚ್ಚುವರಿಯಾಗಿ 2000 ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.

from India & World News in Kannada | VK Polls https://ift.tt/6qRD7MI

ಯಾವುದೇ ಕಾರಣಕ್ಕೂ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ: ನಿವೃತ್ತ ನ್ಯಾ. ನಾಗಮೋಹನ್‌ ದಾಸ್

ಗೋಮಾಂಸ ತಿನ್ನಬಾರದು ಎಂದು ಸಂವಿಧಾನದಲ್ಲಿ ಇದೆಯಾ ಎಂದು ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ನಾಗಮೋಹನದಾಸ್‌, ಸಂವಿಧಾನದಲ್ಲಿ ಇಂತಹದ್ದೇ ಆಹಾರ ತಿನ್ನಬೇಕೆಂದು ಎಲ್ಲಿಯೂ ಇಲ್ಲ ಎಂದರು. ಆಗ ಕೆಲವರು ಹಾಗಾದರೆ ನಮ್ಮಲ್ಲಿ ಗೋ ಮಾಂಸ ನಿಷೇಧ ಕಾನೂನು ಜಾರಿ ಮಾಡಿದ್ದಾರಲ್ಲ ಎಂದು ಮರು ಪ್ರಶ್ನಿಸಿದಾಗ, ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕು. ಮುಂದಾಳತ್ವ ವಹಿಸಿ ಹೋರಾಟ ಮಾಡಿದರೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.

from India & World News in Kannada | VK Polls https://ift.tt/BcAsuzT

ಚಿಕ್ಕಬಳ್ಳಾಪುರದಲ್ಲಿ ಹೆಚ್ಚುತ್ತಿದೆ ಸಿಜೇರಿಯನ್‌ ಹೆರಿಗೆ ಪ್ರಮಾಣ: ಕಡಿಮೆಗೊಳಿಸಲು ಆರೋಗ್ಯ ಇಲಾಖೆಯಿಂದ ವಿಶೇಷ ಗಮನ

ಗರ್ಭಿಣಿಯರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸಹಿತ ವಿವಿಧ ಕಾಯಿಲೆಗಳಿದ್ದರೆ, ರಕ್ತದ ಕೊರತೆ, ಗರ್ಭದಲ್ಲಿ ಅವಳಿ ಶಿಶುಗಳಿದ್ದರೆ ಹೆಚ್ಚು ಅಪಾಯವನ್ನು ಆಹ್ವಾನಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ವೈದ್ಯರು ಸಿಜೇರಿಯನ್‌ಗೆ ಶಿಫಾರಸು ಮಾಡುತ್ತಾರೆ. ನಿಗದಿತ ಸಮಯಕ್ಕೆ ಹೆರಿಗೆ ಆಗದಿದ್ದರೆ, ಆಸ್ಪತ್ರೆಗೆ ಬರುವುದು ತಡವಾಗಿದ್ದರೆ ಸಿಜೇರಿಯನ್‌ ಮೊರೆ ಹೋಗಬೇಕಾಗುತ್ತದೆ. ಇವುಗಳ ಪ್ರಮಾಣವು ಶೇ.5ರಿಂದ 8 ದಾಟುತ್ತಿರಲಿಲ್ಲ. ಇಂತವುಗಳನ್ನು ಹೊರತುಪಡಿಸಿ ಮಿಕ್ಕ ಸಂದರ್ಭದಲ್ಲಿ ಸಹಜ ಹೆರಿಗೆಯಾಗಬೇಕು.

from India & World News in Kannada | VK Polls https://ift.tt/5fF0Up1

ಕಾಂಗ್ರೆಸ್‌ ವಾರ್‌ ರೂಂಗೆ ಯಂಗ್‌ ಲೀಡರ್ಸ್: ತುಮಕೂರು ಜಿಲ್ಲಾ ಸಂಯೋಜಕರಾಗಿ ರಾಜೇಂದ್ರ ರಾಜಣ್ಣ , ಸಿ.ಬಿ. ಶಶಿಧರ್‌

ಜಿಲ್ಲಾ ಕಾಂಗ್ರೆಸ್‌ ಇದುವರೆಗೆ ಹಿರಿಯ ನಾಯಕರನ್ನೇ ನೆಚ್ಚಿಕೊಂಡಿತ್ತು. ಎರಡನೇ ಹಂತದ ನಾಯಕರು, ಯುವ ನಾಯಕರು ಮುಂಚೂಣಿಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಇದೀಗ ಕಾಲಕ್ಕೆ ತಕ್ಕ ಬದಲಾವಣೆಯ ಅವಶ್ಯಕತೆಯನ್ನು ಕಾಂಗ್ರೆಸ್‌ ಮನಗಂಡಿರುವಂತಿದೆ. ಚುನಾವಣಾ ಕಾರ್ಯತಂತ್ರ, ರೂಪುರೇಷೆ ಸಿದ್ಧಗೊಳ್ಳುವ ವಾರ್‌ ರೂಂಗೆ ನಾಯಕ ಸಮುದಾಯದ ರಾಜೇಂದ್ರ ರಾಜಣ್ಣ ಹಾಗೂ ಲಿಂಗಾಯತ ಸಮುದಾಯದ ಸಿ.ಬಿ.ಶಶಿಧರ್‌ ಅವರನ್ನು ನೇಮಿಸಿ ಮಹತ್ವದ ಜವಬ್ದಾರಿ ವಹಿಸಲಾಗಿದೆ.

from India & World News in Kannada | VK Polls https://ift.tt/0SMt7gr

ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಮೀಸಲು ನಿಗದಿಗೆ ಮತ್ತೆ 12 ವಾರ ಕಾಲಾವಕಾಶ ನೀಡಿದ ಹೈಕೋರ್ಟ್

ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಮತ್ತು ಮೀಸಲು ನಿಗದಿ ಕಾರ್ಯ ಪೂರ್ಣಗೊಳಿಸಲು ಸರಕಾರಕ್ಕೆ 12 ವಾರ ಕಾಲಾವಕಾಶ ನೀಡಿ ಮೇ 24ರಂದು ಆದೇಶ ನೀಡಲಾಗಿತ್ತು. ಆದರೆ ಕ್ಷೇತ್ರ ಮರು ವಿಂಗಡಣೆ ಕೆಲಸ ಪೂರ್ಣಗೊಳಿಸಲು ಹೈಕೋರ್ಟ್‌ನಿಂದ ಮತ್ತೆ ಕಾಲಾವಕಾಶ ಪಡೆಯುವಂತೆ ಮರು ವಿಂಗಡಣೆ ಆಯೋಗವು ಸರಕಾರಕ್ಕೆ ಸೆ.9ರಂದು ಪತ್ರ ಬರೆದಿದೆ. ಆನಂತರವೇ ಸರಕಾರ ಮೀಸಲು ನಿಗದಿ ಕಾರ್ಯ ಮಾಡಬಹುದಾಗಿದೆ ಎಂದರು.

from India & World News in Kannada | VK Polls https://ift.tt/toucMvC

Karnataka Rains: 3 ದಿನ ರಾಜ್ಯಾದ್ಯಂತ ಸಾಧಾರಣ ಮಳೆ

IMD predicts average rainfall: ಕರಾವಳಿಯಲ್ಲಿ ಮೂರು ದಿನ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಭಾನುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆ 8.30ರವರೆಗೆ ರಾಯಚೂರು ಜಿಲ್ಲೆಯ ಮಾನ್ವಿ, ವಿಜಯಪುರ ಜಿಲ್ಲೆಯ ಬಬಲೇಶ್ವರ, ಬೀದರ್‌ ಜಿಲ್ಲೆಯ ಹುಮ್ನಾಬಾದ್‌, ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ 3 ಸೆಂ.ಮೀ. ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

from India & World News in Kannada | VK Polls https://ift.tt/SEJRHAY

Draupadi Murmu in Karnataka - ರಾಷ್ಟ್ರಪತಿ ಅವರಿಗೆ ಇಳಕಲ್ ಸೀರೆ, ಕೌದಿ ಉಡುಗೊರೆ ನೀಡಿದ ಸುಧಾ ಮೂರ್ತಿ

ಮೂರು ಸಾವಿರ ಹೊಲಿಗೆ ಹಾಕಿದ ರಾಯಚೂರು ಬಳಿ ಇರುವ ದೇವದಾಸಿಯರು ಹೊಲಿದಿದ್ದ ಕೌದಿಯ ಜೊತೆಗೆ, ಒಂದು ಪುಸ್ತಕ ಹಾಗೂ ರೇಷ್ಮೆ ಸೀರೆಯನ್ನು ಸುಧಾ ಮೂರ್ತಿ ಅವರು ಉಡುಗೊರೆಯಾಗಿ ನೀಡಿದರು. ಬಳಿಕ ಮಾತನಾಡಿದ ಅವರು, ‘’ಹುಬ್ಬಳ್ಳಿ ನನ್ನ ತವರು ಮನೆ. ನಾನು ನನ್ನ ತವರಿನ ಜನರ ಮೂಲಕ ನಿಮ್ಮನ್ನ ಸ್ವಾಗತ ಮಾಡುತ್ತೇನೆ. ಹುಬ್ಬಳ್ಳಿ ಧಾರವಾಡ ನನ್ನ ಸ್ವರ್ಗ ಇದ್ದ ಹಾಗೆ. ಅಲ್ಲಿಗೆ ನಿಮ್ಮನ್ನ ಸ್ವಾಗತಿಸುತ್ತೇನೆ.

from India & World News in Kannada | VK Polls https://ift.tt/8xkHZFP

R Ashok - ಕಾಂಗ್ರೆಸ್ಸಿಗರ ಅದ್ಯಾವ ಮುಖ ಇಟ್ಟುಕೊಂಡು ಪೋಸ್ಟರ್ ಅಂಟಿಸುತ್ತಾರೋ ಗೊತ್ತಿಲ್ಲ: ಆರ್. ಅಶೋಕ್ ತಿರುಗೇಟು

R Ashok - ಭ್ರಷ್ಟಾಚಾರ ಮಾಡದೆ ಇದ್ದ ಕಾಂಗ್ರೆಸ್ ನಾಯಕರು ಯಾರಾದರೂ ಬಂದು ಪೋಸ್ಟರ್ ಅಂಟಿಸಿದರೆ ಅವರಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ ಅಶ್ವಥ್ ನಾರಾಯಣ ರಿಗೂ ಎಜುಕೇಶನ್ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ’ ಎಂದರು. ಭ್ರಷ್ಟಾಚಾರದ ಬಗ್ಗೆ ಸಿಎಂ ಬೊಮ್ಮಾಯಿ ಮೇಲೆ ಲೋಕಾಯುಕ್ತ ಆಗಲಿ ಎಸಿಬಿ ಆಗಲಿ ಎಲ್ಲಾ ಕಡೆ ಒಂದೇ ಒಂದು ಕೇಸು ದಾಖಲಾಗಿಲ್ಲ. ಆದರೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ವಿರುದ್ಧ 65 ಕೇಸ್ ದಾಖಲಾಗಿತ್ತು ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.

from India & World News in Kannada | VK Polls https://ift.tt/BTpYl8K

PAK vs ENG: ಕೊನೇ ಓವರ್‌ನಲ್ಲಿ 4 ರನ್‌ ಗಳಿಸಲಾಗದೆ ಪಾಕ್‌ ಎದುರು ಮುಗ್ಗರಿಸಿದ ಇಂಗ್ಲೆಂಡ್‌!

Pakistan vs England 4th T20I Highlights: ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಸಮಯದಲ್ಲಿ ಫಲಿತಾಂಶ ಬದಲಾಗಬಲ್ಲದು ಎಂಬುದಕ್ಕೆ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ನಡುವಣ ಸರಣುಯ 4ನೇ ಪಂದ್ಯ ಸಾಕ್ಷಿಯಾಯಿತು. ರನ್‌ಚೇಸ್‌ ಮಾಡಿದ್ದ ಇಂಗ್ಲೆಂಡ್‌ ತಂಡ 18ನೇ ಓವರ್‌ ಅಂತ್ಯಕ್ಕೆ ಗೆಲ್ಲುವ ಸಾಧ್ಯತೆ ಶೇ.99 ರಷ್ಟನ್ನು ಹೊಂದಿತ್ತು. ಆದರೆ, 19ನೇ ಓವರ್‌ನಲ್ಲಿ ಲೆಕ್ಕಾಚಾರಗಳೆಲ್ಲಾ ಬುಡಮೇಲಾದವು. ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್‌ ರೌಫ್‌, ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಿತ್ತು ಇಂಗ್ಲೆಂಡ್‌ಗೆ ಮರ್ಮಾಘಾತ ನೀಡಿದರು. ಒತ್ತಡಕ್ಕೆ ಸಿಲುಕಿದ ಇಂಗ್ಲೆಂಡ್ ಸೋತು ಕಂಗಾಲಾಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/9i5Ur2g

Mysuru Dasara | ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಹೆದ್ದಾರಿ ಹೊಡೆತ: ದಸರಾ ಸಂಭ್ರಮದ ನಡುವೆಯೂ ಟೇಕಾಫ್ ಆಗದ ಉದ್ಯಮ

ನವರಾತ್ರಿ ಬಂತೆಂದರೆ ಚನ್ನಪಟ್ಟಣ ಗೊಂಬೆಗಳು ಹೆಚ್ಚು ಮಾರಾಟವಾಗುತ್ತಿತ್ತು. ಅದರಲ್ಲೂ ಪ್ರಸಿದ್ಧ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳಲು ತೆರಳುವವರು ಇದರ ಖರೀದಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸೋಮವಾರದಿಂದ ನವರಾತ್ರಿ ಆರಂಭವಾಗುತ್ತಿದೆ. ಆದರೆ, ಬೊಂಬೆ ವ್ಯಾಪಾರ ಮಾತ್ರ ಇನ್ನು ಟೇಕಾಫ್‌ ಆಗಿಲ್ಲ. ನವರಾತ್ರಿ 9 ದಿನಗಳು ನವ ದುರ್ಗಿಯರ ಜತೆಗೆ, ಬೊಂಬೆ ಕೂರಿಸಿ ಪೂಜಿಸುವುದು ಸಾಮಾನ್ಯ. ನವರಾತ್ರಿ ಶುರುವಾಗುತ್ತಿದ್ದಂತೆ ಪ್ರತಿ ವರ್ಷ ಈ ವೇಳೆಗೆ ಗೊಂಬೆಗಳು ಹೆಚ್ಚು ಮಾರಾಟವಾಗುತ್ತಿತ್ತು. ಬೊಂಬೆ ಸಿದ್ಧಪಡಿಸುವ ಉದ್ಯಮಗಳವರಲ್ಲಿ ಈ ಹಬ್ಬ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ, ಅದರ ಬೇಡಿಕೆ ಕಡಿಮೆಯಾಗಿದೆ.

from India & World News in Kannada | VK Polls https://ift.tt/4C1icYr

ಭ್ರಷ್ಟಾಚಾರ, ಹಗರಣ ಮಾಡಿ ನಾನು ಲೂಟಿ ರವಿ ಆಗಿಲ್ಲ, ಜನರ ಪ್ರೀತಿ-ವಿಶ್ವಾಸ ಲೂಟಿ ಮಾಡಿದ್ದೇನೆ: ಸಿ.ಟಿ ರವಿ

ಜಿಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಗಿತ್ತು. ಅದನ್ನು ಒಡೆದು ಓಟ್‌ಗಳನ್ನು ಲೂಟಿ ಮಾಡಿದ ಮೇಲೆ ನನ್ನನ್ನು ಲೂಟಿ ರವಿ ಅಂತ ಕರೆಯಲೇಬೇಕು ಎಂದು ಕಾಲೆಳೆದ ಸಿ.ಡಿ ರವಿ, ಪ್ರತಿ ಪಕ್ಷದವರು ನನ್ನ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ. ಪ್ರೀತಿಯಿಂದ ಬಂದರೆ ಕಾಫಿ ನೀಡಲಾಗುವುದು, ದ್ವೇಷದಿಂದ ಬಂದರೆ ಪಾಠ ಕಲಿಸಲಾಗುವುದು. ಅಧಿಕಾರದಲ್ಲಿದ್ದಾಗ ಲೆಟರ್‌ಹೆಡ್‌ ಮಾರಿಕೊಂಡು ಅಧಿಕಾರಿಗಳ ಮೇಲೆ ದರ್ಪ ತೋರಿದವರಿಗೆ ಜನರು ಬುದ್ಧಿ ಕಲಿಸಿದ್ದಾರೆ ಎಂದು ತಿರುಗೇಟು ನೀಡಿದ್ದರು.

from India & World News in Kannada | VK Polls https://ift.tt/LdaUIOH

ಹಿರಿಜೀವಗಳಿಗೆ ಸಿಗುತ್ತಿಲ್ಲ ಕಾಳಜಿ! ರಾಜ್ಯಾದ್ಯಂತ ಹೆಚ್ಚುತ್ತಿವೆ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಪ್ರಕರಣ!

ದೌರ್ಜನ್ಯ, ಶೋಷಣೆ, ವಂಚನೆಗೊಳಗಾದ ಹಾಗೂ ನಿರ್ವಹಣಾ ವೆಚ್ಚದ ಅಗತ್ಯವಿರುವ ಹಿರಿಯ ನಾಗರಿಕರು ನ್ಯಾಯಕ್ಕಾಗಿ ಅಧಿನಿಯಮದ ಪರಿಚ್ಚೇಧ 5(4)ರಲ್ಲಿಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ನ್ಯಾಯಮಂಡಳಿಯಲ್ಲಿ ವ್ಯಾಜ್ಯ ಹೂಡಬಹುದಾಗಿದ್ದು, ಅವುಗಳನ್ನು 90 ದಿನಗಳಲ್ಲಿ ಇತ್ಯರ್ಥಪಡಿಸಬೇಕಿದೆ. ಆದರೆ 2020ರಲ್ಲಿ 785, 2021ರಲ್ಲಿ 1159 ಮತ್ತು 871 ಪ್ರಕರಣ ವಿಲೇವಾರಿಯಾಗಿದ್ದು, ಇನ್ನೂ 1326 ಪ್ರಕರಣಗಳು ಬಾಕಿ ಇವೆ.

from India & World News in Kannada | VK Polls https://ift.tt/mjANPyW

Draupadi Murmu | ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಗೆ ನಗರ ಸಜ್ಜು, ಭದ್ರತೆಗೆ 2 ಸಾವಿರ ಪೊಲೀಸ್‌ ನಿಯೋಜನೆ

Draupadi Murmu to Hubballi: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಭಾರಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದಿಂದ ಜಿಮಖಾನಾ ಮೈದಾನದವರೆಗೆ (Gymkhana ground) ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಮಾರ್ಗ ಮಧ್ಯ ಕ್ರಾಸ್‌ನಲ್ಲಿಯೂ 3-5 ಸಿಬ್ಬಂದಿ, ಪಿಎಸ್‌ಐ ಅಥವಾ ಎಎಸ್‌ಐ ಕಾರ್ಯನಿರ್ವಹಿಸಲು ರೂಪರೇಷೆ ಹಾಕಲಾಗಿದೆ. ಹೊಸೂರು, ವಾಣಿವಿಲಾಸ ಸರ್ಕಲ್‌, ಅಕ್ಷಯ ಪಾರ್ಕ್‌ನಂತಹ ಸರ್ಕಲ್‌ನಲ್ಲಿ 20-30 ಸಿಬ್ಬಂದಿ ನಿಯೋಜಿಸಲಾಗಿದೆ. ನಿಗದಿಯ ಪ್ರತಿ ಸೆಕ್ಟರ್‌ನಲ್ಲಿಯೂ ಮೇಲ್ವಿಚಾರಣೆ ನಡೆಸಲು ಪೊಲೀಸ್‌ ಇನ್ಸಪೆಕ್ಟರ್‌ನ್ನು ನಿಯೋಜಿಸಲಾಗಿದೆ.

from India & World News in Kannada | VK Polls https://ift.tt/EoSTiBM

ಮಹಿಷ ಈ ನೆಲದ ಒಡೆಯ, ಆತನಿಗೆ ಗೌರವ ಕೊಡದ ಮೈಸೂರು ದಸರಾ ಅಪೂರ್ಣ: ಜ್ಞಾನಪ್ರಕಾಶ್‌ ಸ್ವಾಮೀಜಿ

'ಮೈಸೂರು ರಾಜರನ್ನು ಮಹಿಷ ಮಂಡಳಾಧೀಶ್ವರ ಬಹುಪರಾಕ್‌ ಎಂದು ಹೊಗಳಲಾಗುತ್ತಿತ್ತು. ಏಕೆ ಎನ್ನುವುದು ಗೊತ್ತಿಲ್ಲವೇ? ನಾವು ಚಾಮುಂಡಿ ಬೆಟ್ಟಕ್ಕೆ ಬಂದರೆ ತಡೆಯುತ್ತೀರಿ ಏಕೆ? ನೀವು ಅಸ್ಪೃಶ್ಯರು ಬೆಟ್ಟಕ್ಕೆ ಬರಬೇಡಿ ಎಂದು ನೇರವಾಗಿ ಹೇಳಿಬಿಡಿ ನೋಡೋಣ' ಎಂದು ಸವಾಲು ಹಾಕಿದ ಉರಿಲಿಂಗ ಪೆದ್ದಿಮಠದ ಶ್ರೀಜ್ಞಾನಪ್ರಕಾಶ್‌ ಸ್ವಾಮೀಜಿ, 'ಇಂದು ಮತ್ತು ನಾಳೆಯೂ ನಾವು ಚಾಮುಂಡಿ ಬೆಟ್ಟಕ್ಕೆ ಬರುತ್ತೇವೆ. ನಮ್ಮನ್ನು ತಡೆದರೆ ಅಟ್ರಾಸಿಟಿ ಕೇಸ್‌ ದಾಖಲಿಸುತ್ತೇವೆ'ಎಂದು ಎಚ್ಚರಿಕೆ ನೀಡಿದರು.

from India & World News in Kannada | VK Polls https://ift.tt/xOUvzG0

Mysuru Dasara | ದಸರಾ ಕ್ರೀಡಾಕೂಟ: ಸೋಮವಾರ ಎಚ್‌.ಡಿ.ಕೋಟೆಯಲ್ಲಿ ಕೆಸರು ಗದ್ದೆ ಓಟ

Mysuru Dasara: ಸೆ.26 ರಂದು ನಡೆಯಲಿರುವ ದಸರಾ ಕ್ರೀಡಾಕೂಟದ (Dasara Sports) ಕೆಸರು ಗದ್ದೆ ಓಟಕ್ಕೆ (Kesaru Gadde Ota) ಅಗ್ನಿ ಶಾಮಕ ದಳದ ಕಚೇರಿ ಸನಿಹದಲ್ಲಿ ಗದ್ದೆ ತಯಾರು ಮಾಡಲಾಗಿದೆ. ಸೆ. 26 ರಂದು ಸರಗೂರಿನಲ್ಲಿ ಬೆ. 9.30 ಗಂಟೆಗೆ ಮತ್ತು ಎಚ್‌.ಡಿ.ಕೋಟೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 11.30 ಗಂಟೆಗೆ ಶಾಸಕ ಅನಿಲ್‌ ಚಿಕ್ಕಮಾದು ಕ್ರೀಡಾಕೂಟಕ್ಕೆ ಚಾಲನೆ ಕೊಡಲಿದ್ದಾರೆ. ಈ ಬಾರಿ ಮಹಿಳೆಯರು ಕೂಡ ಕೆಸರು ಗದ್ದೆ ಓಟದಲ್ಲಿ ಭಾಗವಹಿಸಲಿದ್ದಾರೆ.

from India & World News in Kannada | VK Polls https://ift.tt/65Y4yN9

ಕಾವೇರಿ ತೀರದಲ್ಲಿ ಪಿತೃಗಳಿಗೆ ತಿಲತರ್ಪಣ: ಶ್ರೀರಂಗಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

Pitru tarpan in Cauvery river: ಶ್ರೀರಂಗಪಟ್ಟಣದ (Srirangapatna) ಹೊರವಲಯದಲ್ಲಿರುವ ಪಶ್ಚಿಮವಾಹಿನಿ, ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟ, ಕಾವೇರಿ ಸಂಗಮ, ದೊಡ್ಡ ಗೋಸಾಯ್‌ ಗಾಟ್‌, ಚಿಕ್ಕ ಗೋಸಾಯ್‌ಗಾಟ್‌, ಶ್ರೀ ನಿಮಿಷಾಂಬ ದೇವಾಲಯ ಸ್ನಾನಘಟ್ಟಗಳ ಬಳಿ ಆಗಮಿಸಿ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ನದಿ ದಂಡೆ ಮೇಲೆ ಕುಳಿತು ಪುರೋಹಿತರ ಮಾರ್ಗದರ್ಶನದಲ್ಲಿ ಪಿತೃಗಳಿಗೆ ನಾನಾ ಪೂಜೆಗಳನ್ನು ನೆರವೇರಿಸಿದರು. ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನಾನಾ ಜಿಲ್ಲೆಗಳಿಂದ ಜನರು ಆಗಮಿಸಿದ್ದರಿಂದ ಕಾವೇರಿ ನದಿ ದಂಡೆಯಲ್ಲಿಎತ್ತ ನೋಡಿದರೂ ಜನರೇ ಕಾಣುತ್ತಿದ್ದರು.

from India & World News in Kannada | VK Polls https://ift.tt/2QWF8pm

Karnataka Rains: ಕರಾವಳಿ ಜಿಲ್ಲೆಗಳಿಗೆ ಮುಂಗಾರು ಬಂಪರ್‌; 31 ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆ

ವಾಡಿಕೆಗಿಂತ ಈ ಸಲ ಕರಾವಳಿಯಲ್ಲಿ ಶೇ.8, ಮಲೆನಾಡು ಶೇ.25, ಉತ್ತರ ಒಳನಾಡು ಶೇ.43, ದಕ್ಷಿಣ ಒಳನಾಡಿನಲ್ಲಿ ಶೇ.104ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಲಾಶಯಗಳಲ್ಲಿ ತುಂಬಿದ ನೀರಿನಿಂದಾಗಿ ಬೇಸಿಗೆಯಲ್ಲಿ ಜಲ ವಿದ್ಯುತ್‌ಗೆ ಕೊರತೆಯಿಲ್ಲ. ಐದನೇ ವರ್ಷವೂ ಉಡುಪಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಅಸಮತೋಲನದ ನಡುವೆಯೂ ಬಿದ್ದಿದೆ. ಉಡುಪಿ ಜಿಲ್ಲೆಯಲ್ಲಿ ಜನವರಿಯಿಂದ ಸೆ.20ರ ತನಕ 4,395 ಮಿ.ಮೀ. ಮಳೆ ಬಿದ್ದಿದೆ. ವಾಡಿಕೆ: 4104 ಮಿ.ಮೀ. ಮಳೆಗೆ ಹೋಲಿಸಿದರೆ ಈ ಬಾರಿ ಒಟ್ಟಾರೆ ಶೇ.7 ಹೆಚ್ಚುವರಿಯಾಗಿದೆ.

from India & World News in Kannada | VK Polls https://ift.tt/qtIpgFN

Namma Metro: ಮೆಟ್ರೋ ಪ್ರಯಾಣಿಕರ ಸಂಖ್ಯೆ 5 ಲಕ್ಷಕ್ಕೆ ಏರಿಕೆ; ಆಗಸ್ಟ್‌ನಲ್ಲಿ 1.52 ಕೋಟಿ ಜನ ಪ್ರಯಾಣ

ಕಳೆದ ನಾಲ್ಕು ತಿಂಗಳಿಂದ ಮೆಟ್ರೋ(Metro) ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದ್ದು, ಬಿಎಂಆರ್‌ಸಿಎಲ್‌ ಆದಾಯವೂ ಮತ್ತೆ ಹಳಿಗೆ ಮರಳಿದೆ. ಕೋವಿಡ್‌ ನಂತರ ಪ್ರಯಾಣಿಕರನ್ನು ಸೆಳೆಯಲು 'ನಮ್ಮ ಮೆಟ್ರೊ' ಹಲವು ಯೋಜನೆಗಳನ್ನು ಪರಿಚಯಿಸಿದೆ. ಒಂದು, ಎರಡು, ಮೂರು ಮತ್ತು ಐದು ದಿನಗಳ ಪಾಸ್‌, ಗ್ರೂಪ್‌ ಟಿಕೆಟ್‌ ಕೂಡ ನೀಡುತ್ತಿದೆ. ಟಿಕೆಟ್‌ ಮೇಲೆ ಹಲವು ರಿಯಾಯತಿಗಳನ್ನು ಕೂಡ ನೀಡಿದೆ. ಸದ್ಯದಲ್ಲಿಯೇ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ ಟಿಕೆಟ್‌ ಪಡೆಯುವ ಯೋಜನೆಯನ್ನು ಕೂಡ ಜಾರಿಗೆ ತರುತ್ತಿದೆ.

from India & World News in Kannada | VK Polls https://ift.tt/uObWyYJ

ರೈಲು ಸೇವೆ ಕಾಯಂಗೊಳ್ಳದೆ ಟಿಕೆಟ್‌ ದುಬಾರಿ; ವಿಜಯಪುರ- ಮಂಗಳೂರು ರೈಲು ಪ್ರಯಾಣಿಕರಿಗೆ ತತ್ಕಾಲ್‌ ಬರೆ

ಕೋವಿಡ್‌ ಪೂರ್ವದಲ್ಲಿ ಬಹುನಿರೀಕ್ಷಿತ ಮಂಗಳೂರು- ವಿಜಯಪುರ ರೈಲನ್ನು ಓಡಿಸಲು ತೀರ್ಮಾನಿಸಿ ಕೆಲವು ತಿಂಗಳುಗಳ ಕಾಲ ಸಂಚಾರ ನಡೆಸಿತ್ತು. ಆ ಬಳಿಕ ಕೋವಿಡ್‌ ಹೆಚ್ಚಿದ್ದಾಗ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ರೈಲನ್ನು ಮರು ಆರಂಭಿಸಲಾಗಿತ್ತು. ಆದರೆ ಆರಂಭವಾದ ದಿನಗಳಿಂದ ಇಂದಿನವರೆಗೂ ವಿಜಯಪುರ ಮಂಗಳೂರು ರೈಲು ತತ್ಕಾಲ್‌ ನೆಲೆಯಲ್ಲೇ ಓಡಾಡುತ್ತಿದೆ.ತತ್ಕಾಲ್‌ ಕಾರಣದಿಂದ ಪ್ರಯಾಣಿಕರು ಕೂಡಾ ರೈಲು ಟಿಕೆಟ್‌ ಬುಕ್‌ ಮಾಡುವ ಸಂದರ್ಭ ತತ್ಕಾಲ್‌ ಮೂಲಕವೇ ಬುಕ್‌ ಮಾಡಿಸಬೇಕಾಗುತ್ತದೆ. ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಮಾಮೂಲಿ ಟಿಕೆಟ್‌ಗಿಂತ ದುಬಾರಿಯಾಗಿದೆ.

from India & World News in Kannada | VK Polls https://ift.tt/1jINBY6

ಪಿಎಫ್‌ಐ ದೇಶದ್ರೋಹಿ ಸಂಘಟನೆ ಎಂಬುದು ಸಾಬೀತಾಗಿದ್ದು, ಇದನ್ನು ಮಟ್ಟ ಹಾಕಬೇಕು: ಶೋಭಾ ಕರಂದ್ಲಾಜೆ

ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಲು ರಾಜ್ಯ ಹಾಗೂ ಕೇಂದ್ರ ಸರಕಾರ ಸಿದ್ಧವಿದೆ. ಈವರೆಗೂ ಆಗಿರುವ ಬೆಳೆಹಾನಿ ಕುರಿತು ಅಕ್ಟೋಬರ್‌ ಮೊದಲ ವಾರದಲ್ಲಿ ವರದಿ ತರಿಸಿಕೊಂಡು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಿದ್ದು ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಯ ನೀಡಿದರು.

from India & World News in Kannada | VK Polls https://ift.tt/cRVoIv0

ಎರಡು ಪ್ರತ್ಯೇಕ ಪ್ರಕರಣ: ಕರಿಪ್ಪುರ್‌ ವಿಮಾನ ನಿಲ್ದಾಣದಲ್ಲಿ 2 ಕೆಜಿ ಅಕ್ರಮ ಚಿನ್ನ ವಶ

ಕೋಝಿಕ್ಕೋಡ್‌ ಎಡಕ್ಕುಳಂ ನಿವಾಸಿ ಅಬ್ದುಲ್‌ ಶರೀಫ್‌ (25) ಎಂಬಾತನಿಂದ 1.037 ಕೆಜಿ ಅಕ್ರಮ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಚಿನ್ನವನ್ನು ಸೈಕಲ್‌ನ ಬಿಡಿಭಾಗಗಳ ಒಳಗೆ ಬಚ್ಚಿಟ್ಟು ಕಳ್ಳ ಸಾಗಾಟಕ್ಕೆ ಯತ್ನಿಸಿದ್ದ. ಮತ್ತೊಂದು ಪ್ರಕರಣದಲ್ಲಿ ಮಲಪ್ಪುರಂ ಪಟ್ಟರ್‌ ಕಡವ್‌ ನಿವಾಸಿ ಮುಹಮ್ಮದ್‌ ಬಶೀರ್‌ (48) ಎಂಬಾತ ಕಸ್ಟಮ್ಸ್‌ ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳ ಸಾಗಾಟಕ್ಕೆ ಯತ್ನಿಸಿದ 52 ಲಕ್ಷ ಮೌಲ್ಯದ 1.012 ಕೆಜಿ ಚಿನ್ನದ ಮಿಶ್ರಣವನ್ನು ಪೊಲೀಸರು ವಶಪಡಿಸಿದ್ದಾರೆ.

from India & World News in Kannada | VK Polls https://ift.tt/SFwIs92

ಆನೇಕಲ್‌ನಲ್ಲಿ ಭೂಹಗರಣ ಬಯಲು: ಸುಪ್ರೀಂ ಮುಟ್ಟುಗೋಲು ಹಾಕಿಕೊಂಡಿದ್ದ ಆಸ್ತಿ ಮಾರಾಟ!

Anekal M Medahalli Land scam: ಜಮೀನು ಮಾರಾಟ ಅಕ್ರಮ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಅಕ್ರಮದಲ್ಲಿ ಶಾಮೀಲಾಗಿದ್ದ ವಕೀಲ ಮಂಜುನಾಥ್‌, ರಿಯಲ್‌ ಎಸ್ಟೇಟ್‌ ಏಜೆಂಟರಾದ ಚಂದ್ರಮೋಹನ್‌, ಪೃಥ್ವಿನ್‌ ಎಂಬುವವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಸಬ್‌ರಿಜಿಸ್ಟ್ರಾರ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರ ಸಹೋದರ ಸೇರಿದಂತೆ ಇತರರ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು, ಶನಿವಾರ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಆನೇಕಲ್‌ ಉಪವಿಭಾಗದ ಡಿವೈಎಸ್ಪಿ ಲಕ್ಷ್ಮೇನಾರಾಯಣ ಅವರ ನೇತೃತ್ವದ ಆರು ಪ್ರತ್ಯೇಕ ತಂಡಗಳು ಆರೋಪಿಗಳಿಗೆ ಸಂಬಂಧಿಸಿದ ಆರು ಕಡೆ ಶೋಧ ಕಾರ್ಯಾಚರಣೆ ನಡೆಸಿವೆ.

from India & World News in Kannada | VK Polls https://ift.tt/Tbc5uPJ

ಯುವಕನಿಗೆ ಬಲವಂತದಿಂದ ಮುಂಜಿ ಮಾಡಿಸಿ ಇಸ್ಲಾಂಗೆ ಮತಾಂತರ ಆರೋಪ: 11 ಮಂದಿ ವಿರುದ್ಧ ಎಫ್‌ಐಆರ್

ಶ್ರೀಧರ ಗಂಗಾಧರ ಎಂಬಾತ ಖಾಸಗಿ ಕಂಪನಿಯೊಂದರಲ್ಲಿನ ನೌಕರ. ಈತನಿಗೆ ಹಣಕಾಸಿನ ತೊಂದರೆ ಇತ್ತು. ಈ ವಿಷಯವನ್ನು ಆರೋಪಿ ಅತ್ತಾವರ ರೆಹಮಾನ್‌ಗೆ ತಿಳಿಸಿದ್ದಾನೆ. ಹಣಕಾಸಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದನು. ಅದರಂತೆ ಆರೋಪಿಯು ಕಳೆದ ಮೇ ತಿಂಗಳಲ್ಲಿ ಬೆಂಗಳೂರಿನ ಬನಶಂಕರಿಯ ಮಸೀದಿಯೊಂದಕ್ಕೆ ಕರೆಯೊಯ್ದು ಅಲ್ಲಿನವರಿಗೆ ಪರಿಚಯಿಸಿದ್ದಾನೆ. ಈ ವೇಳೆ ಆತನನ್ನು ಮಸೀದಿಯಲ್ಲೇ ಬಲವಂತವಾಗಿ ಇಟ್ಟುಕೊಂಡ ಆರೋಪಿಗಳು ಮುಸ್ಲಿಂ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮನಪರಿವರ್ತನೆ ಮಾಡಿದ್ದಾರೆ.

from India & World News in Kannada | VK Polls https://ift.tt/XvFwcHU

Paurakarmika | 11,300 ಪೌರಕಾರ್ಮಿಕರ ಸೇವೆ ಕಾಯಂ, ಉಳಿದವರ ಸೇವೆ ಕಾಯಂಗೆ ಶೀಘ್ರ ಕ್ರಮ: ಬಿ.ಸಿ.ನಾಗೇಶ್‌

Pourakarmikas were regularised: ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ.ಸಿ.ನಾಗೇಶ್‌ ಅವರು, ಇನ್ನುಳಿದ ಪೌರಕಾರ್ಮಿಕರನ್ನೂ ನಂತರದ ದಿನಗಳಲ್ಲಿ ಕಾಯಂಗೊಳಿಸಲಾಗುವುದು. ಪೌರಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ಹಾಗೂ ಅವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ನಗರಸಭೆ ವತಿಯಿಂದ ಸಹಾಯ ಒದಗಿಸಲಾಗುವುದು. ದ್ವಿಚಕ್ರ ವಾಹನ ಕೊಳ್ಳುವವರಿಗೆ ಶೇ.50ರಷ್ಟು ಸಹಾಯಧನ, ಪೌರಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಲ್ಯಾಪ್‌ಟಾಪ್‌ ಹಾಗೂ ಮಹಿಳಾ ಕಾರ್ಮಿಕರಿಗೆ ಹೊಲಿಗೆಯಂತ್ರ ನೀಡಲಾಗುವುದು ಎಂದು ತಿಳಿಸಿದರು. ಪೌರ ಕಾರ್ಮಿಕರಿಗೆ ಹಿಂದೆ ಬಹಳಷ್ಟು ತಿಂಗಳು ಸಂಬಳ ಸರಿಯಾಗಿ ಬರುತ್ತಿರಲಿಲ್ಲ.

from India & World News in Kannada | VK Polls https://ift.tt/3qts2KC

IND vs AUS: 'ನನ್ನಿಂದ ಇಂಥಾ ಆಟ ನಿರೀಕ್ಷಿರಲಿಲ್ಲ', ತಮ್ಮ ಬ್ಯಾಟಿಂಗ್‌ ಬಗ್ಗೆ ರೋಹಿತ್‌ ಶರ್ಮಾ ಅಚ್ಚರಿ!

Rohit Sharma surprised his Batting: ಶುಕ್ರವಾರ ರಾತ್ರಿ ನಾಗ್ಪುರದ ವಿದರ್ಭ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್‌ ಶರ್ಮಾ (46*) ಅವರ ಸ್ಪೋಟಕ ಬ್ಯಾಟಿಂಗ್‌ ಸಹಾಯದಿಂದ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಗೆಲುವು ಪಡೆಯಿತು. ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ಧ ತಮ್ಮ ಮ್ಯಾಚ್‌ ವಿನ್ನಿಂಗ್‌ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ತಮಗೆ ಅಚ್ಚರಿಯಾಗಿದೆ ಎಂದು ಹೇಳಿದ್ದಾರೆ ಹಾಗೂ ಈ ರೀತಿಯ ಬ್ಯಾಟಿಂಗ್‌ ಪ್ರದರ್ಶನ ತೋರುತ್ತೇನೆಂದು ನಾನು ಭಾವಿಸಿರಲಿಲ್ಲ ಎಂದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/JlyMTnr

'ಜೈ ಭಾರತ ಜನನಿಯ ತನುಜಾತೆ' 18 ವರ್ಷದ ಸಮಸ್ಯೆಗೆ ತೆರೆ: ನಿರ್ದಿಷ್ಟ ಸಮಯ, ದಾಟಿ ವಿಚಾರ ಕೊನೆಗೂ ಇತ್ಯರ್ಥ

ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಗೆ ನಿರ್ದಿಷ್ಟ ಸಮಯ ಹಾಗೂ ಧಾಟಿ ನಿಗದಿ ಮಾಡುವ ವಿಚಾರ ಕೊನೆಗೂ ಇತ್ಯರ್ಥಗೊಂಡಿದೆ. ಇದರಿಂದ 18 ವರ್ಷಗಳ ಗೊಂದಲಕ್ಕೆ ರಾಜ್ಯ ಸರಕಾರ ಈಗ ಪೂರ್ಣ ವಿರಾಮ ಹಾಕಿದೆ. ಯಾವುದೇ ಆಲಾಪ ಹಾಗೂ ಪುನಾರವರ್ತನೆ ಇಲ್ಲದಂತೆ 150 ಸೆಕೆಂಡ್ ಗಳಲ್ಲಿ ನಾಡಗೀತೆಯನ್ನು ಹಾಡಲು ಸಾಧ್ಯ ಎಂದು ಮೈಸೂರಿನ ಸಂಗೀತ ವಿದುಷಿ ಎಚ್.ಆರ್. ಲೀಲಾವತಿ ಅಧ್ಯಕ್ಷತೆಯ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

from India & World News in Kannada | VK Polls https://ift.tt/aOutAws

ಮೈಸೂರು ದಸರಾ ಜಂಬೂಸವಾರಿಯಲ್ಲಿ ಮಣ್ಣೆಯ ಗತವೈಭವ: ಗಂಗರ ರಾಜಧಾನಿಯ ಐತಿಹಾಸಿಕ ದೇಗುಲಗಳ ಸ್ತಬ್ಧಚಿತ್ರ ಪ್ರದರ್ಶನ

ಕಳೆದ ಎರಡು ವರ್ಷಗಳಿಂದ ಕೊರೋನಾ ಹಾವಳಿಯಿಂದ ಸರಳವಾಗಿ ನಡೆದ ದಸರಾ ಹಬ್ಬ, ಈ ವರ್ಷದ ದಸರಾಗೆ ಸಾಂಸ್ಕೃತಿಕ ರಾಜಧಾನಿ ಮೈಸೂರು ಅತ್ಯಂತ ವೈಭವಪೂರಿತವಾಗಿ ಸಿದ್ಧಗೊಳುತ್ತಿದೆ. ಜಂಬೂ ಸವಾರಿಯಲ್ಲಿ ಎಂದಿನಂತೆ ಜಿಲ್ಲೆಯ ಸ್ತಬ್ಧಚಿತ್ರಗಳಿಗೆ ಅವಕಾಶಮಾಡಿ ಕೊಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿನಿಧಿಯಾಗಿ ನಮ್ಮ ನಾಡಿನ ಗಂಗರಸರ ರಾಜಧಾನಿ ಮಣ್ಣೆಯ ಗತ ವೈಭವವನ್ನು ಪ್ರದರ್ಶಿಸಲು ಜಿಲ್ಲಾಪಂಚಾಯತಿಯೂ ಮುಂದಾಗಿದೆ.

from India & World News in Kannada | VK Polls https://ift.tt/S7yMnE4

Cauvery River | ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಉತ್ಸವಕ್ಕೆ ಸಿಎಂ ಗ್ರೀನ್‌ ಸಿಗ್ನಲ್‌

Kaveri River Utsav: ಅಜಾದಿ ಕಾ ಅಮೃತ್‌ ಮಹೋತ್ಸವ ಅಂಗವಾಗಿ 2021 ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಕಾವೇರಿ ನದಿ ಉತ್ಸವ (River Festival) ಕಾರಣಾಂತರಗಳಿಂದ ಮುಂದೂಲ್ಪಟ್ಟಿತ್ತು. ಇದೀಗ ಅ.21 ರಂದು ಕೊಡಗು ಜಿಲ್ಲೆಯಲ್ಲಿ (Kodagu) ಕಾವೇರಿ ನದಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಒಪ್ಪಿಗೆ ನೀಡಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ವತಿಯಿಂದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌ ಮತ್ತು ಕೆ.ಜಿ ಬೋಪಯ್ಯ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭ ಅವರು ಭರವಸೆ ನೀಡಿದ್ದಾರೆ

from India & World News in Kannada | VK Polls https://ift.tt/hmb0WqL

Farmers suicide | 30 ವರ್ಷಗಳಲ್ಲಿ 6 ಲಕ್ಷ ರೈತರ ಆತ್ಮಹತ್ಯೆ: ಜಿ.ಸಿ.ಬಯ್ಯಾರೆಡ್ಡಿ

Farmers suicide: ಕಾರ್ಪೊರೇಟ್‌ ಬಂಡವಾಳಗಾರರ ಪರ ಡಬಲ್‌ ಎಂಜಿನ್‌ ಸರಕಾರ ನಿಂತು ರೈತರ ಬದುಕು ಹಾಳು ಮಾಡುತ್ತಿದೆ. ಭಾರತವನ್ನು ವಿಶ್ವ ಗುರು ಮಾಡುತ್ತೇನೆನ್ನುವ ಮೋದಿ ಸರಕಾರ ದೇಶದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕಿ ಪರಿಹಾರಕ್ಕೆ ಸ್ಪಂದಿಸದೆ ಬಹುರಾಷ್ಟ್ರೀಯ ಕಂಪನಿಗಳನ್ನು ಸ್ಥಾಪಿಸಿ ರೈತರ ಭೂಮಿ ಕಸಿದುಕೊಳ್ಳುತ್ತಿದೆ. ಸರಕಾರದ ರೈತ ವಿರೋಧಿ ನೀತಿಗಳಿಂದ ಉಳುವವನೇ ರೈತ ಎನ್ನುವುದು ಆಗುತ್ತಿಲ್ಲ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್‌.ಅಶೋಕ್‌ ಬಗುರ್‌ಹುಕ್ಕುಂ ಸಾಗುವಳಿ ಕೊಡುವುದಿಲ್ಲ ಎನ್ನುತ್ತಿದ್ದಾರೆ.

from India & World News in Kannada | VK Polls https://ift.tt/2aPBVKp

IND vs AUS: ರೋಹಿತ್‌ ಶರ್ಮಾ ಅಬ್ಬರ, ಭಾರತ ತಂಡಕ್ಕೆ 6 ವಿಕೆಟ್‌ ಜಯ!

India vs Australia 2nd T20I Highlights: ನಾಗ್ಪುರದ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ, ರೋಹಿತ್‌ ಶರ್ಮಾ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿತು. ಮೈದಾನದ ಕೆಲ ಭಾಗ ತೇವವಾಗಿದ್ದರಿಂದ ಪಂದ್ಯವನ್ನು ಎರಡು ಗಂಟೆ ತಡವಾಗಿ ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯವನ್ನು 8 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/RXj6pew

KCET | ಸಿಇಟಿ ಗೊಂದಲ ಇತ್ಯರ್ಥ: 2021ನೇ ಸಾಲಿನ ಪಿಯು ವಿದ್ಯಾರ್ಥಿಗಳ 18 ಮಾರ್ಕ್ಸ್‌ ಕಟ್‌

KCET Rankings 2022: 2021ನೇ ಸಾಲಿನ ಪಿಯುಸಿ (PUC) ವಿದ್ಯಾರ್ಥಿಗಳ 18 ಅಂಕ ಕಡಿತಗೊಳಿಸಿ, 2022ನೇ ಸಾಲಿನ ಹೊಸ ರಾರ‍ಯಂಕ್‌ ಪಟ್ಟಿ ಪ್ರಕಟಿಸಬಹುದು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ನೇತೃತ್ವದ ಸಮಿತಿ ಸಲಹೆ ನೀಡಿದ್ದು, ಹೈಕೋರ್ಟ್‌ (Karnataka High court) ಇದನ್ನು ಮಾನ್ಯ ಮಾಡಿದೆ. ಜತೆಗೆ, ಇದೇ ವಿಧಾನ ಅಳವಡಿಸಿಕೊಂಡು ಹೊಸದಾಗಿ ಸಿಇಟಿ ರಾರ‍ಯಂಕಿಂಗ್‌ ಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್‌ ಶುಕ್ರವಾರ ಸರಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ/ KEA) ಆದೇಶಿಸಿತು.

from India & World News in Kannada | VK Polls https://ift.tt/Jdgxw4G

Electricity Rate | ಹಬ್ಬಕ್ಕೆ ವಿದ್ಯುತ್‌ ದರ ಏರಿಕೆ ಶಾಕ್‌: ಇಂಧನ ಹೊಂದಾಣಿಕೆ ಶುಲ್ಕದ ಹೆಸರಿನಲ್ಲಿ ದರ ಹೆಚ್ಚಳ

Electricity tariff rate hike: ಕೆಇಆರ್‌ಸಿ (KERC) ಈ ಹಿಂದೆ ಸೆ.19ರಂದು ಹೊರಡಿಸಿದ್ದ ಆದೇಶದನ್ವಯ ಇಂಧನ ಹೊಂದಾಣಿಕೆ ಶುಲ್ಕವನ್ನು ಮುಂದಿನ 6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲು ಎಲ್ಲಾ ವಿದ್ಯುತ್‌ ಸರಬರಾಜು (Electricity supply) ಕಂಪನಿಗಳಿಗೆ ಅನುಮತಿ ನೀಡಿದೆ. ಈ ಆದೇಶದಿಂದಾಗಿ ವಿದ್ಯುತ್‌ ದರ ಏರಿಕೆಯಾಗಲಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಕೆಇಆರ್‌ಸಿ (ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು) ನಿಯಮಗಳು-2013ರ ಅನ್ವಯ ಇಂಧನ ಹೊಂದಾಣಿಕೆ ಶುಲ್ಕವನ್ನು ( fuel cost adjustment charge) ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ.

from India & World News in Kannada | VK Polls https://ift.tt/ahYVCK2

Doddaballapura | ಕುಸಿಯಿತು ಇಳುವರಿ, ಏರಿತು ಬೆಲೆ: ಮಳೆಯಿಂದ ರೇಷ್ಮೆ ಮಾರುಕಟ್ಟೆಯಲ್ಲಿ ಗೂಡುಗಳ ಅಭಾವ

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಯಲ್ಲಿ ರೈತರು ರೇಷ್ಮೆ ಬೆಳೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಜಿಲ್ಲೆಗಳಲ್ಲಿ ರೇಷ್ಮೆ ರೈತರ ಕೈಹಿಡಿದಿದೆ. ಜಿಲ್ಲೆಯಲ್ಲಿ ವ್ಯಾಪಾಕ ಮಳೆ ರೇಷ್ಮೆ ಬೆಳೆಯ ಮೇಲೆ ಪರಿಣಾಮ ಬೀರುವಂತೆ ಮಾಡಿದೆ. ಇದರಿಂದ ಗೂಡುಗಳ ಸಂಖ್ಯೆ ಇಳಿಕೆ ಕಂಡಿದ್ದು, ಮಾರುಕಟ್ಟೆಯಲ್ಲಿ ಗೂಡುಗಳಿಗೆ ಉತ್ತಮ ದರವಿದೆ. ಆದರೆ, ಇದರ ಪ್ರಯೋಜನ ರೈತರಿಗೆ ಸಿಗುತ್ತಿಲ್ಲ. ರೇಷ್ಮೆ ಉತ್ಪಾದನೆ ಕುಂಠಿತವಾದ ಹಿನ್ನೆಲೆ ದರ ಇದ್ದರೂ ರೈತರಿಗೆ ಲಾಭವಿಲ್ಲದಂತಾಗಿದೆ.

from India & World News in Kannada | VK Polls https://ift.tt/d5bF0u2

ತ್ಯಾಜ್ಯ ಸಮಸ್ಯೆಯಿಂದ ಮುಕ್ತಿಗೆ ರಾತ್ರಿ ಕಸ ಸಂಗ್ರಹ: ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ವಿನೂತನ ಕಾರ್ಯಕ್ರಮ

ಇತ್ತೀಚಿಗೆ ಸುರಿದ ಮಳೆಯಿಂದಾಗಿ 15ಕ್ಕೂ ಹೆಚ್ಚು ದಿನಗಳ ಕಾಲ ತ್ಯಾಜ್ಯ ಸಂಗ್ರಹದ ಮೇಲೆ ಪರಿಣಾಮ ಬೀರಿತ್ತು. ಜತೆಗೆ, ಮೊದಲಿನಿಂದಲೂ ರಾಮನಗರ ನಗರಸಭೆಯು ಅಸಮರ್ಪಕ ತ್ಯಾಜ್ಯ ನಿರ್ವಹಣೆಯ ಕುರಿತು ಜನತೆಯ ಹಿಡಿಶಾಪಕ್ಕೆ ಗುರಿಯಾಗಿತ್ತು. ಅಪಕೀರ್ತಿಯಿಂದ ಹೊರ ಬರುವ ಸಲುವಾಗಿ ರಾತ್ರಿ ವೇಳೆಯು ಕಸ ಸಂಗ್ರಹಕ್ಕೆ ಮುಂದಾಗಿದೆ. ರಾಮನಗರದಲ್ಲಿ ಬಹುತೇಕ ಮಂದಿ ಬೆಳಗ್ಗೆ 5ರಿಂದ 6ಗಂಟೆಗೆ ಉದ್ಯೋಗಕ್ಕೆಂದು ಬೇರೆ ಊರುಗಳಿಗೆ ತೆರಳುತ್ತಾರೆ. ಹಾಗಾಗಿ ಈ ವರ್ಗದವರು ಮನೆಯಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದರು.

from India & World News in Kannada | VK Polls https://vijaykarnataka.com/news/ramanagara/night-garbage-collection-in-ramanagara-municipality/articleshow/94385119.cms

ಕ್ಷೇತ್ರದ ಸಮಸ್ಯೆ ಬಗೆಹರಿಸದೆ ಕಾಣೆಯಾಗಿರೋದಾಗಿ ಶೋಭಾ ಕರಂದ್ಲಾಜೆ ಬಗ್ಗೆ ದೂರು ದಾಖಲಿಸಲು ನಿರ್ಧಾರ!

ಎಲ್ಲೇ ಹೆಣ ಬಿದ್ದರೂ ರಾಜಕೀಯ ಚದುರಂಗದಾಟ ಆಡುವಲ್ಲಿ ಶೋಭಾ ನಿಷ್ಣಾತರು. ರಸ್ತೆಯ ದುರವಸ್ಥೆಗೆ ನಾವೇನು ಅನ್ಯಾಯ ಮಾಡಿದ್ದೇವೆ ಎನ್ನುವ ಪ್ರಶ್ನೆಯನ್ನು ಜನರು ಮುಂದಿಡುತ್ತಿದ್ದು ಕಾಪು ಶಾಸಕರೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಶೇ. 40 ಕಮಿಷನ್‌, ಶೇ. 70 ಬೆಲೆಯೇರಿಕೆ ಮಾಡಿದ ಕೇಂದ್ರ ಸರಕಾರ ಉದ್ಯೋಗ ಸೃಷ್ಟಿ ಬದಲು ಸಚಿವರು ನಿರುದ್ಯೋಗ ನಿವಾರಣೆಗೆ ಪಕೋಡ ಮಾರಿ ಎಂದಿದ್ದರೂ ಲೀಟರ್‌ ಎಣ್ಣೆಗಿದ್ದ 90ರೂ. ಈಗ 200ರೂ. ಗಳಿಗೇರಿದೆ. ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸವಾಗುತ್ತಿದೆ ಎಂದು ವಿನಯ್ ಕುಮಾರ್ ಸೊರಕೆ ಟೀಕಿಸಿದರು.

from India & World News in Kannada | VK Polls https://ift.tt/U5gEbvZ

ಸುಳ್ಳು ಜಾತಿ ನಿಂದನೆ ಕೇಸ್‌ ದಾಖಲಿಸಿದ್ದ ವ್ಯಕ್ತಿಗೆ ₹25,000 ದಂಡ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ನಿರ್ವಹಣಾ ಶುಲ್ಕ ಪಾವತಿಸಿಲ್ಲ ಎಂಬ ಸಂಗತಿಯನ್ನು ಸ್ವತಃ ದೂರುದಾರ ರವಿಕುಮಾರ್‌ ಒಪ್ಪಿಕೊಂಡಿದ್ದಾರೆ. ಅನೇಕ ಬಾರಿ ನೋಟಿಸ್‌ ಜಾರಿಗೊಳಿಸಿದ ಹೊರತಾಗಿಯೂ ನಿರ್ವಹಣಾ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ಸಂಘವು ದೂರುದಾರರ ಫ್ಲ್ಯಾಟ್‌ಗೆ ವಿದ್ಯುತ್‌ ಸಂಪರ್ಕ ಹಾಗೂ ಇತರೆ ಸೇವೆಗಳನ್ನು ಸ್ಥಗಿತಗೊಳಿಸಿರುವ ಸಂಗತಿಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ, ರವಿಕುಮಾರ್‌ ಕಾನೂನಿನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಹೇಳಿದೆ.

from India & World News in Kannada | VK Polls https://ift.tt/53CSWYn

ಅಡಕೆ ಮರ ಎಲೆ ಚುಕ್ಕಿ ರೋಗದಿಂದ ಪಾರಾಗಲು ಏನು ಮಾಡಬೇಕು? ಇಲ್ಲಿದೆ ರೈತರಿಗೆ ಮಾಹಿತಿ

ಶೃಂಗೇರಿ ತಾಲೂಕಿನ ಮೆಣಸೆ ಸರಕಾರಿ ಶಾಲೆಯಲ್ಲಿಏರ್ಪಡಿಸಿದ್ದ ಅಡಕೆ ಎಲೆ ಚುಕ್ಕಿ ರೋಗದ ಮಾಹಿತಿ ಕಾರ್ಯಾಗಾರವನ್ನು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಕೀರ್ತಿಕುಮಾರ್‌ ಉದ್ಘಾಟಿಸಿದರು. ಬಹುತೇಕ ಎಲ್ಲ ತಿಂಗಳು ಮಳೆಯಾಗುತ್ತಿರುವುದು ಹಾಗೂ ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಅಡಕೆಗೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.

from India & World News in Kannada | VK Polls https://ift.tt/3yjXSaB

T20 World cup: ಶಾಹೀನ್‌ ಅಫ್ರಿದಿಗಿಂತ ಜಸ್‌ಪ್ರೀತ್‌ ಬುಮ್ರಾ ಚೆನ್ನಾಗಿ ಆಡಲಿದ್ದಾರೆ', ರಿಕಿ ಪಾಂಟಿಂಗ್!

Ricky Ponting Backs Jasprit Bumrah: ಆಸ್ಟ್ರೇಲಿಯಾ ಆತಿಥ್ಯದಲ್ಲಿ ಮುಂಬರುವ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಜಸ್‌ಪ್ರೀತ್‌ ಬುಮ್ರಾ ಹಾಗೂ ಪಾಕಿಸ್ತಾನದ ಶಾಹೀನ್‌ ಶಾ ಅಫ್ರಿದಿ ಪ್ರಮುಖ ಆಕರ್ಷಣೆ ಎಂಬುದು ನಿಜ. ಆದರೆ, ಈ ಇಬ್ಬರಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರು ಆಸ್ಟ್ರೇಲಿಯಾ ಕಂಡೀಷನ್‌ನಲ್ಲಿ ಅತ್ಯುತ್ತಮ ಬೌಲ್‌ ಮಾಡಬಲ್ಲರೆಂದು ಆಸೀಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್‌ 16 ರಿಂದ ಆರಂಭವಾಗಲಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/pKdrOqg

ಮೈಸೂರಿನ ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಕಲಿಮುದ್ದೀನ್ NIA ವಶಕ್ಕೆ! ಬೆಂಬಲಿಗರ ಪ್ರತಿಭಟನೆ

ಕಲಿಮುಲ್ಲಾರನ್ನ ವಶಕ್ಕೆ ಪಡೆದಿರೋ ವಿಚಾರ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಪಿಎಫ್ಐ,ಎಸ್ಡಿಪಿಐ ಸಂಘಟನೆಯ ಮನೆ ಮೇಲೆ ಎನ್ ಐಎ ದಾಳಿ ವಿಚಾರಕ್ಕೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಮನೆಯ ಮೇಲೆ ತಡ ರಾತ್ರಿ ಏಕಾಏಕಿ ಎನ್ಐಎ ಅಧಿಕಾರಿಗಳು ಅಂಥ ಬಂದು ದಾಳಿ ಮಾಡಿದರು. ನಮ್ಮ ಮನೆಯನ್ನೆಲ್ಲ ಹುಡುಕಾಟ ಮಾಡಿ ನಮ್ಮ ಮನೆಯಲ್ಲಿದ್ದ ಕೆಲ ದಾಖಲೆಯನ್ನು ವಶಪಡಿಸಿಕೊಂಡರು . ನಮ್ಮ ಭಾವನವರನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ನಮ್ಮ ಭಾವ ಅವರು ಯಾವುದೇ ರೀತಿಯ ದೇಶದ್ರೋಹ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.

from India & World News in Kannada | VK Polls https://ift.tt/MhPxz9i

60 ಕೋಟಿ ಮೌಲ್ಯದ ಭೂವಂಚನೆ ಪ್ರಕರಣ: ಲಗ್ಗೆರೆ ಗೋಪಿನಾಥ್‌ ಕೇಸ್‌ನಲ್ಲಿ ಕ್ರಮದ ಭರವಸೆ

ಸುಮಾರು 60 ಕೋಟಿ ರೂ. ಬೆಲೆಬಾಳುವ 16 ಎಕರೆ ಸರಕಾರಿ ಭೂಮಿ ಸುಳ್ಳು ಮಾಹಿತಿ ನೀಡಿ ಕೆ.ಗೋಪಿನಾಥ್‌ ಎಂಬ ವ್ಯಕ್ತಿ ಕಬಳಿಸಿರುವ ಹಾಗೂ ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವರದಿ ಆಧರಿಸಿ ಸರಕಾರ ಅಗತ್ಯ ಕಾನೂನು ಕ್ರಮ ಜರುಗಿಸಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವಿಧಾನಸಭೆಯಲ್ಲಿ ಬುಧವಾರ ತಿಳಿಸಿದರು.

from India & World News in Kannada | VK Polls https://ift.tt/6gSGZJ8

ದಸರಾ ಹಬ್ಬಕ್ಕೆ ಪ್ರಯಾಣಿಕರ ಹೆಚ್ಚಳ: ಹೆಚ್ಚುವರಿ ಸೇವೆಗೆ ರೈಲ್ವೆ ಇಲಾಖೆ ನಿರ್ಧಾರ; ಎಲ್ಲಿಂದೆಲ್ಲಿಗೆ?

ದಸರಾ ಹಬ್ಬಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದಿಂದ ಸಂಖ್ಯೆಗೆ ಅನುಗುಣವಾಗಿ ಸೇವೆ ನೀಡುವ ಉದ್ದೇಶದಿಂದ ಹೆಚ್ಚುವರಿ ವಿಶೇಷ ರೈಲು ಸೇವೆಯನ್ನು ಒದಗಿಸಲು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ಬಗ್ಗೆ ಹಿರಿಯ ವಿಭಾಗೀಯ ರೈಲ್ವೆ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್‌ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

from India & World News in Kannada | VK Polls https://ift.tt/m2wT395

Lokayukta | ಲಂಚ ವಾಪಸ್‌ ಕೊಡಲು ಹೋಗಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಕೆಐಎಡಿಬಿ ಅಧಿಕಾರಿಗಳು: ಎನ್‌ಒಸಿಗಾಗಿ 2.5 ಲಕ್ಷ ರೂ. ಲಂಚ

KIADB officers arrested by Lokayukta: ಬುಧವಾರ ಬೆಂಗಳೂರಿನ ಕೆಐಎಡಿಬಿ ಕಚೇರಿಯಲ್ಲಿ ನಡೆದಿದೆ. ಜಮೀನು ಮಾಲೀಕರಿಗೆ ನಿರಾಕ್ಷೇಪಣಾ ಪತ್ರ ನೀಡಲು (NOC) ಲಂಚ ಪಡೆದಿದ್ದ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ವಿಜಯ್‌ಕುಮಾರ್‌ (ಕೆಎಎಸ್‌/ KAS), ಭೂಮಾಪಕ ರಘುನಾಥ್‌ ಅವರನ್ನು ಮೂರು ಲಕ್ಷ ರೂ.ಲಂಚದ ಹಣದ ಸಮೇತ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಅಧಿಕಾರಿ ವಿಜಯ್‌ಕುಮಾರ್‌, ರಘುನಾಥ್‌ 2.5 ಲಕ್ಷ ರೂ.ಲಂಚ ಪಡೆದು ನಿರಾಕ್ಷೇಪಣಾ ಪತ್ರ ನೀಡಿದ್ದರು. ಇದರಿಂದ ನೊಂದ ಭಗತ್‌ಸಿಂಗ್‌ ಅಧಿಕಾರಿಗಳ ಲಂಚ ಸ್ವೀಕಾರ ಕುರಿತು ಕೆಐಎಡಿಬಿ ಉಪ ಆಯುಕ್ತರಿಗೆ (ಭೂಸ್ವಾಧೀನ) ದೂರು ನೀಡಿದ್ದರು.

from India & World News in Kannada | VK Polls https://ift.tt/nXU7Pi2

ವಾರ್ಡ್‌ವಾರು ಮೀಸಲಿನಲ್ಲಿ ಒಬಿಸಿಗೆ ಸಮರ್ಪಕ ನ್ಯಾಯ: ಹೈಕೋರ್ಟ್‌ನಲ್ಲಿ ಸರಕಾರದ ಸಮರ್ಥನೆ

ಬಿಬಿಎಂಪಿಯಲ್ಲಿ ಒಬಿಸಿಗೆ ಸರಿಯಾಗಿ ಮೀಸಲು ಕಲ್ಪಿಸಲಾಗಿಲ್ಲ ಎಂದು ದೂರುಗಳನ್ನು ಸರಕಾರ ತನ್ನ ಆಕ್ಷೇಪಣೆಯಲ್ಲಿ ಸಾರಾಸಗಟಾಗಿ ತಳ್ಳಿ ಹಾಕಿದೆ. ಈಜಿಪುರದ ಕೆ.ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್‌, ದೊಡ್ಡ ಬಾಣಸವಾಡಿಯ ವಿ.ಶ್ರೀನಿವಾಸ್‌ ಮತ್ತು ನಾಗನಾಥಪುರದ ಕೆ.ಚಂದ್ರಶೇಖರ್‌ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು. ನಂತರ ನ್ಯಾಯಪೀಠ ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಿತು.

from India & World News in Kannada | VK Polls https://ift.tt/ujO8NGW

IND vs ENG: ಇಂಗ್ಲೆಂಡ್‌ ವನಿತೆಯರ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ ದಾಖಲೆಯ ಶತಕ!

Harmanpreet Kaur hits classy hundred against England: ಇಂಗ್ಲೆಂಡ್‌ ವಿರುದ್ದ ಎರಡನೇ ಮಹಿಳೆಯ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟ್‌ ಬೀಸಿದ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ ಪ್ರೀತ್‌ ದಾಖಲೆಯ ಶತಕ ಸಿಡಿಸಿದರು. 111 ಎಸೆತಗಳನ್ನು ಎದುರಿಸಿದ ಅವರು 4 ಭರ್ಜರಿ ಸಿಕ್ಸರ್‌ ಹಾಗೂ 18 ಬೌಂಡರಿಗಳೊಂದಿಗೆ ಅಜೇಯ 143 ರನ್‌ ಸಿಡಿಸಿದರು. ಆ ಮೂಲಕ ಭಾರತ ತಂಡ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 333 ರನ್‌ ಗಳಿಸಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2tL0e4G

Suresh Raina: ಸರೇಶ್‌ ರೈನಾ ಸಂಬಂಧಿಕರ ಕೊಲೆ ಪ್ರಕರಣದಲ್ಲಿ ಇನ್ನಿಬ್ಬರ ಬಂಧನ!

Suresh Raina's relatives: ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್‌ ರೈನಾ ಅವರ ಸಂಬಂಧಿಕರ ಕೊಲೆ ಪ್ರಕರಣ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಜಾಫರ್‌ನಗರ್‌ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತಾಲಿಬ್‌ ಹಾಗೂ ಶಹಝಾನ್ ಎಂದು ಗುರುತಿಸಲಾಗಿದೆ. ಪಠಾಣ್‌ಕೋಟ್‌ ಕೊಲೆಯ ಪ್ರಕರಣದಲ್ಲಿ ಭಾಗಿಯಾಗಿದ್ದೇವೆಂದು ಸ್ವತಃ ಈ ಇಬ್ಬರೂ ಆರೋಪಿಗಳ ಒಪ್ಪಿಕೊಂಡಿದ್ದಾರೆಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಇದಕ್ಕೂ ಮುನ್ನ ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XxnhJY

Mysuru Dasara | ಮೈಸೂರು ನಗರಕ್ಕೆ ಬೆಳಕು, ರಿಂಗ್‌ ರಸ್ತೆ ಕತ್ತಲು

Mysuru Dasara Lighting: ಬೀದಿ ದೀಪಗಳ ನಿರ್ವಹಣೆ ಕೊರತೆಯಿಂದ ರಿಂಗ್‌ ರಸ್ತೆಗಳ ಬಹುತೇಕ ಭಾಗ ಕತ್ತಲಲ್ಲೇ ಇದೆ. ಇದರ ಜವಾಬ್ದಾರಿ ಹೊತ್ತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುತ್ತಿರುವುದರಿಂದ ಸೂಕ್ತ ನಿರ್ವಹಣೆ ಕೊರತೆ ಉಂಟಾಗಿದೆ. ಹಾಗಾಗಿ ರಿಂಗ್‌ ರಸ್ತೆಯು ವಾಹನ ಸವಾರರಿಗೆ ದುಸ್ವಪ್ನವಾಗಿ ಕಾಡುತ್ತಿದೆ. ಈ ವರ್ಷ 124 ಕಿ.ಮೀ. ರಸ್ತೆ ದೀಪಾಲಂಕಾರ ಮಾಡಲಾಗುತ್ತಿದೆ. ಸೂರ್ಯಾಸ್ತದಿಂದ ರಾತ್ರಿ 10.30ರ ತನಕ ದೀಪಾಲಂಕಾರ ಇರಲಿದ್ದು, 96 ವೃತ್ತಗಳಲ್ಲಿ ಅಲಂಕಾರ ಮಾಡಲಾಗುತ್ತಿದೆ. ಆದರೆ, ರಿಂಗ್‌ ರಸ್ತೆ ಮಾತ್ರ ಬೆಳಕಿಲ್ಲದೆ ಕಳ್ಳತನ, ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ.

from India & World News in Kannada | VK Polls https://ift.tt/AFeSntI

ಯುವಕನಿಂದ ಅಪ್ರಾಪ್ತೆ ಅಪಹರಣ: ದೂರು ನೀಡಿದರೂ ಪೊಲೀಸರ ನಿರ್ಲಕ್ಷ್ಯ; ತಂದೆ ಆತ್ಮಹತ್ಯೆ!

ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಕರು 'ಐದು ದಿನಗಳ ಹಿಂದೆಯೇ ರವಿ ಅವರು ಮಗಳು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದರೂ ಕ್ರಮಕೈಗೊಳ್ಳದೆ ಪೊಲೀಸರು ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ರವಿ ಅವರ ಸಾವಿಗೆ ಪೊಲೀಸರ ವೈಫಲ್ಯ ಕಾರಣ' ಎಂದು ಆಕ್ರೋಶ ವ್ಯಕ್ತಪಡಿಸಿದರು. 'ರವಿ ಅವರ ಅಪ್ರಾಪ್ತ ಪುತ್ರಿಯನ್ನು ಅಭಿ(26) ಎಂಬ ಯುವಕ ಅಪಹರಿಸಿದ್ದಾನೆ. ಸುನಿಲ್‌ ಮತ್ತು ಪಲ್ಲವಿ ಇದಕ್ಕೆ ಸಹಕರಿಸಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದರೂ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಬಾಲಕಿಯ ಅಪಹರಣಕಾರರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

from India & World News in Kannada | VK Polls https://ift.tt/RiYxb5J

ಮಳೆ ಹೆಸರಲ್ಲಿ ಮಾತೃಪೂರ್ಣ ಮನೆ-ಮನೆಗೆ: ಕರಾವಳಿಯ ಬಹುಕಾಲದ ಬೇಡಿಕೆಗೆ ಬೆಲೆ

ಮಾತೃಪೂರ್ಣ ಯೋಜನೆಯ ಮೂಲ ಆಶಯದ ಪ್ರಕಾರ ಗರ್ಭಿಣಿ, ಬಾಣಂತಿಯರು ತಮ್ಮ ಸಮೀಪದ ಅಂಗನವಾಡಿಗಳಿಗೆ ಮಧ್ಯಾಹ್ನ ಹೋಗಿ ಬಿಸಿಯೂಟ ಮಾಡಿಕೊಂಡು ಬರಬೇಕು. ರಾಜ್ಯದ ಬಯಲು ಸೀಮೆಯಲ್ಲಿ ಯೋಜನೆ ಅನುಷ್ಠಾನಗೊಂಡಿದ್ದರೂ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಶೇ.2ರಷ್ಟು ಫಲಾನುಭವಿಗಳಷ್ಟೇ ಬಳಸಿಕೊಂಡಿದ್ದರು. ಇಲ್ಲಿನ ಭೌಗೋಳಿಕತೆ, ಮನೆಗಳಿಂದ ಅಂಗನವಾಡಿಗಳಿರುವ ದೂರ, ಸಾಮಾಜಿಕ ನಂಬಿಕೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಯಾರೂ ಅಂಗನವಾಡಿಗಳಿಗೆ ಬಂದು ಊಟ ಮಾಡಲು ಒಪ್ಪುತ್ತಿರಲಿಲ್ಲ. ಹೀಗಾಗಿ ಕರಾವಳಿಯಲ್ಲಿ ಯೋಜನೆ ಮಕಾಡೆ ಮಲಗಿತ್ತು.

from India & World News in Kannada | VK Polls https://ift.tt/ui5Dpq8

ಕೆರೆಕಟ್ಟೆಗಳ ಕಾಯಕಲ್ಪಕ್ಕೆ ಸಂಕಲ್ಪ: ನೀರಿನ ಪ್ರಮಾಣ ತಗ್ಗುತ್ತಿದ್ದಂತೆ ದುರಸ್ತಿ ಕಾರ್ಯ ಶುರು

ಕೆರೆಗಳು ಭರ್ತಿಯಾದಾಗ ಏರಿ ಹಿಂಭಾಗದಲ್ಲಿ ಜಿನುಗು ಶುರುವಾಗುತ್ತದೆ. ಬಸಿ ಕಾಲುವೆಗಳ ಮೂಲಕ ಈ ನೀರನ್ನು ಬೇರೆಡೆ ಹರಿಸಬೇಕಿರುತ್ತದೆ. ಕೆರೆಗಳ ಸುರಕ್ಷತೆ ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ಭೂಮಿಯ ಫಲವತ್ತತೆ, ಬೆಳೆ ದೃಷ್ಟಿಯಿಂದಲೂ ಬಸಿ ಕಾಲುವೆಗಳು ಅಗತ್ಯ. ಮಾಯಕೊಂಡ ಕ್ಷೇತ್ರದ ಶಾಸಕ ಎನ್‌.ಲಿಂಗಣ್ಣ ಈ ಸಂಬಂಧ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ''ರಾಜ್ಯದ ಎಲ್ಲ ಕೆರೆಗಳ ಸರ್ವೇ ಮಾಡಿಸಿ, ಸೀಪೆಜ್‌ ನಾಲೆಗಳ ಮರು ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ,'' ಎಂದು ಪ್ರಕಟಿಸಿದರು.

from India & World News in Kannada | VK Polls https://ift.tt/kpFZMyi

IND vs AUS: 'ಬೌಲಿಂಗ್‌, ಫೀಲ್ಡಿಂಗ್ ಚೆನ್ನಾಗಿರಲಿಲ್ಲ'-ಸೋಲಿನ ಬಳಿಕ ರೋಹಿತ್‌ ಶರ್ಮಾ ಕಿಡಿ!

Rohit Sharma unhappy with bowling, fielding: ಆಸ್ಟ್ರೇಲಿಯಾ ತಂಡಕ್ಕೆ 209 ರನ್‌ ದಾಖಲೆಯ ಗುರಿ ನೀಡಿದ ಹೊರತಾಗಿಯೂ ಬೌಲಿಂಗ್‌ ವೈಫಲ್ಯ ಅನುಭವಿಸಿದ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ 4 ವಿಕೆಟ್‌ಗಳಿಂದ ಸೋತು ಸುಣ್ಣವಾಯಿತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ0-1 ಹಿನ್ನಡೆ ಅನುಭವಿಸಿತು. ಪಂದ್ಯದ ಸೋಲಿನ ಬಳಿಕ ಮಾತನಾಡಿದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ನಮ್ಮ ಬೌಲಿಂಗ್ ಹಾಗೂ ಫೀಲ್ಡಿಂಗ್‌ ಚೆನ್ನಾಗಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/vF3sAHi

karnataka high court | ಜಪ್ತಿ ಆಭರಣ 15 ದಿನ ಮಾತ್ರ ಪೊಲೀಸ್‌ ವಶದಲ್ಲಿಡಲು ಅವಕಾಶ: ಹೈಕೋರ್ಟ್‌

Police seized gold and jewellery custody: ಅಪರಾಧ ಪ್ರಕರಣದ ತನಿಖೆ ವೇಳೆ ಜಪ್ತಿ ಮಾಡಿದ ಚಿನ್ನದ ಗಟ್ಟಿ ಅಥವಾ ಆಭರಣಗಳನ್ನು 15 ದಿನಗಳಿಂದ ಗರಿಷ್ಠ ಒಂದು ತಿಂಗಳವರೆಗೆ ಮಾತ್ರ ಪೊಲೀಸರ ವಶದಲ್ಲಿಟ್ಟುಕೊಳ್ಳಲು ಅವಕಾಶವಿದ್ದು, ನಂತರ ಸಂತ್ರಸ್ತರು ಅಥವಾ ದೂರುದಾರರ ಮಧ್ಯಂತರ ಸುಪರ್ದಿಗೆ ನೀಡಬೇಕೆಂದು ಹೈಕೋರ್ಟ್‌ ಆದೇಶಿಸಿದೆ. ನಗರದ ಚಿನ್ನಾಭರಣ ಮಳಿಗೆಯೊಂದರ ಮಾಲೀಕ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ಮಾಡಿದೆ.

from India & World News in Kannada | VK Polls https://ift.tt/OcCVyjY

Dasara Wrestling | ಅ.1ರಂದು ಶ್ರೀರಂಗಪಟ್ಟಣದಲ್ಲಿ 30 ಜತೆ ಕಾಟಾ ಕುಸ್ತಿ: ರಾಜ್ಯ ಮಟ್ಟದ ಪೈಲ್ವಾನರು ಭಾಗಿ

Srirangapatna Dasara wrestling competition: ಶ್ರೀರಂಗಪಟ್ಟಣ ದಸರಾದಲ್ಲಿ ಈ ಬಾರಿ ದೇಸಿ ಕುಸ್ತಿ ಗಮನ ಸೆಳೆಯಲಿದೆ. ಅಕ್ಟೋಬರ್‌ 1ರಂದು ಪಟ್ಟಣದ ಸೆಂದಿಲ್‌ ಕೋಟೆ ಆವರಣದಲ್ಲಿ ಮಧ್ಯಾಹ್ನ ಮೂರು ಗಂಟೆಗೆ 30 ಜತೆ ಕಾಟಾ ಕುಸ್ತಿ (kata kushti) ನಡೆಯಲಿದೆ. ಶ್ರೀರಂಗಪಟ್ಟಣ ದಸರಾ ಕುಸ್ತಿ ಅಂಗವಾಗಿ ಪಟ್ಟಣದ ಶ್ರೀರಂಗ ಕ್ರೀಡಾಂಗಣದಲ್ಲಿ ಮಂಗಳವಾರ ಕುಸ್ತಿಗೆ ಪೈಲ್ವಾನರ ( pailwans) ಜೋಡಿ ಕಟ್ಟುವುದಕ್ಕೆ ಚಾಲನೆ ನೀಡಲಾಯಿತು. ಮಂಡ್ಯ ಜಿಲ್ಲಾ ಭಾರತೀಯ ಶೈಲಿ ಕುಸ್ತಿ ಸಂಘ ಸ್ಪರ್ಧೆಯ ಹೊಣೆಗಾರಿಕೆ ವಹಿಸಿಕೊಂಡಿದೆ.

from India & World News in Kannada | VK Polls https://ift.tt/OaGdV9L

ಚಿತ್ರದುರ್ಗದಲ್ಲಿ ನಡೆಯುತ್ತೆ ದುಡ್ಡಿನ ಜಾತ್ರೆ: ಹಣ ತುಂಬಿಸಲು ಚೀಲ, ಟವೆಲ್ ಹಿಡಿದು ಬಂದ ಜನರು..!

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕಂಚಿ ವರದರಾಜ ಸ್ವಾಮಿಗೆ ಭಕ್ತರು ಚಿಲ್ಲರೆ ಎಸೆಯುತ್ತಾರೆ. ಅಲ್ಲದೆ ಉತ್ತರೆ ಮಳೆಯ ಸಂದರ್ಭದಲ್ಲಿ ಅಂಬು ಹೊಡೆಯಲಾಗುತ್ತದೆ. ಈ ಸಂದರ್ಭದಲ್ಲಿಯೇ ವರ್ಷಕ್ಕೆ ಒಮ್ಮೆ ಮಾತ್ರ ದೇವರಿಗೆ ಉತ್ತರೆ ಮಳೆ ನೀರಿನಲ್ಲಿ ನಾಮ ಧರಿಸುವ ಸಂಪ್ರದಾಯವೂ ರೂಢಿಯಲ್ಲಿದೆ. ಇಲ್ಲಿನ ದೇವರಿಗೆ ದುಡ್ಡಿನ ಹರಕೆ ಮಾಡಿಕೊಳ್ಳುವ ಸಾಂಪ್ರದಾಯಿಕ ಆಚರಣೆ ರೂಢಿಯಲ್ಲಿದೆ. ನಂತರ ಹರಕೆ ಕಟ್ಟಿಕೊಂಡು ದೇವರ ಮೇಲೆ ಚಿಲ್ಲರೆ ನಾಣ್ಯಗಳನ್ನು ಎಸೆಯುತ್ತಾರೆ. ಹಣವನ್ನು ಹುಂಡಿಗೆ ಹಾಕುವಂತಿಲ್ಲ.

from India & World News in Kannada | VK Polls https://ift.tt/Vnbjr1x

ಚಾಮರಾಜನಗರದಲ್ಲಿರುವ ರಾಜ್ಯದ ಪ್ರಥಮ ಆಶ್ರಮ ಶಾಲೆ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ: ಪಾರಂಪರಿಕ ಕಟ್ಟಡವನ್ನಾಗಿ ಉಳಿಸಿಕೊಳ್ಳಲು ಒತ್ತಾಯ

ಬಿ.ರಾಚಯ್ಯ ಅವರು 1952ರಲ್ಲಿಕೆಂಗಲ್‌ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಗಡಿ ಭಾಗದ ಪರಿಸ್ಥಿತಿಯನ್ನು ವಿವರಿಸಿ ಆಶ್ರಮ ಶಾಲೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ರಂಗಸಂದ್ರ, ಕುಳ್ಳೂರು, ಪುಣಜನೂರು ಗ್ರಾಮಗಳು ಅರಣ್ಯ ಪ್ರದೇಶದಲ್ಲಿದ್ದು, ಸೋಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುತ್ತಾರೆ. ಇವರು ಬಹುತೇಕ ಕೃಷಿ ಕಾರ್ಮಿಕರಾಗಿದ್ದು, ಇವರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರಲು ರಾಚಯ್ಯ ಅವರು ಶ್ರಮಿಸಿದ್ದರು.

from India & World News in Kannada | VK Polls https://ift.tt/joZCxBY

ಬಿತ್ತನೆಗೆ ಹೊಡೆತ ಕೊಟ್ಟ ಭಾರಿ ಮಳೆ: ಚಿಕ್ಕಬಳ್ಳಾಪುರದಲ್ಲಿ ಇದುವರೆಗೆ ಶೇ.81ರಷ್ಟು ಬಿತ್ತನೆ ಕಾರ್ಯ

ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಮಳೆ ಬಿದ್ದಿದೆ. ಆದರೆ, ನಿರಂತರವಾಗಿ ಮಳೆ ಸುರಿದ ಪರಿಣಾಮ ಪೂರ್ಣ ಪ್ರಮಾಣದ ಬಿತ್ತನೆಗೆ ತೊಡಕಾಗಿದೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಮೊಳಕೆಯೊಡೆಯದೆ ಹೆಚ್ಚಿನ ನಷ್ಟಕ್ಕೆ ಕಾರಣವಾಗಿದೆ. ರಾಗಿ ಬೆಳೆಗೆ ಹೆಚ್ಚಿನ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಬಿತ್ತನೆ ಸಂಪೂರ್ಣ ಮುಗಿಯಬೇಕಿತ್ತು. ಆದರೆ ಇನ್ನೂ ಕೆಲವೆಡೆ ಬಿತ್ತನೆ ನಡೆದಿದೆ.

from India & World News in Kannada | VK Polls https://ift.tt/9UjrdOX

ರಾಜಧಾನಿಗೆ ರೈತ ಹೋರಾಟ ಶಿಫ್ಟ್‌: ಬೆಂಗಳೂರು ಗ್ರಾಮಾಂತರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಫ್ರೀಡಂ ಪಾರ್ಕ್ ಗೆ ಸ್ಥಳಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ 1775.5 ಎಕರೆ, ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ವ್ಯಾಪ್ತಿಯಲ್ಲಿ 1031 ಎಕರೆ ಕೃಷಿ ಭೂಮಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯನ್ನು ರೈತರು ವಿರೋಧಿಸುತ್ತಿದ್ದಾರೆ. ರೈತರ ವಿರೋಧ ತಣ್ಣಗಾಗಿಸಲು ಸರಕಾರದಿಂದ ಸರಣಿ ಸಂಧಾನ ಸಭೆಗಳು ನಡೆದರೂ, ರೈತರು ತಮ್ಮ ಪಟ್ಟು ಬಿಡದೆ ಸತತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹೋಬಳಿ ಕೇಂದ್ರಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಸರಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದ ಹಿನ್ನೆಲೆ ರಾಜಧಾನಿಗೆ ರೈತರ ಹೋರಾಟ ಸ್ಥಳಾಂತರಗೊಂಡಿದೆ.

from India & World News in Kannada | VK Polls https://ift.tt/wfV973R

ತುಮಕೂರಿನಲ್ಲಿ ವಿಶೇಷಚೇತನರ ಗುರುತಿನ ಚೀಟಿಗೆ ಆಸಕ್ತಿ: ವಿಕ ವರದಿ ಜಾಗೃತಿ, ಶೇ.82.7ರಷ್ಟು ಯುಡಿಐಡಿ

ಸರಕಾರದಿಂದ ಜಿಲ್ಲೆಯಲ್ಲಿ 43,290 ಮಂದಿಗೆ ವಿಶೇಷಚೇತನ ಪ್ರಮಾಣಪತ್ರ ವಿತರಿಸಲಾಗಿದೆ. ಇದರಲ್ಲಿ 41,739 ವಿಶೇಷಚೇತನರು, ವಿಶೇಷಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ)ಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಒಟ್ಟು 36,435 ಅರ್ಜಿ ವಿಲೇವಾರಿ ಮಾಡಲಾಗಿದೆ. 29,912 ಕಾರ್ಡ್‌ಗಳನ್ನು ವಿಶೇಷಚೇತನರಿಗೆ ನೀಡಲಾಗಿದ್ದು, ನಾನಾ ಕಾರಣಗಳಿಂದ 6,523 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 520 ಅರ್ಜಿ ಬಾಕಿ ಇದೆ.

from India & World News in Kannada | VK Polls https://ift.tt/Mh596P8

Dharwad krishi mela | ರಕ್ತದಾನ ಮಾಡಿದ ಶ್ವಾನ: ಏರ್‌ಪೋರ್ಟ್ ಭದ್ರತೆಯಲ್ಲಿರುವ ಮಾಯಾ ಜೀವ ಉಳಿಸಿದ ಚಾರ್ಲಿ

charlie dog donated blood: ಧಾರವಾಡದ ಕೃಷಿ ಮೇಳದಲ್ಲಿ (Dharwad krishi mela) ಮಾಯಾ ಹೆಸರಿನ ಶ್ವಾನಕ್ಕೆ ಚಾರ್ಲಿ ಎಂಬ ಶ್ವಾನ ರಕ್ತದಾನ ಮಾಡಿ ಜೀವ ಉಳಿಸಿದೆ. ಚಾರ್ಲಿ ಶ್ವಾನದಿಂದ ರಕ್ತದಾನ ಮಾಡಿಸಿ ಮಾಲೀಕ ಸೋಮಶೇಖರ್ ಮಾನವೀಯತೆ ಮೆರೆದಿದ್ದಾರೆ. ಏರ್‌ಪೋರ್ಟ್ ಭದ್ರತೆಯಲ್ಲಿದ್ದ ಮಾಯಾ ಹೆಸರಿನ ಶ್ವಾನಕ್ಕೆ ರಕ್ತ ಬೇಕಾಗಿತ್ತು. ವೈದ್ಯರ ಕರೆಯ ಮೇರೆಗೆ ಬಂದು ರಕ್ತದಾನ ಮಾಡಿಸಿದ್ದಾರೆ. ಚಾರ್ಲಿ ಹೆಸರಿನ ಈ ಮೂಕ ಪ್ರಾಣಿ ರಕ್ತದಾನ ಮಾಡುವ ಮೂಲಕ ಮಾಯಾ ಜೀವ ಉಳಿಸಿದೆ.

from India & World News in Kannada | VK Polls https://ift.tt/cf9wRCs

Karnataka RERA: ರೇರಾ ವೈಫಲ್ಯ: ಗೃಹ ಖರೀದಿದಾರರಿಗೆ ಸಿಗುತ್ತಿಲ್ಲ ನ್ಯಾಯ; ಕೋರ್ಟ್‌ನತ್ತ ಸಂತ್ರಸ್ತರ ಚಿತ್ತ

ಗೃಹ ಖರೀದಿ ಸಂಬಂಧ ವ್ಯಾಜ್ಯಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ರೇರಾ(Karnataka Real Estate Authority) ವಿಫಲವಾಗುತ್ತಿದೆ. ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿ ಆರು ತಿಂಗಳು ಕಳೆದರೂ ಆದೇಶಗಳನ್ನು ಮಾಡದಿರುವ ಪ್ರಾಧಿಕಾರದ ವಿರುದ್ಧ ಹೈಕೋರ್ಟ್‌ ಮೊರೆ ಹೋಗಲಾಗುತ್ತಿದೆ. ಎರಡು ಪ್ರಕರಣಗಳಲ್ಲಿ ಹೈಕೋರ್ಟ್‌, ರೇರಾ ಪ್ರಾಧಿಕಾರದತ್ತಲೇ ಬೊಟ್ಟು ಮಾಡಿ ಆದೇಶಗಳನ್ನು ನೀಡುವಂತೆ ನಿರ್ದೇಶನ ನೀಡಿದೆ.

from India & World News in Kannada | VK Polls https://ift.tt/v6x4FJc

Yadgir | ಕೋಟಿ ಖರ್ಚಾದರೂ ಹನಿ ನೀರಿಲ್ಲ..! ಮತ್ತೆ 20 ಕೋಟಿ ರೂ. ನೀಡುವಂತೆ ಕೆಕೆಆರ್‌ಡಿಬಿಗೆ ಮೊರೆ

ಯಾದಗಿರಿಯ ಹೊರವಲಯದಲ್ಲಿರುವ ಗುರುಸಣಿಗಿ ಬ್ರೀಜ್‌ ಕಂ ಬ್ಯಾರೇಜ್‌ ಭೀಮಾ ನದಿ ಮೂಲಕ ಈ ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ ಪೈಪ್‌ಲೈನ್‌ ಮತ್ತು ಜಾಕ್‌ವೆಲ್‌ ಸೇರಿ ಹಲವು ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೂ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ನಿಜಕ್ಕೂ ವಿಚಿತ್ರವಾಗಿದ್ದರೂ ಕಟು ಸತ್ಯವಾಗಿದೆ. ಇನ್ನುಳಿದ ಕಾಮಗಾರಿ ರೈಲ್ವೆ ಹಳಿ ದಾಟುವುದರಿಂದ ಹಾಗೂ ಉದ್ದದ ಕೊಳವೆಬಾವಿ ಮಾರ್ಗ 3 ಕಿ.ಮೀ.ನಿಂದ 7.56 ಕಿ.ಮೀ.ಅಳವಡಿಸಿರುವುದರಿಂದ ನೀರು ಶುದ್ಧೀಕರಣ ಘಟಕದವರಿಗೆ ತಲುಪಬೇಕಿದೆ.

from India & World News in Kannada | VK Polls https://ift.tt/GMNlQyr

ತುಳು ಪಠ್ಯಕ್ಕೆ ಅಳಿವು-ಉಳಿವು ಪ್ರಶ್ನೆ: ಅತಿಥಿ ಶಿಕ್ಷಕರ ಕೈ ಸೇರುತ್ತಿಲ್ಲ ಮಾಸಿಕ ಸಂಭಾವನೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಖಾಸಗಿ, ಅನುದಾನಿತ ಹಾಗೂ ಸರಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು 43 ಪ್ರೌಢಶಾಲೆಗಳಲ್ಲಿ ತುಳು ಬೋಧಿಸಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಸ್ಪಂದನೆಯೂ ಸಿಕ್ಕಿದೆ. ಹಲವಾರು ವಿದ್ಯಾರ್ಥಿಗಳು ಈ ಭಾಷೆಯಲ್ಲಿ ಶೇ.100 ಅಂಕಗಳನ್ನು ಗಳಿಸಿ ತುಳು ಭಾಷೆಯ ಸೊಬಗಿಗೆ ಸಾಕ್ಷಿಯಾಗಿದ್ದಾರೆ. ಆದರೆ, ಸರಕಾರಿ ಶಾಲೆಗಳಲ್ಲಿ ತುಳು ಭಾಷೆ ಬೋಧಿಸುವ ಶಿಕ್ಷಕರಿಗೆ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಾಸಿಕ ನೀಡಲಾಗುತ್ತಿದ್ದ 3 ಸಾವಿರ ರೂ. ಗೌರವಧನ ಈಗ ಕಡಿತಗೊಂಡಿದೆ.

from India & World News in Kannada | VK Polls https://ift.tt/1YUEo5O

Road Potholes | ರಸ್ತೆ ಗುಂಡಿಗಳು ತರುತ್ತಿದೆ ಗಂಡಾಂತರ: ಮಳೆಯಿಂದ ಹಾನಿಯಾದ ರಸ್ತೆಗಳಿಗೆ ತಾತ್ಕಾಲಿಕ ವ್ಯವಸ್ಥೆ

ರಸ್ತೆಯ ಬೃಹತ್‌ ಗುಂಡಿಗಳಲ್ಲಿ ಅನೇಕರು ಬಿದ್ದು ಗಾಯಗೊಂಡಿರುವ ಬಗ್ಗೆ ವರದಿಯಾಗಿವೆ. ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲೂ ರಸ್ತೆಗಳಲ್ಲಿ ಅಪಾಯಕಾರಿ ಗುಂಡಿಗಳಿವೆ. ಜಿಲ್ಲೆಯ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ತಾಲೂಕಿನಲ್ಲಿ ಬೃಹತ್‌ ವಾಹನಗಳ ಸಂಚಾರ ಕೂಡ ರಸ್ತೆ ಗುಂಡಿಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಬಗೆಹರಿಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಕೂಡ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ವಾಹನ ಸವಾರರು ಭಯದಿಂದ ಓಡಾಡುವ ಪರಿಸ್ಥಿತಿ ಇದೆ.

from India & World News in Kannada | VK Polls https://ift.tt/acbVrvC

Arvind Kejriwal | ಭಾರತ ನಂ. 1 ಮಾಡಲು ಕೇಜ್ರಿವಾಲ್‌ ಆರು ಅಂಶಗಳ ಕಾರ್ಯಸೂಚಿ

Arvind Kejriwals 6 point agenda: ಆಮ್‌ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌, ‘‘ಎಲ್ಲರಿಗೂ ಉತ್ತಮ ಆರೋಗ್ಯ, ಎಲ್ಲಾ ವಲಯದಲ್ಲೂ ಮಹಿಳೆಯರಿಗೆ ಸಮಾನ ಹಕ್ಕು, ದೇಶದ ಯುವ ಜನತೆಗೆ ಉದ್ಯೋಗ, ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳು, ರೈತರ ಬೆಳೆಗಳಿಗೆ ಶೇ.100ರಷ್ಟು ಬೆಲೆ ಖಾತರಿ, ಐದು ವರ್ಷದಲ್ಲಿ ಭಾರತದಲ್ಲಿ ಬಡತನ ನಿವಾರಣೆ’’ ಮಾಡುವ ಆರು ಅಂಶಗಳ ಕಾರ್ಯಸೂಚಿಗಳ ಮೂಲಕ ದೇಶವನ್ನು (India) ನಂ. 1 ಮಾಡುವ ಗುರಿಯನ್ನು ಪಕ್ಷ ಹೊಂದಿದೆ ಎಂದಿದ್ದಾರೆ.

from India & World News in Kannada | VK Polls https://ift.tt/eGY5Ddj

ರಾಮನಗರದಲ್ಲಿ ಹಳಿ ತಪ್ಪಿದ ನಗರಸಭೆ ಆಡಳಿತ; ಅಧ್ಯಕ್ಷರ ರಾಜೀನಾಮೆ, ಪೌರಾಯುಕ್ತರ ಏಕಾಏಕಿ ವರ್ಗಾವಣೆ

ರಾಮನಗರ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಅವರು 10 ತಿಂಗಳು ಕಾಲ ಆಡಳಿತ ನಡೆಸಿ ರಾಜೀನಾಮೆ ನೀಡಿದ್ದರೆ, ಪೌರಾಯುಕ್ತ ನಂದಕುಮಾರ್‌ ಅವರು ಏಕಾಏಕಿ ವರ್ಗಾವಣೆಗೊಂಡಿದ್ದಾರೆ. ಇದು ನಗರಸಭೆಯ ಆಡಳಿತ ಮೇಲೆ ಪರೋಕ್ಷ ಪರಿಣಾಮ ಬೀರಲಿದೆ. ಈ ಹಿಂದೆಯೇ ಅಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಸಾಕಷ್ಟು ಗೊಂದಲ ಮೂಡಿತ್ತು. ಅದರಲ್ಲೂ ಕಾಂಗ್ರೆಸ್‌ ಸದಸ್ಯರು ಹಾಗೂ ವರಿಷ್ಠರ ನಡುವೆ ಸಾಕಷ್ಟು ವೈಮನಸ್ಸು ಸಹ ಶುರುವಾಗಿತ್ತು. ಇದರ ನಡುವೆಯು ಪಾರ್ವತಮ್ಮ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

from India & World News in Kannada | VK Polls https://ift.tt/vjrbchZ

ರಾಮನಾಥಪುರದ ಸುಬ್ರಹ್ಮಣ್ಯ ದೇಗುಲದಲ್ಲಿ ಪಕ್ಷಿ, ಪರಿಸರ ಪ್ರೇಮ; ಔಷಧೀಯ ಗಿಡಗಳು, ಗುಬ್ಬಚ್ಚಿಗಳ ಚಿಲಿಪಿಲಿ

ದೇಗುಲ ಎಂದಾಕ್ಷಣ ಕೇವಲ ಭಕ್ತಿ ಸಮರ್ಪಣೆಗೆ ಸೀಮಿತ ಎಂಬುದು ಜನರ ಭಾವನೆ. ಸುಬ್ರಹ್ಮಣ್ಯ ದೇಗುಲದಲ್ಲಿ ಪರಿಸರ ರಕ್ಷಣೆಗೆ ಒತ್ತು, ಪಕ್ಷಿಗಳಿಗೂ ನೆಲೆ ಒದಗಿಸಿರುವುದು ಅಷ್ಟೇ ಅಲ್ಲ ಅವುಗಳಿಗೆ ಆಹಾರ ಧಾನ್ಯ ನೀಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಗೋದಿ, ನವಣೆ, ಸಜ್ಜೆಯನ್ನು ಪಕ್ಷಿಗಳಿಗೆಂದೇ ನೀಡಲಾಗುತ್ತಿದೆ. ವೀಳ್ಯೆದೆಲೆ, ಅರಿಶಿಣಗಿಡ, ಹೂವುಗಳ ಗಿಡ ಬಳ್ಳಿಗಳು ಆಕರ್ಷಿತವಾಗಿವೆ. .

from India & World News in Kannada | VK Polls https://ift.tt/xqbiGdU

ಮಳೆ ಅವಾಂತರ: ಕಣ್ಣೀರು ತರಿಸಿದ ಈರುಳ್ಳಿ; ಲಕ್ಷಾಂತರ ರೂ. ನಷ್ಟ, ಜಾವಗಲ್‌ ರೈತರು ಕಂಗಾಲು!

​ ಕೆಲವು ರೈತರು ಸಾಲಸೋಲ ಮಾಡಿ ಈರುಳ್ಳಿ (Onion Crop) ಬೆಳೆ ಬೆಳೆದು ನಷ್ಟದಿಂದಾಗಿ ಕೈಸುಟ್ಟುಕೊಳ್ಳುವಂತಾಗಿದೆ. ಪ್ರತಿಯೊಬ್ಬ ರೈತರು 1 ಹೆಕ್ಟೇರ್‌ ಭೂಮಿಯಲ್ಲಿ ಉತ್ಕೃಷ್ಟವಾದ ಬೆಳೆ ಬೆಳೆದು 1.5ರಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಸಲ ಉಕ್ಕೆ, ಬೇಸಾಯ, ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಹತ್ತಾರು ಸಾವಿರಾರು ರೂ.ಗಳನ್ನು ಖರ್ಚು ಮಾಡಿದ್ದು, ಮಳೆಯಿಂದಾಗಿ ನಷ್ಟ ಅನುಭವಿಸುವಂತಾಗಿದೆ.

from India & World News in Kannada | VK Polls https://ift.tt/FftHQi4

ಶಿರಾಡಿ, ಚಾರ್ಮಾಡಿ ಘಾಟಿಯಲ್ಲಿ ಹೊಂಡ-ಗುಂಡಿ: ಹದಗೆಟ್ಟ ರಸ್ತೆಗೆ ಹೆದರಿ ಶಾಸಕರು ಫ್ಲೈಟ್‌ ಏರಿದ್ರು!

ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯ ಹಾಳಾಗಿದೆ. ಬೆಂಗಳೂರು- ಮಂಗಳೂರು ಸಂಪರ್ಕ ಕೊಂಡಿಯಾದ ಚಾರ್ಮಾಡಿ(Charmadi Ghat) ಶಿರಾಡಿ ಘಾಟಿ (Shiradi Ghat) ರಸ್ತೆಗಳಲ್ಲಿ ಸಂಚಾರ ಸವಾಲಾಗಿ ಪರಿಣಮಿಸಿದೆ. ಆದರೆ ಆ ರಸ್ತೆ ಕಡೆಗೆ ಮುಖವನ್ನೇ ಹಾಕದ ಬಹುಪಾಲು ಜನಪ್ರತಿನಿಧಿಗಳು ಆಕಾಶ ಮಾರ್ಗವಾಗಿ ಸಂಚರಿಸುತ್ತಿರುವುದು ಜನರಲ್ಲಿ ಹತಾಶೆಯ ಜತೆಗೆ ಆಕ್ರೋಶವನ್ನೂ ಹುಟ್ಟುಹಾಕಿದೆ.

from India & World News in Kannada | VK Polls https://ift.tt/Z1I0wlm

BDA: ಬಿಡಿಎ ಎರವಲು ಸೇವೆಗೆ ನೂಕುನುಗ್ಗಲು; 176 ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ 550 ಅರ್ಜಿ

ಬಿಡಿಎ (BDA)ಎಂದರೆ, ಅಲ್ಲಿ ದುಡ್ಡಿಲ್ಲದೇ ಯಾವುದೇ ಕಡತ ಚಲಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಇಲ್ಲಿ ಕೆಲಸ ಮಾಡಲು ಉನ್ನತ ಮಟ್ಟದ ಅಧಿಕಾರಿಗಳೇ ಎರವಲು ಸೇವೆಯಲ್ಲಿ ಬಂದಿದ್ದಾರೆ. ಪ್ರಾಧಿಕಾರವೇ ನೇರವಾಗಿ ಎರವಲು ಸೇವೆಗೆ ಅರ್ಜಿ ಆಹ್ವಾನಿಸಿರುವುದರಿಂದ ಅಲ್ಲಿ ಕೆಲಸ ಮಾಡಲು ಮುಗಿಬಿದ್ದಿದ್ದಾರೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಚಾಲಕರು, ನಿರ್ವಾಹಕರು, ಶಾಲಾ ಶಿಕ್ಷಕರು, ನರ್ಸ್‌ಗಳು, ಉಪನ್ಯಾಸಕರು ಕೂಡ ಅರ್ಜಿ ಗುಜರಾಯಿಸಿದ್ದಾರೆ. ಎಫ್‌ಡಿಎ ಹುದ್ದೆಗಿಂತ ಮೇಲ್ದರ್ಜೆ ಹುದ್ದೆಯಲ್ಲಿರುವ ಅಧಿಕಾರಿಗಳೂ ಅರ್ಜಿ ಸಲ್ಲಿಸಿದ್ದಾರೆ.

from India & World News in Kannada | VK Polls https://ift.tt/a0q2853

ಬಾಗ್ಮನೆ ಟೆಕ್‌ ಪಾರ್ಕ್‌ನಿಂದ ರಾಜಕಾಲುವೆ ಒತ್ತುವರಿ: ಬಲವಂತದ ಕ್ರಮ ಕೈಗೊಳ್ಳದಂತೆ ಬಿಬಿಎಂಪಿಗೆ ತಾಕೀತು

ಪೂರ್ವ ಪಾರ್ಕ್ ರಿಡ್ಜ್‌ನಿಂದ ರಾಜಕಾಲುವೆ ಒತ್ತುವರಿ ಮಾಡಿರುವ ಕಾರಣ ತನ್ನ ಟೆಕ್‌ ಪಾರ್ಕ್ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಬಗ್ಗೆ 2022ರ ಜೂನ್‌ ನಲ್ಲಿ ಬಿಬಿಎಂಪಿಗೆ ದೂರು ನೀಡಿರುವುದಾಗಿ ಅರ್ಜಿದಾರರು ಹೇಳಿದ್ದಾರೆ ಮತ್ತು ಆ ವಸತಿ ಪ್ರದೇಶದಲ್ಲಿನ ಕೆಲವು ವಿಲ್ಲಾಗಳ ಮಾಲೀಕರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. 2022ರ ಆಗಸ್ಟ್‌ನಲ್ಲಿ ವಿಲ್ಲಾ ಮಾಲೀಕರು ತಮಗೆ ಸೂಚನೆ ನೀಡದೆಯೇ ಸಮೀಕ್ಷೆ ನಡೆಸಲಾಗಿದೆ ಎಂದು ದೂರಿದ ಕಾರಣ ಹೊಸದಾಗಿ ಸಮೀಕ್ಷೆ ನಡೆಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು ಎಂದು ಹೇಳಿದ್ದಾರೆ.

from India & World News in Kannada | VK Polls https://ift.tt/5CAyuIe

BDA | ಬಿಡಿಎ ವಸತಿ ಯೋಜನೆ ಟೆಂಡರ್‌ಗೆ 12 ಕೋಟಿ ಲಂಚ: ಬಿಎಸ್‌ವೈ, ಸಚಿವ ಸೋಮಶೇಖರ್‌ ವಿರುದ್ಧ ಲೋಕಾಯುಕ್ತ ಎಫ್‌ಐಆರ್‌

Lokayukta Police FIR against BS Yediyurappa: ಪ್ರಕರಣದಲ್ಲಿ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ವಿಜಯೇಂದ್ರ (BY Vijayendra) ಎರಡನೇ ಆರೋಪಿ. ಸಚಿವ ಎಸ್‌.ಟಿ.ಸೋಮಶೇಖರ್‌ರನ್ನು (ST Somashekar) ಮೂರನೇ ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಬಿಎಸ್‌ವೈ ಮೊಮ್ಮಗ ಶಶಿಧರ್‌ ಮರಾಡಿ, ಐಎಎಸ್‌ ಅಧಿಕಾರಿ ಡಾ. ಜಿ.ಸಿ.ಪ್ರಕಾಶ್‌, ಚಂದ್ರಕಾಂತ್‌ ರಾಮಲಿಂಗಮ್‌, ಕೆ.ರವಿ, ವೀರಪ್ಪ ಯಮಕನಮರಡಿ, ಸಂಜಯ್‌ ಇತರ ಆರೋಪಿಗಳಾಗಿದ್ದಾರೆ. ಬಿಡಿಎ (BDA) ವಸತಿ ಯೋಜನೆಯ ಟೆಂಡರ್‌ ಪ್ರಕ್ರಿಯೆಯಲ್ಲಿ 12 ಕೋಟಿ ರೂ. ಲಂಚ ಸ್ವೀಕಾರ ಆರೋಪ.

from India & World News in Kannada | VK Polls https://ift.tt/apDuQol

ಬೀದಿ ನಾಯಿ ಕಾಟ ತಡೆಗೆ ಶೆಲ್ಟರ್‌ ಹೋಮ್‌: ಕಾಸರಗೋಡಿನಲ್ಲಿ ಬೀದಿ ನಾಯಿಗಳ ಸಂತಾನಹರಣ ಕ್ರಿಯಾ ಯೋಜನೆ ಸಿದ್ಧ

ಪ್ರಸ್ತುತ ಜಿಲ್ಲೆಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ಕಳೆದ ಎರಡು ವಾರಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ 250ಕ್ಕಿಂತಲೂ ಅಧಿಕ ಮಂದಿಗೆ ನಾಯಿಗಳು ಕಚ್ಚಿವೆ. ಈ ನಿಟ್ಟಿನಲ್ಲಿ ಕೇರಳ ಸರಕಾರ ಈಗಾಗಲೇ ಪ್ರತಿ ಜಿಲ್ಲೆಗೆ ನಿಯಂತ್ರಣ ಕುರಿತು ಪ್ರತ್ಯೇಕ ಕ್ರಿಯಾ ಯೋಜನೆ ಸಿದ್ಧಪಡಿಸಿದೆ.

from India & World News in Kannada | VK Polls https://ift.tt/sePKwbS

ಕೊರಟಗೆರೆಯಲ್ಲಿ ಸಂಬಳ, ಔಷಧವಿಲ್ಲದೆ ಜನೌಷಧ ಕೇಂದ್ರಕ್ಕೆ ಬೀಗ: ಮೂರು ತಿಂಗಳಿಂದ ಸೇವೆ ಸ್ಥಗಿತ, ರೋಗಿಗಳ ಪರದಾಟ

ಜನಔಷಧ ಕೇಂದ್ರಕ್ಕೆ ಔಷಧವೇ ಸರಬರಾಜಾಗುತ್ತಿಲ್ಲ.. ಫಾರ್ಮಸಿಸ್ಟ್‌ ಸಿಬ್ಬಂದಿ ಪ್ರತಿ ತಿಂಗಳು ಸಂಬಳವೇ ನೀಡ್ತಿಲ್ಲ.. ಔಷಧ ಪೂರೈಕೆಗೆ ಆರೋಗ್ಯ ಇಲಾಖೆಯಿಂದ ಫಾರ್ಮಸಿಸ್ಟ್‌ ಮೇಲೆ ನಿತ್ಯ ಒತ್ತಡ.. ಸಂಬಳ ಮತ್ತು ಔಷಧ ಸರಬರಾಜಿಲ್ಲದೇ ಫಾರ್ಮಸಿಸ್ಟ್‌ ಕೆಲಸಕ್ಕೆ ಸಿಬ್ಬಂದಿ ರಾಜೀನಾಮೆ.. ಆರೋಗ್ಯ ಇಲಾಖೆ ದಿವ್ಯನಿರ್ಲಕ್ಷಕ್ಕೆ 3 ತಿಂಗಳಿಂದ ಸಾರ್ವಜನಿಕ ಆಸ್ಪತ್ರೆಯ ಪ್ರಧಾನಮಂತ್ರಿ ಜನಔಷಧ ಕೇಂದ್ರಕ್ಕೆ ಬೀಗ ಬಿದ್ದಿದೆ.

from India & World News in Kannada | VK Polls https://ift.tt/6zuxNQS

ಹೊಸಬರ ಸಂಚಾರ, ಹಿರಿಯರ ಸಂಚಲನ.. ಕೊನೆ ಅವಕಾಶಕ್ಕೆ ಪಟ್ಟು: ಕೊರಟಗೆರೆಯಲ್ಲಿ ಟಿಕೆಟ್‌ಗಾಗಿ ‘ಕಮಲ’ ಹಿರಿ-ಕಿರಿಯರ ಕಾದಾಟ

ಕೊರಟಗೆರೆ ಬಿಜೆಪಿಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌, ವೈದ್ಯ ಡಾ.ಲಕ್ಷ್ಮೇಕಾಂತ್‌, ಉದ್ಯಮಿ ಮುನಿಯಪ್ಪ ಹೆಸರು ಚಾಲ್ತಿಯಲ್ಲಿದೆ. ಈ ಮೂವರು ಕೊರಟಗೆರೆಯಲ್ಲಿ ಬಿಜೆಪಿ ಕಲಿ ಆಗಲು ಸಂಚಾರ ಶುರು ಮಾಡಿದ್ದಾರೆ. ಟಿಕೆಟ್‌ ಚರ್ಚೆ ಬಿಗಿಯಾಗುತ್ತಿದ್ದಂತೆ ಹಿರಿಯ ನಾಯಕರು ಅಖಾಡಕ್ಕೆ ಧುಮುಕುವ ಇಂಗಿತವನ್ನು ಬಹಿರಂಗಪಡಿಸುತ್ತಿದ್ದಾರೆ.

from India & World News in Kannada | VK Polls https://ift.tt/mFELu8c

TB patients | ರಾಣೇಬೆನ್ನೂರ: ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ 150 ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಂಡ ಶಾಸಕ

Ranebennur BJP MLA Arunkumar Pujar adopted TB patients: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನ್ಮದಿನದ ಅಂಗವಾಗಿ ಹಾಗೂ 2030ಕ್ಕೆ ಕ್ಷಯರೋಗ ನಿರ್ಮೂಲನೆ (TB Mukt Bharat) ಮಾಡಲು ಕೇಂದ್ರ ಸರಕಾರವು ಪಣತೊಟ್ಟಿರುವ ಹಿನ್ನೆಲೆಯಲ್ಲಿ ತಾಲೂಕಿನ 150 ಕ್ಷಯ ರೋಗಿಗಳನ್ನು ಒಂದು ವರ್ಷದ ಅವಧಿಗೆ ಶಾಸಕ ಅರುಣಕುಮಾರ ಪೂಜಾರ ಅವರು ದತ್ತು ತೆಗೆದುಕೊಳ್ಳಲಿದ್ದಾರೆ ಎಂದು ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ ತಿಳಿಸಿದರು. ಸೆ.17 ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ.

from India & World News in Kannada | VK Polls https://ift.tt/Ziwkb6G

Talacauvery | ಅಕ್ಟೋಬರ್‌ 17ರಂದು ತಲಕಾವೇರಿ ತೀರ್ಥೋದ್ಭವ: ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ

Cauvery theerthodbhava: 'ತಲಕಾವೇರಿ (Talacauvery) ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲು ಈ ಬಾರಿ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುವುದು.' ತಲಕಾವೇರಿ ತೀರ್ಥೋದ್ಭವ (theerthodbhava) ಸಂಬಂಧ ಜಿಲ್ಲಾಉಸ್ತುವಾರಿ ಸಚಿವ ಬಿ.ಸಿ.ನಾಗೇಶ್‌ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನವನ್ನು ತಿಳಿಸಲಾಯಿತು. ಮೇಷ ಲಗ್ನದಲ್ಲಿ ರಾತ್ರಿ 7.21 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವ ಘಟಿಸಲಿದೆ. ಸಂಜೆ 4.15ಕ್ಕೆ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇಡುವ ವಿಧಿವಿಧಾನಗಳು ಜರುಗಲಿವೆ. ತಲಕಾವೇರಿ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲು ಈ ಬಾರಿ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುವುದು

from India & World News in Kannada | VK Polls https://ift.tt/P2KbiGW

Mysuru Dasara | ಮೈಸೂರು ದಸರಾ ಯುವ ಸಂಭ್ರಮದಲ್ಲಿ ವಿದ್ಯಾರ್ಥಿಗಳ ಜೋಶ್‌: ಮೋಡಿ ಮಾಡಿದ ನಟ ಡಾಲಿ ಧನಂಜಯ್‌

Yuva Sambhrama of Mysuru Dasara: ಮಾನಸಗಂಗೋತ್ರಿಯ (Manasagangotri) ಬಯಲು ರಂಗಮಂದಿರದಲ್ಲಿ ಗಿಜಿಗಿಡುವ ಯುವ ಸಮೂಹದ ಜೋಶ್‌ ನಡುವೆ ಬಿಳಿ ಪಂಚೆ, ಷರ್ಟ್‌ನಲ್ಲಿ ಆಗಮಿಸಿದ ಚಲನಚಿತ್ರ ನಟ ಡಾಲಿ ಧನಂಜಯ್‌ (Daali Dhananjay) ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಆ ಮೂಲಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿ ನೀಡಲಾಗುವ ಸಾಂಸ್ಕೃತಿಕ ಸಂಭ್ರಮಕ್ಕೆ ಆರಂಭ ದೊರೆಯಿತು.

from India & World News in Kannada | VK Polls https://ift.tt/jPbc1Rs

Engineers Day | ಅಭಿಯಂತರ ದಿನಾಚರಣೆ ಆಚರಿಸಿದ ಕತಾರ್‌ನ ಕರ್ನಾಟಕ ಸಂಘ

Karnataka sangha Qatar: ಕರ್ನಾಟಕ ಸಂಘ ಕತಾರ್ 'ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ' 162 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ 2022ರ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮದಲ್ಲಿ ಎಂಜಿನಿಯರ್ ಹೇಮಚಂದ್ರನ್ ಅವರು "ತಂತ್ರಜ್ಞಾನ ಹಾಗೂ ಅದರಿಂದ ಜೀವನಶೈಲಿಗಳ ಮೇಲೆ ಪರಿಣಾಮ", ಕಿಶೋರ್, ವೆಂಕಟೇಶ್ ಅವರು "ವಿದ್ಯುತ್ ಉತ್ಪಾದನೆ ಹಾಗೂ ಅದರ ಪ್ರಯೋಜನ" ಮತ್ತು ಪ್ರದೀಪ್ ಕುಮಾರ್ ದಿಲೀಪ್ ಅವರು "ವೈಮಾನಿಕ ಕ್ಷೇತ್ರದಲ್ಲಿ ಡ್ರೋನ್‌ ಗಳ ಬಳಕೆ" ವಿಷಯಗಳ ಬಗ್ಗೆ ತಾಂತ್ರಿಕ ಮಾಹಿತಿಗಳನ್ನು ಸಭೆಗೆ ನೀಡಿದರು.

from India & World News in Kannada | VK Polls https://ift.tt/S0EKi51

Arshdeep Singh: ಅರ್ಷದೀಪ್‌ ಸಿಂಗ್‌ ಬೇಸಿಕ್ ಬೌಲರ್, ಟೀಮ್ ಇಂಡಿಯಾ ವೇಗಿಯನ್ನು ಕಿಚಾಯಿಸಿದ ಅಕೀಬ್ ಜಾವೆದ್‌!

India Squad for ICC T20 World Cup 2022: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಪರ ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸುವ ಮೂಲಕ ಬೆಳಕಿಗೆ ಬಂದ ಯುವ ಪ್ರತಿಭೆ ಅರ್ಷದೀಪ್‌ ಸಿಂಗ್‌, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೈ ಎನಿಸಿಕೊಂಡಿದ್ದಾರೆ. ಭಾರತ ತಂಡದ ಪರ ಆಡಿದ ಬೆರಳೆಣಿಕೆಯ ಟಿ20-ಐ ಪಂದ್ಯಗಳಲ್ಲಿ ಎಡಗೈ ವೇಗಿ ಭರ್ಜರಿ ಪ್ರದರ್ಶನಗಳನ್ನು ಹೊರತಂದು, ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೂ ಆಯ್ಕೆ ಆಗಿದ್ದಾರೆ. ಆದರೆ, ಪಾಕ್‌ನ ಮಾಜಿ ವೇಗಿ ಅಕೀಬ್‌ ಜಾವೆದ್‌ ಭಾರತದ ಯುವ ವೇಗಿಯ ಬಗ್ಗೆ ಅಪಸ್ವರ ನುಡಿದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/KdYXRjO

Untouchability in Karnataka : ಕರ್ನಾಟಕದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ - ಪ್ರಕರಣ 3, ಗೋಳು ಕೇಳುವವರು ಯಾರು?

ರಾಜ್ಯದಲ್ಲಿ ಅಸ್ಪೃಷ್ಯತೆ ಆಚರಣೆ ಇನ್ನೂ ಜೀವಂತವಾಗಿಯೇ ಇದೆ. ರಾಜ್ಯದ ಕೆಲವು ಗ್ರಾಮಗಳಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸುವುದು ಮಾತ್ರವಲ್ಲದೆ ಕುಡಿಯುವ ನೀರು, ಅಂಗನವಾಡಿ ಪ್ರವೇಶ ಹಾಗೂ ಪಡಿತರ ಪಡೆಯಲು ಅಡ್ಡಿ ಉಂಟು ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ ಎಂದು ಸ್ವತಃಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಿಳಿಸಿದೆ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಕೋಟಾ ಶ್ರೀನಿವಾಸ್ ಪುಜಾರಿ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ನಡೆದ ಪ್ರಕರಣಗಳನ್ನು ಉಲ್ಲೇಖಿಸಿ ವಿವರವಾದ ಉತ್ತರವನ್ನು ನೀಡಿದ್ದಾರೆ.

from India & World News in Kannada | VK Polls https://ift.tt/UxigM8Z

Mysuru | ಈ ರಸ್ತೆ ಡಾಂಬರು ಕಂಡು 15 ವರ್ಷವಾಯ್ತು..! ರಿಂಗ್‌ ರಸ್ತೆ ಸಮೀಪದ ಬಡಾವಣೆ ಜನರ ಗೋಳು ಕೇಳೋರಿಲ್ಲ

ಪೊಲೀಸ್‌ ಲೇಔಟ್‌, ಐಪಿಎಸ್‌ ಶ್ರೀನಿವಾಸ್‌ , ಜೆಎಸ್‌ಎಸ್‌ ಬಡಾವಣೆ ಸೇರಿದಂತೆ ಈ ಭಾಗದ ಇನ್ನಿತರ ಖಾಸಗಿ ಬಡಾವಣೆಯಾಗಿರುವುದರಿಂದ ರಸ್ತೆ ದುರಸ್ತಿ ಬಗ್ಗೆ ಮೈಸೂರು ನಗರಪಾಲಿಕೆ ತಲೆ ಕೆಡಿಸಿಕೊಂಡಿಲ್ಲ. ಆದರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಸೇರಿದ ಬಡಾವಣೆಗಳ ರಸ್ತೆಯಲ್ಲೂ ಸುಗಮ ಸಂಚಾರ ಅಸಾಧ್ಯವಾಗಿದೆ. ರಿಂಗ್‌ ರಸ್ತೆ ನಿರ್ಮಾಣವಾದ ಬಳಿಕ ಅತಿವೇಗವಾಗಿ ಈ ಬಡಾವಣೆಗಳು ಬೆಳೆಯುತ್ತಿದ್ದು, ನಿವೇಶನ, ಮನೆ ಮೌಲ್ಯ ದುಪ್ಪಟ್ಟಾಗಿದೆ. ಇದರಿಂದಾಚೆಗೂ ಸಾಕಷ್ಟು ಖಾಸಗಿ ಬಡಾವಣೆಗಳು ನಿರ್ಮಾಣಗೊಳ್ಳುತ್ತಿದ್ದು, ರಸ್ತೆ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ.

from India & World News in Kannada | VK Polls https://ift.tt/XzW4fID

ಉತ್ತಮ ಮಳೆಗೆ ಮತ್ಸ್ಯ ಕೃಷಿ ಜೋರು: ಚಾಮರಾಜನಗರದಲ್ಲಿ ಆಗಸ್ಟ್ ಅಂತ್ಯಕ್ಕೆ 53 ಲಕ್ಷ ಮೀನು ಮರಿಗಳ ಬಿತ್ತನೆ

ಮೀನುಗಾರಿಕೆಯನ್ನೇ ನಂಬಿ ಸಾವಿರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮೀನಿಗೂ ಸಾಕಷ್ಟು ಬೇಡಿಕೆ ಇದೆ. ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಈ ಬಾರಿ ಮೀನು ಕೃಷಿ ಕಾರ್ಯ ಉತ್ತಮ ರೀತಿಯಲ್ಲಿ ಸಾಗಿದೆ. ಕಳೆದ ಸಲ ಇಡೀ ವರ್ಷದಲ್ಲಿ 99 ಲಕ್ಷ ಮೀನು ಮರಿಗಳ ಬಿತ್ತನೆ ಕಾರ್ಯ ಜಿಲ್ಲೆಯಲ್ಲಿ ನಡೆದಿತ್ತು. ಆದರೆ, ಈ ಬಾರಿ ಆಗಸ್ಟ್‌ ಅಂತ್ಯಕ್ಕೇ 53 ಲಕ್ಷ ಬಿತ್ತನೆಯಾಗಿದ್ದು, ಇನ್ನುಳಿದ ಅವಧಿಯಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

from India & World News in Kannada | VK Polls https://ift.tt/QvbWDIZ

ಚರ್ಮ ಗಂಟು ರೋಗ ತಡೆಗೆ ಲಸಿಕಾಸ್ತ್ರ: ದೊಡ್ಡಬಳ್ಳಾಪುರದಾದ್ಯಂತ ಮೊದಲ ಹಂತದಲ್ಲಿ 20 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೃಷಿಯೊಂದಿಗೆ ಹೈನುಗಾರಿಕೆ ನೆಚ್ಚಿಕೊಂಡಿದೆ. ಕಳೆದ ವರ್ಷ ಕಾಲುಬಾಯಿ ರೋಗ ಲಸಿಕೆ ತಡವಾದ ಹಿನ್ನೆಲೆ 12 ಕರುಗಳು ಸಾವನ್ನಪ್ಪಿದ್ದವು. ಇದೀಗ ಚರ್ಮದ ಗಂಟು ರೋಗ ಹರಡುತ್ತಿದ್ದು, ಇಲಾಖೆ ಜಿಲ್ಲೆಯಾದ್ಯಂತ ಲಸಿಕೆ ವಿತರಿಸಲು ಕ್ರಮವಹಿಸಿದೆ. ಈ ಬಾರಿ ರಾಜ್ಯದ ಬೆಳಗಾವಿಯಲ್ಲಿ ಚರ್ಮ ಗಂಟು ರೋಗ ಹೆಚ್ಚಾಗಿ ಹರಡಿದೆ. ಇದರಿಂದ ಮುನ್ನೆಚ್ಚರಿಕೆಯಾಗಿ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದೆ.

from India & World News in Kannada | VK Polls https://ift.tt/frtXyi6

ಮೊಬೈಲ್‌ ಬಳಕೆದಾರರೇ ಜೋಕೆ!: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಇರಬಹುದು 'ಸೋವಾ' ವೈರಸ್‌

ಆ್ಯಂಡ್ರಾಯ್ಡ್, ಸ್ಮಾರ್ಟ್‌ಫೋನ್‌ಗಳಲ್ಲಿನ ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಶನ್‌ಗಳನ್ನು ಗುರಿಯಾಗಿಸಿಕೊಂಡು ಈ ವೈರಸ್‌ ದಾಳಿ ಮಾಡುತ್ತಿದೆ. ಅಮೆರಿಕ, ರಷ್ಯಾ ಮತ್ತು ಸ್ಪೇನ್‌ನ ಬಳಿಕ ಈಗ ಭಾರತೀಯ ಬ್ಯಾಂಕಿಂಗ್‌ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಜುಲೈನಲ್ಲಿ ಮೊದಲ ಸಲ ಈ ವೈರಸ್‌ ಭಾರತದಲ್ಲಿ ಕಂಡುಬಂತು. ಈಗ ಅದು ಮತ್ತಷ್ಟು ಅಪ್‌ಗ್ರೇಡ್‌ ಆಗಿದ್ದು, ಹಾವಳಿ ಮಿತಿ ಮೀರುತ್ತಿದೆ. ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಶನ್‌ ಬಳಕೆದಾರರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಜನರ ಮೊಬೈಲ್‌ ಪ್ರವೇಶಿಸುವ ಈ ವೈರಸ್‌ ಅನ್ನು ತೊಲಗಿಸುವುದು(ಅನ್‌ಇನ್‌ಸ್ಟಾಲ್‌) ಕಷ್ಟ. ಏಕೆಂದರೆ, ಇದು ಆ್ಯಂಡ್ರಾಯ್ಡ್ ಆ್ಯಪ್‌ಗಳ ಜತೆಯಲ್ಲೇ ಅಡಗಿಕೊಳ್ಳುತ್ತದೆ.

from India & World News in Kannada | VK Polls https://ift.tt/8nO29Do

ಮತಾಂತರ ನಿಷೇಧ ಕಾಯ್ದೆ ಚರ್ಚೆ ವೇಳೆ ಗದ್ದಲ: ಅಂಬೇಡ್ಕರ್‌ ವಾದದಿಂದ ಲೋಹಿಯಾ ವಾದದವರೆಗೆ ಚರ್ಚೆ

ವಿಧಾನ ಪರಿಷತ್‌ ಕಲಾಪದಲ್ಲಿ ಮತಾಂತರ ನಿಷೇಧ ವಿಧೇಯಕದ ಕುರಿತ ವಿಸ್ತೃತ ಚರ್ಚೆಗೆ ಸಭಾಪತಿ ಅವಕಾಶ ಕಲ್ಪಿಸಿದಾಗ ಮಾತು ಆರಂಭಿಸಿದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌, ಮೊದಲಿಗೆ ಶ್ರೀ ಕೇಶವಾನಂದ ಭಾರತಿ ಪ್ರಕರಣವನ್ನು ಸದನದ ಮುಂದಿಟ್ಟು ಆ ಪ್ರಕಾರ ಸಂವಿಧಾನ ಆಶಯಗಳಿಗೆ ತಿದ್ದುಪಡಿ ತರಲು ಅವಕಾಶ ಇಲ್ಲವೆಂದು ಪ್ರತಿಪಾದಿಸಿದರು. 'ನಮಗೆ ಇದರ ಒಪ್ಪಿಗೆ ಇಲ್ಲ. ಬಹುಮತ ನಿಮ್ಮ ಬಳಿ ಇರುವುದರಿಂದ ವಿಧೇಯಕ ಪಾಸ್‌ ಮಾಡಿದರೂ ಸುಪ್ರೀಂಕೋರ್ಟ್‌ ಇದನ್ನು ಒಪ್ಪಿಕೊಳ್ಳುವುದಿಲ್ಲ' ಎಂದರು.

from India & World News in Kannada | VK Polls https://ift.tt/dzqC1p8

ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿ ಪ್ರಕರಣ: ಮಾಹಿತಿ ನೀಡಲು ಪಾಲಿಕೆಗೆ ಹೈಕೋರ್ಟ್‌ ನಿರ್ದೇಶನ

ವಿಚಾರಣೆ ವೇಳೆ ಹೈಕೋರ್ಟ್‌ ನಿರ್ದೇಶದನ್ವಯ ದೂರು ಪರಿಹಾರ ಕೇಂದ್ರಕ್ಕೆ ಈವರೆಗೂ ಆಗಿರುವ ಬೆಳವಣಿಗೆಗಳನ್ನು ವಿವರಿಸಿದ ಬಿಬಿಎಂಪಿ ವಕೀಲರು, ಮಳೆ ನೀರು ಹರಿದು ಹೋಗಲು ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ರಾಜಕಾಲುವೆ ಒತ್ತುವರಿ ಪತ್ತೆ ಮತ್ತು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜಕಾಲುವೆಯ ಎಷ್ಟು ಒತ್ತುವರಿಯನ್ನು ಪತ್ತೆ ಮಾಡಲಾಗಿದೆ ಹಾಗೂ ಎಷ್ಟು ತೆರವುಗೊಳಿಸಲಾಗಿದೆ? ಎಂದು ಪ್ರಶ್ನಿಸಿತಲ್ಲದೆ, ಆ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡದಿದ್ದರೆ ಅದರ ಮೇಲೆ ನ್ಯಾಯಾಲಯ ನಿಗಾ ವಹಿಸುವುದು ಹೇಗೆ? ಎಂದು ಕೇಳಿತು.

from India & World News in Kannada | VK Polls https://ift.tt/7f1i9vH

ಬಳಕೆಯಲ್ಲಿ ಕನ್ನಡವೇ ಸಾರ್ವಭೌಮ: ಆಡಳಿತದಲ್ಲಿ ಕಡ್ಡಾಯ ಕನ್ನಡ ಪಾಲನೆಗೆ ಕಾನೂನಿನ ಬಲ- ಸಿಎಂ

ನಾನಾ ಇಲಾಖೆ ಸೇರಿದಂತೆ ಒಟ್ಟಾರೆಯಾಗಿ ಆಡಳಿತದಲ್ಲಿ ಕನ್ನಡ ಭಾಷೆ ಬಳಕೆ ಸಮರ್ಪಕವಾಗಿರುವ ಬಗ್ಗೆ ನಿಗಾವಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ. ಆದರೆ, ಕನ್ನಡವನ್ನು ಅಲಕ್ಷಿಸುವ, ಅಪಮಾನಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಶಾಸನಬದ್ಧ ಅಧಿಕಾರ ಪ್ರಾಧಿಕಾರಕ್ಕಿಲ್ಲ. ಹಾಗಾಗಿ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡುವಂತೆ ಪ್ರಾಧಿಕಾರ ಒತ್ತಾಯಿಸುತ್ತಲೇ ಇದ್ದರೂ ಈ ನಿಟ್ಟಿನಲ್ಲಿ ಕ್ರಮವಾಗಿರಲಿಲ್ಲ. ಇದೀಗ ಸದನದಲ್ಲೇ ಈ ಬಗ್ಗೆ ಸರಕಾರದ ನಿಲುವನ್ನು ಸ್ಪಷ್ಟಪಡಿಸಿರುವ ಸಿಎಂ, ''ಕನ್ನಡ ಭಾಷೆ ಸೇರಿದಂತೆ ನೆಲ, ಜಲ, ಜನರ ರಕ್ಷಣೆಗೆ ಸರಕಾರ ಬದ್ಧವಾಗಿದೆ. ಈ ಉದ್ದೇಶಕ್ಕೆ ಕಾನೂನಿನ ಸ್ವರೂಪ ನೀಡಲಾಗುವುದು,'' ಎಂದರು.

from India & World News in Kannada | VK Polls https://ift.tt/4VeqmYS

ಕಳಸದಲ್ಲಿ ಆನೆ ಉಪಟಳಕ್ಕೆ ಕೃಷಿಕರ ಪರದಾಟ: ತ್ವರಿತ ಕ್ರಮಕ್ಕೆ ಆಗ್ರಹಿಸಿ ಅರಣ್ಯ ಇಲಾಖೆಗೆ ಮನವಿ

ಕಳಸ ಭಾಗಕ್ಕೆ ಲಗ್ಗೆ ಇಟ್ಟಿರುವ ಎರಡು ಆನೆಗಳು ಒಂದು ವಾರದಿಂದ ನೆಲ್ಲಿಕೋಟ, ಲಲಿತಾದ್ರಿ, ಅತ್ತಿಕುಡಿಗೆ, ಮಾವಿನಕೆರೆ, ಸಾಲಿನಮಕ್ಕಿ, ಕೊಂಡದಮನೆ, ದುಗ್ಗಪ್ಪನಕಟ್ಟೆ, ಗೋಡ್ಲುಮನೆ, ಗಣಪತಿಕಟ್ಟೆ, ಮಾರ್ನಬೈಲು ಗ್ರಾಮಗಳಲ್ಲಿ ಸಂಚರಿಸುತ್ತಿವೆ. ಅಡಕೆ, ಬಾಳೆ, ತೆಂಗು ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳನ್ನು ಧ್ವಂಸ ಮಾಡಿವೆ. ತೋಟಗಳಿಗೆ ನುಗ್ಗಿ ಕಾಫಿ ಗಿಡಗಳನ್ನು ಹಾಳುಮಾಡಿವೆ.

from India & World News in Kannada | VK Polls https://ift.tt/Xtj16fQ

ವಾಹನಗಳ ಟೋಯಿಂಗ್‌ಗೆ ಅನುಮತಿ ನೀಡುವ ವಿಚಾರ: 6 ವಾರಗಳಲ್ಲಿ ಮನವಿ ಪರಿಗಣಿಸಲು ಹೈಕೋರ್ಟ್‌ ಸೂಚನೆ

ಸಂವಿಧಾನದ 350ನೇ ಪರಿಚ್ಛೇದದ ಪ್ರಕಾರ ಪ್ರತಿಯೊಬ್ಬ ಭಾರತೀಯ ತನ್ನ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳು ಮತ್ತು ಪ್ರಾಧಿಕಾರಗಳಿಗೆ ಯಾವುದೇ ಭಾರತೀಯ ಭಾಷೆಯಲ್ಲಿ ಮನವಿ ಸಲ್ಲಿಸಲು ಅವಕಾಶವಿದೆ. 1949ರಲ್ಲಿ ಸಂವಿಧಾನದ 350ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಿ ಭಾರತದ ಯಾವುದೇ ಭಾಷೆಯಲ್ಲಿ ಮನವಿ ಸಲ್ಲಿಸಿದರೂ ಪರಿಗಣಿಸಬೇಕು. ಜತೆಗೆ, ತ್ವರಿತ ಪರಿಹಾರ ಕಂಡುಕೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿದೆ.

from India & World News in Kannada | VK Polls https://ift.tt/FjuaNKr

Ramanagara | ರಾಮನಗರ: ಕಾಫಿ-ಟೀ ವಿಷಯಕ್ಕೆ ನಗರಸಭೆ ಸಾಮಾನ್ಯ ಸಭೆ ಬಲಿ

Ramanagara City Muncipal Council Meeting: ಇತ್ತೀಚಿಗೆ ಸುರಿದ ಮಳೆಯಿಂದಾಗಿ ರಾಮನಗರ (Ramanagara) ನಗರ ವ್ಯಾಪ್ತಿಯ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿತ್ತು (Flood). ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿ ಭಾರಿ ಹಾನಿ ಮಾಡಿತ್ತು. ಕೆಲವರು ಜೀವನ ಕಟ್ಟಿಕೊಳ್ಳಲು ಇನ್ನು ಒದ್ದಾಡುತ್ತಿದ್ದಾರೆ. ಇಂಥ ಗಂಭೀರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು, ಪರಿಹಾರ ಸಂಬಂಧ ಚರ್ಚೆಯಾಗಬೇಕಿದ್ದ ಸಭೆಯಲ್ಲಿಅಧ್ಯಕ್ಷರ ಕೊಠಡಿಗೆ ಭೇಟಿ ನೀಡುವ ಅತಿಥಿಗಳು ಮತ್ತು ಸಾರ್ವಜನಿಕರಿಗೆ ಕಾಫಿ-ಟೀ ನೀಡಲು ನಿಗದಿಪಡಿಸಿರುವ ಮಾಸಿಕ 15 ಸಾವಿರ ರೂ. ಅನುದಾನ ರದ್ದುಪಡಿಸುವಂತೆ ಒತ್ತಾಯಿಸಿ ಜೆಡಿಎಸ್‌ ಪುರಪಿತೃಗಳು ಸಭಾತ್ಯಾಗ ಮಾಡಿದರು.

from India & World News in Kannada | VK Polls https://ift.tt/eARFyli

VIMS | ವಿದ್ಯುತ್‌ ಕಡಿತ, ಕೈಕೊಟ್ಟ ಜನರೇಟರ್‌: ಐಸಿಯುನಲ್ಲಿದ್ದ ಇಬ್ಬರು ರೋಗಿಗಳು ಸಾವು

Vijayanagara Institute of Medical Sciences in Ballari: ವಿಮ್ಸ್‌ನಲ್ಲಿ (VIMS) ಬೆಳಗ್ಗೆ 6ರಿಂದ 10ಗಂಟೆವರೆಗೆ ವಿದ್ಯುತ್‌ ಇರಲಿಲ್ಲ. ಜನರೇಟರ್‌ ಇದ್ದರೂ ಕೆಲಸ ಮಾಡಿಲ್ಲ. ಪರಿಣಾಮ ಐಸಿಯುನಲ್ಲಿದ್ದ (ICU) ವೆಂಟಿಲೇಟರ್‌ ಸ್ಥಗಿತಗೊಂಡು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೌಲಾ ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಟ್ಟೆಮ್ಮ ಅವರಿಗೆ ಹಾವು ಕಚ್ಚಿತ್ತು. ಇಬ್ಬರು ರೋಗಿಗಳು ಮೃತಪಟ್ಟಿರುವ ಘಟನೆ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌/ VIMS)ಯಲ್ಲಿ ಬುಧವಾರ ನಡೆದಿದೆ.

from India & World News in Kannada | VK Polls https://ift.tt/r7w6Vfn

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೂಲಸೌಕರ್ಯ ನಿರ್ಲಕ್ಷ್ಯ ಆರೋಪ: ವಿವರಣೆ ಕೇಳಿದ ಹೈಕೋರ್ಟ್‌

ಮಾರುಕಟ್ಟೆಯ ಅವ್ಯವಸ್ಥೆ ಸರಿಪಡಿಸುವಂತೆ ಸ್ಥಳೀಯ ಹೂವು ಬೆಳೆಗಾರರು ಮತ್ತು ವ್ಯಾಪಾರಸ್ಥರು ವೆಂಕಟೇಶ್‌ ಮತ್ತು ನಾಗೇಶ್‌ ಅವರಿಗೆ 2021ರ ನ.24ರಂದೇ ಮನವಿ ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಮಾರುಕಟ್ಟೆಯಲ್ಲಿರುವ ಕಸ, ರಸ್ತೆ, ಬೀದಿ ದೀಪ, ಗೇಟ್‌ಗಳನ್ನು ಅಳವಡಿಸಿ ವಾಹನಗಳ ಸಂಚಾರ ನಿರ್ಬಂಧಿಸಬೇಕು ಎಂದು ಮನವಿ ಮಾಡಲಾಗಿದ್ದರೂ ಅಧಿಕಾರಿಗಳು ಈತನಕ ಪರಿಗಣಿಸಿಲ್ಲ ಎಂದು ವಿವರಿಸಲಾಗಿದೆ.

from India & World News in Kannada | VK Polls https://ift.tt/8lbC5dH

Murder case | ಹಾವೇರಿ: ರಾತ್ರಿ ಮಲಗಲು ಹೊರಟ ವ್ಯಕ್ತಿ ಚಿರನಿದ್ರೆಗೆ, ಕೊಲೆ ಮಾಡಿ ಹಿತ್ತಲಲ್ಲಿ ಶವ ಹೂತಿಟ್ಟರು

Murder in Haveri Kamalapura: ಆಗಸ್ಟ್‌ 30ರಂದು ಈರಪ್ಪ ಮನೆಯಿಂದ ಸಮುದಾಯ ಭವನಕ್ಕೆ ಮಲಗಲು ತೆರಳಿದ್ದರು ಎನ್ನಲಾಗಿದೆ. ಎರಡು ದಿನ ಸಂಬಂಧಿಕರು ಸೇರಿದಂತೆ ಬೇರೆ ಊರಿಗೆ ತೆರಳಿರಬಹುದು ಎಂದು ಈರಪ್ಪ ಕುಟುಂಬದವರು ವಿಚಾರಣೆ ನಡೆಸಿದ್ದಾರೆ. ಅಲ್ಲಿ ಈರಪ್ಪ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಡಿ ಎಂದು ಕುಟುಂಬದವರು ರಟ್ಟಿಹಳ್ಳಿ ಪೊಲೀಸ್ ಠಾಣಿಗೆ ದೂರು ನೀಡಿದ್ದರು. ರಪ್ಪ ಕಾಣಿಯಾದ ನಂತರ ಅವರು ಈ ಹಿಂದೆ ಪದೇ ಪದೇ ಹೋಗುತ್ತಿದ್ದ ಗದಿಗೆಪ್ಪ ಸಣ್ಣತಾಯಿ ಮನೆಯವರ ಮೇಲೆ ಈರಪ್ಪನ ಕುಟುಂಬದ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದರು

from India & World News in Kannada | VK Polls https://ift.tt/g9UL32z

Thingalady | ಪುತ್ತೂರು | ಅಂಗಡಿಯಲ್ಲಿ ಯುವತಿಗೆ ಕಿರುಕುಳ: ತಿಂಗಳಾಡಿ ಉದ್ವಿಗ್ನ

Tension in Puttur Thingalady: ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿನ ಸೂಪರ್ ಬಜಾರ್ (super bazar) ಅಂಗಡಿಗೆ ಬಂದಿದ್ದ ಹಿಂದೂ ಯುವತಿಗೆ ಅನ್ಯಮತೀಯ ಯುವಕನೊಬ್ಬ ಕಿರುಕುಳ (sexual harassment) ನೀಡಿದ ಘಟನೆ ಬುಧವಾರ ಮುಸ್ಸಂಜೆ ವೇಳೆ ನಡೆದಿದೆ. ಘಟನೆ ನಡೆದ ಬೆನ್ನಲ್ಲೇ ನೂರಾರು ಹಿಂದೂ ಯುವಕರು ಸ್ಥಳದಲ್ಲಿ ಜಮಾಯಿಸಿದ್ದು, ಮುಂಜಾಗರೂಕತಾ ಕ್ರಮವಾಗಿ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದಾರೆ. ಈ ನಡುವೆ ತಿಂಗಳಾಡಿಯಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ಪ್ರಕ್ಷುಬ್ದ ವಾತಾವರಣ ನೆಲಸಿದೆ. ಅರೋಪಿಯನ್ನು ರಾತ್ರಿ ಬೆಳಗಾಗುವುದರೊಳಗಾಗಿ ಬಂಧಿಸದಿದ್ದರೆ ಗುರುವಾರ ತಿಂಗಳಾಡಿ ಪೇಟೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.

from India & World News in Kannada | VK Polls https://ift.tt/IcJouix

Leopard | ಚಿರತೆ ಉಪಟಳ, ಜನರ ಕಳವಳ..! ದೊಡ್ಡಬಳ್ಳಾಪುರದಲ್ಲಿ 12 ಕಡೆ ಚಿರತೆ ಸೆರೆಗೆ ಬೋನ್‌ ವ್ಯವಸ್ಥೆ

ಬೆಂಗಳೂರು ಗ್ರಾಮಾಂತರ ಅರಣ್ಯ ವಿಭಾಗದಡಿ ಕಳೆದ ಮೂರು ವರ್ಷಗಳಲ್ಲಿ 119 ಕಡೆ ಚಿರತೆ ದಾಳಿ ನಡೆಸಿದ್ದು, 2022ರಲ್ಲಿ 26 ಚಿರತೆ ದಾಳಿ ಪ್ರಕರಣಗಳು ಬೆಳಕಿಗೆ ಬಂದಿದೆ. ಚಿರತೆಗಳು ಹೆಚ್ಚಾಗಿ ಅರಣ್ಯದಂಚಿನ ಗ್ರಾಮಗಳಲ್ಲಿನ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ. ಹೀಗಾಗಿ, ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸೇರಿದಂತೆ ಒಟ್ಟು 12 ಕಡೆ ಚಿರತೆಯನ್ನು ಸೆರೆ ಹಿಡಿಯಲು ಬೋನ್‌ಗಳನ್ನು ಇಡಲಾಗಿದ್ದು, ರೈತರಲ್ಲಿ ಅರಿವು ಮೂಡಿಸಲು ಕ್ರಮವಹಿಸಲಾಗಿದೆ.

from India & World News in Kannada | VK Polls https://ift.tt/MLz9w0p

ಬಿಲ್ಕಿಸ್‌ ಬಾನು ಅಪರಾಧಿಗಳ ಬಿಡುಗಡೆ ವಿರೋಧಿಸಿ ಕಪ್ಪು ವಸ್ತ್ರ ಉಟ್ಟು ಮಹಿಳೆಯರ ಪ್ರತಿಭಟನೆ

ಬಿಲ್ಕಿಸ್‌ ಬಾನುಗೆ ನ್ಯಾಯ ಸಲ್ಲಿಸಲು ಬಿಡುಗಡೆಯಾದ 11 ಮಂದಿ ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಬೇಕು. ಮುರುಘಾ ಮಠದ ಶಿವಮೂರ್ತಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರಿಗೆ ಕಾನೂನು ರೀತಿಯಲ್ಲಿ ಸಿಗಬೇಕಾದ ಪರಿಹಾರಗಳನ್ನು ತಕ್ಷಣ ನೀಡಬೇಕು ಎಂದು ಮಂಗಳೂರಿನ ಮಹಿಳಾ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

from India & World News in Kannada | VK Polls https://ift.tt/WjeT5i7

Hardik Pandya: ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ, 1986ರ ರವಿ ಶಾಸ್ತ್ರಿ ಆಟವನ್ನು ಆಡಬಲ್ಲರು ಎಂದ ಸುನೀಲ್ ಗವಾಸ್ಕರ್‌!

ICC T20 World Cup 2022: ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡದಲ್ಲಿ ಸ್ಟಾರ್‌ ಆಟಗಾರರ ದಂಡೇ ಇದೆ. ಅದರಲ್ಲೂ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ತಂಡದ ಮ್ಯಾಚ್‌ ವಿನ್ನರ್‌ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌, 1985ರ ವಿಶ್ವ ಸರಣಿಯಲ್ಲಿ ಆಲ್‌ರೌಂಡರ್‌ ರವಿ ಶಾಸ್ತ್ರಿ ನೀಡಿದ್ದ ಪ್ರದರ್ಶನವನ್ನು, ಇದೀಗ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ನೀಡಬಲ್ಲರು ಎಂದು ಗವಾಸ್ಕರ್ ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4H1qJo7

Jobs | ಜಾಬ್‌ ಹುಡುಕುವವರಿಗೆ ಶುಭ ಸುದ್ದಿ: ನೇಮಕಾತಿ ಮಾಡಿಕೊಳ್ಳಲು ಶೇ. 54ರಷ್ಟು ಕಂಪನಿಗಳು ಸಜ್ಜು

Indias companies recruitment: ಮಂಗಳವಾರ ಬಿಡುಗಡೆಯಾದ ಮ್ಯಾನ್‌ಪವರ್‌ಗ್ರೂಪ್‌ ಎಂಪ್ಲಾಯ್‌ಮೆಂಟ್‌ ಔಟ್‌ಲುಕ್‌ ಸಮೀಕ್ಷೆ (survey) ಪ್ರಕಾರ, ಉದ್ಯೋಗ (Employment) ಮಾರುಕಟ್ಟೆಯು ಅಕ್ಟೋಬರ್‌-ಡಿಸೆಂಬರ್‌ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. 41 ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ 40,600ಕ್ಕೂ ಅಧಿಕ ಉದ್ಯೋಗದಾತರರೊಂದಿಗಿನ ಸಂದರ್ಶನಗಳನ್ನು ಆಧರಿಸಿ ಸಮೀಕ್ಷೆ ಮಾಡಲಾಗಿದೆ. ಇದರ ಪ್ರಕಾರ, ಭಾರತದಲ್ಲಿ ಉದ್ಯೋಗಾವಕಾಶಗಳು ಹೆಚ್ಚುವ ಸಾಧ್ಯತೆಗಳಿವೆ. ಭಾರತದಲ್ಲಿನ ಶೇ.64ರಷ್ಟು ಕಂಪನಿಗಳು ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಬಯಸುತ್ತಿವೆ. ಶೇ.10ರಷ್ಟು ಕಂಪನಿಗಳು ನೇಮಕಾತಿ ಇಳಿಕೆಯಾಗಬಹುದು ಎಂದಿವೆ. ಶೇ.24ರಷ್ಟು ಕಂಪನಿಗಳು, ಉದ್ಯೋಗಿಗಳ ಸಂಖ್ಯೆಯಲ್ಲಿ ಬದಲಾವಣೆಯನ್ನು ನಿರೀಕ್ಷಿಸಿಲ್ಲ.

from India & World News in Kannada | VK Polls https://ift.tt/dJRxe2F

ಬಿಹಾರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಪಾದಚಾರಿಗಳ ಮೇಲೆ ಗುಂಡಿನ ದಾಳಿ! 1 ಬಲಿ, 11 ಮಂದಿಗೆ ಗಾಯ

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಷ್ಟ್ರೀಯ ಹೆದ್ದಾರಿ 31 ರ ರೌನಿ ಥರ್ಮಲ್ ಪವರ್ ಸ್ಟೇಷನ್‌ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ 28ರ ಬಜ್ವಾರಾವರೆಗೆ ರಸ್ತೆಯುದ್ದಕ್ಕೂ ನಾಲ್ಕು ಸ್ಥಳಗಳಲ್ಲಿ ಅಮಾಯಕ ಪಾದಚಾರಿಗಳ ಮೇಲೆ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ. ಪರಿಣಾಮ ಓರ್ವ ಅಮಾಯಕ ಪಾದಚಾರಿ ಮೃತಪಟ್ಟಿದ್ದು, 11 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಬೇಗುಸರಾಯ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ.

from India & World News in Kannada | VK Polls https://ift.tt/kB0uqRm

CET 2022 | ಸಿಇಟಿ ಬಿಕ್ಕಟ್ಟು: ಏಕಸದಸ್ಯ ಪೀಠದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಸರಕಾರ

Karnataka Government Challenged CET 2022 rank list order: ಕರ್ನಾಟಕ ಪರೀಕ್ಷಾ ಪ್ರಾಕಾರ (ಕೆಇಎ/ KEA) ಹೊರಡಿಸಿದ್ದ ಟಿಪ್ಪಣಿ ರದ್ದುಪಡಿಸಿದ್ದ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಸರಕಾರವು ಹೈಕೋರ್ಟ್‌ (Karnataka High Court) ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನ ಸಿಇಟಿ ಫಲಿತಾಂಶಕ್ಕೆ ಪರಿಗಣಿಸದ ಕೆಇಎ ಕ್ರಮ ಪ್ರಶ್ನಿಸಿ 50ಕ್ಕೂ ಅಧಿಕ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು 9 ತಕರಾರು ಅರ್ಜಿ ಸಲ್ಲಿಸಿದ್ದರು.

from India & World News in Kannada | VK Polls https://ift.tt/RsiueCT

POCSO Case | ಐದು ಮಕ್ಕಳ ತಂದೆಯಿಂದ ಲೈಂಗಿಕ ದೌರ್ಜನ್ಯ: ಗರ್ಭವತಿಯಾದ ಅಪ್ರಾಪ್ತ ವಯಸ್ಸಿನ ಹುಡುಗಿ

POCSO Case in Kadaba: ವ್ಯಕ್ತಿಗೆ ಐದು ಜನ ಮಕ್ಕಳಿದ್ದು, ಮಕ್ಕಳನ್ನು ನೋಡಿಕೊಳ್ಳಲೆಂದು ಮೂರು ವರ್ಷದ ಹಿಂದೆ ಅಪ್ರಾಪ್ತ ವಯಸ್ಸಿನ ಹುಡುಗಿಯು (Minor Girl) ಆತನ ಮನೆಗೆ ಬಂದು ವಾಸವಾಗಿದ್ದಳು. ಆರೋಪಿ ಕಳೆದ ಫೆಬ್ರುವರಿಯಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ ಸಮಯದಲ್ಲಿ ಹುಡುಗಿಯನ್ನು ಬಲವಂತವಾಗಿ ಪ್ರತ್ಯೇಕ ಕೋಣೆಗೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಆ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಸುವ ಜೊತೆಗೆ, ಚೆನ್ನಾಗಿ ನೋಡಿಕೊಳ್ಳುವಂತೆ ಓಲೈಸಿರುವುದಾಗಿ ತಿಳಿದು ಬಂದಿದೆ. ವಿಷಯವನ್ನು ಯಾರಿಗಾದರೂ ತಿಳಿಸಿದರೆ ಮನೆಯಿಂದ ಓಡಿಸುವುದಾಗಿ ರುಕ್ಮಯ್ಯ ಹುಡುಗಿಗೆ ಬೆದರಿಕೆ ಹಾಕಿದ್ದ.

from India & World News in Kannada | VK Polls https://ift.tt/EGSIPJx

Mysuru Dasara 2022: ಮೈಸೂರು ಮೇಯರ್ ಕುದುರೆ ಸವಾರಿ..! ಜಂಬೂಸವಾರಿ ಮೆರವಣಿಗೆಗೆ ಟ್ರೈನಿಂಗ್‌

ಅಶ್ವಾರೋಹಿ ದಳದ ಪೊಲೀಸರು ಮೇಯರ್ ಶಿವಕುಮಾರ್ ಅವರನ್ನು ಕುದುರೆ ಮೇಲೆ ಕೂರಿಸಿ ಸವಾರಿ ಮಾಡುವುದನ್ನು ಹೇಳಿಕೊಟ್ಟರು. ಟೀಶರ್ಟ್, ಟ್ರ್ಯಾಕ್ ಪ್ಯಾಂಟ್, ಶೂ ಹಾಗೂ ಹೆಲ್ಮೆಟ್ ಧರಿಸಿದ್ದ ಶಿವಕುಮಾರ್‌ಗೆ ತರಬೇತಿಯ ಮೊದಲ ದಿನದಂದು ಕುದುರೆ ಏರುವುದು, ಲಗಾಮು ಹಿಡಿಯುವುದು, ಸವಾರಿ ವೇಳೆ ಎಚ್ಚರ ವಹಿಸುವುದು, ಇಳಿಯುವಾಗ ಅನುಸರಿಸಬೇಕಾದ ಕ್ರಮ ಮೊದಲಾದವುಗಳನ್ನು ಮೌಂಟೆಡ್ ಕಂಪನಿ ಸಿಬ್ಬಂದಿ ತಿಳಿಸಿಕೊಟ್ಟರು.

from India & World News in Kannada | VK Polls https://ift.tt/Avly2ao

ರೈತರ ಕೈ ಸೇರದ ಭತ್ತ ಕೃಷಿ ನಷ್ಟ ಪರಿಹಾರ: ಅತಿವೃಷ್ಟಿಯಿಂದ ಭತ್ತ ಬೆಳೆಗೆ ವ್ಯಾಪಕ ಹಾನಿ, ಹೋರಾಟದ ಎಚ್ಚರಿಕೆ

ಮುಂಗಾರು ಆರಂಭದಲ್ಲಿನ ವಿಪರೀತ ಮಳೆ ಭತ್ತದ ಆರಂಭಿಕ ಪ್ರಕ್ರಿಯೆಯ ಮೇಲೆ ದುಷ್ಪರಿಣಾಮ ಬೀರಿತ್ತು. ಭತ್ತ ಬೆಳೆಗಾರರಿಗೆ ಆಗಿರುವ ನಷ್ಟ ಪರಿಹಾರಕ್ಕೆ ಸರಕಾರ ಹೆಕ್ಟೇರ್‌ಗೆ 13,600 ರೂ. ಪರಿಹಾರ ನೀಡುವುದಾಗಿ ಘೋಷಿಸಿತ್ತು. ಅದರಂತೆ ರೈತರು ಪರಿಹಾರ ಆ್ಯಪ್‌ ಮೂಲಕ ಜುಲೈ ತಿಂಗಳಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ 2 ತಿಂಗಳು ಕಳೆಯುತ್ತಾ ಬಂದಿದ್ದರು ಇನ್ನೂ ಪರಿಹಾರ ಬಂದಿಲ್ಲ.

from India & World News in Kannada | VK Polls https://ift.tt/8R9f0CL

ಪ್ರಯಾಣಿಕರ ಹೆಚ್ಚಳಕ್ಕೆ ರೈಲ್ವೆ ಇಲಾಖೆ ಕಸರತ್ತು: ಸಿಬ್ಬಂದಿ ಕೆಲಸ ಮಾಡುವ ಸ್ಥಳದಲ್ಲಿಯೇ ಪಾಸ್‌ ನೀಡಲು ಚಿಂತನೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಮೆಮು ರೈಲಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಮಾಸಿಕ ಪಾಸ್‌ ತೆಗೆದುಕೊಳ್ಳುವಂತೆ ಉತ್ತೇಜಿಸಲು ನೈಋುತ್ಯ ರೈಲ್ವೆ ವಿಭಾಗ ಹೊಸ ಯೋಜನೆಯನ್ನು ರೂಪಿಸಿದೆ. ಈ ಸಂಬಂಧ ರೈಲ್ವೆ ವಿಭಾಗ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸರಕು ಸಾಗಣೆ ಕಂಪನಿಗಳು, ವಿಮಾನಯಾನ ಸಂಸ್ಥೆಗಳು, ನಿರ್ಮಾಣ ಕಂಪನಿಗಳೂ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಇತ್ತೀಚೆಗೆ ಸಭೆ ನಡೆಸಿದೆ.

from India & World News in Kannada | VK Polls https://ift.tt/XDfJtUe

ಹೂ ಬೆಳೆಗಾರಿಗೆ ಬೆಲೆ ಇಳಿಕೆ ಹೊಡೆತ: ಪಿತೃಪಕ್ಷ ಆರಂಭವಾಗುತ್ತಿದ್ದಂತೆ ದಿಢೀರ್‌ ಕುಸಿದ ಬೆಲೆ, ರೈತರು ಕಂಗಾಲು

ಸತತ ಮಳೆಯಿಂದ ಹೂವಿನ ಬೆಳೆಗಳು ನಾನಾ ರೋಗಗಳಿಗೆ ತುತ್ತಾಗಿದ್ದವು. ಆದರೂ ರೈತರು ಕಷ್ಟಪಟ್ಟು ಬೆಳೆಯನ್ನು ಕಾಪಾಡಿಕೊಂಡಿದ್ದರು. ಶ್ರಾವಣ ಮಾಸದಲ್ಲಿ ಸರಣಿ ಹಬ್ಬಗಳ ಕಾರಣ ಹೂವಿಗೆ ಬೆಲೆ ಬಂದು ಅಷ್ಟೋ ಇಷ್ಟೋ ಆದಾಯ ಸಿಕ್ಕಿತ್ತು. ಸದ್ಯ ಪಿತೃಪಕ್ಷ ಆರಂಭವಾದಾಗಿನಿಂದ ಹೂವಿಗೆ ಬೇಡಿಕೆ ಕಡಿಮೆಯಾಗಿದ್ದು ಮಾರುಕಟ್ಟೆಗೆ ತೆಗೆದುಕೊಂಡು ಹೋದ ಹೂವನ್ನು ಅಲ್ಲೇ ಬಿಟ್ಟು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಟನ್‌ಗಟ್ಟಲೇ ಹೂವನ್ನು ಮಾರುಕಟ್ಟೆಯ ನೆಲದ ಮೇಲೆ ಸುರಿಯುವಂತಾಗಿದೆ.

from India & World News in Kannada | VK Polls https://ift.tt/3EiMbaT

ಸಬ್‌​ ಇನ್ಸ್‌ಪೆಕ್ಟರ್‌ಗಳಿಗೆ ಗೋಹತ್ಯೆ ನಿಷೇಧ ಕಾಯಿದೆ ಸಂಬಂಧ ತರಬೇತಿ ನೀಡಲು ಚಿಂತನೆ: ಸಚಿವ ಪ್ರಭು ಚವ್ಹಾಣ್‌

'ಎಫ್‌ಐಆರ್‌ ದಾಖಲಿಸುವ ಸಂದರ್ಭದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಅಧಿನಿಯಮ ಪಾಲನೆ ಮಾಡುವ ಸಂಬಂಧ ಪ್ರತಿ ಜಿಲ್ಲೆಯಲ್ಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವುದರಿಂದ ಗೋಹತ್ಯೆ ನಿಷೇಧ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಹೇಳಿದರು.

from India & World News in Kannada | VK Polls https://ift.tt/MlAquLg

Virat Kohli: ವಿರಾಟ್‌ ಕೊಹ್ಲಿ ಮಾಡುತ್ತಿರುವ ಬಹುದೊಡ್ಡ ತಪ್ಪನ್ನು ಗುರುತಿಸಿದ ವೀರೇಂದ್ರ ಸೆಹ್ವಾಗ್‌!

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಭಾರತ ತಂಡದಲ್ಲಿ ಇರುವ ಕೆಲ ಆಟಗಾರರು ಮಾಡುತ್ತಿರುವ ಬಹುದೊಡ್ಡ ತಪ್ಪಿನ ಬಗ್ಗೆ ಡ್ಯಾಷಿಂಗ್‌ ಓಪನರ್‌ ಖ್ಯಾತಿಯ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಬೆಳಕು ಚೆಲ್ಲಿದ್ದಾರೆ. ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಅವರನ್ನು ಉದಾಹರಣೆ ಕೊಟ್ಟು, ಭಾರತ ತಂಡದ ಈಗಿನ ಆಟಗಾರರಿಗೆ ಮಹತ್ವದ ಸಲಹೆ ಒಂದನ್ನು ನೀಡಿದ್ದಾರೆ. ಇತ್ತೀಚೆಗೆ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಬಿದ್ದರು. ಈ ಬಗ್ಗೆ ಮಾತನಾಡುವ ವೇಳೆ ಸೆಹ್ವಾಗ್ ಯುವ ಆಟಗಾರರಿಗೆ ಮಹತ್ವದ ಸಲಹೆ ನೀಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/e56xJ10

Karnataka Lokayukta | ಮತ್ತೆ ಲೋಕಾಯುಕ್ತ ಬೇಟೆ ಶುರು: ಲಂಚ ಸ್ವೀಕರಿಸುತ್ತಿದ್ದ ಕೆಎಎಸ್‌ ಅಧಿಕಾರಿ ಬಂಧನ

Lokayukta first raid after ACB abolition: ವಸತಿ ನಿವೇಶನಗಳ ಜಾಗಕ್ಕೆ ವಾಣಿಜ್ಯ ಉದ್ದೇಶದ ಖಾತಾ (Khata) ಮಾಡಿಕೊಡಲು 4 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ (BBMP) ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಎಸ್‌.ಎಂ.ಶ್ರೀನಿವಾಸ್‌ (ಕೆಎಎಸ್‌), ಎಫ್‌ಡಿಎ ಉಮೇಶ್‌ ಅಧಿವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ನಾಗರಬಾವಿ ನಿವಾಸಿಯೊಬ್ಬರು ತಮ್ಮ ನಾಲ್ಕು ವಸತಿ ನಿವೇಶನಗಳ ಜಾಗಕ್ಕೆ ವಾಣಿಜ್ಯ ಖಾತಾ ಮಾಡಿಸಿಕೊಳ್ಳಲು ನಿರ್ಧರಿಸಿ ಪಾಲಿಕೆಯ ಪಶ್ಚಿಮ ವಿಭಾಗಕ್ಕೆ ಮನವಿ ಸಲ್ಲಿಸಿದ್ದರು

from India & World News in Kannada | VK Polls https://ift.tt/bJH1Gl8

ಇಂದಿನಿಂದ ವಿಧಾನ ಮಂಡಲ ಅಧಿವೇಶನ; ಕೋಲಾಹಲಕ್ಕೆ ವ್ಯರ್ಥವಾಗರಲಿ ಕಲಾಪ!

ಈ ಬಾರಿ ಸದನದಲ್ಲಿ ಪ್ರಸ್ತಾಪಿಸಲು ಪ್ರತಿಪಕ್ಷದ ಬತ್ತಳಿಕೆಯಲ್ಲಿ ಹಲವು ಅಸ್ತ್ರಗಳಿವೆ. ಗುತ್ತಿಗೆದಾರರ ಸಂಘದ ಆರೋಪ, ಪಿಎಸ್‌ಐ ಹಗರಣ ನಾನಾ ಇಲಾಖೆಗಳ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮದ ಆಪಾದನೆ ಕೇಳಿ ಬಂದಿರುವುದು ಈ ಪೈಕಿ ಪ್ರಮುಖವಾಗಿವೆ. ಈ ವಿಚಾರಗಳ ಬಗ್ಗೆ ಚರ್ಚಿಸಲು ಪ್ರತಿಪಕ್ಷ ಕಾಂಗ್ರೆಸ್‌ ಈಗಾಗಲೇ ಸಜ್ಜಾಗಿದೆ. ಇದರ ಕುರಿತು ಆರೋಪ, ಪ್ರತ್ಯಾರೋಪಗಳ ಸುರಿಮಳೆಯಾಗಿ ಸದನದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

from India & World News in Kannada | VK Polls https://ift.tt/927EOFH

ತುಮಕೂರಿನಲ್ಲಿ ಡಲ್‌ ಹೊಡೆದ 'ಸಖಿ' ಕೇಂದ್ರ: ದೌರ್ಜನ್ಯಕ್ಕೊಳಗಾದವರಿಗೆ ನೆರವಾಗದ ಸೆಂಟರ್‌

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ 2019ನೇ ಸಾಲಿನ ಡಿಸೆಂಬರ್‌ 2ರಂದು ಸಖಿ ಕೇಂದ್ರ ಆರಂಭಗೊಂಡಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಕೇಂದ್ರವನ್ನು ನಡೆಸುತ್ತಿದೆ. ಮಹಿಳೆಯರಿಗೆ ಕೇಂದ್ರದ ಮೂಲಕ ಉಚಿತವಾಗಿ ಎಲ್ಲ ರೀತಿಯಲ್ಲೂ ಸಹಾಯ ನೆರವು ನೀಡುವುದು ಈ ಕೇಂದ್ರದ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಸಾಂಸಾರಿಕ ಜೀವನದಲ್ಲಿ ಪತಿ-ಪತ್ನಿ ನಡುವೆ ಮನಸ್ತಾಪಗಳು ಹೆಚ್ಚಾಗಿ ಪತ್ನಿಯಿಂದ ದೌರ್ಜನ್ಯಕ್ಕೆ ಒಳಗಾದವರು ಮಾಹಿತಿ ಕೊರತೆಯಿಂದ ದಿಕ್ಕು ತೋಚದಂತಾಗಿದ್ದಾರೆ.

from India & World News in Kannada | VK Polls https://ift.tt/u3jK1Yk

ಬ್ಯಾಂಕ್ ಆಫ್ ಬರೋಡಾದಲ್ಲಿ ವಂಚನೆ: ಪತ್ನಿ ಹೆಸರಿಗೆ ₹2.69 ಕೋಟಿ ವರ್ಗಾಯಿಸಿಕೊಂಡ ಅಧಿಕಾರಿ!

ಆಂಧ್ರಪ್ರದೇಶ ಮೂಲದ ಕುಮಾರ ಬೋನಾಲ ಎಂಬಾತ ಕಳೆದ ಏಪ್ರಿಲ್ 7ರಿಂದ ಸೆಪ್ಟೆಂಬರ್ 5ರ ನಡುವೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಬ್ಯಾಂಕ್ ಸಿಬ್ಬಂದಿಯ ಲಾಗಿನ್ ಅನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು, ಆಂಧ್ರದ ಚಿರಲಾದ ಎಸ್ಬಿಐನಲ್ಲಿ ಖಾತೆ ಹೊಂದಿರುವ ತನ್ನ ಪತ್ನಿ ರೇವತಿ ಗೊರ್ರೆಯ ಖಾತೆಗೆ 2.69 ಕೋಟಿ ರೂ. ಹಣ ವರ್ಗಾವಣೆ ಮಾಡಿ ಬ್ಯಾಂಕಿಗೆ ವಂಚನೆ ಮಾಡಿದ್ದಾನೆ.

from India & World News in Kannada | VK Polls https://ift.tt/0U7s8GB

Ayodhya | ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಗೆ ಕರ್ನಾಟಕದ ಭಕ್ತರಿಂದ 'ಸ್ವರ್ಣ ಶಿಖರ'

Golden Shikhara from Karnataka: ಅಯೋಧ್ಯೆ ರಾಮ ಮಂದಿರದ (Ayodhya Ram Temple) ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕೆನ್ನುವ ನಾಡಿನ ಅಸಂಖ್ಯ ಭಕ್ತರ ಇಂಗಿತವನ್ನು ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಂಡಿಸಿದರು. ಆರಂಭದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜಿಎಸ್‌ಟಿ ವೆಚ್ಚ, ರಾಯಲ್ಟಿ ಸಹಿತ ನಾನಾ ಕಾರಣಗಳಿಂದ ನಿರ್ಮಾಣ ವೆಚ್ಚ 1,300 ಕೋಟಿ ರೂ. ತಗುಲಬಹುದೆಂದು ಅಂದಾಜಿಸಲಾಗಿದೆ.

from India & World News in Kannada | VK Polls https://ift.tt/SKfUoXM

SL vs PAK: ಪಾಕ್‌ ಹೆಡೆಮುರಿ ಕಟ್ಟಿ 6ನೇ ಬಾರಿ ಏಷ್ಯಾ ಕಪ್‌ ಗೆದ್ದ ಶ್ರೀಲಂಕಾ!

Sri Lanka vs Pakistan Asia Cup 2022 Final Highlights: ಒತ್ತಡದ ಸಮಯದಲ್ಲೂ ದಿಟ್ಟ ಆಟವಾಡಿ ಸೋಲಿನ ದವಡೆಯಿಂದ ಹೊರಬಂದ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್‌ ಫೈನಲ್‌ನಲ್ಲಿ 23 ರನ್‌ಗಳ ಜಯ ದಾಖಲಿಸುವ ಮೂಲಕ ಏಷ್ಯಾ ಕಪ್‌ ಟೂರ್ನಿಯ ಇತಿಹಾಸದಲ್ಲಿ ತನ್ನ ಆರನೇ ಟ್ರೋಫಿ ಮುಡಿಗೇರಿಸಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ಆರಮಭಿಕ ಆಘಾತ ಅನುಭವಿದರೂ ಅದ್ಭುತವಾಗಿ ಚೇತರಿಸಿದ ಶ್ರೀಲಂಕಾ ತಂಡ ಎದುರಾಳಿಗೆ 170 ರನ್‌ಗಳ ಕಠಿಣ ಗುರಿ ನೀಡಿ, ಅದರ ಬೆನ್ನಲ್ಲೇ ಮನಮೋಹಕ ಬೌಲಿಂಗ್ ಪ್ರದರ್ಶನದೊಂದಿಗೆ ಟ್ರೋಫಿ ಎತ್ತಿ ಹಿಡಿಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/kncH8Xt

ಅರಣ್ಯ ಇಲಾಖೆ ಹುತಾತ್ಮ ಸಿಬ್ಬಂದಿಯ ಪರಿಹಾರ ಮೊತ್ತ ₹30 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಳ: ಬೊಮ್ಮಾಯಿ

ಈ ಹಿಂದೆ 20 ಲಕ್ಷ ರೂ. ಇದ್ದ ಪರಿಹಾರದ ಮೊತ್ತವನ್ನು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು 30 ಲಕ್ಷ ರೂ.ಗೆ ಹೆಚ್ಚಿಸಿದ್ದರು. ಹುತಾತ್ಮ ಸಿಬ್ಬಂದಿಯ ಕುಟುಂಬ ಸದಸ್ಯರ ನೇಮಕ, ಕಲ್ಯಾಣ ಎಲ್ಲವನ್ನೂ ಸರಕಾರ ಅತ್ಯಂತ ಸಹಾನುಭೂತಿಯಿಂದ ಮಾಡಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

from India & World News in Kannada | VK Polls https://ift.tt/fCj2sTF

Tejasvi Surya | 'ಸೂರ್ಯ'ನ ತಲುಪದ ಪಾರ್ಸೆಲ್‌, 'ಕೈ' ಕಾರ್ಯಕರ್ತರು ಕಳುಹಿಸಿದ 10 ದೋಸೆ ತಿಂದವರು ಯಾರು?

Congress sends dosas to Tejasvi Surya: ಆ ದೋಸೆಗಳು ನನಗಿಲ್ಲ ತಲುಪಿಲ್ಲ ಎಂದು ತೇಜಸ್ವಿ ಸೂರ್ಯ ಭಾನುವಾರ ಟ್ವೀಟಿಸಿದ್ದಾರೆ. 'ಮನೆಗೆ ಮಸಾಲೆ ದೋಸೆ (Masala dosa) ಕಳುಹಿಸುವುದಾಗಿ ನಿನ್ನೆ ಕಾಂಗ್ರೆಸ್‌ ಘೋಷಿಸಿತ್ತು. ಅದಾಗಲೇ 24 ತಾಸಿಗೂ ಹೆಚ್ಚು ಸಮಯ ಕಳೆದು ಹೋಗಿದೆ, ನನಗೆ ಅದು ಇನ್ನೂ ತಲುಪಿಲ್ಲ. ಅವರು ಇದರಲ್ಲೂ ಹಗರಣ ನಡೆಸಿದ್ದಾರೆ. ಒಂದು ದೋಸೆಯನ್ನು ಸರಿಯಾಗಿ ತಲುಪಿಸಲು ಆಗದವರು, ಉತ್ತರ ಆಡಳಿತವನ್ನು ಕೊಡುವ ಕನಸು ಕಾಣುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.

from India & World News in Kannada | VK Polls https://ift.tt/2DUm1Wh

ಒಳಚರಂಡಿಯ ಕೊಳಚೆಗೆ ಕಾರ್ಮಿಕರನ್ನು ಇಳಿಸಿ ಸ್ವಚ್ಛತೆ: ಅಮೃತ ಕನ್‌ಸ್ಟ್ರಕ್ಷನ್‌ ವಿರುದ್ಧ ಎಫ್‌ಐಆರ್‌

ಶಿವಾಜಿನಗರದ ಇನ್‌ಫೆಂಟ್ರಿ ರಸ್ತೆಯಲ್ಲಿ ಯಾವುದೇ ಮ್ಯಾನ್‌ಹೋಲ್‌ ಇಲ್ಲ. ಫುಟ್‌ಪಾತ್‌ನಲ್ಲಿನ ಒಳಚರಂಡಿ ಕೊಳವೆ ಸೋರಿಕೆಯಾಗಿ ಕೊಳಚೆ ನೀರು ಹೊರಬರುತ್ತಿತ್ತು. ಇದರಿಂದ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಿಗೆ ತೊಂದರೆಯಾಗುತ್ತಿತ್ತು. ಇದನ್ನು ಕಾರ್ಮಿಕರು ಸ್ವಚ್ಛಗೊಳಿಸಿದ್ದಾರೆ ಎಂದು ಬೆಂಗಳೂರು ಸ್ಮಾರ್ಟ್‌ ಸಿಟಿ ಕಂಪನಿಯ ಮುಖ್ಯ ಎಂಜಿನಿಯರ್‌ ವಿನಾಯಕ್‌ ತಿಳಿಸಿದರು.

from India & World News in Kannada | VK Polls https://ift.tt/bS1M23F

ಪಟ್ಟಣ ಕೇಂದ್ರಕ್ಕೂ ವೋಲ್ವೊ ಬಸ್‌; ಮೈಸೂರು ನಗರ ಕೇಂದ್ರದಿಂದ 22 ಮಾರ್ಗಗಳಲ್ಲಿ ಸಂಚಾರ

ಮೈಸೂರಿನ 22 ಮಾರ್ಗಗಳಲ್ಲಿ ಹವಾನಿಯಂತ್ರಿತ ಸಿಟಿ ವೋಲ್ವೊ ಬಸ್‌ ಸೇವೆ ಪ್ರಾರಂಭಿಸಲಾಗಿದೆ. ವಿನೂತನ ಹಾಗೂ ಪ್ರಯಾಣಿಕರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗ ಜಾರಿಗೆ ತಂದಿದೆ. ಈಗಾಗಲೇ ಪ್ರಾಯೋಗಿಕವಾಗಿ ಸೇವೆ ಆರಂಭಿಸಲಾಗಿದ್ದು, ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ.

from India & World News in Kannada | VK Polls https://ift.tt/KpEc8vn

ತೊಣಚಿಕೊಪ್ಪಲು ಭಾಗದಲ್ಲಿ ತೊಳಲಾಟ; ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಹಳ್ಳ, ಯಾಮಾರಿದರೆ ಅವಘಡ!

ಮಳೆ ಸುರಿದಾಗ ಗುಂಡಿಗಳಲ್ಲಿ ನೀರು ನಿಂತು ರಸ್ತೆ, ಹಳ್ಳ ತಿಳಿಯದಂತಾಗಿ ವಾಹನ ಸವಾರರು ಪರದಾಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಅರಿಯದೆ ಇದರೊಳಗೆ ಚಕ್ರ ಇಳಿಸಿ ನಿಯಂತ್ರಣ ಕಳೆದುಕೊಂಡಿದ್ದೂ ಇದೆ. ಜತೆಗೆ ವಾಹನದ ಬಿಡಿ ಭಾಗಗಳು ಹಾನಿಗೊಳಗಾಗುತ್ತಿವೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳಿಂದ ತುಂಬಿ ಹೋಗಿದ್ದು, ಮಳೆಗಾಲದಲ್ಲಿ ರಸ್ತೆ ಯಾವುದು, ಹಳ್ಳ ಯಾವುದು ತಿಳಿಯದಾಗಿದೆ.

from India & World News in Kannada | VK Polls https://ift.tt/Qu8JdDV

ವಿಜಯನಗರದಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ದುರಂತ; ಕ್ರೇನ್ ಪಲ್ಟಿ, ಯುವಕ ಸಾವು

ಹೊಸಪೇಟೆಯ ಟಿಬಿ ಡ್ಯಾಂ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ 34 ಅಡಿ ಎತ್ತರದ ಗಣಪತಿ ಮೂರ್ತಿ 11ನೇ‌ ದಿನ ವಿಸರ್ಜನೆ ವೇಳೆ ಅವಘಡ ನಡೆದಿದ್ದು, ಡ್ಯಾಂ ಪ್ರದೇಶದ ನಿವಾಸಿಗಳಾದ ಅಶೋಕ್ (18) ಸಾವು, ಸಾಯಿ ನಿಖಿಲ್ ( 18) ಗಾಯಗೊಂಡಿರುವ ಯುವಕ.

from India & World News in Kannada | VK Polls https://ift.tt/8AP0Sk1

ED Raid | ಕೋಲ್ಕೊತಾ | ಗೇಮಿಂಗ್‌ ಆ್ಯಪ್‌ ವಂಚನೆ: ಇ.ಡಿ ದಾಳಿಯಲ್ಲಿ 17 ಕೋಟಿ ರೂಪಾಯಿ ವಶ, ಚೀನಾ ಲೋನ್‌ ಆ್ಯಪ್‌ ನಂಟಿನ ಶಂಕೆ

Kolkata gaming app scam: ಇತ್ತೀಚೆಗೆ ಸೆರೆಯಾದ ಚೀನಾ ಮೂಲದ ‘ಸಾಲದ ಆ್ಯಪ್‌’(loan app) ಆರೋಪಿಗಳಿಗೂ ಹಾಗೂ ಗೇಮಿಂಗ್‌ ಆ್ಯಪ್‌ಗೂ ಇರುವ ನಂಟಿನ ಬಗ್ಗೆ ಇ.ಡಿ ಶೋಧ (ED Raid) ನಡೆಸುತ್ತಿದೆ. ಪ್ರಾರಂಭದಲ್ಲಿ ಆ್ಯಪ್‌ ಬಳಕೆದಾರರರಿಗೆ ಠೇವಣಿ ಮೇಲೆ ಭಾರಿ ಕಮಿಷನ್‌ ನೀಡುವ ಆಮಿಷವೊಡ್ಡಿ ದೊಡ್ಡ ಮೊತ್ತದಲ್ಲಿ ಹಣ ಸಂಗ್ರಹಿಸಿ, ವಾಪಸ್‌ ನೀಡದೇ ವಂಚನೆ ಎಸೆಗಲಾಗಿದೆ. ಈ ಬಗ್ಗೆ ಅನೇಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಇ.ಡಿ ತನಿಖೆಗೆ ಮುಂದಾಗಿದೆ. ಫೆಡರಲ್‌ ಬ್ಯಾಂಕ್‌ ಅಧಿಕಾರಿಗಳು ಕೂಡ ಕೋಲ್ಕೊತಾ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಗೇಮಿಂಗ್‌ ಆ್ಯಪ್‌ಗಳ ಖಾತೆಯಲ್ಲಿನ ವ್ಯವಹಾರದಲ್ಲಿ ಸಾಕಷ್ಟು ಗೋಲ್‌ಮಾಲ್‌ ನಡೆದಿದೆ ಎಂದಿತ್ತು.

from India & World News in Kannada | VK Polls https://ift.tt/Y5eps9n

T20 World Cup 2022: ಟಿ20 ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡ ಹೆಸರಿಸಿದ ಆಶಿಶ್‌ ನೆಹ್ರಾ!

Ashish Nehra announces India's T20 World Cup 2022 squad: ಮುಂಬರುವ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ತಮ್ಮ ನೆಚ್ಚಿನ 15 ಸದಸ್ಯರ ಭಾರತ ತಂಡವನ್ನು ಮಾಜಿ ವೇಗಿ ಆಶಿಶ್‌ ನೆಹ್ರಾ ಪ್ರಕಟಿಸಿದ್ದಾರೆ. ಆದರೆ, 2022ರ ಐಪಿಎಲ್‌ ಚಾಂಪಿಯನ್ಸ್‌ ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಆಡಿದ್ದ ಮೊಹಮ್ಮದ್‌ ಶಮಿ ಅವರನ್ನು ನೆಹ್ರಾ ತಮ್ಮ ವಿಶ್ವಕಪ್‌ ತಂಡದಿಂದ ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಹಿರಿಯ ವೇಗಿಯನ್ನು ಕೈ ಬಿಡಲು ಕಾರಣವೇನೆಂಬುದನ್ನೂ ಕೂಡ ಇದೇ ವೇಳೆ ಗುಜರಾತ್‌ ಟೈಟನ್ಸ್‌ ಹೆಡ್‌ ಕೋಚ್‌ ಬಹಿರಂಗಪಡಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/jsEZfLu

ಬಿಜೆಪಿ ಸರ್ಕಾರದಲ್ಲಿ ಆಡಳಿತ ಪಕ್ಷದವ್ರಿಗೊಂದು ನ್ಯಾಯ, ಸ್ವಾಮೀಜಿಗಳಿಗೊಂದು ನ್ಯಾಯ ನೀತಿ: ಬೇಳೂರು ಗೋಪಾಲಕೃಷ್ಣ

ಇತ್ತೀಚೆಗೆ ಸ್ವಾಮೀಜಿಯೊಬ್ಬರನ್ನು ಪೋಕ್ಸೊ ಪ್ರಕರಣದಲ್ಲಿ ಬಂಧಿಸಲಾಗಿದೆ. ಸ್ವಾಮೀಜಿ ಮಾಡಿರುವುದು ತಪ್ಪೇ ಆದರೂ ಅದೇ ರೀತಿ ಐಪಿಸಿ 164 ಕಲಂನಡಿ ಪ್ರಕರಣ ದಾಖಲಾದರೂ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರನ್ನು ಬಂಧಿಸಲಿಲ್ಲ. ಈ ಹಿಂದೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಶಾಸಕ ಹರತಾಳು ಹಾಲಪ್ಪ ಅವರನ್ನು ಬಂಧಿಸಿದರೂ, ನಾನಾ ನೆಪ ಹೇಳಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆಪಾದಿಸಿದರು.

from India & World News in Kannada | VK Polls https://ift.tt/u5Y8qAz

Hasanamba Temple | ಅಕ್ಟೋಬರ್‌ 13ರಿಂದ ಹಾಸನಾಂಬ ದರ್ಶನ: ಸಿಎಂ ಆಹ್ವಾನಿಸಲು ನಿರ್ಧಾರ

Hasanamba Temple: ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪೂರ್ವ ತಯಾರಿ ಕುರಿತು ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ಅರ್ಚನಾ ಹಾಗೂ ಎಸ್‌ಪಿ ಹರಿರಾಂ ಶಂಕರ್‌ ಹಾಗೂ ಅಧಿಕಾರಿಗಳು ಶನಿವಾರ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದರು. ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ‘‘ಅ.13ರಿಂದ 27ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಅ.13 ಮೊದಲ ದಿನ, ಅ.27 ಕೊನೆಯ ದಿನ ಹಾಗೂ ಅ.25 ರಂದು ಸೂರ್ಯ ಗ್ರಹಣದ ಪ್ರಯುಕ್ತ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ,’’ ಎಂದು ತಿಳಿಸಿದರು.

from India & World News in Kannada | VK Polls https://ift.tt/QWgUVpc

BJP Janaspandana | ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಜನಸ್ಪಂದನಾ: ದೊಡ್ಡಬಳ್ಳಾಪುರದಲ್ಲಿ ಸರಕಾರದ ಸಾಧನಾ ಸಮಾವೇಶಕ್ಕೆ ವೇದಿಕೆ ಸಜ್ಜು

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ನಾಲ್ಕೈದು ಜಿಲ್ಲೆಗಳಿಂದ 3 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು, 5 ಸಾವಿರ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ದೊಡ್ಡಬಳ್ಳಾಪುರ-ದೇವನಹಳ್ಳಿ ರಸ್ತೆಯ ರಘುನಾಥಪುರದಲ್ಲಿ ವೇದಿಕೆ ಸಜ್ಜುಗೊಳಿಸಲಾಗಿದ್ದು, ಕಾರ್ಯಕ್ರಮ ನಡೆಯುವ ಸ್ಥಳದಿಂದ ಎರಡೂ ಕಡೆ 2 ಕಿ.ಮೀ ದೂರದವರೆಗೆ ಬ್ಯಾನರ್‌, ಫ್ಲೆಕ್ಸ್‌ ಅಬ್ಬರ ಎಲ್ಲರ ಗಮನ ಸೆಳೆಯುತ್ತಿದೆ. ಜತೆಗೆ, ಬರುವ ಪ್ರತಿಯೊಬ್ಬರಿಗೆ ಊಟಕ್ಕೆಂದು 300 ಕೌಂಟರ್‌, ಪಾರ್ಕಿಂಗ್‌ಗೆಂದು 10 ಕಡೆ ಸ್ಥಳ ನಿಗದಿ, 200 ತಾತ್ಕಾಲಿಕ ಶೌಚಾಲಯ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.

from India & World News in Kannada | VK Polls https://ift.tt/yVMX4Pv

Karnataka ACB: ಎಸಿಬಿ ರದ್ದು, ಲೋಕಾಯುಕ್ತ ಬಲವರ್ಧನೆ ಹೈಕೋರ್ಟ್‌ ತೀರ್ಪು ಪಾಲಿಸಿದ ಸರಕಾರ

Lokayukta Power Restored: 2016ರಲ್ಲಿ ಲೋಕಾಯುಕ್ತ ಪೊಲೀಸ್‌ ವಿಭಾಗದ ಠಾಣಾ ಅಧಿಕಾರ ಮೊಟಕುಗೊಳಿಸಿದ್ದ ಅಂದಿನ ಸರಕಾರ ಪರ್ಯಾಯವಾಗಿ ಎಸಿಬಿ (ACB) ಸ್ಥಾಪಿಸಿತ್ತು. ಸರಕಾರದ ಈ ಆದೇಶ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ (ಎನ್‌ಜಿಓ) ಸೇರಿ ಮತ್ತಿತರರು ಹೈಕೋರ್ಟ್‌ ಮೊರೆಹೋಗಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಎಸಿಬಿ ಸ್ಥಾಪನೆ ರದ್ದುಗೊಳಿಸಿತ್ತು. ಜತೆಗೆ ಎಸಿಬಿ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆಗಸ್ಟ್‌ 11ರಂದು ತೀರ್ಪು ನೀಡಿತ್ತು. ಎಸಿಬಿಯಲ್ಲಿರುವ ತನಿಖಾ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವಂತೆ ಆದೇಶಿಸಲಾಗಿದೆ.

from India & World News in Kannada | VK Polls https://ift.tt/c3OQse8

Ankola-Yellapur | ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಕುಸಿತ: ಸ್ಥಳದಲ್ಲಿ ಪೊಲೀಸರು ಠಿಕಾಣಿ

Highway 63 Bridge Collapse: ಯಲ್ಲಾಪುರ-ಅಂಕೋಲಾ (Ankola-Yellapur) ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರಿಸುತ್ತವೆ. ಹುಬ್ಬಳ್ಳಿ (Hubballi) ಸೇರಿದಂತೆ ಬಹುತೇಕ ನಗರಗಳಿಂದ ಬರುವ ವಾಹನಗಳು ಇದೇ ಮಾರ್ಗವಾಗಿ ಬಂದು ಮಂಗಳೂರು, ಕಾರವಾರ (Karwar), ಗೋವಾಗಳಿಗೆ ಸಂಚರಿಸುತ್ತಾರೆ. ಇಂತಹ ಮುಖ್ಯ ಹೆದ್ದಾರಿಯಾಗಿದ್ದರೂ ಇಲಾಖೆಯವರ ಬೇಜವಬ್ದಾರಿಯಿಂದ ಸೇತುವೆ ಕುಸಿತಕ್ಕೆ (Bridge Collapse) ಕಾರಣವಾಗಿದೆ. ಆದರೂ ಕೂಡ ಅವರು ಆಗಮಿಸಿಲ್ಲಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ. ಪೊಲೀಸರು ಹಾಗೂ ಹೈವೇ ಪೊಲೀಸರು ಸ್ಥಳದಲ್ಲಿಯೇ ಕಾವಲು ಕಾಯುತ್ತಿದ್ದಾರೆ.

from India & World News in Kannada | VK Polls https://ift.tt/3h1bRWV

MUDA Scam | ಮಂಡ್ಯ | ಮುಡಾ ಹಣ ದುರುಪಯೋಗ: ಅಪರಾಧಿಗಳಿಗೆ ತಲಾ 1 ಕೋಟಿ ರೂ. ದಂಡ, 7 ವರ್ಷ ಜೈಲು

Mandya Urban Development Authority: ಮುಡಾ (MUDA) 5 ಕೋಟಿ ರೂ. ಠೇವಣಿ ಹಣ ದುರುಪಯೋಗ ಸಂಬಂಧ ಐವರು ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಮತ್ತು ತಲಾ 1 ಕೋಟಿ ರೂ. ದಂಡ ವಿಧಿಸಿ ಬೆಂಗಳೂರಿನ ಸಿಬಿಐ (CBI) ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಉದ್ಯಮಿ ಕೆಬ್ಬಳ್ಳಿ ಆನಂದ್‌, ನಾಗಲಿಂಗಸ್ವಾಮಿ, ಹೆಮ್ಮನಹಳ್ಳಿ ಚಂದ್ರಶೇಖರ್‌, ಮುಡಾ ಎಫ್‌ಡಿಎ ಎಚ್‌.ಕೆ.ನಾಗರಾಜು ಮತ್ತು ಕೆ.ಬಿ.ಹರ್ಷನ್‌ ಶಿಕ್ಷೆಗೊಳಗಾದವರು. ಪ್ರಕರಣದಲ್ಲಿ ಮುಡಾದ ಆಗಿನ ಆಯುಕ್ತ ಡಾ.ಎಚ್‌.ಎಸ್‌.ಶಿವರಾಮು ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಮಂಡ್ಯದ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ 2013 ಜುಲೈ 5ರಂದು ಪ್ರಕರಣ ದಾಖಲಾಗಿತ್ತು.

from India & World News in Kannada | VK Polls https://ift.tt/Do6MRjv

Rice Price | ಎರಡು ತಿಂಗಳಲ್ಲಿ ಅಕ್ಕಿ ದರ 8ರಿಂದ 10 ರೂ. ಏರಿಕೆ: ಬಾಂಗ್ಲಾ, ಶ್ರೀಲಂಕಾಗೆ ಹೆಚ್ಚಿದ ರಫ್ತು

Rise of Rice Price: ಬೇಡಿಕೆ ಬಂದ ಹಿನ್ನೆಲೆಯಲ್ಲಿ ಭಾರತದ ಅಕ್ಕಿಯನ್ನು ಹೊರ ರಾಷ್ಟ್ರಗಳಿಗೆ ರಫ್ತು (Export) ಮಾಡಲಾಯಿತು. ಜತೆಗೆ ಬಾಂಗ್ಲಾದಿಂದ (Bangladesh) ಚೀನಾಗೆ ಅಕ್ಕಿ ರಫ್ತಾಗುತ್ತಿರುವ ಬಗ್ಗೆ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆ (Rice shortage)ಉಂಟಾಗಿ, ಬೆಲೆ ಏರಿಕೆಗೆ ಕಾರಣವಾಗಿದೆ. ನವೆಂಬರ್‌ನಲ್ಲಿ ಭತ್ತದ ಹೊಸ ಬೆಳೆ ಬರಲಿದೆ. ಆದರೆ, ಅತಿವೃಷ್ಟಿಯಿಂದಾಗಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಭತ್ತದ ಉತ್ಪಾದನೆಯಾಗುವುದು ಅನುಮಾನ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಬೆಲೆ ಏರಿಕೆಗೆ ಜಿಎಸ್‌ಟಿ (GST) ಹೊರೆಯೂ ಕಾರಣ ಎನ್ನುತ್ತಾರೆ ವರ್ತಕರು.

from India & World News in Kannada | VK Polls https://ift.tt/iU5LaQK

PAK vs SL: ಚೆಂಡು ಸ್ಟಂಪ್‌ಗೆ ತಗುಲಿದರೂ ಔಟಾಗದ ಫಖಾರ್‌ ಝಮಾನ್‌! ವಿಡಿಯೋ ನೋಡಿ..

PAK vs SL: ಪ್ರಸ್ತುತ ನಡೆಯುತ್ತಿರುವ 2022ರ ಏಷ್ಯಾ ಕಪ್‌ ಟೂರ್ನಿಯು ನಿರ್ಣಾಯಕ ಹಂತ ತಲುಪಿದೆ. ಭಾನುವಾರ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಇದಕ್ಕೂ ಮುನ್ನ ಟೂರ್ನಿಯ ಸೂಪರ್‌-4ರ ಹಂತದ ಕೊನೆಯ ಪಂದ್ಯದಲ್ಲಿ ಈ ಎರಡೂ ತಂಡಗಳು ಶುಕ್ರವಾರ ಸೆಣಿಸಿದವು. ಫೈನಲ್‌ ಕದನಕ್ಕೆ ಈ ಎರಡೂ ತಂಡಗಳು ಅಭ್ಯಾಸ ನಡೆಸಲು ಈ ಪಂದ್ಯ ಅತ್ಯುತ್ತಮ ವೇದಿಕೆಯಾಯಿತು. ಅಂದಹಾಗೆ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಪಾಕಿಸ್ತಾನ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 19.1 ಓವರ್‌ಗಳಿಗೆ 121 ರನ್‌ಗಳಿಗೆ ಆಲ್‌ಔಟ್‌ ಆಯಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/SL6UwVg

Baby Elephant | ತಾಯಿಯನ್ನು ಕಳೆದುಕೊಂಡು ಅರಣ್ಯದಲ್ಲೇ ಅಲೆದಾಡುತ್ತಿದ್ದ ಆನೆ ಮರಿ: ಹಸು ಹಿಂಬಾಲಿಸಿ ಗ್ರಾಮಕ್ಕೆ

cauvery wildlife sanctuary: ಹಸು ಕಾಡಿನಲ್ಲಿ ಮೇಯಲು ಬಂದಾಗ ಅದನ್ನು ಹಿಂಬಾಲಿಸಿ ಬಂದ ಆನೆ ಮರಿಯ (Baby Elephant) ಪಾಲಿಗೆ ಅದೃಷ್ಟವೇ ಸರಿ ಎಂಬಂತಾಗಿದೆ. ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಆನೆ ಮರಿ ಆರೈಕೆಗೆ ಕಾವೇರಿ ವನ್ಯಜೀವಿಧಾಮದ ಉಪರಣ್ಯ ಸಂರಕ್ಷಣಾಧಿಕಾರಿ ನಂದೀಶ್‌ ಮುಂದಾಗಿದ್ದಾರೆ. ಮುತ್ತತ್ತಿ ರಸ್ತೆಯ ಭೂಹಳ್ಳಿ ಚೆಕ್‌ಪೋಸ್ಟ್‌ ಬಳಿಯಿಂದ ಮುತ್ತತ್ತಿಯ ಭೀಮೇಶ್ವರಿ ಕ್ಯಾಂಪ್‌ಗೆ (bheemeshwari camp) ಸ್ಥಳಾಂತರಿಸಿ ಆನೆ ಮರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದರು. ಆನೆ ಮರಿಗೆ ಒಂದು ತಿಂಗಳಾಗಿದೆ. 5 ತಿಂಗಳು ಆರೈಕೆ ಮಾಡಬೇಕಿದೆ.

from India & World News in Kannada | VK Polls https://ift.tt/T8fQIae

Congress | ಅಖಾಡಕ್ಕೆ ಎಂ.ಬಿ ಪಾಟೀಲ್‌: ಲಿಂಗಾಯತರ ಮನಗೆಲ್ಲಲು ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌

ಸಿದ್ದರಾಮೋತ್ಸವದ ಮೂಲಕ ಕುರುಬ ಹಾಗೂ ಮುಸ್ಲಿಂ ಸಮುದಾಯದ ಒಗ್ಗಟ್ಟು ಪ್ರದರ್ಶನ ಮಾಡುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಇದೀಗ ಲಿಂಗಾಯತ ಸಮುದಾಯದ ಮನಗೆಲ್ಲುವ ಪ್ರಯತ್ನದಲ್ಲಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿರುವ ಲಿಂಗಾಯತ ಸಮುದಾಯವನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮುಂಚೂಣಿಗೆ ಬಂದಿದ್ದಾರೆ.

from India & World News in Kannada | VK Polls https://ift.tt/i3RK807

ಕರಾವಳಿಯಲ್ಲಿ ಸಂಭ್ರಮದ ಮೊಂತಿ ಫೆಸ್ಟ್: ಮಹಾಮಾತೆ ಮೇರಿಯಮ್ಮನ ಜನ್ಮದಿನವನ್ನು ತೆನೆಹಬ್ಬವಾಗಿ ಆಚರಿಸಿದ ಕ್ರೈಸ್ತ ಬಾಂಧವರು

ದೇವಪುತ್ರ ಏಸುಕ್ರಿಸ್ತರಿಗೆ ಭೂಮಿಯ ಅವತಾರಕ್ಕೆ ಅವಕಾಶ ಕಲ್ಪಿಸಿದ ಮಹಾಮಾತೆ ಮೇರಿಯಮ್ಮನ ಜನ್ಮದಿನವನ್ನು ಕರಾವಳಿ ಕ್ರೈಸ್ತರು ಗುರುವಾರ ತೆನೆ ಹಬ್ಬವಾಗಿ, ಕುಟುಂಬ ಹಬ್ಬವಾಗಿ ಆಚರಿಸಿದರು. ಎಲ್ಲಾ ಚರ್ಚ್ಗಳಲ್ಲಿ ಭತ್ತದ ತೆನೆಗಳ ಪವಿತ್ರೀಕರಣ, ಪುಷ್ಪಾರ್ಚನೆ, ದಿವ್ಯ ಬಲಿಪೂಜೆ ನಡೆದಿದ್ದು, ಮನೆ-ಮನೆಗಳಲ್ಲಿ ಕ್ರೈಸ್ತ ಬಾಂಧವರು ಆಬಾಲವೃದ್ಧರಾದಿಯಾಗಿ ಭಾಗವಹಿಸಿ ಸಂಭ್ರಮಿಸಿದರು.

from India & World News in Kannada | VK Polls https://ift.tt/0o6I1iS

PM Janaushadhi Yojana | ಬೇಡಿಕೆಯ ಜನೌಷಧವೇ ಸಿಗುತ್ತಿಲ್ಲ: ಮೆಡಿಕಲ್‌ ಲಾಬಿ ಮುಂದೆ ಯೋಜನೆ ಮಣ್ಣುಪಾಲು..?

ಭಾರಿ ಮಹತ್ವಾಕಾಂಕ್ಷೆಯೊಂದಿಗೆ ಆರಂಭಗೊಂಡ ಜನೌಷಧ ಕೇಂದ್ರಗಳಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ(ಬಿಪಿ)ದಂತಹ ಕಾಯಿಲೆಗಳಿಗೆ ಅಗತ್ಯವಾಗಿ ಬೇಕಾಗಿರುವ ಔಷಧಗಳೇ ಲಭ್ಯವಾಗುತ್ತಿಲ್ಲ. 1,650 ಔಷಧಗಳಲ್ಲಿ 650-700 ಔಷಧಗಳು ಮಾತ್ರ ಲಭ್ಯವಿದ್ದು, ಈ ಪೈಕಿ ಬಹುಬೇಡಿಕೆಯ ಔಷಧಗಳು ನಾಲ್ಕು ತಿಂಗಳಿನಿಂದ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಪರಿಣಾಮ, ಕಡಿಮೆ ಬೆಲೆಯಲ್ಲಿ ಔಷಧಗಳು ಲಭ್ಯವಾಗಬೇಕು ಎಂಬ ಕಾರಣಕ್ಕೆ 2008ರಲ್ಲಿ ಆರಂಭಗೊಂಡ 'ಜನೌಷಧ ಯೋಜನೆ'ಯು ಮೆಡಿಕಲ್‌ ಲಾಬಿಗೆ ಮಣಿಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.

from India & World News in Kannada | VK Polls https://ift.tt/qBMwCnI

ದ.ಕ.ದಲ್ಲಿ ಮರಳುಗಾರಿಕೆ ನಿಷೇಧಕ್ಕೆ ತಡೆ: ಡಿಸಿ ಆದೇಶಕ್ಕೆ ಹೈಕೋರ್ಟ್‌ ರೆಡ್‌ ಸಿಗ್ನಲ್‌

ಉಡುಪಿ ಜಿಲ್ಲೆಯ ಸಿಆರ್‌ಝೆಡ್‌ (ಕರಾವಳಿ ನಿಯಂತ್ರಣ ವಲಯ) ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಿ ಹಸಿರು ಪೀಠ (ಎನ್‌ಜಿಟಿ) ಆದೇಶವಿದೆ. ಇದೇ ಆಧಾರ ಮೇಲೆ ದ.ಕ. ಜಿಲ್ಲೆಯಲ್ಲೂ ಸಿಆರ್‌ಝೆಡ್‌ನಲ್ಲೂ ಮರಳುಗಾರಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಇದೀಗ ತಡೆ ನೀಡುವಂತೆ ಮರಳುಗಾರರು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಹೈಕೋರ್ಟ್‌ ಜಿಲ್ಲಾಧಿಕಾರಿ ಆದೇಶಕ್ಕೆ ಮಂಗಳವಾರ ತಡೆ ನೀಡಿದೆ.

from India & World News in Kannada | VK Polls https://ift.tt/F7QYmSb

Rain Damage | ನಿಲ್ಲದ ಮಳೆಗೆ ಜನಜೀವನ ಅಸ್ತವ್ಯಸ್ತ: ಹೊಲ-ಗದ್ದೆಗಳಿಗೆ ನುಗ್ಗಿದ ನೀರು, ಅಪಾರ ನಷ್ಟ

ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮಳೆ ಜಿಲ್ಲೆಯಾದ್ಯಂತ ಅವಾಂತರ ಸೃಷ್ಟಿಸಿದೆ. ಕೃಷಿ, ಕೈಗಾರಿಕೆ ಸೇರಿದಂತೆ ದೈನಂದಿನ ಕೆಲಸಗಳಿಗೂ ಮಳೆ ಕಿರಿಕಿರಿ ಉಂಟು ಮಾಡುತ್ತಿದೆ. ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈಗಾಗಲೇ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಕೋಡಿಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಮನೆ, ಹೊಲ-ಗದ್ದೆ, ತೋಟಗಳಿಗೆ ನೀರು ನುಗ್ಗಿ ನಷ್ಟವುಂಟು ಮಾಡಿದೆ. ಕೆಲವೆಡೆ ಬಿತ್ತನೆ ಹಾಳಾಗಿದ್ದರೆ, ಇನ್ನೂ ಕೆಲವೆಡೆ ಬಿತ್ತನೆ ತಡವಾಗುತ್ತಿದೆ. ಮಳೆಯ ಆರ್ಭಟಕ್ಕೆ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ರಸ್ತೆಗಳಿಗೆ ಹಾನಿಯಾಗಿದೆ.

from India & World News in Kannada | VK Polls https://ift.tt/wr5f6gz

Queen Elizabeth II Dies: ಬ್ರಿಟನ್ ರಾಣಿ 96 ವರ್ಷದ ಎಲಿಜಬೆತ್‌-II ಇನ್ನಿಲ್ಲ!

Queen Elizabeth II Dies: ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಂದೇ ಪ್ರಸಿದ್ಧಿ ಹೊಂದಿದ್ದ ರಾಣಿ ಎಲಿಜಬೆತ್-II ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂಬ ಖ್ಯಾತಿ ಹೊಂದಿದ್ದರು. ಆದರೆ ಇದೀಗ ಅವರು ತಮ್ಮ 96​​ನೇ ವಯಸ್ಸಿನಲ್ಲಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಕ್ವೀನ್ ಎಲಿಜಬೆತ್ ಅವರ ನಿಧನಕ್ಕೆ ವಿಶ್ವಾದ್ಯಂತ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

from India & World News in Kannada | VK Polls https://ift.tt/UrDiPfg

Onam In Kerala | ಭಾವೈಕ್ಯತೆ ಸಾರುವ ಓಣಂ ಹಬ್ಬ: ಇಂದು ಕೇರಳದಲ್ಲಿ ಸಡಗರ, ಸಂಭ್ರಮದ ತಿರುಓಣಂ

ದೇವರ ನಾಡು ಎಂದೇ ಪ್ರಸಿದ್ಧಿ ಹೊಂದಿರುವ ಕೇರಳದಲ್ಲಿ ಈಗ ಓಣಂ ಸಂಭ್ರಮ ಮನೆಮಾಡಿದೆ. ಸೆ.8ರಂದು ತಿರು ಓಣಂ ಆಚರಣೆ ನಡೆಯಲಿದ್ದು, ನಾಡಿನಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಸಡಗರ, ಸಂಭ್ರಮದ ಆಚರಣೆ ನಡೆಯುತ್ತಿದೆ. ಓಣಂ ಹಬ್ಬದಲ್ಲಿ ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಹಬ್ಬದ ಅಂಗವಾಗಿ ನಡೆಯುವ ಆಟ, ಮನರಂಜನಾ ಕಾರ್ಯಕ್ರಮಗಳು, ಔತಣಗಳಲ್ಲಿ ಎಲ್ಲರೂ ಭಾಗವಹಿಸುತ್ತಾರೆ.

from India & World News in Kannada | VK Polls https://ift.tt/6pnRJOt

ಪಾಂಡವಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಕೆಂಪೇಗೌಡ ಕೊನೆಯುಸಿರು

ಪಾಂಡವಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಕೆಂಪೇಗೌಡ(96) ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಅಸುನೀಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ 3 ರಿಂದ 4 ಗಂಟೆಯೊಳಗೆ ಸ್ವಗ್ರಾಮ ಪಾಂಡವಪುರ ತಾಲೂಕು ಚಿನಕುರಳಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

from India & World News in Kannada | VK Polls https://ift.tt/phZA1Gt

Boat Race | ಜಲೋತ್ಸವದಲ್ಲಿ ಕೇರಳ ಪೊಲೀಸರ ಮೋಸದಾಟ; ದೋಣಿ ಓಟ ಸ್ಪರ್ಧೆಯಲ್ಲಿ ಬೋಟ್‌ ಮುಳುಗಿಸಿದ ಆರಕ್ಷಕರು..!

ಅಲಪ್ಪುಯ ಮನ್ನಾರ್‌ನಲ್ಲಿ ನಡೆದ 56ನೇ ಮಹಾತ್ಮಗಾಂಧಿ ಜಲೋತ್ಸವದಲ್ಲಿ ಪೊಲೀಸರು ಮೋಸದಾಟ ಮಾಡಿರುವುದಾಗಿ ದೂರಲಾಗಿದೆ. ನಿರಣಂ ಹೆಸರಿನ ಬೋಟ್‌ನಲ್ಲಿ ಸ್ಪರ್ಧೆಗಿಳಿದಿದ್ದ ಪೊಲೀಸರು ಚೆರುತನ ಎಂಬ ಬೋಟ್‌ನಲ್ಲಿ ಹುಟ್ಟು ಹಾಕುತ್ತಿದ್ದ ವ್ಯಕ್ತಿಯನ್ನು ಹುಟ್ಟುಗೋಲಿನಿಂದ ತಳ್ಳಿ ನೀರಿಗೆ ಬೀಳುವಂತೆ ಮಾಡಿದ್ದಾರೆ. ಮೋಸದಾಟವಾಡಿ ಪ್ರಥಮ ಸ್ಥಾನ ಪಡೆದ ಕೇರಳ ಪೊಲೀಸರ ಚೆರುತನ ಬೋಟ್‌ಗೆ ಟ್ರೋಫಿ ಮತ್ತು ಬಹುಮಾನ ನೀಡಬಾರದು ಎಂದು ದೋಣಿ ಓಟ ಪ್ರೇಮಿಗಳು ಒತ್ತಾಯಿಸಿದ್ದಾರೆ.

from India & World News in Kannada | VK Polls https://ift.tt/TNGapVh

Bengaluru Rain: ಸಿಲಿಕಾನ್ ಸಿಟಿಗೆ ಬೇಕಿದೆ 'ಬೂಸ್ಟ್‌': ಬ್ರಾಂಡ್‌ ಬೆಂಗಳೂರು ಉಳಿಸಲು ಕಸರತ್ತು

ಶತಮಾನದ ದಾಖಲೆ ಮಳೆಯಿಂದ ನಲುಗಿರುವ ಬೆಂಗಳೂರು ನಗರಕ್ಕೆ ಪರಿಹಾರವಾಗಿ ಕೇಂದ್ರದಿಂದ ವಿಶೇಷ ಅನುದಾನ ಕೋರಲಾಗುವುದು. ಈ ಸಂಬಂಧ ಪರಿಷ್ಕೃತ ಅಂದಾಜು ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಿಳಿಸಿದ್ದಾರೆ. ಮಳೆ ನಷ್ಟ ಅಂದಾಜು ಪರಿಶೀಲನೆಗೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರದ ಅಂತರ-ಸಚಿವಾಲಯ ತಂಡಕ್ಕೂ ಈ ಬಗ್ಗೆ ಅವರು ಮನವಿ ಸಲ್ಲಿಸಿದ್ದು, ಬೆಂಗಳೂರಿನ ಮಳೆ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಹೆಚ್ಚಿನ ಪರಿಹಾರಕ್ಕೆ ಶಿಫಾರಸು ಮಾಡುವಂತೆ ಕೋರಿದ್ದಾರೆ.

from India & World News in Kannada | VK Polls https://ift.tt/AqRn1OC

ನಮ್ಮ ದೇಶವು ಧರ್ಮದ ಆಧಾರದ ಮೇಲೆ ನಡೆಯುತ್ತಿದೆ: ಕಲ್ಲಡ್ಕ ಪ್ರಭಾಕರ ಭಟ್

ನಮ್ಮ ದೇಶ ಧರ್ಮದ ಆಧಾರದ ಮೇಲೆ ನಡೆಯುತ್ತಿದೆ. ಭಗವಂತನಲ್ಲಿ ನಂಬಿಕೆ ಇಟ್ಟು ನಮ್ಮೆಲ್ಲ ಕೆಲಸಗಳನ್ನು ಮಾಡುತ್ತೇವೆ. ಕಾಪು ಮಾರಿಗುಡಿ ಬಹಳಷ್ಟು ಪ್ರಸಿದ್ಧಿ ಪಡೆದಿದ್ದು, ಲಕ್ಷಾಂತರ ಜನರಿಗೆ ತಾಯಿ ಅನುಗ್ರಹಿಸಿದ್ದಾಳೆ, ತಾಯಿಯ ಅನುಗ್ರಹದಿಂದ ಜನರ ಜೀವನ ಚೆನ್ನಾಗಿ ನಡೆಯುತ್ತಿದೆ ಎಂದು ​​​ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದರು.

from India & World News in Kannada | VK Polls https://ift.tt/pnJKDyS

Bagalkote | ಬಾದಾಮಿ: ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಪೊಲೀಸ್‌ ಅಧಿಕಾರಿಯ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

CPI attacked in Badami: ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಸಿಪಿಐ ಕರಿಯಪ್ಪ ಬನ್ನಿ ಅವರ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಸಿಪಿಐ ಮೂಗು, ಬಾಯಿಯಲ್ಲಿ ರಕ್ತ ಬಂದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಅಧಿಕಾರಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದಕ್ಕಿಳಿದ ಕೆಲ ಯುವಕರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಪಿಐ ದೂರಿನ ಪ್ರಕಾರ 11 ಜನರ ವಿರುದ್ಧ ದೂರು ದಾಖಲಾಗಿದ್ದು, 6 ಜನರನ್ನು ಬಂಧಿಸಲಾಗಿದೆ.

from India & World News in Kannada | VK Polls https://ift.tt/nufrocG

PAK vs AFG: ಪಾಕಿಸ್ತಾನಕ್ಕೆ ಒಂದು ವಿಕೆಟ್‌ ರೋಚಕ ಜಯ, ಭಾರತದ ಫೈನಲ್‌ ಕನಸು ಭಗ್ನ!

PAK vs AFG Match Highlights: ಕೊನೆಯ ಓವರ್‌ವರೆಗೂ ತೀವ್ರ ಕುತೂಹಲದಿಂದ ಕೂಡಿದ್ದ ಬುಧವಾರದ ಸೂಪರ್‌-4ರ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಪಾಕಿಸ್ತಾನ ಕೇವಲ ಒಂದು ವಿಕೆಟ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು 2022ರ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ಗೆ ಪ್ರವೇಶಿಸಿದವು. ಇದರೊಂದಿಗೆ ಭಾರತ ಹಾಗೂ ಅಫಘಾನಿಸ್ತಾನ ತಂಡಗಳು ಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದವು. ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಪಾಕ್‌-ಲಂಕಾ ಫೈನಲ್‌ನಲ್ಲಿ ಸೆಣಸಲಿವೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/FoOdMji

Umesh Katti | 'ಉತ್ತರ ಕರ್ನಾಟಕದ ಧ್ವನಿ ನಿಂತು ಹೋಗಿದೆ...' ಉಮೇಶ್ ಕತ್ತಿ ನೆನೆದು ಕಣ್ಣೀರಾದ ಸಿಎಂ ಬಸವರಾಜ ಬೊಮ್ಮಾಯಿ

CM Basavaraj Bommai Emotional: ಮಳೆಯ ಅವಾಂತರಗಳ ಬಗ್ಗೆ ಪರಿಶೀಲನೆಯಲ್ಲಿ ತೊಡಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪುಟ ಸಹೋದ್ಯೋಗಿಯ ದಿಢೀರ್‌ ನಿಧನದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದರು. ಸಚಿವ ಉಮೇಶ್ ಕತ್ತಿ (Umesh Katti) ಅವರ ಪಾರ್ಥಿವ ಶರೀರದ ತಲೆ ಸವರುತ್ತ, ನೆನಪುಗಳನ್ನು ಮೆಲುಕು ಹಾಕಿದರು. ಭಾವುಕಾರಿಯೇ ಆಸ್ಪತ್ರೆಯಿಂದ ಹೊರ ಬಂದ ಅವರು, ಕ್ಷಣಕಾಲ ಸುಧಾರಿಸಿಕೊಂಡು ಮಾಧ್ಯಮಗಳ ಮುಂದೆ ಮಾತಿಗೆ ನಿಂತರು. ಉಮೇಶ್‌ ಕತ್ತಿ ಅವರು ನಡೆದು ಬಂದ ಹಾದಿ, ನಿರ್ವಹಿಸಿದ ಕಾರ್ಯಗಳು ಹಾಗೂ ಅವರ ಆತ್ಮೀಯತೆಯ ಬಗ್ಗೆ ಹೇಳಿತ್ತಲೇ ಬಸವರಾಜ ಬೊಮ್ಮಾಯಿ ಅವರು ಕಣ್ಣೀರಾದರು.

from India & World News in Kannada | VK Polls https://ift.tt/YbiHL8h

Umesh Katti: ಹೃದಯಾಘಾತದಿಂದ ನಿಧನಗೊಂಡ ಹುಕ್ಕೇರಿಯ ಉಮೇಶ್ ಕತ್ತಿ ನಡೆದು ಬಂದ ರಾಜಕೀಯ ಹಾದಿ

Umesh Katti: ಉಮೇಶ್ ಕತ್ತಿ ಅವರು ತಾನು ಅಂದುಕೊಂಡದ್ದನ್ನು ಸಾಧಿಸಲೇಬೇಕೆಂಬ ಹಠ ತೊಟ್ಟಿದ್ದ ರಾಜಕಾರಣಿ.​​​ ತನ್ನ ಸ್ವಾಭಿಮಾನಕ್ಕೆ, ಬೇಡಿಕೆಗೆ ಪಕ್ಷದಲ್ಲಿ ಮನ್ನಣೆ ಸಿಗದಾಗ ಬಹಿರಂಗವಾಗಿ ಮುನಿಸು ತೋರ್ಪಡಿಸಲು ಹಿಂದೇಟು ಹಾಕದ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಜನಪ್ರತಿನಿಧಿ. 9 ಬಾರಿ ಚುನಾವಣೆಯನ್ನು ಎದುರಿಸಿದ್ದ ಉಮೇಶ್ ಕತ್ತಿ, ಬರೋಬ್ಬರಿ 8 ಬಾರಿ ಶಾಸಕರಾಗಿದ್ದಲ್ಲದೇ, ನಾಲ್ಕು ಬಾರಿ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಉಮೇಶ್ ಕತ್ತಿ ಅವರು ನಡೆದು ಬಂದ ರಾಜಕೀಯ ಜೀವನದ ಚಿತ್ರಣ ಇಲ್ಲಿದೆ.

from India & World News in Kannada | VK Polls https://ift.tt/76vexpf

Asia Cup 2022: ಶ್ರೀಲಂಕಾ ವಿರುದ್ಧ ಸೋತರೂ ಭಾರತ ಫೈನಲ್‌ ತಲುಪಬಹುದಾದ ಲೆಕ್ಕಾಚಾರ ಇಲ್ಲಿದೆ!

India's chance to asia cup final: ಪಾಕಿಸ್ತಾನ ವಿರುದ್ಧ ಸೂಪರ್‌-4ರ ಹಂತದ ಮೊದಲನೇ ಪಂದ್ಯದಲ್ಲಿ ಸೋತಿದ್ದ ಭಾರತ ತಂಡ, ಮಂಗಳವಾರ ತನ್ನ ಎರಡನೇ ಪಂದ್ಯದಲ್ಲಿಯೂ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಸತತ ಎರಡೂ ಪಂದ್ಯಗಳಲ್ಲಿ ಸೋತ ಭಾರತ ತಂಡದ 2022ರ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ ಹಾದಿ ಬಹುತೇಕ ಬಂದ್‌ ಆಗಿದೆ. ಆದರೆ, ಇದರ ಹೊರತಾಗಿಯೂ ಟೀಮ್‌ ಇಂಡಿಯಾ ಫೈನಲ್‌ ತಲುಪಲು ಇನ್ನೂ ಅವಕಾಶವಿದೆ. ಇದರ ಬಗ್ಗೆ ಸಂಪೂರ್ಣ ಲೆಕ್ಕಾಚಾರವನ್ನು ಇಲ್ಲಿ ವಿವರಿಸಲಾಗಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Swja5vy

Umesh katti | ಸಚಿವ ಉಮೆಶ್‌ ಕತ್ತಿ ಇನ್ನಿಲ್ಲ: ಹೃದಯಾಘಾತದಿಂದ ನಿಧನ

Karnataka Minister Umesh katti: ಸಚಿವ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ರಾತ್ರಿ ಅವರನ್ನು ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಹೃದಯಾಘಾತ ಆಗಿತ್ತು. ಎಂ.ಎಸ್‌.ರಾಮಯ್ಯ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ಅರಣ್ಯ ಇಲಾಖೆ ಹಾಗೂ ವಿಜಯಪುರ ಉಸ್ತುವಾರಿ ಸಚಿವರಾಗಿ ಉಮೇಶ್ ಕತ್ತಿ ಹೊಣೆ ನಿರ್ವಹಿಸುತ್ತಿದ್ದಾರೆ.

from India & World News in Kannada | VK Polls https://ift.tt/bdkJpms

Avesh Khan: ಏಷ್ಯಾ ಕಪ್‌ನಿಂದ ಅವೇಶ್‌ ಖಾನ್‌ ಔಟ್‌, ಭಾರತ ತಂಡ ಸೇರಿದ ದೀಪಕ ಚಹರ್‌!

Asia Cup 2022: ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ಟೀಮ್ ಇಂಡಿಯಾ ಮತ್ತೊಂದು ಆಘಾತಕ್ಕೊಳಗಾಗಿದೆ. ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಸೇವೆ ಕಳೆದುಕೊಂಡು ಕಂಗಾಲಾಗಿದ್ದ ಟೀಮ್ ಇಂಡಿಯಾ, ಈಗ ಯುವ ವೇಗದ ಬೌಲರ್ ಅವೇಶ್‌ ಖಾನ್‌ ಅವರ ಸೇವೆಯನ್ನೂ ಕಳೆದುಕೊಳ್ಳುವಂತ್ತಾಗಿದೆ. ಅನಾರೋಗ್ಯದಿಂದ ಬಳಲಿರುವ ಬಲಗೈ ವೇಗದ ಬೌಲರ್‌ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಮತ್ತೊಂದೆಡೆ ಬದಲಿ ವೇಗಿಯಾಗಿ ದೀಪಕ್‌ ಚಹರ್‌ ಕಾಯ್ದಿರಿಸಿದ ಪಟ್ಟಿಯಿಂದ ಪ್ರಮುಖ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಹೆಚ್ಚುವರಿ ಆಟಗಾರನಾಗಿ ದೀಪಕ್ ಮೊದಲೇ ತಂಡದಲ್ಲಿ ಇದ್ದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/RSqjnpV

AUS vs NZ: ನ್ಯೂಜಿಲೆಂಡ್‌ ವಿರುದ್ಧ ಸೋಲುವ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ರೋಚಕ ಜಯ!

Australia won by 2 wickets against New zealand: ಒಂದು ಹಂತದಲ್ಲಿ 44 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡ, ಕ್ಯಾಮೆರಾನ್ ಗ್ರೀನ್‌ (89*) ಹಾಗೂ ಅಲೆಕ್ಸ್‌ ಕೇರಿ(85) ಅವರ ಕಠಿಣ ಹೋರಾಟದ ಜೊತೆಯಾಟದ ಬಲದಿಂದ ಮೊದಲನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ 1-0 ಮುನ್ನಡೆ ಪಡೆಯಿತು. 92 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿದ ಕ್ಯಾಮೆರಾನ್ ಗ್ರೀನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Wl980Ix

ಪಿಎಸ್‌ಐ ಮಾತ್ರವಲ್ಲ, ಶಿಕ್ಷಣ ಇಲಾಖೆ ನೇಮಕಾತಿಯಲ್ಲೂ ಅಕ್ರಮ! ಒಟ್ಟು 11 ಮಂದಿ ಶಿಕ್ಷಕರ ಬಂಧನ!

ಪಿಎಸ್‌ಐ ಪರೀಕ್ಷೆಯಲ್ಲಿ ಭಾರೀ ಹಗರಣ ನಡೆದಿರುವ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಇತ್ತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಇಲಾಖೆಯ ನೇಮಕಾತಿಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರೌಢಶಾಲಾ ಶಿಕ್ಷಕರ ನೇಮಕದಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಸಹ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ವಿಪರ್ಯಾಸ ಅಂದ್ರೆ ಬಂಧಿತರಾಗಿರೋ 11 ಮಂದಿ ಶಿಕ್ಷಕರಲ್ಲಿ 10 ಮಂದಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ತವರು ಜಿಲ್ಲೆಯವರೇ ಆಗಿದ್ದಾರೆ.

from India & World News in Kannada | VK Polls https://ift.tt/95uHZrJ

Umesh katti | ಸಚಿವ ಉಮೆಶ್‌ ಕತ್ತಿಗೆ ಹೃದಯಾಘಾತ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

Karnataka Minister Umesh katti: ಸಚಿವ ಉಮೆಶ್‌ ಕತ್ತಿ ಅವರಿಗೆ ಮಂಗಳವಾರ ರಾತ್ರಿ ಹೃದಯಾಘಾತ ಆಗಿದ್ದು, ಕೂಡಲೇ ಅವರನ್ನು ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ (MS Ramaiah hospital) ದಾಖಲಿಸಲಾಗಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಹೃದಯಾಘಾತ ಆಗಿದೆ. ಎಂ.ಎಸ್‌.ರಾಮಯ್ಯ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿರುವುದಾಗಿ ತಿಳಿದು ಬಂದಿದೆ.

from India & World News in Kannada | VK Polls https://ift.tt/1CGekSf

Mysuru Rain | ನಂಜನಗೂಡಿನಲ್ಲಿ ಮಳೆರಾಯನ ಅವಾಂತರ: ಕೆರೆ ಕೋಡಿ ಬಿದ್ದು 78 ಮನೆಗಳು ಸಂಪೂರ್ಣ ಜಲಾವೃತ

ಎಡಬಿಡದೇ ಸುರಿದ ಭಾರಿ ಮಳೆಗೆ ತಾಲೂಕಿನ ಹಳೇಪುರ ಕೆರೆ ಕೋಡಿ ಬಿದ್ದು ಭಾರಿ ಪ್ರಮಾಣದ ನೀರು ಹರಿದ ಪರಿಣಾಮ ತಾಲೂಕಿನ ಹೆಡತಲೆ ಗ್ರಾಮದ 78 ಮನೆಗಳು ರಾತ್ರೋರಾತ್ರಿ ಸಂಪೂರ್ಣ ಜಲಾವೃತಗೊಂಡಿದ್ದು, ನಿವಾಸಿಗಳು ಸ್ಥಳಾಂತರಕ್ಕೆ ಪರದಾಡುವಂತಾಯಿತು. ಕೆರೆಯಿಂದ ಕೋಡಿ ಬಿದ್ದಿರುವ ನೀರು ಭಾನುವಾರ ತಡರಾತ್ರಿ ಹೆಡತಲೆ ಗ್ರಾಮದ ತಗ್ಗು ಪ್ರದೇಶದಲ್ಲಿರುವ 78 ಮನೆಗಳಿಗೆ ಹರಿದು ಬಂದಿದೆ. ಇನ್ನು ಭಾನುವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದು ಪ್ರವಾಹ ಮತ್ತಷ್ಟು ಹೆಚ್ಚಾಗಿ ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ.

from India & World News in Kannada | VK Polls https://ift.tt/o0tfrU6

Chikkaballapur Rain | ಬೋರ್‌ವೆಲ್‌ಗಳಲ್ಲಿ ಜಲ ವೈಭವ: ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲ ಮಟ್ಟ ಏರಿಕೆ

ಜಿಲ್ಲೆಯಲ್ಲಿ ಈಗ ಜಲ ವೈಭವ ಮರುಕಳಿಸಿದೆ. ಜಿಲ್ಲೆಯ ಬಹುತೇಕ ಕೆರೆಗಳು ತುಂಬಿಕೊಂಡಿದ್ದು ಎಲ್ಲೆಲ್ಲೂ ನೀರಿನದ್ದೇ ಆರ್ಭಟ. ಇದರ ಜೊತೆಗೆ ಹತ್ತಾರು ಬೋರ್‌ವೆಲ್‌ಗಳಲ್ಲಿ ಸ್ವಯಂ ಚಾಲಿತವಾಗಿ ನೀರು ಚಿಮ್ಮುತ್ತಿದ್ದು, ಜನರಲ್ಲಿ ಆಶಾಭಾವ ಮೂಡಿಸಿದೆ. ನೀರಿಲ್ಲದೆ ಬರಿದಾಗಿದ್ದ ಬೋರ್‌ವೆಲ್‌ಗಳಲ್ಲೂ ನೀರು ಉಕ್ಕಿ ಹರಿಯುತ್ತಿದ್ದು, ಅಂತರ್ಜಲ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರಿ ಮಳೆ ಹಾಗೂ ಎಚ್‌ಎನ್‌ ವ್ಯಾಲಿ ನೀರಿನ ಹರಿವಿನಿಂದ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.

from India & World News in Kannada | VK Polls https://ift.tt/N2E3X8z

ಹುಬ್ಬೆ ಮಳೆಗೆ ಜಲಪ್ರಳಯ, ಕೊರಟಗೆರೆ ಹೈಅಲರ್ಟ್: ವರುಣನ ಆರ್ಭಟಕ್ಕೆ 40ಕ್ಕೂ ಅಧಿಕ ಸೇತುವೆಗಳು ಮುಳುಗಡೆ

ಕೊರಟಗೆರೆ ತಾಲೂಕಿನಾದ್ಯಂತ ಭಾನುವಾರ ರಾತ್ರಿ ಅಬ್ಬರಿಸಿದ ಹುಬ್ಬೆ ಮಳೆಯ ಆರ್ಭಟದಿಂದ ನದಿಪಾತ್ರದ ರೈತರ ಮನೆಗಳು ಮತ್ತು ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ. ಮೂರು ನದಿಗಳು ಹಾದು ಹೋಗುವ 40ಕ್ಕೂ ಅಧಿಕ ಸೇತುವೆಗಳು ಮಳೆ ನೀರಿನ ರಭಸಕ್ಕೆ ಮುಳುಗಿವೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯೂ ಜಲಪ್ರಳಯ ಸೃಷ್ಟಿಯಾಗಿ ರೈತಾಪಿವರ್ಗ ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ವಾರದವರೆಗೆ ಅಡಚಣೆ ಆಗಲಿದೆ. ರಣಭೀಕರ ಮಳೆಯಿಂದ ಹಿಂದೆಂದೂ ಕಾಣದಂತಹ ನೂರಾರು ಸಮಸ್ಯೆಗಳು ಕೊರಟಗೆರೆಯಲ್ಲಿ ಸೃಷ್ಟಿಯಾಗಿದೆ.

from India & World News in Kannada | VK Polls https://ift.tt/RMhNbwy

ದೇಶದ ಬಹುದೊಡ್ಡ ಕಾರು ಕಳ್ಳನ ಬಂಧನ: ಈ ಖತರ್ನಾಕ್‌ ಕದ್ದಿದ್ದು ಬರೋಬ್ಬರಿ 5000 ಕಾರುಗಳು!

ಇತ್ತೀಚೆಗೆ ಕಾರುಗಳ್ಳತನದಿಂದ ಹೆಚ್ಚು ಲಾಭ ಇಲ್ಲ ಎಂದು ತೀರ್ಮಾನಿಸಿದ್ದ ಖದೀಮ, ದಂಧೆಯನ್ನೇ ಬದಲಾಯಿಸಿದ್ದ. ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಇಳಿದಿದ್ದ. ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಇರುವ ನಿಷೇಧಿತ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಕೃತ್ಯಕ್ಕೆ ಕೈ ಹಾಕಿದ್ದ. ಅದರಿಂದ ಬಂದ ಹಣವನ್ನು ಅದೇ ಭಾಗದಲ್ಲಿ ಹೂಡಿಕೆ ಮಾಡಿದ್ದ. ಈಶಾನ್ಯ ರಾಜ್ಯಗಳಲ್ಲಿ ಸ್ವತ್ತುಗಳನ್ನು ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

from India & World News in Kannada | VK Polls https://ift.tt/x9GNPvl

ರಮೇಶ್‌ ಜಾರಕಿಹೊಳಿ ಅಶ್ಲೀಲ ಸಿ.ಡಿ ಪ್ರಕರಣ: ಲಿಖಿತ ವಾದಾಂಶ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ ದಾಖಲಾಗಿದ್ದ ಅಶ್ಲೀಲ ಸಿ.ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಪ್ರಶ್ನಿಸಿ ಹಾಗೂ ಸದಾಶಿವನಗರ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಪ್ರಕರಣದ ಎಫ್‌ಐಆರ್‌ ರದ್ದು ಕೋರಿ ಸಂತ್ರಸ್ತೆ, ಮತ್ತಿಬ್ಬರು ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಸೆ.26ಕ್ಕೆ ಮುಂದೂಡಿದೆ.

from India & World News in Kannada | VK Polls https://ift.tt/bqcWumQ

Hardik Pandya: ಟಿ20 ಕ್ರಿಕೆಟ್‌ನ ಟಾಪ್ 5 ಆಟಗಾರರನ್ನು ಆಯ್ಕೆ ಮಾಡಿದ ರಿಕಿ ಪಾಂಟಿಂಗ್‌!

Ricky Ponting's Top 5 Best T20 Players: ಆಸ್ಟ್ರೇಲಿಯಾ ತಂಡಕ್ಕೆ ಬಹುಬಾರಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಟ್ಟ ಚಾಂಪಿಯನ್‌ ಕ್ಯಾಪ್ಟನ್‌ ರಿಕಿ ಪಾಂಟಿಂಗ್‌, ಇತ್ತೀಚೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಆಯ್ಕೆ 5 ಅಗ್ರಮಾನ್ಯ ಆಟಗಾರರನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಅಂದಹಾಗೆ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಸೀಸ್‌ ದಿಗ್ಗಜ ರಿಕಿ ಪಾಂಟಿಂಗ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರ ಸಾಮರ್ಥ್ಯವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/tZvhRW3

ನಿಮ್ಮ ವಾಹನ ಕಳುವಾದರೆ ನೀವೇ ಹೊಣೆ..! ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಿತಿ ಮೀರಿದ ದ್ವಿಚಕ್ರ ವಾಹನಗಳ ಕಳವು

ನೀವು ಬೈಕ್‌ ಮಾಲೀಕರಾಗಿದ್ದರೆ ಮೈಯೆಲ್ಲಾ ಕಣ್ಣಾಗಿರಬೇಕು. ಏಕೆಂದರೆ ಇಲ್ಲಿ ಒಂದು ಬಾರಿ ಬೈಕ್‌ ಕಳುವಾದರೆ ಮತ್ತೆ ಸಿಗುತ್ತೆ ಎನ್ನುವ ಆಶಾಭಾವ ಇಟ್ಟುಕೊಳ್ಳಬೇಡಿ. ಬೈಕ್‌ಗಳನ್ನು ಕಳೆದುಕೊಂಡು ಸಾಕಷ್ಟು ಮಾಲೀಕರು ಪೊಲೀಸ್‌ ಠಾಣೆಗಳಿಗೆ ಎಡತಾಕುತ್ತಿದ್ದಾರೆ. ಬೈಕ್‌ ಕಳ್ಳರು ಮಾತ್ರ ಅದ್ಯಾವ ಮೂಲೆಯಲ್ಲಿ ಕೂತಿರುತ್ತಾರೋ, ಅದ್ಯಾವ ಸ್ಕೆಚ್‌ ಹಾಕಿ ಬರ್ತಾರೋ ಗೊತ್ತಾಗುತ್ತಿಲ್ಲ.

from India & World News in Kannada | VK Polls https://ift.tt/S04biCf

ತುಮಕೂರು 'ಕೈ'ಗಿಲ್ಲ ಒಕ್ಕಲಿಗ ಲೀಡರ್‌! ಜಿ.ಎಸ್‌. ಬಸವರಾಜು ಬಳಿಕ ಲಿಂಗಾಯತ ನಾಯಕರಿಲ್ಲದೆ ಸೊರಗಿರುವ ಕಾಂಗ್ರೆಸ್‌

ಮಾಜಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆಯಿಂದ ತುಮಕೂರು ಜಿಲ್ಲಾ ಕಾಂಗ್ರೆಸ್‌ ಒಕ್ಕಲಿಗ ಪ್ರಬಲ ನಾಯಕನಿಲ್ಲದೆ ಚುನಾವಣೆಯನ್ನು ಎದುರಿಸಬೇಕಿದೆ. ಸಂಸದ ಜಿ.ಎಸ್‌.ಬಸವರಾಜು ಬಿಜೆಪಿ ಸೇರಿದ ಬಳಿಕ ಜಿಲ್ಲಾಮಟ್ಟದಲ್ಲಿ ವರ್ಚಸ್ಸು ಹೊಂದಿರುವ ಲಿಂಗಾಯತ ನಾಯಕತ್ವವನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌ ಈಗ ಎಸ್‌.ಪಿ. ಮುದ್ದಹನುಮೇಗೌಡ ರಾಜೀನಾಮೆಯಿಂದ ಒಕ್ಕಲಿಗ ನಾಯಕತ್ವ ನಷ್ಟವನ್ನು ಅನುಭವಿಸಿದೆ.

from India & World News in Kannada | VK Polls https://ift.tt/U6VBY2W

ಕೋರ್ದಬ್ಬು-ರಾವುಗುಳಿಗ ದೈವಸ್ಥಾನದಲ್ಲಿ ಕಳ್ಳತನ: ಚಿನ್ನ-ಬೆಳ್ಳಿ ಬಿಟ್ಟು ನಗದು ಕದ್ದೊಯ್ದ ಖದೀಮರು!

ದೈವಸ್ಥಾನದಲ್ಲಿ ಹಾಕಲಾದ ಸಿಸಿ ಕ್ಯಾಮೆರಾ ಕೆಟ್ಟು ಹೋಗಿದ್ದು, ಕಳವು ಕೃತ್ಯ ಯಾವುದೇ ಚಹರೆ ದಾಖಲಾಗಿಲ್ಲ. ಇದೇ ರಸ್ತೆಯ ಬಂಡಸಾಲೆ, ಒಳಬೈಲು ಸಮೀಪ ಎರಡು ಸಿಸಿ ಕ್ಯಾಮೆರಾವನ್ನು ಪರಿಶೀಲಿಸಲಾಗುತ್ತಿದೆ. ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸುಮಾರು 5 ವರ್ಷಗಳಿಂದ ನಿರಂತರ ಕಳ್ಳತನ ನಡೆಯುತ್ತಿದ್ದು, ಆರೋಪಿಗಳ ಪತ್ತೆ ಕಾರ್ಯ ಮಾತ್ರ ನಡೆದಿಲ್ಲ. 2021ರ ಜುಲೈನಲ್ಲಿ ನೀರುಮಾರ್ಗ ಸುಬ್ರಹ್ಮಣ್ಯ ಭಜನಾ ಮಂದಿರದೊಳಗೆ ನುಗ್ಗಿದ ಕಳ್ಳರು ನಗದು ಕಳವು ಗೈದಿದ್ದರು.

from India & World News in Kannada | VK Polls https://ift.tt/B5klZQA

Karnataka BJP | ಕಮಲ ಪರ ಅಲೆ ಸೃಷ್ಟಿಗೆ ಕಸರತ್ತು: ಬಿಜೆಪಿಯಲ್ಲಿ ಗರಿಗೆದರಿದ ಚಟುವಟಿಕೆಗಳು

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಸಿಎಂಗಳಾದ ಡಿ.ವಿ. ಸದಾನಂದಗೌಡ, ಜಗದೀಶ್‌ ಶೆಟ್ಟರ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌, ಸಚಿವರಾದ ಗೋವಿಂದ ಕಾರಜೋಳ, ಆರ್‌.ಅಶೋಕ್‌, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಪಾಲ್ಗೊಂಡಿದ್ದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಪ್ರಧಾನಿಯವರು ರಾಜ್ಯ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆ ನೀಡಿದ ಬಳಿಕ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ.

from India & World News in Kannada | VK Polls https://ift.tt/3qtjbTd

Virat Kohli: ಪಾಕ್‌ ಎದುರು ಫಿಫ್ಟಿ ಬಾರಿಸಿ ವಿಶೇಷ ದಾಖಲೆ ತಮ್ಮದಾಗಿಸಿಕೊಂಡ ವಿರಾಟ್‌ ಕೊಹ್ಲಿ!

India vs Pakistan Highlights: ಏಷ್ಯಾ ಕಪ್‌ 2022 ಕ್ರಿಕೆಟ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಪ್ರದರ್ಶನ ಮಟ್ಟದಲ್ಲಿ ಸುಧಾರಿಸಿದ್ದಾರೆ. ಮೊದಲ ಪಂದ್ಯದಲ್ಲಿ 36 ರನ್‌ ಗಳಿಸಿದ್ದ ವಿರಾಟ್, ಬಳಿಕ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಬಾರಿಸಿದ್ದಾರೆ. ಪಾಕಿಸ್ತಾನ ಎದುರು ಸೂಪರ್‌-4 ಹಂತದ ಪಂದ್ಯದಲ್ಲಿ ವಿರಾಟ್‌ ಬಿರುಸಿನ ಅರ್ಧಶತಕ ಬಾರಿಸಿದರೂ, ಟೀಮ್ ಇಂಡಿಯಾ 5 ವಿಕೆಟ್‌ಗಳ ಸೋಲಿನ ಆಘಾತಕ್ಕೊಳಗಾಯಿತು. ಅಂದಹಾಗೆ ವಿರಾಟ್ ಈ ಅರ್ಧಶತಕದೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಒಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/lN9axgb

ಕೊಪ್ಪಳ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಯುವಕರೊಂದಿಗೆ ಕುಳಿದು ಕುಪ್ಪಳಿಸಿದ ಸಂಸದ ಸಂಗಣ್ಣ ಕರಡಿ

ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೂ ಮುನ್ನ ಸಂಸದರು ಯುವಕರೊಂದಿಗೆ ಭಾನುವಾರ ಭರ್ಜರಿ ಸ್ಟೆಪ್ ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಯುವಕರೊಂದಿಗೆ ಸಂಸದ ಸಂಗಣ್ಣ ಕರಡಿ ಹೆಜ್ಜೆ ಹಾಕಿದ್ದರು. ಮೂರ್ನಾಲ್ಕು ವರ್ಷದ ಹಿಂದೆ ಡಿಜೆ ನಿಷೇಧವಿದ್ದಾಗಲೂ ಯುವಕರ ಒತ್ತಾಯಕ್ಕೆ ಮಣಿದು ನಗರದ ಜವಾಹರ ರಸ್ತೆಯಲ್ಲಿ ಕುಣಿದಿದ್ದರು.

from India & World News in Kannada | VK Polls https://ift.tt/qky3Zcx

ನಾರಾಯಣ ಗುರುಗಳ ತತ್ವ ಪಾಲಿಸಿ ನುಡಿಯುವ ಮಾತನ್ನು ಕೃತಿಯನ್ನಾಗಿಸಿ: ಬಿ ಜನಾರ್ದನ ಪೂಜಾರಿ

ಬಿಲ್ಲವ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಲ್ಲವ ಸಮುದಾಯವನ್ನು ಸಂಘಟಿಸುವುದು ನಿಜಕ್ಕೂ ಸವಾಲು. ಈ ಕಷ್ಟವನ್ನು ನಿವಾರಣೆ ಮಾಡುವ ಶಕ್ತಿಯನ್ನು ದೇವರು ನೀಡುತ್ತಾನೆ. ಮಂಗಳೂರು ತಾಲೂಕು ಬಿಲ್ಲವ ಸಂಘ ಒಳ್ಳೆಯ ಕೆಲಸಕ್ಕೆ ಹೊರಟ್ಟಿದ್ದು, ಗೆಲುವು ನಿಶ್ಚಿತ ಎಂದು ಕೇಂದ್ರದ ಮಾಜಿ ವಿತ್ತ ಸಚಿವ, ಹಿರಿಯ ಕಾಂಗ್ರೆಸ್‌ ಮುಖಂಡ ಬಿ ಜನಾರ್ದನ ಪೂಜಾರಿ ಹೇಳಿದರು.

from India & World News in Kannada | VK Polls https://ift.tt/9ImhH5J

SL vs AFG: 45 ಎಸೆತಗಳಲ್ಲಿ 84 ರನ್‌, ಹಿಟ್‌ಮ್ಯಾನ್‌ ದಾಖಲೆ ಮುರಿದ ರೆಹಮಾನುಲ್ಲಾ ಗುರ್ಬಝ್!

Sri Lanka vs Afghanistan Highlights: ಎಷ್ಯಾ ಕಪ್‌ 2022 ಟೂರ್ನಿಯ ಸೂಪರ್‌-4 ಹಂತ ಭರ್ಜರಿ ಆರಂಭ ಕಂಡಿದೆ. ಶನಿವಾರ ನಡೆದ ಸೂಪರ್‌ ಫೋರ್‌ ಹಂತದ ಮೊದಲ ಹಣಾಹಣಿಯಲ್ಲಿ ಐದು ಬಾರಿಯ ಚಾಂಪಿಯನ್ಸ್‌ ಶ್ರೀಲಂಕಾ ತಂಡ ಅಫಘಾನಿಸ್ತಾನ ಎದುರು ಕೊನೇ ಓವರ್‌ನಲ್ಲಿ 4 ವಿಕೆಟ್‌ಗಳ ಜಯ ದಾಖಲಿಸಿತು. ಪಂದ್ಯದಲ್ಲಿ ಅಫಘಾನಿಸ್ತಾನ ಪರ ಕೆಚ್ಚೆದೆಯ ಹೋರಾಟ ನಡೆಸಿದ ಯುವ ಓಪನರ್‌ ರೆಹಮಾನುಲ್ಲಾ ಗುರ್ಬಝ್‌, ಕೇವಲ 45 ಎಸೆತಗಳಲ್ಲಿ 84 ರನ್‌ ಸಿಡಿಸಿದರೂ ತಂಡಕ್ಕೆ ಜಯ ತಂದುಕೊಡಲಾಗಲಿಲ್ಲ. ಆದರೆ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/x1c4kDy

ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶವಾಗಿ ಘೋಷಿಸಲು ಒತ್ತಾಯ; ತೀವ್ರಗೊಂಡ ಆನ್‌ಲೈನ್‌ ಅಭಿಯಾನ

ಪರಿಸರವಾದಿಗಳು ಆನ್‌ಲೈನ್‌ ಮೂಲಕ 'ಸೇವ್‌ ಹೆಸರಘಟ್ಟ' ಅಭಿಯಾನ ಕೈಗೊಂಡಿದ್ದಾರೆ. ಅದಕ್ಕೆ ಸಹಸ್ರಾರು ಮಂದಿ ಬೆಂಬಲ ವ್ಯಕ್ತಪಡಿಸಿ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹೆಸರಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿದ್ದಾರೆ. ಜತೆಗೆ ವಿಡಿಯೋ ಕ್ಯಾಂಪೇನ್‌ ಕೂಡ ನಡೆಯುತ್ತಿದ್ದು, ಸ್ಥಳೀಯರು, ಸೈಕ್ಲಿಸ್ಟ್‌ಗಳು, ಐಟಿ ಉದ್ಯೋಗಿಗಳು, ಪರಿಸರವಾದಿಗಳು, ಪ್ರಾಣಿ-ಪಕ್ಷಿ ಪ್ರಿಯರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗಗಳು ಹುಲ್ಲುಗಾವಲನ್ನು 'ಸಂರಕ್ಷಿತ ಪ್ರದೇಶ'ವನ್ನಾಗಿ ಘೋಷಿಸಬೇಕೆಂದು ಸರಕಾರ ಮತ್ತು ರಾಜ್ಯ ವನ್ಯಜೀವಿ ಮಂಡಳಿ ಮೇಲೆ ಒತ್ತಡ ಹೇರುತ್ತಿದ್ದಾರೆ.

from India & World News in Kannada | VK Polls https://ift.tt/nFPQBVq

PM Modi: ಕರಾವಳಿ ಜನತೆಗೆ ಮೋದಿ ಭರ್ಜರಿ ಗಿಫ್ಟ್‌: ಕರಾವಳಿ ವಲಯ ನಿರ್ವಹಣಾ ಯೋಜನೆಗೆ ಕೇಂದ್ರ ಅಸ್ತು!

ಮಂಗಳೂರಿಗೆ ಶುಕ್ರವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರು 3,800 ಕೋಟಿ ರೂ. ಮೊತ್ತದ ನಾನಾ ಯೋಜನೆಗಳ ಶಿಲಾನ್ಯಾಸ, ಭೂಮಿ ಪೂಜೆ ನೆರವೇರಿಸಿದ್ದಾರೆ. ಇದಕ್ಕಿಂತ ಮುಖ್ಯವಾಗಿ, ಸಿಝೆಡ್‌ಎಂಪಿಗೆ ಅನುಮೋದನೆ (New Coastal Zone Management Plan) ನೀಡಿರುವುದು ಈ ಭಾಗದ ಆರ್ಥಿಕತೆಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಲಿದೆ. ಇದು ಕರಾವಳಿ ಭಾಗದ ಜನರಿಗೆ ಮೋದಿ ಉಡುಗೊರೆ ಎಂಬ ಅಭಿಪ್ರಾಯ ಮೂಡಿದೆ. ಕೇಂದ್ರದ ಈ ಕ್ರಮವು ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದಲೂ ಮಹತ್ವದ್ದಾಗಿದ್ದು, ಬಿಜೆಪಿ ಭದ್ರಕೋಟೆಯನ್ನು ಮತ್ತಷ್ಟು ಬಲಪಡಿಸಲು ಪೂರಕವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

from India & World News in Kannada | VK Polls https://ift.tt/5JdYgKv

Asia Cup 2022: ಗುರ್ಬಾಝ್‌ ಆಟ ವ್ಯರ್ಥ, ಅಫಘಾನಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡ ಶ್ರೀಲಂಕಾ!

Sri lanka won by 4 wickets agianst Afghanistan: ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದಿದ್ದ 2022ರ ಏಷ್ಯಾ ಕಪ್ ಟೂರ್ನಿಯ ಸೂಪರ್‌-4ರ ಹಂತದ ಪಂದ್ಯದಲ್ಲಿ ಭನುಕ ರಾಜಪಕ್ಷ(31) ಅವರ ಕೊನೆಯ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್‌ ಸಹಾಯದಿಂದ ಶ್ರೀಲಂಕಾ ತಂಡ, ಅಫಘಾನಿಸ್ತಾನ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಆ ಮೂಲಕ ಗುಂಪು ಹಂತದಲ್ಲಿನ ಸೋತಿದ್ದ ಶ್ರೀಲಂಕಾ, ಸೂಪರ್‌-4ರಲ್ಲಿ ಅಫಘಾನಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡಿತು. ಅಫಘಾನಿಸ್ತಾನ ಸೋಲಿನ ಹೊರತಾಗಿಯೂ 45 ಎಸೆತಗಳಲ್ಲಿ 85 ರನ್‌ ಸಿಡಿಸಿದ ರಹ್ಮಾನುಲ್ಹಾ ಗುರ್ಬಾಝ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/6ztpLmw

‘ಅಚ್ಛೇದಿನ್‌’ ಜಿಎಸ್‌ಟಿ ವಸೂಲಿಗಷ್ಟೇ ಸೀಮಿತವಾಗಿದೆ: ಕೇಂದ್ರದ ವಿರುದ್ಧ ಎಂಬಿ ಪಾಟೀಲ್ ಕಿಡಿನುಡಿ

ಪ್ರಚಾರ ಸಮಿತಿ ಅಧ್ಯಕ್ಷನಾದ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಕಾಂಗ್ರೆಸ್‌ನ ಸಾಧನೆ ಹಾಗೂ ಬಿಜೆಪಿಯ ವೈಫಲ್ಯಗಳನ್ನು ಎತ್ತಿಡಿಯುವ ಕಾರ್ಯದಲ್ಲಿ ತೊಡಗಿದ್ದೇನೆ. ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಸಚಿವರ ನಡುವೆಯೇ ಸಾಮರಸ್ಯ ಇಲ್ಲವಾಗಿದೆ. ಶೇ.40ರ ಕಮಿಷನ್‌ ಬಗ್ಗೆ ದೂರು ನೀಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ತಾಳಿದ್ದಾರೆ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಹರಿಹಾಯ್ದರು.

from India & World News in Kannada | VK Polls https://ift.tt/rFDMY7g

ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಬೆನ್ನಲ್ಲೇ ಸಿಎಂ, ನಳಿನ್‌ ಭೇಟಿಯಾಗಿ ಬಿಜೆಪಿ ಸೇರೋದಾಗಿ ಮುದ್ದಹನುಮೇಗೌಡ ಘೋಷಣೆ!

Mudda Hanume Gowda: ಕಾಂಗ್ರೆಸ್‌ಗೆ ರಾಜೀನಾಮೆ ‌ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿರುವ ಮುದ್ದ ಹನುಮೇಗೌಡ ತಾವು ಬಿಜೆಪಿ ಸೇರೋದಾಗಿ ಘೋಷಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಮುಖಂಡರ ಜತೆ ಮಾತನಾಡಿದ್ದೇನೆ. ಪಿತೃಪಕ್ಷ ಬರುವುದರೊಳಗೆ ಶೀಘ್ರದಲ್ಲೇ (ನಾಲ್ಕೈದು ದಿನದೊಳಗೆ) ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇನೆ ಎಂದಿದ್ದಾರೆ.

from India & World News in Kannada | VK Polls https://ift.tt/waKYWZ6

PM Mangaluru Visit | ಹೊಸ ಚರಿತ್ರೆ ಬರೆದ ಪ್ರಧಾನಿ ಸಮಾವೇಶ: 2 ಲಕ್ಷ ಅಭಿಮಾನಿಗಳಿಂದ ತುಂಬಿ ತುಳುಕಿದ ಮೈದಾನ

ರಾವಳಿಯ ರಾಜಕೀಯ ಸಮಾವೇಶಗಳ ಚರಿತ್ರೆಯಲ್ಲೇ ಹೊಸ ಮೈಲುಗಲ್ಲೊಂದು ಶುಕ್ರವಾರ ಸ್ಥಾಪನೆಯಾಗಿದೆ. ಕಡಲ ನಗರಿ ಮಂಗಳೂರಿನ ಕೂಳೂರು ಗೋಲ್ಡ್‌ ಫಿಂಚ್‌ ಸಿಟಿಯ 25 ಎಕರೆ ವಿಶಾಲ ಮೈದಾನ ಸುಮಾರು 2 ಲಕ್ಷ ಅಭಿಮಾನಿ ಸಾಗರವನ್ನು ಆಕ್ರಮಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಕರಾವಳಿಯ ಅನಘ್ರ್ಯ ಕಾಣಿಕೆ ಸಲ್ಲಿಕೆಯಾಗಿದೆ.

from India & World News in Kannada | VK Polls https://ift.tt/snZ7xqO

ಮಂಡ್ಯ ಜಿಲ್ಲಾ ‘ಕೈ’ ಮುಖಂಡರು-ಸಂಸದೆ ನಡುವೆ ಜಿದ್ದಾಜಿದ್ದಿ: ಸುಮಲತಾ ಕಾಂಗ್ರೆಸ್‌ ಸೇರ್ಪಡೆಗೆ ಪ್ರತಿಷ್ಠೆ ಅಡ್ಡಿ

ಜೆಡಿಎಸ್‌ ಭದ್ರಕೋಟೆಯಲ್ಲಿ ಪಕ್ಷದ ಬಲ ಹೆಚ್ಚಿಸಿಕೊಳ್ಳಲು ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಪಕ್ಷ ಸೇರ್ಪಡೆಯನ್ನು ಎಐಸಿಸಿ ಹೈಕಮಾಂಡ್‌ ಬಯಸಿದೆ. ಆದರೆ, ಸ್ಥಳೀಯ ನಾಯಕರ ಪ್ರತಿಷ್ಠೆ ಇದಕ್ಕೆ ಅಡ್ಡಿಯಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಭರ್ಜರಿ ಗೆಲುವಿನ ಹಿಂದೆ ತಮ್ಮ ಶ್ರಮವಿದೆ ಎಂಬ ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಮುಖಂಡರ ವಾದ ಹಾಗೂ ಹಾಲಿ ಸಂಸದರಾಗಿ ತಾವು ರಾಜ್ಯ ಮಟ್ಟದ ನಾಯಕಿ ಎಂಬ ಸುಮಲತಾ ಅವರ ಸ್ವಾಭಿಮಾನದ ತಿಕ್ಕಾಟ ನಡೆದಿದೆ.

from India & World News in Kannada | VK Polls https://ift.tt/xYoCATd

9 ದಶಕಗಳ ನಂತರ ಕೋಡಿ ಬಿದ್ದ ವಾಣಿ ವಿಲಾಸ ಸಾಗರ ಡ್ಯಾಂ, ಗಂಗಾ ಪೂಜೆ ನೇರವೇರಿಸಿದ ಶಾಸಕಿ

vani vilasa sagara dam: ಮಧ್ಯ ಕರ್ನಾಟಕದ ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಅಣೆಕಟ್ಟು ಗುರುವಾರ ಸಂಜೆ 7 ಗಂಟೆ ಸುಮಾರಿಗೆ 130 ಅಡಿ ನೀರಿನ ಮಟ್ಟ ತಲುಪಿದೆ. ಈ ಮೂಲಕ ಹಾರನಕಣಿವೆ ರಂಗನಾಥಸ್ವಾಮಿ ದೇವಸ್ಥಾನ ಸಮೀಪದ ಕೋಡಿ ಕಟ್ಟೆಯ ಭಾಗದಲ್ಲಿ ನೀರು ನಿಧನವಾಗಿ ಹರಿದು ಮಧ್ಯರಾತ್ರಿ ಸಂಪೂರ್ಣ ಕೋಡಿ ತುಂಬಿ ಹರಿದಿದೆ. ಶುಕ್ರವಾರ ಬೆಳಗ್ಗೆ ಹಿರಿಯೂರು-ಹೊಸದುರ್ಗ ರಸ್ತೆಯಲ್ಲಿ ನೀರು ಹರಿದಿದೆ.

from India & World News in Kannada | VK Polls https://ift.tt/DEgS4Ox

31 ಶಿಕ್ಷಕರಿಗೆ ರಾಜ್ಯಮಟ್ಟದ 'ಉತ್ತಮ ಶಿಕ್ಷಕ ಪ್ರಶಸ್ತಿ': ಶಿಕ್ಷಕಿಯರಿಗೆ 'ಮಾತೆ ಸಾವಿತ್ರಿ ಬಾಯಿ ಫುಲೆ' ಸಮ್ಮಾನ

ಶಿಕ್ಷಕಿಯರಿಗೆ 'ಮಾತೆ ಸಾವಿತ್ರಿಬಾಯಿ ಫುಲೆ' ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಳನ್ನು ಸೆ.5ರಂದು ಶಿಕ್ಷಣ ಇಲಾಖೆಯು ನಡೆಸಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಮುಖ್ಯ ಶಿಕ್ಷಕ ಹಾಗೂ ವಿಶೇಷ ಶಿಕ್ಷಕರಿಗೆ ತಲಾ 10 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ

from India & World News in Kannada | VK Polls https://ift.tt/97qlOpv

Teachers fight | ಚಿಕ್ಕೋಡಿಯಲ್ಲಿ ಸಾಕ್ಷಿಗಾಗಿ ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದ ಶಿಕ್ಷಕಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಶಿಕ್ಷಕ ಆರ್.ಎನ್. ಮಡಿವಾಳರ ಹಾಗೂ ಶಿಕ್ಷಕಿ ಎಂ.ಕೆ ಜಂಬಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ಮಾರಾಮರಿ ನಡೆದು, ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಮಾಡಿಕೊಂಡ ಇಬ್ಬರು ಶಿಕ್ಷಕರು ಪರಸ್ಪರ ಸಂಬಂಧಿಕರಾಗಿದ್ದಾರೆ. ಶಿಕ್ಷಕಿ ಎಂ.ಕೆ ಜಂಬಗಿ ಅವರ ಅಕ್ಕನ ಗಂಡನಾಗಿರುವ ಶಿಕ್ಷಕ ಆರ್.ಎನ್.ಮಡಿವಾಳರ ನಡುವೆ ಆಗಾಗ್ಗೆ ಮನೆಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ.

from India & World News in Kannada | VK Polls https://ift.tt/vrgbmqE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...